news

ಟ್ರ್ಯಾಪ್? ದ್ರೋಣ ಪ್ರಾಜೆಕ್ಟ್ನಿಂದ ಸಚಿವರ ರಾಜೀನಾಮೆ? ಯಾರು ಟಾರ್ಗೆಟ್?ಕುಟುಂಬದಿಂದ ದೂರ ಇರುವ ಶಾಸಕರಾ?

ರಾಜ್ಯದಲ್ಲಿ ಮತ್ತೆ ಸಾಹುಕಾರನ ರಾಸಲೀಲೆ ಸದ್ದು ಜೋರಾಗಿದೆ. ಕುಟುಂಬ ಸಮೇತ ನೋಡುವ ಸಿಡಿ ಅಲ್ಲವೇ ಅಲ್ಲ. ಆದರೆ ಸಚಿವರ ಮತ್ತು ಸಂತ್ರಸ್ತೆ ಸಂಭಾಷಣೆ ನೋಡಿದರೆ ಇದೊಂದು ಪಕ್ಕ ಪೂರ್ವನಿಯೋಜಿತ ಎನಿಸುತ್ತೆ. ಡ್ರೋನ್ ದಿಂದ ಡ್ಯಾಮ್ ಸೆರೆ ಹಿಡಿದು ಜನರಿಗೆ ತೋರಿಸಬೇಕು ಅದಕ್ಕೆ ನಿಮ್ಮ ಸಹಾಯಬೇಕು ಸರ್! ಎಂದು ಬಂದು ಸೆರೆ ಹಿಡಿದಿದ್ದು ಏನು? ಆದರೆ ರಾಜ್ಯ ನಾಯಕರಾದವರು ಶಿಸ್ತನ್ನು ಮೀರಿ ನಡೆದರೆ ಸಮಾಜದ ಮುಂದೆ ಮಾನ ಹರಾಜು ಆಗುವುದು ಖಂಡಿತ. ಹಿಂದೆ ರಾಜ್ಯದಲ್ಲಿ ಹನಿ ಟ್ರ್ಯಾಪ್ ಆದಾಗ ಆರೋಪಿಗಳು ಹೇಳಿದ್ದು ನಮ್ಮ ಟಾರ್ಗೆಟ್ ಹೆಂಡತಿಯಿಂದ ಎಂದರೆ ಕುಟುಂಬದಿಂದ ದೂರ ಇರುವವರೇ ನಮ್ಮ ಟಾರ್ಗೆಟ್. ಇಲ್ಲಿ ಮುಖ್ಯ ಉದ್ದೇಶ ಹಣ! ಇಲ್ಲಿ ಯಾರು ಇದರ ಹಿಂದೆ ಇದ್ದಾರೆ ಎನ್ನುವದಕ್ಕಿಂತ ಹಣದ ಉದ್ದೇಶದಿಂದ ಪ್ರಾರಂಭವಾಗಿ ರಾಜಕೀಯವಾಗಿ ಮುನ್ನೆಲೆಗೆ ಬರುತ್ತೆ.

ಹಿಂದೆ ಪ್ರಭಾವಿಗಳು ತಮ್ಮ ಹಣಬಲದಿಂದ ಮತ್ತು ತೋಳಬಲದಿಂದ ಅತ್ಯಾಚಾರಕ್ಕೆ ಇಳಿಯುತ್ತಿದ್ದರು. ಇವಾಗ ಸಮಯ ಬದಲಾಗಿದೆ ಕಾರಣ ಟೆಕ್ನಾಲಜಿ. ಟಕ್ನಾಲಾಜಿಗೆ ಮತ್ತು ಮಾಧ್ಯಮಕ್ಕೆ ಹೆದರಿ ಸುಮ್ನೆ ಇದ್ದರೇ ಹನಿ ಟ್ರ್ಯಾಪ್ ಇವರನ್ನು ತಮ್ಮ ಬಲೆಗೆ ಬೀಳಿಸಲು ಇನ್ನಿತರ ಕಸರತ್ತು ಮಾಡುತ್ತಾರೆ. ಮೂರೂ ನಾಲ್ಕು ವಿದ್ಯಾರ್ಥಿಗಳ ಗುಂಪು ಮಾಡಿಕೊಂಡು ನಮ್ಮ ಕಾಲೇಜೆಯಲ್ಲಿ ರಾಜಕೀಯ ಅಥವಾ ಇನ್ನ್ಯಾವದೋ ಪ್ರಾಜೆಕ್ಟ್ ಹೇಳಿ ಶಾಸಕರನ್ನು ಒಪ್ಪಿಸುತ್ತಾರೆ. ೧ ರಿಂದ ೩ ತಿಂಗಳಲ್ಲಿ ಒಬ್ಬಂಟಿಯಾಗಿರುವ ತಮ್ಮಷ್ಟೇ ವಯಸ್ಸಿನ ಮಕ್ಕಳು ಇರುವ ಶಾಸಕರನ್ನು ಅಥವಾ ರಾಜಕೀಯ ವ್ಯಕ್ತಿಗಳ ಮನಸ್ಸು ಬದಲಾವಣೆ ಮಾಡಿ ತಮ್ಮ ಗುರಿ ಸಾಧಿಸುತ್ತಾರೆ. ಅವರ ಮುಖ್ಯ ಉದ್ದೇಶ ಅವರ ಖಾಸಗಿ ಜೀವನವನ್ನು ಸಿಡಿ ರೂಪದಲ್ಲಿ ತಗೆದು ಹಣೆಕ್ಕೆ ಬೇಡಿಕೆ ಇಡುವುದು. ಇದು ಕೋಟಿ ಕೋಟಿ ಲೆಕ್ಕದಲ್ಲಿ! ಇಲ್ಲಿ ಜಾರಿ ಬಿದ್ದ ಶಾಸಕನ ಬಗ್ಗೆ ಅನುಕಂಪ ಇಲ್ಲ. ಆದರೆ ಸುಮ್ಮನೆ ಇದ್ದವರನ್ನು ಪ್ರಚೋದನೆ ಮಾಡಿ ಅವರ ಮಾನ ಹರಾಜಾಗುವದಕ್ಕೆ ಕಾರಣವಾದವರನ್ನು ಶಿಕ್ಷಿಸಬೇಕು. ಅವರು ಪ್ರಚೋದನೆ ಮಾಡಿದ್ದಾರೆ ಎಂದು ಹೇಳಲು ಹಿಂದಿನ ಸಿಡಿಗಳನ್ನು ಮತ್ತು ಸಂಭಾಷಣೆ ನೋಡಿದಾಗ ಗೊತ್ತಾಗುತ್ತೆ.

