Articles

ಬಸವಕಲ್ಯಾಣ ಉಪಚುನಾವಣೆಯ ಸಮರ: ಟಗರು v/s ರಾಜಾಹುಲಿ

ಬಸವನಾಡಿನಲ್ಲಿ ಒಂದು ಕಡೆ ಬಿಸಿಲಿನ ಝಳ ಪ್ರಾರಂಭವಾಗಿದೆ ಮತ್ತೊಂದು ಕಡೆ ಕರೋನ ಅಬ್ಬರ. ಇದರ ಮಧ್ಯ ಉಪಚುನಾವಣೆಯ ಕಾವು. ವಿಧಾನಸಭೆ ಪಡಶಾಲೆಯಲ್ಲಿ ವಿರೋಧಿಗಳಿಗೆ ಮುಖ್ಯಮಂತ್ರಿಯವರಿಂದ ಸವಾಲ್. ಏನು ಸವಾಲ್ ? ಬರುವ ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳು ಗೆದ್ದು ಮತ್ತೆ ನಿಮ್ಮನ್ನು ಭೇಟಿಮಾಡುತ್ತೇನೆ ಆಗ ಚರ್ಚೆ ಮಾಡೋಣ. ಇಂತಹ ಸಂದರ್ಬ ಒದಗಿ ಬಂದಿದ್ದು ವಿರೋಧ ಪಕ್ಷದ ನಾಯಕ ಸರ್ಕಾರವನ್ನು ಇನ್ನಿಲ್ಲಿದಂತೆ ತರಾಟೆಗೆ ತಗೆದೊಕೊಂಡು ಹಿಗ್ಗಾ ಮುಗ್ಗಾ ಜಾಡಿಸುತ್ತುರುವಾಗ ಆಡಳಿತ ಪಕ್ಷದ ನಾಯಕರು ಎದ್ದು ನಿಂತು ಎಸದ ಸವಾಲವೇ ಇದು. ಎಸದ ಸವಾಲ್ ಅಷ್ಟೊಂದು ಸರಳವಾ? ಹೇಗಿದೆ ಬಸವಕಲ್ಯಾಣದ ಭಾರತೀಯ ಜನತಾ ಪಕ್ಷದ ಬೇರು? ಎಷ್ಟು ಬಾರಿ ಭಾರತೀಯ ಜನತಾ ಪಕ್ಷ ಗೆದ್ದಿದೆ? ಲೋಕಸಭೆಯಲ್ಲಿ ಬಂದ ಮತಗಳೆಷ್ಟು? ಇದು ಒಂದು ಕಡೆ ಆದರೆ ಹೋದ ಚುನಾವಣೆಯಲ್ಲಿ ಅಬ್ಬರಿಸಿ ಗೆದ್ದು ಬಿಗಿದ್ದ ಕಾಂಗ್ರೇಸ್ ಪರಸ್ಥಿತಿ ಹೇಗಿದೆ? ಎಷ್ಟು ಬಾರಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದೆ?

ಇದರ ಮಧ್ಯ ಚುನಾವಣೆಗೆ ನಿಲ್ಲುವದಿಲ್ಲ ಎಂದು ಮೊದಲೇ ಘೋಷಿಸಿ ಮತ್ತೆ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿದ ಜೆಡಿಎಸ್ ಪಕ್ಷದ ನಿಲುವು ಏನೆಂದು ತಿಳಿಯುವುದು ಕಷ್ಟದ ಕೆಲಸ. ರಾಜಕೀಯ ಪಕ್ಷಗಳಿಗೆ ಸಿದ್ದಾಂತ ಮತ್ತು ರಾಜ್ಯದ ಅಭಿವೃದ್ಧಿ ಮುಖ್ಯವೇ ಹೊರೆತು ಸೋಲುವ ಭಯವಲ್ಲ. ನಿರಂತರವಾಗಿ ಜೆಡಿಎಸ್ ಇಂತಹ ತಪ್ಪುಗಳು ಮಾಡುತ್ತ ಬಂದಿದೆ ಮುಂದೆಯೂ ಮಾಡುವ ಲಕ್ಷಣಗಳು ಇವೆ!

