ದೃಷ್ಟಿಕೋನ ಅಂಕಣ By Bhimashankar Teli
ಮೊಟ್ಟ ಮೊದಲ ಬಾರಿಗೆ ೨೦೧೩ರಲ್ಲಿ ನಾನು ಹುಟ್ಟಿನಿಂದ ಹಿಂದೂ ಆದರೆ ನಾನೊಬ್ಬ ರಾಷ್ಟ್ರೀಯವಾದಿ ಎಂದು ಮೋದಿ ಹೇಳಿದಾಗ ದೇಶದಲ್ಲಿ ಸಂಚಲನ ಮೂಡಿದ್ದು ಸುಳ್ಳಲ್ಲ. ದೇಶದ ತುಂಬೆಲ್ಲಾ ಬೇಕಾದಾಗ ಬಾಂಬ್ ಹಾಕಿ ನಿರ್ದಯವಾಗಿ ಅಮಾಯಕರ ಜೀವಕ್ಕೆ ಬೆಲೆನೇ ಇಲ್ಲದ ಸಮಯದಲ್ಲಿ ಒಬ್ಬ ರಾಜಕೀಯ ಮುಖಂಡ, ಅದರಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿ ನಾನೊಬ್ಬ ರಾಷ್ಟ್ರೀಯವಾದಿ ಎಂದಾಗ ದೇಶದ ಬಿಸಿ ರಕ್ತದ ಯುವಕರ ಮೈಯಲ್ಲಿ ವಿದ್ಯುತ್ ಸಂಚರಿಸಿದ ಅನುಭವ ಆಗಿತ್ತು. ಇದಾದ ಮೇಲೆ ದೇಶದಲ್ಲಿ ನಾನು ರಾಷ್ಟ್ರವಾದಿ ಎಂದು ಹೇಳಲು ಮುಜಗರ ಮತ್ತು ಹೇಳಿದರೆ ಕೋಮುವಾದಿ ಆಗುತ್ತೆ ಎನ್ನುವ ಭಯ ಮಾಯವಾಗಿಬಿಟ್ಟಿತು. ಗರ್ವದಿಂದ ಹೇಳು ನಾನೊಬ್ಬ ಹಿಂದೂ ಎಂದು ಹೇಳಿದ ಹಾಗೆ ನಾನೊಬ್ಬ ರಾಷ್ಟ್ರೀಯವಾದಿ ಎಂದು ಹೇಳತೊಡಗಿದರು. ಕರ್ನಾಟಕದ ಮಂಗಳೂರಿನಲ್ಲಿ ಕೆಲಸ ನಿರ್ವಹಿಸಿ ಸಿಂಗಮ್ ಎಂದು ಖ್ಯಾತಿ ಪಡೆದಿದ್ದ ಅಣ್ಣಾಮಲೈ ಹುದ್ದೆಗೆ ರಾಜೀನಾಮೆ ಕೊಟ್ಟು ಭಾರತೀಯ ಜನತಾ ಪಕ್ಷ ಸೇರಿದರು. ಪತ್ರಕರ್ತರು ಯಾಕೆ ಭಾರತೀಯ ಜನತಾ ಪಕ್ಷ ಎಂದು ಕೇಳಿದಾಗ? ನಾನು ರಾಷ್ಟ್ರೀಯವಾದಿ ಮತ್ತು ಮೋದಿ ಆಡಳಿತ ಮೆಚ್ಚಿ ಈ ನಿರ್ಧಾರ ಎಂದರು. ಇತ್ತೀಚಿಕೆ ದೇಶದಲ್ಲಿ ರಾಷ್ಟ್ರವಾದಿ ಶಬ್ದ ಚಲಾವಣೆಯಲ್ಲಿ ಇದೆ. ಆದರೆ ಯಾರು ರಾಷ್ಟ್ರವಾದಿಗಳು? ರಾಷ್ಟ್ರದಲ್ಲಿ ಎಡ ಮತ್ತು ಬಲ ಪಂಥದ ಬಗ್ಗೆ ಎಗ್ಗಿಲ್ಲದೆ ನಡೆಯುತ್ತಿರುವ ವಾದಗಳಿಗೆ ಯಾವದು ಸರಿ ಇದೆ ಅದನ್ನು ಆಯ್ದುಕೊಳ್ಳುವ ಹಕ್ಕು ನಮಗಿದೆ. ನಾವು ಎಡ ಆಗಲಿ ಅಥವಾ ಬಲಪಂಥಿ ಆಗಲಿ ಆದರೆ ದೇಶದ ವಿಷಯ ಬಂದಾಗ ಅಮೇರಿಕಾ ಪ್ರಜೆಗಳ ತರಹ ನಾವು ಒಗ್ಗಟ್ಟು ತೋರಿಸಿದ ಉಧಾಹರಣೆ ಇದೆಯಾ? ಸಿದ್ದಾಂತ ಯಾವದೇ ಇರಲಿ ಕಾನೂನ ಅಡಿಯಲ್ಲಿ ಇದ್ದು ದೇಶದ ಸಂಸ್ಕೃತಿ ಪಾಲಿಸಿದರೆ ಯಾರು ವಿರೋಧ ಮಾಡುವ ಪ್ರಮೆ ಬರುವದಿಲ್ಲಾ. ಸದ್ಗುರು ಜಗ್ಗಿ ಬಾಬಾ ಒಂದು ವೇದಿಕೆಯಲ್ಲಿ ಜನರ ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಎಡಪಂಥಿ ಅವರ ಕಡೆ ಬಂದ ಪ್ರಶ್ನೆ ರಾಷ್ಟ್ರಗೀತೆ ಹಾಡುವಾಗ ಯಾಕೆ ನಿಲ್ಲಬೇಕು? ನಿಲ್ಲದೆ ಹೋದರೆ ನಮಗೆ ದೇಶದ ಮೇಲೆ ಪ್ರೀತಿ ಇಲ್ಲದ ಹಾಗೆನಾ? ಇದನ್ನು ಕೇಳಿದವರು ರಾಷ್ಟ್ರವಾದಿಗಳಾ?ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ಆದಾಗ ಪುರಾವೆ ಕೊಡಿ ಎಂದು ಕೇಳಿದವರು ರಾಷ್ಟ್ರವಾದಿಗಳಾ? ಕೇವಲ ರಾಜಕೀಯ ತೆವಲಿಗಾಗಿ ಬೇರೆ ದೇಶದ ಜೊತೆ ಕೈ ಜೋಡಿಸಿ ಭಾರತ ತುಕಡೆ ತುಕಡೆ ಎಂದು ಹೇಳುವವರು ರಾಷ್ಟ್ರವಾದಿಗಳಾ? ಕೇವಲ ಮೋದಿಗೆ ವಿರೋಧಿಸುವ ನೆಪದಲ್ಲಿ ರಾಷ್ಟ್ರ ವಿರೋಧಿ ಹೇಳಿಕೆ ಕೊಡುವವರು ರಾಷ್ಟ್ರವಾದಿಗಳಾ?
