ಪಕ್ಷ ನಿಷ್ಠೆ ಮಾತೇಕೆ ಬಂತು. … ಬಂದೂಕು ಅವರ ಹೆಗಲ ಮೇಲಿದ್ದರೆ ಟ್ರಿಗರ್ ಅವರ ಕೈಯಲ್ಲಿ , . ಯಾರು ಸೂತ್ರಧಾರ ?
೨೦೧೮ರಲ್ಲೇ ಜಗ್ಗಿ ಜಗ್ಗಿ ಅಳೆದುತೂಗಿ ಟಿಕೆಟ್ ಕೊಟ್ಟ ಕಾರಣದಿಂದಲೇ ೧೦೫ ಕ್ಕೆ ನಿಂತದ್ದು. ಹೇಗೆ ೨೦೧೯ ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣವಾಗಿ ನಾಯಕನ ಹೆಗಲಿಗೆ ಜವಾಬ್ದಾರಿ ಹಾಕಿ ಉತ್ತಮ ಫಲಿತಾಂಶ ಕೊಟ್ಟಿತ್ತು. ಅದೇ ಕೆಲಸ ೨೦೧೮ ರಲ್ಲೇ ವಿಧಾನಸಭೆ ಸಮಯದಲ್ಲಿ ಸುಮ್ನೆ ಕುಳಿತಿದ್ದರೇ ೧೩೦ ಕ್ಕಿಂತ ಹೆಚ್ಚು ಸೀಟ್ಗಳು ಅವತ್ತೇ ಬರತಾ ಇತ್ತು. ಚಾಮರಾಜನಗರದಲ್ಲಿ ನಾಯಕ ಒತ್ತಡಹಾಕಿ ಪ್ರಸಾದ ಅವರನ್ನು ಮನವೊಲಿಸಿ ಚುನಾವಣೆಗೆ ನಿಲ್ಲಿಸಿ ಪ್ರಸಾದವನ್ನು ಪಡೆದುಕೊಂಡಿದ್ದು ಪಕ್ಷ ನಿಷ್ಠೆ! ಹಿಂತಹ ಪಕ್ಷ ನಿಷ್ಠೆ ಯಾರಿಗಿದೆ?
೨೦೦೮ ರ ಚುನಾವಣೆಗೆ ಏಕಾಂಗಿಯಾಗಿ ಹೋರಾಟ ಮಾಡಿ ೧೧೦ ಶಾಸಕರು ಆಯ್ಕೆಯಾಗಿ ಬಂದರು. ಬೇರೆಯವರು ಕಷ್ಟ ಪಟ್ಟಿಲ್ಲ ಅಂತ ಹೇಳ್ತಾ ಇಲ್ಲ. ಆದರೆ ಸಿಂಹ ಪಾಲು ಇವರದೇ ಇತ್ತು . ಅಂದು ಒಳಗಿನ ಕುಮ್ಮಕ್ಕಿನಿಂದಲೇ ಮನೆ ಒಳಗಿನ ಜಗಳ ಹಾದಿಗೆ ಬಂದು ಪಕ್ಷದ ಮಾನ ಮರ್ಯಾದೆ ೪೦ ಕ್ಕೆ ಹೋಗಿತ್ತು! ಇದು ಕೇಸರಿ ಕಲಿಗಳಿಗೆ ಒಂದು ಪಾಠವಾಗಿತ್ತು. ಚನ್ನಾಗಿ ಕಲಿತಿದ್ದಾರೆ ಎಂದು ಭಾವಿಸುವೆ! ಎಲ್ಲವನ್ನು ಸಹಿಸಿಕೊಂಡು ಇದ್ದರು ಮಾಡದ ತಪ್ಪಿಗೆ ನೈತಿಕ ಹೊಣೆಹೊತ್ತು ರಾಜೀನಾಮೆ ಕೊಟ್ಟದ್ದು ಆಯಿತು.
