
ಸಂಕ್ಷಿಪ್ತ ವಿವರಣೆ :
೧೦೦ ವರ್ಷ ಕಾಣದ ಪ್ರವಾಹ. ಜಗತ್ತನ್ನೇ ಬಾಧಿಸಿದ ಕೋವಿಡ್ . ಯಾವ ಸರ್ಕಾರದಲ್ಲೂ ಮಾಡದ ಮೀಸಲಾತಿ ಹೋರಾಟ! ಲಿಂಗಾಯತರನ್ನು ಒಡೆದು ಆಳುವ ನೀತಿ. ಬಡಮಕ್ಕಳಿಗೆ ಮೀಸಲಾತಿ ಸಿಗಲೇಬೇಕು! ಚಾಣಕ್ಯನ ಕೈ ಮೇಲಾಗುವದರಲ್ಲಿ ಸಂಶಯವಿಲ್ಲ.

ವಿವರ:
ರಾಜ್ಯದ ಜನರಿಗೆ ಮೇಲಿನ ಮಾತು ಹೇಳಿದಾಗ ಯಡಿಯೂರಪ್ಪ ನೆನಪಾಗುತ್ತಾರೆ. ಯಡಿಯೂರಪ್ಪನವರಿಗೆ ಸಮಸ್ಸ್ಯೆ ಎದುರಾದಾಗ ಪತ್ರಕರ್ತರು ಏನ್ರೀ ಯಡಿಯೂರಪ್ಪನ್ನವರಿಗೆ ಸಮಸ್ಸ್ಯೆ ದೊಡ್ಡದು ಎನಿಸುತ್ತಿದೆ ಎಂದಾಗ ಅವರು ಹೇಳುವ ಮಾತೆ ಇದು. ಕಾರಣ ಇದು ಅವರ ದತ್ತು ಪಡೆದುಕೊಂಡ ಮಾತು ಎಂದರೆ ಸರಿ ಅನಿಸುತ್ತೆ. ಪ್ರತಿ ಬಾರಿ ಯಾವುದೇ ಸಮಸ್ಸ್ಯೆ ಬಂದಾಗ ಸಮಸ್ಸ್ಯೆಯನ್ನು ಎದುರಿಸಿ ಅದಕ್ಕೆ ಪರಿಪೂರ್ಣವಾಗಿ ಶಮನ ಮಾಡುವಲ್ಲಿ ಎತ್ತಿದ ಕೈ! ಹೋರಾಟದ ಭದ್ರ ಬುನಾದಿ ಇರುವುದರಿಂದ ಇದು ಸಾಧ್ಯ.
ಐದು ವರ್ಷ ಹಿಂದಕ್ಕೆ ಹೋಗಿ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಅವರ ಸರ್ಕಾರದ ಬಗ್ಗೆ ತುಲನೆ ಮಾಡಿದಾಗ ಅವರ ಸ್ಲೋಗನ್ ಇದ್ದದ್ದು “ಸರ್ಕಾರದ ನಡೆ ಜನರ ಕಡೆ” ಎಂದು ಚುನಾವಣೆಯಲ್ಲಿ ಕೊಟ್ಟ ಎಲ್ಲ ಭರವಸೆಗಳನ್ನು ನಾವು ಈಡೇರಿಸಿದ್ದೇವೆ ಎಂದು ಚುನಾವಣೆಯಲ್ಲಿ ಹೇಳಿದ್ದರು ಮತ್ತು ಇಂದು ವಿಧಾನಸಭೆಯಲ್ಲಿ ಹೇಳುತ್ತಾರೆ. ಜನರಿಗೆ ಸರ್ಕಾರ ಇಷ್ಟ ಆಯ್ತಾ ಅಥವಾ ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸುವ ಅವಶ್ಯಕತೆ ಇಲ್ಲಾ ಅನಿಸುತ್ತೆ. ಕಾರಣ ಕಳೆದ ಚುನಾವಣೆಯಲ್ಲಿ ಸರ್ಕಾರವು ಆಯ್ಕೆ ಆಗಲಿಲ್ಲ ಮತ್ತು ಸರ್ಕಾರ ಮುನ್ನೆಡಿಸಿದ ದೊರೇನು ೩೦ ಸಾವಿರ ಮತಗಳಿಂತ ಪರಾಭವಗೊಂಡರು. ೨೦೧೩ರಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಕಾರಣವಾಗಿದ್ದು ಭಾರತೀಯ ಜನತಾ ಪಕ್ಷದ ಒಳಜಗಳ. ರಾಜ್ಯದ ಜನತೆ ಎಲ್ಲ ಪಕ್ಷಗಳಿಗೆ ಅವಕಾಶ ಕೊಟ್ಟು ನೋಡಿ ರೈತ ನಾಯಕ ಯಡಿಯೂರಪ್ಪನವರಿಗೆ ಒಂದು ಅವಕಾಶ ಕೊಟ್ಟರು. ಹೊಸ ಅವಕಾಶ ಒದಗಿ ಬಂದಾಗ ಯಡಿಯೂರಪ್ಪನವರ ಕಾರ್ಯಕ್ಕೆ ಜನ ಮನಸೋತಿದ್ದರು. ಭಾರತೀಯ ಜನತಾ ಪಕ್ಷದ ಕೆಲಸ ಜನರಿಗೆ ಹಿಡಿಸಿತ್ತು ಅದರಲ್ಲಿ ರೈತರಿಗೆ, ಹೆಣ್ಣು ಮಕ್ಕಳಿಗೆ , ಶಾಲೆಯ ಮಕ್ಕಳಿಗೆ ಹೀಗೆ ಅನೇಕ ಜನಪ್ರಿಯ ಯೋಜನೆಗಳು ಕೊಟ್ಟು ಜನರಿಗೆ ಹತ್ತಿರವಾದರು. ಮೇಲಿಂದ ಮೇಲಿಂದ ಬಂದ ಉಪಚನಾವಣೆಯಲ್ಲಿ ಪಕ್ಷದ ಕೀರ್ತಿ ಪತಾಕೆ ಹಾರಿಸಿದ್ದರು. ಅದು ಮೈಸೂರು ಭಾಗದ ಚನ್ನಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷವು ಜಯಭೇರಿ ಆಗುವಂತೆ ಮಾಡಿದ ಶ್ರೇಯಸ್ಸು ಯಡಿಯೂರಪ್ಪನವರಿಗೆ ಸಲ್ಲುತ್ತೆ. ಇಂತಹ ಕೆಲಸಗಳು ಯಡಿಯೂರಪ್ಪನವರಿಗೆ ಸ್ವಪಕ್ಷದಲ್ಲಿ ವಿರೋಧಿಗಳು ಹುಟ್ಟುಹಾಕುವಂತೆ ಮಾಡಿತ್ತು. ಇದಕ್ಕೆ ಹೊಂಚು ಹಾಕುತ್ತಿದ್ದ ವಿರೋಧಿಗಳಿಗೆ ಅದರಲ್ಲಿ ಪ್ರಾದೇಶಿಕ ಪಕ್ಷಕ್ಕೆ ಇದೊಂದು ಹಬ್ಬವಾಗಿ ಮಾರ್ಪಟ್ಟಿತು.
ಯಡಿಯೂರಪ್ಪನವರ ಜನಪ್ರಿಯತೆ ಉತ್ತುಂಗದಲ್ಲಿತ್ತು ಮತ್ತು ಮುಂದಿನ ಚುನಾವಣೆಯಲ್ಲಿ ಮತ್ತೆ ಭಾರತೀಯ ಜನತಾ ಪಕ್ಷದ ಸರ್ಕಾರ ಬರುತ್ತೆ ಎನ್ನುವ ಮಟ್ಟಿಗೆ ಪಕ್ಷ ಮತ್ತು ಮುಖ್ಯಮಂತ್ರಿ ಹವಾ ಸೃಷ್ಟಿಮಾಡಿದ್ದರು. ಆದರೆ ಇದೆನ್ನೆಲ್ಲ ಒಳಗಿನ ನಾಯಕರಿಗೆ ನುಂಗಲಾರದ ತುತ್ತಾಗಿಬಿಟ್ಟಿತು. ನಾನು ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಭಗ್ನವಾಯಿತು