
ಕೆಳಹಂತದಲ್ಲಿ ಅನುಕಂಪದ ಮಾತು ಕಮ್ಮಿ!
ಬಸವರಾಜ ತುರ್ವಿಹಾಳ ಮತ್ತು ಪ್ರತಾಪ ಗೌಡ ಮಧ್ಯೆ ತುರಿಸಿನ ಸ್ಪರ್ಧೆ ಏರ್ಪಟ್ಟಿದೆ. ಮೇಲ್ನೋಟಕ್ಕೆ ಜನರು ಬಸವರಾಜ ಮೇಲೆ ಅನುಕಂಪದ ಕಾರಣ ಸ್ವತಃ ದುಡ್ಡು ಕೊಟ್ಟು ಆಶೀರ್ವಾದ ಮಾಡುತ್ತಿದ್ದಾರೆ ಮತ್ತು ಕಾಂಗ್ರೇಸ್ ಒಂದು ಹೆಜ್ಜೆ ಮುಂದಿದೆ ಎಂಬ ಅಭಿಪ್ರಾಯ. ಆದರೆ ಕೆಳಮಟ್ಟದಲ್ಲಿ ಇಣಕಿ ನೋಡಿದರೆ ಸತ್ಯಕ್ಕೆ ದೂರವಾದ ಮಾತು ಮತ್ತು ಎಲ್ಲೊ ಸ್ವಲ್ಪ ಹಳ್ಳಿಗಳಲ್ಲಿ ಬಸವರಾಜ ಅವರಿಗೆ ಪ್ರೀತಿ ಸಿಕ್ಕಿದೆ ಅದನ್ನೇ ಕಾಂಗ್ರೆಸ್ನವರು ಗೆದ್ದ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇತ್ತ ಕಡೆ ಪ್ರತಾಪ ಅವರ ಬಗ್ಗೆ ಸ್ವಲ್ಪ ಹಳ್ಳಿಗಳಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಮೂರೂ ಬಾರಿ ಶಾಸಕರಾದ ಪ್ರತಾಪ ಗೌಡ ಸ್ವಲ್ಪ ಹಳ್ಳಿಗಳಿಗೆ ಮುಖ ತೋರಿಸಿದ್ದು ಅತಿ ವಿರಳ.
ಆದ್ದರಿಂದ ಬಸವರಾಜ ಅವರನ್ನು ಗೆಲ್ಲಿಸಬೇಕು ಎಂದು ಗುಡದೂರ ಪಂಚಾಯತಿಯ ಸ್ವಲ್ಪ ಯುವಕರ ಮಾತು ಹಾಗೆ ಇನ್ನೊಂದು ಯುವಕರ ಗುಂಪು ಭಾರತೀಯ ಜನತಾ ಪಕ್ಷದ ಸರ್ಕಾರ ಇದೆ ಇನ್ನು ಎರಡು ವರ್ಷ ಸಮಯ ಇದೆ ಪ್ರತಾಪ ಗೌಡರಿಗೆ ಆಯ್ಕೆ ಮಾಡಿದರೆ ಸರ್ಕಾರದ ಅನುದಾನವನ್ನು ಕ್ಷೇತ್ರಕ್ಕೆ ಬಿಡುಗಡೆ ಮಾಡಿಸಿ ಕ್ಷೇತ್ರದ ಕೆಲಸಗಳಿಗೆ ವೇಗ ಕೊಡಬಹುದು ಅದು ಬಿಟ್ಟು ಬಸವರಾಜರನ್ನು ಆಯ್ಕೆ ಮಾಡಿದರೆ ಕ್ಷೇತ್ರಕ್ಕೆ ಯಾವದೇ ಅನುಕೂಲವಾಗುವದಿಲ್ಲ ಎಂದು ತಮ್ಮ ವಾದವನ್ನು ಮುಂದಿಟ್ಟರು. ಗುಡದೂರ ಗ್ರಾಮದ ಯುವಕರಾದ ಯಮನೂರ ಮತ್ತು ಹನುಮಂತ ನಮ್ಮೂರಿನ ಹಾಲುಮತ ಜನಾಂಗ ಮೇಲೆ ವಿರೂಪಾಕ್ಷ ಪ್ರಭಾವ ಬೀರಬಹುದು ಮತ್ತು ಲಿಂಗಾಯತರು ಭಾರತೀಯ ಜನತಾ ಪಕ್ಷದ ಬೆನ್ನಿಗೆ ನಿಂತಿದ್ದಾರೆ.
