ಸಂಕಿಪ್ತ ವಿವರಣೆ :
ಖುರ್ಚಿಗಾಗಿ ಕಾದಾಟ! ನೈತಿಕತೆಗೆ ಜಾಗವೇ ಇಲ್ಲ. ಜಗನ್ ತೆಗೆದುಕೊಂಡ ರಾಜಕೀಯ ದಾಳಗಳಿಂದಲೇ ಖುರ್ಚಿ ಪಡೆದಿದ್ದು. ಇಂದು ಬಂಗಾಳದ ದೀದಿ ತುಳಿಯುತ್ತಿರುವುದು ಅದೇ ಹಾದಿ. ಸಿಡಿ ಶೂರ ಗೆದ್ದು, ಎಚ್ಚರ ತಪ್ಪಿ ಸೋತು ಮತ್ತೆ ಸಿಡಿಗೆ ಹೋದ ಮರ್ಯಾದೆಯನ್ನು ಮರಳಿ ಪಡೆದು ಗೆಲ್ಲುವ ತವಕ. Is it possible?

ವಿವರಣೆ:
೧೦೦% ನಿಜ. ಏನು? ಇಂದು ನಡೆಯುತ್ತಿರುವುದು ಮತ್ತು ಹಿಂದೆ ಆಗಿದ್ದು ಎಲ್ಲವೂ ರಾಜಕೀಯ. ಕಾರಣ? ಖುರ್ಚಿಗಾಗಿ! ಹೌದಾ? ರಾಜ್ಯದಲ್ಲಿ ಸಿಡಿ ಸದ್ದು ಬಲು ಜೋರು. ಅದರಲ್ಲಿ ನಕಲಿ ಮತ್ತು ಅಸಲಿ ಯಾವುದು ಎಂದು ಜನ ತಲೆಕೆಡಿಸಿಕೊಂಡಿಲ್ಲ. ನೋಡಿದವರು ಸತ್ಯಾಸತ್ಯತೆ ಬಗ್ಗೆ ತಲೆಕೆಡಿಸಿಕೊಳ್ಳದೆ ಅದರಲ್ಲಿಯ ಸಂಭಾಷಣೆ ಕೆಲವೊಬ್ಬರು ರಸಿಕತೆಯ ಬಗ್ಗೆ ಮಾತನಾಡಿದರೆ, ಇನ್ನೊಬ್ಬರು ಎಷ್ಟೊಂದು ಕೀಳಾದ ಸಂಭಾಷಣೆ, ಇನ್ನು ಕೆಲವರು ನಾನು ನೋಡುವುದಕ್ಕೆ ಹೋಗಿಲ್ಲ! ಮಾಡಿ ಸಿಕ್ಕು ಹಾಕಿಕೊಂಡವರ ಪಾಡು ದೇವರೇ ಗತಿ . ಮಾಡಿದುಣ್ಣೋ ಮಾರಾಯ! ಏನು ಮಾಡುವದಕ್ಕೆ ಆಗಲ್ಲ. ಸಿಡಿಗೆ ಹೋದ ಮಾನ ಆನೆ ಕೊಟ್ಟರೂ ಬಾರದು. ಆದರೆ ಇಲ್ಲಿ ಗಮನಿಸಿ ಹುಡುಗಿಗೆ ಅನ್ಯಾಯವಾಗಿರೋದು ತನಿಖೆ ಮೇಲೆ ಅವಲಂಬನೆ. ಇದರ ಹಿಂದೆ ೨+೩+೪ ಇದ್ದಾರೆ ಎಂದು ಸಹೋದರರ ಸವಾಲ್! ಅವರಿಗೆ ಪಾಠ ಕಲಿಸದೇ ಬಿಡೆವು ಎಂದು ಬೆದರಿಕೆ! ಇತ್ತ ಕಡೆ ಸೋಮಶೇಖರ ಇದೆಲ್ಲಾ ಕಾಂಗ್ರೆಸ್ ಕೈವಾಡ !