ಎಂದು ಮತ್ತೆ ಹಿಂದಿನಿಂದ ದಾಳಗಳನ್ನು ಎಸೆಯುದಕ್ಕೆ ಪ್ರಾರಂಭಮಾಡಿದರು. ಆದುವು ರೆಸಾರ್ಟ್ ರಾಜಕೀಯ! ಮತ್ತು ಪ್ರಾದೇಶಿಕ ಪಕ್ಷದ ನಾಯಕ ಭಾರತೀಯ ಜನತಾ ಪಕ್ಷದ ನಾಯಕರಿಂದಲೇ ಸಹಾಯವನ್ನೇ ಪಡೆದು ಯಡಿಯೂರಪ್ಪನವರನ್ನು ಕೆಳಗಿಳಿಸಲು ಸತತ ಪ್ರಯತ್ನ ಮಾಡಿದರು. ಅಂದು ಹೈ ಕಮಾಂಡ ಒಂದು ಗುಂಪಿನಿ ಸಹಾಯದಿಂದ ಪಕ್ಷದಲ್ಲಿ ಶಿಸ್ತಿನ್ನು ಉಲ್ಲಂಘನೆ ಮಾಡುವವರನ್ನು ಹಿಂದಿನಿಂದ ಬೆಂಬಲ ಕೊಟ್ಟು ಅವರ ಮಾಡುವ ಡ್ಯಾಮೇಜ್ ಕಂಟ್ರೋಲ್ ಮಾಡುವದನ್ನು ಬಿಟ್ಟು ಅದನ್ನು ಮುಂದುವರೆಸಿಕೊಂಡು ಹೋದರು. ಅದರ ಪರಿಣಾಮ ಪಕ್ಷ ಮೂರೂ ಭಾಗವಾಗಿ ಅಂದಿನ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು! ಅದರ ಫಲಿತಾಂಶ ಒಳ್ಳೆಯ ಕೆಲಸ ಮಾಡಿದ ಕೆಲವೊಬ್ಬ ಶಾಸಕರು ಪರಾಭವಗೊಂಡರು. ಮತ್ತು ೫ ವರ್ಷ ಅಧಿಕಾರದಿಂದ ದೂರ ಉಳಿದರು. ಇದು ಒಂದು ಪಾಠವಾಯಿತು ಅಂದ್ಕೊಂಡಿದ್ದೀವಿ ..? ಆದರೆ ಒಂದು ಗಮನಿಸಿ ಮೂರೂ ಭಾಗಗಳಾಗಿ ಪಕ್ಷ ಒಡೆದಿದ್ದು ಇದು ರಾಜಕೀಯ ಲೆಕ್ಕಾಚಾರ! ಇದು ತಿಳಿದುಕೊಳ್ಳದೆ ಸೋತ ಭಾರತೀಯ ಜನತಾ ಪಕ್ಷದ ನಾಯಕರು!
ಆದರೆ ಕಳೆದ ಸರ್ಕಾರದಲ್ಲಿ ಅತಿ ಗಮನ ಸಳೆದ ವಿಷಯಗಳು ಟಿಪ್ಪು ಜಯಂತಿ, ಲಿಂಗಾಯತ ಧರ್ಮ ವಿಭಜನೆ ಮತ್ತು ಶಾಧಿ ಭಾಗ್ಯ ಯೋಜನೆ! ಇವೆಲ್ಲವೂ ರಾಜಕೀಯ ದಾಳಗಳು ಮತ್ತು ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಮತ್ತೆ ಅಧಿಕಾರ ಹಿಡಿಯಲೇಬೇಕು ಎಂದು ಮಾಡಿದ ತಂತ್ರಗಳು! ಮೇಲಾಗಿ ಸ್ವಜಾತಿಯ ಅಧಿಕಾರಿಗಳನ್ನು ಬೇಕಾದ ಜಾಗದಲ್ಲಿ ಕುಳ್ಳಿರಿಸಿ ಚುನಾವಣೆಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂಬ ದುರಾಸೆ ಬೇರೆ! ಆದರೆ ಇವು ಬಿಟ್ಟು ಬೇರೆ ಯಾವಾದೆ ಜಾತಿ ಮೀಸಲಾತಿ ಹೋರಾಟ ಮುನ್ನೆಲೆಗೆ ಬಂದ ಉದಾಹರಣೇನೇ ಇಲ್ಲಾ. ಅಂದು ಮತಗಳ ಆಶೆಯಿಂದ ಟಿಪ್ಪು ಜಯಂತಿ ಕಾಂಗ್ರೆಸ್ ಮಾಡಿದರೆ ಅದನ್ನು ವಿರೋಧಿಸಿದ್ದು ಭಾರತೀಯ ಜನತಾ ಪಕ್ಷದವರು. ಇವೆಲ್ಲವೂ ಮಾಮೂಲಿ. ಆದರೆ ಎಲ್ಲರಿಗೂ ಶಾಕ್ ಆಗಿದ್ದು ಲಿಂಗಾಯತ ಧರ್ಮ ವಿಭಜನೆ ಪ್ರಾರಂಭವಾಗಿದ್ದು. ಅದು ಯಡಿಯೂರಪ್ಪನವರು ಒಂದು ವರ್ಷ ಕಳೆದ ನಂತರ ಕರ್ನಾಟಕ ಜನತಾ ಪಕ್ಷ ಬಿಟ್ಟು ಮತ್ತೆ ಭಾರತೀಯ ಜನತಾ ಪಕ್ಷ ಸೇರಿಕೊಂಡು ಲೋಕಸಭೆಯಲ್ಲಿ ಉತ್ತಮ ಪ್ರದರ್ಶನ ಆದ ಮೇಲೆ ಕಾಂಗ್ರೆಸ್ ಬುದ್ಧಿಜೀವಿಗಳ ಮುಂದಾಲೋಚನೆಯಿಂದ ಹುಟ್ಟಿದ ಕೂಸೇ ಧರ್ಮ ವಿಭಜನೆ! ವಿಜಯಪುರದ ಪಾಟೀಲರು ಮಾಜಿ ಮುಖ್ಯಮಂತ್ರಿಯ ಪಟ್ಟಾ ಶಿಷ್ಯ ಇದನ್ನೇ ದಾಳವಾಗಿಸಿಕೊಂಡು ಅವರ ನೇತೃತ್ವದಲ್ಲಿ ವಿಭಜನೆಗೆ ಗುದ್ದಲಿ ಪೂಜೆ ಮಾಡಿದರು. ಹೋರಾಟ ಸರ್ಕಾರದ ವತಿಯಿಂದಲೇ ಇದ್ದುದರಿಂದ ಅದಕ್ಕೆ ಸಂಪನ್ಮೂಲ ಕೊರೆತೆ ಇರಲಿಲ್ಲ. ದೊಡ್ಡ ದೊಡ್ಡ ಸಮಾವೇಶಗಳು ನಡೆದವು. ಬರ ಬರತ್ತಾ ಜನ ಧರ್ಮ ವಿಭಜನೆಗೆ ವಿರೋಧ ವ್ಯಕ್ತವಾದಾಗ ಬಿಸಿ ತುಪ್ಪವನ್ನು ಬಾಯಿಕೆ ಹಾಕಿಕೊಳ್ಳದೆ ನೆಲಕ್ಕೆ ಚೆಲ್ಲದೇ ಪರಿತಪಿಸಿ ಒಂದು ದಿವಸ ಕ್ಷಮೆ ಕೇಳಿ ನೆಲಕ್ಕೆ ಹಾಕಿಬಿಟ್ಟರು.! ಅಂದು ಯಾವ ಸ್ವಾಮೀಜಿ ಇದರ ನೇತೃತ್ವವನ್ನು ವಹಿಸಿದ್ದರು ಗೊತ್ತಾ? ಸ್ವಲ್ಪ ಡ್ಯಾಮೇಜ್ ಭಾರತೀಯ ಜನತಾ ಪಕ್ಷಕ್ಕೂ ಆಯಿತು ಆದರೆ ಬೇರೆ ಸಮಾಜದ ಜನ ಕಾಂಗ್ರೆಸನ್ನು ಸಾರಾಸಾಗಾಟವಾಗಿ ತಿರಸ್ಕಾರ ಮಾಡಿಬಿಟ್ಟರು! ಆದರೆ ಇಂದು ಮತ್ತೊಂದು ಆಟ ಶುರು ಹಚ್ಚಿಕೊಂಡಿದ್ದಾರೆ. ಆದುವು ಒಳಪಂಗಡಗಳ ಮೀಸಲಾತಿ!
