Stories/ಕಥೆಗಳು

ದಗ್..ದಗ್.. ಎಂಬ ಶಬ್ದ…

 

ಎಷ್ಟೋ ಬಾರಿ ನಾಸ್ತಿಕ ಮತ್ತು ಆಸ್ತಿಕರ ಬಗ್ಗೆ ಕೇಳುವಾಗ ಇದೇನಿದು ಆಸ್ತಿಕ ಮತ್ತು ನಾಸ್ತಿಕ? ಆಸ್ತಿಕ ಎಂದರೆ ದೇವರು ನಂಬುವವನು ಮತ್ತು ನಾಸ್ತಿಕ ಎಂದರೆ ದೇವರು ನಂಬದವರು. ಅತಿ ಪ್ರಸಿದ್ಧ ದೈವೀಸ್ವರೂಪಿ ಪುಟಪರ್ತಿ ಸಾಯಿ ಬಾಬಾ ತಮ್ಮ ಪ್ರವಚನ ಕಾರ್ಯಕ್ರಮ ಮುಗಿದ ನಂತರ ತಮ್ಮ ಚಮತ್ಕಾರ ಮೂಲಕ ಉಂಗುರು , ಪ್ರಸಾದ್ ಕೊಡುವುದು ಮಾಡುತ್ತಿದ್ದರು. ಇದರ ಜೊತೆಗೆ ಬಾಬಾ ಅವರು ಮಾಡಿದ ಸಾಮಾಜಿಕ ಕಾರ್ಯಗಳ ಪಟ್ಟಿ ದೊಡ್ಡದೇ ಇದೆ. ಆದರೆ ಮಾಡಿದ್ದೆಲ್ಲ ಸರಿ ಅನ್ನುವ ಸಮಾಜ ನಮ್ಮದಲ್ಲ ಅನ್ನುವದು ಕಟು ಸತ್ಯ. ಮತ್ತೆ ಅದು ನಮ್ಮ ನಾಗರೀಕ ಸಮಾಜಕ್ಕೆ ಬೇಕೇ ಬೇಕು. ಅಂಥದರಲ್ಲಿ ನಮ್ಮ ಶಿಕ್ಷಣ ತಜ್ಞ ನರಸಿಂಹಯ್ಯ ಯವರು ಬಾಬಾ ಅವರು ಇದ್ದ ವೇದಿಕೆಯಲ್ಲೇ ಬಾಬಾರವರ ಸಮಾಜಮುಖಿ ಕೆಲಸಗಳು ಯಾರು ಅಲ್ಲಗಳೆವಂತಿಲ್ಲ ಆದರೆ ನನ್ನದೊಂದು ಪ್ರಶ್ನೆ ! “ಬಾಬಾರವರು ಜನರಿಗೆ ಪ್ರಸಾದ ಮತ್ತು ಉಂಗುರು ಕೊಟ್ಟಿದ್ದಾರೆ ಆದರೆ ಅದರ ಬದಲು ಅವರಿಗೆ ಶಕ್ತಿ ಇದ್ದರೆ ಕುಂಬಳಕಾಯಿ ಕೊಡಲಿ ನೋಡೋಣ ಎಂದಿದ್ದರು” ನರಸಿಂಹಯ್ಯ ನಾಸ್ತಿಕ ಎಂದು ಹಲವು ಬಾರಿ ಹೇಳಿಕೊಂಡಿದ್ದರು. ಅವರ ಜೀವನ ಎಷ್ಟು ಸರಳತೆ ಮತ್ತು ನಿರ್ಲಿಪ್ತ ಇತ್ತು ಎಂದರೆ ಅವರಿಗೆ ಎದೆಯ ಸರ್ಜರಿ ಆಗಿದ್ದಾಗ ವೈದ್ಯರಿಗೆ ನನ್ನ ಎದೆಯಲ್ಲಿ ಎರಡು ಅಕ್ಷರ ಇದ್ದುವೇನ್ರಿ ಅಂತ ಕೇಳಿದ್ದರಂತೆ. ನಮ್ಮ ಅಪ್ಪ ಚಿಕ್ಕವನಿದ್ದಾಗ ನಿನ್ನ ಎದೆ ಸೀಳಿದರೆ ಎರಡು ಅಕ್ಷರ ಇಲ್ಲ ಸುಮ್ಮ ಕುಡು ಅಂತ ನಮ್ಮಪ್ಪ ಅಂತಿದ್ದರು ಅದಕ್ಕೆ ಕೆಳೆದೆ ಸರ್ ಎಂದಿದ್ದರು.

