ಶರವೇಗದಲ್ಲಿ ರೋಗಿಗಳು ಹೆಚ್ಚಾದಾಗ ಅಮೇರಿಕಾನಾ ಒದ್ದಾಡಿ ಹೋಗಿದೆ. ನಮ್ಮ ದೇಶದಲ್ಲಿ ಅಷ್ಟೊಂದು ಇನ್ಫ್ರಾಸ್ಟ್ರಕ್ಚರ್ ಇಲ್ಲ. ಒಂದೆನೆಯ ಅಲೆ ಬರುವಕ್ಕಿಂತ ಮುಂಚೆ ಭಾರತದಲ್ಲಿ ಪರಸ್ಥಿತಿ ಕೈತಪ್ಪಿದರೆ ಖಂಡಿತ ಮರಣ ಮೃದಂಗ ಎಂದು ಎಷ್ಟೋ ಪರಣಿತರು ಹೇಳಿದ್ದರು. ಅದಕ್ಕೆ ಒಂದನೆಯ ಅಲೆಯಲ್ಲಿ ಜಾಗರೂಕತೆಯಿಂದ ಆಗುವ ಅನಾಹುತ ತಪ್ಪಿತ್ತು. ಆದರೆ ಈ ಬಾರಿ ಮೈ ಮರೆತು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೇವೆ. ಸರ್ಕಾರ , ವಿರೋಧ ಪಕ್ಷಗಳು ಇದಕ್ಕೆ ನೇರ ಹೊಣೆ!

ಭಾರತ ಎಲ್ಲಿ . ಇಟಲಿ, ಅಮೇರಿಕಾ ಎಲ್ಲಿ?
ದೇಶದಲ್ಲಿ ವೆಂಟಿಲೇಟರ್ ಕೊರೆತೆ ಇದೆ, ಇಂಜೆಕ್ಷನ್ ಕೊರೆತೆ ಇದೆ. ಎಲ್ಲವೂ ಪ್ರಾಮಾಣಿಕತೆಯಿಂದ ಒಪ್ಪಿ ಎಲ್ಲವನ್ನು ಸರಿಪಡಿಸುವ ಕೆಲಸಕ್ಕೆ ಬಹುಬೇಗ ಆಗಬೇಕು. ಇಲ್ಲಿ ಇನ್ನೊಂದು ಗಮನಿಸಿ ಖಂಡಿತವಾಗಲೂ ಸರ್ಕಾರ ಎರಡನೆಯ ಅಲೆಯ ಭೀಕರತೆ ಬಗ್ಗೆ ಮೌಲ್ಯ ಮಾಪನ ಮಾಡಿಲ್ಲ ಅದಕ್ಕಾಗಿಯೇ ಇಂತಹ ಸ್ಥಿತಿ ಬಂದಿದೆ. ಆದರೆ ಎಲ್ಲವೂ ಸರ್ಕಾರ ಮೇಲೆ ಹಾಕಿ ಕುಳಿತುಕೊಳ್ಳಲು ಸಾಧ್ಯವೇ?ಯಾವ ರಾಜ್ಯದಲ್ಲಿ ಯಾವ ಸರ್ಕಾರ ಇದನ್ನು ಹತೋಟಿಗೆ ತಂದಿದೆ ಹೇಳಿ? ಮಹಾರಾಷ್ಟ್ರ, ದೆಹಲಿ, ಪಂಜಾಬ್ ಹೀಗೆ ಬೇರೆ ರಾಜ್ಯಗಳ ಸರ್ಕಾರ ಒಂದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಇದು ಹತೋಟಿಗೆ ಬರದೇ ಇದ್ದದ್ದು ಒಮ್ಮೆಲೇ ಕೇಸ್ ಹೆಚ್ಚಳ ಮತ್ತು ನಮ್ಮಲ್ಲಿ ಮಲ್ಟಿ ಸ್ಪೆಸಿಲಿಟಿ ವ್ಯವಸ್ಥೆ ಹೆಚ್ಚಿಗೆ ಇರದೇ ಇರುವುದು. ಯಾವದೇ ದೇಶದಲ್ಲಿ ಇಷ್ಟೊಂದು ರೋಗಿಗಳಿಗೆ ಐಸಿಯು ಇರುವದಕ್ಕೆ ಅಸಾಧ್ಯವಾದ ಕೆಲಸ. ನಾವು ಮೊದಲೆನೆಯ ಅಲೆಯಲ್ಲಿ ಇಟಲಿ ಮತ್ತು ಅಮೆರಿಕದಲ್ಲಿ ಇದನ್ನು ಕಣ್ಣಾರೆ ಕಂಡಿದ್ದೇವೆ. ವ್ಯವಸ್ಥೆ ಇರದೇ ಇರುವದರಿಂದ ಸುಮಾರು ಜನ ಪ್ರಾಣಬಿಟ್ಟರು. ಅಂತಹ ದೇಶದಲ್ಲಿ ಇರದ ವ್ಯವಸ್ಥೆ ನಮ್ಮ ದೇಶದಲ್ಲಿ ಸದ್ಯ ನಿರೀಕ್ಷೆ ಮಾಡುವುದು ಶುದ್ಧ ಮೂರ್ಖತನ!
