
ಉತ್ತರ ಕರ್ನಾಟಕದ ಜನತೆಗೆ ಹಠಯೋಗಿಗಳ ಬಗ್ಗೆ ಚಿರಪರಿಚಿತ. ಯೋಗಿಗಳು ಹಠ ಹಿಡಿದರೆ ಮುಗಿಯಿತು ಸ್ವತಃ ದೇವರೇ ಬಂದರು ಅವರ ಕಾರ್ಯ ಸಿದ್ದಿ ಆಗವವರೆಗೆ ಹಿಂದೆ ಸರಿಯುವ ಮಾತೆ ಇರಲಿಲ್ಲ.
ಬನ್ನಿ ಇವತ್ತು ನಮ್ಮ ರಾಜ್ಯದ ಹಠಯೋಗಿಯವರ ಬಗ್ಗೆ ತಿಳಿದುಕೊಳ್ಳೋಣ. ಇವರೇನು ಯೋಗಿ ಅಲ್ಲ ಆದರೆ ಇವತ್ತು ಸಾಮಾಜಿಕ ಮತ್ತು ಜನರ ಸೇವೆಗೆ ತೊಡಗಿಸಿಕೊಂಡ ರೀತಿ ನೋಡಿದರೆ ಇವರು ರಾಜಕಾರಿಣಿಯಲ್ಲ ಇವರು ಹಠ ಯೋಗಿನೇ ಇರಬೇಕು !!
ನಾಲ್ಕನೇ ಬಾರಿ ಮುಖ್ಯಮಂತ್ರಿ ಆಗಿ ಹೇಗೂ ಇದು ಕೊನೆಯ ಬಾರಿ ಇದೆ ಎಂದು ಇಂತಹ ಸಂದಿಗ್ದ ಸ್ಥಿತಿಯಲ್ಲಿ ಬೇರೆಯವರಿಗೆ ಜವಾಬ್ದರಿ ಹೊರಿಸಿ ಬಾಸ್ ಆಗಿ ಕುಳಿತಿಕೊಳ್ಳಬಹುದಿತ್ತು ಆದರೆ ಸಂಪೂರ್ಣವಾಗಿ ಎಲ್ಲಾ ಹೊಣೆಯನ್ನು ಹೊತ್ತು ಕರೋನ ವಿರುದ್ಧ ಹೋರಾಡುತ್ತಿರುವುದು ನೋಡಿದರೆ ಖಂಡಿತ ಆಶ್ಚರ್ಯ ಆಗದೆ ಇರದು.
ಮೊದಲ ಬಾರಿ WHO ಇದು ಸಾಂಕ್ರಾಮಿಕ ರೋಗವೇ ಅಲ್ಲ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಅಲ್ಲ ಎಂದು ಘೋಷಣೆ ಮಾಡಿದ್ದರು. ಮೊದಲ ಭಾರಿ ಚೀನಾದಲ್ಲಿ ನವೆಂಬರ್ ಅಲ್ಲಿ ಕಾಣಿಸಿಕೊಂಡ ಕರೋನ ಜನೆವರಿ ಕೊನೆಯ ವಾರದಲ್ಲಿ ನಮ್ಮ ದೇಶಕ್ಕೂ ಕಾಲಿಟ್ಟಿತ್ತು. ಅದಕ್ಕಿಂದ ಮುಂಚೆ ಒಂದು ವಾರ ಇದು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿತ್ತು. ಅಷ್ಟರಲ್ಲಿ ಕಾಲವು ಮಿಂಚಿ ಹೋಗಿತ್ತು. ಜಗತ್ತು ಕರೋನ ಹೊಡೆತಕ್ಕೆ ಸಿಕ್ಕಿಬಿಟ್ಟಿತ್ತು. ಕೇವಲ ಸ್ವಲ್ಪೇ ದಿವಸದಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಗಳು ದೇಶಕ್ಕೆ ಮತ್ತು ದೇಶದ ಜನರಿಗೆ ತೋಂದರೆ ಯಾಗದಂತೆ ತಗೆದುಕೊಂಡ ಕೆಲವು ನಿರ್ಧಾರಗಳು ಇಡೀ ಜಗತ್ತು ಕೊಂಡಾಡಿತ್ತು. ಅದಕ್ಕೂ ಬಲವಾದ ಕಾರಣವಿತ್ತು . ಜಗತ್ತಿನಲ್ಲಿ ಜನಸಂಖ್ಯೆಯಲ್ಲಿ ಎರಡನೆಯ ಅತಿ ದೊಡ್ಡ ದೇಶ. ಇಲ್ಲಿನ ಜನ ಸಂದಣಿ ಅನುಗುಣವಾಗಿ ನಮ್ಮ ದೇಶದಲ್ಲಿ ಇದೊಂದು ಹೆಮ್ಮಾರಿಯಾಗಿ ಕಾಡುವ ಲಕ್ಷಣವಿದೆ ಎಂದು ಅಮೇರಿಕಾ ಭವಿಷ್ಯ ನುಡಿದಿತ್ತು . ಅದಲ್ಲೆವನ್ನು ಮೀರಿ ಪ್ರಧಾನ ಮಂತ್ರಿಯವರು ತಗೆದುಕೊಂಡ ದಿಟ್ಟ ನಿರ್ಧಾರ ಕರೋನ ವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿ ಆಗಿದ್ದೆವು.