ಒಂಬತ್ತನೆಯ ತರಗತಿ ಮುಗಿದು ಹತ್ತೆನೆಯ ತರಗತಿ ಪ್ರಾರಂಭವಾದವು. ಹತ್ತನೆಯ ತರಗತಿಗೆ ಪಬ್ಲಿಕ್ ಪರಿಕ್ಷೆ ಇರುವದರಿಂದ ನಮ್ಮ ಇನ್ನೊಂದು ಮನೆಯಲ್ಲಿ ಶಾಲೆಯ ಹಾಸ್ಟೆಲ್ ಇತ್ತು. ಓದುವ ಸಲುವಾಗಿ ನಾನು ಊಟವಾದ ನಂತರ ಅಲ್ಲೇ ಓದಲಿಕ್ಕೆ ಹೋಗುತ್ತಿದ್ದೆ. ಓದು ಮುಗಿದ ನಂತರ ಸುಮಾರು ಹತ್ತು ಘಂಟೆಗೆ ನಿದ್ದೆಗೆ ಜಾರಿದರೆ ಏಳೋದು ಬೆಳಿಗ್ಗೆ ೫ ಘಂಟೆಗೆ. ಅಲ್ಲಿ ೧೦ ರಿಂದ ೧೫ ವಿದ್ಯಾರ್ಥಿಗಳು ಇರುತ್ತಿದ್ದರು. ಅದರಲ್ಲಿ ಸ್ವಲ್ಪ ಜನರ ನಿದ್ದೆ ಕುಂಭಕರ್ಣನಿಗಿಂತ ಘಾಡವಾದದ್ದು. ಹೀಗೆ ಸ್ವಲ್ಪ ದಿನಗಳು ನಂತರ ಸುಮಾರು ಮಧ್ಯರಾತ್ರಿ ೨ ಘಂಟೆ ಆಗಿತ್ತೇನೋ ಎಲ್ಲರೂ ಘಾಡವಾದ ನಿದ್ದೆಯಲ್ಲಿ ಇದ್ದರು ನಾನೊಬ್ಬನೇ ಎಚ್ಚರವಾಗಿ ಎದ್ದು ಕುಳಿತ್ತಿದ್ದೆ.ಒಂದು ಬಲ್ಬ್ ಆನ್ ಆಗಿತ್ತು,ಹಳ್ಳಿಯಲ್ಲಿ ಅಂದಿನ ದಿವಸ ೪೦ ವ್ಯಾಟ್ ಬಲ್ಬಿನ ಬೆಳಕು ಮುಂದೆ ಇದ್ದವರ ಬಿಳಿ ಮತ್ತು ಕ್ರೀಮ್ ಅಂಗಿಯ ಬಣ್ಣವೇ ಗೊತ್ತಾಗುತ್ತಿರಲಿಲ್ಲ.ಅಂತಹ ಮಂದ ಬೆಳಕು ,ಸಂಪೂರ್ಣ ನಿಶಬ್ದ, ಒಂದು ಮೂಲೆಯಿಂದ “ದಗ್ ದಗ್ ಎಂಬ ಶಬ್ದ” ಕೇಳಿಸಿದಾಗ ನನಗೇನು ಹೆದರಿಕೆ ಆಗಲಿಲ್ಲ ಆದರೆ… ಯಾರೋ ಖಾರ ಕುಟ್ಟಿತ್ತಿರಬೇಕು ಎಂದು ಮಲಗಿದೆ. ಆದರೆ ಮತ್ತೆ ಮರುದಿವಸ “ದಗ್ ದಗ್ ಎಂಬ ಶಬ್ದ” ಸ್ವಲ್ಪ ಹೊರಗಡೆ ಹೋಗಿ ನೋಡಿದೆ ಯಾವ ಬಲ್ಬು ಆನ್ ಇಲ್ಲ,ಬರ್ರನೆ ಬೊಗಳಿದ ನಾಯಿ,ಕರಾಳ ರಾತ್ರಿ , ಮಂದ ಬೆಳಕು . ಮೊದಲೇ ಎಳಸು ,ಲೋಕದ ಪರಿಜ್ಞಾನ ಇಲ್ಲದ ಹುಡುಗನಿಗ ಹೇಗಾಗಿರಬೇಡ. ದಗ್ ದಗ್ ಶಬ್ದ ನನ್ನಲ್ಲಿ ಭಯ ಹುಟ್ಟಿಸಿದಷ್ಟೇ ಕುತೂಹಲವನ್ನು ಇಮ್ಮಡಿ ಮಾಡಿತ್ತು.