ಬ್ರಹ್ಮ ಲಿಖಿತಗಳನ್ನೇ ತಿದ್ದಿದ ಉಧಾರಣೆ ನಮ್ಮ ಮುಂದಿವೆ. ಅಧಿಕಾರ ಸಿಕ್ಕಿದ್ದಲ್ಲ, ಅಧಿಕಾರ ವ್ಯಯಕ್ತಿಕ ವರ್ಚಸ್ಸಿನಿಂದ ಪಡೆದುಕೊಂಡಿದ್ದು. ಅಧಿಕಾರ ಪಡೆದುಕೊಳ್ಳಲಿಕ್ಕೆ ಅರ್ಹತೆ ಇಲ್ಲದೆ ಹೋದರೆ ಸಾಧ್ಯನಾ? ಅರ್ಹತೆ ಇಷಯಕ್ಕೆ ಬಂದರೆ ೨ ನೇ ಸ್ಥಾನಕ್ಕೆ ಯಾರು ಇಲ್ಲವೇ ಇಲ್ಲ! ಇದು ಸತ್ಯ ಮತ್ತು ಇದು ಅತಿಸಿಯೋಕ್ತಿ ಆಗಲಾರದು.
ಕೇವಲ ಆರು ತಿಂಗಳು ಬಿಟ್ಟು ಮತ್ತೆ ನಾನೇ ಅಂದು ಕಡೆಗೂ ಮತ್ತೆ ಪದವಿ ಏರಿದ್ದು ೨೦೧೯ರಲ್ಲಿ. ಪದವಿ ಇಳಿದ ಮೇಲು ನಾನೆ ಅನಭಿಶಕ್ತ ದೊರೆ ಎಂದು ಒಂದು ಬಾರಿ ಅಲ್ಲ ಎರಡು ಬಾರಿ ಸಾರಿ ಸಾರಿ ಹೇಳಿದ್ದರು . ಅಂದರೆ ಇಬ್ಬರು ಮುಖ್ಯಮಂತ್ರಿಗಳು ಬದಲಾವಣೆ ಕಂಡಿದ್ದರು! ಅನಭಿಶಕ್ತ ದೊರೆ ಸುಮ್ನೆ ಬಂದುದ್ದಲ್ಲ ಪಕ್ಷಕ್ಕಾಗಿ,ಬಡವರಿಗಾಗಿ ಮತ್ತು ರೈತರಿಗಾಗಿ ನಡೆಸಿದ ಹೋರಾಟಗಳೇ ಅವರಿಗೆ ಶ್ರೀರಕ್ಷೆ!
ಇಷ್ಟೆಲ್ಲಾ ಆದ ಮೇಲೆ ಮತ್ತೆ ಪದವಿಗೇರಿದ ಹಾದಿ ಸುಗಮವಾಗಿರಲಿಲ್ಲ. ಕೇವಲ ಭಾರತೀಯ ಜನತಾ ಪಕ್ಷಕ್ಕೆ ಹೊರಗಿಡಲು ಮುರಿದ ಮನಸ್ಸುಗಳ ಒಪ್ಪಂದ ಬಹಳ ಕಾಲ ನಿಲ್ಲಲಿಲ್ಲ. ಇದೆಲ್ಲ ನೋಡಿದ ಶಾಸಕರು ,ರಾಜ್ಯದಲ್ಲಿ ಅಧಿಕಾರ ಬರಲಿ ಅಂತ ಜಾತಕ ಪಕ್ಷಿಗಳಂತೆ ಕುಳಿತಿದ್ದವರು, ಅಧಿಕಾರ ಬಂದ ಮೇಲೆ ಮತ್ತೆ ಹಳೆಯ ಆಟ ಶುರುವಿಟ್ಟಕೊಂಡರಾ?