ಪ್ರಧಾನ ಮಂತ್ರಿ ತಗೆದುಕೊಂಡ ನಿರ್ಧಾರವನ್ನು ಸ್ವಾಗತಿಸುತ್ತಾ ರಾಜ್ಯದಲ್ಲಿ ಯಾವದೇ ಪರಿಸ್ಥಿತಿ ಎದುರಿಸಲು ನಮ್ಮ ರಾಜ್ಯದ ಮುಖ್ಯಮಂತ್ರಿಗಳು ತಯಾರಾಗಿ ಬಿಟ್ಟಿದ್ದರು. ಇದೊಂದು ಹೊಸ ಅನುಭವ , ಧರೆಗೆ ಒಮ್ಮೆಲೇ ಉರುಳಿದ ಮರದಿಂದ ತಪ್ಪಿಸಿಕೊಳ್ಳುವದಕ್ಕೆ ಎಷ್ಟು ಮಿಲಿಸೆಕೆಂಡ್ಸ್ ಸಿಗುತ್ತೆ? ಹಾಗೆ ಇಡೀ ರಾಜ್ಯವನ್ನು ಇದರಿಂದ ಕಾಪಾಡುವ ಮತ್ತು ಬೇಕಾಗುವ ಅಗತ್ಯತೆಗಳನ್ನು ಹೊಂದಿಸಿಕೊಳ್ಳುವುದು ಒಂದು ದೊಡ್ಡ ಸವಾಲಾಗಿತ್ತು. ಕೇವಲ ೨೧ ದಿವಸ , ಮಾಡಬೇಕಾದ ಕೆಲಸಗಳು ಸಾವಿರಾರು. ಒಂದು ಮೂಗಿಗೆ ಕಟ್ಟುವ ಮಾಸ್ಕ ಸಹಿತ ನಮ್ಮಲ್ಲಿ ಹೆಚ್ಚಿಗೆ ಇರಲಿಲ್ಲ. ಏಕೆಂದ್ರೆ ಅದರ ಅಗತ್ಯ ಅಷ್ಟು ಇರದೇ ಇರುವದರಿಂದ ಅದರ ಉತ್ಪತ್ತಿ ಕಡಿಮೆ ಇತ್ತು. . ಹಿಂತಹ ಕಠಿಣ ಪರಸ್ಥಿತಿಯಲ್ಲಿ ಕೊರೊನ ರೋಗದ ವಿರುದ್ಧ ಹೋರಾಡಲಿಕ್ಕೆ ವೈದ್ಯರ , ದಾದಿಗಳ, ಪೋಲೀಸರ ಮತ್ತು ವೈದ್ಯಕೀಯ ಉಪಕರಣೆಗಳು, ಸಲಕರಣೆಗಳು ಹೊಂದಿಸುವುದು ಮುಖ್ಯಮಂತ್ರಿಗೆ ಸವಾಲಾಗಿತ್ತು. ಕೇವಲ ೧೨ ರುಪಾಯಿಗೆ ಇದ್ದ ಮಾಸ್ಕ ಬೆಲೆ ೬೦ ಆಗಿತ್ತು. ಉತ್ತಮವಾದ ಮಾಸ್ಕ್ಗಳ ಬೆಲೆ ಗಗನಕ್ಕೆ ಹಾಗೆ ಅದರ ಕೊರೆತೆ ಹೇಳತೀರದು. ಇದರ ಕಥೆ ಒಂದು ಕಡೆ ಆದರೆ ಮತ್ತೊಂದು ಕಡೆ ವೈದ್ಯರು ಹಾಕುವ ಪಿ ಪಿ ಕಿಟ್ , ರೋಗಿಗಳಿಗೆ ಬೇಕಾಗುವ ವೆಂಟಿಲೇಟರ್,ಆಕ್ಸಿಜನ್ ಮತ್ತು ಆಸ್ಪತ್ರೆ ಕೊರತೆ ನೀಗಿಸಲು ಹರಸಾಹಸ ಪಟ್ಟಿದ್ದರು.