ಅತ್ಯಂತ ಕಿರಿಯ ವಯಸ್ಸಿನಲ್ಲಿ ಪ್ರಸಿದ್ದಿ ಪಡೆದ ಮಾರ್ಕ್ ಜುಕರಬರ್ಗ ಆಪಲ್ ಫೋನಿನ ನಿರ್ಮಾತೃ ಸ್ಟೀವ್ ಜಾಬ್ಸ್ ಸಲಹೆ ಮೇರೆಗೆ ಭಾರತದ ಒಂದು ದೇವಸ್ಥಾನಕ್ಕೆ ಭೇಟಿಕೊಟ್ಟು ತನ್ನ ವ್ಯವಹಾರವನ್ನು ಪ್ರಾರಂಭಿಸಿ ಅಷ್ಟೇ ಸತತ ಪ್ರಯತ್ನ ಮತ್ತು ಶ್ರದ್ದೆಇಂದ ಕಟ್ಟಿದ ಕೋಟೆನೆ ಇವತ್ತು ನಾವು ಉಪಯೋಗಿಸುವ ಫೇಸ್ಬುಕ್ . ಸ್ಟೀವ್ ಜಾಬ್ಸ್ ಗೊತ್ತಲ್ಲ ಪ್ರಪಥಮ ಬಾರಿಗೆ ಜಗತ್ತಿಗೆ ತನ್ನ ಅತ್ಯದ್ಭುತ ಪ್ರೆಸೆಂಟೇಷನ್ ಮೂಲಕ ಐ ಫೋನನ್ನು ಜಗತ್ತಿಗೆ ಕೊಟ್ಟಾಗ ಜಗತ್ತು ನಿಬ್ಬೆರಗಾಗಿತ್ತು. ಅಂಥ ಅದ್ಬುತ ವಿಷಯವನ್ನು ಜಗತ್ತಿಗೆ ಮುಟ್ಟಿಸಿದ್ದರು. ಮುಂದೆ ಸುಮಾರು ವರ್ಷಗಳ ನಂತರ ನನ್ನ ಅವತ್ತಿನ ಪ್ರೆಸೆಂಟೇಷನ್ಗೆ ನಾನು ಮೂರೂ ತಿಂಗಳ ಪೂರ್ವಸಿದ್ದತೇ ಮಾಡಿಕೊಂಡಿದ್ದೆ ಎಂದು ಹೇಳಿ ಯಾವದೇ ಕೆಲಸ ಅಥವಾ ನಮ್ಮ ವಿಷಯ ಮಂಡನೆ ಜನರಿಗೆ ತಲಪಲು ಸರಿಯಾದ ಪೂರ್ವಸಿದ್ದತೇ ಇರಲೇಬೇಕು ಎಂದಿದ್ದರು. ಪ್ರಸಿದ್ಧ ಪಡೆದ ಆಸ್ತಿಕ ವ್ಯಕ್ತಿಗಳು ದೇವರ ಮೊರೆ ಹೋಗಿದ್ದಕ್ಕೆ ಉಧಾಹರಣೆ ಇತ್ತೀಚಿಕೆ ನಾನು ಇರುವ ಅಪಾರ್ಟ್ಮೆಂಟಿನ ಕೆಳಗಡೆ ಇರುವ ವ್ಯಕ್ತಿ ಅವರ ಅಕ್ಕನ ಜೊತೆ ನಮ್ಮ ಮನೆಗೆ ಬಂದು ಸರ ದಿನಾಲೂ “ದಗ್ ದಗ್ ಶಬ್ದ” ಬರುತ್ತಿದೆ ನೀವೇನಾದರೂ ಕುಟ್ಟುತ್ತಿದ್ದಿರಾ ಎಂದು ಕೇಳಿದ. ಅದಕ್ಕೆ ಮೊದಲು ನಾನು ಹೌದು ನಾವು ರೊಟ್ಟಿ ಮಾಡುತ್ತೇವೆ ಅದಕ್ಕೆ ಇರಬೇಕು ನೋಡು ಎಂದೇ ಅದಕ್ಕೆ ಅವರು ಇಲ್ಲ ಸರ ಅದು ಮಧ್ಯಹ್ನ ಮತ್ತು ರಾತ್ರಿ ವೇಳೆ ಮತ್ತು ಆಗ್ನೇಯ ಮೂಲೆಯಿಂದ ಬರುತ್ತೆ ಎಂದಾಗ ನಾನು ಜೋರಾಗಿ ನಕ್ಕು”ನಿಧಿ ಇರಬೇಕು ನೋಡಿ ಸರ ಎಂದಿದ್ದೆ” ನನ್ನಲ್ಲಿ ಕುತೂಹಲ ಮೂಡಿಸಿದ್ದ ಶಬ್ದದ ಬಗ್ಗೆ ನನ್ನ ಗೆಳಯರ ಜೊತೆ ಒಂದು ದಿವಸ ರಾತ್ರಿ ಎಚ್ಚರವಾಗಿದ್ದು ಕೇಳಿಯೂ ಆಗಿತ್ತು. ಆದರೆ ಎಲ್ಲಿಂದ ಬರುತ್ತೆ ಅನ್ನೋದೇ ಒಂದು ಯಕ್ಷ ಪ್ರಶ್ನೆ? ಹೇಗೋ ಇದು ನಮ್ಮ ಮನೆಯವರಿಗೆ ಮುಟ್ಟಿತ್ತು. ಅವರು ಇದು ಹಳೆಯ ಮನೆ ಇಲ್ಲಿ ನಿಧಿ ಇರಬೇಕು ಅದಕ್ಕೆ ಶಬ್ದ ಬರುತ್ತೆ ಅಂದರು. ಏನು ನಿಧಿ ಎಂದರೆ ? ಯಾಕೆ ನಿಧಿ ಶಬ್ದ ಮಾಡುತ್ತೆ? ಅಲ್ಲಿ ನಿಧಿ ಇಟ್ಟವರು ಯಾರು? ನಿಮಗೆ ಗೊತ್ತಿರಬಹದು “ಆನೆ ಬಂತೊಂದು ಆನೆ ಯಾಊರು ಆನೆ ವಿಜಯಪುರದ ಆನೆ ಇಲ್ಲಿಗೆಕೆ ಬಂತು ಹಾದಿಗೊಂದು ದುಡ್ಡು ಬೀದಿಗೊಂದು ದುಡ್ಡು” ೧೫೬೫ ರಲ್ಲಿ ತಾಳಿಕೋಟಿ ಯುದ್ಧ ಎಂದರೆ ರಕ್ಕಸ ತಂಗಡಗಿ ಯುದ್ಧದಲ್ಲಿ ವಿಜಯಪುರ ಸುಲ್ತಾನ ವಿಜಯನಗರದ ರಾಮರಾಯರನ್ನು ಸೋಲಿಸಿ ಬಂಗಾರದ ನಾಣ್ಯಗಳನ್ನು ಆನೆಯ ಮೇಲೆ ಹೊತ್ತುಕೊಂಡು ಹೋಗುವಾಗ ಯುದ್ಧ ಗೆದ್ದ ಖುಷಿಯಲ್ಲಿ ಬೀದಿ ಬೀದಿಗೆ ದುಡ್ಡು ಹಂಚಿ ಹೋಗಿದ್ದಕ್ಕೆ ಮೇಲಿನ ಹಾಡು!! ಆದರೆ ಯುದ್ಧ ನಡೆದ ಸ್ಥಳದಲ್ಲಿ ಎಂದರೆ ಸುಮಾರು ೪೦೦ ವರ್ಷಗಳ ನಂತರ ಜನ ಅಗೆದು ಅಗೆದು ನಿಧಿಗಾಗಿ ಹುಡುಕುವದುಂಟು.

