“Give me cigarette”, “Give me match box buddy”
ಅಂದು ಅಮವ್ಯಾಸೆ ದಿನ ಯಾರೋ ಜೋರಾಗಿ ಅಳುವ ಧ್ವನಿ. ಇದರ ಮಧ್ಯೆ ಯಾರಾದರೂ ಬನ್ರೀ ಯಾರಾದರೂ ಬನ್ರೀ ಅಂತ ಕೂಗು.ಮೊದಲಿಗೆ ಇದನ್ನು ಕಿವಿಗೆ ಹಾಕದೆ ನಾನು ಮತ್ತು ನಮ್ಮ ಗೆಳಯರು ಹಾಗೆ ಒಳಗಡೆ ಇದ್ವಿ. ಮತ್ತೆ ಜನರ ಕೂಗಾಟ ಓಡಾಟ ಕೇಳಿ ಹೊರಗಡೆ ಬಂದು ನೋಡಿದಾಗ ಜನರು ಓಡಿಹೋಗುವದನ್ನು ಕಂಡು ಒಬ್ಬರನ್ನು ಪ್ರಶ್ನಿಸಿದೆ “ಏನಾಗಿದೆ , ಯಾಕೆ ಓಡುತ್ತಾ ಇದ್ದೀರಾ”? ಅವರು ನಮಗೆ ಇಲ್ಲೇ ಸಮೀಪ ಇದ್ದೀರಾ ನಿಮಗೆ ಗೊತ್ತಿಲ್ವಾ ಎಂದು ಹೇಳಿ “ನಿಂಗಣ್ಣಗೆ ದೆವ್ವ ಬಡಕೊಂಡಿದೆ” ವಂದೇ ಸಮನೆ ರಂಪಾಟ ಮಾಡ್ತಾ ಇದ್ದಾನೆ ಯಾರಾದರೂ ಗಂಡಸರು ಬನ್ನಿ ಹಿಡಿಲಿಕ್ಕೆ ಎಂದಾಗ ನಾವೆಲ್ಲ “ಗಂಡಸರು ಯಾರು ಎಂದು ಹಿಂದೆ ಮುಂದೆ ನೋಡುವಾಗ” ಸ್ವಲ್ಪ ಜನ ಒಳಗೆ ಹೋಗಿ ಅವನನ್ನು ಹಿಡಿದು ಬಿಟ್ಟಿದ್ದರು. ಹಾಗೆ ನಾವು ಧೈರ್ಯ ಮಾಡಿ ಕತ್ತಲಲ್ಲೇ ಅವರ ಮನೆಯ ಒಳಗಡೆ ಹೋಗಿ ಹತ್ತಿರ ನಿಂತು ನೋಡುವಾಗ ನಿಂಗಣ್ಣ ಸುಮ್ನೆ ಕುಂತಿದ್ದ ಮಾತಾಡಿಸಿದರೆ ಉತ್ತರ ಇರಲಿಲ್ಲ. ಜನರು ಅವನಿಗೆ ಗಾಳಿ(ದೆವ್ವ ಬಡಕೊಂಡಿದೆ) ಆಗಿದೆ ಅಂತ ಮಾತನಾಡುವದಕ್ಕೆ ಪ್ರಾರಂಭ ಮಾಡಿದ್ದರು. ಒಬ್ಬರು ದೇವಿಭಕ್ತ ಬರುತ್ತಿದ್ದಾರೆ ಅವರಿಗಾಗಿ ದಾರಿ ಕಾಯುತ್ತಿದ್ದರು.

ದೈವೀಭಕ್ತರು ಬಂದು ನಿಂಗಣ್ಣ ಸಮೀಪ ಹೋಗಿ ತಾವು ತಂದಿದ್ದ ಪ್ರಸಾದ ಹಚ್ಚಲಿಕ್ಕೆ ಹೋದಾಗ ನಿಂಗಣ್ಣನ ರೌದ್ರಾವತಾರಕ್ಕೆ ಜನ ಭಯಭೀತರಾಗಿ ಚೆಲ್ಲಾ ಪಿಲ್ಲಿ ಯಾಗಿ ಬಿಟ್ಟಿದ್ದರು. “ಬಾ ಹಚ್ಚು ಪ್ರಸಾದ ಅದರಿಂದ ನನಗೆ ಏನು ಆಗಲ್ಲಾ ಅಂತ ಥು ಅಂತ ಉಗಿದು ಬಿಟ್ಟ”. ಅವರು ಅಲ್ಲಿಂದ ಕಾಲ್ಕಿತ್ತಿದ್ದರು . ಎಲ್ಲರೂ ಮತ್ತೆ ನಿಂಗಣ್ಣನನ್ನು ಹಿಡಿದು ಕೂಡಿಸಲೂ ಹರಸಾಹಸ ಪಟ್ಟಿದ್ದರು. ಅವನ್ ಅಂಗಿ ಹರಿದು ಕಾಲಿಗೆ ರಕ್ತದ ಗಾಯವಾಗಿತ್ತು. ಅವನ ಮನೆಯವರೆಲ್ಲರೂ ಬೆಚ್ಚಿ ಬಿದ್ದಿದ್ದರು. ಅವನಿಗೆ ಇದೆ ಮೊದಲೆನೆ ಬಾರಿ ಗಾಳಿ ಆಗಿದ್ದು ಗೊಳೋ ಅಂತ ಅತ್ತುಬಿಟ್ಟರು. ಮತ್ತೆ ಯಾರೋ ಅಲ್ಲಿ ಬೇರೆ ಮಂತ್ರವಾದಿಗೆ ಕರೆಸಿದ್ದರು. ಅವನು ಬಂದು ಒಂದು ನಿಂಬೆಹಣ್ಣು ಮತ್ತು ಪ್ರಸಾದ ಕೊಟ್ಟಾಗ ಶಾಂತವಾಗಿ ಇದ್ದ ನಿಂಗಣ್ಣನಿಗೆ ಬಂದ ಮಂತ್ರವಾದಿ “ನಿನ್ನ ಹೆಸರೇನು ” “ಇಲ್ಲಿಗೆ ಯಾಕೆ ಬಂದಿ” ಎಂದಾಗ ಮೊದಲೇ ಕತ್ತಲೆ , ಅಮವ್ಯಾಸೆ ಬೇರೆ ಇದರ ಮದ್ಯ ನಿಂಗಣ್ಣನ ಮೇಲೆ ಇದ್ದ ದೆವ್ವ ಛಟ್ಟನೆ ಚಿರಿದಾಗ ಸ್ವಲ್ಪ ಜನ ಬಿಟ್ಟು ಉಳಿದವರು ನಮಗ್ಯಾಕೆ ಉಸಾಬರಿ ಎಂದು ಹೋಗೇಬಿಟ್ಟಿದ್ದರು. “ನಾ ಹೇಳುದಿಲ್ಲಾ”, ನಿನಗ್ಯಾಕೆ ಹೇಳಬೇಕು ,“Give me cigarette”, “Give me match box buddy”
ಅಲ್ಲಿದ್ದವರಿಗೆ ಶಾಕ್!!! ನಿಂಗಣ್ಣನಿಗೆ ಇಂಗ್ಲಿಷ್ ಬರಲ್ಲ ಆದರೆ ಸುರಳೀತವಾದ ಇಂಗ್ಲಿಷ್ ನೋಡಿ ಶಾಕ್! ನೀವು ಕೇಳಿರಬೇಕು ದೆವ್ವ ಮೈ ಮೇಲೆ ಬಂದರೆ ಅದರ ಹಿಂದಿನ ಜನ್ಮದ ರೀತಿ ವರ್ತನೆ ಮಾಡುತ್ತೆ ಅಂತ. ಇಲ್ಲಿನೂ ಹಾಗೆ ಆಗಿತ್ತು. ಇಂಗ್ಲೀಷ ಜೊತೆಗೆ ಸಮಾಜವನ್ನು ಉದ್ದಾರ ಮಾಡಿ ಮಕ್ಕಳಾ ಏನು ನಿಂತೀರಾ ಇಲ್ಲಿ ಹೋಗ್ರಿ ಇಲ್ಲೇನು ನಾಟಕ ನಡದಾದ ಎಂದು ನಮಗೆ ಗದರಿಸಿ ಬಿಟ್ಟಿದ್ದ. ಉಳಿದ ವೇಳೆಯಲ್ಲಿ ಮಾತಾಡಿಸದ ವ್ಯಕ್ತಿ ಇಷ್ಟೆಲ್ಲಾ ಮಾತಾಡತಾನೆ ಎಂದ್ರೆ ದೆವ್ವ ಇರಲೇಬೇಕು ಅಂತ ಪಕ್ಕ ಖಾತ್ರಿ ಆಗಿತ್ತು!! ಮಂತ್ರವಾದಿ ಎಷ್ಟೇ ಪ್ರಯತ್ನ ಪಟ್ಟರು “ಹೆಸರು ಹೇಳಲ್ಲ” ಎಂದು ಪಟ್ಟು. ಕಡೆಗೆ ನಿನಗೆ ಏನು ಬೇಕು ಕೊಡತೀವಿ ಇಲ್ಲಿಂದ ಹೋಗು ಎಂದಾಗ “Give me cigarette”, “Give me match box buddy”.ಮಂತ್ರವಾದಿ ಅವನು ಕೇಳಿದ ವಸ್ತುಗಳು ಹೋಗಿ ಊರ ಹೊರಗೆ ಇಟ್ಟು ಬರುವಾಗ ಹಿಂದೆ ನೋಡದೆ ಬನ್ನಿ ಎಂದು ಹೇಳಿ ನಿವಾಳಿ ಇಟ್ಟ ಮೇಲೂ ಬಂದರೆ ನನಗೆ ಮಾಹಿತಿ ಕೊಡಿ ಇದಕ್ಕೆ ಒಂದು ಮಂಡಲ ಹಾಕೋಣ ಎಂದು ಹೋದ. ನಿವಾಳಿ ಇಟ್ಟ ಬಂದ ಹದಿನೈದು ನಿಮಿಷಕ್ಕೆ ಮತ್ತೆ ಹಾಜರ “Give me cigarette”, “Give me match box buddy”.
ನಾವಿರುವ ಅಪಾರ್ಟ್ಮೆಂಟ್ನಲ್ಲಿ ನಮ್ಮ ಪ್ಲಾಟಿನ ಮುಂದೆ ಬೆಳಿಗ್ಗೆ ಎದ್ದು ಕೂಡಲೇ ಕರಿ ಕಲೆ ಕಂಡು ಬಂದಿತ್ತು. ಅದರ ಆಕಾರ ಅಂಗೈ ಅಷ್ಟು. ಏನೋ ಇರಬೇಕು ಎಂದು ಹಾಗೆ ಬಿಟ್ಟಿದ್ದೆ. ಮತ್ತೆ ಅದು ಸ್ವಚ್ ಮಾಡಿದ್ದರು. ಮತ್ತೆ ಎರಡು ದಿವಸ ಬಿಟ್ಟು ನಮ್ಮ ಮನೆಯಿಂದ ೪೦ ಅಡಿ ದೂರವಿದ್ದ ಪ್ಲಾಟಿನ ಮುಂದೆ ಹೆಚ್ಚು ಕಡಿಮೆ ಅದೇ ಕರಿ ಕಲೆ. ಆದರೆ ನೋಡಕ್ಕೆ ಸೇಮ್ ಟು ಸೇಮ್ !!! ಅವರು ನಮ್ಮ ಪಧಾದಿಕಾರಗಳ ಗಮನಕ್ಕೆ ತಂದಿದ್ದರು. ನಾವು ಅದನ್ನು ನೋಡಿ ಏನು ತಿಳಿಯದೆ ವಿಷಯವನ್ನು ಅಲ್ಲೇ ಬಿಟ್ವದ್ವಿ. ಮತ್ತೆ ಸ್ವಲ್ಪ ದಿವಸ ಆದ ನಂತರ ಮತ್ತೆ ನಮ್ಮ ಮನೆಯ ಮುಂದೆ ಕರಿ ಕಲೆ ಕಂಡು ಮನದಲ್ಲಿ ನೂರೆಂಟು ವಿಚಾರ ಬಂದು ಹೋಗಿ ಬಿಟ್ಟವು. ಅದೇ ಸಮಯದಲ್ಲಿ ನಮ್ಮ ಮನೆಯ ಮುಂದಿನವರು ಹಾಗೆ ನಮ್ಮ ಅಪಾರ್ಟ್ಮೆಂಟ್ ಕೆಲಸಗಾರರು ಬಂದು ಸರ್ “ಯಾರೋ ಮಾಟ ಮಾಡಿಸರಬೇಕು” ಎಂದಾಗ ನಾವು ಮತ್ತು ನಮ್ಮ ಪಕ್ಕದ ಮನೆಯವರಿಗೆ ನಿದ್ದೆ ಹಾರಿ ಹೋಗಿತ್ತು. ಕೆಲಸಗಾರರು ಹೆದರಿ ಕರಿ ಕಲೆಯಾದ ಜಾಗವನ್ನು ಸ್ವಚ್ಛ ಮಾಡೋದೇ ಬಿಟ್ಟು ಬಿಟ್ಟರು. ಮತ್ತೆ ಸ್ವಲ್ಪ ದಿನದ ನಂತರ ಮತ್ತೆ ಆ ಮನೆಯ ಕಡೆಗೆ!! ಹೀಗೆ ಇದು ಆಗುತ್ತಾ ಇತ್ತು. ಮೊದಲು ನಾವು ಇದು ಚಿಕ್ಕ ಮಕ್ಕಳ ಸಲುವಾಗಿ ನಮ್ಮವರೇ ಯಾರಾದರೂ ಮಾಡಿರಬೇಕು ಎಂದು ಎಲ್ಲರಿಗೂ ಕೇಳಿದಾಗ ಬಂದ ಉತ್ತರ ನಮಗೆ ಗೊತ್ತಿಲ್ಲ! ರಾತ್ರಿ ಆದ ನಂತರ ಅಲ್ಲಿ ಮಕ್ಕಳು ಆಟ ಆಡುವದನ್ನು ನಿಲ್ಲಿಸಿಬಿಟ್ಟಿದ್ದರು. ಕೆಲವರು ಸರ್ ನಿಮಗೆ ಆಗಲಾರದವರು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಸ್ವಲ್ಪ ಹುಷಾರು!! ಯಾರೋ ನಿವಾಳಿ ಇಟ್ಟಿರಬೇಕು ಎಂದು ಒಂದೊಂದು ಸಲ ಅನ್ಕೊಂಡಿದ್ದೆ. ರಾತ್ರಿ ಹೊತ್ತು ಹೊರಗೆ ಹೋಗುವದು ನಮಗೆ ಕಷ್ಟಆಗಿತ್ತು. ಆದರೆ ಎಲ್ಲೊ ಒಂದು ಕಡೆಗೂ ನನಗು ಇದು ಯಾರೋ ಮಾಡಿರುವ ಕೆಲಸ ಅವರನ್ನು ಹೇಗೆ ಹಿಡಿಬೇಕು ಎಂದು ಯೋಚನೆ ಮಾಡಿ! ನಮ್ಮಲಿಯಿದ್ದ ಕ್ಯಾಮೆರವನು ಎಡಗಡೆ ತಿರಿಗಿಸಿ ಬಿಟ್ವಿ. ಬೆಳಿಗ್ಗೆ ಎದ್ದು ನೋಡಿದ ಕುಡ್ಲೆ ಬಲಗಡೆ ಕರಿ ಕಲೆ!! ಎಲ್ಲರೂ ಹೌಹಾರಿ ಜ್ವರ ಬರೋದು ಒಂದು ಬಾಕಿ! ಮತ್ತೆ ಬಲಗಡೆ ತಿರಿಗಿಸಿ ಪರೀಕ್ಷೆ ಮಾಡಿದೆವು ಆದರೆ ಕರಿ ಕಲೆ ಇತ್ತು ಆದರೆ ಯಾರು ಕ್ಯಾಮೆರಾದಲ್ಲಿ ಸಿಕ್ಕಿರಲಿಲ್ಲ!!
ದೆವ್ವದ ಏಟಿಗೆ ನಿಂಗಣ್ಣನ ದೇಹ ಕ್ಷೀಣಸಿತ್ತು, ಮನಸ್ಸು ಬಾಡಿ ಹೋಗಿತ್ತು. ಮನೆಯವರಿಗೆ ಏನು ತಿಳಿಯದಾದಾಗ ಮತ್ತೆ ಬೇರೆ ಮಂತ್ರವಾದಿ ಮೊರೆ ಹೋಗಿದ್ದರು. ಬೇರೆ ಊರಿನಿಂದ ಬಂದ ಮಂತ್ರವಾದಿ ಆಯ್ಕೆ ಮಾಡಿದ್ದು ರವಿವಾರ. ಅಂದು ರವಿವಾರ ಎಲ್ಲರ ಮಧ್ಯೆ ಮಂಡಲ ಹಾಕಿ ನಿಂಗಣ್ಣನಿಗೆ ಬೇಕಾದ ವಸ್ತು ಕೊಟ್ಟು ಪ್ರಶ್ನೆಗಳ ಸುರಿಮಳೆ. ಮಂತ್ರವಾದಿ ಸ್ವಲ್ಪ ಶಕ್ತಿ ಹೆಚ್ಚಿತ್ತೊ ಏನೂ ಇವನ ಹೊಡತಕ್ಕೆ ನಾ ಹೇಳತೀನಿ ನಾ ಹೇಳತೀನಿ.. ಮತ್ತೊಮ್ಮೆ ಹೋಗತೀನಿ ಅಂತ ಹೋಗಿ ಮತ್ತೆ ೫ ನಿಮಿಷ ಬಿಟ್ಟು ಬರ್ತಾ ಇತ್ತು. ಮಂತ್ರವಾದಿ ಮತ್ತೆ ಬೆತ್ತ ತಗೆದು ಬಾರಿಸಿದಾಗ ನಾನು “ನಾಮೆ, ಮಿಸ್ಟರ್ ನಾಮೆ ” ಎಂದಿತ್ತು. ಇಲ್ಲಿಗೆ ಯಾಕೆ ಬಂದಿ? ಇಲ್ಲೇನು ಕೆಲಸ? ಎಂದು ಕೇಳಿದಾಗ ನಾನು ಸಮಾಜ ಸೇವೆ ಮಾಡಬೇಕು. ಸಮಾಜ ಸುಧಾರಿಸಬೇಕು ಎಂದಾಗ ಎಲ್ಲರೂ ನಕ್ಕು ನಕ್ಕು ಸುಸ್ತಾಗಿದ್ದರು. ಇದು ದೆವ್ವ ಅಥವಾ ನಿಂಗಣ್ಣನ ನಕಲಿ ಆಟ ಅಂತ !!
ನಮ್ಮ ಮನೆಯ ಮುಂದೆ ಹೆಚ್ಚು ಕಡಿಮೆ ಪ್ರತಿ ದಿನ ಬೀಳಿತ್ತಿರುವ ಕಲೆಗೆ ಚಿಂತಿಸಿ ಒಂದು ದಿವಸ ರಾತ್ರಿ ಧೈರ್ಯ ಮಾಡಿ ಸ್ಟೈರ್ ಕೇಸ್ ಕಡೆ ಅವಿತು ಕುಳಿತು ಯಾರು ಮಾಡುತ್ತೊರೋ ಅವರಿಗೆ ಹಿಡಿಬೇಕು ಅಂತ ವಿಫಲ ಪ್ರಯತ್ನ ಮಾಡಿ ಸೋತಿದ್ದೆ. ಮುಂದೆ ಏನು ಮಾಡೋದು ಅಂತ ಅಮ್ಮ ಅಪ್ಪನಿಗೆ ಕೇಳಿದಾಗ ಗುರಿವಿನ ಪ್ರಸಾದ ಮನೆಯ ಬಾಗಿಲು ಗೆ ಹಚ್ಚು ಅದಕ್ಯಾಕ ಹೆದರಿಕೆ ಎಂದು ಬಿಟ್ಟರು!! ಸ್ವಲ್ಪ ದೈರ್ಯನು ಬಂತು ಆದರೆ ಮತ್ತೆ ಕರಿ ಕಲೆ ನೋಡಿದಾಗ ಮತ್ತೆದೇ ಗಾಬರಿ ಮತ್ತು ಭಯ.
ಎಲ್ಲರಿಗೂ ನಿಂಗಣ್ಣನ ಆಟದ ಬಗ್ಗೆ ನಕಲಿನಾ ? ಅಲ್ಲಿ ಇದ್ದ ಹಿರಿಯರು ಇಲ್ಲ ಇದು ಸತ್ಯವಾದ ಮತ್ತು ಆಗಿ ಹೋದ ಘಟನೆ!!