ನೇರ ಜನರ ಸಮೀಕ್ಷೆ.
ರಂಗಾಪುರ ಮತ್ತು ಹಸಮಕಲ್ ಗ್ರಾಮಗಳಲ್ಲಿ ಮತದಾರರ ಅಭಿಪ್ರಾಯ ವಿಭಿನ್ನ. ಗ್ರಾಮಗಳಲ್ಲಿ ಬಿಜೆಪಿ ಅಪಾರ ಬೆಂಬಲಿಗರು ಇದ್ದರೂ ಭಾರತೀಯ ಜನತಾ ಪಕ್ಷ ಅಭ್ಯರ್ಥಿಯ ಪರ ಅಷ್ಟೇನೂ ಒಳ್ಳೆಯ ಅಭಿಪ್ರಾಯ ಇಲ್ಲ ಕಾರಣ ಸುಮಾರು ಬಾರಿ ಪಕ್ಷಾಂತರ ಮಾಡಿದ್ದಾರೆ. ನೀವು ಬಿಜೆಪಿ ಬೆಂಬಲಿಗರು ಆದರೆ ನಿಮಗೆ ಅಭ್ಯರ್ಥಿ ಇಷ್ಟ ಇಲ್ಲ ಅದಕ್ಕೆ ನಿಮ್ಮ ಗೊಂದಲ ಕಾಂಗ್ರೇಸ್ಗೆ ಲಾಭನಾ ಎಂದು ಕೇಳಿದಾಗ ? ನಾವು ಯಡಿಯೂರಪ್ಪನವರ ಮತ್ತು ಯುವಕರನ್ನು ಪಕ್ಷದಲ್ಲಿ ಸಂಘಟನೆ ಮಾಡುತ್ತಿರುವ ಯುವಕರ ಕಣ್ಮಣಿ ವಿಜಯೇಂದ್ರ ಅವರಿಗೆ ನೋಡಿ ಪ್ರತಾಪ ಗೌಡರಿಗೆ ಮತ ಹಾಕುತ್ತೇವೆ. ಇತ್ತ ಕಾಂಗ್ರೇಸ್ ಯುವಕರ ಗುಂಪು ಸಿದ್ದರಾಮಯ್ಯ ಅಥವಾ ಡಿಕೆ ಯಾರು ಬೇಕು ಎನ್ನುವದಕ್ಕಿಂತ ನಮಗೆ ಬಸವರಾಜ ತುರ್ವಿಹಾಳ ಆಯ್ಕೆಯಾಗಬೇಕು ಅದಕ್ಕೆ ಅವರಿಗೆ ನಮ್ಮ ಮತ. ಜಾತಿವಾರು ಲೆಕ್ಕಾಚಾರ ಹಾಕಿದರೆ ಲಿಂಗಾಯತ ಮತಗಳು ಮತ್ತು ಎಸಿ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ . ಲಿಂಗಾಯತ ಮತಗಳು ಭಾರತೀಯ ಜನತಾ ಪಕ್ಷಕ್ಕೆ ಮಿಸ್ ಆಗುವದಿಲ್ಲ ಎನ್ನುವ ಅಭಿಪ್ರಾಯ. ಹಸಮಕಲ್ ಗ್ರಾಮದ ಯುವಕ ಶಿವಕುಮಾರ ಕಳೆದ ಬಾರಿ ಕಾಂಗ್ರೇಸ್ ಪಕ್ಷಕ್ಕೆ ಓಡಾಡಿ ಮತ ಹಾಕಿಸಿದ್ದೇವೆ ಆದರೆ ಈ ಬಾರಿ ನಾವು ಇನ್ನು ಯಾವ ಪಕ್ಷಕ್ಕೆ ಮತ ಹಾಕಬೇಕು ಎಂದು ನಿರ್ಧಾರ ಮಾಡಿಲ್ಲ ಆದರೆ ನಮ್ಮ ಗ್ರಾಮದಲ್ಲಿ ನೆಕ್ ಟು ನೆಕ್ ಹೋರಾಟ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯೇಂದ್ರ ಬ್ರಿಗೇಡ್ ಮತ್ತು ಸಿದ್ದರಾಮಯ್ಯ ವಾಸ್ತವ್ಯ
