Articles

ಒಂದು ರಾಷ್ಟ್ರ ಮತ್ತು ಒಂದು ಚುನಾವಣೆಗೆ ತೊಡಕೇನು?

ವಿಧಾನಸಭೆಯಲ್ಲಿ ಒಂದು ರಾಷ್ಟ್ರ ,ಒಂದು ಚುನಾವಣೆ ಕುರಿತು ಅಭಿಪ್ರಾಯಕ್ಕೆ ಅವಕಾಶ ಕೊಟ್ಟರೇ ಸದನದ ಬಾವಿಗಿಳಿದು ಪ್ರತಿಭಟನೆ ಮಾಡುತ್ತಾರೆ . ವಿರೋಧವಿದ್ದರೆ ಖಂಡಿತವಾಗಿ ತಮ್ಮ ಅಭಿಪ್ರಾಯ ಸಭೆಯಲ್ಲಿ ಹೇಳಬಹುದಲ್ಲವೇ ? ಜನ ನಿಮ್ಮನ್ನು ಆಯ್ಕೆಮಾಡಿ ಕಳಿಸಿದ್ದು ಕಚ್ಚಾಡುವದಕ್ಕೆ ಎಂದು ತಿಳಿದುಕೊಂಡಿದ್ದೀರಿ ಅನಿಸುತ್ತೆ. ಭಾರತೀಯ ಜನತಾ ಪಕ್ಷ ಪಾಸ್ ಮಾಡಿಕೊಂಡು ಬಂದ ನಂತರ ನಮಗೆ ಅವಕಾಶ ಕೊಡಲಿಲ್ಲ ಎಂದು ಹೇಳುವುದು ಯಾವ ನ್ಯಾಯ? ನಿಮ್ಮ ನಿಮ್ಮ ಜಗಳಕ್ಕೆ ರಾಜ್ಯವನ್ನು ಮತ್ತು ರಾಜ್ಯದ ಜನರ ದುಡ್ಡುನ್ನು ಹಾಳುಮಾಡುತ್ತಿದ್ದಿರಿ.

ಸಿದ್ದರಾಮಯ್ಯನವರು ಯಾವ ಅಡಿಯಲ್ಲಿ ಇದನ್ನು ಅಜೆಂಡಾದಲ್ಲಿ ಹಾಕಿದ್ದೀರಿ ಎಂದರೆ, ಸ್ಪೀಕರ್ ಉತ್ತರ ,ಹೇಗೆ ೩೬೩ರ ಅಡಿಯಲ್ಲಿ ವಿಶೇಷ ಅಧಿಕಾರ ಉಪಯೋಗಿಸಿ ಸಂವಿಧಾನದ ಚರ್ಚೆ ಮಾಡಿದ್ದೆವು ಹಾಗೆ ಇವತ್ತು ನನ್ನ ವಿಶೇಷ ಅಧಿಕಾರ ಉಪಯೋಗಿಸಿ ಒಂದು ರಾಷ್ಟ್ರ ಮತ್ತು ಒಂದು ಚುನಾವಣೆ ಚರ್ಚಗೆ ಅವಕಾಶವನ್ನು ಕೊಟ್ಟಿದ್ದೇನೆ. ಇಷ್ಟಾದರೂ ಸಿದ್ದರಾಮಯ್ಯ ಮತ್ತೆ ಮುಂದುವರೆದಾಗ ಮಾಧುಸ್ವಾಮಿ ಎದ್ದು ಅಧಿಕಾರ ಇಲ್ಲ ಎಂದು ಹೇಳಿ ಮುಂದೆಹೋಗಬೇಡಿ. ಮೊದಲು ಅಧಿಕಾರ ಇದೆಯಾ ಎಂದು ಪರಹರಿಸಿ ಎಂದಾಗ ಸಿದ್ದರಾಮಯ್ಯ ಕುಳಿತಿಕೊಂಡರೂ ಮತ್ತೆ ಕಾಂಗ್ರೆಸ್ ಶಾಸಕರು ಪಾಯಿಂಟ್ ಆ ಆರ್ಡರ್ ಬಗ್ಗೆ ಕೇಳುತ್ತಾ ಸದನದ ಬಾವಿಗಿಳಿದು ಇದೊಂದು ಆರ್ ಎಸ್ ಎಸ್ ಅಜೆಂಡಾ ಎಂದು ಕೂಗತೊಡಗಿದರು! ಆದರೂ ಸಭಾಪತಿ ತಮ್ಮ ಅಭಿಪ್ರಾಯ ಓದತೊಡಗಿದರು ಅದನ್ನು ಕೇಳುವುದನ್ನು ಬಿಟ್ಟು ಅಸಹ್ಯವಾಗಿ ವರ್ತಿಸಿದರು!

