
ಮೋದಿ ಸುಮಾರು ೧೨ ವರ್ಷಗಳ ಕಾಲ ಪ್ರಾಮಾಣಿಕವಾಗಿ ಗುಜರಾತ ರಾಜ್ಯದ ಸೇವೆ ಮಾಡುವದಕ್ಕಿಂತ ಮುಂಚೆ ಸಂಘದಲ್ಲಿ ಕೆಲಸ ಮಾಡಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿ ಅಡ್ವಾಣಿಗೆ ಮತ್ತು ದೆಹಲಿಯ ನಾಯಕರಿಗೆ ಹೆಗಲ ಕೊಟ್ಟು ಕೆಲಸ ಮಾಡಿ ಪಡೆದ ಅನುಭವ ಅದ್ಬುತ. ಮೋದಿಯವರು ಯಾವದೇ ರಾಜಕೀಯ ಮತ್ತು ಶ್ರೀಮಂತ ಮನೆತನದ ಹಿನ್ನಲೆ ಇರಲಿಲ್ಲ. ಆದರೂ ದೇಶಭಕ್ತಿ ಮತ್ತು ಬಸವಳಿದ ಜನರ ಸೇವೆಗೆ ಎತ್ತಿದ ಕೈ. ಇಂತಹ ಸಮಯದಲ್ಲಿ ದೊಡ್ಡ ದೊಡ್ಡ ನಾಯಕರು, ಶ್ರೀಮಂತರು ಮತ್ತು ಹೆಸರು ಮಾಡಿದ ವ್ಯಕ್ತಿಗಳು ಪಕ್ಷದ ಕಚೇರಿಗೆ ಬಂದಾಗ ಅಲ್ಲಿ ಯಾವಾಗಲೂ ಪಕ್ಷಕ್ಕಾಗಿ ಕೆಲಸ ಮಾಡುತ್ತಾ ಇದ್ದ ವ್ಯಕ್ತಿ ಮೋದಿಯವರನ್ನು ಬೇಟಿ ಮಾಡಿ ಹೋಗುತ್ತಿದ್ದರು. ಇದರ ಅರ್ಥ ಮೋದಿಯವರು ಎಲ್ಲರಿಗೂ ಗೊತ್ತು ಆದರೆ ಅವರದು ಹೈ ಪ್ರೊಫೈಲ್ ಹೊಂದಿರದ ವ್ಯಕ್ತಿತ್ವವಾಗಿತ್ತು. ಹೆಸರು ಮಾಡಿದ ವ್ಯಕ್ತಿಗಳು ಅಲ್ಲಿಗೆ ಬಂದಾಗ ಮೋದಿಯವರನ್ನು ಅಷ್ಟೇನೂ ದೊಡ್ಡ ನಾಯಕ ಎಂದು ಅವರಿಗೆ ಎನಿಸರಲಿಲ್ಲ. ಆದರೆ ಹೆಸರು ಮಾಡಿದ ವ್ಯಕ್ತಿಗಳು ಮುಂದೆ ಮೋದಿ ಪ್ರಧಾನಿ ಆದರೆ ಅವರ ಮುಂದೆ ನಿಂತು ಸರ್ ಹೇಳಬೇಕು ಎಂದಾಗ ಸಂಕಟ ಪಟ್ಟು ಕುತಂತ್ರ ಮಾಡಿ ಅವರನ್ನು ಪ್ರಧಾನ ಮಂತ್ರಿ ಆಗಲೇಬಾರದು ಎಂದು ಹಣೆದ ದಾಳ ನೂರೆಂಟು!