ಮೇಲೆ ಹೇಳಿದ ಎಷ್ಟೋ ಉಪಕರಣಗಳು ನಮ್ಮಲ್ಲಿ ತಯಾರಾಗುತ್ತಿರಿಲಿಲ್ಲ. ಅವುಗಳನ್ನು ತರಿಸುವುದು ಒಂದು ಕನಸಿನ ಮಾತಾಗಿತ್ತು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರು ನೀವು ಯಾವಾಗ ಎಲ್ಲವನ್ನು ತರಿಸಿಕೊಳ್ಳುತೀರಿ ಎಂದು ಪ್ರಶ್ನೆ ಬೇರೆ.
ಇದರ ಮದ್ಯದಲ್ಲಿ ನಮ್ಮ ರಾಜ್ಯದಲ್ಲಿ ಇದ್ದದ್ದು ಕೇವಲ ೪ ಪ್ರಯೋಗಾಲಯಗಳು!!!!
ಬೆಂಕಿ ನಿಂದಿಸಲು ನೀರು ಅಥವಾ ಕೆಮಿಕಲ್ ಬೇಕು. ಎರಡು ಇಲ್ಲದಿದ್ದರೆ ಹೇಗೆ ನಂದಿಸುವುದು. ಏನು ಇಲ್ಲದೆ ಹೆಮ್ಮಾರಿಯನ್ನು ಎದುರಿಸುವುದು ಹೇಗೆ? ಅದಕ್ಕೆ ಬೇಕಾಗುವ ಎಲ್ಲ ಸೌಕರ್ಯಗಳು ಕೆಲವೇ ದಿನದಲ್ಲಿ ಪೂರೈಸಿದ್ದರು. ಮುಖ್ಯಮಂತ್ರಿಗಳು ಮಾಡಿದ ಕೆಲ್ಸಗಳು ದೇಶದ ಜನರೇ ಶಬ್ಭಾಸ ಅಂದಿದ್ದರು.
ಲಾಕಡೌನ್ ಆದ ನಂತರ ಮೊದಲು ದೇಶದ ಪ್ರಧಾನಿ ಜೊತೆ ಮಾತುಕತೆ. ಆದ ನಂತರ ಸರಣಿ ಸಭೆಗಳು , ಹಗಲು ರಾತ್ರಿ ಎನ್ನದೆ ಕರೋನಾ ವಿರುದ್ಧ ಹೋರಾಟ ಶುರು ಮಾಡಿದ್ದರು. ಒಂದು ತರಹ ರಾಜ್ಯದಲ್ಲಿ ಶಂಖ ಉದಿಯಾಗಿತ್ತು. ಇನ್ನು ಕೇವಲ ಹೆಮ್ಮಾರಿ ವಿರುದ್ಧ ಗೆಲ್ಲುವದಾಗಿತ್ತು. ಇನ್ನೊಂದು ವಿಶೇಷ ವೇನೆಂದರೆ ದೇಶ ಲೊಕ್ಡೌನ್ ಆಗುವಕ್ಕಿಂತ ಮುಂಚನೇ ಒಂದು ವಾರ ನಮ್ಮ ರಾಜ್ಯ ಬಂದ ಆಗಿತ್ತು . ಏನು ಇದಕ್ಕೆಲ್ಲಾ ಕಾರಣ? ಮುಖ್ಯಮಂತ್ರಿಗಳು ರಾಜ್ಯದ ಪರಿಣಿತಿ ವೈದ್ಯರ ಸಮಿತಿ ರಚನೆ ಮಾಡಿ. ಅವರಿಂದ ಸಲಹೆಗಳನ್ನು ದೇಶಕ್ಕಿಂತ ಮೊದಲೇ ಪಡೆದುಕೊಂಡು, ರಾಜ್ಯದ ಜನರನ್ನು ಹೆಮ್ಮಾರಿಯಿಂದ ಕಾಪಾಡಲು ಹೆಜ್ಜೆ ಇಟ್ಟೆ ಬಿಟ್ಟಿದ್ದರು. ಸಮಿತಿ ರಚನೆ ಆದ ನಂತರ ಏನೆಲ್ಲಾ ಆಗಬೇಕು ಅದರ ಬಗ್ಗೆ ೨೪/೭ ಮಾಹಿತಿ ಪಡೆದುಕೊಂಡು ವಿರೋಧ ಪಕ್ಷದ ನಾಯಕರ ಜೊತೆ ಮಾತಾಡಿ ಎಲ್ಲವನ್ನು ವಿಸ್ತಾರವಾಗಿ ಹೇಳಿ , ಎಲ್ಲದಕ್ಕೂ ಅಪ್ಪಣೆ ಕೊಟ್ಟು ಕೇವಲ ಒಂದು ವಾರದಲ್ಲಿ ಕೊರೆತ ಇದ್ದ ಎಲ್ಲ ಸಲಕರಣೆಗಳು ಸಲೀಸಾಗಿ ಸಿಗುತ್ತಾ ಹೋದವು. ಎಷ್ಟೋ ರಾಜ್ಯಗಳು ಇನ್ನು ಏನು ಮಾಡಬೇಕು ಅನ್ನುವ ವೇಳೆಗೆ ಎಲ್ಲವನ್ನು ನಿಭಾಯಿಸಿ ಬಿಟ್ಟಿದ್ದರು.
ಕೇವಲ ೪ ಪ್ರಯೋಗಾಲಯಗಳು ಹೋಗಿ ೬೦ ಆಗಿದ್ದವು. ದಿನಂಪ್ರತಿ ಪರೀಕ್ಷೆಗಳು ಹೆಚ್ಚಿಗೆ ಮಾಡುವಲ್ಲಿ ಸಫಲರಾಗಿದ್ದರು. ಕೋವಿಡ್ ಸಲುವಾಗಿ ವಿಶೇಷ ಆಸ್ಪತ್ರೆಗಳು ತಯಾರಾಗಿದ್ದವು. ಚಿಕಿತ್ಸೆ ಪಡೆದುಕೊಂಡ ಬಂದ ರೋಗಿ ಹೇಳಿದ್ದು ನಾನು ಇರುವುದು ಭಾರತದಲ್ಲಿ ಅದು ವಿಶೇಷವಾಗಿ ಬೆಂಗಳೂರಲ್ಲಿ!! ಅಷ್ಟೊಂದು ಒಳ್ಳೆಯ ರೀತಿ ಚಿಕಿತ್ಸೆ ಅದಾಗಿತ್ತು. ಲೊಕ್ಡೌನ್ ಆದ ೧೦ ದಿವಸ ನಂತರ ಆಹಾರಕ್ಕಾಗಿ ಮತ್ತು ಮನೆಯ ಖರ್ಚಿಗಾಗಿ ಹಾಹಾಕಾರ. ಅಷ್ಟರಲ್ಲೇ ಎಲ್ಲವನ್ನು ಗಮನಿಸಿದ್ದ ಮುಖ್ಯಮಂತ್ರಿ, ಎಲ್ಲ ಇಲಾಖೆಗಳ ಮಂತ್ರಿಗಳ ಜೊತೆ ಮಾತುಕತೆ. ಇವಾಗಲು ಅಷ್ಟೇ ಯಾವ ಸಮಯ ಮತ್ತು ಯಾವ ದಿವಸ ಅನ್ನದೆ ಮ್ಯಾರಥಾನ್ ಸಭೆಗಳು. !! ಆಹಾರ ಇಲಾಖೆಗೆ ವಿಶೇಷ ಗಮನ ಹರಿಸಿ ಎಲ್ಲರಿಗು ರೇಷನ್ ಬರುವ ಹಾಗೆ ಮತ್ತು ಸರಿಯಾದ ಸಮಯದಲ್ಲಿ ತಲುಪಿಸುವಲ್ಲಿ ಯಶಸ್ವಿ ಆಗಿದ್ದರು. ಎಲ್ಲಿ ನೋಡಿದಲ್ಲಿ ಬಡವರ ಸಮಸ್ಸ್ಯೆಗಳು ಹೇಳತೀರದು . ಆಟೋ ಚಾಲಕರು , ನೇಕಾರರು , ರೈತರು , ಪೂಜಾರಿಗಳು ಹೀಗೆ ಹತ್ತು ಹಲವಾರು ಕರೋನ ಹೊಡೆತಕ್ಕೆ ಸಿಕ್ಕಿ ಬದುಕು ನಲುಗಿತ್ತು. ಅವರ ದೈನಿಂದಿನ ಬದುಕಿಗಾಗಿ ಸರಕಾರದ ನಿರೀಕ್ಷೆಯಲ್ಲಿ ಇದ್ದ ಜನರಿಗೆ ಮತ್ತೆ ಆಶಾಕಿರಣವಾಗಿದ್ದು ಇದೆ ರೈತ ಬಂಧು ಶ್ರಮಿಕರ ನಾಯಕ ಮತ್ತು ಬೂಕನಕೆರೆಯ ರಾಜ್ಯದ ಸೇವಕ ಯಡೆಯೂರೆಪ್ಪ.