ಬಸವಕಲ್ಯಾಣದಲ್ಲಿ ೧೯೮೫ ರಿಂದ ೨೦೨೧ ರವರೆಗೆ ಪಕ್ಷಗಳ ಬಲಾಬಲ ಗಮನಿಸಿದರೆ ಇಲ್ಲಿ ಅತಿ ಹೆಚ್ಚು ಬಾರಿ ಗೆದ್ದದ್ದು ಜನತಾ ದಳ. ನಾಲ್ಕು ಬಾರಿ ಬಸವರಾಜ ಪಾಟೀಲ್ ಅಟ್ಟೂರ್ ಅವರಿಗೆ ವಿಜಯಲಕ್ಷ್ಮಿ ದಕ್ಕಿದೆ. ಮೂರೂ ಬಾರಿ ಜನತಾ ಪಕ್ಷದಿಂದ ಒಂದು ಬಾರಿ ಭಾರತೀಯ ಜನತಾ ಪಕ್ಷದಿಂದ ಗೆಲುವು ಕಂಡಿದ್ದರು. ಎರಡು ಬಾರಿ ಮಲ್ಲಿಕಾರ್ಜುನ ಖುಬಾ ಗೆದ್ದಿದ್ದಾರೆ. ಆದರೆ ಕಳೆದ ಚುನಾವಣೆಯಲ್ಲಿ ಎಂದರೆ ೨೦೧೮ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಬಂದು ಸ್ವಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ೨೦೧೮ರಲ್ಲಿ ಗೆಲುವು ದಕ್ಕಿಸಿಕೊಂಡು ವಿಧಾನಸಭೆಯಲ್ಲಿ ನಾನೊಬ್ಬ ಬಡವ ಶಾಸಕ ಮತ್ತು ನಾವು ಇಲ್ಲಿಗೆ ಬಂದಿರೋದು ಜನರ ಆಶೋತ್ತರಗಳಿಗೆ ಸ್ಪಂದಿಸಲು ಎಂದು ಹೇಳುತ್ತಾ ಎಲ್ಲ ನಾಯಕರನ್ನು ತರಾಟೆಗೆ ತಗೆದುಕೊಂಡ ಸರಳ ಶಾಸಕ ನಾರಾಯಣ ವಿಧಿಯಾಟಕ್ಕೆ ಬಲಿಯಾದರು.

ಜಾತಿಗಳ ಲೆಕ್ಕ ಹಾಕಿದರೆ ಇಲ್ಲಿ ಎಲ್ಲ ಜಾತಿಗಳು ಇದ್ದರೂ ಲಿಂಗಾಯತರ ಪ್ರಾಬಲ್ಯ ಇದೆ. ಲಿಂಗಾಯತರ ಜೊತೆ ಮರಾಠರ ಮತಗಳು ತುಂಬಾ ನಿರ್ಣಾಯಕ ಪಾತ್ರವಹಿಸುತ್ತವೆ. ಸುಮಾರು ೨ ಲಕ್ಷ ೨೦ ಸಾವಿರ ಮತದಾರರು ಏಪ್ರಿಲ್ ೧೭ಕ್ಕೆ ತಮ್ಮ ನಿರ್ಣಯವನ್ನು ಕೊಡುತ್ತಾರೆ. ಆದರೆ ಹೇಗೆ ಜನರಿಗೆ ತಾವು ಶ್ರೇಷ್ಠರು ನಮಗೆ ಮತ ಕೊಡಿ ಎಂದು ಕೇಳುತ್ತಾರೆ ಕಾದುನೋಡಬೇಕಿದೆ. ಕಾಂಗ್ರೆಸ್ ಈಗಾಗಲೇ ನಾರಾಯಣ ಅವರ ಪತ್ನಿಯವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಬರೋಬ್ಬರಿ ೨೮ ಅಭ್ಯರ್ಥಿಗಳು ಅರ್ಜಿಯನ್ನು ಹಾಕಿದ್ದಾರೆ!