ಕಷ್ಟಪಟ್ಟು ಕಟ್ಟಿದ ವ್ಯಕ್ತಿತ್ವ ಕೇವಲ ಒಂದು ಸಿಡಿಯಿಂದ ಬೀದಿಗೆ ಬಂದಿದೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು! ಅಸಲಿ ಅಥವಾ ನಕಲಿ ಎನ್ನುವುದು ತದನಂತರ ಬರುವ ವಿಷಯ ಸದ್ಯದ ಮಟ್ಟಿಗೆ ರಾಜೀನಾಮೆ ಕೊಟ್ಟರೂ ಮಾನವನ್ನು ಮರಳಿ ಪಡೆಯುದಕ್ಕೆ ಸಾಧ್ಯವೇ?

ಇದೇನು ಮೊದಲೇನು ಅಲ್ಲ ಮತ್ತು ಕೊನೆಯು ಆಗದು. ಎಲ್ಲಿಯರಗೇ ರಾಜಕೀಯ ನಾಯಕರಿಗೆ ಸಿದ್ಧಾಂತದ ಭಯವಿರುವದಿಲ್ಲವೋ ಹಿಂತಹ ಮಾನಹೋಗುವ ಕೆಲಸಗಳು ಘಟಿಸುತ್ತವೆ. ಇದು ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಒಂದು ರಾಮಾಯಣದ ಪ್ರಕಾರ ರಾವಣನು ಅತ್ಯಂತ ಶ್ರೇಷ್ಠ ವ್ಯಕ್ತಿಯಾಗಿದ್ದು. ಹೇಗೆ ಸಮುದ್ರ ಒಮ್ಮೊಮ್ಮೆ ಗಾಳಿಗೆ ಸಿಕ್ಕು ದೊಡ್ಡ ದೊಡ್ಡ ಅಲೆಗಳ ಮೂಲಕ ಶಾಂತವಾಗಿದ್ದ ಸರೋವರನ್ನು ಅಲ್ಲೊಲ್ಲ ಕಲ್ಲೊಲ್ಲ ಆಗುತ್ತೆ ಹಾಗೆ ಶ್ರೇಷ್ಠ ವ್ಯಕ್ತಿಯಾಗಿದ್ದ ರಾವಣನ ಜೀವನದಲ್ಲಿ ಆಕಸ್ಮಿಕವಾದ ಘಟನೆಯಿಂದ ಕೆಟ್ಟ ರಾವಣನಾಗಿ ಇತಿಹಾಸ ಬಿಟ್ಟುಹೋದ. ಅಂತಹ ರಾವಣನೇ ಹಾದಿ ತಪ್ಪಿ ತನ್ನ ಕೆಟ್ಟ ಇತಿಹಾಸಕ್ಕೆ ಕಾರಣವಾಗಿದ್ದ.