ಆದರೆ ದೈವಿಚ್ಛೆ ಬೇರೆಯದೇ ಆಗಿತ್ತು ೨೦೧೪ರಲ್ಲಿ ಪ್ರಚಂಡ ಬಹುಮತದಿಂದ ದೇಶದ ಪ್ರಧಾನಿಯಾಗಿ ಹೊರಹೊಮ್ಮಿದರು. ಯಾವಾಗ ಮೋದಿ ಪ್ರಧಾನಿಯಾದರೋ ಕೆಲವರಿಗೆ ನುಂಗಲಾರದ ತುತ್ತಾಗಿಬಿಟ್ಟಿತು. ನಮ್ಮ ಮುಂದೆ ಇದ್ದ ವ್ಯಕ್ತಿ ಇವತ್ತು ದೆಹಲಿ ಆಳುವ ಮಟ್ಟಿಗೆ ಬೆಳೆಯುವದಲ್ಲದೆ ಇಂದು ಮೋದಿ ಮುಂದೆ ನಿಂತು ಸರ್ ಎಂದು ಕರೆಯಬೇಕಲ್ಲಾ ಅದಕ್ಕೆ ಅವರ ಒಳಮನಸ್ಸು ಒಪ್ಪಲಿಲ್ಲ ಆದರೆ ಬೇರೆ ಗತಿ ಇರಲಿಲ್ಲ. ಅಂತಹ ನಾಯಕರಲ್ಲಿ ಒಬ್ಬರಾಗಿದ್ದ ಶತ್ರುಘ್ನ ಸಿನ್ಹಾ . ಇವರು ಜನಪ್ರಿಯ ಸಿನಿಮಾ ನಟ ಮತ್ತು ಬಿಹಾರದ ಸಂಸದ. ಅಲ್ಲಿನ ತಮ್ಮ ಕ್ಷೇತ್ರಕ್ಕೆ ಅವರ ಕೊಡುಗೆ ಎಷ್ಟಿದೆ ಎಂಬುದು ಯಕ್ಷ ಪ್ರಶ್ನೆ ! ಆದರೆ ಮೊದಲೇ ಮೋದಿ ನಮ್ಮ ಪ್ರಧಾನಿ ಎಂದು ಒಪ್ಪುವ ಮನಸ್ಸಿಲ್ಲಾ ಅಂತಹ ಸ್ಥಿತಿಯಲ್ಲಿ ಮಂತ್ರಿ ಸ್ಥಾನ ಬೇರೆ ಕೊಡಲಿಲ್ಲ. ಯಾವಾಗ ಮಂತ್ರಿ ಸ್ಥಾನ ತಪ್ಪಿತೋ ಮೋದಿಯವರೇ ಇವರ ಟಾರ್ಗೆಟ್ ಆಗಿಬಿಟ್ಟರು!
ಪಾಪ ಶತ್ರುಘ್ನ ಅವರಿಗೆ ಗೊತ್ತಿರಲಿಲ್ಲ ನಾನು ಗೆದ್ದು ಬರುತ್ತಿರುವುದು ಭಾರತೀಯ ಜನತಾ ಪಕ್ಷದ ಚಿಹ್ನೆಯಲ್ಲಿ ಅಂತ. ೨೦೧೪ ರಿಂದ ೨೦೧೯ ರವರೆಗೆ ಶತ್ರು ಮೋದಿಯನ್ನು ಹೀನಾಯವಾಗಿ ಟೀಕಿಸಿದ್ದರು. ಪ್ರತಿ ಬಾರಿ ಟೀಕಿಸಿದಾಗಲೂ ಜನ ಕೇಳುತ್ತಿದ್ದ ಪ್ರಶ್ನೆ ಯಾವಾಗ ಸಿನ್ಹಾ ಉಚ್ಚಾಟನೆ ! ಕಾರಣ ಸರ್ಕಾರವನ್ನೇ ಟಾರ್ಗೆಟ್ ಮಾಡಿ ಮೋದಿಯನ್ನು ಹಿಗ್ಗಾ ಮುಗ್ಗ ತರಾಟೆಗೆ ತಗೆದುಕೊಳ್ಳುತ್ತಿರುವುದು ಪಕ್ಷದ ಕಾರ್ಯಕರ್ತರಿಗೆ ಸಹಿಸಿಕೊಳ್ಳಲಾಗಲಿಲ್ಲ. ಆದರೂ ಪಕ್ಷ ಅವರನ್ನು ಉಚ್ಚಾಟನೆ ಮಾಡಲೇ ಇಲ್ಲಾ. ಆದರೆ ೨೦೧೯ರ ಚುನಾವಣೆಯಲ್ಲಿ ಲೋಕಸಭೆಯ ಟಿಕೆಟ್ ಕೊಡಲಿಲ್ಲ. ಟಿಕೆಟ್ ಸಿಗದೇ ಕೆಂಡಾಮಂಡಲವಾಗಿ ತಾನು ಕಾಂಗ್ರೇಸ ಟಿಕೆಟ್ ಮತ್ತು ಹೆಂಡತಿ ಸಮಾಜವಾದಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧೆಮಾಡಿ ಹೀನಾಯವಾಗಿ ಸೋತರು! ಪಕ್ಷದ ಸಿದ್ದಾಂತ ಮರೆತಿರುವುದಕ್ಕೆ ಕೊಟ್ಟ ಉತ್ತರ ಉಚ್ಚಾಟನೆ ಅಲ್ಲ ರಾಜಕೀಯ ಜೀವನದ ಅಂತ್ಯ!
ಭಾರತೀಯ ಜನತಾ ಪಕ್ಷ ಕೇವಲ ಜಿಲ್ಲೆಯ ಮತ್ತು ತಾಲೂಕು ಪಕ್ಷವಾಗಿ ರಾಜ್ಯದಲ್ಲಿ ಬೇರೂರಿತ್ತು ಆದರೆ ಅದನ್ನು ಹಳ್ಳಿಗರ ಮತ್ತು ರೈತರ ಪಕ್ಷವನ್ನಾಗಿ ಪರಿವರ್ತಿಸಿದ್ದು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ. ೧೯೯೦ರ ವೇಳೆಯಲ್ಲಿ ಬಿಜೆಪಿ ಕರಾವಳಿ ಭಾಗದಲ್ಲಿ ತುಂಬಾ ಗಟ್ಟಿಯಾಗಿ ಬೆಳೆದಿತ್ತು. ಅಂತಹ ಸಮಯದಲ್ಲಿ ಉತ್ತರಕರ್ನಾಟಕದ ಕೆಲವು ಭಾಗದಲ್ಲಿ ಭಾರತೀಯ ಜನತಾ ಪಕ್ಷ ತನ್ನ ಖಾತೆಯನ್ನು ತಗೆದಿತ್ತು ಮತ್ತು ಅದರಲ್ಲಿ ವಿಜಯಪುರ ನಗರವು ಸೇರಿತ್ತು. ದುಡ್ಡಿಲ್ಲಿದ ರಾಜಕಾರಣಕ್ಕೆ ಭಾರತೀಯ ಜನತಾ ಪಕ್ಷ ಹೆಸರುವಾಸಿ. ಪಕ್ಷದ ಎಲ್ಲ ಶಾಸಕರು ಕೆಳಹಂತದಿಂದ ಬೆಳೆದು ಬಂದವರಾಗಿದ್ದರು. ಅಂತಹ ಸಂದರ್ಭದಲ್ಲಿ ಪಕ್ಷಕ್ಕೆ ತಮ್ಮದೇ ಕೊಡುಗೆ ನೀಡಿದ ಬಸವನಗೌಡರು ವಿಜಯಪುರದಲ್ಲಿ ಭಾರತೀಯ ಜನತಾ ಪಕ್ಷ ನಗರದಲ್ಲಿ ಬೆಳೆಯುವಂತೆ ನೋಡಿಕೊಂಡರು. ಮುಂದೆ ಲೋಕಸಭೆಯ ಚುನಾವಣೆಗೆ ಸ್ಪರ್ಧೆ ಮಾಡಿ ಸಂಸದರಾದರು. ಅಂದು ವಿಜಯ ಸಂಕೇಶ್ವರ ಮಂತ್ರಿಗಿರಿ ಬೇಡ ಎಂದಾಗ ಯಡಿಯೂರಪ್ಪನವರ ಕೃಪೆಯಿಂದ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು. ಸಾಮಾಜಿಕವಾಗಿ ಕೆಲಸ ಮಾಡಲು ಮತ್ತು ಜನರಿಗೆ ಸಹಾಯ ಮಾಡಲು ಗೌಡರು ಯಾವತ್ತೂ ಮುಂದೆ ಅದರಲ್ಲಿ ಸಂಶಯಬೇಡ! ರಾಜಕೀಯದಲ್ಲಿ ಸಿದ್ದಾಂತಕ್ಕೆ ಹೆಚ್ಚು ಮಹತ್ವ ಇದೆ. ಇವರದು ಎಂಥಹ ಸಿದ್ದಾಂತ?
