
ಪ್ರತಾಪ ಗೌಡ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಮಸ್ಕಿ ಇರುವುದು ರಾಯಚೂರ ಜಿಲ್ಲೆ ಮತ್ತು ಇವತ್ತಿನ ಕಲ್ಯಾಣ ಕರ್ನಾಟಕ ಭಾಗದಲ್ಲಿ. ಸುಮಾರು ೨ ಲಕ್ಷ ಮತದಾರರು ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧಾರ ಮಾಡುತ್ತಾರೆ. ಜೆಡಿಸ್ ಈಗಾಗಲೇ ಅಭ್ಯರ್ಥಿ ಹಾಕಲ್ಲ ಎಂದು ಹಿಂದೆ ಸರಿದರೆ ಕಾಂಗ್ರೇಸ್ ಉಪಚುನಾವಣೆ ಗೆಲ್ಲಲೇಬೇಕು ಎಂದು ಪಣ ತೊಟ್ಟಂತಿದೆ. ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಸರ್ಕಾರಕ್ಕೆ ಬರ್ಪುರ ಬೆಂಬಲ ಸಿಗುತ್ತೆ ಎನ್ನುವ ಕಾರಣಕ್ಕೆ ಮತ್ತು ಮೇಲಾಗಿ ಕಾಂಗ್ರೇಸ್ ಒಳಜಗಳ ಇರುವದರಿಂದ ಹಿಂದಿನ ಯಾವುದೇ ಚುನಾವಣೆ ಸೀರಿಯಸ್ ಆಗಿ ತಗೆದುಕೊಂಡಿರಲಿಲ್ಲ. ಆದರೆ ಈಗಿರುವ ಉಪಚುನಾವಣೆ ಹೇಗೆ ಕಾಂಗ್ರೇಸ್ ಎದುರಿಸುತ್ತದೆ ಎಂದು ಕಾದುನೋಡಬೇಕಾಗಿದೆ. ಇತ್ತ ಭಾರತೀಯ ಜನತಾ ಪಕ್ಷಕ್ಕೆ ಪ್ರತಿಷ್ಠೆ ಪ್ರಶ್ನೆ ! ಆಡಳಿತ ಪಕ್ಷ ಸೋಲುವ ಮಾತೆ ಇಲ್ಲ. ಸೋತರೆ ವಿರೋಧ ಪಕ್ಷಗಳ ಬಾಯಿಗೆ ಆಹಾರ ಸಿಕ್ಕಂತಾಗುತ್ತದೆ. ಆದ್ದರಿಂದ ಅಳೆದುತೂಗಿ ಮಸ್ಕಿಗೆ ಉಸ್ತುವಾರಿ ಕೊಟ್ಟಿದೆ. ಕೆ ಆರ್ ಪೇಟೆ ಮತ್ತು ಸಿರಾ ವಿಧಾಸಭೆಯ ಚುನಾವಣೆಯಲ್ಲಿ ವಿಜಯೇಂದ್ರರ ಉಸ್ತುವಾರಿಯಲ್ಲಿ ಭರ್ಜರಿ ಜಯ ದಾಖಲಿಸಿದೆ. ಇಲ್ಲಿ ವಿಜಯೇಂದ್ರರ ಜೊತೆ ಪಕ್ಷದ ಹಿರಿಯರು ಕೈ ಜೋಡಿಸಿ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಮತ್ತೆ ಅದೇ ಕಾಂಬಿನೇಶನ್ಗೆ ಉಸ್ತುವಾರಿವಹಿಸಿ ಗೆಲ್ಲಿಸಿಕೊಂಡು ಬನ್ನಿ ಎಂದು ಟಾಸ್ಕ್ ಕೊಟ್ಟಿದ್ದಾರೆ.