ಧರ್ಮ ವಿಭಜನೆ ಮಾಡಿ ಲಿಂಗಾಯತರ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಮುಂದೆ ಹೋಗಿದ್ದ ಜನರು ಅದನ್ನು ಅಲ್ಲಿಗೆ ಕೈಬಿಟ್ಟು ಅದೊಂದು ರಾಜಕೀಯ ಆಟ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು! ಆದರೆ ಇಂದು ರಾಜ್ಯದಲ್ಲಿ ಮತ್ತೆ ಕಮಲ ಪಡೆ ಅಧಿಕಾರದಲ್ಲಿ ಇದೆ ೨೦೦೮ರ ದೊರೆನೆ ಇಂದು ರಾಜ್ಯದ ದೊರೆ! ರಾಜ್ಯದಲ್ಲಿ ಅಧಿಕಾರ ಪಡೆದ ನಂತರ ಆದ ಸ್ಥಿತಿಗತಿಗಳು ತೀರಾ ಭಯಾನಕವಾದದ್ದು. ೧೦೦ ವರ್ಷದಿಂದ ಕಾಣದ ಪ್ರವಾಹ , ಜಗತ್ತನ್ನೇ ನಡುಗಿಸಿದ ಕೋವಿಡ್ . ಹಿಂತಹ ಎಲ್ಲ ಸ್ಥಿತಿಗಳನ್ನು ದೈರ್ಯವಾಗಿ ಎದುರಿಸಿ ತನ್ನ ಪಕ್ಷ ಮತ್ತು ರಾಜ್ಯವನ್ನು ಒಳ್ಳೆಯ ರೀತಿಯಲ್ಲಿ ನಡೆಸುತ್ತಿರುವಾಗ ಮತ್ತೆ ರಾಜಕೀಯ ದಾಳಗಳ ಸುರಿಮಳೆ! ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ೬ ತಿಂಗಳಿಗೆ ಮುಖ್ಯಮಂತ್ರಿ ಬದಲಾವಣೆ ಎಂದು ಹಾದಿ ಬೀದಿಗಳಲ್ಲಿ ಚರ್ಚೆ! ಹಿಂತಹ ಚರ್ಚೆಗಳು ಹುಟ್ಟುಹಾಕಿದವರು ಯಾರು? ಕಳೆದ ಚುನಾವಣೆಯಲ್ಲಿ ಮನೆಗೆ ಬಂದು ನನಗೆ ಟಿಕೆಟ್ ಕೊಡಿ ಎಂದು ಬೇಡಿಕೊಂಡು ಮತ್ತೆ ಟಿಕೆಟ್ ಪಡೆದು ೯ ಸಾವಿರ ಮತಗಳಿಂದ ಗೆದ್ದು ಬಂದು ನನ್ನ ನಾಯಕ ಯಡಿಯೂರಪ್ಪ ಎಂದು ವಿಧಾನಸಭೆಯಲ್ಲಿ ಕೂಗಿ ಕೂಗಿ ಹೇಳುತ್ತಿದ್ದ ಗೌಡರ ಗತ್ತು ಬದಲಾಗಿದ್ದು ಹೇಗೆ? ಹಿಂದೂ ನಾಯಕ ಎಂದು ಮುಂದೆ ಹೇಳುತ್ತಾ ಹಿಂದೆಯಿಂದ ಒಳಪಂಗಡಗಳಿಗೆ ಬಾಯಿಗೆ ಬಂದಂತೆ ಮಾತಾಡುತ್ತಿರುವ(ಮಾಜಿ ಶಾಸಕರು ಹೇಳಿದ್ದು) ಇವರಿಗೆ ಹಿಂದೂ ನಾಯಕ ಎಂದು ಕರೆಯಿಸಿಕೊಳ್ಳುವ ಅರ್ಹತೆ ಇದೆಯಾ?