ಮತ್ತೆ ಸರಕಾರ ರಚನೆ ಮಾಡ್ಲೇಬೇಕು ಎಂದು ಹಠ ತೊಟ್ಟು ಅಖಾಡಕ್ಕೆ ಇಳಿದಾಗ ಎಷ್ಟೊಂದು ಅಪಮಾನಗಳು !!! ಅವತ್ತು ಮೇಲಿದ್ದವರು ಆದ ಅಪಮಾನಕ್ಕೆ ಒಂದಾದರು ಮಾತು? ಇವತ್ತು ಎಷ್ಟು ಜನರು ಅಧಿಕಾರ ಅನುಭವಿಸುತ್ತಾ ಇದ್ದಾರೆ ಆದರೆ ಅವರ ಅಪಮಾನಗಳಿಗೆ ಹೆಗಲು ಕೊಟ್ಟಿದ್ದು ಕೆಲವೇ ಜನ! ಹೋಗಲಿ ಅಪಮಾನ ಮಾಡಿಕೊಂಡಿದ್ದು ಯಾರಿಗಾಗಿ? ಪಕ್ಷಕ್ಕಾಗಿ ,ಜನರಿಗಾಗಿ ಮತ್ತು ಜೊತೆಗಿರುವ ಶಾಸಕರಿಗಾಗಿ. ಅಪಮಾನಕ್ಕೆ ಕಾರಣೀಭೂತರು ಒಳಗಿನವರೇ ಎಂಬದು ಮರೆಯಬಾರದು. . ಆದರೆ ಅಧಿಕಾರ ಬಂದಾಗ ಎಲ್ಲರೂ ಸೂಟ್ ಹಾಕಿಕೊಂಡು ರಾಜಭವನಕ್ಕೆ ಬರಲು ತಯಾರಾಗಿ ಬಿಡತಾರೆ! ಎಷ್ಟು ಜನರಿಗೆ ಸೂಟ್ ಹಾಕಲು ಆಗುತ್ತೆ! ಸೂಟ್ ಹಾಕಿದರೆ ಇವರೇ ನಮ್ಮ ನಾಯಕ ಇಲ್ಲವಾದರೆ? ಇದೆಂಥ ಪಕ್ಷ ನಿಷ್ಠೆ! ಇದೆಂಥ ಸಿದ್ದಾಂತ!
ಸರಕಾರ ರಚನೆ ಮಾಡಿ ನಾವು ನಿಮ್ಮ ಜೊತೆ ಬರುತ್ತೇವೆ ಅಂತ ಹೇಳಿದ್ದು ಜನ ನಾಯಕರಿಗೆ . ಬೇರೆಯವರಿಗೆ ಈ ಮಾತು ಹೇಳಲು ಸಾಧ್ಯವೇ? ಸರಕಾರ ರಚನೆ ಮಾಡುವಾಗ ಮತ್ತು ಚುನಾವಣೆ ಸಂದರ್ಭದಲ್ಲಿ ಎಲ್ಲಿಯೂ ಇರದ ಜನ ಸರಕಾರ ರಚನೆ ಆದ ಮೇಲೆ ಮೂಗು ತೂರಿಸಿದರೆ ಯಾರಿಗೆ ನಷ್ಟ?
ಹೊಸದಾಗಿ ಅಳುಕಿನಿಂದಲೇ ಪ್ರಮಾಣ ವಚನ ಸ್ವೀಕಾರ ಮಾಡಿ ಇನ್ನು ವಾರ ಕಳೆದಿರಲಿಲ್ಲ ೧೦೦ ವರ್ಷಗಳ ಆಚೆಯೂ ನೋಡದ ಪ್ರವಾಹ ! ಸಚಿವರು ಇಲ್ಲ, ಹೊಸ ಸರಕಾರ ಆದರೂ ಪರಸ್ಥಿತಿಯನ್ನು ಏಕಾಂಗಿಯಾಗಿ ಸಮರ್ಥವಾಗಿ ನಿಭಾಯಿಸಿದ್ದರು. ಸಂಕಷ್ಟದಲ್ಲಿವರಿಗೆ ತ್ವರಿತಗತಿಯಲ್ಲಿ ಪರಿಹಾರವನ್ನು ಕೊಡಿಸುವಲ್ಲಿ ಸಫಲರಾಗಿದ್ದರು. ತೊಂದರೆಗೆ ಒಳಗಾದ ಸ್ಥಳಗಳಿಗೆ ಹೋದಾಗ ಜನರು ತಮ್ಮ ಕಷ್ಟಗಳನ್ನು ಹೇಳಿದಾಗ ಎಲ್ಲವನ್ನು ಸಾವಧಾನವಾಗಿ ಕೇಳಿಸಿಕೊಂಡು ಅದಕ್ಕೆ ಸರಿಯಾದ ಹಾನಿಯನ್ನು ಸರಕಾರದ ವತಿಯಿಂದ ಕೊಟ್ಟಿದ್ದರು. ಇದು ಜನರ ನಾಡಿಮಿಡಿತ ಅರ್ಥವಾದವರಿಗೆ ತಿಳಿಯುತ್ತೆ!
ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿತ್ತು ಅದುವೇ ೧೨ ಕ್ಷೇತ್ರಗಳ ಉಪ ಚುನಾವಣೆ ! ರಾಜೀನಾಮೆ ಕೊಡುವಾಗು ಮತ್ತು ಸರಕಾರ ಬೀಳುವಾಗ ಜೊತೆ ಇದ್ದ ಕೆಲವರು ಉಪ ಚುನಾವಣೆ ಘೋಷಣೆಯಾದಾಗ ಭಾರತೀಯ ಜನತಾ ಪಕ್ಷದ ಎರಡನೆಯ ದರ್ಜೆಯ ನಾಯಕರು ಗೆಲ್ಲುವ ಮಾತನ್ನು ಆಡುವ ಬದಲು ಹಿಂದಿನ ಸೀಟಿಗೆ ಹೋಗಿದ್ದರು. ಅವತ್ತು ಪಕ್ಷ ನಿಷ್ಠೆ ಮತ್ತು ಜನ ಬೆಂಬಲ ತೋರಿಸಬೇಕಿತ್ತು.
ಟಿಕೆಟ್ ಹಂಚುವಾಗ ಎಲ್ಲವನ್ನು ಗಣನೆಗೆ ತಗೆದುಕೊಂಡಿದ್ದರು. ಪಕ್ಷದ ಕಾರ್ಯಕರ್ತರು, ಗೆಲ್ಲುವ ಅಭ್ಯರ್ಥಿ ಮತ್ತು ಹೈಕಮಾಂಡ ಮಾತು ಕೇಳಿ ಟಿಕೆಟ್ ಕೊಡಬೇಕಿತ್ತು. ಟಿಕೆಟ್ ಹಂಚಿದ ನಂತರ ಎದ್ದ ಅಸಮಾದಾನವನ್ನು ಹೋಗಲಾಡಿಸಿ ಎಲ್ಲ ಕೆಳಹಂತದ ನಾಯಕರನ್ನು ಒಗ್ಗೂಡಿಸಿ ಪ್ರಚಾರಕ್ಕೆ ದುಮುಕಿ ಕಾಲಿಗೆ ಚಕ್ರ ಕಟ್ಟಿಕೊಂಡು ಎಲ್ಲರನ್ನು ಗೆಲ್ಲಿಸುವಾಗ ಅವರ ವಯಸ್ಸು ಎಷ್ಟು ?
ಸುಮಾರು ನಾಲ್ಕು ಬಾರಿ ಉತ್ತರಕರ್ನಾಟಕದ ಕ್ಷೇತ್ರಗಳಿಗೆ ಬಂದು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಮಾಡಿದ್ದರು. ಮೂರ್ನಾಲ್ಕು ಸಮೀಕ್ಷೆಗಳು ಸರಕಾರದ ವಿರುದ್ದವಿದ್ದರೂ ಒಂದಿಷ್ಟು ತಲೆಕೆಡಿಸಿಕೊಳ್ಳದೆ ಸರಿಯಾದ ರಣತಂತ್ರ ಹೂಡಿ ಗೆದ್ದು ಭದ್ರ ಸರಕಾರಕ್ಕೆ ನಾಂದಿಹಾಡಿದ್ದರು.
ಅದರಲ್ಲಿ ನಾಗನಕೋಟೆಗೆ ಒಳಗಿನವರಿಂದಲೇ ಮತ್ತೆ ಅಪಮಾನ! ಸರಕಾರ ರಚನೆ ಮಾಡುವಾಗ ಎಲ್ಲರ ಅಭಿಪ್ರಾಯ ಪಡೆದಿದ್ದರು ಮತ್ತೆ ಕಷ್ಟಕೊಟ್ಟಿದ್ದರು. ಸರಿಯಾಗಿ ಮಾತು ಆಲಿಸದ ಹೈಕಮಾಂಡ ಮತ್ತು ಒಳಗಿನ ಒಳಪೆಟ್ಟುಗಳ ವಿರುದ್ದ ಪಕ್ಷ ಮತ್ತು ನಾಯಕನ ಮನವಿ ಮೇರೆಗೆ ಬಂದವರಿಗೆ ಮರ್ಯಾದೆ ಕೊಡುವುದು ಕಷ್ಟದ ಕೆಲಸವಾಗಿತ್ತು. ನಂಬಿ ಬಂದ ಶಾಸಕರಿಗೆ ಗೆಲ್ಲಿಸಿ ಅವರಿಗೆ ಮಂತ್ರಿಗಿರಿಗೆ ಏರಿಸಿದ್ದು ಮತ್ತೆ ಅವರ ಗಟ್ಟಿ ನಾಯಕತ್ವ!