ಮುಖ್ಯಮಂತ್ರಿ ಎದ್ದು ನಿಂತು ಬಿಸಿನೆಸ್ ಅಡ್ವೈಸರಿ ಕಮಿಟಿಯಲ್ಲಿ ಇದರ ಬಗ್ಗೆ ಚರ್ಚೆ ಮಾಡೋಣ ಎಂದು ಒಪ್ಪಿದರೂ ಸದನದಲ್ಲಿ ಇದನ್ನು ವಿರೋಧಿಸಿದ್ದು ಯಾವ ಆಧಾರದ ಮೇಲೆ ಎಂದು ಜನರಿಗೆ ಏನು ಹೇಳುತ್ತೀರಿ ಎಂದರೂ ಕಿವಿಡಗೊಡದೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ಅವರ ಒಂದೇ ಒಂದು ಪ್ರಶ್ನೆ ಇದನ್ನು ಚರ್ಚೆ ಮಾಡಲು ಬರುವದಿಲ್ಲ . ವಿರೋಧವಿದ್ದರೆ ಅಭಿಪ್ರಾಯ ಹೇಳಿದರೆ ಜನರಿಗೆ ತಿಳಿದು ಅದರ ಅನಾನುಕೂಲತೆ ಗೊತ್ತಾಗುತ್ತದೆ ಆದರೆ ಅದು ಬಿಟ್ಟು ಕೇವಲ ಭಾರತೀಯ ಜನತಾ ಪಕ್ಷ ದ ಅಜೆಂಡಾ ಎಂದು ವಿರೋಧಿಸಿದರೆ ಯಾರಿಗೆ ಅನುಕೂಲ? ಹೊರಗಡೆ ಕಾಂಗ್ರೆಸ್ ಅಧ್ಯಕ್ಷರು ಸುದ್ದಿಗೋಷ್ಠಿ ಮಾಡಿ ನಾವು ಇದರ ಬಗ್ಗೆ ಚರ್ಚೆ ಮಾಡುವದಿಲ್ಲ ಕಾರಣ ರಾಜ್ಯ ಬೇರೆ ಬೇರೆ ಸಮಸ್ಯೆಗಳನ್ನು ಎದುರಿಸುತ್ತಿದೆ ಅದರ ಬಗ್ಗೆ ಚರ್ಚೆ ಮಾಡೋಣ ! ಇದು ಬಿಸಿನೆಸ್ ಕಮಿಟಿಯಲ್ಲೇ ಹೇಳಬಹುದಿತ್ತಲ್ಲಾ?(ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದು ಎಂದು ವಿಧಾನಸಭೆಯಲ್ಲಿ ಹೇಳಿದ್ದು). ೧೯ ಜನರು ಮಾತನಾಡುವವರ ಪಟ್ಟಿಕೊಟ್ಟು ಇಂದು ಬೆಳಿಗ್ಗೆ ಇದಕ್ಕೆ ವಿರೋಧಮಾಡಿದರೆ ಹೇಗೆ?

