Articles

ರಫಲ್ ವಿಜೃಂಭಣೆಗೆ ಯಾರು ಕಾರಣರು?

ತೇಜಸ್ , ಸುಕಾಯಿ , ಎಫ್ ೧೬ ,ಜೀ ೨೦ ಹೀಗೆ ಹತ್ತು ಹಲವಾರು ಯುದ್ಧ ವಿಮಾನಗಳ ಬಗ್ಗೆ ಸಾಮಾನ್ಯ ಜನರು ಕುಂತಲ್ಲಿ ನಿಂತಲ್ಲಿ ಮಾತಾಡುತ್ತಿದ್ದಾರೆ!

ಕೇವಲ ತಂತ್ರಜ್ಞರು ಮಾತಾಡುವ ವಿಷಯ ಸಾಮಾನ್ಯ ಜನರು ಮತ್ತು ಬಿಸಿ ರಕ್ತದ ಯುವಕರು ಮಾತಾಡುವದಕ್ಕೆ ಶುರು ಹಚ್ಚಿಕೊಂಡಿದ್ದಾರೆ ಎಂದರೆ ಅದೆಕ್ಕೆಲ್ಲೆ ಎರಡು ಕಾರಣಗಳು ಇವೆ. ನಮ್ಮ ಮೇಲೆ ನಡೆದ ಆಕ್ರಮಣ ಮತ್ತು ಇನ್ನೊಂದು ಬಲವಾದ ಕಾರಣ ರಾಜಕೀಯ ಬೇಳೆ ಬೇಯಿಸಿಕೊಳ್ಳಲಿಕ್ಕೆ ಲೋಕಸಭೆ ಚುನಾವಣೆಯಲ್ಲಿ ರಫಲ್ ಹಗರಣ .

ಎಫ್ ೧೬ ಅಮೇರಿಕ ದೇಶದ ಸುಜ್ಜಜಿತ ಯುದ್ಧ ವಿಮಾನ. ಜಿ ೨೦ ಚೀನಾದ ಯುದ್ಧ ವಿಮಾನ. ಇಲ್ಲೊಯವರೆಗೆ ನಮ್ಮಲ್ಲಿ ಮಿರಾಜ್ ೨೦೦೦ , ಸುಖಾಯ್ ೩೦.

ಇಲ್ಲಿಯವರೆಗೆ ಜೀ ೨೦ ರಫಲ್ ಗಿಂತ ತುಂಬಾ ಅಡ್ವಾನ್ಸಡ್ ಯುದ್ಧ ವಿಮಾನ ಎಂದು ಬೀಗುತ್ತಿದ್ದ ಚೀನಾ ರಫಲ್ ಅಂಬೋಲ ದಲ್ಲಿ ಇಳಿಯುತ್ತಿದ್ದಂತೆ ಗ್ಲೋಬಲ್ ಟೈಮ್ಸ್ ಪತ್ರಿಕೆ ಜಿ ೨೦ ಬಗ್ಗೆ ಸಂದೇಹ ವ್ಯಕ್ತಪಡಿಸಿದೆ !! ನಮಲ್ಲಿರುವ ಸುಖಾಯ್ ಗಿಂತ ರಫಲ್ ಪವರ್ ಫುಲ್ ಇದೆ.