ಸೋಮಶೇಖರ ಹೇಳಿಕೆ ಡಿಕೆಯವರನ್ನು ಕೆಣಕಿ ಸುದ್ದಿಗೋಷ್ಠಿ ಮಾಡುವದಕ್ಕೆ ಕಾರಣವಾಯಿತು! ನಾನು ರಾಜ್ಯದ ಅಧ್ಯಕ್ಷ ನಮ್ಮ ಪಕ್ಷದ ಮೇಲೆ ದಾಳಿಮಾಡಿದಾಗ ಅದನ್ನು ತೆಡೆಗಟ್ಟುವುದು ನನ್ನ ಮತ್ತು ಶಾಸಕಾಂಗ ಪಕ್ಷದ ನಾಯಕನ ಕರ್ತವ್ಯ ಅದನ್ನು ನಾವು ಮಾಡುತ್ತಿದ್ದೇವೆ. ನಾನೇ ಇದರ ಹಿಂದೆ ಇದ್ದೇನೆ ಎಂದು ಜರಿದರೆ ನಾನೇನು ಮಾಡಲಿ? ಇದೆ ಸಂದರ್ಭದಲ್ಲಿ ನಾವೇನು ಪ್ಯಾಂಟ್ ಮತ್ತು ಅಂಗಿ ಬಿಚ್ಚು ಅಂತಾ ಹೇಳಿದ್ದೀವಾ ಎಂದು ಹೇಳಿ ಮಾಧ್ಯಮದವರನ್ನು ಪೇಚಿಕೆ ಸಿಲುಕಿಸಿದರು. ಇದೆ ಸಂದರ್ಭದಲ್ಲಿ ಇದೆಲ್ಲಾ ರಾಜಕೀಯ ಕಣ್ರೀ ಹುಷಾರು ಆಗಿರಬೇಕು ಎಂದರು. ಇಂದಿನ ರಾಜಕೀಯ ಕೇವಲ ಸಿಡಿ ಬಗ್ಗೆ ರಾಜಕೀಯ ಮಾಡೋದು ಅಷ್ಟೇ ಅಲ್ಲ. ದೇಶದಲ್ಲಿ ಬೇರೆ ಬೇರೆ ರಾಜ್ಯದ ಚುನಾವಣೆ ನಡೆಯುತ್ತಿರುವ ವೇಳೆಯಲ್ಲಿ ರಾಜಕೀಯ ದಾಳಗಳ ಬಗ್ಗೆ ಒಮ್ಮೆ ನೋಡೋಣ. ಏನು ರಾಜಕೀಯ ? ಹೇಗೆ ಅಧಿಕಾರದ ಅಮಲಿನಲ್ಲಿ ಎಚ್ಚರ ತಪ್ಪುತ್ತೆ ಮತ್ತು ಅಧಿಕಾರಕ್ಕಾಗಿ ಹೇಗೆ ರಾಜಕೀಯ ದಾಳಗಳು ಉರುಳುತ್ತವೆ?
೨೦೧೪ರ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಕೇವಲ ೨ ಸೀಟ್ ಭಾರತೀಯ ಜನತಾ ಪಕ್ಷಕ್ಕೆ ದೊರೆತಿತ್ತು. ಆದರೆ ೨೦೧೯ರ ಲೋಕಸಭೆಯ ಚುನಾವಣೆಯಲ್ಲಿ ೧೮ ಸೀಟ್ ಭಾರತೀಯ ಜನತಾ ಪಕ್ಷ ಪಡೆದುಕೊಂಡಿತು. ೧೮ ಸೀಟ್ ಪಡೆದುಕೊಳ್ಳಲು ಹಿಂದಿನ ಪ್ರಯತ್ನ ಅಷ್ಟು ಸರಳವಿರಲಿಲ್ಲ. ಸುಮಾರು ೫ ವರ್ಷ ಸತತ ಪ್ರಯತ್ನ ಇದರ ಹಿಂದೆ ಇತ್ತು. ಯಾವಾಗ ನರೇಂದ್ರ ಮೋದಿ ೨೦೧೪ರಲ್ಲಿ ಪ್ರಧಾನಿಯಾದರೋ ಅವತ್ತೇ ೨೦೧೯ರ ಚುನಾವಣೆಯ ನಕ್ಷೆ ತಯಾರಾಗಿತ್ತು. ಯಾವ ಕ್ಷೇತ್ರದಲ್ಲಿ ಮತ್ತು ಯಾವ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು ಬಲಪಡಿಸಬೇಕು ಮತ್ತು ಸೀಟ್ ಹೇಗೆ ಹೆಚ್ಚಿಸಬೇಕು! ೨೦೧೪ರಲ್ಲೇ ಉತ್ತರಪ್ರದೇಶವನ್ನು ಪ್ಲಾನ್ ಪ್ರಕಾರ ಬುಟ್ಟಿಗೆ ಹಾಕಿಕೊಂಡ ನಂತರ ದಾಂಗುಡಿ ಇಟ್ಟಿದ್ದು ಬಂಗಾಳ ! ಕಾರಣ?ಉತ್ತರಪ್ರದೇಶ ಮತ್ತು ಬಂಗಾಳ ಪ್ರಾದೇಶಿಕ ಪಕ್ಷಗಳ ತಕ್ಕೆಲ್ಲಿದ್ದವು. ಉತ್ತರ ಭಾರತದ ಹಿಂದಿ ಬೆಲ್ಟ್ ಭಾರತೀಯ ಜನತಾ ಪಕ್ಷಕ್ಕೆ ಆರಾಮವಾಗಿ ಪಡೆಯಬಹುದು ಎಂಬ ಲೆಕ್ಕಾಚಾರ. ದೊಡ್ಡ ದೊಡ್ಡ ಸಮಾವೇಶ ಮಾಡುತ್ತಾ ಮತ್ತು ಹೆಚ್ಚೆಚ್ಚು ರಾಜ್ಯಕ್ಕೆ ಬೇಟಿ ಕೊಡುವದಲ್ಲದೆ ತೃಣಮೂಲ ಕಾಂಗ್ರೇಸಿನ ಅತೃಪ್ತ ನಾಯಕರಿಗೆ ದಾಳಿ ಹಾಕಿಬಿಟ್ಟರು! ದೀದಿ ಕೇವಲ ನನ್ನಿಂದಲೇ ಪಕ್ಷ ನಾನೇ ಇವೆಕ್ಕೆಲ್ಲಾ ಕಾರಣ ಎಂದು ಮೈಮರೆತು ಕೆಳ ಹಂತದ ನಾಯಕರಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದ ಸಮಯದಲ್ಲಿ ಭಾರತದ ಪ್ರಧಾನಿ ನಮ್ಮನ್ನು ಪಕ್ಷಕ್ಕೆ ಆಹ್ವಾನ ಕೊಡುತ್ತಿದ್ದಾರೆ ಎಂದರೆ ನಾವ್ಯಾಕೆ ಇದನ್ನು ಸ್ವೀಕರಿಸಬಾರದು ಎಂಬ ಪರಸ್ಥಿತಿಯನ್ನು ಭಾರತೀಯ ಜನತಾ ಪಕ್ಷ ಸೃಷ್ಟಿಸಿತ್ತು. ಇದೆಲ್ಲವೂ ದೀದಿಗೆ ಗೊತ್ತಿದ್ದರೂ ಹೋದರೆ ಹೋಗಲಿ ಎಂಬ ಅಹಂದಿಂದ ತನ್ನ ಸಣ್ಣಸಣ್ಣ ವ್ಯತ್ಯಾಸಗಳು ಸರಿಪಡಿಸಿಕೊಳ್ಳಲಿಲ್ಲ.
