Articles

ಅಂಗೈಯಲ್ಲಿ ಆಪಲ್ ಹಿಡಿಸಿದ ಮಹಾನುಭಾವ – ಭಾಗ-2

ಸ್ಟೀವ್ ಸ್ಥಾಪಿಸಿದ ಕಂಪೆನಿಗಳೆಷ್ಟು?

ಸ್ಟೀವ್ ಹೋರಾಟ ಹೇಗಿತ್ತು?

ಅವರ ಪ್ರೇಯಸಿ ಹಾಕಿದ ಮೊಕದ್ದಮೆಯಲ್ಲಿ ಏನಾಯಿತು? ಅವರು ತನ್ನ ಹೆತ್ತ ತಾಯಿ ಮತ್ತು ತಂದೆಯನ್ನು ಬೇಟಿಯಾದರಾ?

ಆಧ್ಯಾತ್ಮಿಕ ಪ್ರವಾಸ ಮುಗಿಸಿಕೊಂಡ ಅಮೆರಿಕಾಕ್ಕೆ ಮರಳಿದ ಸ್ಟೀವ್ ಜಾಬ್ಸ್ ಮನಸ್ಸು ಸಾಕ್ಷತ್ಕಾರದ ಕಡೆ ಎಳೆಯುತ್ತಿತ್ತು. ಅದಕ್ಕಾಗಿ ದಿನಮಪ್ರತಿ ಧ್ಯಾನದಲ್ಲಿ ಮಗ್ನರಾಗಿತ್ತಿದ್ದರು. ಮತ್ತೆ ಹೆಳೆಯ ಕಚೇರಿಯಲ್ಲೇ ರಾತ್ರಿಯ ಪಾಳೆಯಲ್ಲಿ ಕೆಲಸ ಮುಂದುವರೆಸಿದರು ೧೯೪೬ರಲ್ಲಿ ಏನಿಯಾಕ್ ಹೆಸರಿನ ಪೂರ್ಣ ಪ್ರಮಾಣದ ಕಂಪ್ಯೂಟರ ಬಂದಿತ್ತು. ೧೯೭೦ ರ ಆಸುಪಾಸಿನಲ್ಲಿ ಅಮೇರಿಕಾದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಬೃಹದಾಕಾರದ ಕಂಪ್ಯೂಟರಗಳನ್ನು ಉಪಯೋಗಿಸುತ್ತಿದ್ದರು. ಇದನ್ನು ಪ್ರಾರಂಭ ಮಾಡಿದ್ದು ಐಬಿಎಂ. ಜನ ಸಾಮಾನ್ಯರಿಗೆ ಅನುಕೂಲವಾಗಲು ಪರ್ಸನಲ್ ಕಂಪ್ಯೂಟರಿನ ಅಗತ್ಯ ತುಂಬಾ ಇತ್ತು. ೧೯೭೪ರಲ್ಲಿ ಇಂಟೆಲ್ ಕಂಪನಿ ಜಗತ್ತಿನ ಮೊದಲ ೮೦೮೦ ಮೈಕ್ರೋಪ್ರೊಸೆಸ್ಸರ್ ಪರಿಚಯಿಸಿತು. ಈ ಸಮಯದಲ್ಲಿ ಅನೇಕ ಹೊಸ ಹೊಸ ಅನ್ವೇಷಣೆ ಅಮೇರಿಕಾದಲ್ಲಿ ನಡೆಯಿತು. ಇಂತಹ ಸಂಶೋಧನೆಗಳು ಸಂಚಲನ ಮೂಡಿಸಿದವು. ಸ್ಟೀವ್ ಗೆಳೆಯನೊಬ್ಬ ಎಚ್ ಪಿ ಯಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಬಿಲ್ ಗೇಟ್ಸ್ ಕಂಡು ಹಿಡಿದ ಬೇಸಿಕ್ ಮತ್ತು ಎಡ್ವರ್ಡನ ಆಲ್ಟೆರ್ ಬಗ್ಗೆ ತುಂಬಾ ಪ್ರಭಾವಿತನಾಗಿದ್ದ. ಅವನಿಗಿದ್ದ ಜ್ಞಾನ ನಾನು ಇದಕ್ಕಿಂತ ಒಳ್ಳೆಯ ಕಂಪ್ಯೂಟರ್ ತಯಾರಿಸಬಲ್ಲೆ ಎಂಬ ಆತ್ಮವಿಶ್ವಾಸವಿತ್ತು. ಅಂಥಹ ಆತ್ಮವಿಶ್ವಾಸದಿಂದ ಸ್ಟೀವ್ ಗೆಳೆಯ ವೊಜ್ ತನ್ನದೇ ಕಂಪ್ಯೂಟರ್ ಅಭಿವೃದ್ಧಿ ಪಡಿಸಿದರು. ಇದನ್ನು ಸ್ಟೀವ್ ಜಾಬ್ಸ್ಗೆ ತೋರಿಸಿ ಬೇಷ ಎನಿಸಿಕೊಂಡಿದ್ದನು. ಸ್ಟೀವ್ ಗೆಳೆಯನ ಕಂಪ್ಯೂಟರ್ ಟಾಕ್ ಆಫ್ ದಿ ಟೌನ್ ಆಗಿದ್ದು ಗಮನಿಸಿ ಇದನ್ನು ಮಾರಲು ಸೂಚಿಸಿದನು. ಅದಕ್ಕೆ ಅವನು ಒಪ್ಪಿಗೆ ಸೂಚಿಸಿದನು. ಇದೆ ಒಪ್ಪಿಗೆ ಮುಂದೆ ಇಬ್ಬರು ಗೆಳೆಯರು ಕೂಡಿಕೊಂಡು ಆಪಲ್ ಎಂಬ ಕಂಪನಿಯನ್ನು ಸ್ಥಾಪನೆ ಮಾಡಿದರು. ಕಂಪನಿಗೆ ಏನು ಹೆಸರಿಡಬೇಕು ಎಂದು ಯೋಚನೆಮಾಡಿ ಯಾವದು ಹೆಸರೇ ಸಿಗದಿದ್ದಾಗ ಸ್ಟೀವಗೆ ಆಪಲ್ ತುಂಬಾ ಇಷ್ಟವಂತೆ ಅದಕ್ಕೆ ಆಪಲ್ ಎಂದು ನಾಮಕರಣ ಮಾಡಿದ್ದರು .

