
ಮೋದಿಯ ಅಭಿವೃದ್ಧಿ ಪರ್ವಕಾಲ:
೨೦೧೪ರ ಲೋಕಸಭೆಯ ಚುನಾವಣೆಗೆ ಎಲ್ಲಾ ಪಕ್ಷಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮೊದಲ ಬಾರಿಗೆ ದೇಶದಲ್ಲಿ ಜನರ ನಾಯಕ ಜನರ ಮೂಲಕ ಆಯ್ಕೆಯಾಗಿದ್ದರು ಅವರೇ ಸತತ ೧೨ ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ರಾಜ್ಯವನ್ನು ಅಭಿವೃದ್ಧಿ ಮಾಡಿದ ನರೇಂದ್ರ ಮೋದಿ! ನರೇಂದ್ರ ಮೋದಿ ಮುಖ್ಯಮಂತ್ರಿ ಆಗುವಕ್ಕಿಂತ ಮುಂಚೆ ಗುಜರಾತದಲ್ಲಿ ೨೪ ಘಂಟೆಗಳ ಕಾಲ ವಿದ್ಯುತ್ ಇರಲಿಲ್ಲ, ರೈತರಿಗೆ ನೀರಿನ ಸೌಲಭ್ಯ ಇರಲಿಲ್ಲ ಮತ್ತು ಕುಡಿಯುವ ನೀರಿನ ಮೂಲಭೂತ ಸೌಕರ್ಯಯೂ ಇರಲಿಲ್ಲ. ಇಂತಹ ಸನ್ನಿವೇಶದಲ್ಲಿ ಖುರ್ಚಿಯನ್ನು ಅಲಂಕರಿಸಿ ೧೨ ವರ್ಷಗಳ ಕಾಲ ಜನರ ಆಶೋತ್ತರಗಳಿಗೆ ಸ್ಪಂದಿಸಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದರು. ಇದೆಲ್ಲವನ್ನು ದೇಶದ ಜನರು ಗಮನಿಸಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಅಕ್ರಮಗಳಿಗೆ ಬೇಸತ್ತು ಹೊಸ ನಾಯಕನ ಶೋಧನೆಯಲ್ಲಿ ದೇಶಕ್ಕೆ ಸಿಕ್ಕಿದ್ದು ನರೇಂದ್ರಭಾಯಿ ದಾಮೋಧರದಾಸ ಮೋದಿ! ೨೦೧೪ ಮತ್ತು ೨೦೧೯ರ ಎರಡು ಚುನಾವಣೆಯಲ್ಲಿ ಅಭಿವೃದ್ಧಿ ಮೌಲ್ಯಮಾಪನದಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ.

ಕ್ರೇಜಿ ಕೆಲಸಗಳು:
ಅಣ್ಣಾ ಹಜಾರೆ ಮೂಲಕ ಪ್ರಾರಂಭವಾದ ಭ್ರಷ್ಟಾಚಾರ ವಿರೋಧಿ ಚಳುವಳಿ ಒಂದು ರಾಜ್ಯದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಜನರ ಸಿಟ್ಟು! ಅರವಿಂದ ಕೇಜ್ರಿವಾಲ್ ಚಳುವಳಿ ಮೂಲಕ ಪ್ರಸಿದ್ದಿ ಪಡೆದು ರಾಜಕೀಯ ಪಕ್ಷ ಕಟ್ಟಿ ಚುನಾವಣೆ ಎದುರಿಸಿ ಅವಶ್ಯಕವಾದ ಸೀಟ್ಗಳ ಕೊರೆತೆಯಿಂದ ಅಲ್ಪ ಮತದ ರಚಿಸಿದ ಸರ್ಕಾರ ಬಿದ್ದುಹೋಯಿತು ಮತ್ತೆ ಕ್ಲೀನ್ ಸ್ವೀಪ್ ಮಾಡಿ ಸರ್ಕಾರ ರಚನೆ ಮಾಡಿದ್ದು ನೋಡಿದ್ದೇವೆ. ೬೭(೭೦ರಲ್ಲಿ) ಶಾಸಕರು ಜನರಿಂದ ಆಯ್ಕೆಯಾಗಿ ದೇಶದ ಜನರು ಆಶ್ಚರ್ಯವಾಗಿದ್ದು ಸುಳ್ಳಲ್ಲ. ಆದ್ರೆ ಗೆಲುವು ಸಾದಿಸಿ ಮೋದಿಯನ್ನು ವಿರೋಧಿಸುತ್ತ ಸಮಯ ವ್ಯರ್ಥ ಮಾಡುತ್ತಿದ್ದಾಗ ಮತ್ತೆ ಲೋಕಸಭೆಯಲ್ಲಿ ಮೋದಿಯವರಿಗೆ ೭ ಕ್ಕೆ ೭ ಸೀಟಗಳು ಕೊಟ್ಟಾಗ ಅರವಿಂದ ಕೇಜ್ರಿವಾಲ ತನ್ನ ಜವಾಬ್ದಾರಿಯನ್ನು ಅರಿತು ಅಭಿವೃದ್ಧಿ ಕೆಲಸಕ್ಕೆ ಒತ್ತುಕೊಟ್ಟು ಅದರಲ್ಲಿ ಯಶಸ್ವಿಯಾದರು! ದೆಹಲಿಯ ಸರ್ಕಾರ ಶಾಲೆಗಳು ದೇಶಕ್ಕೆ ಮಾದರಿ ಎಂದು ಅನೇಕರು ಹೇಳಿದ್ದಾರೆ. ಮತ್ತು ಬಡವರಿಗೆ ಅನುಕೂಲವಾಗಲಿ ಎಂದು ಮೊಹಲ್ಲಾ ಕ್ಲಿನಿಕ್! ನಿಗದಿತ ಮೀಟರ್ ಯೂನಿಟ್ ವಿದ್ಯುತ್ ಉಚಿತ , ನಿಗದಿತ ಮೀಟರ್ ಯೂನಿಟ್ ನೀರನ್ನು ಉಚಿತವಾಗಿ ಕೊಟ್ಟು ಜನರಿಗೆ ನೇರವಾಗಿಸಹಾಯಮಾಡಿದ್ದಾರೆ. ಇದೆಲ್ಲವೂ ಉಚಿತ ಎನ್ನುವದಕ್ಕಿಂತ ಹಣದ ಸೋರಿಕೆ ತಪ್ಪಿಸಿ ಅದೇ ದುಡ್ಡಲ್ಲಿ ಯೋಜನೆಗಳು ಜನರಿಗೆ ತಲುಪಿಸಿದ್ದಾರೆ ಎಂದರೆ ತಪ್ಪಾಗಲಾರದು! ಮೋದಿಯ ಸುನಾಮಿಯಲ್ಲೂ ದೆಹಲಿಯಲ್ಲಿ ಎರಡನೆಯ ಬಾರಿ ಸರ್ಕಾರ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ ಎಂದರೆ ಅಭಿವೃದ್ಧಿ ಮೂಲಮಂತ್ರ!
ಸರ್ಕಾರ ,ಬಜೆಟ್ ಮತ್ತು ಸಿದ್ದರಾಮಯ್ಯ:
೨೦೦೮ರಲ್ಲಿ ಸರ್ಕಾರ ರಚಿಸಿ ಒಳ್ಳೆಯ ಜನಮನ್ನಣೆ ಆಡಳಿತ ಕೊಟ್ಟರೂ ರಾಜಕೀಯ ಷಡ್ಯಂತ್ರಕ್ಕೆ ಬಲಿಪಶುವಾಗಿ ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾದರು. ೨೦೧೮ರಲ್ಲಿ ಅಲ್ಪ ಮತಗಳ ಕೊರೆತೆಯಿಂದ ಮತ್ತೆ ಸರ್ಕಾರ ರಚಿಸುವ ಅವಕಾಶ ತಪ್ಪಿತು. ಆದರೆ ಆಡಳಿತದ ಶಾಸಕರ ಅತೃಪ್ತಿ ಮತ್ತು ಮಲತಾಯಿಯ ಧೋರಣೆಯಿಂದ ಸರ್ಕಾರ ಬಿದ್ದುಹೋಗಿ ಮತ್ತೆ ಭಾರತೀಯ ಜನತಾ ಪಕ್ಷ ಸರ್ಕಾರ ರಚನೆಮಾಡಿ ರಾಜಾಹುಲಿ ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಜನರ ನಿರೀಕ್ಷೆ ಬಹಳ ಇದೆ. ಆದರೆ ದೈವಿಚ್ಛೆ ಪ್ರವಾಹ ಮತ್ತು ಕರೋನ ರಾಜ್ಯದ ಅಭಿವೃದ್ಧಿಗೆ ತೊಡಕಾದವು. ನಿಧಾನವಾಗಿ ಅರ್ಥವ್ಯವಸ್ಥೆ ಚೇತರಿಕೆ ಕಾಣುತ್ತಿದೆ ಮತ್ತು ಇಗಿಷ್ಟೆ ಕೊಟ್ಟ ಬಜೆಟ್ ತೆರಿಗೆ ಇಲ್ಲದೆ ಕೊಟ್ಟ ಅತ್ಯುತ್ತಮ ಬಜೆಟ್ ಎಂದು ಅನೇಕ ಅರ್ಥಶಾಸ್ತ್ರಜ್ಞರು ಹೇಳಿಗೆ ಕೊಟ್ಟಿದ್ದಾರೆ. ಎಲ್ಲ ಜಿಲ್ಲೆಗಳಿಗೆ, ಎಲ್ಲ ಜಾತಿಗಳಿಗೆ ,ಎಲ್ಲ ಕ್ಷೇತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿರೋಧ ಪಕ್ಷದ ನಾಯಕರು ಅನೇಕ ಪ್ರಶ್ನೆಗಳು ಎತ್ತಿದರೂ ಎಲ್ಲದಕ್ಕೂ ಸಮರ್ಥವಾಗಿ ಉತ್ತರಕೊಟ್ಟು ಜನರ ಸಂಶಯ ನಿವಾರಣೆ ಮಾಡಿದ್ದಾರೆ. ವಿರೋಧ ಪಕ್ಷದ ಜೊತೆಗೆ ಆಡಳಿತ ಪಕ್ಷದ ಶಾಸಕರೂ ಸರ್ಕಾರದ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಪೆಟ್ರೋಲ್ ಬೆಲೆ ಹೆಚ್ಚಳವಾಗಿ ದಿನನಿತ್ಯ ಉಪಯೋಗಿಸುವ ವಸ್ತುಗಳ ಬೆಲೆನೂ ಏರಿಕೆಯಾಗಿ ಜನರಿಗೆ ಹೊರೆಯಾಗಿದೆ ಎಂದು ಸುಮಾರು ಜನರ ವಾದ! ಇದು ಸ್ವಲ್ಪ ಮಟ್ಟಿಗೆ ನಿಜಾನೂ ಹೌದು. ಸ್ವಲ್ಪ ನಿಜ ಯಾಕೆ ಎಂದರೆ ಮೊದಲು ಸಬ್ಸಿಡಿ ಕೊಡುತ್ತ ಸರ್ಕಾರವನ್ನು ಸಾಲದ ಸುಳಿಗೆ ಸಿಲುಕಿಸಿತ್ತು. ಆದರೆ ಇವಾಗ ಪೆಟ್ರೋಲ್ ಮೇಲೆ ಸರಕಾರದ ಕಂಟ್ರೋಲ್ ಇಲ್ಲಾ ಆದರೆ ಹಾಕುತ್ತಿರುವ ಟ್ಯಾಕ್ಸ್ ಮಾತ್ರ ಜಾಸ್ತಿನೇ! ರಾಜ್ಯದ ಖಡಕ್ ನಾಯಕ ಎಂದು ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತಗೆದುಕೊಂಡ ಸನ್ನಿವೇಶ ನೋಡಿದರೆ ಅವರು ಆಡಿದ ಮಾತುಗಳು ಸತ್ಯದ ಹತ್ತಿರಕ್ಕೆ ಇವೆ. ಆದರೂ ಕೆಲಯೊಂದು ಸತ್ಯಗಳು ಮರೆಮಾಚಿ ಒಳ್ಳೆಯ ಬಜೆಟ್ ಬಗ್ಗೆ ಋಣಾತ್ಮಕವಾಗಿ ಮಾತಾಡಿದ್ದಾರೆ. ಅದು ಅವರ ಕೆಲಸ. ಅವರೂ ಪೆಟ್ರೋಲ್ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ತಕ್ಕ ಮಟ್ಟಿಗೆ ಬೊಮ್ಮಾಯಿ ಅದನ್ನು ಸಮರ್ಥನೆ ಮಾಡಿದ್ದಾರೆ.
