
ಪ್ರತಿ ತಿಂಗಳು ಒಂದು ಶಿವರಾತ್ರಿ ಬರುತ್ತೆ. ಆದರೆ ಇವತ್ತಿನ ದಿವಸ ಆಚರಣೆ ಮಾಡುವುದು “ಮಹಾ” ಶಿವರಾತ್ರಿ . ಶಿವನಿಗೆ ಆದಿಯೂ ಇಲ್ಲ ಅಂತ್ಯವು ಇಲ್ಲ. ಹಿಂದೂಗಳ ದೊಡ್ಡ ಹಬ್ಬ ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಉಪವಾಸ , ಧ್ಯಾನ ಮಾಡುವುದು ಮತ್ತು ಲಿಂಗ ಪೂಜೆ ಮಾಡುವುದು ಸಾಮಾನ್ಯ. ಮಹಾ ಶಿವರಾತ್ರಿಯೆಲ್ಲಾ ನಿದ್ದೆ ಮಾಡದೆ ಶಿವನ ಆರಾಧನೆಯಲ್ಲಿ ತೊಡಗುತ್ತಾರೆ. ಓಂ ನಮಃ ಶಿವಾಯಃ ಮಂತ್ರವನ್ನು ಪಠಿಸುತ್ತಾ ದೇವರ ಸನ್ನದಿಯಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಾರೆ.
ಇಂದಿನ ಉಪವಾಸ ಅತ್ಯಂತ ಕಠಿಣ . ಕೆಲವೊಬ್ಬರು ನೀರನ್ನು ಸೇವಿಸದೇ ಉಪಹಾಸ ಮಾಡಿದರೆ ಕೆಲವರು ಕೇವಲ ಸಾಯಂಕಾಲ ಸಾಭುದಾನಿಯನ್ನು ಮಾತ್ರ ಸೇವಿಸುತ್ತಾರೆ. ಉಪವಾಸ ಮಾಡಿದರೆ ದೇವರು ಒಲಿಯುತ್ತಾನೆ ಎಂದು ಮಾಡುವದಿಲ್ಲ. ಕಡಿಮೆ ಆಹಾರ ಸೇವಿಸಿ ಧ್ಯಾನಸ್ಥರಾಗಲು ಉಪವಾಸವೇ ಮಾರ್ಗ ಎಂದು ಕಂಡುಕೊಂಡ ಸತ್ಯ. ವೈಜ್ಞಾನಿಕವಾಗಿ ದೇಹಕ್ಕೆ ಉಪವಾಸ ಅಗತ್ಯ. ಅದನ್ನು ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಹಿಂದೂ ಧರ್ಮದಲ್ಲಿ ಕಾರಣಗಳಿಲ್ಲದೆ ಯಾವುದನ್ನೂ ಮಾಡುವದಿಲ್ಲ. ಆದರೆ ಅದರ ಹಿಂದಿನ ವಿಷಯ ನಮಗೆ ಗೊತ್ತಿಲ್ಲ ಎನ್ನುವ ವಿಚಾರಕ್ಕೆ ಅದೊಂದು ಮೂಢನಂಬಿಕೆ ಎಂದು ಬಿಂಬಿಸುವ ಮನಸ್ಸುಗಳಿಗೆ ಕೊರೆತೆಯಿಲ್ಲ.
ಪುರಾಣದ ಪ್ರಕಾರ ಶಿವ ಸಮುದ್ರ ಮಂಥನದಲ್ಲಿ ವಿಷವನ್ನು ಕುಡಿದು ವಿಷಕಂಠನಾಗಿ ಜಗತ್ತನ್ನು ಕಾಪಾಡಿದ ಕಾರಣಕ್ಕೆ ಮಹಾಶಿವರಾತ್ರಿ ಎಂದು ಹೇಳಿದರೆ ಇನ್ನು ಕೆಲವರ ಪ್ರಕಾರ ಇಂದು ಶಕ್ತಿ ರೂಪದ ಪಾರ್ವತಿಯನ್ನು ಮದುವೆಯಾದ ದಿವಸ. ಇನ್ನು ಕೆಲವರ ಪ್ರಕಾರ ಯಾರು ಸುಪ್ರೀಂ ದೇವರು ಎಂದು ವಿಷ್ಣು ಮತ್ತು ಬ್ರಹ್ಮ ವಾದಕ್ಕಿಳಿದಾಗ ವಿಶ್ವರೂಪವನ್ನು ತೋರಿಸಿದ ಶಿವ ಅದಕ್ಕೆ ಮಹಾಶಿವರಾತ್ರಿ ಆಚರಿಸುತ್ತಾರೆ ಎಂದು ಹೇಳುತ್ತಾರೆ.
ಈ ಹಬ್ಬವನ್ನು ದಕ್ಷಿಣದಲ್ಲಿ ಕರ್ನಾಟಕ,ಆಂದ್ರದಲ್ಲಿ,ತಮಿಳನಾಡು ಮತ್ತು ಉತ್ತರದಲ್ಲಿ ಹಲವು ರಾಜ್ಯಗಳಲ್ಲಿ ಆಚರಿಸುತ್ತಾರೆ.
Categories: Articles

ಜನರವಣಿ ತಂಡಕೆ ಮಹಾಶಿವರಾತ್ರಿ ಹಬ್ಬದ ಶುಭಾಷಾಯಗಾಳು
LikeLiked by 1 person