ಈಗಿನ ಸಿದ್ದಾಂತವಿಲ್ಲದೆ ರಾಜಕೀಯ ಮಾಡುವ ನಾಯಕರಿಗೆ ಬಲೆಗೆ ಬೀಳಿಸುವ ಕೆಲಸ ಬಲು ಸಲೀಸು. ಮೊದಲೇ ಹಣ,ಹೆಂಡ ಮತ್ತು ಹೊನ್ನು ಎಂದರೆ ಸಿದ್ದಾಂತವನ್ನು ಬದಿಗೊರಿಸಿ ಮೆರೆಯುವ ರಾಜಕಾರಣಿಗಳಿಗೆ ಇಂತಹ ಸಿಡಿಗೆ ಹೋದ ಮಾನ ಮತ್ತೆ ಬರುವುದೇ? ರಾಸಲೀಲೆಯ ಸಿಡಿ ಅವರ ಕುಟುಂಬವನ್ನು ಎಷ್ಟು ಬಾಧಿಸಬಹುದು?

ರಾಜಕಾರಣಿಗಳು ಹೈ ಪೊಫೈಲ್ ಹೊಂದಿದ ವ್ಯಕ್ತಿಗಳು ಇರುವದರಿಂದ ಇವರಿಗೆ ಗಾಳ ಹಾಕುವ ಜನರು ಸಾವಿರಾರು. ಅದಕ್ಕೆ ತುಂಬಾ ಎಚ್ಚರವಿರಬೇಕು! ಸ್ವಲ್ಪ ಮೈಮರೆತರೆ ರಿಪೇರಿ ಆಗದ ಹಾಗೆ ಆಗುತ್ತೆ. ಕೆಲವು ಸಲ ನಾವು ಒಳ್ಳೆಯವರ ನಡೆಗಳನ್ನು ನೋಡಿ ಕಲಿಯಬೇಕು. ಕೆಲವು ನಾಯಕರು ಕುಡಿಯುವದಿಲ್ಲ, ಮನಸ್ಸು ಹದ್ದು ಬಸ್ತಿನಲ್ಲಿ ಇರಲಿ ಅಂತ ಉಪವಾಸ ಮಾಡುವದನ್ನು ನೋಡಿದ್ದೇವೆ. ಯಾವದೇ ಪಾರ್ಟಿಗಳನ್ನು ಮಾಡುವದಿಲ್ಲ. ಅವರಿಗೆ ಗೊತ್ತಿದೆ ಕಷ್ಟಪಟ್ಟು ಸಮಾಜ ಸೇವೆ ಮಾಡಬೇಕೆಂದು ಬಂದು ಹಾದಿ ತಪ್ಪಿದರೆ ನಮಗೆ ಜೀವನವೇ ನಾಶ!

ಮೊನ್ನೆ ಮೊನ್ನೆ ಇಡೀ ರಾಜ್ಯದ ಚಿತ್ರಣವೇ ಬದಲಿಸಿದ ಒಬ್ಬ ನಾಯಕ ಇವತ್ತು ಮೊಬೈಲ್ ಸ್ವಿಚ್ ಆಫ್ ಆಗಿ ಯಾರಿಗೂ ಕೈಗೆ ಸಿಗದೇ ಮುಖ ಮುಚ್ಚುಕೊಂಡು ತಿರುಗಾಡುವ ಸಮಯ ಬಂದಿದೆ ಎಂದರೆ ಅವರಿಗೆ ಎಷ್ಟು ಪಶ್ಚಾತಾಪ ಆಗಿರಬೇಕು. ಕಾನೂನ ಪ್ರಕಾರ ಯಾವದು ತಪ್ಪು ಎಂದು ನಿರ್ಧಾರ ನ್ಯಾಯಾಲಯ ತಗೆದುಕೊಳ್ಳುತ್ತೆ. ಆದರೆ ನೈತಿಕವಾಗಿ ರಾಜೀನಾಮೆ ಕೊಡಬಹುದು ಆದರೆ ಹೋದ ಮಾನ ಯಾರು ತಂದುಕೊಡುತ್ತಾರೆ? ಅದಕ್ಕೆ ಸಾಮಾಜಿಕ ಜೀವನದಲ್ಲಿ ಇರುವವರು ಬಹಳ ಎಚ್ಚರಿಕೆಯಿಂದ ಇರಬೇಕು ಅಲ್ವಾ?

Categories: news

Tagged as: ,

1 reply »

  1. ಆಧುನಿಕತೆಯಿಂದ ಹಿಂದೆ ಸಾಕ್ಷ್ಯವೇ ಸಿಗದೇ ಬಚಾವಾಗಬಹುದಾದ ಇಂತಹ ಪ್ರಕರಣಗಳು ಈಗ ಸುಲಭವಾಗಿ ಎಲ್ಲರಿಗೂ ಗೊತ್ತಾಗುವಂತೆ ಆಗುತ್ತವೆ. ರಾಜ್ಯ ಬಿಜೆಪಿ ಸರಕಾರ ಇಂತಹ ಪ್ರಕರಣಗಳನ್ನು ಮುಚ್ಚಿಹಾಕಲು ಈ ಹಿಂದೆಯೂ ಯಶಸ್ವಿಯಾಗಿದೆ.

    Liked by 1 person

Leave a Reply