ಗ್ಯಾರೇಜುನಲ್ಲಿ ಪ್ರಾರಂಭ ಮಾಡಿ ಸಣ್ಣ ಕಂಪನಿಗೆ ೫೦0 ಕಂಪ್ಯೂಟರ್ಗಳ ಆರ್ಡರ್ ಬಂದಿದ್ದು ಇಬ್ಬರಿಗೂ ತಮ್ಮ ಕಂಪನಿಯ ಬಗ್ಗೆ ಹೆಮ್ಮೆ ಆಗಿತ್ತು. ಆವಾಗಲೇ ೫೦೦ ಡಾಲರ್ಗೆ ಒಂದು ಕಂಪ್ಯೂಟರ್ ಮಾರಿದ್ದರು. ಅದಕ್ಕೆ ಆಪಲ್ 1 ಎಂದು ಹೆಸರಿಟ್ಟದ್ದರು. ಆದರೆ ಅವರ ಕಂಪನಿ ನೋಂದಾಯಿಸಿಕೊಂಡಿದ್ದು ಮೂರ್ಖರ ದಿನದಂದು ಅಂದರೆ ಏಪ್ರಿಲ್ ೧ ೧೯೭೬ರಲ್ಲಿ. ಆಪಲ್ ೨ ಆಪಲ್ 1 ಕ್ಕಿಂತ ಒಳ್ಳೆಯ ಕಂಪ್ಯೂಟರ್ ತಯಾರಿಸಲು ತಲ್ಲೀನರಾಗಿದ್ದರು. ಆಪಲ್ ೨ ಕೆಲಸ ಮುಗಿದ ನಂತರ ದುಡ್ಡಿನ ಬೇಟೆಗೆ ಇಳಿದ ಸ್ಟೀವ ಸುಮಾರು ಪಾಠಗಳನ್ನು ಕಲಿಯಬೇಕಾಯಿತು. ಕಾರಣ ಅವರಿಗೆ ಬೇಕಾದ ದುಡ್ಡು ಪಡೆದುಕೊಳ್ಳಲು ಸಾಕಷ್ಟು ಕಸರತ್ತು ಮಾಡಬೇಕಿತ್ತು. ಇಬ್ಬರು ಯುವಕರನ್ನು ನಂಬಿ ಹಣ ಹೂಡಲು ಯಾರು ಮುಂದೆ ಬರಲಿಲ್ಲ ಆದರೆ ಸ್ಟೀವ್ ತಮ್ಮ ಪ್ರಯತ್ನವನ್ನು ಮುಂದುವರಸೆ ಇದ್ದರು. ಹಣ ಹೂಡುತ್ತೇನೆ ಎಂದು ಮುಂದೆ ಬಂದರು ಕೊನೆ ಕ್ಷಣದಲ್ಲಿ ಬರುತ್ತಿರಲಿಲ್ಲ. ತನ್ನ ಛಲ ಬಿಡದೆ ಸತತ ಪ್ರಯತ್ನದಿಂದ ಮೈಕ್ ಎಂಬುವವರ ಮನ ಒಲಿಸಿ ೧೦೦೦ ಕಂಪ್ಯೂಟರ್ ತಯಾರಿಸಲು ಬೇಕಾದ ದುಡ್ಡನ್ನು ಪಡೆದುಕೊಂಡರು. ೧೯೭೪-೧೯೮೦ ರ ಸಮಯದಲ್ಲಿ ಅಮೇರಿಕಾದಲ್ಲಿ ಕಂಪ್ಯೂಟರ್ ಯುಗ ಆರಂಭಗೊಂಡರೇ ಭಾರತದಲ್ಲಿ ೧೯೭೭ರಲ್ಲಿ ಎಮರ್ಜೆನ್ಸಿ ಯುಗ ಆರಂಭವಾಗಿತ್ತು.! ಆಪಲ್ ೨ ಮಾರುಕಟ್ಟೆಯಲ್ಲಿ ಜನರನ್ನು ಸೆಳೆಯುದರಲ್ಲಿ ಸಫಲಕಂಡಿತು. ಬೇರೆ ಬೇರೆ ಕಂಪ್ಯೂಟರಗಳು ಮಾರುಕಟ್ಟೆಯಲ್ಲಿ ಇದ್ದರೂ ಆಪಲ್ ೨ ಮಾರಾಟವು ಬರಪೂರಕ್ಕೆ ಕಾರಣ ಆಪಲ್ ವಿನ್ಯಾಸ ನೋಡುವದಕ್ಕೆ ಸುಂದರವಾಗಿತ್ತು ನಿಜ ಆದರೆ ಅದನ್ನು ಯಾವದೇ ಟಿವಿಗೆ ಪ್ಲಗ್ ಮಾಡಬಹುದಿತ್ತು. ಅಷ್ಟೇ ಅಲ್ಲಾ ಹಾಡುಗಳನ್ನು ಕೇಳಬಹುದಿತ್ತು ಅದಕ್ಕೆ ಜನರ ಮನಸ್ಸನ್ನು ಗೆದ್ದಿತ್ತು. ಅದರ ಜೊತೆಗೆ ಅಡಕಗೊಂಡ ಕೀಲಿಮಣೆ ಇತ್ತು.