ಮಮತಾ ಕಟ್ಟಿದ ಸಾಮ್ರ್ಯಾಜ್ಯ ಊಹೆಗೂ ಮೀರಿದ್ದು ಕಾರಣ ಹೇಳಿ ಕೇಳಿ ಕಮ್ಯುನಿಸ್ಟ್ ಕೈಯಲ್ಲಿದ್ದ ರಾಜ್ಯವನ್ನು ಕಸಿದುಕೊಳ್ಳಲು ಮಾಡಿದ ಹೋರಾಟ! ಸುಮಾರು ೨೭ ವರ್ಷ ಮುಖ್ಯಮಂತ್ರಿಯಾಗಿದ್ದ ಜ್ಯೋತಿಬಸು ಕಮ್ಯುನಿಸ್ಟ್ ಪಕ್ಷದ ನಾಯಕರು. ಹೀಗೆ ಅನೇಕ ದೊಡ್ಡ ದೊಡ್ಡ ನಾಯಕರ ವಿರುದ್ದ ತೊಡೆತಟ್ಟಿ ತನ್ನ ತಕ್ಕೆಗೆ ತಗೆದುಕೊಂಡಿದ್ದು ಇತಿಹಾಸ. ಇಂತಹ ಸಾಮ್ರಾಜ್ಯವನ್ನು ಛಿದ್ರ ಛಿದ್ರ ಮಾಡಲು ಪ್ಲಾನ್ ರೂಪಿಸಿ ಹೇಗೆ ದೊಡ್ಡ ಮರವನ್ನು ನೆಲಕ್ಕೆ ಉರಳಿಸಲು ಕೊಂಬೆಗಳು ಕತ್ತರಸಿ ಮರವನ್ನು ನೆಲಕ್ಕೆ ಉರಳಿಸುತ್ತಾರೆ ಹಾಗೆ ದೊಡ್ಡ ದೊಡ್ಡ ತೃಣಮೂಲ ಕಾಂಗ್ರೇಸ್ ನಾಯಕರನ್ನು ಭಾರತೀಯ ಜನತಾ ಪಕ್ಷ ಸೇರಿಸಿಕೊಳ್ಳುತ್ತಾ ಪಕ್ಷದ ಬೇರುಗಳನ್ನು ಸಡಿಲಗೊಳಿಸಿ ಲೋಕಸಭೆಯ ಚುನಾವಣೆಯಲ್ಲಿ ಅದ್ಭುತ ಗೆಲವು ಪಡೆದಿದ್ದರು. ಆದರೆ ಈ ಗೆಲುವು ಮಮತಾಗೆ ಸಿಡಿಲು ಬಡಿತದ ಅನುಭವವಾಗಿತ್ತು. ಆಗಲೇ ಮಮತಾಗೆ ಗೊತ್ತಾಗಿತ್ತು ಪಕ್ಷ ಹಳಿ ತಪ್ಪಿದೆ. ಅದಕ್ಕೆ ಅವರು ದಾಳಗಳನ್ನು ಉರಳಿಸಲು ಶುರು ಮಾಡಿದರು. ಅದಕ್ಕಾಗಿ ಕಳೆದ ಆಂಧ್ರದ ಚುನಾವಣೆಯಲ್ಲಿ ಜಗನ್ ರೂಪಿಸಿದ ಹಲವು ತಂತ್ರಗಳು ದೀದಿ ಅಳವಡಿಸಿಕೊಂಡಿರುವುದು. ವಿಶೇಷವಾಗಿ ಪ್ರಶಾಂತ್ ಕಿಶೋರ್ ಅವರನ್ನೇ ಇವರು ಮೊರೆಹೋಗಿದ್ದಾರೆ. ಚಂದ್ರ ಬಾಬು ನಾಯ್ಡು ಹಲವು ಒಳ್ಳೆಯ ಕಾರ್ಯ ಮಾಡಿದರೂ ಜಗನ್ ಮುಂದೆ ಹೀನಾಯವಾಗಿ ಮಂಡಿಯೂರಿದರು. ಅಂದು ಅವರು ಮಾಡಿದ ಹತ್ತು ಸಾವಿರ ಕಿಲೋಮೀಟರ ಪಾದಯಾತ್ರೆ,ಜಾತಿ ಕಾರ್ಡ್ ಪ್ಲೇ ಮತ್ತು ನೌಟಂಕಿ ಆಟಗಳು ಅದರಲ್ಲಿ ಚುನಾವಣೆಯಲ್ಲಿ ಜಗನ್ ಮೇಲೆ ದಾಳಿ ಮಾಡಿ ಅದನ್ನೇ ಚುನಾವಣೆಗೆ ಬಳಸಿದರು. ಅಂದು ಜಗನ್ ನದಿಯಲ್ಲಿ ಹೋಗಿ ಮತ್ತೆ ನಾನು ಹಿಂದುವಾಗಿ ಮತಾಂತರಗೊಂಡಿದ್ದೇನೆ ಎಂಬ ಚಿತ್ರಗಳು ಹರಿಬಿಟ್ಟರು. ಬಂಗಾಳದಲ್ಲಿಯೂ ಅದೇ ಸೇಮ್ ಟು ಸೇಮ್ ಪುನರಾವರ್ತನೆಯಾಗಿದೆ. ನಾನೂ ಬ್ರಾಹ್ಮಣ ಮತ್ತು ಸ್ವ ದಾಳಿಯನ್ನು ಭಾರತೀಯ ಜನತಾ ಪಕ್ಷದವರ ತಲೆಗೆ ಕಟ್ಟಿದ್ದು. ಇವೆಲ್ಲದಕ್ಕೆ ಷಡ್ಯಂತ್ರ ಎಂದರೆ ಸರಿನಾ? ಇವೆಲ್ಲವೂ ರಾಜಕೀಯದಲ್ಲಿ ಹೂಡಿದ ರಾಜಕೀಯ ದಾಳಗಳು!

ರಾಜ್ಯದಲ್ಲಿ ದೊಡ್ಡ ಪಕ್ಷವಾದ ಕಾಂಗ್ರೇಸ್ ಕೇವಲ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಸಣ್ಣ ಪಕ್ಷದ ಮುಂದೆ ತಲೆಬಾಗಿ ಜನರಿಗೆ ಮತ್ತು ಕಾಂಗ್ರೇಸ್ ಶಾಸಕರಿಗೆ ಬೇಡವಾದ ಮೈತ್ರಿಯನ್ನು ಮಾಡಿಕೊಂಡು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಇಂತಹ ಅಪವಿತ್ರ ಮೈತ್ರಿ ಬಹಳ ಕಾಲ ಉಳಿಯಲಿಲ್ಲ. ಧರ್ಮಸ್ಥಳದಲ್ಲಿ ಸಿದ್ದರಾಮಯ್ಯನವರು ಮೈತ್ರಿ ಇಷ್ಟವಿಲ್ಲ ಮತ್ತು ಲೋಕಸಭೆಯ ಚುನಾವಣೆವರೆಗೆ ಇರಲಿ ಬಿಡಿ ಎಂದಿದ್ದರು. ಮುಂದೆ ಗೋಕಾಕ ಶಾಸಕರು ಸರ್ಕಾರ ಬೀಳಿಸಲು ಮುಂದಾಗಿ ಶಾಸಕರ ದಂಡಕಟ್ಟಿಕೊಂಡು ಹಲವು ಪಯತ್ನದ ನಂತರ ಯಶಸ್ವಿಯಾದರು. ಮಂತ್ರಿ ಪಡೆಯುದಕ್ಕೆ ಕಷ್ಟಪಡುತ್ತಿದ್ದ ಒಬ್ಬ ಶಾಸಕ ಸರ್ಕಾರವನ್ನು ಬೀಳಿಸಿ ಮತ್ತೊಂದು ಸರ್ಕಾರ ರಚನೆ ಮಾಡುವದಲ್ಲದೆ ತನಕೆ ಬೇಕಾದ ಮಂತ್ರಿಸ್ಥಾನವನ್ನು ಪಡೆದುಕೊಂಡು ರಾಜ್ಯದ ದೊಡ್ಡ ನಾಯಕರಾಗಿ ಗುರುತಿಸಿಕೊಂಡರು. ಗಮನಸಿ ಇಲ್ಲಿಯೂ ಕೆಲಸ ಮಾಡಿದ್ದು ರಾಜಕೀಯದಲ್ಲಿ ಹೂಡಿದ ರಾಜಕೀಯ ದಾಳಗಳು!
