Sports

ಫುಟಬಾಲ್ ಮಾಂತ್ರಿಕ ಪೀಲೆ

By ಗುರು ಪ್ರಸಾದ

ಜಗತ್ತಿನ ಪ್ರಸಿದ್ಧ ಕ್ರೀಡೆಗಳಲ್ಲಿ ಅಗ್ರಸ್ಥಾನದಲ್ಲಿರುವುದು ಫುಟಬಾಲ್, ಅರೆ ಕ್ಷಣ ಮೈ ಮರೆತು ನಿಂತರೆ ಗೆಲುವಿನ ಕುದುರೆನ್ನ ಎದುರಾಳಿ ತನ್ನ ಹಿಡಿತಕ್ಕೆ ಪಡೆದು ಸಾಗುವ ಆಟ. ಎದುರಾಳಿಯ ವೇಗಕ್ಕೆ ಸರಿಸಾಟಿಯಾಗಿ ಛಲ ಬಿಡದೆ ನಿಲ್ಲುವ ಸಾಮರ್ಥ್ಯವುಳ್ಳವವನಿಗೆ ಗೆಲುವು ಕಟ್ಟಿಟ ಬುತ್ತಿ.ಫುಟಬಾಲ್ ಲೋಕಕ್ಕೆ ದೊಂಢಿನೋ ಎಂಬ ಹೆಸರು ಚಿರಪರಿಚಿತವೇನಲ್ಲಾ, ಆದರೆ ಫುಟಬಾಲ್ ಲೋಕದ ದಂತಕಥೆ ಎಂದು ಪ್ರಸಿದ್ದಿ ಹೊಂದಿರುವ “ಏಡ್ಸನ್ ಆರ್ಯಾಂಟ್ಸ್ ಡೊ ನಶ್ಚಿಮಿಯೆಂತೊ ” (Edson Arantes do Nascimiento) “ಪೀಲೆ” ರವರ ತಂದೆ.

ಬೆಳೆದದ್ದು ಬಡತನದ ಬೇಗೆಯಲ್ಲಾದರೂ ಸಹ ತಂದೆಯ ಆಟದ ಒಲವು ಪೀಲೆಗೂ ಒಲಿದುಬಂದಿತ್ತು. ಅಪ್ಪನಂತೆ ತಾನು ಒಬ್ಬ ಆಟಗಾರನಾಗಬೇಕು ಎಂದು ಬಯಸಿದರೂ ಬಡತನದ ಬರೆ ಅವರ ಕನಸಿಗೆ ಪೆಟ್ಟು ಕೊಟ್ಟಂತಿತ್ತು. ಆದರೂ ತನಗೆ ಸಿಕ್ಕ ಕವರ್, ಪೇಪರ್ ಮುಂತಾದವುಗಳನ್ನು ಒಗ್ಗೂಡಿಸಿ ಚಂಡಿನ ಆಕಾರದಂತೆ ಮಾಡಿ ಬರಿಗಾಲಿನಲ್ಲಿ ಫುಟಬಾಲ್ ಆಡುತ್ತ ಬಾಲ್ಯವನ್ನು ಕಳೆದರು. ಎಷ್ಟೇ ಕಷ್ಟ ಎದುರಾದರೂ ಛಲಬಿಡದೆ ತಮ್ಮ ಕನಸನ್ನು ಬೆನ್ನಟ್ಟಿ ಹೊರಟರು.

