ಉತ್ತರಪ್ರದೇಶದಲ್ಲಿ ಸುಪ್ರೀಂ ತೀರ್ಪಿನ ನಂತರ ಮರ್ಯಾದ ಪುರೋಷೋತ್ತಮ ಶ್ರೀ ರಾಮಚಂದ್ರ ಮಂದಿರವನ್ನು ನಿರ್ಮಾಣಮಾಡಲು ದೇಶವೇ ಕೈಜೋಡಿಸಿ ಕೆಲಸ ಮಾಡುತ್ತಿರುವಾಗ ಮಾಜಿ ಒಬ್ಬರು ವಿವಾದಿತ ಸ್ಥಳದಲ್ಲಿ ರಾಮಮಂದಿರ ಕಟ್ಟಲಿಕ್ಕೆ ದುಡ್ಡು ಕೊಡುವುದಿಲ್ಲ ಎಂದು ಘಂಟಾಘೋಷವಾಗಿ ಒಬ್ಬ ವಕೀಲರಾಗಿ ಹೇಳಿದ್ದು ಎಷ್ಟು ಸಮಂಜಸ ಅನ್ನೋದು ಅವರಿಗೆ ಬಿಡೋಣ. ಆದರೆ ಇದೊಂದು ನ್ಯಾಯಾಲಯದ ತಿರಸ್ಕಾರ(Contempt of court) ಆಗಿದೆ ಎಂದರೆ ತಪ್ಪಾಗಲಾರದು. ಹಣ ಕೊಡುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಆದರೆ ಸುಪ್ರೀಂ ತೀರ್ಪನ್ನು ಪ್ರಶ್ನೆ ಮಾಡುವುದು ಎಷ್ಟು ಸರಿ? ಹಾಗೆ ಪ್ರಜಾಪ್ರಭುತ್ವದ ದೇಶದಲ್ಲಿ ಲೆಕ್ಕ ಕೇಳುವುದು ಹಕ್ಕು ಆದರೆ ಹಾದಿ ಬೀದಿಗಳಲ್ಲಿ ಲೆಕ್ಕ ಕೇಳುವುದು ಎಷ್ಟು ಸರಿ? ಇಟ್ಟಿಗೆಯ ಲೆಕ್ಕ ಬೇಕಾದರೆ ಅದಕ್ಕೊಂದು ಸಂಸ್ಥೆ ಇದೆ ಅದಕ್ಕೆ ಒಂದು ಪತ್ರ ಬರೆದು ಕೇಳಿ, ಸರಿಯಾದ ಉತ್ತರ ಬಾರದಿದ್ದಾಗ ಖಂಡಿತ ನೀವು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದಲ್ಲವೆ?

ಇನ್ನೊಬ್ಬರು ರಾಮನ ಗುಣದಿಂದ ಬಹು ದೂರ ಇದ್ದರೂ ಅವರಿಗೆ ಮಂದಿರದ ಬಗ್ಗೆ ಅಪಸ್ವರ ಎತ್ತುವದಕ್ಕೆ ಯಾವುದೇ ಸಂಕೋಚವಾಗಲಿಲ್ಲ. ರೌಡಿಗಳು ದುಡ್ಡು ಸಂಗ್ರಹಣೆ ಮಾಡುತ್ತಿದ್ದಾರೆ ಮತ್ತು ನನ್ನನ್ನು ಹೆದರಿಸಿದರು ಎಂದು ಹೇಳಿದ್ದಾರೆ! ಮಾಜಿ ಅವರನ್ನು ಹೆದರಿಸುವ ಶಕ್ತಿ ಯಾರಿಗಾದರೂ ಇದೆಯಾ? ಮತ್ತು ಹಣ ಕೊಡಲಾರದವರ ಮನೆ ಗುರುತು ಮಾಡಿಕೊಂಡಿದ್ದಾರೆ ಎಂದು ಹೇಳುವುದನ್ನು ಕೇಳಿ ಜನ ದಂಗಾಗಿ ಹೋಗಿದ್ದಾರೆ. ದೈವೀ ಭಕ್ತರಾಗಿರುವ ನೀವು ಮಂದಿರಕ್ಕೆ ಹಣ ಕೊಡುವುದು ನಿಮಗೆ ಬಿಟ್ಟಿದ್ದು ಅದು ಬಿಟ್ಟು ಮತ್ತೊಬ್ಬರ ಭಾವನೆಗಳಿಗೆ ಬೆಲೆ ಕೊಡದೆ ಇರುವುದು ಮಾಜಿಗೆ ಶೋಭೆ ತರುವ ವಿಚಾರ ಅಲ್ಲವೇ ಅಲ್ಲಾ! ನೀವು ಇದೆಲ್ಲಾ ಮಾಡುವುದು ರಾಜಕೀಯ ಎನ್ನುವುದು ಎಲ್ಲರಿಗೂ ಗೊತ್ತು!
ದೇಶದ ಮೂಲೆಮೂಲೆಗಳಿಂದ ಎಲ್ಲ ಜನರು ತಮಗೆ ಬೇಕಾದಷ್ಟು ದುಡ್ಡನ್ನು ಕೊಟ್ಟು ಮಂದಿರ ನಿರ್ಮಾಣಕ್ಕೆ ಸಹಾಯ ಮಾಡುತ್ತಿದ್ದಾರೆ. ಅದು ಅವರ ಭಾವನೆ. ಉತ್ತರಪ್ರದೇಶದಲ್ಲಿ ಸ್ಥಾಪನೆಗೊಳ್ಳುತ್ತಿರುವ ಮಂದಿರಕ್ಕೆ ಕರ್ನಾಟಕದ ಜನರು ಹೋಗುತ್ತಾರೆ ನಮಗೆ ೫ ಎಕರೆ ಜಮೀನು ಕೊಡಿ ಅಲ್ಲಿ ನಾವು ಕರ್ನಾಟಕ ಯಾತ್ರಿ ನಿವಾಸ ಕಟ್ಟುತ್ತೇವೆ ಎಂದು ಕಾಸರಗೋಡಿಗೆ ಚುನಾವಣೆ ನಿಮಿತ್ತವಾಗಿ ಬಂದಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಇತ್ತೀಚಿಗೆ ಕಾರ್ ಅಪಘಾತದಲ್ಲಿ ಕೈಗೆ ಗಾಯವಾಗಿ ಕೋಳು ಪಟ್ಟಿ ಕಟ್ಟಿಕೊಂಡು ಭೂಮಿ ಮಂಜೂರು ಮಾಡಿ ಎಂದು ವಿನಂತಿ ಮಾಡಿದ ರಾಜ್ಯ ಸರ್ಕಾರದ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ. ಇದಲ್ಲೆವೇ ದೇಶದ ಮತ್ತು ರಾಜ್ಯದ ಸಲುವಾಗಿ ನಿಯತ್ತಾಗಿ ಕೆಲಸ ಮಾಡೋದು. ಇದು ಸಂಘ ಹೇಳಿಕೊಟ್ಟ ಪಾಠ ಅಷ್ಟೇ! ಬಹುಬೇಗನೆ ಯಾತ್ರಿ ನಿವಾಸ ಸ್ಥಾಪನೆ ಆಗಲಿ ಎಂದು ಆಶಿಸೋಣ!
Categories: news