ಸುಮಾರು ೧೦ ವರ್ಷಗಳಿಂದ ವಿಧಾನಸಭೆ ಚುನಾವಣೆ ಕಾಲ. ನಮ್ಮೂರಿನಲ್ಲಿ ತುಂಬಾ ತುರಿಸಿನ ಚುನಾವಣೆ. ಆದರೂ ಇವತ್ತಿನಷ್ಟು ಅನೀತಿ ಇರಲಿಲ್ಲ. ಇವತ್ತಿನ ಚುನಾವಣೆ ಹದೆಗೆಟ್ಟಿವೆ,ಜನರು ಸ್ವಾಭಿಮಾನ ಬಿಟ್ಟು ದುಡ್ಡು ಕೇಳತಾರ ,ಅವರು ಎಲ್ಲದರಲ್ಲೂ ಲಂಚ ತಿನ್ನುತ್ತಾರೆ ಎಂದು ಬೈದು ಅವರ ಬಗ್ಗೆ ಹೇಳಲಿಕ್ಕೆ ಶುರು ಮಾಡಿದ್ದರು. “ನಾಮೆ” ಅವರು ತುಂಬಾ ಒಳ್ಳೆಯ ಆಫೀಸರ್ ಅವರು ಕೆಲಸದಲ್ಲಿ ಇದ್ದಾಗ ತುಂಬಾ ಪ್ರಾಮಾಣಿಕ ಆಗಿ ಇದ್ದವರು ತುಂಬಾ ಚೆನ್ನಾಗಿ ಇಂಗ್ಲೀಷ ಬಲ್ಲವರು ಮತ್ತೆ ಯಾವಾಗಲೂ ಸಿಗರೇಟ್ ಸೇದುವ ಹುಚ್ಚು. ಅವರು ಡಾಕ್ಟ್ರೇಟ್ ಮಾಡಿದ್ದರು ಮುಂದೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಸೇರಿದ್ದರು. ತುಂಬಾ ಪ್ರಾಮಾಣಿಕರು ಮತ್ತು ಜನಪ್ರಿಯರಾದ ಅವರು ಒಂದು ಪಕ್ಷಕ್ಕೆ ಸೇರಿದಾಗ ಬೇರೆ ಪಕ್ಷದವರು ಹೆದರಿದ್ದರು. ಚುನಾವಣೆಯಲ್ಲಿ ಒಳ್ಳೆಯ ಅಭ್ಯರ್ಥಿಗಾಗಿ ಚುನಾವಣೆ ಪ್ರಚಾರದಲ್ಲಿ ಅವರ ವಿಷಯಗಳು “ವಿಚಾರದ ಮೇಲೆ ಚರ್ಚೆ ಇರುತ್ತಿದ್ದವು” ಜನರಿಗೆ ಮಹಾತ್ಮರ ಆದರ್ಶಗಳು ಮತ್ತು ಜನರ ಹಕ್ಕುಗಳ ಬಗ್ಗೆ ಮಾತಾಡಿ ಜನರಿಗೆ ಹತ್ತಿರವಾಗಿದ್ದರು. ಅಂದೇ ಅವ್ರು ಪಾರದರ್ಶಕ ಸರಕಾರದ ಬಗ್ಗೆ ಜನರಿಗೆ ಹೇಳಿದ್ದರು. ಅಂತ ವ್ಯಕ್ತಿ ನಮ್ಮೂರಲ್ಲಿ ಚುನಾವಣೆ ಪ್ರಚಾರ ಮಾಡಿ ರಾತ್ರಿ ಮಲಗಿದವನು ಬೆಳಿಗ್ಗೆ ಏಳಲೇ ಇಲ್ಲ. ಅಧಮ್ಯ ಸಾಮಾಜಿಕ ಸೇವೆ ಮಾಡಬೇಕು ಎಂದವನು ಕನಸು ನುಚ್ಚು ನೂರಾಗಿತ್ತು. ಅದಕ್ಕೆ ಮತ್ತೆ ಇವನ ಮೈಯಲ್ಲಿ ಬಂದು ಹೇಳುತ್ತಿದ್ದಾನೆ ಎಂದರು.
