
ಆಡಳಿತ ಶಾಸಕರಿಗೆ ಅನುದಾನ ಹೆಚ್ಚು!
ಮಸ್ಕಿ ಜನತೆಗೆ ಸಿಟ್ಟು ಮತ್ತು ಸಿಂಪತಿ ಎರಡು ಇವೆ. ಪಕ್ಷಾಂತರಿ ಎನ್ನುವುದು ಒಂದು ಕಡೆ ಆದರೆ ಮತ್ತೊಂದು ಕಡೆ ಪ್ರತಾಪ ಗೌಡರು ಕೆಲಸ ಮಾಡಿದ್ದಾರೆ ಆದರೂ ಇನ್ನೂ ಹೆಚ್ಚಿಗೆ ಮಾಡಬೇಕಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಬಸವರಾಜ ತುರ್ವಿಹಾಳ ಹೊಸ ಅಭ್ಯರ್ಥಿ! ಗೆದ್ದರೂ ಏನು ಮಾಡಲು ಸಾಧ್ಯ? ಸರ್ಕಾರದ ಶಾಸಕರಾದರೆ ಅನುದಾನದ ಸಾಧ್ಯತೆ ಹೆಚ್ಚು ಮತ್ತು ಪಡೆದುಕೊಳ್ಳಲು ಹಾದಿ ಸುಗಮ. ಅದರಿಂದ ಕೆಲಸಗಳು ಆಗುತ್ತವೆ ಎನ್ನುವ ಸಾಮಾನ್ಯ ರಾಜಕೀಯ ಜ್ಞಾನ ಮಸ್ಕಿ ಜನರಿಗೆ ತಿಳಿದ ವಿಷಯ! ಕಾಂಗ್ರೇಸ್ ಇನ್ನಿಲ್ಲಿದ ಪ್ರಯತ್ನ ಮಾಡಿ ಉಪ ಚುನಾವಣೆಯಲ್ಲಿ ಗೆದ್ದು ಭಾರತೀಯ ಜನತಾ ಪಕ್ಷದ ವಿರುದ್ಧ ಆಡಳಿತದ ವಿರೋಧಿ ಅಲೆ ಇದೆ ಎಂದು ತೋರಿಸುವ ಪ್ರಯತ್ನ ಮಾಡುತ್ತಿದೆ ಎಂದು ಕಾಣಿಸುತ್ತಿದೆ. ಇತ್ತ ಕಡೆ ಗೆದ್ದು ಕರ್ನಾಟಕದಲ್ಲಿ ನಾವೇ ಬಾಸ್ ಎಂದು ಘಂಟಾಘೋಷವಾಗಿ ಹೇಳುವ ತವಕದಲ್ಲಿ ಭಾರತೀಯ ಜನತಾ ಪಕ್ಷ!
ಪಕ್ಷ ಬಿಟ್ಟಿದ್ದು ಸಮಿಶ್ರ ಸರ್ಕಾರದಿಂದ. ಕಾಂಗ್ರೇಸ್ ಸರ್ಕಾರ ಮಾಡಿದ್ದರೇ ಪಕ್ಷಾಂತರ ಅವಶ್ಯಕತೆ ಇರಲಿಲ್ಲ!
