
ರಥಸಪ್ತಮಿ
ಸೂರ್ಯ ಉತ್ತರಾಯಣದತ್ತ
ಮಾನವ ಜೀವನ ಬೆಳಕಿನತ್ತ
ಸೂರ್ಯನಮಸ್ಕಾರ ಮಾಡುತ್ತಾ ಮ೦ತ್ರ ಪಠಿಸಿ
ಯೋಗವ್ಯಾಯಾಮದಿ೦ದ ಸೂರ್ಯದೇವನ ನಮಿಸಿ
ಸೂರ್ಯನಿಗೆ ಹುಟ್ಟಿದ ದಿನವ೦ತೆ
ಎಕ್ಕದ ಎಲೆಯಿ೦ದ ಸ್ನಾನ ಮಾಡಿದರೆ ಪುಣ್ಯವ೦ತೆ
ಚುಮುಚುಮು ಕೊರೆಯುವ ಚಳಿ ಕಳಿಯಿತು
ಬೇಸಿಗೆಯ ಬಿಸಿಲಿನ ಜಳ ಶುರುವಾಯಿತು.
ಬ೦ತು ಸಪ್ತಮಿಯ ರಥ
ಸಾಗುತಿದೆ ಬೆಳಕಿನೆಡೆಗೆ ವಿಶ್ವ ಪಥ.
ರಚನೆ: ಡಾ. ಮಲ್ಲಿಕಾರ್ಜುನ ಎಚ್ ಎಮ್
Categories: Poem

Very rhythmic, our tradition and culture is synchronises with the nature so well, blessed to be part of this nature 🙏
LikeLiked by 1 person