ವಿಶೇಷವಾಗಿ ಮೊದಲ ಬಾರಿಗೆ ಫ್ಲಾಪಿ ಡ್ರೈವ್ ಆಪಲ್ ೨ ಒದಗಿಸಿತ್ತು. ಗ್ಯಾರೇಜುಯಲ್ಲಿ ಪ್ರಾರಂಭವಾದ ಕಂಪನಿ ಅಮೆರಿಕದಲ್ಲಿ ಭವಿಷ್ಯದ ೫೦೦ ಕಂಪೆನಿಗಳಲ್ಲೊಂದು ಎಂಬ ಹಣೆಪಟ್ಟಿ ಪಡೆಯಿತು. ೧೯೭೯ ರಲ್ಲಿ ಕಂಪನಿ ಲಾಭನತ್ತ ಹೆಜ್ಜೆ ಹಾಕುವ ಮೂಲಕ ಸ್ಟೀವ್ ಕೋಟ್ಯಧಿಪತಿಯಾದರು. ಆಪಲ್ ಬರುವದಕ್ಕಿಂತ ಮುಂಚೆ ಪರ್ಸನಲ್ ಕಂಪ್ಯೂಟರ್ ಇರಲಿಲ್ಲ. ಅಮೆರಿಕಾ ಪೆರ್ಸನಲ್ ಕಂಪ್ಯೂಟರ ಮಾರುಹೋಗುವದಕ್ಕೆ ಕಾರಣ ಸ್ಟೀವ್ ಮತ್ತು ಅವನ ಗೆಳಯ ವಾಜ್ನಿ ! ತುಂಬಾ ಯಶಸ್ವಿ ಕಂಪನಿಯನ್ನು ಅಮೇರಿಕಾದಲ್ಲಿ ಉತ್ತುಂಗಕ್ಕೆ ಏರಿಸಿದ ಕೀರ್ತಿ ಸ್ಟೀವ್ ಸಲ್ಲುತ್ತದೆ. ಮುಂದೆ ಆಪಲ್ ೩, ಲಿಸಾ ,ಮ್ಯಾಕ ಹೀಗೆ ಅನೇಕ ಆವಿಷ್ಕಾರಗಳು ಆಪಲ್ ಸಂಶೋದನೆಯಲ್ಲಿ ತೊಡಗಿತು. ಉತ್ತಮ ರೀತಿಯಲ್ಲಿ ಕಂಪನಿ ಮುನ್ನುಗ್ಗುತ್ತಿರುವಾಗ ಕಂಪನಿಯನ್ನು ಷೇರು ಮಾರುಕಟ್ಟೆ ಪ್ರವೇಶ ಮಾಡುವ ಮೂಲಕ ಸಾರ್ವಜನಿಕ ಕಂಪೆನಿಯಾಯಿತು. ಅಮೇರಿಕ ಆರ್ಥಿಕದ ಹಿಂಜರಿತದಿಂದ ನರುಳುತ್ತಿದ್ದರೂ ಆಪಲ್ ಮಾತ್ರ ತನ್ನ ಷೇರನ್ನು ನಿರೀಕ್ಷೆಗಿಂತ ಹೆಚ್ಚಿಗೆ ಬಿಕರಿಮಾಡಿದರು. ಸ್ಟೀವ್ ಜಾಬ್ಸ್ ಜೇಬು ಝಣ ಝಣ್ ಕಾಂಚಾಣದಿಂದ ತುಂಬಿಹೋಗಿತ್ತು. ಆದರೆ ಷೇರು ಮಾರುಕಟ್ಟೆಗೆ ಬರುವಕಿಂತ ಮುಂಚೆ ಅವರಿಗೆ ಅವರ ಪ್ರೇಯಸಿಯಿಂದ್ ತೊಂದರೆಯಾಗಿತ್ತು. ಕಾರಣ? ಮದುವೆಯಾಗದೆ ತನ್ನ ಪ್ರೇಯಸಿಯಿಂದ ಕಾಣಿಕೆ ಲಿಸಾ!