ಒಂದು ಲೋಕಸಭೆ ಮತ್ತು ಎರಡು ವಿಧಾನಸಭೆಗೆ ಉಪ ಚುನಾವಣೆ ನಡೆಯುತ್ತಿದೆ. ನಿಮಗೆ ನೆನಪಿರಬಹುದು ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆ! ಅಲ್ಲಿ ಎರಡೂ ಪಕ್ಷಗಳು ಗೆಲ್ಲಲೇಬೇಕು ಎಂದು ಪಣತೊಟ್ಟು ಪ್ರಚಾರ ಮಾಡಿದ್ದವು. ಬಹಳ ಪೈಪೋಟಿ ಇತ್ತು. ಸ್ವತಃ ಯಡಿಯೂರಪ್ಪನವರು ಹದಿನೈದು ದಿವಸ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಪ್ರಚಾರ ಮಾಡಿ ಆಡಳಿತ ಪಕ್ಷವಾದ ಕಾಂಗ್ರೇಸ್ ಗೆ ಚಳಿ ಬಿಡಿಸಿದ್ದರು. ಸೋತರೆ ಎಲ್ಲಿ ನನ್ನ ಇಮೇಜ್ ಕಡಿಮೆ ಆಗುತ್ತದೆ ಎಂದು ಸಿದ್ದರಾಮಯ್ಯ ಎಲ್ಲ ಮಾರ್ಗಗಳನ್ನು ಬಳಿಸಿದ್ದರು. ಅಂತಹ ಬಿರುಸಿನ ವಾತಾವರಣ ಸದ್ಯದ ಉಪಚುನಾವಣೆಯಲ್ಲಿ ಕಾಣಿಸುತ್ತಿದೆ. ಮಸ್ಕಿಗೆ ಸೀಮಿತವಾಗಿ ನಾವು ಹೇಳುವದಾದರೆ ಮಸ್ಕಿಯಲ್ಲಿ ಕುಸ್ತಿ ತುಂಬಾ ಜಬರದಸ್ತ್ ಆಗಿದೆ. ಕಳೆದ ಚುನಾವಣೆಯಲ್ಲಿ ಬಸವನಗೌಡ ತುರ್ವಿಹಾಳ ಕೇವಲ ೨೦೦+ ಮತಗಳಿಂದ ಸೋತಿದ್ದರು.
ಅಂದು ಮಸ್ಕಿ ಜನರು ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದರು ಆದರೂ ಕೂದಲೆಳೆಯ ಅಂತರದಲ್ಲಿ ಕಾಂಗ್ರೇಸ್ ಪಾಲಾಗಿತ್ತು. ಇದೆಲ್ಲವನ್ನು ಗಮನಿಸಿ ಪ್ರತಾಪ ಗೌಡ ಸಂದಿಗ್ದ ಪರಸ್ಥಿತಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದರೆ ನಾನು ರಾಜೀನಾಮೆ ಕೊಡಲು ಸಿದ್ದ ಎಂದು ಗೆದ್ದು ಬಂದ ದಿನದಿಂದಲೇ ಹೇಳಿದ್ದರು ಮತ್ತು ಬೆಂಬಲ ಕೊಟ್ಟಿದ್ದರು. ಕಾಂಗ್ರೇಸ್ ಸಂಪೂರ್ಣವಾಗಿ ಗೆದ್ದು ಅಧಿಕಾರ ಮಾಡಿದ್ದರೇ ಅವರೇನು ರಾಜೀನಾಮೆ ಕೊಡುತ್ತಿರಲಿಲ್ಲ. ಬೇಡವಾದ ಸಮಿಶ್ರ ಸರ್ಕಾರ ಬಂದಾಗಲೇ ಹಿಂತಹ ನಿರ್ಧಾರ ತಗೆದುಕೊಂಡಿದ್ದು ಎನ್ನುವುದು ಮರೆಯಬಾರದು! ಇದರಲ್ಲಿ ತಪ್ಪು ಹುಡುಕುವುದು ಎಷ್ಟು ಸಮಂಜಸ? ಸರ್ಕಾರ ರಚನೆಯಾದ ನಂತರ ಬರ್ಪುರ ಅನುದಾನವನ್ನು ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಮತ್ತು ಇನ್ನು ಮುಂದೆ ಖಂಡಿತ ಯಡಿಯೂರಪ್ಪ ಕ್ಷೇತ್ರಕ್ಕೆ ಅನುದಾನ ಕೊಡುತ್ತಾರೆ ಎಂದು ಹೇಳಿದ್ದಾರೆ!
ಉಸ್ತುವಾರಿ ಎಂದರೇನು? ಯುವಕರ ದಂಡು ಕೆಲಸ ಮಾಡುತ್ತಿದೆ!
