Poem

ಪಂಜೆ ಮಂಗೇಶರಾಯರು

ರಚನೆ : ಡಾ. ಮಲ್ಲಿಕಾರ್ಜುನ. ಎಚ್. ಎಮ್

ಪಂಜೆ ಮಂಗೇಶರಾಯರ ಹುಟ್ಟಿದ ದಿನ. ಶ್ರೀಯುತರು 1874 ಫೆಬ್ರವರಿ 22 ರಂದು ಬಂಟ್ವಾಳದಲ್ಲಿ ಜನಿಸಿದರು. ಅವರ ಪೂರ್ವಿಕರು ಮೂಲತಃ ಪುತ್ತೂರಿಗೆ ಸಮೀಪದ ‘ಪಂಜ’ ದವರಾಗಿದ್ದರು.

ಬಾಲ್ಯದಲ್ಲಿ ಓದಿದ ಅವರ ಕವನಗಳು ಮತ್ತು ಸಾರ ಇಂದಿಗೂ ನೆನಪಿನಲ್ಲಿವೆ.

ಏರುವನು ರವಿ ಏರುವನು
ಬಾನೊಳು ಸಣ್ಣಗೆ ತೋರುವನು
ಏರಿದವನು ಚಿಕ್ಕವನಿರಬೇಕೆಲೆ
ಎಂಬಾ ಮಾತನು ಸಾರುವನು

ಮೇಲಿನ ಸಾಲುಗಳಲ್ಲಿ ಸೂರ್ಯನನ್ನು ಕುರಿತು ಏರುವಾಗ ಬೆಳಕು ಕೊಡುತ್ತಾನೆ, ಚಿಕ್ಕದಾಗುತ್ತಾ ಹೋಗುತ್ತಾನೆ ಮತ್ತು ಏರಿದವನು ಚಿಕ್ಕನಾಗಿರಬೇಕೆ೦ಬುದಾಗಿ ತೋರಿಸುತ್ತಾನೆ. ಮೇಲೆ ಹೋದಷ್ಟು ವಿನಮ್ರತೆಯನ್ನು ಮರೆಯಬಾರದು. ಅದೇ ಇನ್ನೂ ಹೆಚ್ಚು ಮೇಲೆ ಹೋಗುವಂತೆ ಸಹಾಯ ಮಾಡುತ್ತದೆ. ಎನಗಿಂತ ಕಿರಿಯರಿಲ್ಲ ಎಂಬ ಮನೋಭಾವವನ್ನು ಪಂಜೆ ಮಂಗೇಶರಾಯರು ಇಲ್ಲಿ ತಿಳಿಸಿದ್ದಾರೆ.

ಅವರ ಇನ್ನೊಂದು ಕವನದ ಈ ಕೆಳಗಿನ ಸಾಲುಗಳು ಆಗಾಗ್ಗೆ ನೆನಪಿಗೆ ಬರುತ್ತವೆ. ಅದು-

“ಉಳ್ಳಯ್ಯಾ; ದಯೆಗೊಳ್ಳಯ್ಯಾ!
ಕಣ್ಣು, ಮೂಗು, ಕಿವಿ, ಕೈ, ಕಾಲು, ಗಂಟಲು –
ಅಣ್ಣ, ನಿಮ್ಮಂತೆಯೆ ನಮಗೆಲ್ಲ ಉಂಟು.
ಬಣ್ಣ ಕಪ್ಪೆಂದು ನೀ ಬಿಡುವುದೆ ನಂಟು?
ಎಣ್ಣೆಯೋಲ್ ಹಿಡಿವುದೇ ನಮ್ಮ ಮೈ ಅಂಟು?

ಬಹು ಬಹುಕಾಲದಿಂದ ನಡೆದು ಬಂದ ಜಾತಿ ಎಂಬ ಅನಿಷ್ಟ ಪದ್ದತಿಯನ್ನು ಶೋಷಿತನ ಬಾಯಿಂದ ಹೇಳಿಸಿ ಕವಿಗಳು ಸಮಾನತೆಯನ್ನು ಸಾರಿದ್ದಾರೆ.
ಕನ್ನಡ ಕಾವ್ಯಕ್ಕೆ ಅವರ ಕೊಡುಗೆ ಅಪಾರ.

ಇಂದು ಕವಿಗಳ ಜನ್ಮದಿನೋತ್ಸವ. ನಾನು ಬಾಲ್ಯದಲ್ಲಿ ಓದಿದ ಅವರ ಕವನಗಳು ಉತ್ತಮ ಸ೦ದೇಶ ಹೇಳಿಕೊಟ್ಟಿವೆ. ಇಂದಿಗೂ ಕೆಲವು ಸಂದರ್ಭಗಳಲ್ಲಿ ಮೆಲುಕು ಹಾಕುತ್ತೇನೆ.

Categories: Poem

Tagged as: ,

1 reply »

Leave a Reply