ಆದರೆ ತನ್ನ ಮಗುವಲ್ಲ ಎಂದು ವಾದಿಸಿ ಡಿಎನ್ಎ ಪರೀಕ್ಷೆಯಲ್ಲಿ ಅವರದೇ ಮಗುಯೆಂದು ಮೊಕದ್ದಮೆಯಲ್ಲಿ ಸೋತು ನನ್ನ ಮಗಳು ಎಂದು ಒಪ್ಪಿಕೊಂಡಿದ್ದರು. ಆಪಲ್ ೨, ಆಪಲ್ ೩ ಆಯಿತು ಮುಂದೆ ಜನರ ನಿರೀಕ್ಷೆ ತುಂಬಾ ಇತ್ತು. ಕಂಪನಿಯ ಮಾರುಕಟ್ಟೆಯನ್ನು ವೃದ್ಧಿಸಲು ಸಂಶೋಧನಗಳೇನು ನಡೆದವು. ಅತ್ಯಂತ ಯಶಸ್ವಿಯಾಗಿ ಅಮೇರಿಕಾದಲ್ಲಿ ಮನೆಮಾತಾಗಿದ್ದಾ ಆಪಲ್ ೨ ಮೀರಿಸುವ ಕಂಪ್ಯೂಟರ ಜಗತ್ತಿಗೆ ಪರಿಚಯಿಸಬೇಕು ಎಂದು ಮ್ಯಾಕ್ ಮೇಲೆ ಆಸಕ್ತಿಯಿಂದ ಕೆಲಸ ಮಾಡಿದ್ದರು. ಕೇವಲ ತನ್ನ ೨೭ನೇ ವಯಸ್ಸಿಗೆ ಅಮೇರಿಕಾದ ನಿಯತಕಾಲಿಕ ಟೈಮ್ಸ್ ಮುಖಪುಟದ ಮೇಲೆ ಸ್ಟೀವ್ ಫೋಟೋ ಹಾಕಿದ್ದರು. ಇದೊಂದು ಬಾರಿ ಗಮನಸೆಳೆದಿತ್ತು. ಇಲ್ಲಿ ಗಮನಿಸಿ ಮೈಕ್ರೋಸಾಫ್ಟ್ ಬಿಲ್ ಗೇಟ್ಸ್ ಫೋಟೋ ಟೈಮ್ಸ್ ಪತ್ರಿಕೆಯಲ್ಲಿ ೨ ವರ್ಷದ ನಂತರ ಬಂದಿತ್ತು! ಮ್ಯಾಕ್ ಮೇಲೆ ತುಂಬಾ ಆಶೆಯಿಟ್ಟಿದ್ದ ಸ್ಟೀವಗೆ ಮೊದ ಮೊದಲು ನಿರಾಶೆಯಾಗಲಿಲ್ಲ. ಆದರೆ ಸ್ವಲ್ಪ ಸಮಯದ ನಂತರ ಜನರು ಮ್ಯಾಕ್ ಮತ್ತು ಇತರ ಆಪಲ್ ಕಂಪನಿಯ ಇನ್ನಿತರ ವಸ್ತುಗಳಿಗೆ ನಿರಾಸಕ್ತಿ ತೋರಿಸಿದರು.

