Articles

ಅಂಗೈಯಲ್ಲಿ ಆಪಲ್ ಹಿಡಿಸಿದ ಮಹಾನುಭಾವ – ಭಾಗ-೧

ದೃಷ್ಟಿಕೋನ ಅಂಕಣ By Bhimashankar Teli

ಎಲೆಕ್ಟ್ರಾನಿಕ್ಸ್ ಸಾಮ್ರಾಜ್ಯವನ್ನೇ ಆಳಿದ ಸ್ಟೀವ್ ಜಾಬ್ಸ್ ಗೆ ಎಲೆಕ್ಟ್ರಾನಿಕ್ಸ್ ಮೊದಲ ಪರಿಚಯವಾದದ್ದು ಅಪ್ಪನ ಕಾರ್ ಗ್ಯಾರೇಜ್ ಮೂಲಕ ಎಂದರೆ ಅಚ್ಚರಿಯಾಗಬಹುದು. “ಅಪ್ಪನಿಗೆ ಎಲೆಕ್ಟ್ರಾನಿಕ್ಸ್ ಬಗ್ಗೆ ಆಸಕ್ತಿ ಇರಲಿಲ್ಲ ಆದರೆ ಕಾರುಗಳಲ್ಲಿನ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳನ್ನು ಆತ ರಿಪೇರಿ ಮಾಡುತ್ತಿದ್ದ. ಹೀಗೆ ರಿಪೇರಿ ಮಾಡುವದನ್ನು ನೋಡುತ್ತಲೇ ನನಗೆ ಈ ಕ್ಷೇತ್ರದ ಮೇಲೆ ವ್ಯಾಮೋಹ ಬೆಳೆದಿದ್ದು ” ಎಂದು ಸ್ಟೀವ್ ಹೇಳಿಕೊಂಡಿದ್ದರು. ಜೋಹಾನ್ ತಂದೆಯ ವಿರೋಧವಾಗಿ ಹೋಗದೆ ತನ್ನ ಪ್ರೀತಿಯನ್ನು ದಿಕ್ಕರಿಸಿ ಬೇರೆ ಜಾತಿಯ ಯುವಕನನ್ನು ಮದುವೆಯಾಗದೆ 8 ತಿಂಗಳು ಗರ್ಭಿಣಿಯಾಗಿದ್ದ ಜೊಹನಾಗೆ ಅವಿವಾಹಿತ ಗರ್ಭಿಣಿಯರಿಗೆ ಆಶ್ರಯ ನೀಡಿ, ಉಚಿತವಾಗಿ ಹೆರಿಗೆ ಮಾಡಿ ಮಕ್ಕಳನ್ನು ಸೂಕ್ತ ದಂಪತಿಗೆ ದತ್ತು ನೀಡುತ್ತಿದ್ದ ಕರುಣಾಮಯಿ ವೈದ್ಯರ ತಂಡ ಹೆರಿಗೆ ಮಾಡಿಸಿ ಅವಳ ಇಚ್ಛೆಯಂತೆ ಪದವಿ ಪಡೆದ ದಂಪತಿಗಳಿಗೆ ದತ್ತು ಕೊಡಲು ಒಪ್ಪಿದರೂ ಕಾರಣಾಂತರಗಳಿಂದ ಮಷಿನಿಸ್ಟಗೆ ದತ್ತು ಕೊಟ್ಟಿದ್ದರು ಅದಕ್ಕೆ ಸ್ಟೀವ್ ಒಂದು ಸಂದರ್ಶನದಲ್ಲಿ ನನ್ನ ಬಯೋಲಾಜಿಕಲ್ ತಾಯಿ ಬೇರೆ ಮತ್ತು ಸಾಕು ತಾಯಿ ಬೇರೆ ಎಂದು ಹೇಳಿದ್ದರು . ಮಷಿನಿಸ್ಟ್ ಪೌಲ್ ಮತ್ತು ಪುಸ್ತಕ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕ್ಲಾರಾ ಸಾಕು ಪೋಷಕರು. ಜೋಹಾನ್ ನಿಜವಾದ ಸ್ಟೀವ್ ಅವರ ತಾಯಿ.