ಕೆಲಸ ವಿಲ್ಲದೆ ಕಂಗಾಲ ಆಗಿದ್ದ ಜನರಿಗೆ ಹಲವಾರು ಯೋಜೆನಗಳ ಮೂಲಕ ತಾತ್ಕಾಲಿಕವಾಗಿ ಜನರ ಸಮಸ್ಸ್ಯೆ ಬಗೆಹರಿಸಿದ್ದರು. ಅದರಲ್ಲಿ ವಿಶೇಷವಾಗಿ ೫೦೦೦ ರುಪಾಯಿ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಹಾಗು ರೈತರಿಗೆ ಪರಿಹಾರ ಇಬ್ಬರ ಮುಖದಲ್ಲಿ ಮಂದಹಾಸ ಮೂಡಿತ್ತು. ಘೋಷಣೆ ಮಾಡುವದಲ್ಲದೆ ಅದನ್ನು ತಲಪಿಸವುದು ತೀರಾ ಕಷ್ಟ. ಅದನ್ನು ವ್ಯವಸ್ಥಿತವಾಗಿ ತಲಪಿಸುವಲ್ಲಿ ಯಶಸ್ವಿಯಾಗಿದ್ದರು.
ಸರಕಾರದ ಉದ್ಯೋಗಿಗಳ ಸಂಬಳವನ್ನು ಕಡಿತ ಗೊಳಿಸದೆ ಸರಿಯಾದ ಸಮಯಕ್ಕೆ ಸಂಬಳ ಕೊಟ್ಟ ರಾಷ್ಟ್ರದಲ್ಲಿ ಏಕೈಕ ಮುಖ್ಯಮಂತ್ರಿ ! ಇದು ಸರಕಾರ ನೌಕರರು ಹೇಳಿದ ಮಾತು! ಎರಡೆನೆಯ ಬಾರಿ ವಿರೋಧ ಪಕ್ಷಗಳ ಸಭೆ ಕರೆದಾಗ , ವಿರೋಧ ಪಕ್ಷದ ನಾಯಕರ ಹೊಗಳಿಕೆ ಯಾವ ಮಟ್ಟಕ್ಕೆ ಹೋಗಿತ್ತು ಎಂದರೆ “ನಮ್ಮ ಮುಖ್ಯಮಂತ್ರಿಗಳು ಆಧುನಿಕ ಬಸವಣ್ಣ “. ಹೊಗಳಿದ್ದು ವಿರೋಧ ಪಕ್ಷದ ನಾಯಕರು. ಇದರ ಮಧ್ಯೆ ಧರ್ಮ ಧರ್ಮ ಗಳ ಕಾವು ಜೋರಾಗಿತ್ತು. ಇದನ್ನು ಅತ್ಯಂತ ವೇಗವಾಗಿ ಗಮನಿಸಿ ಅದನ್ನು ಬೆಳಯುವದರಲ್ಲೇ ಚಿವುಟಿ ಹಾಕಿದ್ದರು. ತಮ್ಮ ಪಕ್ಷದ ಕೇಸರಿ ಕಲಿಗಳು ವಿರೋಧ ಮಾಡಿದರು ಮತ್ತೆ ನಮ್ಮ ನಾಯಕ ಮಾಡಿದ್ದು ಸರಿ ಇದೆ ಎನ್ನುವದಕ್ಕೆ ಹೆಚ್ಚು ಸಮಯ ತಗೆದುಕೊಳ್ಳಲಿಲ್ಲ. ಇದು ಒಬ್ಬ ನಾಯಕನಿಗಿರುವ ಮುಂದಾಲೋಚನೆ ಮತ್ತು ಗಟ್ಟಿತನ!
Categories: Articles