ಸೆಪ್ಟೆಂಬರ್ ೧೮ ೨೦೧೬ ಬೆಳಿಗ್ಗೆ ೫.೩೦ಕ್ಕೆ ಇಂಡಿಯನ್ ಆರ್ಮಿ ಮುಖ್ಯ ಕಚೇರಿ ಉರಿ ಎಂಬ ಪ್ರದೇಶದಲ್ಲಿ ಡೋಗ್ರಾ ರೆಜಿಮೆಂಟ್ ಮತ್ತು ಬಿಹಾರ ರೆಜಿಮೆಂಟ್ ಸೈನಿಕರು ಘಾಡ ನಿದ್ರೆಯಲ್ಲಿ ಇದ್ದಾಗ ೩ ನಿಮಿಷದಲ್ಲಿ ೧೭ ಗ್ರೆನೇಡಗಳು ಸಿಡಿದಿದ್ದವು. ಕೆಲವೇ ನಿಮಿಷದಲ್ಲಿ ಗೊತ್ತಾಗಿತ್ತು ಇದು ಪಾಪಿ ಪಾಕಿಸ್ತಾನಿಯ ಸೈನಿಕರ ನೆರಳಲ್ಲಿ ಉಗ್ರರು ಮಾಡಿದ ಘನ ಘೋರ ಪಾಪದ ಕೆಲಸ. ಸಮೀಪ ಬಂದು ಗ್ರೆನೇಡ್ ಸಿಡಿಸಿದರಿಂದ ೧೭ ಸೈನಿಕರು ಮಲಗಿದ್ದಲ್ಲೇ ದೇಶದ ಸಲುವಾಗಿ ಹುತಾತ್ಮರಾದರು. ಸುಮಾರು ೬ ಘಂಟೆಗಳ ಕಾಲ ಗುಂಡಿನ ಚಕಮಕಿ ಕಡೆಗೂ ಉಗ್ರರ ಹೆಡಮುರಗಿ ಕಟ್ಟಿದ ಭಾರತೀಯ ಸೇನೆ ! “ಬೋಲೋ ಭಾರತ ಮಾತಾ ಕಿ ಜೈ” ಎಂಬ ಘೋಷಣೆ ಮೊಳಗಿತ್ತು! ಆದರೆ ಪಾಪಿಗಳ ಕೃತ್ಯಕ್ಕೆ ಮತ್ತೆ ಗಾಯಗೊಂಡಿದ್ದ ಮತ್ತಿಬ್ಬರು ಸೈನಿಕರು ಆಸ್ಪತ್ರೆಯಲ್ಲಿ ಹುತಾತ್ಮರಾಗಿದ್ದರು. ಅಂದು ನಾವು ಕೆಳದುಕೊಂಡಿದ್ದ ಒಟ್ಟು ೧೯ ಸೈನಿಕರ ಬಲಿದಾನಕ್ಕೆ ಇಡೀ ದೇಶ ಕಂಬನಿ ಮಿಡಿದಿತ್ತು. ದೇಶದ ಜನರು ಕೊತ ಕೊತ ಕುದಿಯುವ ಸಿಟ್ಟನ್ನು ಹೊರಹಾಕಿದ್ದರು. ದೇಶದ ಜನರ ಕಣ್ಣು ದೆಹಲಿಯ ಸೇವಕನ ನಿರ್ಧಾರಕ್ಕೆ ಬಿಟ್ಟಿದ್ದರು.

ಇಲ್ಲಿಯವರೆಗೆ ಬಗ್ಗಿ ಬಗ್ಗಿ ಇದ್ದುದರಿಂದ ನಮ್ಮ ಮನೆಯ ಒಳಗಡೆ ಬಂದು ಮಲಗಿದ್ದರವನ್ನು ಮುಗಿಸಿಬಿಟ್ಟಿದ್ದರು. ಹಿಂದೆ ನಮ್ಮ ದೇಶದ ಸೈನಿಕರ ರುಂಡಗಳನ್ನು ಬೇರ್ಪಡಿಸಿ ವೈರಿ ದೇಶಗಳು ವಿಜೃಂಭಿಸಿದಾಗ ನಮ್ಮ ದೇಶದ ಪ್ರಧಾನಿಗಳು ಅಮೇರಿಕಾ ಪ್ರೆಸಿಡೆಂಟ್ ಗೆ ಕರೆ ಮಾಡಿದ್ದು ಬಿಟ್ಟು ಮತ್ತಿನ್ನೇನು ಆಗಿರಲಿಲ್ಲ. ನಮ್ಮ ಸೈನಿಕರ ರುಂಡಗಳನ್ನು ನೋಡಿದ ಭಾರತೀಯರು ಮತ್ತು ಸೈನಿಕರ ಹೆತ್ತವರು ಹೇಳಿದ ಒಂದೇ ಮಾತು ನಮಗೆ ಇದಕ್ಕೆ ಪ್ರತಿಕಾರ ಬೇಕು! ಆದರೆ ದಾಳಿ ಬಿಡಿ ಪ್ರಧಾನಮಂತ್ರಿ ಬಾಯಿಂದ ಒಂದು ಪ್ರತಿಕಾರದ ಮಾತೆ ಬರಲೇ ಇಲ್ಲ. ಹಿಂತಹ ಇತಿಹಾಸ ಹೊಂದಿದ ನಮಗೆ ನಮ್ಮ ಮನೆಯ ಹೊಕ್ಕು ಒಡೆಯುದರಲ್ಲಿ ಏನು ವಿಶೇಷತೆ ಇರಲಿಲ್ಲ. ಹರ ಹರ ಮೋದಿ ಘರ್ ಘರ್ ಮೋದಿ, ೫೬ ಇಂಚಿನ ಎದೆಯನ್ನು ದೆಹಲಿಯ ಗದ್ದುಗೆಗೆ ಕಳಿಸಿದ ಭಾರತೀಯರಿಗೆ ಈ ಬಾರಿ ನಮ್ಮ ದೇಶ ಪ್ರತಿಕಾರ ತಗೆದುಕೊಳ್ಳುತ್ತೆ ಎನ್ನುವ ಆತ್ಮವಿಶ್ವಾಸ ಇತ್ತು.