ನಿರಾಶಕ್ತಿ ತೋರಿಸಲಿಕ್ಕೆ ಕಾರಣ ಪ್ರಾಡಕ್ಟ್ಸ್ ಸರಿ ಇರಲಿಲ್ಲ ಮತ್ತು ಮೈಕ್ರೋಸಾಫ್ಟ್ ಜನರಿಗೆ ಉಪಯೋಗಿಸುವದಕ್ಕೆ ಸರಳ ಮತ್ತು ಯಾವದೇ ಸಮಸ್ಸ್ಯೆ ಇಲ್ಲ ಎಂದು ಜನರು ಮೈಕ್ರೋಸಾಫ್ಟ್ ಹಿಂದೆ ಬಿದ್ದರು. ಮೈಕ್ರೋಸಾಫ್ಟ್ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ವಿಂಡೋಸ್ ಮೂಲಕ ಮಾರ್ಕೆಟನ್ನು ತನ್ನ ಸುಪರ್ದಿಗೆ ತಗೆದುಕೊಂಡರು. ಇತ್ತ ಆಪಲ್ ಕಂಪನಿ ಅನೇಕ ಬದಲಾವಣೆ ಕಂಡಿತು. ಮ್ಯಾಕ್ ವಿಫಲವಾದ ನಂತರ ಆಪಲ್ ಕಂಪನಿ ಸ್ಥಿತಿ ತೀರಾ ಹದೆಗೆಟ್ಟಿತು. ಎಲ್ಲ ಕಂಪೆನಿಗಳಂತೆ ಸಾಧ್ಯವಿದ್ದ ಎಲ್ಲ ರೀತಿಯಿಂದಲೂ ಮೇಲೆತ್ತಲು ಪ್ರಯತ್ನಿಸಿದರೂ ಸಾಧ್ಯವಾಗಲೇ ಇಲ್ಲ. ಎಲ್ಲಿಯರಗೇ ಪರಸ್ಥಿತಿ ಹೋಯಿತು ಎಂದರೆ ಕಂಪನಿ ಕಟ್ಟಿದ ದೊರೆ ಸ್ಟೀವ್ ಆಪಲ್ ತೊರೆಯಬೇಕಾಯಿತು! ಆಪಲ್ ತೊರೆದ ನಂತರ ಸ್ಟೀವ್ ಸುಮ್ಮನೆ ಕೂಡಲಿಲ್ಲ. ಮೊದಲೇ ಕೋಟ್ಯಧಿಪತಿಯಾಗಿದ್ದ ಸ್ಟೀವ್ ಮತ್ತೆರಡು ಕಂಪನಿಗಳನ್ನು ಸ್ಥಾಪಿಸಿದನು . ನೆಕ್ಸ್ಟ್ ಮತ್ತು ಪಿಕ್ಸಾರ್.