ಮುಂದಿರುವ ಆಯ್ಕೆಗಳು:
ಕಷ್ಟಪಟ್ಟು ಮಾಡಿದ ಸರ್ಕಾರ ಜನರಿಗೆ ಅನುಕೂಲವಾಗದೆ ಹೋದರೆ ಭಾರತೀಯ ಜನತಾ ಪಕ್ಷಕ್ಕೆ ಭವಿಷ್ಯದಲ್ಲಿ ಅತಿ ದೊಡ್ಡ ಹೊಡೆತ ! ಮಾಧ್ಯಮಗಳ ಮತ್ತು ಬಲ್ಲಮೂಲಗಳಿಂದ ಮಾಹಿತಿ ತಗೆದುಕೊಂಡು ಜನಪರ ಸರ್ಕಾರಕ್ಕೆ ವೇಗ ಕೊಡುವ ಮಾತು ಮಾತಾಡಿದ್ದಾರೆ. ಅಧಿಕಾರಿಗಳ ಜಡತ್ವ, ಮುಖ್ಯಮಂತ್ರಿ ಬದಲಾವಣೆ ಎಂದು ತೇಲಿಬಿಟ್ಟು ಸರ್ಕಾರಕ್ಕೆ ಹಿನ್ನಡೆ ಮಾಡಿದ್ದು ಸತ್ಯ! ಒಂದು ಕಡೆ ಹಣಕಾಸಿನ ಕೊರೆತೆ ಇನ್ನೊಂದು ಕಡೆ ಪಕ್ಷದಲ್ಲೇ ಶತ್ರುಗಳ ಕಾಟ! ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಜನಪರ ಸರ್ಕಾರ ಕೊಟ್ಟು ಸೈ ಎನ್ನಿಸುವ ಲೆಕ್ಕಾಚಾರ ಹಳಿತಪ್ಪುವ ಭೀತಿ. ಇದೆಲ್ಲವನ್ನು ಗಮನಿಸಿಯೇ “ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ” ಘೋಷಣೆಯಾಗಿದ್ದು. ರಾಜ್ಯದಲ್ಲಿ ಗ್ರಾಮ ವಾಸ್ತವ್ಯಕ್ಕೆ ಹೆಸರುವಾಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗಳು ತಕ್ಕ ಮಟ್ಟಿಗೆ ಜನರ ಕಷ್ಟಗಳಿಗೆ ಪರಿಹಾರ ಒದಗಿಸಿದ್ದರು. ಆದರೆ ಹಳ್ಳಿಗಳ ಉದ್ಧಾರ ಆಗದೆ ಹೋಯಿತು. ಇವತ್ತಿಗೂ ಕೋಣೆಗಳಿಲ್ಲದ , ಆಟದ ಮೈದಾನವಿರದ ಮತ್ತು ಒಂದು ಒಳ್ಳೆಯ ಗ್ರಂಥಾಲಯ ಇಲ್ಲದ ಶಾಲೆಗಳು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದರೂ ದುರಸ್ತಿ ಆಗದೆ ಇರುವ ಪ್ಲಾಂಟಗಳೇ ಜಾಸ್ತಿ. ಇದು ವಿಧಾನಸಭೆಯಲ್ಲಿ ಹೇಳಿದ ಮಾತು ! ಬಡವರ ಮನೆಯನ್ನು ಬಡವರಿಗೆ ಮುಟ್ಟಿಸಲು ೪೦ ಸಾವಿರ ರೂಪಾಯಿ ಲಂಚ ತಗೆದುಕೊಂಡ ಉಧಾಹರಣೆ ನಮ್ಮ ಮುಂದಿದೆ. ಹೀಗೆ ಅನೇಕ ಜ್ವಲಂತ ಸಮಸ್ಸ್ಯೆಗಳಿಗೆ ಯಾವಾಗ ಪರಿಹಾರ?