ಇಂದು ರಾಜ್ಯದಲ್ಲಿ ಎಲ್ಲ ಜಾತಿಯ ಜನರು ಮೀಸಲಾತಿಗೆ ಹೋರಾಟ ಮಾಡುತ್ತಿದ್ದಾರೆ. ಅದು ಅವರ ಹಕ್ಕು ಅದನ್ನು ಭಾರತದ ಸಂವಿಧಾನ ಅಡಿಯಲ್ಲಿ ಮಾಡುತ್ತಿದ್ದಾರೆ ಅದನ್ನು ಬೇಡ ಎನ್ನುವ ಹಕ್ಕು ಯಾರಿಗೂ ಇಲ್ಲಾ. ರಾಜ್ಯದಲ್ಲಿ ಎಲ್ಲ ಜಾತಿಯಲ್ಲೂ ಬಡವರು ಇದ್ದಾರೆ ಅದಕ್ಕೆ ಅಂಥಹವರಿಗೆ ಆರ್ಥಿಕ ಆಧಾರದಲ್ಲಿ ಮೀಸಲಾತಿ ಸಿಗಬೇಕು ಅದುವೇ ಡಾಕ್ಟರ್ ಅಂಬೇಡ್ಕರ ಅವರ ಆಶಯ. ಆದರೆ ಇಷ್ಟೊಂದು ತ್ರೀವ್ರ ರೀತಿಯಲ್ಲಿ ಹೋರಾಟ ಮಾಡಿ ಸರ್ಕಾರಕ್ಕೆ ಗಡುವು ಕೊಟ್ಟು ,ಸರ್ಕಾರಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಎಷ್ಟು ಸರಿ ? ಮೀಸಲಾತಿ ಹೋರಾಟದಲ್ಲಿ ಬಡವರಿಗೆ ಹೇಗೆ ಅನ್ಯಾಯವಾಗುತ್ತಿದೆ ಎಂದು ಜನರಿಗೆ ಮತ್ತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಹೋರಾಟಗಾರರ ಕರ್ತವ್ಯ ಮತ್ತು ಅದು ಆಯೋಗಕ್ಕೂ ಕೇಳಿಸುತ್ತದೆ. ಮೀಸಲಾತಿ ಹೋರಾಟ ಬಿಟ್ಟು ಮುಖ್ಯಮಂತ್ರಿ ಮತ್ತು ಅವರ ಸುಪತ್ರರನ್ನು ಬಾಯಿಗೆ ಬಂದಂತೆ ತೆಗಳಿದರೆ ಇದೆಂಥ ಮೀಸಲಾತಿ ಹೋರಾಟ? ಎಲ್ಲರೂ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳುವದಿಲ್ಲಾ ಕೆಲವೇ ಕೆಲವು ಜನ ಆಡುತ್ತಿರುವ ಆಟ ನೋಡಿದರೆ ಮೇಲ್ನೋಟಕ್ಕೆ ಇದೊಂದು ಖಂಡಿತ ರಾಜಕೀಯ ಆಟ ಎಂದು ತಿಳಿಯುತ್ತೆ. ಸಮಾಜದ ಜನ ದೂರದ ಊರಿನಿಂದ ಸ್ವಂತ ಖರ್ಚು ಮಾಡಿ ತಮ್ಮ ಮಕ್ಕಳಿಗೆ ಅನುಕೂಲವಾಗುತ್ತೆ ಎಂದು ಬಂದರೇ ರಾಜಕೀಯ ನಾಯಕರಿಗೆ ತಮ್ಮ ಅನುಕೂಲ ಮುಖ್ಯ ಅಷ್ಟೇ. ನಿಜವಾಗಿ ಬಡಮಕ್ಕಳಿಗೆ ಶಿಕ್ಷಣ ಮತ್ತು ಕೆಲಸದಲ್ಲಿ ಮೀಸಲಾತಿ ಸಿಗಬೇಕು ಆದರೆ ಸಮಾಜದ ಹೆಸರಲ್ಲಿ ರಾಜಕೀಯ ಮಾಡಿ ಸಮಾಜದ ಬಡಮಕ್ಕಳಿಗೆ ಅನ್ಯಾಯ ಮಾಡಿದರೆ ದೇವರು ಎಂದೂ ಕ್ಷಮಿಸುವದಿಲ್ಲಾ. ಇದೆ ಯಡಿಯೂರಪ್ಪನವರು ಲಿಂಗಾಯತ ಒಳಪಂಗಡಗಳಿಗೆ ೩ಬಿ ಕೊಡಿಸಿ ನಿಜವಾಗಿ ಹಿಂದುಳಿದ ಮಕ್ಕಳಿಗೆ ಅನ್ಯಾಯವಾಗದಂತೆ ನೋಡಿಕೊಂಡಿದ್ದು ಮರೆಯಬಾರದು.
