
ಸಂಕ್ಷಿಪ್ತ ವಿವರಣೆ :

ಪುರಸಭೆಯಿಂದ ರಾಜ್ಯದ ಮುಖ್ಯಮಂತ್ರಿ ಪಟ್ಟದ ಹಾದಿ. ಕೆಟ್ಟ ರಾಜಕೀಯ ದಾಳಕ್ಕೆ ಖಾಸಗಿ ಕೇಸ್ನಿಂದ ಜೈಲಪಾಲು. ಲೋಕಾಯುಕ್ತ ಮತ್ತು ದೆಹಲಿ ಭಾರತೀಯ ಜನತಾ ಪಕ್ಷದ ನಾಯಕರಿಂದ ೮೪ ಬಾರಿ ಫೋನ್ ಸಂಭಾಷಣೆ!
ವಿವರ:
ಹುಟ್ಟಿದ್ದು ಸಕ್ಕರೆ ನಾಡು ಮಂಡ್ಯದಲ್ಲಿ ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಸಿ ಕೆಲಸ ಪ್ರಾರಂಬಿಸಿದ್ದು ಶಿವಮೊಗ್ಗದ ಶಿಕಾರಿಪುರದಲ್ಲಿ. ಕೇವಲ ನಮ್ಮ ಮಾತುಗಳು ನಮ್ಮ ಸಾಧನೆಯಯಾಗಬಾರದು ನಮ್ಮ ಕೆಲಸದಿಂದ ಸಾಧನೆಮಾಡಬೇಕು ಎಂದು ತೋರಿಸಿಕೊಟ್ಟ ಧೀಮಂತ ನಾಯಕ ಯಡಿಯೂರಪ್ಪ. ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಇವರಿಗೆ ರಾಷ್ಟ್ರಭಕ್ತಿ ಇವರನ್ನು ಸಾಮಾಜಿಕ ಜೀವನಕ್ಕೆ ಕಾಲಿಡುವಂತೆ ಮಾಡಿತು. ನಾನು ರಾಜ್ಯದ ಮುಖ್ಯಮಂತ್ರಿ ಯಾಗಬೇಕೆಂದು ಸಾಮಾಜಿಕ ಜೀವನಕ್ಕೆ ಬಂದವರಲ್ಲ. ತನ್ನ ನಂಬಿದ ಜನ ಮತ್ತು ದೇಶ,ರಾಜ್ಯದ ಸೇವೆಗಾಗಿ ರಾಜಕೀಯ ಹಾದಿ ತುಳಿದಿದ್ದು. ಇಂದು ರಾಜ್ಯದ ಮುಖ್ಯಮಂತ್ರಿಯವರ ಹುಟ್ಟುಹಬ್ಬ ಕರೋನ ಸಮಯದಲ್ಲಿ ಇದಕ್ಕೆಲ್ಲ ಸಮಯ ಕೊಡುವ ಮುಖ್ಯಮಂತ್ರಿಯಲ್ಲ ಕಾರಣ ಅವರಿಗೆ ಗೊತ್ತಿರುವುದು ಒಂದೇ ಅದು ಕೆಲಸ ಕೆಲಸ .
ಇವತ್ತಿಗೂ ದಿನದ ೧೬-೧೮ ಘಂಟೆ ಕೆಲಸ ಮಾಡುವ ಮುಖ್ಯಮಂತ್ರಿ ಯಾರಾದರೂ ಇದ್ದರೇ ಅದು ಯಡಿಯೂರಪ್ಪ! ಇವತ್ತಿನ ರಾಜಕಾರಣಕ್ಕೂ ಅಂದಿನ ರಾಜಕಾರಕ್ಕೂ ಅಜಗಜಾಂತರ ವ್ಯತ್ಯಾಸ ಕಾರಣ ಇಂದು ಪಕ್ಷ ಸೇರಿದ ಯುವಕರ ದಂಡು ತಮಗೆ ಅಧಿಕಾರ ಸಿಗದೇ ಇದ್ದ ಪಕ್ಷದಲ್ಲಿ ಪಕ್ಷಾಂತರ ಮಾಡುವ ಕಾಲ. ಇಂದಿನ ರಾಜಕಾರಿಣಿಗಳಿಗೆ ೫ ವರ್ಷ ಅಧಿಕಾರದಿಂದ ದೂರ ಉಳಿದರೆ ನೀರಲ್ಲಿರುವ ಮೀನನ್ನು ನೀರಿನಿಂದ ಹೊರಗೆ ತೆಗೆದಂತೆ! ಆದರೆ ರಾಜಕೀಯವಾಗಿ ೫೦ ವರ್ಷ ಅನುಭವ ಹೊಂದಿದ ಯಡಿಯೂರಪ್ಪನವರ ಹಾದಿ ಹೇಗಿತ್ತು? ಅವರ ಸಂಘರ್ಷ ಹೇಗಿತ್ತು?
ಮೊದಲು ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಜೊತೆ ನಿಕಟ ಸಂಪರ್ಕ ಹೊಂದಿದ ಯಡಿಯೂರಪ್ಪನವರು ಮುಂದೆ ೧೯೭೨ರಲ್ಲಿ ಪುರಸಭೆಯ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಅದೇ ವರ್ಷ ಜನಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ. ೧೯೭೫ರಲ್ಲಿ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ೧೯೭೭ರಲ್ಲಿ ಇಂದಿರೆಯ ಎಮರ್ಜೆನ್ಸಿ ಕಾಲದಲ್ಲಿ ಯಡಿಯೂರಪ್ಪನವರು ಸಹಿತ ಜೈಲಿಗೆ ಹೋಗದಿದ್ದರು. ಬಳ್ಳಾರಿ ಮತ್ತು ಶಿವಮೊಗ್ಗ ಜೈಲಲ್ಲಿ ಯಡಿಯೂರಪ್ಪನವರನ್ನು ಬಂದಿಯಾಗಿಸಿದ್ದರು. ಪುರಸಭೆಯ ಸದಸ್ಯರಾಗಿದ್ದಾಗ ಅವರ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ಹೀಗೆ ಇವರ ಸಾಮಾಜಿಕ ಜೀವನ ಮುಳ್ಳಿನ ಹಾದಿಯಿಂದ ಇತ್ತು. ಆದರೆ ಎಷ್ಟೇ ಕಷ್ಟ ಬಂದರೂ ಸಾಮಾಜಿಕ ಜೀವನದಿಂದ ಓಡಿಹೋಗಲಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ ೧೯೮೩ರಲ್ಲಿ ಮೊದಲ ಸಲ ವಿಧಾನಸಭೆಗೆ ಆಯ್ಕೆಯಾಗಿ ವಿಧಾನಸಭೆ ಪ್ರವೇಶಮಾಡಿದರು.
Click for Amazon TV Ads
೧೯೮೩ರಲ್ಲಿ ಕೇವಲ ಎರಡೇ ಎರಡು ಶಾಸಕರು ಜನಸಂಘದಿಂದ ಆಯ್ಕೆಯಾಗಿದ್ದರು. ಅಂದಿನ ಸರ್ಕಾರ ಇಬ್ಬರು ಇರುವ ಪಕ್ಷಕ್ಕೆ ಗಾಳಹಾಕಿ ಒಬ್ಬ ಶಾಸಕನನ್ನು ಸೆಳೆದುಬಿಟ್ಟರು ಆದರೆ ಯಡಿಯೂರಪ್ಪನವರು ಮಾತ್ರ ಬೇರೆ ದಾರಿ ತುಳಿಯಲಿಲ್ಲ. ಸತತ ಪ್ರಯತ್ನ ಮತ್ತು ಜನರ ಒಡನಾಟದ ಫಲ ೧೯೮೮ರಲ್ಲಿ ರಾಜ್ಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ೧೯೯೪ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಪಕ್ಷವನ್ನು ರಾಜ್ಯದ ತುಂಬಾ ಓಡಾಡಿ ಪಕ್ಷವನ್ನು ಬಲಪಡಿಸಿದರು. ಮುಂದೆ ೧೯೯೯ರ ವಿಧಾನಸಭೆಯ ಚುನಾವಣೆಯಲ್ಲಿ ರಾಜ್ಯದಲ್ಲಿ ಅನೇಕ ಬದಲಾವಣೆಗಳಾಗಿದ್ದವು. ಲೋಕಶಕ್ತಿ ,ಜನತಾ ಪಕ್ಷ ಜೊತೆ ಭಾರತೀಯ ಜನತಾ ಪಕ್ಷ ಚುನಾವಣೆ ಸ್ಪರ್ದಿಸಿ ಸರ್ಕಾರ ರಚನೆ ಒಂದೇ ಬಾಕಿ ಎನ್ನುವ ಮಟ್ಟಿಗೆ ಭಾರತೀಯ ಜನತಾ ಪಕ್ಷದ ಹವಾ ಸೃಷ್ಟಿಯಾಗಿತ್ತು. ಆದರೆ ಪಕ್ಷಗಳ ಹೊಂದಾಣಿಕೆ ಕೊರೆತೆಯಿಂದ ಸರ್ಕಾರ ರಚನೆ ಮಾಡುವ ಬದಲು ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದು ಎಂದು ಒಳ ಹೊಡೆತದಿಂದ ವಿಧಾನಸಭೆಯಲ್ಲಿ ಪರಾಭವಗೊಂಡರು. ವಿಧಾನಸಭೆಯಲ್ಲಿ ಹಿನ್ನಡೆಯಾದರು ಎದೆಗುಂದದೆ ಪಕ್ಷ ಸಂಘಟನೆ ಕಡೆ ಹೆಚ್ಚಿನ ಗಮನ ಕೊಟ್ಟಿದ್ದರು.
Click for Amazon Tablet Ads
೨೦೦೪ರ ಚುನಾವಣೆಯಲ್ಲಿ ಮತ್ತೆ ವಿಧಾನಸಭೆಗೆ ಆಯ್ಕೆಯಾಗಿ ನಾನೊಬ್ಬ ಜನರ ನಾಯಕ ಎಂದು ಸಾರಿಸಾರಿ ಹೇಳಿದ್ದರು. ಬದಲಾದ ಸನ್ನಿವೇಶದಲ್ಲಿ ಧರಂಸಿಂಗ್ ಸರ್ಕಾರ ಪತನವಾಗಿ ೨೦-೨೦ ತಿಂಗಳ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ ದೆಹಲಿಯಲ್ಲಿ ಇದ್ದ ನಾಯಕ ತಾನು ಮುಖ್ಯಮಂತ್ರಿಯಾಗಬೇಕು ಎಂದು ಹಿಂಬಾಗಿಲಿನಿಂದ ಪ್ರಯತ್ನಿಸುತ್ತಿರುವಾಗ ಯಡಿಯೂರಪ್ಪನವರು ಹೂಡಿದ ದಾಳಕ್ಕೆ ಸ್ವತಃ ಭಾರತೀಯ ಜನತಾ ಪಕ್ಷ ಹೈ ಕಮಾಂಡ ಬೆರಗಾಗಿತ್ತು. ವಿಧಿಯಿಲ್ಲದೆ ಹೈ ಕಮಾಂಡ ಒಪ್ಪಿಗೆ ಸೂಚಿಸಿದ ನಂತರ ರಾಜ್ಯದ ಉಪಮುಖ್ಯಮಂತ್ರಿಯಾಗಿ ಹಸಿರು ಟವೆಲ್ ಹಾಕಿ ಪ್ರಾಮಾಣ ವಚನ ಸ್ವೀಕರಿಸಿದ್ದರು. ಸುಮಾರು ಬಾರಿ ಕುಮಾರಸ್ವಾಮಿ ಶೋಭಾ ಮತ್ತು ಯಡಿಯೂರಪ್ಪ ಮನೆಯ ಬಾಗಿಲಿಗೆ ಬಂದು ಮಂತ್ರಿ ಸ್ಥಾನ ಕೊಡಿ ಅಂತ ಭಿಕ್ಷೆ ಬೇಡಿದರು ಎಂದು ನಾಲ್ಕು ಗೋಡೆಯ ಮದ್ಯೆ ಮಾತುಕತೆಗಳು ನಾಚಿಕೆ ಇಲ್ಲದೆ ಹೇಳುವ ಇವರಿಗೆ ಒಂದು ಪ್ರಶ್ನೆ! ಕೇವಲ ೫೮ ಸೀಟ್ ಇದ್ದುಕೊಂಡು ೮೦ ಸೀಟ್ ಇರುವ ಭಾರತೀಯ ಜನತಾ ಪಕ್ಷದ ಬೆಂಬಲದಿಂದ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿ ಅಧಿಕಾರ ಬಿಟ್ಟುಕೊಡದ ನೀವು ಯಡಿಯೂರಪ್ಪನವರ ಬಗ್ಗೆ ಯಾವ ಅರ್ಹತೆ ಮೇಲೆ ಮಾತಾಡುತ್ತೀರಾ? !