ಬೆಂಕಿ ಹಚ್ಚಿ ಕರಸೇವಕರನ್ನು ಜೀವಂತವಾಗಿ ಸುಟ್ಟವರು ರಾಷ್ಟ್ರವಾದಿಗಳಾ?ಹಿಂದೂ ದೇವರನ್ನು ವಿವಸ್ತ್ರಗೊಳಿಸಿ ಚಿತ್ರಗಳನ್ನು ಬಿಡಿಸಿದವರು ರಾಷ್ಟ್ರವಾದಿಗಳಾ? ದೇಶದಲ್ಲಿ ಬಾಂಬ ಹಾಕಿ ಸಿಕ್ಕಿಬಿದ್ದ “ಅಮಾಯಕರು” ರಾಷ್ಟ್ರವಾದಿಗಳಾ ? ಇನ್ನೊಂದು ಮಗ್ಗುಲ ನೋಡಿದರೆ -> ಅಪ್ಪಾ ನಮ್ಮ ಹೊಲದಲ್ಲಿ ಗೋಧಿ ಬೀಜ ಹಾಕಿ ಗೋಧಿ ಬೆಳೆಯುತ್ತವೆ ಆದರೆ ಬಂದೂಕ ಬಿತ್ತಿ ಬಂದೂಕ ಬೆಳೆಯುದಕ್ಕೆ ಆಗಲ್ವಾ ಎಂದು ಕೇಳಿದ ಮಹಾನ್ ಪುರುಷ ಭಗತ ಸಿಂಗ. ದೇಶಕ್ಕಾಗಿ ಬ್ರಿಟಿಷ್ ಪೊಲೀಸ್ ಅಧಿಕಾರಿಯನ್ನು ಕೊಂದ ಕಟ್ಟರ್ ರಾಷ್ಟ್ರವಾದಿ. ದೇಶದ ಸಲುವಾಗಿ ಜೀವವನ್ನೇ ತ್ಯಾಗಮಾಡಿದ ಮಹಾನ ನಾಯಕ ಭಗತಸಿಂಗ ನಿಜವಾದ ರಾಷ್ಟ್ರೀಯವಾದಿ. ನಮ್ಮ ದೇಶ ೧೯೪೭ ಕ್ಕಿಂತ ಮುಂಚೆ ಪರಕೀಯರ ಸ್ವತ್ತಾಗಿತ್ತು. ಅದಕ್ಕಿಂತ ಮೊದಲು ನಮ್ಮವರೇ ಅರಸರುಗಳು ಆಳುವಾಗ ರಾಜಧರ್ಮ ಎಂಬದು ಪ್ರಮುಖವಾದ ವಿಷಯವಾಗಿತ್ತು. ೧೮೫೭ ಸಿಪಾಯಿ ದಂಗೆ ಎಂದು ಈಸ್ಟ್ ಇಂಡಿಯಾ ಕರೆದರೆ ಭಾರತೀಯರು ಅದನ್ನು ಪ್ರಥಮ ಸ್ವತಂತ್ರ ಸಂಗ್ರಾಮ ಎಂದು ಕರೆದರು. ಭಾರತದಲ್ಲೇ ಇದ್ದು ಭಾರತೀಯರನ್ನು ಕೀಳಾಗಿ ಕಾಣುವ ಮತ್ತು ಒಡೆದು ಆಳುವ ನೀತಿಯನ್ನು ಬ್ರಿಟಿಷರು ಅನುಸರಿಸುತ್ತಿದ್ದರು. ಇಷ್ಟೇ ಅಲ್ಲಾ ನಮ್ಮ ಹಿಂದೂ ಸಂಸೃತಿ ಬಗ್ಗೆ ಉದಾಸೀನತೆ ಹೊಂದಿದ್ದರು. ಹೊಸದಾಗಿ ಖರೀದಿ ಮಾಡಿದ ಎನಫೀಲ್ಡ್ ರೈಫಲ್ ಒಂದು ಭಾಗ ಬಾಯಿಯಿಂದ ತಗೆಯಬೇಕಿತ್ತು. ಆದ್ರೆ ಪೇಪರ್ ಕ್ಯಾಟ್ರಿಡ್ಜ್ಸ್ ಹಂದಿ ಮತ್ತು ದನದ ಮೌಂಸದಿಂದ ಮಾಡಿದ್ದರಿಂದ ಕೆಲವರು ಸಸ್ಯಾಹಾರಿಗಳಾಗಿದ್ದ ನಮ್ಮ ಸೈನಿಕರು ಮಾರ್ಚ್ ೨೯ ೧೮೫೭ ಇದನ್ನು ನಿರಾಕರಿಸಿದರು. ಇದು