ರಾಜ್ಯದಲ್ಲಿ ಅನೇಕ ಜನರು ಶಿಕ್ಷಣದಲ್ಲಿ ಮತ್ತು ಸಾಮಾಜಿಕವಾಗಿ ಹಿಂದೆ ಉಳಿದಿದ್ದಾರೆ ಅದರಲ್ಲಿ ಸಂಶಯಬೇಡ. ಅವರೆಗೆಲ್ಲರಿಗೂ ಶಿಕ್ಷಣ ಕೊಡಿಸುವುದು ಮೊದಲ ಆದ್ಯತೆ. ಅಂಥವರನ್ನು ಹುಡುಕಿ ಸರ್ಕಾರ ಅವರಿಗೆ ಸೌಲತ್ತನ್ನು ಕೊಡಬೇಕು. ತಮ್ಮ ಜಾತಿಗೆ ಮೀಸಲಾತಿ ಕೇಳುವುದು ಅವರ ಹಕ್ಕು. ಆದರೆ ಇಂದು ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಬೇಲಿಯೇ ಎದ್ದು ಹೊಲ ಮೇಯಿದಂತಿದೆ. ಮೀಸಲಾತಿ ಹೋರಾಟದಲ್ಲಿ ಸಚಿವರು ಶಾಸಕರು ಮತ್ತು ಯಾವದೇ ಸಂವಿಧಾನ ಸ್ಥಾನದಲ್ಲಿ ಇರುವವರು ಭಾಗಿಯಾಗಕೂಡದು. ಕಾರಣ ಅವರು ತಗೆದುಕೊಂಡಿರುವ ಪ್ರಮಾಣ ಏನಂದರೆ ನಾವು ಪಕ್ಷಪಾತಿಗಳಾಗುವದಿಲ್ಲ ಮತ್ತು ಜಾತಿ ಭೇದ ಮಾಡುವದಿಲ್ಲ. ಆದರೆ ಇಂದು ಸಚಿವರೇ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಜಾತಿಯವರಿಗೆ ಮೀಸಲಾತಿ ಕೊಡಿಸಿದರೆ ಸಣ್ಣ ಸಣ್ಣ ಜಾತಿಗಳಲ್ಲಿ ಶಿಕ್ಷಣದಿಂದ ವಂಚಿತರಾದ ಬಡವರ ಪಾಡೇನು?
ಇಂದಿನ ಸಚಿವರು,ಶಾಸಕರು ತಾವು ಹೇಗೆ ಆಯ್ಕೆಯಾಗಿದ್ದಾರೆ? ಕೇವಲ ತಮ್ಮ ಜಾತಿಯ ಮತಗಳ ಮೇಲೆ ಆಯ್ಕೆಯಾಗಿದ್ದಾರಾ? ಎಲ್ಲ ಜಾತಿಯ ಜನರು ಅವರಿಗೆ ಮತ ಹಾಕಿ ಇವತ್ತು ಅವರ ಅಭಿವೃದ್ಧಿ ಬಿಟ್ಟು ಕೇವಲ ತಮ್ಮ ಜಾತಿಗೆ ಬೆಂಬಲ ಕೊಡುವುದು ಎಷ್ಟು ಸಮಂಜಸ. ನೇರವಾಗಿ ಮತಹಾಕಿದವರಿಗೆ ಅನ್ಯಾಯ ಮಾಡಿದಹಾಗೆ. ನಿಮಗೆ ಕೇವಲ ನಿಮ್ಮ ಜಾತಿಯ ಪರ ನಿಲ್ಲುವ ತವಕ ಇದ್ದರೇ ಖಂಡಿತವಾಗಿ ನೀವು ಹೋರಾಟ ಮಾಡಬಹುದು ಆದರೆ ನಿಮ್ಮ ಸಂವಿಧಾನಿಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು. ಇಲ್ಲವಾದರೆ ಜನ ನಿಮ್ಮನ್ನು ಮುಂದಿನ ಚುನಾವಣೆಯಲ್ಲಿ ಸುಮ್ಮನೆ ಬಿಡುವುದಿಲ್ಲಾ!
ಮತ್ತೊಂದು ವಿಷಯ ನಿಮ್ಮ ರಾಜಕೀಯ ಮೈಲೇಜುಗಾಗಿ ನಿಮ್ಮ ಜಾತಿಯ ಬಡ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಿರಿ ಅಷ್ಟೇ . ಮೀಸಲಾತಿ ಹೋರಾಟದಲ್ಲಿ ಮೀಸಲಾತಿ ಬಗ್ಗೆ ಹೆಚ್ಚು ಒತ್ತುಕೊಟ್ಟು ಜನರಿಗೆಮೀಸಲಾತಿ ಬಗ್ಗೆ ಮನವರಿಕೆ ಮಾಡಿಕೊಡುವುದು ಹೋರಾಟಗಾರರ ಕರ್ತವ್ಯ. ಆದರೆ ಸುದ್ದಿಗೋಷ್ಠಿಯಲ್ಲಿ ಆಗುತ್ತಿರುವುದು ಕೇವಲ ವ್ಯಯಕ್ತಿಕ ಆರೋಪಗಳು. ಮುಖ್ಯಮಂತ್ರಿಗೆ ವಯಸ್ಸಾಗಿದೆ, ಅವರ ಮಗನ ಬಗ್ಗೆ ಹಗುರವಾಗಿ ಮಾತನಾಡುವುದು ಇದು ಯಾವ ಹೋರಾಟ? ಸಚಿವಗಿರಿ ಕೊಟ್ಟಿದ್ದರೇ ಹೋರಾಟಕ್ಕೆ ಬರುವ ಪ್ರಮನೆ ಇರಲಿಲ್ಲ ಅನಿಸುತ್ತೆ. ನೀವು ಸುಮಾರು ವರ್ಷಗಳಿಂದ ಶಾಸಕರಾಗಿ ಮತ್ತೆ ಎಲ್ಲ ಸದನಗಳನ್ನು ನೋಡಿ ಬಂದವರು ನಿಮ್ಮ ಸಮಾಜದ ಅಥವಾ ಬಡ ಜನರ ಸಲುವಾಗಿ ಯಾವದೇ ವಿದ್ಯಾಸಂಸ್ಥೆ ಪ್ರಾರಂಭಮಾಡಿಲ್ಲ. ಅದು ಸರ್ಕಾರದ ಅನುಧಾನ ಮೂಲಕ ಮಾಡಬಹುದಿತ್ತು. ಆದರೆ ನೀವೆಲ್ಲಾ ಮಾಡಿದ್ದು ದುಡ್ಡು ಮಾಡುವ ಕಾಸ್ಟ್ಲಿ ಶಿಕ್ಷಣ ಸಂಸ್ಥೆಗಳು ಅಲ್ವೇ?
Categories: news