ಮಸ್ಕಿಯಲ್ಲಿ ಕಾಂಗ್ರೇಸ್ ಗೆದ್ದಾಗಿದೆ ಎಂದು ಕಾಂಗ್ರೇಸ್ ನಾಯಕರು ಘೋಷಣೆ ಮಾಡಿದ್ದರು. ಆದರೆ ವಸ್ತುಸ್ಥಿತಿ ಬೇರೇನೇ ಇದೆ. ಎರಡೂ ಪಕ್ಷದವರು ಗೆಲ್ಲಲೇಬೇಕು ಎಂದು ರಣತಂತ್ರ ಹೆಣೆದಿದ್ದಾರೆ ಆದರೆ ರಣತಂತ್ರ ಹೆಣೆದು ಅದನ್ನು ಕಡೆಯವರೆಗೆ ಕಾಪಾಡಿಕೊಂಡು ಗೆಲ್ಲುವುದು ಅಷ್ಟು ಸುಲಭನಾ? ಭಾರತೀಯ ಜನತಾ ಪಕ್ಷದಿಂದ ರವಿಕುಮಾರ ,ಶ್ರೀರಾಮಲು ಮತ್ತು ವಿಜಯೇಂದ್ರ ಉಸ್ತುವಾರಿ ಹೊತ್ತಿದ್ದಾರೆ. ಕಾಂಗ್ರೇಸ್ ಕಡೆಯಿಂದ ಯಾರು ಉಸ್ತುವಾರಿ ಎನ್ನುವುದು ಗೊತ್ತಿಲ್ಲದ ವಿಚಾರ! ಮೇಲ್ನೋಟಕ್ಕೆ ಅಭ್ಯರ್ಥಿ ಜೊತೆ ಅಮೆರೇಗೌಡ ಬಯ್ಯಾಪುರ ಮತ್ತು ಕಾಂಗ್ರೇಸ್ ಪಧಾದಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಉಸ್ತುವಾರಿ ಇದ್ದರೂ ನಾಮಕಾವಸ್ತೆ! ಕಾರಣ ಉಸ್ತುವಾರಿ ಎಂದರೆ ಪ್ರಚಾರಕ್ಕೆ ಬಂದು ಹೋಗುವದಲ್ಲ. ಮನೆಗೆ ಹೋಗದೆ ಮಕ್ಕಳ ಮುಖವನ್ನು ನೋಡದೆ ಅಲ್ಲೇ ೧೫ ದಿವಸ ಇದ್ದು ಚುನಾವಣೆ ಮಾಡುವುದು ಉಸ್ತುವಾರಿ ! ಎಲ್ಲ ಆಗುಹೋಗುಗಳನ್ನು ಹೆಗಲಮೇಲೆ ಹೊತ್ತುಕೊಂಡು ರಣತಂತ್ರ ಹೆಣೆಯುವುದು ಉಸ್ತುವಾರಿ! ಎಷ್ಟು ನಾಯಕರು ಇಂತಹ ಕಷ್ಟದ ಕೆಲಸಕ್ಕೆ ಮುಂದಾಗುತ್ತಾರೆ? ಕರೋನ ಸಮಯದಲ್ಲಿ ಮನೆಯಿಂದ ೧೫ ದಿವಸ ದೂರ ಇದ್ದು ಚುನಾವಣೆ ಮಾಡುವ ರಾಜಕಾರಣಿಗಳು ಅತಿ ವಿರಳ ಅದರಲ್ಲಿ ವಿಜಯೇಂದ್ರ ಮತ್ತು ಏನ್ ರವಿಕುಮಾರ ಯುವಪೀಳಿಗಳಿಗೆ ಉಧಾಹರಣೆ ಎನ್ನುವುದು ಅಷ್ಟೇ ಸತ್ಯ! ವಿಜಯೇಂದ್ರ ಅವರ ಜೊತೆ ಬಲಿಷ್ಠ ಯುವಕರ ಪಡೆ ಕೆಲಸ ಮಾಡುತ್ತಿದೆ!