ಕಳೆದ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಧರ್ಮವನ್ನು ಒಡೆದು ರಾಜಕೀಯವಾಗಿ ಲಿಂಗಾಯತರನ್ನು ಮೂಲೆಗುಂಪು ಮಾಡುವ ಹುನ್ನಾರ ಅಡಗಿತ್ತು. ಇಂದು ಒಳಪಂಗಡಗಳ ಮಧ್ಯೆ ವಿಷಬೀಜ ಬಿತ್ತಿ ಅಖಂಡ ಲಿಂಗಾಯತರನ್ನು ಒಡೆದು ರಾಜಕೀಯವಾಗಿ ಲಾಭ ಮಾಡಿಕೊಳ್ಳುವ ಆ ಪಕ್ಷದ ನಿಲುವು ಆಗಿದೆ. ಯಾವದೇ ಮೀಸಲಾತಿ ಕೊಡಬೇಕಾದರೆ ಹಿಂದುಳಿದ ಆಯೋಗದ ಮುಖಾಂತರ ಸದನ ಸಮಿತಿ ಮಾಡಿ ಪೂರ್ಣ ಅಧ್ಯಯನ ಮಾಡಿ ವರದಿ ಬಂದ ನಂತರವೇ ಸರ್ಕಾರ ನಿರ್ಧಾರ ತಗೆದುಕೊಳ್ಳಬಹುದು. ಅದು ಬಿಟ್ಟು ತರಾತುರಿಯಲ್ಲಿ ಸರ್ಕಾರ ಆದೇಶ ಮಾಡಿದರೆ ಬೇರೆ ಜಾತಿಯ ಜನರು ಅದೇ ಹಾದಿ ತುಳಿದರೆ ಸರ್ಕಾರ ಎಲ್ಲರಿಗೂ ಮಾಡಲಿಕ್ಕೆ ಸಾಧ್ಯನಾ? ತರಾತುರಿಯಲ್ಲಿ ಒಬ್ಬರಿಗೆ ಮಾಡಿ ಇನ್ನೊಬ್ಬರಿಗೆ ಬಿಟ್ಟರೆ ರಾಜಕೀಯವಾಗಿ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುತ್ತೆ. ಮತ್ತು ಯಾರಾದರೂ ನ್ಯಾಯಾಲಕ್ಕೆ ಹೋಗಿ ಇದನ್ನು ಪ್ರಶ್ನೆ ಮಾಡಿದರೆ ಖಂಡಿತವಾಗಲೂ ಹಿನ್ನಡೆ ಆಗುತ್ತದೆ. ಆದ್ದರಿಂದ ಯಡಿಯೂರಪ್ಪನವರು ನಮ್ಮದು ರಾಷ್ಟ್ರೀಯ ಪಕ್ಷ ಎಲ್ಲವನ್ನು ಅಳೆದು ತೂಗಿ ಮಾಡಿ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ವರದಿ ಕೊಡಿ ಅಂತ ಕೇಳಿದ ಸರ್ಕಾರಗಳು ಇಲ್ಲಾ. ಮೊದಲ ಬಾರಿಗೆ ಆಯೋಗಕ್ಕೆ ಪತ್ರ ಬರೆದು ವರದಿ ಕೊಡಿ ಎಂದು ಕೇಳಿದ್ದು ಇದೆ ರೈತನಾಯಕನ ಸರ್ಕಾರ! ಮತ್ತು ಅಖಂಡ ಲಿಂಗಾಯತ ಒಡೆಯಬಾರದು ಎಂದು “ಲಿಂಗಾಯತ ಅಭಿವೃದ್ಧಿ ನಿಗಮ” ಮಾಡಿದ್ದಾರೆ ಮತ್ತು ಅದಕ್ಕೆ ೫೦೦ ಕೋಟಿ ಅನುಧಾನವನ್ನು ಒದಗಿಸಿದ್ದಾರೆ. ವಿಶೇಷವಾಗಿ ಲಿಂಗಾಯತ ಅಭಿವೃದ್ಧಿ ನಿಗಮದಲ್ಲಿ ಎಲ್ಲ ಒಳಪಂಗಡಗಳ ಜಾತಿಗಳಿಗೆ ನಿರ್ದೇಶಕ ಸ್ಥಾನವನ್ನು ಒದಗಿಸಿದ್ದಾರೆ. ಕೇಂದ್ರ ಸರ್ಕಾರ ೧೦% ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಕೇವಲ ಒಂದೆರಡು ಜಾತಿಗಳನ್ನು ಅದರ ಅಡಿಯಲ್ಲಿ ಹಾಕುವ ಬದಲು ರಾಜ್ಯದಲ್ಲಿರುವ ಇನ್ನುಳಿದ ಮೇಲ್ಜಾತಿಯವರನ್ನು ಅದರಲ್ಲಿ ಸೇರಿಸುವ ಆಲೋಚನೆ ಮಾಡಬೇಕು.
