Articles

ಬೆಳಗಾವಿ ಲೋಕಸಭೆ ಟಿಕೆಟ್ ಅಂಗಡಿ ಕುಟುಂಬಕ್ಕೆ ಕೊಡಬೇಕಾ? ಕುಟುಂಬ ರಾಜಕಾರಣ ಎಂದರೇನು?

ದೇಶದ ಜನರು ಸತತವಾಗಿ ಎರಡು ಬಾರಿ ಲೋಕಸಭೆಗೆ ಒಂದೇ ಪಕ್ಷಕ್ಕೆ ಉದೋ ಎಂದು ವಿಶ್ವಮಟ್ಟದ ನಾಯಕನನ್ನು ತಮ್ಮ ದೇಶದ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಪ್ರಧಾನಮಂತ್ರಿ ಹೇಳುವ ಒಂದೊಂದು ಮಾತು ದೇಶದ ಜನರಿಗೆ ಕೊಡುವ ಸಂದೇಶ ಎಂದರೆ ತಪ್ಪಾಗಲಾರದು. ಇತ್ತೀಚಿಕೆ ಮೋದಿಯವರು ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಇದನ್ನು ಹೇಗೆ ವ್ಯಾಖ್ಯಾನಿಸಬಹುದು? ಕುಟುಂಬ ರಾಜಕಾರಣ ಎಂದರೆ ರಾಜಕೀಯ ಹಿನ್ನೆಲೆಯಲ್ಲಿ ಹುಟ್ಟಿಬಂದ ಕುಡಿಗಳಿಗೆ ರಾಜಕೀಯದಿಂದ ಹೊರಗಿಡಬೇಕಾ? ಅಥವಾ ರಾಜಕೀಯಕ್ಕೆ ಬರಲಿ ಆದರೆ ಕಾರ್ಯಕರ್ತನಾಗಿ ಕೆಲಸ ಮಾಡಿ ಜನರ ಜೊತೆ ಬೆರೆತು ನಾಯಕನಾಗಲಿ ಎನ್ನುವುದಾ? ಇದರಲ್ಲಿ ಎರಡೆನೆಯ ಪ್ರಶ್ನೆ ಸರೀ ಇದೆ ಎಂಬ ಅಭಿಪ್ರಾಯ ನಮ್ಮದು!

ಪ್ರಸಕ್ತ ರಾಜಕಾರಣದಲ್ಲಿ ಮಿನುಗುತ್ತಿರುವ ಕೃಷ್ಣ ಬೈರೇಗೌಡ, ಬೊಮ್ಮಾಯಿ, ಎಂ ಬಿ ಪಾಟೀಲ್ , ಕುಮಾರಸ್ವಾಮಿ ಹೀಗೆ ಹತ್ತು ಹಲವಾರು ನಾಯಕರು ಕೇವಲ ತಂದೆಯ ಕೃಪೆಯಿಂದ ರಾಜಕೀಯಕ್ಕೆ ಬಂದಿದ್ದು. ಕೆಲವೊಬ್ಬರು ತಮ್ಮ ತಂದೆ ನಿಧನವಾದ ನಂತರ ಮತಕ್ಷೇತ್ರಕ್ಕೆ ಲಗ್ಗೆಯಿಟ್ಟು ಕಷ್ಟಪಟ್ಟು ದುಡಿದು ಪಕ್ಷಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಕಾರ್ಯಕರ್ತರ ಸ್ಥಿತಿ ಅಧೋಗತಿ! ಇಲ್ಲಿ ಗಮನಿಸಿ ಎಚ್ ಡಿ ರೇವಣ್ಣ ನೇರವಾಗಿ ರಾಜಕೀಯ ಬರದೇ ತಂದೆ ರಾಜಕಾರಣಿ ಆದ ನಂತರ ನಿರಂತರವಾಗಿ ಜನರ ಜೊತೆ ಇದ್ದು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ರಾಜಕೀಯ ಪ್ರಾರಂಭಿಸಿದರು. ಆದ್ರೆ ಕುಮಾರಸ್ವಾಮಿ ಪ್ರವೇಶ ಭಿನ್ನ. ಹಾಗೆ ಕೃಷ್ಣ ಭೈರಗೌಡ ನೇರವಾಗಿ ರಾಜಕೀಯಕ್ಕೆ ದುಮಿಕಿದ್ದು. ಇವತ್ತಿನ ಪ್ರಸಿದ್ಧ ವಿಜಯಪುರದ ರಾಜಕಾರಣಿ ಎಂ ಬಿ ಪಾಟೀಲ್ರು ನೇರವಾಗಿ ಬಂದಿದ್ದು.