ಒಂದು ಮುಖ್ಯವಾದ ವಿಷಯ ಜೋಹಾನ್ ತಂದೆ ತೀರಿಕೊಂಡ ನಂತರ ಮತ್ತು ದತ್ತು ಪಡೆದು ಕೆಲವೇ ಕೆಲವು ತಿಂಗಳಲ್ಲಿ ಜೋಹಾನ್ ಪ್ರಿಯಕರನ ಜೊತೆ ಮದುವೆಯಾಗಿ ಮತ್ತೊಂದು ಮಗುವಿಗೆ ಜನ್ಮಕೊಟ್ಟರು. ಅವಳು ಅಮೇರಿಕಾದಲ್ಲಿ ಇಂದು ಹೆಸರಾಂತ ಕಾದಂಬರಿಗಾರ್ತಿ ಮೋನಾ ಸಿಂಪ್ಸನ್. ಸ್ಟೀವ್ ಅವರ ಸಹೋದರಿ! ಸ್ಟೀವ್ ಅವರ ದೀರ್ಘಕಾಲೀನ ಸಹೋದ್ಯೋಗಿ ಹೇಳುವ ಪ್ರಕಾರ ಸ್ಟಿವಗೆ ತಾನೊಬ್ಬ ಪರಿತ್ಯಕ್ತ ಎಂಬ ಭಾವನೆ ಕಡೆಯವರೆಗೂ ಇತ್ತು. ಆದರೆ ಸ್ಟೀವ್ ಸುಮಾರು ಬಾರಿ “ನನ್ನನ್ನು ದತ್ತು ಕೊಟ್ಟವರು ವಾಪಸ ಕರೆಸಿಕೊಳ್ಳಲಿ ಎಂದು ನಾನು ಜೀವನದಲ್ಲಿ ಸಾಧನೆ ಮಾಡಿದೆ ಎಂದು ಕೆಲವರು ತಿಳಿದಿದ್ದಾರೆ ಆದ್ರೆ ಅದೊಂದು ಹಾಸ್ಯಾಸ್ಪದ ಎಂದು ಸ್ಟೀವ್ ಕರೆದಿದ್ದರು. ದತ್ತುಪುತ್ರ ಇರುವದರಿಂದಲೇ ನನಗೆ ತುಂಬಾ ಸ್ವಾತಂತ್ರ್ಯ ಇತ್ತು, ಅಪ್ಪ ಅಮ್ಮ ನನಗೆ ತುಂಬಾ ಪ್ರೀತಿ ಮಾಡುತ್ತಿದ್ದರು ಎಂದು ಹೇಳುತ್ತಿದ್ದರು. ಸ್ಟೀವ್ ನನ್ನ ಸಾಕು ತಂದೆ ತಾಯಿ ಹುಟ್ಟಿಸಿದವರಿಗಿಂತ ನೂರು ಪಟ್ಟು ಮೇಲು ಎಂದು ಹೆಮ್ಮೆಯಿಂದ ಹೇಳುತ್ತಿದ್ದ. ಯಾರಾದರೂ ಜನ್ಮ ಕೊಟ್ಟವರ ಬಗ್ಗೆ ಕೇಳಿದಾಗ ಅವರು ಕೇವಲ ನಾನಿದ್ದ ವೀರ್ಯ ಮತ್ತು ಅಂಡಾಣು ಬ್ಯಾಂಕ್ ಎಂದಷ್ಟೇ ಹೇಳುತ್ತಿದ್ದರು. ಸ್ಟೀವ್ ಜಾಬ್ಸ್ ಮೇಲೆ ಬಾಲ್ಯದ ನೋವುಗಳು ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು ಸುಳ್ಳಲ್ಲ. ತಂದೆಯಂತೆ ಮಗನು ಮದುವೆಗಿಂತ ಮುಂಚೆ ಎಂದರೆ ತನ್ನ ೨೩ನೇ ವಯಸ್ಸಿನಲ್ಲಿ ಮಗುವೊಂದರ ಹುಟ್ಟಿಗೆ ಕಾರಣರಾಗಿದ್ದರು. ಗೆಳತೀ ಕ್ರಿಸಾನಗೆ ಇದು ನನ್ನ ಮಗು ಅಲ್ಲವೇ ಎಂದಿದ್ದ. ಆದರೆ ಡಿ ಏನ್ ಎ ಪರೀಕ್ಷೆಯಲ್ಲಿ ಸ್ಟೀವ್ ಮಗಳೇ ಎಂದು ಖಾತ್ರಿಯಾಗಿತ್ತು. ಅವಳನ್ನು ತುಂಬಾ ಪ್ರೀತಿಸುತ್ತಿದ್ದ ಮತ್ತು ಆಪಲ್ ಕಂಪ್ಯೂಟರ್ ಮಾಡೆಲ್ ಗೆ ಲಿಸಾ .