ಮಸ್ಕಿ ತಾಲೂಕಿನ ಅಡವಿಬಾವಿ ತಾಂಡಾದ ಯುವಕ ಮತ್ತು ವಿಜಯೇಂದ್ರ ಬೆಂಬಲಿಗ ನಾಗರಾಜ ಪವಾರ ಮತ್ತು ಗೆಳೆಯರು ನಾವು ಭಾರತೀಯ ಪಕ್ಷದ ಗೆಲುವಿಗೆ ಪಣತೊಟ್ಟಿದ್ದೇವೆ ಅದಕ್ಕಾಗಿ ಶ್ರಮಿಸುತ್ತಿದ್ದೇವೆ ಎಂದರು. ಸ್ವಂತ ಖರ್ಚಿಯಲ್ಲಿ ವಿಜಯೇಂದ್ರ ಮತ್ತು ಪ್ರತಾಪ ಗೌಡರ ಟಿ ಶರ್ಟ್ ಹಾಕಿಕೊಂಡು ಊರ ಊರ ತಿರುಗಾಡಿ ಪ್ರಚಾರ ಮಾಡುತ್ತಿದ್ದೇವೆ ಮತ್ತು ವಿಜಯೇಂದ್ರ ಬ್ರಿಗೇಡ್ ಹುಟ್ಟುಹಾಕಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದರು.

ಮಸ್ಕಿ ತಾಲೂಕಿನ ಗೋನಾಳ್ ಗ್ರಾಮದ ಯುವಕ ಮಂಜುನಾಥ್ ಪಾಟೀಲ್ ವಿಜಯೇಂದ್ರ ಅಣ್ಣ ನಮ್ಮೂರಿಗೆ ಬೇಟಿಕೊಡಬೇಕು ಎಂದು ನಮ್ಮ ಬಳಿ ಮನವಿ ಮಾಡಿಕೊಂಡರು.
ಕೆಳಹಂತದ ಅಭಿಪ್ರಾಯ ಕಾಂಗ್ರೇಸ್ ಮತ್ತು ಭಾರತೀಯ ಜನತಾ ಪಕ್ಷಕ್ಕೆ ನೇರ ಹಣಾಹಣಿ ಇದೆ. ಆದರೆ ಇನ್ನೂ ೧೫ ದಿವಸ ಸಮಯಾವಕಾಶ ಇರುವದರಿಂದ ಯಾರು ಗೆಲ್ಲುತ್ತಾರೆ ಎನ್ನುವುದು ಕಷ್ಟದ ಕೆಲಸ. ಯಾವ ಪಕ್ಷ ದೊಡ್ಡ ದೊಡ್ಡ ನಾಯಕರ ಜೊತೆ ಕೆಳಹಂತದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೋ ಅವರಿಗೆ ಗೆಲುವು ಕಟ್ಟಿಟ್ಟಬುತ್ತಿ. ನಿನ್ನೆಯಿಂದ ಎಂದರೆ ಏಪ್ರಿಲ್ ೨ರಿಂದ ವಿಜಯೇಂದ್ರ ಅವರು ಮಸ್ಕಿಯಲ್ಲಿ ಮುಕ್ಕಾಮ ಹೂಡಿದ್ದಾರೆ. ಇಲ್ಲಿ ಚುನಾವಣೆ ಅಭ್ಯರ್ಥಿ ವಿಜಯೇಂದ್ರ ಎನ್ನುವ ರೀತಿಯಲ್ಲಿ ಪ್ರತಾಪ ಗೌಡರ ಮನಸ್ಥಿತಿ ಇದೆ. ಒಂದು ಕಡೆ ವಿಜಯೇಂದ್ರ, ಇನ್ನೊಂದು ಕಡೆ ಶಾಸಕ ರಾಜುಗೌಡ ಮತ್ತೊಂದು ಕಡೆ ಶ್ರೀರಾಮುಲು ಜನರನ್ನು ಭೇಟಿಯಾಗಿ ಪ್ರತಾಪ ಗೌಡರನ್ನು ಗೆಲ್ಲಿಸಿ ಸರ್ಕಾರದ ಭಾಗವಾಗಲಿ ಎಂದು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಏನ್ ರವಿಕುಮಾರ ಅವರು ಮನೆ ಮನೆಗೆ ಭೇಟಿಕೊಟ್ಟು ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ತಲುಪಿಸುತ್ತಿದ್ದಾರೆ.

ಸದ್ಯದ ಮಾಹಿತಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಬಸವರಾಜ ಅವರಿಗೆ ಪಕ್ಕದ ಕ್ಷೇತ್ರದ ಶಾಸಕರ ಬೆಂಬಲ ಸಿಕ್ಕಿದೆ ಹಾಗು ಏಪ್ರಿಲ್ ೬ ಮತ್ತು ೭ ಕ್ಕೆ ಸಿದ್ದರಾಮಯ್ಯ ಮಸ್ಕಿಯಲ್ಲಿ ಉಳಿದು ರಣತಂತ್ರ ಹೆಣೆಯುತ್ತಾರೆ ಎಂಬ ಮಾಹಿತಿಕೊಟ್ಟರು.

ಕಡೆಯ ಆಟದ ಮೇಲೆ ನಿಂತಿದೆ ಗೆಲುವು.
ಮಸ್ಕಿ ಚುನಾವಣೆಯಲ್ಲಿ ಆಡಳಿತ ಪಕ್ಷ ಗೆದ್ದು ಜನರ ಬೆಂಬಲ ಇದೆ ಎಂದು ಸಂದೇಶ ರವಾನಿಸುವ ಪ್ಲಾನ್ ಹಾಕಿಕೊಂಡಿದ್ದಾರೆ. ಇತ್ತ ಕಡೆ ವಿರೋಧ ಪಕ್ಷದವರು ಭಾರತೀಯ ಜನತಾ ಪಕ್ಷದವರ ಸವಾಲನ್ನು ಸ್ವೀಕರಿಸಿ ಉಪಚುನಾವಣೆ ಗೆಲ್ಲಲೇಬೇಕು ಎಂದು ಕೆಲಸ ಮಾಡುತ್ತಿದ್ದಾರೆ. ಸದ್ಯದ ಪ್ರಕಾರ ಮಸ್ಕಿ ಚುನಾವಣೆ ಅನುಕಂಪದ ಆದಾರದ ಮೇಲೆ ಮೇಲ್ನೋಟಕ್ಕೆ ಕಾಂಗ್ರೇಸ್ ಅಭ್ಯರ್ಥಿ ಮುನ್ನಡೆ ಗಳಿಸಿದ್ದಾರೆ ಎಂದು ಹೇಳಿದರೂ ಕೆಳಹಂತದಲ್ಲಿ ಸಮಬಲ ಹೋರಾಟ ಇದೆ. ಯಾರು ನೇರವಾಗಿ ಮತದಾರನ್ನು ಭೇಟಿಯಾಗಿ ಮನವಲಿಸಿಕೊಳ್ಳುತ್ತಾರೋ ಅವರಿಗೆ ಗೆಲುವು ಶತಸಿದ್ಧ !
Categories: Articles