1957 ರಲ್ಲಿ ಇಡಿ ಫುಟಬಾಲ್ ಲೋಕವನ್ನೇ ಮೆಟ್ಟಿ ನಿಲ್ಲಲು ಮೊದಲ ಹೆಜ್ಜೆಯನಿಟ್ಟು ತಮ್ಮ ೧೫ನೇ ವಯಸ್ಸಿನಲ್ಲೇ ಸ್ಯಾಂಟೋಸ್ ಕ್ಲಬ್ ಪರವಾಗಿ ಆಡಿ ಮೊದಲ ಗೋಲ್ ಪಡೆದು ತನ್ನ ಆಗಮನವನ್ನು ಸಾರಿದವರು. ಅಂದಿನಿಂದ ಫುಟಬಾಲ್ ಲೋಕವೇ ಬೆರಗಾಗುವಂತೆ ಮಾಡುತೇನೆಂದು ಪಣ ತೊಟ್ಟಂತೆ, ಪ್ರತಿ ಪಂದ್ಯದಲ್ಲೂ ಅವರ ಆಟವನ್ನು ನೋಡಿ ಬಾಲ್ ಅವರ ಕಾಲಿಗೆ ಅಂಟುಕೊಂಡಂತೆ ಬಾಸವಾಗಿ ಬೆರಗಾದವರೂ ಅದೆಷ್ಟೋ ಜನರು ಎಂಬುದು ಇನ್ನೂ ತಿಳಿಯದು. ತನ್ನ ಚಮತ್ಕಾರದ ಆಟದಿಂದ ತನ್ನ ೧೭ನೇ ವಯಸ್ಸಿನಲ್ಲಿ ವಿಶ್ವ ಕಪ್ ಗೆದ್ದು ಬೀಗುತ್ತಾನೆ. ಬಡತನವೆಂಬುದು ಶಾಪವಲ್ಲ ಎಂದು ವಿಶ್ವಕ್ಕೆ ಸಾರಿ ಸಾರಿ ಹೇಳಿದ ಪೀಲೆ ತಮ್ಮ ಜೀವನದ ಪಥದಲ್ಲಿ ಸಾಧಿಸಿದ ಕೆಲವು ಮುಖ್ಯವಾದ ಅಂಶಗಳು

  • ತಮ್ಮ ಫುಟಬಾಲ್ ಕೆರಿಯರ್ ನಲ್ಲಿ ಒಟ್ಟು 1283 ಗೋಲ್ ಗಳನ್ನ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.
  • ನವೆಂಬರ್ 19, 1969 ರಂದು 1000 ಗೋಲ್ಗಳ ಸರದಾರ ಎಂದೆನಿಸ್ಸಿಕೊಂಡಿದ್ದಾರೆ, ಹಾಗೆ ಇದೆ ದಿನವನ್ನು ಸ್ಯಾಂಟೋಸ್ ನಲ್ಲಿ ಪೀಲೆ ದಿನ ಎಂದು ಸಹ ಆಚರಿಸುತ್ತಾರೆ
  • ತಮ್ಮ 20 ವರ್ಷದ ದೀರ್ಘ ಕಾಲಾವಧಿಯಲ್ಲಿ 3 ವಿಶ್ವ ಕಪ್ , 2 ಕ್ಲಬ್ ಚಾಂಪಿಯನ್ಷಿಪ್ ಹಾಗೂ 9 ಬಾರಿ ಸಾವ್ ಪೌಲೊ ಸ್ಟೇಟ್ ಚಾಂಪಿಯನ್ಷಿಪ್ ಗಳನ್ನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
  • ತಾನಾಡುವ ಆಟದಲ್ಲಿ ಮಿಂಚಿ “ಬ್ಲಾಕ್ ಪರ್ಲ್” ಎಂದು ಹೆಸರುವಾಸಿಯಾದವರು.
  • ತಮ್ಮ ವಿಶೇಷ ಶೈಲಿಯ ಆಟ, ಹಾಗೂ ಉತ್ತಮ ಮನೋಭಾವವುಳ್ಳ ಪೀಲೆ ಇಂದು ಪತಿಯೊಬ್ಬ ಫುಟಬಾಲ್ ಆಟಗಾರನ ರೋಲ್ ಮಾಡೆಲ್ ಎಂದರೆ ತಪ್ಪಾಗಲಾರದು.

“ಗೆಲುವೆಂಬುದು ಅನಿರೀಕ್ಷಿತವಲ್ಲ, ಕಷ್ಟ ನೋವು , ಹಗಲಿರುಳು ಪರಿಶ್ರಮ, ಕಠಿಣ ಅಭ್ಯಾಸ , ತ್ಯಾಗ, ಹಾಗೂ ನಾವು ಮಾಡುವ ಕೆಲಸದ ಮೇಲಿನ ನಿಷ್ಠೆಯ ಪ್ರತಿಫಲ ” . — ಪೀಲೆ.

“ನೀನು ಮೊದಲಿಗನಾದರೆ ನೀನು ಗೆದ್ದವನು , ತಪ್ಪಿ ಎರಡನೇಯ ಸ್ಥಾನ ಪಡೆದರೆ ನೀನೇನು ಅಲ್ಲಾ”. — ಪೀಲೆ .

Categories: Sports

Tagged as: ,

Leave a Reply