ಸ್ಟೀವ್ ಸ್ಥಾಪಿಸಿದ ಪಿಕ್ಸಾರ ಡಿಸ್ನೆ ಎಂಬ ದೈತ್ಯ ಕಂಪನಿ ತನ್ನ ಮುಂದೆ ತಲೆಬಾಗಿತ್ತು. ನೆಕ್ಸ್ಟ್ ಮೊದ ಮೊದಲು ತುಂಬಾ ಹವಾ ಸೃಷ್ಟಿಸಿತ್ತು. ಆದರೆ ನಾಲ್ಕೈದು ವರ್ಷಗಳ ನಂತರ ಅಧೋಗತಿಗೆ ಬಂದು ಸಿಲಿಕಾನ್ ವ್ಯಾಲಿಯಲ್ಲಿ ಸ್ಟೀವ್ ವೃತ್ತಿಜೀವನ ಮುಗಿದೇಹೋಯಿತು ಎಂದು ಜನರು ಅಷ್ಟೇ ಅಲ್ಲಾ ಸ್ವತಃ ಸ್ಟೀವ್ ಗೆ ಅನ್ನಿಸಿತು. ಎಲ್ಲ ಕಡೆ ನಷ್ಟದಲ್ಲೇ ಇದ್ದಾಗ ಕೈಹಿಡಿದಿದ್ದು ಪಿಕ್ಸಾರ ಕಂಪನಿ. ಅನಿಮೇಟೆಡ್ ಸಂಬಂದಿಸಿದ ಟಾಯ್ ಸ್ಟೋರಿ ಪಿಕ್ಸಾರನ್ನು ಮೇಲೆಕ್ಕೆಯೆತ್ತಿತು. ವೃತ್ತಿ ಜೀವನದ ಏಳು ಬೀಳುಗಳ ಮಧ್ಯೆ ತನ್ನ ನಿಜವಾದ ತಾಯಿಯನ್ನು ಹುಡುಕಲು ಶುರು ಮಾಡಿದ್ದ. ಅನೇಕ ಪತ್ತೇದಾರಿ ಕಂಪನಿಗಳ ಮೂಲಕ ತನ್ನ ತಾಯಿಯನ್ನು ಹುಡುಕುವ ಪ್ರಯತ್ನ ನಡೆದೇ ಇತ್ತು ಆದರೆ ಇದನ್ನು ತನ್ನ ಸಾಕು ತಾಯಿಯಿಂದ ಮುಚ್ಚಿಟ್ಟದ, ಕಾರಣ ಅವಳನ್ನು ತುಂಬಾ ಪ್ರೀತಿ ಮಾಡುತ್ತಿದ್ದ, ಅವಳಿಗೆ ಗೊತ್ತಾದರೆ ಅವಳೆಲ್ಲಿ ನೋವು ಪಡುತ್ತಾಳೆ ಎಂದು. ಪತ್ತೇದಾರಿ ಕಂಪನಿಗಳ ಮೂಲಕ ವ್ಯರ್ಥ ಪ್ರಯತ್ನ ಮಾಡಿ ಸುಮ್ಮನಾಗಿದ್ದ. ಆದ್ರೆ ಒಂದು ದಿವಸ ತನ್ನ ಹುಟ್ಟಿದ ಸರ್ಟಿಫಿಕೇಟ್ ನೋಡುವಾಗ ಡಾಕ್ಟರ್ ಹೆಸರು ನೋಡಿ ಅವರಿಗೆ ಕರೆ ಮಾಡಿ ಕೇಳಿದಾಗ ಅವರು ನಾನು ಹೇಳುವ ಹಾಗಿಲ್ಲ ಎಂದು ಹೇಳಿದ್ದರು. ಅವರಿಗೆ ಪದೇ ಪದೇ ವಿನಂತಿ ಮಾಡಿದಾಗ ಡಾಕ್ಟರ್ ಒಂದು ಲಕೋಟೆಯನ್ನು ಬರೆದು ನನ್ನ ಮರಣದ ನಂತರ ಲಕೋಟೆಯನ್ನು ಸ್ಟೀವ್ ಗೆ ಹಸ್ತಾಂತರಿಸಿ ಎಂದು ಕೊಟ್ಟಿದ್ದರು.