ಇತ್ತೀಚಿಕೆ ವಿಧಾಸಭೆಯಲ್ಲಿ ಕಾಂಗ್ರೇಸ್ ಶಾಸಕ ಒಂದು ಪ್ರಶ್ನೆ ಕೇಳಿ ಅದಕ್ಕೆ ಉತ್ತರ ನನಗೆ ಬೇಡ ಕಾರಣ ಸಚಿವರು ತಪ್ಪು ಮಾಡಿ ನ್ಯಾಯಾಲಯದಿಂದ ನಮ್ಮ ವಿರುದ್ದು ಯಾವ ಸಿಡಿಗಳು ಮಾಧ್ಯಮದಲ್ಲಿ ಪ್ರಸಾರಮಾಡಬಾರದು ಎಂದು ಸ್ಟೇ ತಗೆದುಕೊಂಡಿದ್ದಾರೆ ಅದಕ್ಕೆ ಅವರಿಗೆ ಉತ್ತರ ಕೊಡುವ ನೈತಿಕತೆ ಇಲ್ಲ ಎಂದಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಮಾಧುಸ್ವಾಮಿ ಅಂಥಹ ನೈತಿಕತೆ ನಿಮಗೆ ಇದ್ದರೇ ನೀವು ವಿಧಾನಸೌಧಕ್ಕೆ ಬರುತ್ತಿರಲಿಲ್ಲ ಎಂದು ಕೌಂಟರ್ ಕೊಟ್ಟಿದ್ದರು. ಅದಕ್ಕೆ ಇಲ್ಲಿ ಯಾವದು ನೈತಿಕವಾಗಿ ಇರುತ್ತೆ ಎಂದು ಹೇಳುವುದು ಕಷ್ಟ. ಕಾರಣ ಇದು ರಾಜಕೀಯ. ರಾಜ್ಯಮಟ್ಟದ ನಾಯಕನಾಗಿ ಗುರುತಿಸಿಕೊಂಡು ಮನೆತುಂಬಾ ಮಕ್ಕಳನ್ನು ಇಟ್ಟಕೊಂಡು ಸ್ವಯಂಕೃತ ಅಪರಾದಕ್ಕೆ ಷಡ್ಯಂತ್ರ ಎಂದರೆ ರಾಜಕೀಯ ಆಟದಲ್ಲಿ ಸೋಲಾಗಿದೆ ಎಂದರ್ಥ! ಎಲ್ಲ ದಿಕ್ಕುಗಳಲ್ಲಿ ಶತ್ರುಗಳು ಇರುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಮನೆಯ ಮರ್ಯಾದೆ ಬೀದಿಗೆ ಬರುತ್ತೆ ಎನ್ನುವದಕ್ಕೆ ಇದೊಂದು ಉದಾಹರಣೆ! ಮಾಜಿ ಸಚಿವ ಯಾಕೆ ಇದೊಂದು ಷಡ್ಯಂತ್ರ ಎಂದಿದ್ದಾರೆ? ಕಾರಣ. ಗೆದ್ದು, ಎಚ್ಚರ ತಪ್ಪಿ ಸೋತಾಗಿದೆ ಮತ್ತೆ ಗೆಲ್ಲುವದಕ್ಕೆ ಹೂಡಿದ ರಾಜಕೀಯ ದಾಳ ಅಷ್ಟೇ!
Categories: Articles