ಸಿದ್ದರಾಮಯ್ಯಯವರ ಸಿಟ್ಟು ವಿಜಯೇಂದ್ರರ ಮೇಲೇಕೆ?
ಈಗ ವಿಷಯಕ್ಕೆ ಬರೋಣ! ಸಿದ್ದರಾಮಯ್ಯ ಹೋದಲ್ಲಿ ಬಂದಲ್ಲಿ ಹೇಳುವ ಮಾತು ವಿಜಯೇಂದ್ರ! ವಿಜಯೇಂದ್ರ ಒಂದು ಪಂಚಾಯತಿ ಚುನಾವಣೆ ಗೆದ್ದಿಲ್ಲ ಅವನು ಹೇಗೆ ಚಾಣಕ್ಯ ! ನಾನು ೮ ಬಾರಿ ಗೆದ್ದಿದ್ದೇನೆ ನಾನ್ಯಾರು ಎಂದು ಸಿಟ್ಟಿನಿಂದ ಪತ್ರಕರ್ತರಿಗೆ ಪ್ರಶ್ನೆ ಮಾಡಿದ್ದಾರೆ? (ವಿಜಯೇಂದ್ರರವರ ಭೀತಿ ಇರುವದರಿಂದಲೇ ಎಲ್ಲರನ್ನು ಬಿಟ್ಟು ಇವರನ್ನು ಟಾರ್ಗೆಟ್ ಮಾಡಿದ್ದಾ?) ವಿಜಯೇಂದ್ರ ದುಡ್ಡು ತಗೆದುಕೊಂಡು ಬಂದು ಕುಳಿತಿದ್ದಾನೆ ಎಂದು ಸಣ್ಣ ಮಾತು ಹೇಳುತ್ತಿದ್ದಾರೆ! ಮತದಾರರನ್ನು ಹಣದಿಂದ ಕೊಳ್ಳಲು ಸಾಧ್ಯವೇ? ಇದು ನಿಜವಾಗಿದ್ದರೆ ಹೊಸಕೋಟೆ ಉಪ ಚುನಾವಣೆ ಹಾಗು ಹುಣಸೂರ ಭಾರತೀಯ ಜನತಾ ಪಕ್ಷ ಗೆಲ್ಲಬೇಕಿತ್ತು ತಾನೇ? ಮಾಜಿ ಮುಖ್ಯಮಂತ್ರಿಗಳಿಗೆ ಇಂತಹ ಮಾತುಗಳು ಶೋಭೆ ತರುತ್ತಾ?. ಐದು ವರ್ಷ ಆಡಳಿತ ಮಾಡಿ ಚಾಮುಂಡೇಶ್ವರಿಯಲ್ಲಿ ಸೋತಿದ್ದು ಜನರು ಮರೆತಿಲ್ಲ! ಬಾದಾಮಿಯಲ್ಲಿ ಏನೂ ಮಾಡದೆ ಅಲ್ಲಿ ಅಭ್ಯರ್ಥಿಯಾಗಿ ಗೆದ್ದದು ರಾಜ್ಯದ ಜನರಿಗೆ ಗೊತ್ತಿದೆ. ಇವತ್ತು ವಿಜಯೇಂದ್ರ ವರುಣಾಕ್ಕೆ ಎಂದು ಗೊತ್ತಾದ ಕೂಡಲೇ ಅವರ ಕೊಡುಗೆಯೇನು ಎಂದು ಕೇಳುವ ನೀವು, ಚುನಾವಣೆಗೆ ಸ್ಪರ್ಧೆಗೆ ಮೊದಲು ಬಾದಾಮಿಗೆ ನಿಮ್ಮ ಕೊಡುಗೆಯೇನು? ಯಾರಿಗೆ ಜನರ ಒಲವು ಇದೆ ಅವರು ಗೆದ್ದೇ ಗೆಲ್ಲುತ್ತಾರೆ ಅದು ಬಿಟ್ಟು ದುಡ್ಡು ಇದೆ ಎಂದು ಕುಂಟ ನೆಪ ಹೇಳುವುದು ನಿಮ್ಮ ಪಕ್ಷದ ಮತ್ತು ನಾಯಕತ್ವದ ದೌರ್ಬಲ್ಯ ತೋರಿಸುತ್ತದೆ ಅಲ್ವಾ?