ವಚನಭ್ರಷ್ಟ ಮಾಡಿದ ಪಕ್ಷವನ್ನು ಜನ ತಿರಸ್ಕಾರ ಮಾಡಿದರು. ಭಾರತೀಯ ಜನತಾ ಪಕ್ಷ ೧೧೦ ಸೀಟ್ ಪಡೆದುಕೊಂಡು ಯಡಿಯೂರಪ್ಪನವರು ಎರಡನೆಯ ಬಾರಿ ಮುಖ್ಯಮಂತ್ರಿಯಾದರು. ೧೯೭೨ರಲ್ಲಿ ಪುರಸಭೆಯ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ ಯಡಿಯೂರಪ್ಪನವರು ೨೦೦೮ರಲ್ಲಿ ಪೂರ್ಣ ಪ್ರಮಾಣದ ರಾಜ್ಯದ ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡಿದರು. ಬಹುಮತ ಪಡೆಯುದಕ್ಕೆ ೪ ಸೀಟಗಳ ಕೊರೆತೆ ಮತ್ತು ಭಾರತೀಯ ಜನತಾ ಪಕ್ಷದ ಒಳಜಗಳ ಪರಿಣಾಮ ಕೇವಲ ನೈತಿಕತೆ ಆದರದ ಮೇಲೆ ಮೂರೂ ವರ್ಷ ಆರು ತಿಂಗಳ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಆಸ್ತಿತ್ವದಲ್ಲಿ ಇದ್ದ ಕಾಲದಲ್ಲಿ ಬಳ್ಳಾರಿಯ ಗಣಿಗಾರಿಕೆಯ ವಿಷಯದಲ್ಲಿ ಕುತಂತ್ರ ಮಾಡಿ ಯಡಿಯೂರಪ್ಪನವರ ಹೆಸರನ್ನು ಪುಸ್ತಕದಲ್ಲಿ ಸೇರಿಸಿ ರಾಜೀನಾಮೆ ಕೊಡುವ ಹಾಗೆ ಮಾಡಿದ್ದರು. ಮುಂದೆ ಲೋಕಾಯುಕ್ತ ಮುಖ್ಯಸ್ಥರ ಮತ್ತು ಭಾರತೀಯ ಜನತಾ ಪಕ್ಷದ ದೆಹಲಿ ನಾಯಕರ ಮಧ್ಯೆ ೮೪ ಬಾರಿ ಫೋನ್ ಸಂಭಾಷಣೆ ಆಗಿದ್ದು ಉಲ್ಲೇಖವಾಗಿತ್ತು.