ಕಲ್ಯಾಣ ಕರ್ನಾಟಕದ ಅಳಿಯನಾಗಿ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷ ವಿಜಯೇಂದ್ರರಿಗೆ ಅಲ್ಲಿನ ಅಭಿಮಾನಿಗಳು ಅಭ್ಯರ್ಥಿಯಾಗಿ ಎಂದು ದುಂಬಾಲು ಬಿದ್ದಿದ್ದರು. ಅವರಿಗೂ ಆಸಕ್ತಿ ಇತ್ತು. ಆದರೆ ಹೈ ಕಮಾಂಡ್ ಹಸಿರು ನಿಶಾನೆ ತೋರಿಸದ ಕಾರಣ ಬೇರೆ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ೨೦೧೮ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮರಾಠಿಗರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತೇವೆ ಎಂಬ ಭರವಸೆ ಕೊಟ್ಟಿದ್ದರು. ಅದೃಷ್ಟವಶಾತ ಸರ್ಕಾರ ರಚನೆಯಾಗಿದೆ ಮತ್ತು ಉಪಚುನಾವಣೆಯ ಮಾಸ್ಟರ್ ಸ್ಟ್ರೋಕ್ ಮರಾಠಿಗರ ಅಭಿವೃದ್ಧಿ ನಿಗಮ ಮತ್ತು ಅನುಭವ ಮಂಟಪದ ಕೆಲಸ! ಇದರ ಹಿಂದೆ ಮಾಸ್ಟರ್ ಮೈಂಡ್ ವಿಜಯೇಂದ್ರ!

ಪ್ರತಾಪ ಗೌಡ ವಿಜಯೇಂದ್ರ ಮಸ್ಕಿಗೆ ಉಸ್ತುವಾರಿಯಾಗಿ ಬರಲಿ ಎಂದು ಕೇಳಿಕೊಂಡಿದ್ದರಿಂದ ಮಸ್ಕಿ ಉಸ್ತುವಾರಿ ವಿಜಯೇಂದ್ರರಿಗೆ ಕೊಟ್ಟು ಬಸವಕಲ್ಯಾಣದ ಉಸ್ತುವಾರಿ ರಾಜ್ಯದ ಉಪಮುಖ್ಯಮಂತ್ರಿ ಲಕ್ಷಣ ಸವದಿಯವರಿಗೆ ವಹಿಸಿದ್ದಾರೆ. ಈಗಾಗಲೇ ಲಕ್ಷಣ ಸವದಿಯವರು ಕ್ಷೇತ್ರಕ್ಕೆ ಭೇಟಿಕೊಟ್ಟು ವಸ್ತಿಸ್ಥಿತಿಯನ್ನು ಅವಲೋಕಿಸಿ ಬಂದಿದ್ದಾರೆ. ಅವರ ಜೊತೆ ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ , ಸೋಮಣ್ಣ ಹೀಗೆ ಅನೇಕ ಘಟಾನುಘಟಿ ನಾಯಕರು ಫೀಲ್ಡ್ ಗೆ ಇಳಿದಿದ್ದಾರೆ. ಈ ಕಡೆ ಮುಖ್ಯಮಂತ್ರಿ ಉದಾಸೀನತೆ ಮಾಡದೆ ಎಲ್ಲ ಕ್ಷೇತ್ರಗಳನ್ನು ಗೆಲ್ಲಲೇಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ.

ಇದು ಭಾರತೀಯ ಜನತಾ ಪಕ್ಷದ ಸುದ್ದಿಯಾದರೆ ಅತ್ತ ಕಡೆ ಡಿಕೆ ಶಿವಕುಮಾರ ಮತ್ತು ಸಿದ್ದರಾಮಯ್ಯ ಅವರ ವ್ಯತ್ಯಾಸ ಹೆಚ್ಚಾಗುತ್ತಾ ಸಾಗಿದೆ. ಆದ್ರೆ ಹಿರಿಯರ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರ ಮನೆಗೆ ಹೋಗಿ ಕಾಲಿಗೆ ಬಿದ್ದು ಆಶೀರ್ವಾದ ತಗೆದುಕೊಂಡು ಬಂದಿದ್ದಾರೆ. ಮುಖ್ಯಮಂತ್ರಿಯವರ ಸವಾಲ್ ವಿರೋಧ ಪಕ್ಷದ ನಾಯಕರು ತುಂಬಾ ಸೀರಿಯಸ್ ಆಗಿ ತಗೆದುಕೊಂಡಂಗೆ ಇದೆ.