ಘಟನೆ ಆದ ನಂತರ ಗೃಹ , ರಕ್ಷಣಾ ಸಚಿವರು ಮತ್ತು ಅಜಿತ ದೋವಲ್ ಕೃತ್ಯವನ್ನು ಬಲವಾಗಿ ಖಂಡಿಸಿದ್ದರು. ಸೆಪ್ಟೆಂಬರ್ ೨೦ರಂದು ರಾಷ್ಟ್ರಿಯ ತನಿಖಾ ದಳ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಮೊದಲ ರಿಪೋರ್ಟ್ ತಗೆದುಕೊಂಡಿದ್ದರು. ೧೯ನೇ ಸಾರ್ಕ್ ಸಮಿತಿಗೆ ಗೈರಾಗಿ ಹೇಡಿಗಳ ಕೆಲಸವನ್ನು ಜಗಜ್ಜಾಹೀರು ಮಾಡಿದ್ದರು. ಭಾರತ ಪೃತ್ಯುತ್ತರ ಕೊಡುತ್ತೆ ಎನ್ನುವ ಭಯದಲ್ಲಿ ಪಾಕಿಸ್ತಾನ ತನ್ನ ಎಲ್ಲ ವಿಮಾನಗಳು ರದ್ದು ಮಾಡಿತ್ತು. ವಿರೋಧ ಪಕ್ಷಗಳು ೫೬ ಇಂಚಿನ ಎದೆ ಎಲ್ಲಿದೆ? ಅಮೆರಿಕಾಗೆ ಕರೆ ಮಾಡಿದ್ರಾ? ಯಾರು ಸೈನಿಕರ ಸಾವಿಗೆ ಹೊಣೆ’? ಮತ್ತೆ ಭಾರತೀಯರ ಕುಬ್ಜ ಮನಸ್ಥಿತಿ ಮತ್ತೆ ಮುನ್ನೆಲೆಗೆ ಬಂದಿತ್ತು. ಅಲ್ಲಿಯವರೆಗೆ ಶಾಂತವಾಗಿದ್ದ ಭಾರತದ ಪ್ರಧಾನಮಂತ್ರಿಗಳು ಕೇರಳದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ಒಂದು ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದರು. ಉರಿಯಲ್ಲಿ ಹುತಾತ್ಮರಾದ ಭಾರತೀಯ ೧೯ ಸೈನಿಕರ ಬಲಿದಾನ ವ್ಯರ್ಥ ಅಗುದಕ್ಕೆ ನಾನು ಬಿಡುವದಿಲ್ಲ. ಅಲ್ಲಿ ಕುಳಿತಿದ್ದವರು “ಹೌದು ಹುಲಿ ” ಅನ್ನಲಿಲ್ಲ . ಒಂದು ಕ್ಷಣ ದಂಗಾಗಿ ಹೋಗಿದ್ದರು . ಭಾರತದ ಪ್ರಧಾನ ಮಂತ್ರಿ ಬಹಿರಂಗವಾಗಿ ಪಾಕಿಸ್ತಾನಕ್ಕೆ ಮೊದಲ ಬಾರಿ ಕಠಿಣ ಎಚ್ಚರಿಕೆ ಕೊಟ್ಟಿದ್ದರು. ಭಾರತೀಯರ ಮನದಲ್ಲಿ ಇದ್ದದ್ದು ಇದು ಕಾರ್ಯರೂಪಕ್ಕೆ ಬರುತ್ತಾ?

ಸೆಪ್ಟೆಂಬರ್ ೨೯ ಬೆಳಿಗ್ಗೆ ಸುದ್ದಿ ಮಾಧ್ಯಮದಲ್ಲಿ ಬ್ರೇಕಿಂಗ್ ಆ ಬ್ರೇಕಿಂಗ್ ಸುದ್ದಿ. ಹೀಯಾಳಿಸುವರ ನಿದ್ದೆ ಹಾರಿ ಹೋಗಿತ್ತು. ವೈರಿ ದೇಶದ ಉಗ್ರರ ಮುಖ್ಯಸ್ಥ ಥಂಡಾ ಹೊಡೆದಿದ್ದ. ಇಲ್ಲಿಯವರೆಗೆ ತಗೆದುಕೊಳ್ಳುವುದು ಅಷ್ಟೇ ರೂಡಿಯಲ್ಲಿ ಇದ್ದ ಭಾರತ ಇವತ್ತು ಮರಳಿ ಕೊಟ್ಟಿತ್ತು. ಮೊದಲೇ ಮಾಯನ್ಮಾರ ಗಡಿಯಲ್ಲಿ ಅಚ್ಚುಕಟ್ಟಾಗಿ ಸ್ಟ್ರೈಕ್ ಮಾಡಿ ಜಗತ್ತಿಗೆ ನಮ್ಮ ಸೈನ್ಯದ ಪರಾಕ್ರಮವನ್ನು ತೋರಿಸಿದ್ದ ಭಾರತ ಸೆಪ್ಟೆಂಬರ್ ೨೮ರ ರಾತ್ರಿ ಶುರುವಾದ ಬೇಟೆ ಸೆಪ್ಟೆಂಬರ್ ೨೯ ಬೆಳಿಗ್ಗೆ ೬ಕಿಂತ ಮುಂಚೆ ೧೫೦ ಉಗ್ರರರನ್ನು ನರಕಕ್ಕೆ ಕಳಿಸಿ . ಸುರಕ್ಷಿತವಾಗಿ ಭಾರತಕ್ಕೆ ಮರಳಿ ‘ಹೌ ಐಸ್ ಹತೇ ಜೋಶ” ಎಂದು ಬಿಗಿತ್ತು. ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತ ಏಟು ಕೊಟ್ಟಿದ್ದ ಭಾರತಕ್ಕೆ ಮರಳಿ ಏನು ಮಾಡದ ಸ್ಥಿತಿಗೆ ಹೋಗಿತ್ತು. ಭಾರತದಿಂದ ಯಾವದೇ ದಾಳಿ ಆಗಿಲ್ಲ ಎಂದು ಹೇಳಿತ್ತು. ಮತ್ತೊಮ್ಮ ದಾಳಿ ಆಗಿದೆ ಅದರಿಂದ ಹಾನಿ ಏನು ಆಗಿಲ್ಲ ಅಂತ ಹೇಳಿ ನರಿ ಬುದ್ದಿ ತೋರಿಸಿತ್ತು. ಆದ್ರೆ ಮಾಡಬೇಕಾದ ಕೆಲಸ ಆಗಿಹೋಗಿತ್ತು.