ನಿಧಿ ಆ ಮನೆಯಲ್ಲಿಇಟ್ಟವರಾರು? ನಿಧಿ ಅಂದರೆ ನಾಣ್ಯಗಳಾ ಹೀಗೆ ಹತ್ತು ಹಲವಾರು ಪ್ರಶ್ನೆಗಳು ಹುಟ್ಟಿದ್ದವು. ಸುಮಾರು ೧೫ ವರ್ಷಗಳ ಹಿಂದೆ ಮನೆಯನ್ನು ನಮಗೆ ಮಾರಿದ್ದರು. ಹಳೆಯ ಮಾಲೀಕನ ಪೂರ್ವಜರು ಅಂದರೆ ೫೦-೬೦ ವರ್ಷಗಳ ಹಿಂದೆ ಕಟ್ಟಿದ ಮನೆ ವಿಶಾಲವಾದ ಅಂಗಣ ದೊಡ್ಡ ಕಿಡಕಿ, ದೊಡ್ಡ ತೊಲೆ ಬಾಗಿಲು(ಮೇನ್ ಎಂಟ್ರನ್ಸ್),ಮೂವತ್ತು ಅಂಕಣದ ಮನೆ ಹೊರಾಂಡ ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕಟ್ಟಿದ ಮನೆ ಅದಾಗಿತ್ತು. ಮಾಲೀಕ ಅತಿ ಸಿರಿವಂತನಾಗಿದ್ದ ಅವನ ಕಾಲಾನಂತರ ಅದು ಹುಗಿದ ನಿಧಿ ಯಾರಿಗೂ ಸಿಕ್ಕಿಲ್ಲ, ಅದು ಅಲ್ಲೇ ಇದೆ ಎಂದು ಮನೆಯರ ಸಹಿತ ಸುಮಾರು ಜನ ಹೇಳಿದ್ದರು. ಇದರ ಮಧ್ಯೆ ಹಳೆಯ ಮಾಲೀಕ ನಮ್ಮ ಅಜ್ಜ ನಮಗೆ ಕೊಟ್ಟು ಸತ್ತಿದ್ದರೆ ನಮ್ಮ ಲೇವಲ್ ಬೇರೇನೇ ಇರತಿತ್ತು ಎಂದು ಹೇಳಿದೆ ನೆನಪುಂಟು ಮತ್ತು ಆ ಕಾಲದಲ್ಲಿ ಮನೆಯ ಅಗೆಯುವಾಗ ಅವರಿಗೆ ಬಂಗಾರ ಸಿಕ್ಕಿತು, ಇನ್ನೊಬ್ಬರಿಗೆ ದೊಡ್ಡ ನಿಧಿ ಸಿಕ್ಕಿದೆ ಅಂತ ಕೇಳಿದ್ದೆ. ಅವಲ್ಲೆವೂ ನಂಬುವ ಸ್ಥಿತಿಯಲ್ಲಿ ಇದ್ದ ದಿನಗಳು. ಮನೆ ನಮ್ಮದು ನಾವ್ಯಾಕೆ ಅಗೆದು ನಿಧಿ ತೆಗೆದುಕೊಳ್ಳಬಾರದು ಅಂತ ಕೇಳಿದ್ದಕ್ಕೆ ನಮ್ಮ ಮನೆಯಲ್ಲಿ ಬೇರೆಯವರ ದುಡ್ಡು ಮುಟ್ಟಿದರೆ ದೇವರು ಒಳ್ಳೆಯದು ಮಾಡಲ್ಲ, ಸಿರಿವಂತನ ದುಡ್ಡು ಸೇರಬೇಕಾದವರಿಗೆ ಸೇರಿದರೆ ಒಳ್ಳೆಯದು ಅಂತ ಸಮಾಜಯಿಸಿದ್ದರು. ಹೀಗೆ ನಾನು ಮತ್ತು ನನ್ನ ಗೆಳಯ ಧೈರ್ಯ ಮಾಡಿ ರಾತ್ರಿ ಶಬ್ದ ಬರುವ ಕೋಣೆಗೆ ಕಡೆ ಹೋಗಿ ಬಂದಿದ್ದೆವು ಆದರೆ ಒಳಹೋಗುವ ಧೈರ್ಯ ಮಾಡಿರಲಿಲ್ಲ. ಧೈರ್ಯ ಮಾಡಿದ ಮರುದಿವಸ ನನ್ನ ಗೆಳೆಯನಿಗೆ ಜ್ವರ ಬಂದಿತ್ತು. ಕೋಣೆಯ ಹತ್ತಿರ ಹೋಗಿದ್ದಕ್ಕೆ ಜ್ವರ ಬಂದಿದೆ ಎಂದು ಟಂ ಟಂ ಆದಾಗ ೫-೬ ವಿದ್ಯಾರ್ಥಿಗಳು ಬಿಟ್ಟು ಉಳಿದವರು ಜಾಗ ಖಾಲಿ ಮಾಡಿದ್ದರು. ನಾವು ಹತ್ತನೆಯ ತರಗತಿ ಮುಗಿಸಿ ಬೇರೆ ಕಡೆ ಹೋಗಿದ್ದೆವು. ಮುಂದೆ ಸರಕಾರದ ಹಾಸ್ಟೆಲ್ ನೀತಿ ಬದಲಾವಣೆಯಿಂದ ಮತ್ತೆ ಹಾಸ್ಟೆಲ್ ಪ್ರಾರಂಭವಾಗಲೇ ಇಲ್ಲ. ಆದರೆ ಇದ್ದ ಮನೆಗೆ ಲಾಕ್ ಮಾಡಿ ಅದು ಹರಕು ಮುರುಕು ವಸ್ತುಗಳಿಗೆ ಮನೆಯಾಗಿತ್ತು. ಹೀಗೆ ೮ ವರ್ಷಗಳು ಕಳೆದ ಮೇಲೆ ನಾನು ಮತ್ತು ನಮ್ಮ ಅಮ್ಮ ಕೋಣೆಯಲ್ಲಿ ಇದ್ದ ನಮ್ಮ ಹಳೆಯ ವಸ್ತುಗಳು ಬೇಕಾದಾಗ ತಗೆದುಕೊಂಡು ಬರಲು ಕೋಣೆಯ ಬಾಗಿಲು ತರೆದಾಗ ಅಮ್ಮ ಅಂದೇ ಬಿಟ್ಟರು “ಯಾರೋ ನಿಧಿಗಾಗಿ ಅಗೆದಿದ್ದಾರೆ” ಎಂದು. ಸುಮಾರು 8 ಅಡಿಗಳವರೆಗೆ ಅಗೆದಿದ್ದರು!!!

ನಾನು ಕೇಳಿದ ಶಬ್ದ ಭ್ರಮೆನಾ? ಭ್ರಮೇನೇ ಆಗಿದ್ದರೆ ಎಲ್ಲಿರಿಗೂ ಕೇಳಿಸುತ್ತಿರಲಿಲ್ಲಾ. ನಿಧಿ ಬಗ್ಗೆ ಹೇಳಿದ ಕಥೆಗಳು ಅಜ್ಞಾನದ ಮತ್ತು ಮೂಢನಂಬಿಕೆಯ ಪರಮಾವದಿನಾ? ಮೇಲೆ ಹೇಳಿದಂತೆ ಆಸ್ತಿಕ ಮತ್ತು ನಾಸ್ತಿಕ ಇಬ್ಬರು ಸಾಧಕರೇ. ಆಕಾಶದ ತುದಿ ಮುಟ್ಟಿದವರಾರು? ಹಾಗೆ ಅನೇಕ ವಿಷಯಗಳು ನಮ್ಮ ಊಹೆಗೆ ನಿಲುಕಲಾರವು!!! ನಿಲುಕದ ವಿಷಯ ಸುಳ್ಳೇ?

ಅವರಿಗೆ ನಿಧಿ ಸಿಕ್ಕಿತ್ತಾ? ಏನಾಯಿತು ದಗ್ ದಗ್ ಎಂಬ ಶಬ್ದ? ಎಲ್ಲವೂ ನಿಗೂಢ!!!!!!

ಸೂಚನೆ:ಇದು ನೈಜ ಘಟನೆ

Leave a Reply