ಅವರ ಮರಣದ ನಂತರ ಸ್ಟೀವ್ ಗೆ ತನ್ನ ತಾಯಿಯ ಬಗ್ಗೆ ಗೊತ್ತಾಗಿದ್ದು. ನಂತರ ಮೊತ್ತೊಂದು ಪತ್ತೇದಾರಿ ಕಂಪನಿ ಮೂಲಕ ತಾಯಿಯ ಇರುವಿಕೆ ಪತ್ತೆ ಹಚ್ಚಿದ್ದ. ತನ್ನ ತಾಯಿ ತನ್ನನು ಯಾವ ಸ್ಥಿತಿಯಲ್ಲಿ ದತ್ತು ಕೊಟ್ಟಿದ್ದಳು ಎಂದು ಗೊತ್ತಾದಾಗ ಅವಳಿಗೆ ಭೇಟಿ ಮಾಡಬೇಕು ಎಂದು ನಿರ್ಧರಿಸಿ ತಾಯಿಗೆ ಕರೆ ಮಾಡಿ ನಾನು ನಿಮ್ಮನ್ನು ಭೇಟಿಮಾಡಲು ಬರುತ್ತಿದ್ದೇನೆ ಎಂದು ಹೇಳಿ ಭೇಟಿ ಮಾಡಿದಾಗ ಕರುಳಿನ ಕುಡಿ ಇಂದು ಜಗತ್ತಿನ ಆಗರ್ಭ ಶ್ರೀಮಂತ ಮತ್ತು ನನ್ನ ಮಗ ಎಂದು ತಾಯಿ ಹೆಮ್ಮೆಪಟ್ಟಿದ್ದಳು. ಸ್ಟೀವ್ ತನ್ನ ತಂಗಿ ಮೋನಾ ಸಿಂಪ್ಸನ್ ಕಂಡು ಸಂತೋಷಪಟ್ಟಿದ್ದ