ಫೆಬ್ರುವರಿ ೧೪ ೨೦೧೯ ೭೮ ವಾಹನಗಳಲ್ಲಿ ೨೫೦೦ ಸಿ ಆರ್ ಪಿ ಎಫ್ ಸೈನಿಕರನ್ನು ರಾಷ್ಟೀಯ ಹೆದ್ದಾರಿ ೪೪ ಮುಖಾಂತರ ಜಮ್ಮುಗೆ ಹೋಗುತ್ತಿರುವಾಗ ಮತ್ತೆ ರಣಹೇಡಿಗಳು ನಮ್ಮ ಯೋಧರಿದ್ದ ವಾಹನಕ್ಕೆ ಬಾಂಬ್ ಇದ್ದ ವಾಹನವನ್ನು ಉಪಯೋಗಿಸಿ ಡಿಕ್ಕಿ ಹೊಡಿಯಿಸಿ ಅದರಲ್ಲಿ ಇದ್ದ ೪೪ ಯೋಧರನ್ನು ಹುತಾತ್ಮರಾಗಿಸಿದರು. ಮಾದ್ಯಮದಲ್ಲಿ ಸೈನಿಕರ ಛಿದ್ರ ಛಿದ್ರ ದೇಹವನ್ನು ಕಂಡಾಗ ಇಡೀ ದೇಶ ಕಂಬಿನಿ ಮಿಡಿದಿತ್ತು. ಮಾಜಿ ಸೈನಿಕರು ನಮ್ಮನ್ನು ಉಪಯೋಗಿಸಿ ಯುದ್ಧವನ್ನು ಸಾರಿ ವೈರಿ ದೇಶವನ್ನು ಸಂಪೂರ್ಣವಾಗಿ ಮುಗಿಸೋಣ ಎಂದು ವೀರಾವೇಶದ ಮಾತುಗಳು. ಸಾಮಾನ್ಯ ಪ್ರಜೆಯ ಕೋಪ ನೆತ್ತಿಗೇರಿತ್ತು ನೆತ್ತಿಗೇರಿದ ಕೋಪಕ್ಕೆ ಸೋಶಿಯಲ್ ಮೆಡಿಯಯದಲ್ಲಿ ಕೋಪದ ರೌದ್ರಾವತಾರ ಹೊರಗೆ ಬಂದಿತ್ತು. ಹಿಂದೆ ಮಾಡಿದ ಸುರ್ಜಿಕಲ್ ಸ್ಟ್ರೈಕ್ ಗೆ ಬುದ್ದಿ ಕಲಿಯದ ಪಾಪಿಗಳು ಮತ್ತೆ ವಿಜಯೋತ್ಸವ ಮಾಡಿದ್ದರು . ನಮ್ಮ ದೇಶದಲ್ಲೇ ಇದ್ದು ನಮ್ಮ ಅನ್ನವನ್ನೇ ತಿಂದ ನಾಯಿಗಳು “ಹೌ ಐಸ್ ಇಸ್ ದಿ ಜೋಶ” ಎಂದು ಟ್ವಿಟ್ ಮಾಡಿದ್ದರು! ಹೇಗಾಗಿರಬೇಡ ನಮ್ಮನ್ನು ಕಾಯುವ ಯೋಧರನ್ನೇ ಇಲ್ಲವಾಗಿಸಿ ನಮ್ಮ ದೇಶದ ಭದ್ರತೆಗೆ ದಕ್ಕೆ ತಂದುಬಿಟ್ಟಿದ್ದರು. ಭಾರತೀಯರು ಪ್ರತಿಕಾರ ಕೇಳುವಕಿಂತ ಮುಂಚೆ ಬಹಿರಂಗ ಸಭೆಯಲ್ಲಿ ದೇಶದ ಪ್ರದಾನ ಮಂತ್ರಿಗಳು ಹೇಳಿದ್ದು “ನಿಮ್ಮಲ್ಲಿ ಇರುವ ಬೆಂಕಿ ನನ್ನಲ್ಲೂ ಇದೆ”. ಮತ್ತೊಮ್ಮ ಅದೇ ಮಾತನ್ನು ಪುನರುಚ್ಛಿಸಿದ್ದರು “ಬಲಿದಾನ ವ್ಯರ್ಥ ಆಗುವದಿಲ್ಲ”