ಗೆಲ್ಲಿಸಿಕೊಂಡು ಬಂದು ಸರಕಾರ ರಚನೆ ಮಾಡಿದ ಮೇಲೆ ಬಂದದ್ದು ಸಂಪುಟ ರಚನೆ! ಇಲ್ಲಿಯ ತನಕ ಹೆಗಲು ಕೊಡುವ ಜವಾಬ್ದಾರಿಯಿಂದ ದೂರಸರಿದ ಜನ ಇವತ್ತು “ಬೆಕ್ಕು ಕನ್ನಡಿಯಲ್ಲಿ ನೋಡಿದಾಗ ತಾನು ಹುಲಿನೇ ಅಂತ ಭಾವಿಸಿದ ಹಾಗೆ” ಜವಾಬ್ದಾರಿಂದ ನುಣಚಿಕೊಂಡ ನಾಯಕರು ನಾವು ದೊಡ್ಡ ನಾಯಕರು ನಮಗೂ ಇದೆ ಖಾತೇನೆ ಬೇಕು ಎಂದರೆ ಹಣಕಾಸು , ಕಂದಾಯ ,ಜಲ ಸಂಪನ್ಮೂಲ ನೇ ಬೇಕು ಎಂದು ಹಠ ಹಿಡಿದವರಿಗೆ ಸಂತುಷ್ಟ ಗೊಳಿಸುವುದು ಒಂದು ಸವಾಲಿನ ಕೆಲಸ. ಚುನಾವಣೆಯಲ್ಲಿ ಸರಿಯಾದ ಜವಾಬ್ದಾರಿ ಹೊತ್ತು ಗೆಲ್ಲಿಸಿಕೊಂಡು ಬಂದು ರಾಜ್ಯಮಟ್ಟದ ನಾಯಕರಾಗಬಹುದಲ್ಲವೇ? ಅದು ಮಾಡದೆ ನಾನು ಇಷ್ಟು ಬಾರಿ ಗೆದ್ದು ಬಂದಿದ್ದೇನೆ ನನಗು ಸಚಿವ ಕೊಡಿ ಎಂದ್ರೆ ಹೇಗೆ? ನಿಮಗೆ ಪಕ್ಷ ಇಲ್ಲಿಯವರೆಗೆ ಟಿಕೆಟ್ ಕೊಟ್ಟಿದ್ದೆ ಹೆಚ್ಚಲ್ವೇ?
ಸರಕಾರ ರಚನೆ, ಪ್ರವಾಹ ,ಉಪ ಚುನಾವಣೆ, ಸಂಪುಟ ಸರ್ಕಸ ಇವೆಲ್ಲ ಎಲ್ಲಿಯೂ ಚ್ಯುತಿ ಬಾರದಂತೆ ಜಾಗರೂಕತೆಯಿಂದ ಕರ್ತವ್ಯ ನಿರ್ವಿಸಿದ್ದರು. ಅದಾದ ಮೇಲೆ ಕರೋನ ,ಇಲ್ಲಿಯೂ ಮತ್ತೆ ಅದೇ ಚುರುಕುತನ, ಸಮಸ್ಸ್ಯೆಯನ್ನು ಅರಿಯುವುದು, ಅದಕ್ಕೆ ಸರಿಯಾದ ರೀತಿಯಲ್ಲಿ ಸ್ಪಂದನೆ ಮಾಡುವುದು, ಅದನ್ನು ಮೀರಿ ರಾಜ್ಯವನ್ನು ಮತ್ತೆ ಉತ್ತಮ್ಮ ಆರ್ಥಿಕ ಸ್ಥಿತಿಗೆ ತರಬೇಕು ಎನ್ನುವ ಹಂಬಲ. ಒಬ್ಬ ದಕ್ಷ ಮುಖ್ಯಮಂತ್ರಿ ಮಾಡುವ ಕೆಲಸ ಯಾವದೇ ಅಳುಕಿಲ್ಲದೆ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ ! ಬ್ರಹ್ಮ ಲಿಖಿತ ದೇವರಿಗೆ ಬೇಕಾದಾಗ ಬದಲಾವಣೆ ಆಗಿದೆ. ಹಾಗೆ ಇಲ್ಲಿ ಸಮರ್ಥ ನಾಯಕನಿಗಾಗಿ ವಯಸ್ಸಿನ ನಿಭಂದನೆ ಇಲ್ಲ.