ನೆಕ್ಸ್ಟ್ ಸಂಶೋಧನೆ ಮಾಡಿದ್ದ ಒಂದು ಆಪರೇಟಿಂಗ್ ಸಿಸ್ಟೆಮ್ ಬಗ್ಗೆ ಆಪಲ್ ಗೆ ಮಾಹಿತಿ ಇತ್ತು. ಮತ್ತೆ ಆಪಲ್ ಸ್ಥಿತಿ ಸಹ ಅಷ್ಟೇನೂ ಚೆನ್ನಾಗಿರಲಿಲ್ಲ. ಅದಕ್ಕೆ ಹೊಸ ಆಪರೇಟಿಂಗ್ ಸಿಸ್ಟಮ್ ಉಪಯೋಗಿಸಿಕೊಂಡು ಮ್ಯಾಕ್ ಸುಧಾರಣಗೆ ಚಿಂತಿಸಿ ಮತ್ತೆ ಸ್ಟೀವ್ ಜಾಬ್ಸ್ ಗೆ ಮರಳಿ ಕಂಪನಿಗೆ ಸೇರುವಂತೆ ಮಾಡಿತು ಮತ್ತು ಆಪಲ್ಗು ಅದೇ ಬೇಕಿತ್ತು. ಮುಂದೆ ಆಗಿದ್ದೆಲ್ಲಾ ಇತಿಹಾಸ. ಆಪಲ್ ಐ ಟ್ಯೂನ್ಸ್, ಐ ಪಾಡ್ ಕ್ರಾಂತಿ ಮತ್ತು ಮ್ಯಾಕ್ ಆಪರೇಟಿಂಗ್ ಸಿಸ್ಟಮ್ ಆಪಲ್ ಕಂಪನಿಯ ಭವಿಷ್ಯ ಅಷ್ಟೇ ಅಲ್ಲಾ ಜಗತ್ತಿನ ಭವಿಷ್ಯವನ್ನೇ ಬದಲಿಸಿತು. ಇನ್ನೊಂದು ಆಸಕ್ತಿ ಸಂಗತಿ ಏನಂದರೆ ಸ್ಟೀವ್ ತನ್ನ ಅಪ್ಪನನ್ನು ನೋಡುವ ಮನಸ್ಸು ಮಾಡಲೇ ಇಲ್ಲ ಆದರೆ ತಂಗಿ ತಂದೆಯನ್ನು ಹುಡುಕಿ ಅವರನ್ನು ಬೇಟಿಯಾಗಿದ್ದಳು. ಹೀಗೆ ತಂದೆಯೊಂದಿಗೆ ಭೇಟಿಯಾಗಿ ಮಾತಾಡುವಾಗ ತಂದೆ ನನ್ನ ಹೋಟೆಲ್ ಗೆ ಸ್ಟೀವ್ ಜಾಬ್ಸ್ ಮತ್ತು ಹೀಗೆ ಅನೇಕರು ಬರುತ್ತಾರೆ ಎಂದು ಹೇಳಿದ ಕೂಡಲೇ ಸ್ಟೀವ್ ನನ್ನ ಬಗ್ಗೆ ತಂದೆಗೆ ಹೇಳಬೇಡ ಎಂದರೂ ತಡೆದುಕೊಳ್ಳಲಾಗದೇ ತಂದೆಗೆ ಸ್ಟೀವ್ ನಿನ್ನ ಮಗನೆ ಎಂದಿದ್ದಳು. ಸ್ಟೀವ್ ತುಂಬಾ ಕುತೂಹಲಕಾರಿ ಮನುಷ್ಯ. ಅವರ ಸಾಧನೆಗಳ ಕುರಿತು ಇನ್ನು ಸಾಕಷ್ಟು ವಿಷಯ ಇದೆ…?

Categories: Articles

1 reply »

Leave a Reply