ಮಾದ್ಯಮದವರು ಭಾರತದ ಪರಾಕ್ರಮವನ್ನು ಜಗತ್ತಿಗೆ ಹೇಳುತ್ತಿರುವಾಗ ಮತ್ತೆ ಸಂಕುಚಿತರ ಮಾತುಗಳು ಪ್ರಾರಂಭವಾಗಿದ್ದವು. ಓಮರ ಅಬ್ದುಲ್ಲಾ ಟ್ವಿಟ್ ” ಒಂದು ವೇಳೆ ಭಾರತ ಬಾಲಾಕೋಟ ಮೇಲೆ ದಾಳಿ ಮಾಡಿದ್ದಾರೆ ಇದೊಂದು ಇತಿಹಾಸ ” ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಬಾಗಲಕೋಟ ಎಂದರು. ಪಾಕಿಸ್ತಾನ ದಾಳಿನೆ ಆಗಿಲ್ಲ ಎಂದಿತು. ಆದರೆ ಭಾರತ ವೈಮಾನಿಕ ದಾಳಿ ತೀರಾ ಭಯಂಕರ ವಾಗಿತ್ತು. ದಾಳಿಯಿಂದ ಸುಮಾರು ೩೦೦-೩೫೦ ಉಗ್ರರು ಮಟಾಷ್! ಬಾಲಾಕೋಟ ಇದ್ದದ್ದು ಕರಾಚಿಯಿಂದ ಕೇವಲ ನೂರಾರು ಕಿಲೋಮೀಟರು ದೂರದಲ್ಲಿ ಇತ್ತು. ಎಂದರೆ ಪಾಕಿಸ್ತಾನದ ಒಳಗಡೆ ನುಗ್ಗಿ ವೈಮಾನಿಕ ದ್ದಲ್ಲಿ ಮಾಡಿತ್ತು. ಇದೊಂದು ಭಾರತೀಯ ಸೈನ್ಯದ ವೀರತ್ವದ ಪ್ರತೀಕವಾಗಿತ್ತು. ೪೪ ಸೈನಿಕರು ಹುತಾತ್ಮರಾದಾಗ “ಹೌ ಐಸ್ ಹತೇ ಜೋಶ ಎಂದು ವ್ಯಂಗವಾಗಿ ಟ್ವಿಟ್ ಮಾಡಿದ ನಾಯಿಗಳ ಸದ್ದು ಅಡಗಿತ್ತು ! ಅಂದು ನಮ್ಮ ದೇಶ ಬಳಕೆ ಮಾಡಿದ ೧೨ ಮಿರಾಜ್, ಬೆಂಗಾವಾಲಾಗಿ ಸುಖಾಯ್, ಮಾನಿಟರ್ ಸಲುವಾಗಿ ಅಡ್ವಾನ್ಸಡ್ ಮಿಗ್!

ಲೋಕಸಭೆ ಚುನಾವಣೆಯಲ್ಲಿ ರಫಲೇ ಹಗರಣವನ್ನೇ ದಾಳವಾಗಿ ಮಾಡಿಕೊಂಡು ಕಾಂಗ್ರೆಸ್ ಗೆಲ್ಲಬೇಕೆನ್ನುವ ಹುಂಬತನಕ್ಕೆ ಸುಪ್ರೀಂ ಕೋರ್ಟ್ ಚಾಟಿ ಏಟು ಕೊಟ್ಟಿತ್ತು. ಇದೊಂದು ಪಕ್ಕಾ ಸುಳ್ಳಿನ ಸರಮಾಲೆ ಎಂದು ಗೊತ್ತಾಗಲು ಹೆಚ್ಚು ಸಮಯ ತಗೆದುಕೊಳಲಿಲ್ಲ. ಭಾರತದ ಇತಿಹಾಸದಲ್ಲಿ ಸರ್ಜಿಕಲ್ ದಾಳಿ, ವೈಮಾನಿಕ ದಾಳಿ ಕಂಡು ಚಕಿತರಾಗಿದ್ದ ಭಾರತೀಯರು ರಫಲೇ ಎಂದರೆ ಜಗತ್ತಿನಲ್ಲಿ ಅತಿ ಅಡ್ವಾನ್ಸಡ್ ಆದ ಯುದ್ಧ ವಿಮಾನ ಭಾರತಕ್ಕೆ ಬಂದಾಗ ಅದಕ್ಕೆ ಹೃದಯಪೂರ್ವಕ ಸ್ವಾಗತವನ್ನು ಮಾಡಿದ್ದರು. ಅದಕ್ಕೆ ಮುಖ್ಯವಾದ ಕಾರಣ ವೈರಿಗಳು ನಮ್ಮ ದೇಶಕ್ಕೆ ಕೆಣಕುವ ಮುನ್ನ ನೂರು ಬಾರಿ ಯೋಚನೆ ಮಾಡಲೇ ಬೇಕು!

Categories: Articles, news

Tagged as: ,

Leave a Reply