ರಾಜ್ಯದ ಜನರೇ ದೊರೈ ಜೊತೆ ಇರುವಾಗ ಎಲ್ಲಿಂದ ಬಂತು “ವ್ಯಕ್ತಿ ನಿಷ್ಠೆಗಿಂತ ಪಕ್ಷ ನಿಷ್ಠೆ ಮುಖ್ಯ” ? ಕಷ್ಟಪಟ್ಟು ಕಟ್ಟಿದ ಸರಕಾರದ ನಾಯಕನನ್ನು ಬದಲಾವಣೆ ಮಾಡಲು ನಡೆಯುತ್ತಿದೆಯಾ ಹುನ್ನಾರ? ಎಲ್ಲರನ್ನು ಭೇಟಿ ಮಾಡುವ ದರ್ದೆನಿತ್ತು ? ಭೇಟಿ ಮಾಡುವ ನೆಪದಲ್ಲಿ ಅಭಿಪ್ರಾಯ ಸಂಗ್ರಹಿಸಲಾಯಿತೇ? ಪೂರ್ಣ ಅವಧಿಯನ್ನು ಸಂಪೂರ್ಣಮಾಡುತ್ತಾರೆ ಅಂತ ಹೇಳಿ ಬದಲಾವಣೆ ಕೆಲಸಕ್ಕೆ ಕೈ ಹಾಕಿದರೆ ಚಪ್ಪಡಿ ಕಲ್ಲನ್ನು ಮೈಮೇಲೆ ಎಳೆದುಕೊಂಡಂತೆ. ಹಾನಿಯಾಗುವುದು ಪಕ್ಷಕ್ಕೆ ಹೊರೆತು ಮತ್ಯಾರಿಗೆ ಅಲ್ಲ . ಚಾಣಕ್ಯ ಹೇಳುವ ಪ್ರಕಾರ ಜೀವನದಲ್ಲಿ ಎಲ್ಲ ತಪ್ಪು ನಾವೇ ಮಾಡಿ ಪಾಠ ಕಲಿಯುವಷ್ಟು ಸಮಯ ಇರುದಿಲ್ಲ ಅಂತೇ. ಬೇರೆಯವರ ತಪ್ಪುಗಳು ನಮಗೆ ಪಾಠವಾಗಬೇಕು! ಬಿಜೆಪಿ ಯವರು ಹಿಂದೆ ಸ್ವತಃ ತಪ್ಪು ಮಾಡಿ ಶಿಕ್ಷೆ ಅನುಭವಿಸಿ ಮತ್ತೆ ಅದೇ ತಪ್ಪನ್ನು ಮಾಡಲು ಹೊರಟಿದ್ದಾರಾ?
ಕೆಲಸದ ನಿಮಿತ್ಯ ದೆಹಲಿಗೆ ಹೋದಾಗ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ಪೋಸ್ಟರಗಳು ಒಮ್ಮಲೇ ಮಾದ್ಯಮದಲ್ಲಿ ಬಿತ್ತರವಾಗುತ್ತವೆ. ಸ್ವತಃ ಅವರೇ ಬಂದು ಸ್ಪಷ್ಟಿಕರಣ ಕೊಡುವ ಮಟ್ಟಿಗೆ ಹೋಗುತ್ತೆ ಎಂದರೆ ಇದೆಕ್ಕಲ್ಲ ಒಂದು ಕಾರಣ ಇರಬೇಕು!
ಬದಲಾವಣೆ ಗೆ ಗುದ್ದಲಿ ಹಾಕಿ ಬೇಡದವರ ಹೆಸರು ತೇಲಿ ಬಿಟ್ಟು. ಹೇಗೂ ಅವರಿಗೆ ಶಾಸಕರ ಬೆಂಬಲ ಸಿಗುವದಿಲ್ಲ ಅದೇ ಹೊತ್ತಲ್ಲಿ ಅವರು ಬೇಕಾ(ತೇಲಿ ಬಿಟ್ಟ ಹೆಸರು) ಅಥವಾ ಇವರು ಬೇಕಾ (ನಿಜವಾದ ರೇಸರ್)ಆಟ ಆಡುವ ತವಕದಲ್ಲಿದ್ದಾರೆ ಅನಿಸುತ್ತೆ!
ಅವರ ಮೇಲೆ ಬಂದೂಕು ಇಟ್ಟು ಟ್ರಿಗರ್ ಒತ್ತುವ ಆ ಸೂತ್ರದಾರ ಯಾರು?
Categories: Articles

Good
LikeLike