ಹೇಗೆ ಉಪಚುನಾವಣೆ ಗೆಲ್ಲಬೇಕು ಮತ್ತು ಯಾವುದನ್ನು ಚುನಾವಣೆಯ ವಿಷಯ ತಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡಿದ ಕಾಣಿಸುತ್ತಿದೆ. ಕಾಂಗ್ರೇಸ್ ಪ್ರಕಾರ ರಮೇಶ ಜಾರಕಿಹೊಳಿ ಸಿಡಿ ವಿಚಾರ ಮತ್ತು ಪೆಟ್ರೋಲ್ ದರ ಮುಖ್ಯವಾದ ವಿಷಯ ಮಂಡಿಸಿ ರಾಜ್ಯ ಸರ್ಕಾರದ ಆಡಳಿತ ರೀತಿ ಹೇಗಿದೆ ಎಂದು ಜನರಿಗೆ ತಲುಪಿಸಿ ಗೆಲ್ಲುವ ತವಕಲ್ಲಿದ್ದಾರೆ. ಆದರೆ ಮುಖ್ಯಮಂತ್ರಿ ಯಾರಾಗಬೇಕೆಂದು ಒಳಗೆ ಒಳಗೆ ಜಗಳ ಮಾಡುತ್ತಿರುವ ನಾಯಕರು ಹೇಗೆ ನಿಭಾಯಿಸುತ್ತಾರೆ ನೋಡಬೇಕು. ಕಳೆದ ಅಥಣಿ ವಿಧಾನಸಭೆಯ ಚುನಾವಣೆಯಲ್ಲಿ ೪೦ ಸಾವಿರಗಳಿಂತ ಹೆಚ್ಚು ಲೀಡ್ ಪಡೆದು ಕುಮಟಳ್ಳಿಯವರು ಗೆದ್ದಿದು ಲಕ್ಷ್ಮಣ್ ಸವದಿಯವರ ನಾಯಕತ್ವದಲ್ಲಿ ಎಂಬುದು ಸತ್ಯ.

ಬಸವಕಲ್ಯಾಣದ ಉಸ್ತುವಾರಿ ವಹಿಸಿ ಮತ್ತೊಂದು ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ. ೨೮ ಅರ್ಜಿಗಳಲ್ಲಿ ಒಂದು ಅರ್ಜಿ ಆಯ್ಕೆಮಾಡಿ ೨೭ ಅಭ್ಯರ್ಥಿಗಳನ್ನು ಸಮಾಧಾನ ಪಡಿಸಿ ಗೆಲ್ಲುವುದು ಸುಲಭದ ಮಾತಲ್ಲ. ಅತ್ತ ಕಡೆ ಕಾಂಗ್ರೇಸ್ ಆಡಳಿತದ ಅಲೆಯನ್ನು ಎದುರಿಸಿ ಗೆಲ್ಲುವುದು ಅತ್ಯಂತ ಕಠಿಣ ಆದರೆ ಅನುಕಂಪದ ಎಳೆ ಸಹಾಯಮಾಡಬಲ್ಲದು. ಆದರೂ ಎಲ್ಲವನ್ನು ತಾಳೆ ಮಾಡಿ ನೋಡಿದಾಗ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೇಸ್ಗೆ ನೇರ ಹಣಾ ಹಣೆ ಇದೆ. ಯಾರು ಒಗ್ಗಾಟಾಗಿ ಹೋಗುತ್ತಾರೆ ಅವರಿಗೆ ಗೆಲವು ನಿಶ್ಚಿತ ಎನ್ನುವುದು ಅಲ್ಲಿನ ಮತದಾರದ ಅಭಿಮತ.

RESULTS 2008

PARTYVOTES POLLED% VOTESCANDIDATE NAME
BJP39,01536.49%Basavaraj Patil Attur
INC31,07729.07%M G Muley
JD(S)23,90522.36%Mallikarjun S Khuba

RESULTS 2013

PARTYVOTES POLLED% VOTESCANDIDATE NAME
JD(S)37,49429.72%Mallikarjun Sidramappa Khuba
INC21,60117.12%B. Narayanrao
BSRCP18,21414.44%M. G. Muley

RESULTS 2018

PARTYVOTES POLLED% VOTESCANDIDATE NAME
INC6142542.27%B. Narayanrao
BJP4415330.38%Mallikarjun S/O Sidramappa Khuba
JD(S)3141421.62%P.G.R. Sindhia

Leave a Reply