ಮಟ್ಟೂರಿನ ಆಸುಪಾಸು ನೀರಾವರಿ , ಸಂತೆಕಲ್ಲೂರ ಕುಡಿಯುವ ನೀರಿನ ವ್ಯವಸ್ಥೆ, ಬಳಗಾನೂರು ಕೆರೆ ಮತ್ತು ಕಾಲೇಜು.
ಮಸ್ಕಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಪ್ರಚಾರ ಕೈಕೊಂಡಿದ್ದಾರೆ ಅಲ್ಲಿನ ನೀರಾವರಿ ಸಮಸ್ಸ್ಯೆಗಳ ಬಗ್ಗೆ ಅವರ ಗಮನಕ್ಕೆ ಬಂದಿದೆ. ಹಿಂದಿನ ಕಾಂಗ್ರೇಸ್ ಸರ್ಕಾರ ೫ ವರ್ಷ ಆಡಳಿತ ಮಾಡಿದರೂ ಸಮಸ್ಸ್ಯೆ ಬಗೆಹರಿದಿಲ್ಲ ಇವತ್ತು ಭಾರತೀಯ ಜನತಾ ಪಕ್ಷದ ಸರ್ಕಾರ ರೈತ ನಾಯಕ ಇದನ್ನು ಪರಿಹರಿಸಿದರೆ ಖಂಡಿತ ಅಲ್ಲಿನ ಜನರಿಗೆ ಅನಕೂಲವಾಗುತ್ತೆ. ಸಂತೆಕಲ್ಲೂರಿನ ಜನ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಎಂಬ ವಿಷಯುಕ್ತದಿಂದ ಕಾಲುಗಳ ಮಂಡಿನೋವಿನಿಂದ ಬಳಲುತ್ತಿದ್ದಾರೆ ಎನ್ನುವುದು ಕಟುಸತ್ಯ! ಅದನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳು ಗಮನದಲ್ಲಿಟ್ಟಿಕೊಂಡು ಪರಿಹಾರ ಕೊಟ್ಟರೆ ಅಲ್ಲಿನ ಜನರು ಯಾವಾತ್ತು ನಿಮ್ಮ ಋಣವನ್ನು ಮರೆಯುದಿಲ್ಲ. ಬಳಗಾನೂರ ಕಳೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮುನ್ನಡೆಯನ್ನು ಕೊಟ್ಟಿದೆ. ಅಲ್ಲಿನ ಜನರ ಕೂಗು ನಮ್ಮ ಕ್ಷೇತ್ರಕ್ಕೆ ಕೆರೆ ಮತ್ತು ಕಾಲೇಜು ಸಮಸ್ಸ್ಯೆ ಇದೆ. ಪ್ರತಾಪ ಗೌಡರನ್ನು ಗೆಲ್ಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಅಲ್ಲಿನ ಜನರ ಅಭಿಪ್ರಾಯ. ನೀರಾವರಿಗೆ ಆದ್ಯತೆ ಕೊಟ್ಟು ನೀರು ಹರಿಸಿದರೆ ಅಲ್ಲಿನ ಜನ ಫುಲ್ ಖುಷ್!
ಹಳೆಯ ಮತ್ತು ಹೊಸ ಕಾರ್ಯಕರ್ತರ ಒಗ್ಗಟ್ಟು!