೨೦೧೮ರ ಚುನಾವಣೆ ಯಡಿಯೂರಪ್ಪನವರ ಮುಂದಾಳತ್ವದಲ್ಲಿ ನಡೆದ ಚುನಾವಣೆ! ಯಡಿಯೂರಪ್ಪ ಪಕ್ಷಕ್ಕೆ ಸುಪ್ರೀಂ ಅದಕ್ಕಾಗಿ ಎಲ್ಲರೂ ಟಿಕೆಟ್ ಕೇಳುವುದು ಸಾಮಾನ್ಯ. ವಿಜಯಪುರದ ಹಿಂದೂ ಹುಲಿ(ಮಾಧ್ಯಮಗಳು ಮುಖ್ಯಮಂತ್ರಿಗಳಿಗೆ ರಾಜಾಹುಲಿ ಎಂದಾಗ ಅಣುಕಿಸುವ ನೀವು , ನಿಮಗೆ ಹಿಂದೂ ಹುಲಿ ಎಂದಾಗ ಖುಷಿ ಅಲ್ವಾ?.) ಎಂದು ಖ್ಯಾತಿ ಪಡೆದ ಇಂದಿನ ಶಾಸಕರು ಎರಡು ಬಾರಿ ಪಕ್ಷದಿಂದ ಉಚ್ಚಾಟನೆ ಆಗಿದ್ದರು. ಮೊದಲನೆಯ ಬಾರಿ ಯಡಿಯೂರಪ್ಪನವರನ್ನು ತೆಗಳಿ ಉಚ್ಚಾಟನೆ ಆದರೆ ಎರಡನೆಯ ಬಾರಿ ಸ್ವತಃ ಅವರ ಪಕ್ಷದ ವಿರುದ್ಧ ವಿಧಾನ ಪರಿಷತ್ತುನಲ್ಲಿ ಸ್ಫರ್ಧೆಮಾಡಿ ಉಚ್ಚಾಟನೆ ಆದವರು. ಆದರೂ ಪಕ್ಷದಿಂದ ಇವರನ್ನು ಕಣಕ್ಕೆ ಇಳಿಸಿದರೆ ವಿಜಯಪುರ ಗೆಲ್ಲುವುದರ ಜೊತೆ ಬೇರೆ ಕ್ಷೇತ್ರಗಳ ಗೆಲವು ಸಲೀಸು ಎಂದು ಬಸವನಗೌಡರ ಮೇಲೆ ನಂಬಿಕೆ ಇಟ್ಟು ಯಡಿಯೂರಪ್ಪನವರು ಇವರನ್ನು ಮತ್ತೆ ಪಕ್ಷಕ್ಕೆ ವಾಪಸ್ ತಗೆದುಕೊಳ್ಳಲು ನಿರ್ಧಾರ ಮಾಡಿದ್ದರು. ಆದರೆ ವಿಜಯಪುರದ ಸಂಸದ ಮತ್ತು ಕೆಲವು ಪಧಾದಿಕಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಎಲ್ಲರ ವಿರೋಧದ ನಡುವೆ ಪಕ್ಷಕ್ಕೆ ಸೇರಿಸಿಕೊಂಡು ವಿಜಯಪುರದ ಶಾಸಕಾರಾಗಿ ಆಯ್ಕೆಯಾದರು. ಇಲ್ಲಿ ಒಂದು ಗಮನಿಸಿ ವಿಜಯಪುರದಲ್ಲಿ ಯಾರೇ ಸ್ಪರ್ಧೆ ಮಾಡಿದ್ದರೂ ಗೆಲವು ನಿಶ್ಚಿತ ಇತ್ತು. ಕಾರಣ ವಿಜಯಪುರದಲ್ಲಿ ಹಿಂದುಗಳಿಗೆ ರಕ್ಷಣೆನೆ ಇಲ್ಲದಾಗಿತ್ತು ಆದ್ದರಿಂದ ಜನ ಮೊದಲೇ ತೀರ್ಮಾನ ಮಾಡಿದ್ದರು ಈ ವರ್ಷ ಹಿಂದೂಗಳ ಮತ ಬಿಜೆಪಿಗೆ !
ಕಳೆದ ಚುನಾವಣೆಯಲ್ಲಿ ಅಪ್ಪು ಪಟ್ಟಣಶೆಟ್ಟಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದ ಬಸವನಗೌಡ ಪಾಟೀಲ ಕದನದಿಂದ ಕಾಂಗ್ರೆಸ್ನಿಂದ ಮಖಬೂಲ್ ಆಯ್ಕೆಯಾಗಿದ್ದರು. ಕಾಂಗ್ರೆಸ್ ಶಾಸಕನ ಬೆಂಬಲಿಗರಿಂದ ಬೇಸತ್ತು ಜನ ವಿಜಯಪುರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತ ಕೊಟ್ಟು ಗೆಲ್ಲಿಸಿದರು. ಯಡಿಯೂರಪ್ಪನವರ ಕೃಪೆಯಿಂದ ಶಾಸಕರಾಗಿದ್ದ ಗೌಡರು ಖುಲ್ಲಂ ಖುಲ್ಲಾ ವಿಧಾನಸಭೆಯಲ್ಲಿ ಮತ್ತು ಹೊರಗೆ ನಮ್ಮ ನಾಯಕ ಯಡಿಯೂರಪ್ಪ ಮತ್ತು ಅವರೇ ಮುಂದಿನ ಮೂರು ವರ್ಷ ಮುಖ್ಯಮಂತ್ರಿ ಎಂದು ಹೇಳುತ್ತಿದ್ದರು. ಇದರಿಂದ ಯಡಿಯೂರಪ್ಪನವರಿಗೂ ನಾನು ತಗೆದುಕೊಂಡ ನಿರ್ಧಾರ ಸರಿ ಎನಿಸಿತ್ತು. ವಿಜಯಪುರದ ಶಾಸಕರು ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದಿದ್ದಾಗ ರಾಜ್ಯದ ಸಂಸದರನ್ನು ತರಾಟೆಗೆ ತಗೆದುಕೊಂಡಿದ್ದರು ಮತ್ತು ಅಂದು ಜನ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರು. ಕಾರಣ ಅವರ ಹೋರಾಟ ನ್ಯಾಯಯುತವಾಗಿತ್ತು ಮತ್ತು ಜನರ ಪರವಿತ್ತು. ಯಾವಾಗ ಜನರ ಬೆಂಬಲ ಸಿಕ್ಕಿತೋ ಮೋದಿಯವ ಕಡೆ ತಿರುಗಿತು ಬಾಣ! ಮೋದಿಯವರನ್ನು ಬಿಡಲಿಲ್ಲ. ಪಕ್ಷದ ಸಿದ್ದಾಂತ ಗಾಳಿಗೆ ತೂರಿದರು.
ಪಕ್ಷದ ವೇದಿಕೆಯಲ್ಲಿ ಸಂದೇಶ ರವಾನೆ ಮಾಡಬೇಕಾಗಿತ್ತು ಆದರೆ ಆಗಿದ್ದು ಬೀದಿ ಬೀದಿಗಳಲ್ಲಿ ಪಕ್ಷಕ್ಕೆ ಮತ್ತು ಪಕ್ಷದವರನ್ನು ಟಾರ್ಗೆಟ್ ಮಾಡಿಕೊಂಡರು. ಮೇಲಿನ ಮಾತು ಹೇಳಿದ್ದು ವಿಜಯಪುರದ ಸಂಸದರು. ಹೀಗೆ ಅನೇಕ ಸಂದರ್ಭದಲ್ಲಿ ಯಾರಿಗೂ ಹೆದರದೆ ಜನರಿಗೆ ತೊಂದರೆಯಾದಾಗ ಪಕ್ಷದ ಹಂಗಿನಲ್ಲಿ ಇರದೇ ಮಾತಾಡಿದ್ದು ಅವರ ಗಟ್ಟಿತನ ತೋರಿಸುತ್ತೆ ಅದರ ಜೊತೆ ಸ್ವಲ್ಪ ಸಂಯಮ ಇರಬೇಕಿತ್ತು ಅನಿಸುತ್ತೆ! ಪಕ್ಷದವರಿಗೆ ಕಸಿವಿಸಿ ಆದರೂ ಜನರು ಜೈಕಾರ ಹಾಕಿದ್ದರು. ಇಲ್ಲಿಯವರೆಗೂ ಸರ್ಕಾರ ಮತ್ತು ಮುಖ್ಯಮಂತ್ರಿ ಸರಿಯಿದ್ದರು. ಮಂತ್ರಿಸ್ಥಾನ ತಪ್ಪಿದ ನಂತರ ಏನಾಯಿತು?