ರೈತರಿಗೆ ೨೪ ಘಂಟೆಗಳ ಕಾಲ ವಿದ್ಯುತ್:
ರೈತರ ಆತ್ಮಹತ್ಯೆ ಬಗ್ಗೆ ನೂರಾರು ಮಾತುಗಳು ಆದರೆ ಇವರಗೆ ರೈತರಿಗೆ ನಿರಂತರ ವಿದ್ಯುತ್ ಕೊಡುವದಕ್ಕೆ ಆಗಿಲ್ಲ. ಮುಖ್ಯಮಂತ್ರಿಗಳ ಪ್ರಕಾರ ಸದ್ಯದ ಇನ್ಫ್ರಾಸ್ಟ್ರಕ್ಚರ್ ೨೪ ಕೊಡುವುದಕ್ಕೆ ಸಾಧ್ಯನೆಯಿಲ್ಲ. ಇದಕ್ಕೆ ಪರಿಹಾರ ಏನು? ಇಂತಹ ದೊಡ್ಡ ದೊಡ್ಡ ಸಮಸ್ಸ್ಯೆಗಳಿಗೆ ಪರಿಹಾರ ಕೊಟ್ಟಲ್ಲಿ ರೈತನಾಯಕನ ಹೆಸರು ಅಜರಾಮರವಾಗಿ ಉಳಿವುದು ಖಂಡಿತ.
ಇಲಾಖೆಗಳ ಅಕ್ರಮಕ್ಕೆ ಕಡಿವಾಣಿ ಮತ್ತು ಸ್ಥಳದಲ್ಲೇ ಪರಿಹಾರ:
ಜಿಲ್ಲಾ ಪ್ರವಾಸ ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸಿ ಆಡಳಿತ ಯಂತ್ರವನ್ನು ಚುರುಕು ಮಾಡುವ ಮನಸ್ಸು ಮುಖ್ಯಮಂತ್ರಿಯವರಿಗೆ ಬಂದಿದೆ. ಆದರೆ ಅದನ್ನು ಸಾಧಿಸುವುದು ಎಷ್ಟು ಸರಳ? ಹಳ್ಳಿಯ ಬದಲಾಗಿ ಜಿಲ್ಲೆಯಲ್ಲಿ ವಾಸ್ತ್ಯವ್ಯ ಮಾಡಿ ಎಲ್ಲ ಇಲಾಖೆಗಳ ಮೌಲ್ಯಮಾಪನ ಮಾಡಿ ಬಾಕಿ ಇರುವ ಖಡತಗಳನ್ನು ವಿಲೇವಾರಿ ಮಾಡಿ ಆಡಳಿತಕ್ಕೆ ಸ್ವಲ್ಪ ವೇಗ ಹೆಚ್ಚಿಸಬಹುದು. ಆದರೆ ಅಧಿಕಾರಿಗಳ ಸುಳ್ಳು ಮಾಹಿತಿ ಮತ್ತು ಅವರ ಅಕ್ರಮಕ್ಕೆ ತಡೆ ಹಾಕಬೇಕಾದರೆ ಪೂರ್ವಸಿದ್ಧತೆ ಇಲ್ಲದೆ ಹೋದರೆ ವೇಗ ಕೊಡುವುದಕ್ಕೆ ಸಾಧ್ಯನಾ? ಅದಕ್ಕೆ ಪ್ರಾಮಾಣಿಕ ಅಧಿಕಾರಿಗಳನ್ನು ಮುನ್ನೆಲೆಗೆ ಆಯಾ ಸ್ಥಳದಲ್ಲಿ ನಿಯೋಜನೆ ಮಾಡಿ ದುಡ್ಡಿನ ವರ್ಗಾವಣೆಗೆ ವಿರಾಮಹಾಕಿದರೆ (ಇದು ಎಲ್ಲ ಸರ್ಕಾರಗಲ್ಲಿ ನಿರಂತರವಾಗಿ ನಡೆಯುವ ಕೆಲಸ ) ಖಂಡಿತ ಸಾಧ್ಯ. ರಾಜ್ಯದಲ್ಲಿ ಆರ್ ಟಿ ಓ ,ಸಬ್ ರೆಜಿಸ್ಟರ್ ಮತ್ತು ವಿಶೇಷವಾಗಿ ಪಂಚಾಯತಿಗಳಲ್ಲಿ ಅಕ್ರಮಕ್ಕೆ ಕಡಿವಾಣ ಹಾಕಿದರೆ ವೇಗ ಬರುವದರಲ್ಲಿ ಸಂಶಯವಿಲ್ಲ. ಅಕ್ರಮಕ್ಕೆ ಕಡಿವಾಣ ಹಾಕಬೇಕಾದರೆ ಡಿಜಿಟಲ್ ಒಂದೇ ಮಾಧ್ಯಮ . ಅದು ಅಚ್ಚುಕಟ್ಟಾಗಿ ಇರಬೇಕು. ಒಂದು ಉಧಾಹರಣೆ ಒಂದು ಇಸಿ ತಗೆದುಕೊಳ್ಳಲು ಆನ್ಲೈನ್ ಸೇವೆ ಇದ್ದರೂ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇಂತಹ ಸಮಸ್ಸ್ಯೆಗಳನ್ನು ಹುಡುಕಿ ಸರಿಮಾಡಬೇಕು.