ಎಂದು ಹೆಸರಟ್ಟಿದ್ದನು. ೧೯೬೦ರ ದಶಕ ಅಮೇರಿಕಾದಲ್ಲಿ ತಂತ್ರಜ್ಞಾನದ ಗಾಳಿ ಅತಿ ಜೋರಾಗಿ ಬಿಸಿದ ಪರ್ವಕಾಲ. ನಾಸಾ ಏಮ್ಸ್ ಸಂಸ್ಥೆ ರಕ್ಷಣಾ ಇಲೇಖಾಗೆ ಬೇಕಾದ ಕಂಪ್ಯೂಟರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿತ್ತು. ಸಂಸ್ಥೆ ಸ್ಟೀವ್ ಮನೆಯ ಸಮೀಪ ಇರುವದರಿಂದ ಮಗನಿಗೆ ಯಾವಾಗಲು ಹೊಸದನ್ನು ತೋರಿಸುವ ಮನಸ್ಸು ಹೊಂದಿದ್ದ ಪಾಲ್ ಒಮ್ಮೆ ಸಂಸ್ಥೆಗೆ ಕರೆದುಕೊಂಡು ಹೋಗಿದ್ದ. ಅಂದು ಸ್ಟೀವ್ ೧೦ ವರ್ಷದ ಬಾಲಕನಾಗಿದ್ದ. ತಂದೆ ಕರೆದುಕೊಂಡು ಹೋಗಿ ತೋರಿಸಿದ್ದ ಕಂಪ್ಯೂಟರ್ ನೋಡಿದ ಮೇಲೆ ಅದರ ಮೇಲೆ ಪ್ರೇಮಾಂಕುರವಾಗಿತ್ತು ಮತ್ತು ಕಂಪ್ಯೂಟರ್ ಹುಳು ಕೊರೆಯುತ್ತಿತ್ತು ಎಂದು ಸ್ಟೀವ್ ಹೇಳಿಕೊಂಡಿದ್ದಾರೆ.

ಸ್ಟೀವ್ ತಂದೆ ಮಗ ಚೆನ್ನಾಗಿ ಕಲಿತು ದೊಡ್ಡ ವ್ಯಕ್ತಿಯಾಗಲಿ ಎಂಬ ಮಹದಾಸೆಯಿಂದ ಒಳ್ಳೆಯ ಶಾಲೆಗೆ ಸೇರಿಸಿದರು. ಆದರೆ ಸ್ಟೀವ್ ಒಬ್ಬ ಅತಿ ತುಂಟ ಹುಡಗನಾಗಿದ್ದರಿಂದ ಶಾಲೆಯಲ್ಲಿ ಕಂಪ್ಲೇಂಟ್ ಮೇಲೆ ಕಂಪ್ಲೇಂಟ್ ಆದರೆ ಅವರ ತಂದೆ ಅದನ್ನು ನಿರಾಕರಿಸುತ್ತಾ ಬಂದಿದ್ದರು. ನಾವು ಸುಮಾರು ಬಾರಿ ನೋಡಿದ್ದೇವೆ ಮತ್ತು ಕೇಳಿದ್ದೇವೆ ಕೆಲವು ವಿದ್ಯಾರ್ಥಿಗಳು ತುಂಬಾ ಬುದ್ಧಿವಂತರಾಗಿರುತ್ತಾರೆ ಅಂಥವರನ್ನು ಮೇಲಿನ ತರಗತಿಗಳಿಗೆ ಬಡ್ತಿ ಕೊಡುತ್ತಾರೆ . ಸ್ಟೀವ್ ಜಾಬ್ಸ್ ೫ನೇ ತರಗತಿಯಲ್ಲಿ ಇದ್ದಾಗ ಎರಡು ತರಗತಿ ಬಡ್ತಿ ಕೊಟ್ಟಿದ್ದರು. ಆದರೆ ತಂದೆ ಬೇಡ ಒಂದೇ ತರಗತಿ ಸಾಕು ಎಂದಿದ್ದರು. ಯಾಕೆ ಸ್ಟೀವ್ ಮೇಲೆ ಕಂಪ್ಲೇಂಟ್ ಬಂದಿದ್ದವು ಎಂದರೆ ಶಿಕ್ಷಕ ಹೇಳುತ್ತಿದ್ದ ಪಾಠಗಳು ಅವನಿಗೆ ಏನು ಕಲಿತ ರೀತಿ ಬಾಸವಾಗುತ್ತಿರಲಿಲ್ಲ. ಅವನು ತುಂಬಾ ತೀಕ್ಷ್ಣ ಮತ್ತು ಬುದ್ಧಿವಂತನಾಗಿಂದರಿಂದ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದರಿಂದ ಅವರಿಗೆ ಕಿರಿ ಕಿರಿಯಾಗಿ ಕಂಪ್ಲೇಂಟ್ ಕೊಟ್ಟಿದ್ದರು. ತಂದೆಯ ಗ್ಯಾರೇಜ್ನಲ್ಲಿ ತಂದೆಗೆ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದ ಸ್ಟೀವ್ ಬಗ್ಗೆ ತಂದೆಗೆ ಗೊತ್ತಾಗಿತ್ತು ಇವನೊಬ್ಬ ಬುದ್ದಿವಂತ ಅಂತ ಅದಕ್ಕೆ ಶಿಕ್ಷಕರು ಕಂಪ್ಲೇಂಟ್ ಕೊಟ್ಟರೂ ಸ್ಟೀವ್ ತಪ್ಪು ಮಾಡುವ ಹುಡುಗನಲ್ಲ ಎಂದಿದ್ದರಂತೆ. ಸ್ಟೀವ್ ಕೆಲಯೊಂದು ಸಂದರ್ಶನದಲ್ಲಿ ಟೆಡ್ಡಿ ಶಿಕ್ಷಕಿ ಬಗ್ಗೆ ಆಡಿದ ಮಾತುಗಳು “ನನ್ನ ಜೀವನದಲ್ಲೇ ಕಂಡ ಮಹಾವ್ಯಕ್ತಿ ಆಕೆ ” ಇಮೊಜಿನ ಹೆಲ್ ಟೆಡ್ಡಿ ಎಂದು ಖ್ಯಾತರಾಗಿದ್ದರು.

ಸ್ಟೀವ್ ತನ್ನ ಕೀಟಲೆಯಿಂದ ಕುಖ್ಯಾತಿಯನ್ನು ಪಡೆದಿದ್ದನು. ಟೆಡ್ಡಿ ಇವನ ಕ್ಲಾಸ್ ಟೀಚರ್ ಆಗಿದ್ದರಿಂದ ಇವನನ್ನು ಹೇಗೆ ನಿಭಾಯಿಸುವುದು ಎಂಬ ದೊಡ್ಡ ಚಿಂತೆಯಾಗಿತ್ತು. ಸ್ಟೀವ್ ತುಂಬಾ ಬುದ್ಧಿವಂತನಾಗಿದ್ದ ಅದನ್ನು ಸೂಕ್ಷ್ಮವಾಗಿ ಗಮನಿಸಿದ ಟೆಡ್ಡಿ ಇವನಿಗೆ ಲಾಲಿಪಾಪ್ ಕೊಟ್ಟು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಯೋಜೆನೆ ಹಾಕಿದರು. ಆದರೆ ಲಾಲಿಪಾಪ್ ಸುಮ್ನೆ ಕೊಡಲಿಲ್ಲ. ಲಾಲಿಪಾಪ್ ಪಡೆಯಬೇಕಾದರೆ ಸ್ಟೀವ್ ಕಠಿಣ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಮೇಲಿನೆ ತರಗತಿಯ ಮತ್ತು ಅತ್ಯಂತ ಕಠಿಣ ಲೆಕ್ಕಗಳನ್ನು ಬಿಡಿಸಿ ಲಾಲಿಪಾಪ್ ಪಡೆದುಕೊಂಡಿದ್ದ ಸ್ಟೀವ್. ಕ್ರಿಕೆಟ್ ದೇವರು ಸಚಿನ ಜೀವನದಲ್ಲೇ ತನ್ನ ಗುರುಗಳು ಸ್ಟಂಪ್ ಮೇಲೆ ಒಂದು ರೂಪಾಯಿ ಇಟ್ಟು ನೀನು ಔಟ್ ಆಗದೆ ಇದ್ದಾರೆ ಒಂದು ರೂಪಾಯಿ ನಿನಗೆ ಎನ್ನತ್ತಾ ಶಿಷ್ಯನನ್ನು ದೈತ್ಯ ಕ್ರಿಕೆಟಿಗನಾಗಿ ಬೆಳೆಸಿದ್ದು ಜಗತ್ತಿಗೆ ಗೊತ್ತಿರುವ ವಿಷಯ. ಹಿಂತಹ ಗುರು ಸ್ಟೀವ್ ತನ್ನ ವಿದ್ಯಾರ್ಥಿ ಜೀವನದಲ್ಲಿ ಪಡೆದಿದ್ದು ಅದು ಜೀವನದ ಪಥವನ್ನೇ ಬದಲಿಸಿತು ಎಂದು ಸ್ಟೀವ್ ಹೇಳಿಕೊಂಡಿದ್ದರು. ಇಷ್ಟೇ ಅಲ್ಲದೆ ಒಂದು ಬಾರಿ ಕ್ಯಾಮೆರಾ ತಯಾರಿಸಿಸುವದನ್ನು ಹೇಳಿಕೊಟ್ಟಿದ್ದರು. ಶಾಲೆಯಲ್ಲೇ ಇದ್ದಾಗ ತಂದೆ ತನ್ನ ಹಳ್ಳಿಯ ನೋಡಲು ಕರೆದುಕೊಂಡು ಹೋಗಿದ್ದರು.