ಚುನಾವಣೆ ಸ್ಪೆಸಿಲಿಸ್ಟ್ ಎಂದು ಕರೆಯಿಸಿಕೊಂಡಿರುವ ವಿಜಯೇಂದ್ರ ಮಸ್ಕಿ ಗೆಲ್ಲುವ ಪ್ಲಾನ್ ಹಾಕುತ್ತಿದ್ದಾರೆ. ಅಲ್ಲಿನ ಅಭ್ಯರ್ಥಿ ನನಗೆ ವಿಜಯೇಂದ್ರ ಉಸ್ತುವಾರಿ ಬೇಕು ಎಂದು ಕೇಳಿ ಪಡೆದದ್ದು. ಮಸ್ಕಿಯಲ್ಲಿ ಜಯ ದಾಖಲಿಸುವುದು ಅಷ್ಟೊಂದು ಸರಳವಾದ ಕೆಲಸ ಅಲ್ಲವೇ ಅಲ್ಲ. ಕಾರಣ ವಿಜಯೇಂದ್ರನ ಓಟಕ್ಕೆ ಬ್ರೇಕ್ ಹಾಕಲೇಬೇಕು ಎಂದು ಎಷ್ಟೋ ತಂಡಗಳು ಕೆಲಸ ಮಾಡುತ್ತಿವೆ ಮತ್ತು ಹೋದ ಸಲ ಕೂದಲೆಳೆಯ ಅಂತರದಲ್ಲಿ ಸೋತ ಬಸವನಗೌಡ ತುರ್ವಿಹಾಳ ಕಾಂಗ್ರೇಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ೨೦೦೮ ಭಾರತೀಯ ಜನತಾ ಪಕ್ಷ ಗೆದ್ದರೆ 2013, ೨೦೧೮ರಲ್ಲಿ ಕಾಂಗ್ರೆಸ್ ಗೆದ್ದಿದೆ ಆದರೆ ಪಕ್ಷ ಬೇರೆ ಬೇರೆ ಆದರೂ ಗೆದ್ದ ಅಭ್ಯರ್ಥಿ ಮಾತ್ರ ಪ್ರತಾಪ ಗೌಡ !
ಈ ಉಪಚುನಾವಣೆಯಲ್ಲಿ ನಿರ್ಣಾಯಕ ಕುರುಬ ಮತಗಳು ಕ್ಷೇತ್ರದಲ್ಲಿ ಇರುವುದರಿಂದ ವಿಜಯೇಂದ್ರರವರು ವಿರುಪಾಕ್ಷರವರನ್ನು ಪಕ್ಷಕ್ಕೆ ಸೆಳೆದು ಗೆಲುವಿನ ಹಾದಿ ಸುಗಮವಾಗಿಸಿಕೊಂಡಿದ್ದಾರೆ. ಪರಿಶಿಷ್ಟ ಪಂಗಡಗಳ ಮತ ಎರಡು ಪಕ್ಷಕ್ಕೆ ಹಂಚಿ ಹೋಗುವದರಿಂದ ಸಾಂಪ್ರದಾಯಕ ಲಿಂಗಾಯತ ಮತಗಳು ಭಾರತೀಯ ಜನತಾ ಪಕ್ಷಕ್ಕೆ ಒಲಿದು ಬಂದರೆ ಗೆಲುವು ನಿಶ್ಚಿತ! ಇದಕ್ಕೆ ಕಾಂಗ್ರೇಸ್ ಯಾವ ದಾಳವನ್ನು ಎಸೆಯುತ್ತದೆ ನೋಡಬೇಕು!
RESULTS 2018
| PARTY | VOTES POLLED | % VOTES | CANDIDATE NAME |
|---|---|---|---|
| INC | 60387 | 44.17% | Pratapagouda Patil |
| BJP | 60174 | 44.01% | Basangouda Turvihal |
| JD(S) | 11392 | 8.33% | Rajasomanath Nayak |
| NOTA | 2049 | 1.50% | Nota |
| IND | 983 | 0.72% | Basavanagaud |
| AIMEP | 910 | 0.67% | Babu Nayaka |
| IND | 821 | 0.60% | Amaresh Matur |
RESULTS 2013
| PARTY | VOTES POLLED | % VOTES | CANDIDATE NAME |
|---|---|---|---|
| INC | 45,552 | 43.08% | Pratapgowda Patil |
| KJP | 26,405 | 24.97% | Mahadevappa Gowda |
| BSRCP | 18,197 | 17.21% | Shekharappa Talwar |
| BJP | 4,264 | 4.03% | Shankarkumara Medara |
| JD(S) | 3,488 | 3.3% | Amaresh |
| IND | 2,877 | 2.72% | R Rangappa Nayaka |
| SJPA | 2,152 | 2.04% | Amresh Nayaka |
| CPIM | 1,107 | 1.05% | Nagaraj Medar |
| IND | 1,036 | 0.98% | Tirupati |
| BSP | 650 | 0.61% | Nagaraja Chigari |
RESULTS 2008
| PARTY | VOTES POLLED | % VOTES | CANDIDATE NAME |
|---|---|---|---|
| BJP | 35,711 | 42.26% | Pratap Gouda Patil |
| INC | 28,068 | 33.21% | Timmappa |
| JD(S) | 8,756 | 10.36% | Ayyana Gouda Ayanur |
| IND | 3,401 | 4.02% | K. R. Kandgal |
| IND | 2,605 | 3.08% | Somana Gouda |
| LJP | 2,110 | 2.5% | H. R. Shiva Kumar |
| BSP | 1,595 | 1.89% | Nagaraj Basappa Chigari |
| IND | 1,222 | 1.45% | Comrade Sivappa Avukayi |
| IND | 1,041 | 1.23% | Amaresh Nayak |
Categories: Articles