ಪ್ರತಾಪ ಗೌಡರು ಪಕ್ಷಕ್ಕೆ ಸೇರಿದ ನಂತರ ಪಕ್ಷದಲ್ಲಿ ಹಳೆಯ ಮತ್ತು ಹೊಸ ಕಾರ್ಯಕರ್ತರು ಎಂದು ವಿಂಗಡಣೆಯಾಗಿದ್ದಾರೆ. ಕಳೆದ ಒಂದು ವಾರದಿಂದ ಮೇಲಿನ ನಾಯಕರು ಸಮಸ್ಸ್ಯೆಗೆ ಪರಿಹಾರ ಒದಗಿಸಿದ್ದಾರೆ ಎನಿಸುತ್ತೆ. ನಿಮ್ಮೊಳಗಿನ ಸಿಟ್ಟು ಬೇರೆಯವರಿಗೆ ಲಾಭ ಮಾಡಿಕೊಟ್ಟರೆ ನಮ್ಮ ಪಕ್ಷಕ್ಕೆ ಹಾನಿ ! ಅತ್ಯಂತ ಹಿರಿಯ ಕಾರ್ಯಕರ್ತರ ಹಿತನುಡಿಗಳು ಎಲ್ಲರನ್ನು ಒಂದುಮಾಡಿದೆ ಎನ್ನುವ ಭಾರತೀಯ ಜನತಾ ಪಕ್ಷದ ನಿಲುವು. ಇತ್ತ ಕಾಂಗ್ರೇಸ್ಗೆ ಇದರ ಸಮಸ್ಸ್ಯೆಯಿಲ್ಲ.
ಗೆಲವು ಭಾರತೀಯ ಜನತಾ ಪಕ್ಷದ ಕಡೆ ವಾಲಿದೆ?
ಏಪ್ರಿಲ್ ೧೭ಕ್ಕೆ ಮತದಾನ ಮತ್ತು ಮೇ ೨ ಕ್ಕೆ ಪಲಿತಾಂಶವಾದ ದಿನ. ಮಸ್ಕಿಯ ಜನರು ಎಲ್ಲವನ್ನು ಅಳೆದುತೂಗಿ ತಮ್ಮ ಕ್ಷೇತ್ರಕ್ಕೆ ಏನು ಬೇಕು ಎನ್ನುವದು ತಿಳಿದುಕೊಂಡು ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆಮಾಡಿಕೊಳ್ಳುತ್ತಾರೆ ಮತ್ತು ಅದರಲ್ಲಿ ಯಶಸ್ವಿಯಾಗುತ್ತಾರೆ. ಇನ್ನು ಎರಡು ವರ್ಷ ಸರ್ಕಾರ ಇರುತ್ತದೆ ಮತ್ತು ಎಲ್ಲರಿಗೂ ಸರ್ಕಾರದ ಭಾಗವಾಗುವದಕ್ಕೆ ಇಷ್ಟ. ಕಾರಣ ಕ್ಷೇತ್ರದ ಅಭಿವೃದ್ಧಿ. ಪ್ರತಾಪ ಗೌಡರ ಕನಸು ಕೂಡ ಕ್ಷೇತ್ರದ ಅಭಿವೃದ್ಧಿ. ಒಂದು ವಾರದ ಹಿಂದೆ ಎರಡೂ ಪಕ್ಷಗಳ ಸ್ಥಿತಿಗತಿ ಸಮಬಲ ಹೋರಾಟ, ಇಂದು ಅಭಿವೃದ್ಧಿ ಪೂರಕ ಮಾತುಗಳ ಭರಾಟೆ ಜಾಸ್ತಿ ಎದ್ದು ಕಾಣಿಸುತ್ತಿದೆ. ವಾರದ ಹಿಂದೆ ಇದ್ದ ಚಿತ್ರಣ ಸಂಪೂರ್ಣ ಬದಲಾವಣೆಯಾಗಿದೆ. ಮುಂದಿನ ದಿವಸಗಳು ಅತ್ಯಂತ ನಿರ್ಣಾಯಕ!
Categories: Articles

Bjp will win
LikeLike