ನೇರವಾಗಿ ತಂದೆಯ ಹೆಸರಿನಲ್ಲಿ ರಾಜಕೀಯಕ್ಕೆ ಬಂದು ಅಧಿಕಾರವನ್ನು ಅನುಭವಿಸುತ್ತಾ ಇರುವವರು ಕುಟುಂಬ ರಾಜಕಾರಣದ ಅಡಿಯಲ್ಲಿ ಬರುತ್ತಾರೆ. ಆದರೆ ಎಚ್ ಡಿ ರೇವಣ್ಣ ಕುಟುಂಬದ ರಾಜಕಾರಣದ ಅಡಿಯಲ್ಲಿ ಬರುವದಿಲ್ಲ. ಅವರು ಸಾಮಾನ್ಯ ಕಾರ್ಯಕರ್ತರಾಗಿ ದುಡಿದು ದೇವರ ದಯೆ ತಂದೆ ಪ್ರಖ್ಯಾತ ರಾಜಕಾರಣಿ ಅದಕ್ಕೆಅವರ ಏಳಿಗೆ ಅತಿ ಸುಲಭವಾಗಿದೆ. ಇಲ್ಲಿ ಇನ್ನೊಂದು ಗಮನಿಸಿ ತಂದೆಯ ಹೆಸರಿನಲ್ಲಿ ಸುಮಾರು ಜನ ಬಂದರೂ ರಾಜಕೀಯದಲ್ಲಿ ಸಾಧಿಸಿದ್ದು ಬಹಳ ಕಡಿಮೆ ಜನ. ಕೇವಲ ತಂದೆಯ ಹೆಸರು ಪ್ರವೇಶಕ್ಕೆ ಅನುಕೂಲ ಆದರೆ ಅದನ್ನು ಉಳಿಸಿ ಬೆಳಸಿ ದೊಡ್ಡ ರಾಜಕಾರಣಿ ಆಗಬೇಕಾದರೆ ನಾಯಕತ್ವ ಗುಣ ಇರಲೇಬೇಕು. ಇಲ್ಲಿ ಇನ್ನೊಂದು ವಿಷಯ ಕೇವಲ ಒಬ್ಬನಿಗೆ ರಾಜಕೀಯ ಸೀಮಿತವಾಗಿಲ್ಲ ಅವರ ತಮ್ಮ , ತಮ್ಮನ ಮಗ, ಅಣ್ಣನ ಮಗ ಹೀಗೆ ಹಲವಾರು ರಾಜಕೀಯಕ್ಕೆ ಬಂದಿದ್ದು ಕುಟುಂಬದ ರಾಜಕೀಯ ಹಿನ್ನಲೆಯಲ್ಲಿ. ಇದನ್ನು ನಾವು ವಿರೋಧಿಸಬೇಕು ಅಲ್ವೇ? ಬೇರೆ ಬೇರೆ ರಾಜ್ಯಗಳ ಪ್ರಾದೇಶಿಕ ಪಕ್ಷದ ಸ್ಥಿತಿ ಮನೆಯ ಎಲ್ಲ ಸದಸ್ಯರು ಚುನಾವಣೆಗೆ ನಿಲ್ಲುತ್ತಾರೆ. ಇದನ್ನು ನಾವು ವಿರೋಧಿಸಬೇಕು!