ರಾಜೀನಾಮೆ ಕೊಡುವಾಗ ಕೇವಲ ೬ ತಿಂಗಳಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಬರುತ್ತೇನೆ ಹೇಳಿದ ರೈತನಾಯಕ ಮತ್ತೆ ಮುಖ್ಯಮಂತ್ರಿ ಆಗಿದ್ದು ೨೦೧೯. ಆದೆರೆ ಇದರ ಮದ್ಯೆ ಇಬ್ಬರು ಮುಖ್ಯಮಂತ್ರಿಗಳು ಇವರ ಅನುಕೃಪೆಯಿಂದ ಆಗಿದ್ದು ಯಾರು ಮರೆತಿಲ್ಲಾ. ಅತ್ಯಂತ ಕೆಟ್ಟ ರಾಜಕೀಯಕ್ಕೆ ಬಲಿಯಾಗಿದ್ದು ಯಡಿಯೂರಪ್ಪನವರು ಎಂದರೆ ತಪ್ಪಾಗಲಾರದು ಕಾರಣ ಖಾಸಗಿ ಕೇಸ್ ಒಂದನ್ನು ಹಿಡಿದುಕೊಂಡು ಲೋಕಾಯುಕ್ತ ನ್ಯಾಯಾಲಯದಲ್ಲಿ ಜಾಮೀನು ಸಿಗದೇ ಹಾಗೆ ಮಾಡಿದ ಕುತಂತ್ರಿಗಳು. ಈ ಕೇಸ್ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೇಸ್ ನಡೆಸುವದಕ್ಕೆ ಯೋಗ್ಯವಲ್ಲ ಎಂದು ತಿರಸ್ಕರಿಸಿಬಿಟ್ಟಿತ್ತು.
ಯಡಿಯೂರಪ್ಪನವರು ಪಕ್ಷದಲ್ಲಿ ಇದ್ದರೇ ನಮ್ಮ ಬೆಳೆ ಬೇಯುದಿಲ್ಲಾ ಎಂದು ಅವರನ್ನು ಪಕ್ಷಬಿಡುವ ಹಾಗೆ ಮಾಡಿ ಮಣ್ಣು ತಿಂದದ್ದು ರಾಜ್ಯದ ಜನ ಮರೆತಿಲ್ಲ. ಮತ್ತೆ ಮಾತೃಪಕ್ಷಕ್ಕೆ ಮರಳಿ ಲೋಕಸಭೆಯಲ್ಲಿ ಬಂಗಾರೇಪ್ಪನವರ ಮಗಳನ್ನು ಸೋಲಿಸಿ ೪ ಲಕ್ಷ ಮತಗಳ ಅಂತರದಿಂದ ಲೋಕಸಭೆಯನ್ನು ಪ್ರವೇಶ ಮಾಡಿದ್ದರು. ಹಿಂದೆ ೨೦೦೮ರಲ್ಲಿ ಬಂಗಾರೇಪ್ಪನವರ ವಿರುದ್ಧ ವಿಧಾನಸಭೆಯಲ್ಲಿ ೪೫ ಸಾವಿರ ಮತಗಳಿಂದ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಮತ್ತೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ೧೦೪ ಶಾಸಕರು ಆಯ್ಕೆಯಾದರೂ ಸರ್ಕಾರ ರಚನೆ ಮಾಡಲಾಗಲಿಲ್ಲ. ಛಲ ಬಿಡದೆ ಕಾಂಗ್ರೆಸ್ಸನಲ್ಲಿ ಅತೃಪ್ತ ಶಾಸಕರನ್ನು ಸೆಳೆದು ಮತ್ತೆ ಸರ್ಕಾರ ರಚನೆ ಮಾಡಿ ರಾಜಾಹುಲಿ ಎಂಬ ಪಟ್ಟನ್ನು ಗಿಟ್ಟಿಸಿದರು. ಇಂದು ಅವರ ೭೯ನೇ ಹುಟ್ಟುಹಬ್ಬ ಅವರಿಗೆ ಇನ್ನು ಒಳ್ಳೆಯ ಆರೋಗ್ಯ ಮತ್ತು ಹೆಚ್ಚಿನ ಶಕ್ತಿ ಕೊಟ್ಟು ಜನರ ಸೇವೆ ಮಾಡಲಿ ಎಂದು ಬಯಸುತ್ತೇವೆ.
Categories: Articles

Ankanagalu nimm drustikongalu tumba chennagive
LikeLiked by 1 person
Well written
LikeLiked by 1 person