ಮುಂದೆ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂದು ರಾಜ್ಯ ಪಾದಯಾತ್ರೆ ಮಾಡಲು ಹೊರಟಿರುವ ನಿಮಗೆ ಹಿಂತಹ ಮುಖ್ಯವಾದ ವಿಷಯ ಬಗ್ಗೆ ಚರ್ಚೆ ಮಾಡುವ ಮನಸ್ಸು ಇಲ್ಲವೆಂದರೆ ಹೇಗೆ ನೀವು ರಾಜ್ಯದ ಅಭಿವೃದ್ಧಿ ಮಾಡುತ್ತೀರಿ? ಎಂದರೆ ನಿಮಗೆ ಕೇವಲ ಭಾರತೀಯ ಜನತಾ ಪಕ್ಷವನ್ನು ವಿರೋಧ ಮಾಡಬೇಕು ಅಷ್ಟೇ. ನೀವು ಹೇಳಿದ ಹಾಗೆ ಇಂದೊಂದು ಆರ್ ಎಸ್ ಎಸ್ ಅಜೆಂಡಾ ಎಂದಾದರೆ ಅದನ್ನು ಬಿಡಿ ಬಿಡಿಯಾಗಿ ಹೇಳಿ ಜನರಿಗೆ ತಿಳಿಸಿ ಹೇಗೆ ಇದೊಂದು ರಾಜ್ಯಕ್ಕೆ ಮತ್ತು ಜನರಿಗೆ ಮಾರಕ! ಇದು ಜನರಿಗೆ ಮಾರಕ ಎಂದಾದರೆ ಜನ ತಮಗೆ ಬೇಕಾದ ತೀರ್ಪನ್ನು ಕೊಡುತ್ತಾರೆ!

ಇನ್ನೊಂದು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಒಂದು ದೇಶ ಒಂದು ಚುನಾವಣೆ ನಡೆಯುತ್ತಿದೆ. ಇದರ ಲಾಭ ನಾವು ಕೋಟಿ ಕೋಟಿ ದುಡ್ಡನ್ನು ಉಳಿಸಬಹುದು. ಮತ್ತು ಪದೇ ಪದೇ ಚುನಾವಣೆ ನಡೆಯುದರಿಂದ ನೀತಿ ಸಂಹಿತೆ ಯೋಜನೆಗಳನ್ನು ಮಾಡಲು ತೊಡೋಕಿರುತ್ತೆ! ಹೀಗೆ ಅನೇಕ ಒಳ್ಳೆಯ ಅನುಕೂಲಗಳ ಬಗ್ಗೆ ಚರ್ಚೆ ಮಾಡಿ ಜನರಿಗೆ ತಲಪಿಸಬೇಕು. ಒಂದೇ ಚುನಾವಣೆ ಮಾಡಿದರೆ ಮತದಾನವನ್ನು ಹೆಚ್ಚಿಸಬಹುದು. ಬೇರೆ ಬೇರೆ ಟೆಕ್ನಾಲಾಜಿ ಉಪಯೋಗ ಮಾಡಿಕೊಂಡು ಇನ್ನು ಪಾರದರ್ಶಕವಾಗಿ ಚುನಾವಣೆಯನ್ನು ಮಾಡಬಹವುದು. ಒಂದು ದೇಶ ಮತ್ತು ಒಂದು ಚುನಾವಣೆ ಪ್ರಾಮಾಣಿಕ ಪ್ರಯತ್ನ ಎರಡು ಪಕ್ಷಗಳು ಮಾಡಬೇಕು. ಕೆಲಯೊಂದು ಅನಾನುಕೂಲ ಎಂದರೆ ರಾಷ್ಟ್ರಪತಿ ಆಡಳಿತ ಹೇಗೆ ನಾವು ಅಳವಡಿಸಬೇಕು ಎಲ್ಲವನ್ನು ಕೂಲಂಕುಶವಾಗಿ ಚರ್ಚೆ ಮಾಡಬೇಕು! ಕಾನೂನಗಳ ತೊಡಕಿದ್ದರೆ ಕಾನೂನಗಳನ್ನು ತಿದ್ದುಪಡಿ ಮಾಡಿ ದೇಶವನ್ನು ಇನ್ನಷ್ಟು ಸದೃಢಮಾಡಬೇಕು.

Categories: Articles, news

Tagged as: , ,

1 reply »

  1. ಒಂದು ದೇಶ ಒಂದು ಚುನಾವಣೆಗೆ ನಮ್ಮ ಸೈದ್ಧಾಂತಿಕ ವಿರೋಧವಿದೆ. ಈ ವಿರೋಧವನ್ನು ವಿರೋಧಪಕ್ಷಗಳು ಸದನದಲ್ಲಿ ಉತ್ತಮ ಚರ್ಚೆಯ ಮೂಲಕ ಮನವರಿಕೆ ಮಾಡಿಕೊಡಬಹುದಿತ್ತು.

    Liked by 1 person

Leave a Reply