news

ವಿಜಯಪುರದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ – ಬೊಮ್ಮನಜೊಗಿ

By ವಿಠಲ. ಆರ್. ಯಂಕಂಚಿ , ಬೊಮ್ಮನಜೊಗಿ. 7892666246

 

ಮಾನ್ಯ ಜಿಲ್ಲಾದಿಕಾರಿಗಳು ಇದೆ ಶನಿವಾರ 20/2/2021ರಂದು ದೇವರ ಹಿಪ್ಪರಗಿ ತಾಲೂಕಿನಿಂದ 10ಕೀಲೋ ಮೀಟರ್ ದೂರದಲ್ಲಿರುವ ಬಮ್ಮನಜೋಗಿಯಲ್ಲಿ ವಾಸ್ತವ್ಯ ಇಟ್ಟುಕೊಂಡಿರುವದು ಗ್ರಾಮಸ್ಥರಿಗೆ ಹೆಮ್ಮೆಯ ವಿಷಯವೇ.

ಗ್ರಾಮ ವಾಸ್ತವ್ಯ ಕಾಟಾಚಾರವಾಗದೆ ಊರಿನ ಸಮಸ್ಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಸಹಕರಿಸಿ ಊರಿನ ಜನರಿಗೆ ಅನುಕೂಲ ಮಾಡಬೇಕು ಎಂದು ಊರಿನ ಯುವಕ  ವಿಠಲ ಯಂಕಂಚಿಯವರು ಕೇಳಿಕೊಂಡಿದ್ದಾರೆ.

ಮಾನ್ಯ ಜಿಲ್ಲಾದಿಕಾರಿಗಳು ಊರಿನ ಮೂಲಭೂತ ಸೌಲಭ್ಯಗಳ ಬಗ್ಗೆ ಬಹಳಷ್ಟು ಮೂತುವರ್ಜಿವಹಿಸಿ ಕೆಲಸಗಳನ್ನು ಮಾಡಿಕೊಡಿಸಬೇಕು.

ಊರಿನ ಪ್ರಮುಖ ಸಮಸ್ಯೆಯಂದರೆ :—
  • ಶೌಚಾಲಯ:—ನಮ್ಮ ಗ್ರಾಮದ ಶೌಚಾಲಯವೂ ಮುಂದಿನ ಊರುಗಳಿಗೆ (ಬಮ್ಮನಜೋಗಿ ತಾಂಡಾˌಇಬ್ರಾಹಿಂಪೂರˌಜಾಲವಾದ)ಹೋಗುವ ರಸ್ತೆಯ ಬದಿಗಿರುವದರಿಂದ ನಮ್ಮ ಗ್ರಾಮದ ಮಹಿಳೆಯರಿಗೆ ಮೂಜುಗರದ /ಬಹಳಷ್ಟು ಅಸಹ್ಯಕರವಾದ ವಾತಾವರಣ ಸೃಷ್ಟಿಯಾಗುತ್ತಿದೆ. ವಾಹನಗಳು ಹೋಗುವಾಗ ಬರುವಾಗ ಮಹಿಳೆಯರು ತಮ್ಮ ಪ್ರಾಣವನ್ನು  ಕೈಯಲ್ಲಿ ಹಿಡಿದುಕೊಂಡು ಶೌಚಾಲಯಕ್ಕೆ ಹೋಗಬೇಕಾಗಿದೆ. ದಯಾಳುಗಳಾದ ತಾವು ಇದನ್ನು ಆದಷ್ಟು ಬೇಗ ಮಾಡಿಸಿ ಕೊಡಬೇಕೆಂದು ತಮ್ಮಲ್ಲಿ ಕೈ ಮುಗಿದು ಮನವಿ ಮಾಡಿಕೊಳ್ಳುತ್ತೆನೆ.

  • ಚರಂಡಿ:—ಗ್ರಾಮದ ಸೂತ್ತಲೂ ಚರಂಡಿಯ ವ್ಯವಸ್ಥೆಯಿದ್ದರು ಅದನ್ನು ಸ್ವಚ್ಛಗೊಳಿಸುವಂತೆ ಯಾರು ಹೇಳಲಾರದಂತಹ ಸ್ಥೀತಿ ನೀರ್ಮಾಣವಾಗಿದೆ. ಪಂಚಾಯಿತಿ ಅಭಿವ್ರುದ್ದಿ ಅದಿಕಾರಿಗಳಿಗೆ ಹೇಳಿದರೆ ಅವರು ನಮ್ಮ ಗ್ರಾಮದ ಕೆಲವೊಬ್ಬರಿಗೆ ಹೇಳಿ  ಜಗಳಾ ಹಚ್ಚುವ ಕೇಲಸ ಮಾಡುತ್ತಿದ್ದಾರೆ.ಸುಖಾಸುಮ್ಮನೆ ಗ್ರಾಮದಲ್ಲಿ ಚರಂಡಿಯ ಸ್ವಚ್ಛ ಮಾಡುವದರ ಸಲುವಾಗಿ ಜಗಳಾಡುವದು ಸರಿಯಲ್ಲ. ಇದನ್ನು ಸಹ ತಾವು ಚರಂಡಿಯ ಸ್ವಚ್ಛತೆ ಯಾರಿಗೆ ಸಂಬಂದಿಸಿದ್ದು ಎಂದು ಗ್ರಾಮಸ್ಥರಿಗೆ ಹೇಳಿ ಬಗೆಹರಿಸಬೇಕು.

  • ಶಾಲಾ ಕೊಠಡಿ:—ಬಮ್ಮನಜೋಗಿ ಸರಕಾರಿ ಶಾಲೆ ಎಂದರೆ ದನದ ಕೊಟ್ಟಿಗೆ ಎಂದು ಹೇಳುವಂತಹ ವಾತಾವರಣ ಸೃಷ್ಟಿಯಾಗಿದೆ. ಇದನ್ನು ನೋಡಿದರೆ ತಮ್ಮ ಮನಸ್ಸಿಗೆ ನೋವಾಗಬಹುದು ಎಂದು ನನ್ನ ಬಾವನೆ. ನಮ್ಮ ಗ್ರಾಮದವರಿಗಂತು ಅದು ವಾಸಿಯಾಗದ ಖಾಯಿಲೆಯಂತಾಗಿದೆ. ಶಾಲೆಯ ವಿಸ್ತೀರ್ಣವನ್ನು ನೋಡಿˌ ಅಳಿಸಿ ಹದ್ದೆ ಹಾಕಬೇಕು ಮತ್ತು ಇಗ 2 ರೂಮ್ ಗಳು ಕಟ್ಟಿದ್ದಾರೆˌ2 ರೂಮ್ ಗಳು ಕಟ್ಟಲು ಪ್ರಾರಂಬಿಸಿದ್ದಾರೆˌ ಇನ್ನು 4 ರೂಮ್ ಗಳ ಕೊರತೆ ನಮ್ಮ ಶಾಲೆಗಿದೆ. ಮತ್ತು ಅಡುಗೆ ಕೊಣೆಯೂ ಸಹ ಇಲ್ಲದಾಗಿದೆ. ನಮ್ಮ ಶಾಲೆಯಲ್ಲಿ 1 ರಿಂದ 8ನೇ ತರಗತಿಯ ಸುಮಾರು 320ರಿಂದ 350ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಓದುತ್ತಿರುವದರಿಂದ ಅವರ ಕಲಿಕೆ ಬಹಳಷ್ಟು ಮುಖ್ಯವಾದುದ್ದಾಗಿದೆ. ಇನ್ನು ಹಲವಾರು ಮಕ್ಕಳ ಪಾಲಕರು ಮಕ್ಕಳ ಭವಿಷ್ಯವನ್ನು ಹಾಳ ಮಾಡಬಾರದೆಂದು  ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸಿ ಬಿದಿಗೆ ಬಂದಿದ್ದಾರೆ.  ಇಂತಹ ವಿಷಮತೆಯ ವಾತಾವರಣದಲ್ಲಿ  ಸರಿಯಾದ ಸಮಯಕ್ಕೆ ಮಳೆಯಿಲ್ಲ ˌಬರಗಾಲ ಬೇರೆ ˌ ಈ ಸಾರಿ  ಮಳೆ ಹೆಚ್ಟಾಗಿ ಬೆಳೆಗಳು ಹಾಳಾಗಿವೆ ಹಾಗೂ ಕೊವೀಡ್ ನಿಂದ ಜನರಿಗೆ ಉದ್ಯೋಗನು ಇಲ್ಲದಂತಾಗಿ ಮಕ್ಕಳ ಶಾಲಾ ಶುಲ್ಕ ಕಟ್ಟಲಾಗದೆ ನರಳಾಡುವಂತ್ತಾಗಿದೆ. ಆದ್ದರಿಂದ ನಮ್ಮ ಶಾಲೆಯ ಕೊಠಡಿಗಳನ್ನು ಸರಿಪಡಿಸಿ ಮಕ್ಕಳಿಗೆ ಇಲ್ಲಿಯೇ ಒಳ್ಳೆಯ ಶಿಕ್ಷಣ ದೊರೆಯುವಂತೆ ಮಾಡಬೇಕು.ಬಡ ಪಾಲಕರ ರಕ್ಷಣೆ ಮಾಡುವದು ನಿಮ್ಮ ಹೋಣೆಯಾಗಿದೆ ಎಂದು ಹೇಳುತ್ತೆನೆ.  ಕೇವಲ ಶಾಲೆಯ ಕೊಠಡಿಗಳ ಕೊರತೆ ಇದ್ದರೆ ನಡೆಯುತ್ತಿತ್ತು ಅವುಗಳಿಗೀಂತ ಮುಖ್ಯವಾದದ್ದು ಶಾಲಾ ಮಕ್ಕಳಿಗೆ ಕೂಡಿಯಲು ನೀರಿನ ವ್ಯವಸ್ಥೆ ಇಲ್ಲ. ನಮ್ಮ ಗ್ರಾಮದ ಬಹು ಸಂಖ್ಯೆಯ ಜನರು ತೋಟದ ವಸ್ತಿಯಲ್ಲಿ ಇರುವದರಿಂದ ಮಕ್ಕಳಿಗೆ ಶಾಲೆಯಲ್ಲಿ ಕೂಡಿಯಲು ನೀರು ಬಹಳಷ್ಟು ಬೇಕಾಗುತ್ತದೆ.ಅದರ ವ್ಯವಸ್ಥೆ ಮಾಡಬೇಕು. ಶಾಲಾ ಮಕ್ಕಳಿಗೆ ಇವುಗಳೆಲ್ಲವುಗಳಿಗೀಂತ ಮುಖ್ಯವಾದದ್ದು ಶಾಲಾ ಶೌಚಾಲಯವಾಗಿದೆ.ಇದರ ವ್ಯವಸ್ಥೆಯು ಮಾಡಿ ಮಕ್ಕಳ ಮಾನ —ಪ್ರಾಣ ಉಳಿಸಿಕೊಡಬೇಕು.