ಅಲ್ಲಿನ ಒಂದು ವಿಷಯ ಸ್ಟೀವ್ಗೆ ಆಶ್ಚರ್ಯವನ್ನುಂಟು ಮಾಡಿತ್ತು. ಒಂದು ಬಾವಿಯಲ್ಲಿ ನಾಯಿ ಮರಿಯನ್ನು ಎಸೆದಾಗ ನಾಯಿ ಮರಿ ಈಜುಕೊಂಡು ದಡ ಸೇರಿತ್ತು. ಆದರೆ ಚಿಕ್ಕ ಮಗುವಿಗೆ ಎಸೆದರೆ ಬರುತ್ತಾ? ಸಾಧ್ಯವೇ ಇಲ್ಲ. ಅದಕ್ಕೆ ಅವನಿಗೆ ಅನಿಸಿದ್ದು ಪ್ರಾಣಿಗಳಲ್ಲಿ ಕಲಿಕೆ ಅಂತರ್ಗತವಾಗಿರುತ್ತದೆ ಆದರೆ ಮನುಷ್ಯ ಪ್ರಯತ್ನಪಟ್ಟು ಕಲಿಯಬೇಕು. ಇದು ಸೃಷ್ಟಿಯ ವಿಸ್ಮಯ ಎಂದು ಅವನ ಅನಿಸಿಕೆ ! ಹೈಸ್ಕೂಲ್ ಕಲಿಯುವಾಗ ಎಲೆಕ್ಟ್ರಾನಿಕ್ಸ್ ಕಲಿಕೆಯ ಬಗ್ಗೆ ತೀವ್ರತೆ ಹೆಚ್ಚಾಗಿತ್ತು. ಅದಕ್ಕಾಗಿ ತನಗಿಂತ ದೊಡ್ಡವರು ಮತ್ತು ಎಚ್ ಪಿ ಯಲ್ಲಿ ಕೆಲಸ ಮಾಡುತ್ತಿರುವ ಒಬ್ಬರನ್ನು ಪರಿಚಯ ಮಾಡಿಕೊಂಡು ಘಂಟೆಗಟ್ಟಲೆ ಪ್ರಶ್ನೆಗಳನ್ನು ಮಾಡಿ ಮಾಹಿತಿ ಪಡೆದುಕೊಂಡಿದ್ದನು. ತನ್ನ ಪ್ರಾಜೆಕ್ಟ್ ಕೆಲಸಕ್ಕಾಗಿ ಎಚ್ ಪಿ ಮುಖ್ಯಾಧಿಕಾರಿಗೆ ಫೋನ್ ಮಾಡಿ ತನ್ನನ್ನು ಪರಿಚಯಿಸಿಕೊಂಡು ತನಗೆ ಬೇಕಾದ ಫ್ರೀಕ್ವೆನ್ಸಿ ಕೌಂಟರ್ ಎಂಬ ಪ್ರಾಜೆಕ್ಟ್ ಮಾಡಲು ಬಿಡಿ ಭಾಗಗಳನ್ನು ಉಚಿತವಾಗಿ ಪಡೆದುಕೊಂಡಿದ್ದ. ತನ್ನ ೧೪ನೇ ವಯಸ್ಸಿನಲ್ಲಿ ಅರೆಕಾಲಿಕ ಹುದ್ದೆ ಫ್ರೀಕ್ವೆನ್ಸಿ ಕೌಂಟರ್ ವಿಭಾಗದಲ್ಲಿ ಪಡೆದುಕೊಂಡಿದ್ದ. ಇಲ್ಲೆಯೇ ನಿಧಾನವಾಗಿ ತನ್ನಲ್ಲಿದ್ದ ಉದ್ಯಮಿ ಕಾಣಿಸಿ ಕೊಳ್ಳಲಾರಂಬಿಸಿದ . ರೀಡ್ ಎಂಬ ಕಾಲೇಜಿಗೆ ಸೇರಿ ಟ್ಯೂಷನ್ ಫಿ ತುಂಬಿದ್ದರು. ಆದರೆ ಅವನಿಗೆ ನಾನು ಕಾಲೇಜೆಯಲ್ಲಿ ಕಲಿಯುತ್ತಿರುವ ವಿಷಯ ಉಪಯೋಗಕ್ಕೆ ಬರುವದಿಲ್ಲ ಎಂದು ಕಾಲೇಜ್ ಬಿಡಲು ದಿಟ್ಟ ಹೆಜ್ಜೆ ಇಟ್ಟಿದ್ದರು. ಒಂದು ಸಂದರ್ಶನದಲ್ಲಿ ಹೇಳುತ್ತಾರೆ ಗೊತ್ತು ಗುರಿ ಇಲ್ಲದೆ ಕಾಲೇಜು ಬಿಡುವ ನಿರ್ಧಾರ ನೆನಪಿಸಿಕೊಂಡರೆ ಭಯವಾಗುತ್ತಿತ್ತು. ಆದರೆ ಕೆಲ ವರ್ಷಗಳ ನಂತರ ತಗೆದುಕೊಂಡ ನಿರ್ಧಾರ ಸರಿ ಇತ್ತು. ಹೇಗೂ ಫಿ ಕೊಟ್ಟಿದ್ದೆ ಅದಕ್ಕಾಗಿ ಬೇಕಾದ ವಿಷಯಗಳ ತರಗತಿಗೆ ಹೋಗುತ್ತಿದ್ದೆ ಗೆಳಯರ ಕೋಣೆಯ ನೆಲದ ಮೇಲೆ ಮಲಗುತ್ತಿದ್ದೆ.

ದುಡ್ಡಿನ ಕೊರೆತೆ ಅದಕ್ಕಾಗಿ ಪ್ರತಿ ಭಾನುವಾರ ಏಳು ಮೈಲಿ ನಡೆದು ಹರೇ ಕೃಷ್ಣ ದೇವಸ್ಥಾನದಲ್ಲಿ ಕೊಡುವ ಉಚಿತ ಊಟವನ್ನು ತಿನ್ನುತ್ತಿದ್ದೆ ಎಂದಿದ್ದರು. ರೀಡ್ ಕಾಲೇಜು ಜೀವನ ವಿದ್ಯಾಭ್ಯಾಸ ಜೊತೆಗೆ ಅಧ್ಯಾತ್ಮದ ಚಿಂತನೆಗೆ ದೂಡಿತ್ತು. ಅದರಲ್ಲಿ ಭಾರತೀಯ ಅಧ್ಯಾತ್ಮ ಸೆಳೆದಿತ್ತು. ಕಾಲೇಜು ಸೇರಿದ ೧೮ ತಿಂಗಳಿಗೆ ಕಾಲೇಜು ಅರ್ಧಕ್ಕೆ ಬಿಟ್ಟು ತಂದೆಯ ಮನೆಯ ಸಮೀಪ ತುಂಬಾ ಸರ್ಕಸ ಮಾಡಿ ಘಂಟೆ ಕೂಲಿಯಾಗಿ ಗೇಮ್ ತಯಾರಿಸುವ ಕಂಪನಯಲ್ಲಿ ಕೆಲಸಕ್ಕೆ ಸೇರಿದ್ದ. ಅರ್ಧಕ್ಕೆ ಕಾಲೇಜು ಬಿಟ್ಟರೂ ಅವನ ತಂತ್ರಜ್ಞಾನದ ಅಪರಿಮಿತ ಜ್ಞಾನವೇ ಅವನಿಗೆ ಕೆಲಸ ಕೊಡಿಸಿತ್ತು. ಮತ್ತು ಸಂದರ್ಶನದಲ್ಲಿ ಇವನಲ್ಲಿದ್ದ ಸೃಜನಶೀಲತೆಗೆ ಮನಸೋತು ಇವನಿಗೆ ಕೆಲಸ ಕೊಟ್ರೆ ಏನು ಮಾಡುತ್ತಾನೆ ನೋಡಿಯೇ ಬಿಡಬೇಕು ಎಂದು ಕೆಲಸ ಕೊಟ್ಟಿದ್ದರು. ಅಂದುಕೊಂಡಂತೆ ಇವನ ಕೆಲಸದ ಕಾರ್ಯಕ್ಷಮತೆ ಚೆನ್ನಾಗಿ ಇತ್ತು ಮತ್ತು ವ್ಯವಸ್ಥಾಪಕರಿಗೆ ಪ್ರೀತಿ ಪಾತ್ರನಾಗಿದ್ದೆ ಎಂದು ಹೇಳಿದ್ದರು. ಇವನಿಗಿಂತ ಮೇಲಿನ ಅಧಿಕಾರಿ ಇವನ ಜೊತೆ ಹರಟೆ ಹೊಡೆಯುವುದು ಮಾಮೂಲ ಅದಕ್ಕೆ ಕಾರಣ ಸ್ಟೀವ್ ಒಬ್ಬ ತತ್ವಜ್ಞಾನಿ ಹಾಗೆ ಮಾತಾಡುತ್ತಿದ್ದರು. ಇವನಲ್ಲಿದ್ದ ಅಧ್ಯಾತ್ಮದ ಆಸಕ್ತಿಗೆ ಬಲ ತುಂಬವ ಕೆಲಸ ಮಾಡಿದ್ದರು. ಅದು ಏನೆಂದರೆ ಸ್ಟೀವ್ ಗೆಳೆಯ ಫ್ರೆಡ್ಲ್ಯಾಂಡ್ ಭಾರತ ಪ್ರವಾಸ ಕೈಗೊಂಡು ಅಧ್ಯಾತ್ಮದ ಬಗ್ಗೆ ತಿಳಿದುಕೊಂಡ ಬಂದಿದ್ದ . ಆದ್ದರಿಂದ ಸ್ಟೀವ್ ಗೆ ನೀನು ಭಾರತಕ್ಕೆ ಭೇಟಿಕೊಟ್ಟು ಅಧ್ಯಾತ್ಮದ ಬಗ್ಗೆ ತಿಳಿದುಕೊಂಡು ಬಾ ಎಂದಿದ್ದ.

ಸ್ಟೀವ್ ಹತ್ತಿರ ದುಡ್ಡು ಇರದೇ ಇದ್ದಾಗ ಜರ್ಮನ್ ವರೆಗೆ ಪ್ರಾಜೆಕ್ಟ್ ಕೆಲಸದ ಮೇಲೆ ಹೋಗಿ ಅಲ್ಲಿಂದ ಭಾರತಕ್ಕೆ ಹೋಗುವ ಸಹಾಯ ಮಾಡಿದ್ದರು. ಇನೊಂದು ಗಮನಿಸಿ ಇವನು ಭಾರತಕ್ಕೆ ಹೋಗುತ್ತೇನೆ ಎಂದು ೧೯೭೪ ರಲ್ಲಿ ಹೇಳಿದಾಗ ಎಲ್ಲರ ಬಾಯಿಂದ ಬಂದ ಮಾತು “ಹಾವು, ಚೇಳು, ಭಿಕ್ಷುಕರ ದೇಶ”. ಮೊದಲೇ ಅರ್ಧಕ್ಕೆ ಕಾಲೇಜು ಬಿಟ್ಟವ, ಹಣ್ಣು ಮತ್ತು ಸಸ್ಯಾಹಾರಿ ತಿಂದರೆ ಸ್ನಾನದ ಅವಶ್ಯಕೆತೆ ಇಲ್ಲ ಎಂದು ಯಾವದೋ ಪುಸ್ತಕದಲ್ಲಿ ಓದಿ ಸ್ನಾನವನ್ನೇ ಬಿಟ್ಟಿದ್ದ. ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ಹುಚ್ಚು ಹಿಡದಿರಬೇಕು ಎಂದಿದ್ದರು. ಪಶ್ಚಿಮದಲ್ಲಿ ಹುಟ್ಟಿದ್ದ ಸ್ಟೀವನನ್ನು ಅಧ್ಯಾತ್ಮ ಪೂರ್ವದ ಕಡೆ ಮುಖಮಾಡಿಸಿತ್ತು. ಕಡೆಗೂ ಜರ್ಮನ್ ಹೋಗಿ ಅಲ್ಲಿಂದ ಸ್ವಿಜರಲ್ಯಾಂಡ್ ತಲುಪಿ ಅಲ್ಲಿಂದ ಭಾರತಕ್ಕೆ ಬಂದಿದ್ದನು. ೧೯೭೪ರಲ್ಲಿ ಎಂದರೆ ತನ್ನ ೧೯ನೇ ವಯಸ್ಸಿನಲ್ಲಿ ಏಪ್ರಿಲ್ ತಿಂಗಳಿನಲ್ಲಿ ದೆಹಲಿಗೆ ಬಂದಿಳಿದ ಸ್ಟೀವ್ ಭಾರತದ ಪ್ರವಾಸವನ್ನು ಆರಂಭಿಸಿದನು. ಸ್ಟೀವ್ ಭಾರತಕ್ಕೆ ಬರಲು ಮುಖ್ಯ ಕಾರಣ ಸಾಕ್ಷತ್ಕಾರ ಹುಡುಕಿಕೊಂಡು ಒಬ್ಬ ಮಹಾರಾಜರನ್ನು ಭೇಟಿ ಮಾಡಲು ಬಂದಿದ್ದ. ಸುಮಾರು ೭ ತಿಂಗಳುಕಾಲ ಭಾರತದ ಅದರಲ್ಲಿ ವಿಶೇಷವಾಗಿ ಹಳ್ಳಿಗಳ ಜೀವನ, ಸಾಧು ಸಂತರ ಜೀವನ ಬಹಳ ಸಮೀಪದಿಂದ ಕಂಡಿದ್ದ. ಮಹಾರಾಜರನ್ನು ಭೇಟಿ ಮಾಡಲು ಬಂದ ಸ್ಟೀವ್ಗೆ ನಿರಾಶವಾಗಿತ್ತು ಕಾರಣ ಸ್ಟೀವ್ ಬರುವಕ್ಕಿಂತ ಎರಡು ದಿವಸ ಮುಂಚೆ ಮಹಾರಾಜರು ನಿಧನರಾಗಿದ್ದರು. ಮಹಾರಾಜರ ಭೇಟಿಯಾಗಲಿಲ್ಲ ಎಂಬ ಕೊರಗು ಅವನಿಗೆ ಕಾಡಲಿಲ್ಲ ಕಾರಣ ಭಾರತೀಯ ಗ್ರಾಮೀಣ ಪ್ರದೇಶದ ಜನರ ಜೀವನ ಅವನಲ್ಲಿ ಬಹಳ ಪ್ರಭಾವಬೀರಿತ್ತು. ಅವನು ಅಮೇರಿಕಾ ಬಂದ ಮೇಲೆ ಅವನಿಗೆ ಅನಿಸಿದ್ದು ಪಾಶ್ಚಿಮಾತ್ಯ ಜನರು ಬುದ್ಧಿಮತ್ತೆ ಉಪಯೋಗಿಸಿದರೆ ಭಾರತದ ಗ್ರಾಮೀಣ ಜನರು ಅಂತಃಪ್ರಜ್ಞೆ ಉಪಯೋಗಿಸುತ್ತಾರೆ ಅದು ಬುದ್ದಿಮತ್ತೆಗಿಂತಲೂ ಅತ್ಯುತ್ತಮವಾದದ್ದು. ಆದ್ಯಾತ್ಮದ ಮದ್ಯ ಜಗತ್ತೇ ನಿಬ್ಬೆರಗಾಗಿ ನೋಡುವಂತ ಕಂಪನಿ ಸ್ಟೀವ್ ಹುಟ್ಟುಹಾಕಿದ್ದ ಅದರ ಹೆಸರೇ ಆಪಲ್ !! ಆಪಲ್ ಕಂಪನಿ ಹೇಗೆ ಕಟ್ಟಿದನು ಮತ್ತು ಅದಕ್ಕಾಗಿ ಎಂಥಾ ಕಷ್ಟಗಳು ಎದುರಿಸಿದನು ಮುಂದಿನ ಭಾಗದಲ್ಲಿ ಬರೆಯುವೆ!

1 reply »

  1. ಈ ಲೇಖನ ಸ್ಟೀವ್ ಜಾಬ್ಸ್ ಅವರ ರೋಮಾಂಚಕ ವೈಯಕ್ತಿಕ ಜೀವನದ ಪರಿಚಯವನ್ನು ಮಾಡಿಸುತ್ತದೆ.

    Liked by 1 person

Leave a Reply