news

ಮೆಟ್ರೋ ಮ್ಯಾನ್ ಶ್ರೀಧರನ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ!

ಯಾರು ಶ್ರೀಧರನ್? ಇಷ್ಟೊಂದು ಪ್ರಚಾರವೇಕೆ?

೧೯೩೨ ರಲ್ಲಿ ಕೇರಳದಲ್ಲಿ ಜನಿಸಿದ ಇವರು ದೇಶಕ್ಕೆ ಮಾಡಿದ ಕೆಲಸಗಳಿಗೆ ಭಾರತ ಸರ್ಕಾರ ಪದ್ಮಶ್ರೀ, ಪದ್ಮ ವಿಭೂಷಣ ಪ್ರಶಸ್ತಿ ಕೊಟ್ಟಿದೆ. ಹಿಂತಹ ದೊಡ್ಡ ಪ್ರಶಸ್ತಿ ಪಡೆದುಕೊಳ್ಳಲಿಕ್ಕೆ ಮುಖ್ಯವಾದ ಕಾರಣ “ದೆಹಲಿ ಮೆಟ್ರೋ” ಮತ್ತು ಕೊಂಕಣಿ ರೈಲ ಪ್ರಾಜೆಕ್ಟ್.

ಇವರು ಐ ಆರ್ ಎಸ್ ಅಧಿಕಾರಿ ಆಗಿದ್ದವರು. ೧೯೯೫ರಲ್ಲಿ ದೆಹಲಿ ಮೆಟ್ರೋ ಎಂಡಿ ಆದ ನಂತರ ಮಾಡಿದ ಯೋಜನೆಗಳು ಸರಿಯಾದ ಸಮಯಕ್ಕೆ ಮತ್ತು ಯೋಜನೆಗಾಗಿ ತಗೆದಿಟ್ಟ ಹಣವನ್ನು ಹೆಚ್ಚಿಸದೆ ಯೋಜನೆಗಳು ಪೂರ್ಣಗೊಳಿಸಿದ್ದಾರೆ. ದೇಶದ ನಗರಗಳು ವಾಹನ ಸಾಂದ್ರತೆಯಿಂದ ಕಷ್ಟದಲ್ಲಿ ಇದ್ದಾಗ ವಿಶ್ವದ ಅಗ್ರಗಣ್ಯ ದೇಶಗಳು ಬೇರೆ ಬೇರೆ ಸಾರಿಗೆ ವ್ಯವಸ್ಥೆ ಮಾಡಿಕೊಂಡಿದ್ದರು ಆದರೆ ನಮ್ಮ ದೇಶದಲ್ಲಿ ಕೇವಲ ಬಸ್ ಮೇಲೆ ಅವಲಂಬಿಸಿದ್ದಾಗ ನಾವು ಮೆಟ್ರೋ ಮಾಡುತ್ತೇವೆ ಎಂದು ಹೊರಟವರಿಗೆ ಸಿಕ್ಕ ಉತ್ತರ ಇದನ್ನು ಪೂರ್ಣಗೊಳಿಸಲು ೨೦ ವರ್ಷಗಳೇ ಬೇಕಾದೀತು! ಆದರೆ ಶ್ರೀಧರನ ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿ ಇಡೀ ದೇಶದ ಜನರು ಅದರಲ್ಲಿ ದೆಹಲಿ ಜನ ಸಂಭ್ರಮ ಪಡುವಂತೆ ಮಾಡಿದ್ದರು. ಇದರಿಂದ ಟ್ರಾಫಿಕ್ ಸಮಸ್ಸ್ಯೆ ವಿಪರೀತ ಕಡಿಮೆ ಆಗಿತ್ತು. ಇದನ್ನೆಲ್ಲಾ ಗಮನಿಸಿ ಪ್ರಾನ್ಸ ಸರ್ಕಾರ ಇವರಿಗೆ ಪ್ರಶಸ್ತಿ ಕೊಟ್ಟಿತ್ತು.

ಕೊಂಕಣಿ ರೈಲ್ ತುಂಬಾ ವಿಭಿನ್ನವಾದ ಯೋಜನೆ ಇದರಲ್ಲಿ ೯೩ ಟನಲ್ ಮತ್ತು ಅದು ೮೨ ಕಿಲೋಮೀಟರು ಮತ್ತು ಟನಲ್ ಮಾಡುವಾಗ ಮಣ್ಣು ಟನಲ್ ಮಾಡುವದಕ್ಕೆ ಸಾಥ್ ಕೊಟ್ಟಿರಲಿಲ್ಲ. ಈ ಯೋಜನೆ ಪೂರ್ಣವಾಗಿ ೭೬೦ ಕಿಲೋಮೀಟರು ಅಂಡ್ ೧೫೦ ಸೇತುವೆ. ದೇಶದಲ್ಲೇ ಅತಂತ್ಯ ಕಠಿಣ ಯೋಜೆನೆ ಇದಾಗಿತ್ತು. ಆದರೆ ಇವರ ಮುಂದಾಳತ್ವದಲ್ಲಿ ಹೆಚ್ಚಿನ ಹಣವನ್ನು ವಿನಿಯೋಗಿಸಿದೆ ಮತ್ತು ಸರಿಯಾದ ಸಮಯದಲ್ಲಿ ಯೋಜನೆಯನ್ನು ಪೂರ್ಣಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಕೊಚ್ಚಿ ಮೆಟ್ರೋ ನಾಲ್ಕು ವರ್ಷದಲ್ಲಿ ಮತ್ತು ಲಕ್ನೌ ೩ ವರ್ಷದಲ್ಲಿ ಪೂರ್ಣಗೊಳಿಸಿದ್ದಾರೆ. ಹೀಗೆ ಅನೇಕ ಕೆಲಸಗಳು ಶ್ರದ್ದೆಯಿಂದ ಮಾಡಿದ ಶ್ರೀಧರ ಅವರನ್ನು ದೇಶ ನೆನಪಿಸಿಕೊಳ್ಳುತ್ತೆ. ಇಂದು ದೇಶದಲ್ಲಿ ಮೋದಿ ಎಂಬ ಸುನಾಮಿ ಇದೆ. ವಿಶ್ವವನ್ನೇ ಮೋದಿ ನಾಯಕತ್ವಕ್ಕೆ ಉದೋ ಎಂದು ಜೈಕಾರ ಹಾಕುವಾಗ ಅನೇಕ ಮಹನೀಯರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇಂದು ಮೆಟ್ರೋ ಮ್ಯಾನ್ ಶ್ರೀಧರನ್ ಮೋದಿಯ ಕಾರ್ಯ ವೈಖರಿಯನ್ನು ನೋಡಿ ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ದೇಶಕ್ಕೆ ಒಳ್ಳೆಯ ಕೆಲಸಗಳು ಇವರಿಂದ ಆಗಲಿ ಎಂದು ಆಶಿಸೋಣ.

Categories: news

Tagged as: , ,

Leave a Reply