 

  • ಕೆರೆಯ ಸಂರಕ್ಷಣೆ:—ಸೂತ್ತ ಮೂತ್ತಲಿನ ಊರುಗಳಿಗೆ ಮತ್ತು ದನಕರುಗಳಿಗೆ ಅನುಕೂಲವಾಗುವಂತೆ ನಮ್ಮ ಗ್ರಾಮದಲ್ಲಿ ಸುಮಾರು 100 ಹೆಕ್ಟರ್ ಕೆರೆ ನಿರ್ಮೀಸಿದ್ದಾರೆ. ಅದರ ಆಳವನ್ನು /ಹೂಳನ್ನು ತೆಗೆದು ˌಬಹಳಷ್ಟು ನೀರು ನಿಲ್ಲುವಂತೆ ವ್ಯವಸ್ಥೆ ಮಾಡಿಸಬೇಕು.ಮತ್ತು ಕೆರೆಯ ಓಡು (ಬದು) ಅಲ್ಲಲ್ಲಿ ಬೀರುಕು ಬೀಟ್ಟಿರುವದರಿಂದ ಗ್ರಾಮದ ಜನರಲ್ಲಿ ಬಯದ ವಾತಾವರಣ ಸೃಷ್ಟಿಯಾಗಿದೆ ಹಾಗಾಗಿ ಕೆರೆಯ ಓಡ್ಡು ಓಡೆದು ನೀರು ಊರೋಳಗೆ ಹೋಗದಂತೆ ಕೆರೆಯ ಕೆಳಗಡೆ ಕಾಂಕ್ರೀಟ್ ಗೊಡೆ ನಿರ್ಮಿಸಬೇಕು. ಕೆರೆಯಲ್ಲಿ ಸೂತ್ತಮೂತ್ತಲಿನ ಊರಿನ ಬಾವಿಗಳು ಇರುವದರಿಂದ ಬಾವಿಯಲ್ಲಿ ಹುಡುಗರು ಈಜಾಡುವದರಿಂದ ಅದೇ ನೀರು ಗ್ರಾಮಸ್ಥರು ಕೂಡಿಯಬೇಕಾಗಿದೆ.ಮತ್ತು ಕೆರೆಯಲ್ಲಿ ಮಲಿನವಾದ ನೀರು ಬಾವಿಯೊಳಗೆ ಸಣ್ಣಗೆ ಬಸಿದುಹೋಗಿರುವದರಿಂದ ನೀರು ಕಲೂಷಿತವಾಗಿರುತ್ತದೆ. ಅದೇ ನೀರು ಕೂಡಿಯುವದರಿಂದ ಗ್ರಾಮದ ಜನರ ಆರೋಗ್ಯವೂ ಸಹ ಕೇಡುತ್ತಿದೆ.  ಇದನ್ನು ಸಹ ಸರಿಪಡಿಸಬೇಕು.