Click for Amazon Ads
ಪ್ರತಿ ಮೂರೂ ತಿಂಗಳಿಗೊಮ್ಮೆ ಮುಖ್ಯಮಂತ್ರಿ ಬದಲಾವಣೆ ಎಂದು ಹೇಳಿ ಹೇಳಿ ಜನರಿಗೆ ಬೇಜಾರಾಗಿದೆ ಇದರ ಮದ್ಯೆ ರಾಜಕೀಯ ದಾಳವಾಗಿ ಮೀಸಲಾತಿ ಹೋರಾಟ ಭಾರತೀಯ ಜನತಾ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ ಇದೆಲ್ಲಾ ನೋಡಿದಾಗ ಹೊರಗಿನ ಪಕ್ಷದ ಜೊತೆ ಒಳಗಿನ ಎಂದರೆ ಸ್ವಪಕ್ಷದ ನಾಯಕರು ಅವರಿಗೆ ಸಾಥಕೊಡುವದರಿಂದ ಇದೆಲ್ಲ ಸಾದ್ಯವಾಗಿರಬೇಕು. ೨೦೦೮ರ ಕಹಿ ಅನುಭವ ಭಾರತೀಯ ಜನತಾ ಪಕ್ಷದ ನಾಯಕರು ಮರೆತಂತಿದೆ. ಕೇವಲ ಯಡಿಯೂರಪ್ಪನವರ ಮತ್ತು ಇತ್ತೀಚಿಗೆ ಜನರ ಮನಸ್ಸಿನಲ್ಲಿ ಜನನಾಯಕನಾಗಿ ಗುರುತಿಸಿಕೊಳ್ಳುತ್ತಿರುವ ವಿಜಯೇಂದ್ರರ ಮೇಲಿನ ಕೋಪದಿಂದ ಪಕ್ಷಕ್ಕೆ ಮಾಡುತ್ತಿರುವ ಡ್ಯಾಮೇಜ್ ಹೇಳಿಕೆಗಳಿಗೆ ಪೂರ್ಣವಿರಾಮ ಕೊಡಬೇಕು. ಮತ್ತು ಸರ್ಕಾರದ ನಡೆಗಳನ್ನು ಜನರಿಗೆ ತಲುಪಿಸಬೇಕು. ಮತ್ತು ಈಗಿರುವ ಎಲ್ಲ ಸಮಸ್ಸೆಗಳನ್ನು ಸುಮಾರು ೫೦ ವರ್ಷಗಳ ರಾಜಕೀಯ ಅನುಭವ ಹೊಂದಿದ ನಿಜವಾದ ಚಾಣಕ್ಯ ಮಾಸ ಲೀಡರ್ ಎಲ್ಲವನ್ನು ನಿಭಾಯಿಸಿ ಕೊಟ್ಟ ಕುದರೆಯನ್ನು ಈಗಾಗಲೇ ಶೂರನಂತೆ ಏರಿಯಾಗಿದೆ ಇನ್ನೇನಿದ್ದರೂ ರಾಜ್ಯದ ಅಭಿವೃದ್ಧಿ ಮಾಡಿ ಧೀರನಂತೆ ಯಶಸ್ವಿಯಾಗುತ್ತಾರೆ.
Categories: Articles

ಸರಿಯಾದ ವಿಶ್ಲೇಷಣೆ. ಇದರ ಕಾರಣದಿಂದಲೇ ಧರ್ಮ ಮತ್ತು ಜಾತಿ ಮಧ್ಯಗಳಲ್ಲಿ ಬಿರುಕು ಮೂಡಿಸುವುದು ಇವತ್ತಿನ ರಾಜಕಾರಣದಲ್ಲಿ ಗೆಲುವಿಗೆ ಹೆಚ್ಚು ಸುಲಭದ ಮಾರ್ಗವಾಗಿ ರಾಜಕಾರಣಿಗಳಿಗೆ ತೋರುತ್ತಿದೆ.
LikeLike