ಸುರೇಶ ಅಂಗಡಿಯವರ ನಿಧನದಿಂದ ಬೆಳಗಾವಿಯ ಉಪಚುನಾವಣೆ ಏಪ್ರಿಲ್ ೧೭ಕ್ಕೆ ಇದೆ. ಸುಮಾರು ೧೦-೧೫ ಆಕಾಂಕ್ಷಿಗಳು ಅರ್ಜಿಯನ್ನು ಹಾಕಿದ್ದಾರೆ. ಇದರಲ್ಲಿ ಒಬ್ಬರನ್ನು ಆಯ್ಕೆಮಾಡಬೇಕು. ಇಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದು ಸದ್ಯದ ಪ್ರಶ್ನೆ? ಟಿಕೆಟ್ ಅಂಗಡಿಯವರ ಮಗಳಿಗೆ ಕೊಡಬೇಕು ಎಂದು ಅಂಗಡಿಯವರ ಅಭಿಮಾನಿಗಳ ಮತ್ತು ಜಗದೀಶ ಶೆಟ್ಟರ ಅವರ ಒತ್ತಡ ಇದೆ. ಜಗದೀಶ್ ಶೆಟ್ಟರ್ ಅವರು ಅಂಗಡಿಯವರ ಬೀಗರು ಎಂದರೆ ಸುರೇಶ ಅಂಗಡಿಯವರ ಮಗಳು ಶೆಟ್ಟರವರ ಸೊಸೆ . ಈಗಾಗಲೇ ಪ್ರದೀಪ್ ಶೆಟ್ಟರ ವಿಧಾನಪರಿಷತ್ತು ಸದಸ್ಯ. ಇವರು ಸ್ವಲ್ಪ ದಿವಸ ಕಾರ್ಯಕರ್ತರಾಗಿ ದುಡಿದಿದ್ದರು ಅದಕ್ಕೆ ಅವರಿಗೆ ಕೊಟ್ಟಿದ್ದಾರೆ ಎಂಡ್ ನಂಬೋಣ. ಆದರೆ ಅವರ ಸೊಸೆಗೆ ರಾಜಕೀಯ ಅನುಭವ ಇಲ್ಲ ಮತ್ತು ಪಕ್ಷಕ್ಕಾಗಿ ಅವರ ಕೊಡುಗೆ ಶೂನ್ಯ ಆದರೂ ಅವರಿಗೆ ಟಿಕೆಟ್ ಕೊಡಿ ಎಂದು ಕೇಳುವುದು ಕುಟುಂಬದ ಮೀಸಲಾತಿಯಲ್ಲಿ ಎನ್ನುವದು ಕಟು ಸತ್ಯ.

ಈಗಿನ ಸದ್ಯದ ರಾಜಕಾರಣದಲ್ಲಿ ಪ್ರಜ್ವಲ್ ರೇವಣ್ಣ ಹಿನ್ನಲೆ ಗಮನಿಸಿ. ಅವರು ಸುಮಾರು ವರ್ಷ ಕಾರ್ಯಕರ್ತರಾಗಿ ದುಡಿದಿದ್ದು ಇದೆ ಆದರೆ ತಂದೆಯ ಶ್ರೀರಕ್ಷೆ ಇದೆ ಅದು ಅವರ ಅದೃಷ್ಟ! ಅದೇ ನಿಖಿಲ ಕುಮಾರಸ್ವಾಮಿ ನೇರವಾಗಿ ಕೇವಲ ತಂದೆ ಪ್ರಖ್ಯಾತ ರಾಜಕಾರಣಿ ಎಂದು ರಾಜಕೀಯಕ್ಕೆ ಬಂದಿದ್ದು. ಭಾರತೀಯ ಜನತಾ ಪಕ್ಷದಲ್ಲಿ ಯಡಿಯೂರಪ್ಪನವರ ಪುತ್ರ ರಾಘವೇಂದ್ರ ನೇರವಾಗಿ ರಾಜಕಾರಣಕ್ಕೆ ಬಂದಿಲ್ಲ ಅವರು ತಕ್ಕ ಮಟ್ಟಿಗೆ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು. ಹೀಗೆ ಅನೇಕ ರಾಜಕಾರಣಿಗಳ ಮಕ್ಕಳು ನೇರವಾಗಿ ರಾಜಕೀಯಕ್ಕೆ ಪ್ರವೇಶ ಮಾಡುವುದು ಕುಟುಂಬ ರಾಜಕಾರಣ ಎನ್ನಬೇಕೇ ಹೊರೆತು ಪಕ್ಷದಲ್ಲಿ ವರ್ಷಗಳ ಕಾಲ ಕಾರ್ಯಕರ್ತರಾಗಿ ಟಿಕೆಟ್ ಪಡೆದುಕೊಂಡರೆ ಕುಟುಂಬ ರಾಜಕಾರಣ ಎನ್ನುವುದು ಸಲ್ಲದು. ಕಾಂಗ್ರೇಸ್ ಪಕ್ಷ ದೇಶದ ಅತ್ಯಂತ ಹಳೆಯ ಪಕ್ಷ ಇಂದಿಗೂ ಕುಟುಂಬ ರಾಜಕಾರಣದ ನೆರಳಿನಿಂದ ಹೊರಬರದೆ ಒದ್ದಾಡುತ್ತಿದೆ. ಅಲ್ಲಿ ಏನಿದ್ದರೂ ನೇರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಇದು ಅತಿ ದೊಡ್ಡ ಕುಟುಂಬ ರಾಜಕಾರಣ ಇದನ್ನೇ ಮೋದಿ ಹೇಳಿದ್ದು ಎಂದು ವ್ಯಾಖ್ಯಾನಿಸಬಹುದು. ಕುಟುಂಬ ರಾಜಕಾರಣ ಮತ್ತು ರಾಜಕೀಯ ಹಿನ್ನೆಲೆಯಿದ್ದು ಕಾರ್ಯಕರ್ತರಾಗಿ ದುಡಿದು ಪಕ್ಷಕ್ಕಾಗಿ ಜೀವನ ಮುಡಿಪಾಗಿದ್ದರೇ ಕುಟುಂಬ ರಾಜಕಾರಣ ಎನ್ನವುದು ಎಷ್ಟು ಸರಿ?