 

  • ಹೋಲಗಳಿಗೆ ದಾರಿ:—ಕೆಲವೊಂದು ದಾರಿಗಳು ಮಳೆ ಬಂದರೆ ಸಾಕು ಮೊಣಕಾಳವರೆಗೂ ತಗ್ಗುಗಳು ಬೀಳುತ್ತವೆ.ಅಂತಹ ಸಮಯದಲ್ಲಿ ತೋಟಕ್ಕೆ ಹೋಗುವುದೆ ಆಗುವದಿಲ್ಲ. ತೋಟದಲ್ಲಿರುವವರು ಊರೋಳಗೆ  ಬಂದು ದಿನಸಿ ಸಾಮಾನುಗಳನ್ನು ಒಯ್ಯಲು ಬಂದು ಕೆಸರಲ್ಲಿ ಸಿಕ್ಕು ಒದ್ದಾಡಿದ ಸಾಕಷ್ಟು ಸನ್ನಿವೇಶಗಳಿವೆ ಮಾದರ ಗೆರಿ ಮೂಲಿಯಿಂದ ಮಣೂರ ವರೆಗೆˌಮಾದರಗೆರೆ ಮೂಲಿಯಿಂದ ಶ್ರೀಮಂತ ಬಿರಾದಾರ ಹೋಲದ ವರೆಗೆˌಹೋಸುರದಿಂದ ಅಡೇಪ್ಪ ಮುರಡಿ ಮತ್ತು ಕೇಸುರಾಯ ಲಗಶೇಟ್ಟಿ ಅವರ ಹೋಲದವರೆಗೆ. ಕೇಸುಕಾಯ ನಾವಿ ಇವರ ಹೋಲದಿಂದ ಮೇಟಗಾರ ಹೋಲದವರೆಗೆ ˌಊರಿನಿಂದ ಕೆರೆಯ ವರೆಗೆ. ಇದನ್ನು ಸಹ ಪಂಚಾಯಿತಿ ಇಂದಾಗಲಿ ˌಶಾಸಕರ ಅನುದಾನದಿಂದಾಗಲೂ ಕೆಲಸ ಮಾಡಿ ಕೊಡಬೇಕು.

 

  • ಅರಣ್ಯ ಭೂಮಿ ಮತ್ತು ಗೋಮಾಳಗಳನ್ನು ಅಳತೆ ಮಾಡಿ ಅವುಗಳನ್ನು ಒತ್ತುವರಿಯಾಗದಂತೆ ತಂತಿ ಬೇಲಿ ಹಾಕುವ ವ್ಯವಸ್ಥೆಯಾಗಬೇಕಿದೆ.ಯಾಕೆಂದರೆ ಬಹಳಷ್ಟು ಖರ್ಚು ಮಾಡಿ ಅಲ್ಲಿ  ಗಿಡಗಳನ್ನು ನೇಡಲಾಗಿದ .ನೀವು ಸಹ ಹೀಗೆ ಬೀಟ್ಟರೇ  ದನಕರುಗಳಿಗೆ ಮೇಯಲು ಮುಂದಿನ ದಿನಮಾನಗಳಲ್ಲಿ ಜಾಗವೇ ಇಲ್ಲದಂತ್ತಾಗುತ್ತದೆ. ಆದ್ದರಿಂದ ಹಾಗಾಗದಂತೆ ತಡೆದು ಬೇಲಿಯ ವ್ಯವಸ್ಥೆಯನ್ನು ಮಾಡಬೇಕಾಗಿದೆ.
          ಜಿಲ್ಲಾದಿಕಾರಿಗಳ ಗ್ರಾಮ ವಾಸ್ತವ್ಯ ಕೇವಲ ಹೇಸರಿಗಷ್ಟೆ ಆಗದೆ ˌಹಳ್ಳಿಯ ನೈಜವಾದ ಸಮಸ್ಸ್ಯೆಗಳಿಗೆ ಪರಿಹಾರ ವದಗಿಸಿದರೆ ಹಳ್ಳಿಯ ಜನರ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ.

Categories: news

Leave a Reply