ಒಂದು ದಿವಸ ರಾತ್ರಿ ಆಫೀಸ್ದಲ್ಲಿ ಕೆಲಸ ಇದ್ದ ಕಾರಣ ತಡವಾಗಿ ಮನೆಗೆ ಬಂದ ನಾನು ನನ್ನ ಚಪ್ಪಲಿ ಬಿಟ್ಟು ಒಳಗಡೆ ಹೊಗೆಬೇಕು ಅಂತ ಕಾಲಿಟ್ಟಾಗ “ಟಪ್” ಅಂತ ಮೇಲಿನಿಂದ ಏನೋ ಬಿತ್ತು ಎಂದು ನೋಡಿದಾಗ ಅಲ್ಲಿ ಬಾವಲಿ ಕುಂತಿತ್ತು (ನಾವು ಬಲ್ಬ್ ಹಾಕಿರಲಿಲ್ಲ ಹೋಲ್ಡರ್ ಒಳಗಡೆ ಕುಳಿತಿತ್ತು). ಅದರ ಕಾಲಲ್ಲಿ ಒಂದು ಹಣ್ಣು ಇತ್ತು.ಅದು ಹಣ್ಣು ತಿನ್ನುತ್ತಾ ಅದರಲ್ಲಿ ಇದ್ದ ರಸ ಕೆಳಗಡೆ ಬೀಳುತ್ತಾ ಇತ್ತು. ಅದು ಬೆಳಿಗ್ಗೆ ಆಗುವಷ್ಟರಲ್ಲಿ ಕರಿ ಬಣ್ಣಕ್ಕೆ ತಿರುಗುತ್ತಿತ್ತುು. ಅದನ್ನು ಬೆಳಿಗ್ಗೆ ಪಕ್ಕಾ ಮಾಡಿಕೊಂಡು ನಮ್ಮ ಅಕ್ಕ ಪಕ್ಕದ ಮನೆಯವರು ಮತ್ತು ಕೆಲ್ಸದವರಿಗೆ ಕರೆದು ಎಲ್ಲವನ್ನು ವಿವರಿಸಿದಾಗ ಕೆಲವೊಬ್ಬರು ಸರ್ ನಿಮಗೆ ತುಂಬಾ ಥ್ಯಾಂಕ್ಸ್. ನಾವು ಮನೆ ಬಿಟ್ಟು ಹೋಗಬೇಕು ಅಂತ ಮಾಡಿದ್ದೀವಿ ಎಂದು ಹೇಳಿದಾಗ ಅವರ ಹೆದರಿಕೆ ನನಗೆ ಅರ್ಥವಾಗಿತ್ತು.
ನಿಂಗಣ್ಣನ ದೆವ್ವದ ಬಗ್ಗೆ ಕಣ್ಣಾರೆ ಕಂಡರೂ ನನಗೆ ಅದು ಅರ್ಥವಾಗದ ವಿಷಯ.
ಆದರೆ ನಮ್ಮ ಮನೆಯ ಮುಂದೆ ಆದ ವಿಷಯ, ತಾಳ್ಮೆ ಮತ್ತು ದೈರ್ಯದಿಂದ ಎದುರಿಸಿ ಮೂಲ ಕಂಡುಹಿಡಿದ ಖುಷಿ ಇತ್ತು. ಹೆದರಿ ಯಾರ ಬಳಿಯೂ ಹೋಗದೆ ಕೂಲಂಕುಷವಾಗಿ ವಿಚಾರ ತಿಳಿದೊಕೊಂಡು ಅದು ಮಾಟ , ಮಂತ್ರವು ಅಲ್ಲ ಎಂದು ತಿಳಿದಿತ್ತು.
ಚಿಕ್ಕ ಮಕ್ಕಳು ಇರುವ ಮನೆಯ ಸಮೀಪ ಬಾವಲಿ ಇರಬಾರದು ಎಂದು ಒಂದು ಬಲ್ಬ್ ಹಾಕಿ ಅದಕ್ಕೆ ಬಾರದ ಹಾಗೆ ನೋಡಿಕೊಂಡೆವು.
Categories: Stories/ಕಥೆಗಳು

Ningannaige yenaatu
LikeLike
ದೆವ್ವಗಳು ನಿಜವಾಗಿ ಇವೇನಾ
LikeLike