ಪ್ರಧಾನ ಮಂತ್ರಿಗಳ ಸಾರ್ವಜನಿಕ ಕುಂದುಕೊರತೆ ಪೋರ್ಟಲ್ ರೀತಿ ರಾಜ್ಯ ಸರ್ಕಾರ ಕೆಲಸ ಮಾಡಬೇಕು:
ಕೇಂದ್ರದ ಯಾವದೇ ಇಲಾಖೆಗಳ ಮೇಲೆ ಸಮಸ್ಸ್ಯೆ ಇದ್ದರೇ ಕಂಪ್ಲೇಂಟ್ ಕೊಟ್ಟ ತಕ್ಷಣ ನಿಮ್ಮ ಮೊಬೈಲ್ಗೆ ಸಂದೇಶ ಬರುತ್ತೆ. ಒಂದು ದಿವಸದ ನಂತರ ಮೇಲಿನ ಅಧಿಕಾರಿಗಳ ಗಮನಕ್ಕೆ ಬಂದಿರುತ್ತೆ. ಕೇವಲ ಮೂರೇ ದಿವಸದಲ್ಲಿ (ಇತ್ತೀಚಿನ ಮಾಹಿತಿ) ನಿಮ್ಮ ಕಂಪ್ಲೈಂಟ್ ಉನ್ನತ ಮಟ್ಟದ ಅಧಿಕಾರಿ ಇದರ ಗಮನ ಹರಿಸಿ ಪರಿಹಾರ ಕೊಡಿ ಎಂದು ಆದೇಶ ಮಾಡುತ್ತಾರೆ. ಅದಕ್ಕೆ ಪರಿಹಾರನೂ ಸಿಗುತ್ತೆ. ಇಂತಹ ದೊಡ್ಡ ದೇಶಕ್ಕೆ ನಿಗದಿತ ಕಾಲಮಿತಿಯಲ್ಲಿ ಪರಿಹಾರ ಕೊಡಲಿಕ್ಕೆ ಸಾಧ್ಯ! ಅದೇ ರಾಜ್ಯಗಳಿಗೆ ಯಾಕೆ ಸಾಧ್ಯವಿಲ್ಲ? ಸಾಧ್ಯವಿದೆ ಅದು ಪ್ರಾಮಾಣಿಕ ಅಧಿಕಾರಿಗಳಿಂದ ಮಾತ್ರ!
ಈಗಾಗಲೇ ಕಂದಾಯ ಸಚಿವ ಅಶೋಕ್ ಅಧಿಕಾರಿಗಳ ವಾಸ್ತ್ಯವ್ಯ ಹಳ್ಳಿಗಳ ಕಡೆಗೆ ಎಂದು ಅಚ್ಚುಕಟ್ಟಾಗಿ ನಡೆಯಿಸಿಕೊಂಡು ಹೋಗುತ್ತಿದ್ದಾರೆ. ಹೀಗೆ ಎಲ್ಲ ಇಲಾಖೆಗಳು ಜನರ ಸಮಸ್ಸ್ಯೆಗೆ ಸ್ಪಂದನೆ ಮಾಡಬೇಕು! ಜಿಲ್ಲೆಗೆ ಭೇಟಿಕೊಟ್ಟು ಜನರ ಸಮಸ್ಸ್ಯೆಗಳನ್ನು ಅರ್ಥಮಾಡಿಕೊಂಡು ಎಲ್ಲ ಸಚಿವರ ಸಹಕಾರದಿಂದ ಜನಪರ ಆಡಳಿತ ಕೊಟ್ಟರೆ ಮತ್ತೆ ರಾಜ್ಯದ ಚುಕ್ಕಾಣಿಯನ್ನು ಹಿಡಿಯಬಹುದು.
Categories: Articles

ಗುಜರಾತ್ ಅಭಿವೃದ್ಧಿ ಮಾದರಿ ಎನ್ನುವುದೇ ಒಂದು ಸುಳ್ಳು ಮಾದರಿ.
LikeLike