ಧರ್ಮದ ವಿರುದ್ಧ ಎಂದು ಗೋಗರೆದರು. ಮಂಗಲ ಪಾಂಡೆ ಪರಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಬ್ರಿಟಿಷರಿಗೆ ತೀಕ್ಷ್ಣವಾಗಿ ವಿರೋಧಿಸಿದ್ದರು. ಮಂಗಲ ಪಾಂಡೆ ಇದರ ವಿರುದ್ಧ ತೊಡೆ ತಟ್ಟಿ ಮೇಲಿನ ಅಧಿಕಾರಿಯನ್ನು ಶೂಟ್ ಮಾಡಿ ಕೊಂದೆ ಬಿಟ್ಟಿದ್ದನು. ಇನ್ನುಳಿದ ಸೈನಿಕರು ಇದೆ ಹಾದಿ ತುಳಿದರು. ಅಂದು ಧರ್ಮಕ್ಕಾಗಿ ಮತ್ತು ನಮ್ಮದು ನಮ್ಮ ರಾಷ್ಟ್ರಕ್ಕಾಗಿ ಹೊತ್ತಿದ ಕಿಚ್ಚಿಗೆ ಮಂಗಲ ಪಾಂಡೇರನ್ನು ಗಲ್ಲಿಗೇರಿಸಿದರು. ಅಂದೇ ನಿಜವಾದ ರಾಷ್ಟ್ರೀಯವಾದಿಯಿಂದ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿತ್ತು. ಹಾಗಾದರೆ ಮಂಗಲ ಪಾಂಡೆ ರಾಷ್ಟ್ರವಾದಿನಾ? ಹೌದು ಅದರಲ್ಲಿ ಸಂಶಯ ಬೇಡ.

ನನ್ನ ಸಂಪ್ರದಾಯ ನನಗೆ ಅವರ ಸಂಪ್ರದಾಯ ಅವರಿಗೆ ಆದರೆ ಇದರಲ್ಲಿ ಯಾರ ಸಂಪ್ರಾದಾಯಕ್ಕೆ ಕುಂದು ಬಂದಲ್ಲಿ ನಾನು ತಡೆದುಕೊಳ್ಳುವದಿಲ್ಲ ಎಂದು ನೇರವಾಗಿ ಮೋದಿ ಹೇಳಿದ್ದರು. ಎಲ್ಲರಿಗೂ ಅವರದೇ ಆದ ಸಂಪ್ರದಾಯ ಆಚರಣೆ ಮಾಡುವ ಹಕ್ಕು ನಮ್ಮ ಸಂವಿದಾನ ಕೊಟ್ಟಿದೆ ಮತ್ತು ನಾನು ರಾಜಕೀಯ ನಾಟಕ ಮಾಡಿ ಟೋಪಿ ಧರಿಸುವ ಅವಶ್ಯಕತೆ ಇಲ್ಲ ಎಂದ ನೇರವಾಗಿ ಹೇಳಿದ ಹಿಂದೂ ರಾಷ್ಟ್ರೀಯವಾದಿ. ಯಾವಾಗ? ನೀವು ಯಾಕೆ ಟೋಪಿ ಹಾಕಿಕೊಳ್ಳಲಿಲ್ಲ ಎಂದಾಗ ಮೇಲಿನ ಮಾತು ಹೇಳಿದ್ದು ಇದೆ ರಾಷ್ಟ್ರೀಯವಾದಿ. ನಿಮಗೆ ಗೊತ್ತಿರಬೇಕು. ಉರಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಘಾಡ ನಿದ್ರೆಯಲ್ಲಿದ್ದ ನಮ್ಮ ೧೯ ಸೈನಿಕರನ್ನು ಹುತಾತ್ಮರಾನ್ನಾಗಿಸಿದರು. ಕೇರಳದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಇದರ ಸೇಡು ತೀರಿಸದೆ ಬಿಡೆವು ಎಂದು ಮೋದಿ ಹೇಳಿದ್ದರು. ಹೇಳಿದ ಕೆಲವೇ ಕೆಲವು ದಿನಗಳಲ್ಲಿ ವೈರಿ ದೇಶದ ಒಳಹೊಕ್ಕು ಸೇಡು ತೀರಿಕೊಂಡಿದ್ದು ಇದೆ ರಾಷ್ಟ್ರವಾದಿ. ಪ್ರಪಥಮ ಸರ್ಜಿಕಲ್ ಸ್ಟ್ರೈಕ್ ಅದಾಗಿತ್ತು. ಸೇಡು ತೀರಿಸಿಕೊಂಡ ಬಳಿಕ ನಮ್ಮ ಸೈನಿಕರ ಸ್ಲೋಗನ್ ‘ಹೌ ಐಸ್ ದಿ ಜೋಶ” ಮುಂದೆ ಮತ್ತೊಂದು ನಮ್ಮ ದೇಶದ ಮೇಲೆ ಭೀಕರ ದಾಳಿಯಾಯಿತು. ಅದುವೇ ಪುಲ್ಹಾಮ್ ದಾಳಿ. ದಾಳಿಯಿಂದ ಹುತಾತ್ಮರಾಗಿದ್ದು ೪೦ ಸೈನಿಕರು. ನಮ್ಮ ದೇಶದ ಒಳಗಿರುವ ಕ್ರಿಮಿಗಳು ಇವಾಗ ಹೇಗಿದೆ ನಮ್ಮ ಜೋಶ ಎಂದು ಟ್ವಿಟ್ ಮಾಡಿ ನಮ್ಮ ಸೈನಿಕರ ಸಾವನ್ನು ವಿಜೃಂಭಿಸಿದ್ದರು. ದೇಶದ ರಾಷ್ಟ್ರೀಯವಾದಿಗಳಿಗೆ ಹೇಗಾಗಿರಬೇಡ? ದೇಶದ ಜನರು ಎಷ್ಟು ರೋಸಿ ಹೋಗಿದ್ದರು ಎಂದರೆ ನಮಗೆ ಏನು ಕೊಡಬೇಡಿ ಪಾಪಿ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಸಾಕು ಎಂದಿದ್ದರು.! ಒಂದು ಸಭೆಯಲ್ಲಿ ದೇಶದ ಪ್ರಧಾನಿ ತಮ್ಮ ಭಾಷಣದಲ್ಲಿ “ನಿಮ್ಮ ಹೃದಯದಲ್ಲಿ ಎಷ್ಟು ಬೆಂಕಿ ಇದೆಯೋ ಅಷ್ಟೇ ಬೆಂಕಿ ನನ್ನಲ್ಲೂ ಇದೆ”. ಇದರ ಕೌಂಟರ್ ದಾಳಿ ಇದ್ದೆ ಇದೆ ಎಂದರು. ಆದರೂ ದೇಶದ ಜನ ಸರ್ಕಾರವನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲಾ. ಕಾರಣ ಹಿಂದಿನ ಸರ್ಕಾರ ಮಾಡಿದ ಪ್ರಮಾದಗಳು. ಹಿಂದೆ ಕೆಲಯೊಂದು ದಾಳಿಗಳು ಎಷ್ಟು ಬಿಕರವಾಗಿದ್ದವು ಎಂದರೆ ನಮ್ಮ ಸೈನಿಕರ ದೇಹವೇ ಬೇರ್ಪಡಿಸಿದ್ದರೂ ಯಾವದೇ ಸೇಡು ತೀರಿಸಿಕೊಂಡಿರಲಿಲ್ಲ. ನಿರಂತರ ದಾಳಿಗಳಾದರು, ನಮಗೆ ತಗೆದುಕೊಳ್ಳುವುದು ಮಾತ್ರ ಗೊತ್ತಿತ್ತು ಆದರೆ ಮರಳಿ ಕೊಡುವುದು ಮರೆತುಬಿಟ್ಟಿದ್ದೆವು.