ಯಾವಾಗ ಮಂತ್ರಿ ಮಂಡಲ ವಿಸ್ತರಣೆ ಆಯಿತೋ ಯಾರು ನಾಯಕರು? ಯಡಿಯೂರಪ್ಪ ನಮ್ಮ ನಾಯಕನಲ್ಲಾ, ನನ್ನ ನಾಯಕ ಮೋದಿ ಮತ್ತು ಅಮಿತ ಷಾ ಎಂದು ಮಾಧ್ಯಮದ ಮುಂದೆ ಘೋಷಿಸಿಬಿಟ್ಟರು. ಹೇಳಿದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ವಿಜಯಪುರದ ಶಾಸಕರ ಮೇಲೆ ಯಡಿಯೂರಪ್ಪ ಅಭಿಮಾನಿಗಳು ಕೆಂಡಾಮಂಡಲವಾದರು. ಅಭಿಮಾನಿಗಳ ಸಿಟ್ಟನ್ನು ನೋಡಿಯೂ ಒಂದುಚೂರು ನಡೆಯಲ್ಲಿ ಬದಲಾವಣೆ ಮಾಡದೆ ಬಾಯಿಗೆ ಬಂದಂತೆ ಮುಖ್ಯಮಂತ್ರಿಯನ್ನು ತೆಗಳುವದಕ್ಕೆ ಪ್ರಾರಂಭಮಾಡಿದರು. ಮಂತ್ರಿಗಿರಿ ಸಿಗದೇ ಇದ್ದವರು ಇವರನ್ನು ಮುಂದೆ ಮಾಡಿ ಊಟಕ್ಕೂ ಹೋಗಿದ್ದು ಆಯಿತು ಮತ್ತು ಮಂತ್ರಿಗಿರಿ ಸಿಗದವರು ಒಂದು ಗುಂಪು ಮಾಡಿಕೊಂಡು ಊಟದ ನೆಪದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂದು ಹೇಳತೊಡಗಿದರು. ಇದರ ಅಲ್ಪಕಾಲಿಕ ನೇತೃತ್ವ ಇವರೇ ವಹಿಸಿಕೊಂಡಿದ್ದರು! ಇಷ್ಟೆಲ್ಲಾ ಬೆಳವಣಿಗೆ ಆದ ನಂತರ ಎರಡನೆಯ ಸಂಪುಟ ವಿಸ್ತರಣೆಯಲ್ಲಿ ಇವರಿಗೆ ಮಂತ್ರಿಸ್ಥಾನ ಕೊಡುವದಕ್ಕೆ ಸಾಧ್ಯವೇ? ಜನರ ಬೆಂಬಲ ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಮಾತ್ರ ಇರುತ್ತೆ. ಸ್ವಾರ್ಥಕ್ಕಾಗಿ ಪಕ್ಷ ಮತ್ತು ನಾಯಕರನ್ನು ಬೇಕಾ ಬಿಟ್ಟಿಯಾಗಿ ತೆಗಳಿದರೆ ಜನ ಒಪ್ಪುವದಿಲ್ಲ. ಯಡಿಯೂರಪ್ಪವರಿಗಿಂತ ನಾನು ಸೀನಿಯರ್! ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಾಪತ್ತೆ ಇವೆಲ್ಲಾ ಹೇಳುವ ಅಗತ್ಯವೇನಿತ್ತು? ಹೀಗೆ ಅನೇಕ ನುಡಿಮುತ್ತುಗಳು ಉದರಿದವು.
ಇದರ ಮುಂದುವರೆದ ಭಾಗ ಮೀಸಲಾತಿ ಹೋರಾಟದಲ್ಲಿ ಮೀಸಲಾತಿ ಬಗ್ಗೆ ಮಾತಾಡುವುದನ್ನು ಬಿಟ್ಟು ಮುಖ್ಯಮಂತ್ರಿಯವರ ಸುಪುತ್ರರನ್ನು ನಿಂದಿಸತೊಡಗಿದರು. ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಅವರ ಬಗ್ಗೆ ತಪ್ಪು ಕಲ್ಪನೆ ಹುಟ್ಟುವಾಕುವಲ್ಲಿ ನಿರತರಾಗಿದ್ದಾರೆ. ಇತ್ತೀಚಿನ ಅವರ ಮಾತು “ವಿಜಯೇಂದ್ರರನ್ನು ಲಿಂಗಾಯತರು ಒಪ್ಪುವದಿಲ್ಲ” ಅಂತೇ! ಇದು ಬೇಕಿತ್ತಾ? ವಿಜಯೇಂದ್ರರವರು ರಾಜಕೀಯ ದಾಳಗಳನ್ನು ಕಲಿಯುತ್ತ ಗೆಲ್ಲದ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷದ ಬೇರನ್ನು ಗಟ್ಟಿಗೊಳಿಸುತ್ತಾ ಜನನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಎಲ್ಲಿ ಜನಪ್ರಿಯತೆ ಹೆಚ್ಚಾಗಿ ಅವರೇ ಮುಖ್ಯಮಂತ್ರಿ ರೇಸಿನಲ್ಲಿ ಬರುವ ಭಯನೂ ಇರಬೇಕು! ಆದರೆ ನಾಯಕರಾಗಬೇಕಾದರೆ ಜನರ ಮೂಲಕವೇ ಎನ್ನುವುದು ಕಟು ಸತ್ಯ! ಸೋಶಿಯಲ್ ಮೀಡಿಯಾದಲ್ಲಿ ವಿಜಯೇಂದ್ರರ ಅಭಿಮಾನಿಗಳ ಅನಿಸಿಕೆ ಯತ್ನಾಳರೇ ವಿಜಯೇಂದ್ರ ಮುಖ್ಯಮಂತ್ರಿ ಆಗುವವರೆಗೆ ಹೀಗೆ ಇರಲಿ ನಿಮ್ಮ ನಿಂದನೆ! ಹೊಸ ಸುದ್ದಿ ನಾಗಾ ಸಾಧು ವಿಜಯೇಂದ್ರ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದ್ದಾರೆ ಎಂದು ಕೇಳಿದ ಮೇಲೆ ಹೇಗಾಗಿರಬೇಡ?
ಇಷ್ಟೆಲ್ಲಾ ಆದರೂ ಯಡಿಯೂರಪ್ಪ ಮತ್ತು ಅವರ ಸುಪುತ್ರರಾದ ವಿಜಯೇಂದ್ರ ಒಂದು ಮಾತು ಹೇಳಿಲ್ಲ. ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ “ಯಾರು ಯತ್ನಾಳ” ಎನ್ನುವ ಮಟ್ಟಿಗೆ ತಮ್ಮ ಗೌರವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಪಕ್ಷದಿಂದ ನೋಟೀಸ್ ಬಂದಿಲ್ಲ ಎಂದು ೧೬ ಪುಟಗಳ ಉತ್ತರ ಕೊಟ್ಟಿದ್ದೇನೆ ಎಂದಿದ್ದಾರೆ. ಹೈ ಕಮಾಂಡ ನನ್ನನ್ನು ಕರೆದಿಲ್ಲ ಎಂದು ಹೇಳಿ ಅವರಿಂದ ಸೂಚನೆಗಳನ್ನು ಪಡೆದುಕೊಂಡು ಬಂದಿರುವ ಗುಮಾನಿಗಳು ಇವೆ. ಇಲ್ಲಿ ಗಮನಿಸಬೇಕು ನಿಷ್ಠಾವಂತ ಕಾರ್ಯಕರ್ತರು ಕೇಳುವ ಪ್ರಶ್ನೆ ಪಕ್ಷಕ್ಕೆ ಡ್ಯಾಮೇಜ ಮಾಡುವವರನ್ನು ಯಾಕೆ ಸಹಿಸಿಕೊಳ್ಳುತ್ತೀರಿ? ನಾನು ಸರ್ಕಾರದ ಮತ್ತು ಮುಖ್ಯಮಂತ್ರಿ ಬಗ್ಗೆ ಹೇಳಿಕೆ ಕೊಡುತ್ತಿದ್ದೇನೆ ಎಂದು ಹೇಳಿದರೂ ಅದು ಹೈ ಕಮಾಂಡ ನಿರ್ಧಾರ ಪ್ರಶ್ನೆ ಮಾಡಿದಂತಲ್ವೆ ? ಕಷ್ಟಪಟ್ಟು ಕಾರ್ಯಕರ್ತರು ದುಡಿಯುತ್ತಿರುವಾಗ ಇಂತಹ ಸೀನಿಯರ್ ಲೀಡರ್ ಅವರಿಂದ ಪಕ್ಷಕ್ಕೆ ಹಾನಿಯಾದರೆ ಇದಕ್ಕೆ ಹೊಣೆಯಾರು. ೨೦೦೮ರಲ್ಲಿ ಭಾರತೀಯ ಜನತಾ ಪಕ್ಷದವರು ಮಾಡಿದ ಸ್ವಯಂ ತಪ್ಪುಗಳಿಂದ ೫ ವರ್ಷ ಅಧಿಕಾರದಿಂದ ದೂರ ಸರಿದಿದ್ದರು. ಪಕ್ಷ ಕೊಟ್ಟ ಸೂಚನೆಗಳು ಆಲಿಸಿ ಬಂದ ನಂತರ ಪಕ್ಷಕ್ಕೆ ಬದ್ಧವಾಗಿದ್ದರೆ ಪಕ್ಷದ ಜೊತೆಗೆ ಕಾರ್ಯಕರ್ತರು ಗೌರವ ಕೊಡುತ್ತಾರೆ ಇಲ್ಲವಾದರೆ ಶತ್ರುಘ್ನಸಿನ್ಹಾ ಕಣ್ಣು ಮುಂದೆ ಬಂದು ಹೋಗುತ್ತಾರೆ. ಮೋದಿಯವರನ್ನು ಶತ್ರುಘ್ನ ಬಾಯಿಗೆ ಬಂದ ಹಾಗೆ ತೆಗಳಿದಾಗ ಮೋದಿಯವರು ಉತ್ತರಕೊಡುವ ಗೋಜಿಗೆ ಹೋಗಿರಲಿಲ್ಲ. ಇಂದು ರಾಜ್ಯದಲ್ಲಿ ಯಡಿಯೂರಪ್ನವರನ್ನು ಎಷ್ಟೇ ತೆಗಳಿದರೂ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ. ಇದೆಲ್ಲವೂ ಏನನ್ನು ಸೂಚಿಸುತ್ತದೆ? ಕಾರ್ಯಕರ್ತರ ನಿರೀಕ್ಷೆ ನಾಯಕರು ಒಂದಾಗಿ ಹೋದರೆ ಮಾತ್ರ ಪಕ್ಷಕ್ಕೆ ಅನುಕೂಲ ಮತ್ತು ಬೇಗ ಎಲ್ಲವೂ ಸುಖಾಂತ್ಯವಾಗಲಿ.
Categories: Articles

Ultimately true
LikeLike
ತುಂಬಾ ಚೆನ್ನಾಗಿ ಬರೆದಿದ್ದಿರಿ ಸರ್…ಶುಭವಾಗಲಿ..
LikeLiked by 1 person
True fact
LikeLike