ಇಂದು ದೇಶದಲ್ಲಿ ಹಲವಾರು ಪ್ರಸಿದ್ಧ ರಾಜಕಾರಣಿಗಳು ಯಾವುದೇ ರಾಜಕೀಯ ಹಿನ್ನಲೆ ಇಲ್ಲದೆ ಬಂದರೂ ರಾಜ್ಯ,ದೇಶ ಮತ್ತು ವಿಶ್ವ ಮಟ್ಟದ ನಾಯಕರಾಗಿದ್ದಾರೆ. ಕೆಲವೊಂದು ಉಧಾಹರಣೆಗಳು ರಾಜಕಾರಣದ ಹಿನ್ನಲೆಯಿಂದ ಬಂದರೂ ಜನರ ಪ್ರೀತಿ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದು ಜಾಕ್ ಹಾಕಿ ಬಂದು ಪಕ್ಷಕ್ಕಾಗಿ ದುಡಿದಿದ್ದರಿಂದ ! ಇನ್ನು ಕೆಲವರು ಕಾರ್ಯಕರ್ತರ ಶ್ರಮದ ಫಲವಾಗಿ ಉನ್ನತಿ ಹೊಂದಿದ್ದಾರೆ. ಇದು ಕಾರ್ಯಕರ್ತರಿಗೆ ಮಾಡಿದ ಮೋಸ. ಅದಕ್ಕೆ ರಾಜಕೀಯಕ್ಕೆ ಪ್ರವೇಶ ಮಾಡಲಿ ಆದರೆ ಕಾರ್ಯಕರ್ತರಾಗಿ ದುಡಿದು ಟಿಕೆಟ್ ಪಡೆದುಕೊಳ್ಳಲಿ ಎನ್ನುವುದು ನಮ್ಮ ಆಶಯ. ಇಲ್ಲವಾದರೆ ಮತ್ತೆ ಅಂಗಡಿ ಅವರ ಕೆಳಗೆ ಓಡಾಡಿದ ಕಾರ್ಯಕರ್ತರ ಅವಕಾಶ ಕಿತ್ತಿಕೊಂಡಂತಾಗುತ್ತದೆ.

Categories: Articles

Tagged as: , ,

1 reply »

  1. ಬಹುತೇಕ ಎಲ್ಲಾ ಪಕ್ಷಗಳೂ ಕುಟುಂಬ ರಾಜಕಾರಣಕ್ಕೆ ಒಳಗಾಗಿವೆ. ಬಿಜೆಪಿಯಲ್ಲೂ ಬಹಳಷ್ಟು ಜನ ಇದೀಗ ಕುಟುಂಬ ರಾಜಕಾರಣಕ್ಕೇ ಮೊರೆ ಹೋಗುತ್ತಿದ್ದಾರೆ. ತೃತೀಯ ರಂಗದಲ್ಲಂತೂ ಕುಟುಂಬ ರಾಜಕಾರಣವೇ ಪ್ರಧಾನವಾಗಿದೆ. ಇದ್ದುದರಲ್ಲಿ ಕಮ್ಯೂನಿಸ್ಟ್ ಪಕ್ಷಗಳೇ ಕುಟುಂಬ ರಾಜಕಾರಣವನ್ನು ಬಹಳಷ್ಟು ದೂರ ಇಟ್ಟಿವೆ.

    Liked by 1 person

Leave a Reply