ಆದರೆ ಮೋದಿ ಸರ್ಕಾರದಲ್ಲಿ ಆಗಿದ್ದೆ ಬೇರೆ. ಜಗತ್ತೇ ಊಹಿಸಿರದ ಹಾಗೆ ವೈಮಾನಿಕ ದಾಳಿ ಮಾಡಿ ಕೊಂದಿದ್ದು ಬರೋಬ್ಬರಿ ೩೦೦ ಭಯೋತ್ಪಾದಕರು. ದೇಶದ ಜನ ಮತ್ತು ದೇಶದ ಬಗ್ಗೆ ಪ್ರೀತಿ ಇರುವವರೇ ರಾಷ್ಟ್ರವಾದಿಗಳು ತಾನೇ?ಕೇವಲ ನಮ್ಮ ಸಿದ್ದಾಂತ ಬೇರೆ ಎನ್ನುವ ಕಾರಣಕ್ಕೆ ನಮ್ಮ ದೇಶದ ವೀರ ಸೈನಿಕರ ವಾಯುದಾಳಿಯಲ್ಲಿ ಮಡಿದ ೩೦೦ ಉಗ್ರರ ಸಾವು ಸಂಭ್ರಮವಾಗಬೇಕೇ ಅದು ಬಿಟ್ಟು ಸಂಶಯ ಆಗಬಾರದಲ್ವಾ? ಇತ್ತೀಚಿಕೆ ಅದು ನಿಜ ಎಂದು ಪಾಕ ಅಧಿಕಾರಿನೇ ಒಪ್ಪಿಕೊಂಡಿದ್ದಾರೆ. ಇಂಥಹ ರಾಷ್ಟ್ರೀಯವಾದಿ ಮಧ್ಯದಲ್ಲಿ ಮೂರ್ತಿ ಮೇಲೆ ಮೂತ್ರಮಾಡಿ ಬಂದೆ ನನಗೆ ದೇವರು ಯಾವದೇ ಶಾಪ ಕೊಟ್ಟಿಲ್ಲ ಎಂದು ಎದೆಯುಬ್ಬಿಸಿ ಹೇಳುವ ನಾಯಕರು ಯುವಕರಿಗೆ ಕೊಡುತ್ತಿರುವ ಸಂದೇಶ ಯಾವದು? ಕೇವಲ ಸಿದ್ದಾಂತ ಬೇರೆ ಎನ್ನುವ ಕಾರಣದಿಂದ ಜನ್ಮ ಕೊಟ್ಟ ಭೂತಾಯಿಯ ಪ್ರೀತಿ ಮರೆತು ವೈರಿ ದೇಶದ ಜೈಕಾರಗಳು ಮೊಳಗಲು ಯಾರು ಕಾರಣೀಭೂತರು? ಭಾರತ ಮಾತಾ ಕಿ ಜೈ ಘೋಷಣೆ ಕೂಗಿ ಎಂದು ಕೇಳಿದರೆ ಇದು ಸಂವಿದಾನದಲ್ಲಿ ಇದೆಯಾ ಎಂದು ಕೇಳಿದವರು ರಾಷ್ಟ್ರವಾದಿಗಳು ಅಷ್ಟೇ ಅಲ್ಲಾ ದೇಶಪ್ರೇಮಿಗಳಾಗಲು ಸಾಧ್ಯವಿಲ್ಲ. ದೇಶದ ಜನರ ಮತ್ತು ದೇಶದ ಒಳಿತಿಗಾಗಿ ತಮ್ಮ ಸಮಯ ಮತ್ತು ಜೀವನವನ್ನೇ ತ್ಯಾಗ ಮಾಡಿದ ಮಹನೀಯರು ರಾಷ್ತ್ರವಾದಿಗಳು ಎಂದರೆ ತಪ್ಪಾಗಲಾರದು. ಅವರು ಯಾವತ್ತೂ ಸ್ವಹಿತಾಶಕ್ತಿ ಬಗ್ಗೆ ಯೋಚನೆ ಮಾಡಲೇ ಇಲ್ಲಾ. ಅದಕ್ಕೆ ಇವತ್ತಿಗೂ ರಾಷ್ಟ್ರವಾದಿಗಳಿಗೆ ರಾಷ್ಟ್ರವಾದಿಗಳು ಪೂಜಿಸುತ್ತಾರೆ. ಪೊಲೀಸ್ ಅಧಿಕಾರಿಯಾಗಿ ಒಳ್ಳೆಯ ಕೆಲಸ ಮಾಡಿ ರಾಜ್ಯದ ತುಂಬೆಲ್ಲ ಹೇಸುರುವಾಸಿವಾದ ಅಣ್ಣಾಮಲೈ ಅಧಿಕಾರವನ್ನು ಮಜಾಮಾಡಬಹುದಿತ್ತು. ಆದರೆ ಇವರಿಗೆ ಅಧಿಕಾರ ಅನುಭವಿಸುವದಕ್ಕಿಂತ ದೇಶ ಮತ್ತು ದೇಶದ ಜನರ ಶ್ರೇಯೋಭಿವೃದ್ಧಿಗೆ ಮಾಡುವ ಕಾರ್ಯ ಭಾಕಿ ಇದೆ ಎಂದು ರಾಜಕೀಯಕ್ಕೆ ಧುಮಕಿದ ನಿಜವಾದ ರಾಷ್ಟ್ರವಾದಿ. ಇಂದು ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಯುವಕರ ದಂಡೇ ಇವರ ವ್ಯಕ್ತಿತ್ವಕ್ಕೆ ಮಾರುಹೋಗಿದೆ. ಎಲ್ಲಿ ಹೋದಲ್ಲಿ ಯುವಕರ ದಂಡು ಬೆನ್ನಿಗಿದೆ. ತಮಿಳನಾಡಿನಲ್ಲಿ ಕೇಸರಿ ರಂಗವನ್ನು ಹರಡಲು ಇನ್ನಿಲ್ಲದ ಪ್ರಯತ್ನಗಳು ಸಾಗಿವೆ. ಗೆಲವು ಸ್ವಲ್ಪ ತಡವಾಗಬಹುದು ಆದರೆ ಗೆಲುವು ಖಂಡಿತ ಎಂದು ಹೇಳಿದ್ದಾರೆ. ಪ್ರಾಮಾಣಿಕ ಯುವಕರು ರಾಜಕೀಯಕ್ಕೆ ಬರಬೇಕು ಮತ್ತು ರಾಜಕೀಯ ಶುದ್ದೀಕರಣ ಆಗಬೇಕು ಎಂದು ರಾಜಕೀಯ ಪಂಡಿತರು ಹೇಳುತ್ತಲೇ ಇದ್ದಾರೆ ಆದರೆ ಪ್ರಾಮಾಣಿಕ ಮತ್ತು ರಾಷ್ಟ್ರವಾದಿಗಳ ಆಗಮನ ತುಂಬಾ ಕೆಡಿಮೆ. ಇನ್ನಾದರೂ ಅಣ್ಣಾಮಲೈ ನೋಡಿಯಾದರೂ ರಾಷ್ಟ್ರೀಯವಾದಿಗಳು ರಾಜಕೀಯ ಪ್ರವೇಶ ಮಾಡಲಿ. ದೇಶದ ಏಳಿಗೆ, ದೇಶದ ಭದ್ರತೆ ಜೊತೆಗೆ ದೇಶದ ಆಚಾರ ವಿಚಾರಗಳ ಮೌಲ್ಯ ಬಗ್ಗೆ ಚಿಂತೆಮಾಡುವವರೇ ರಾಷ್ಟ್ರವಾದಿಗಳು.
Categories: Articles