ಯುರೋಪ್ ದೇಶಗಳ ಎರಡೆನೆಯ ಅಲೆ
ಮೊದಲನೆಯ ಅಲೆಯಲ್ಲಿ ಹೊಡತ ತಿಂದ ದೇಶಗಳು ಎರಡೆನೆಯ ಅಲೆಗೆ ಹೇಗೆ ಸಜ್ಜಾದರು ಐರೋಪ್ಯ ದೇಶಗಳು ಕಠಿಣ ಕ್ರಮಗಳನ್ನು ಲಾಗು ಮಾಡಿದರು ಮತ್ತು ವ್ಯಾಕ್ಸಿನೇಷನ್ ಹೆಚ್ಚಿಗೆ ಮಾಡಿದರು. ಬೇಕಾದ ವೈದ್ಯಕೀಯ ಉಪಕರಣಗಳನ್ನು ಮೊದಲೇ ಮೀಸಲಿರಿಸಿದರು. ಆದರೆ ನಮ್ಮ ದೇಶದಲ್ಲಿ ಮೊದಲೆನೆಯ ಅಲೆಯನ್ನು ದೇಶವೇ ಒಂದಾಗಿ ಎದುರಿಸಿ ಗೆದ್ದು ಕರೋನ ಎನ್ನುವುದು ಮಾಹಾಮಾರಿ ಅಲ್ಲ ಎಂದು ಅವರೇ ನಿರ್ಧರಿಸಿಬಿಟ್ಟರು. ಮುಂಜಾಗ್ರತೆ ಕ್ರಮಗಳಿಗೆ ಬೈ ಬೈ ಹೇಳಿ ಹೌಸ್ಫುಲ್ ಮೂವಿ ನೋಡುತ್ತಾ, ದೊಡ್ಡ ದೊಡ್ಡ ರಾಜಕೀಯ ಸಮಾವೇಶಗಳನ್ನು ಮಾಡುತ್ತಾ ಮೈಮರೆತರು. ಇತ್ತ ವಿರೋಧ ಪಕ್ಷದವರು ಎರಡನೆಯ ಅಲೆಯ ಬಗ್ಗೆ ಸರ್ಕಾರಕ್ಕೆ ಕೇಳುವ ರೀತಿ ಹೇಳುವದನ್ನು ಮರೆತುಬಿಟ್ಟರು.
ದೇಶದ ವ್ಯಾಕ್ಸಿನೇಷನ್ ಮೇಲೆ ಸಂಶಯ !
ಇತ್ತ ಕೇಂದ್ರ ಸರ್ಕಾರ ವ್ಯಾಕ್ಸಿನೇಷನ್ ಪ್ರಾರಂಭಮಾಡಿದಾಗ ಇದೆ ಕಾಂಗ್ರೇಸ್ ಪಕ್ಷದವರು ಮತ್ತು ವಿರೋಧ ಪಕ್ಷದವರು ಅದನ್ನು ಹೀಯಾಳಿಸಿ ದೇಶದ ಜನರಿಗೆ ಮೋಸ ಮಾಡಿದರು. ಇಲ್ಲವಾದರೆ ಇಷ್ಟೊತ್ತಿಗೆ ೧೨ ಕೋಟಿ ವ್ಯಾಕ್ಸಿನೇಷನ್ ಬದಲು ೩೦ ಕೋಟಿ ವ್ಯಾಕ್ಸಿನೇಷನ್ ಕೊಡಬಹುದಿತ್ತು. ಇಲ್ಲಿಯೂ ರಾಜಕೀಯ ಸೇರಿಸಿ ಎರಡೆನೆಯ ಅಲೆಯನ್ನು ಸ್ವಾಗತಿಸಿ ಮತ ಹಾಕಿದ ಮತದಾರನ್ನು ಬಲಿಕೊಡುತ್ತಿದ್ದಾರೆ. ಸರ್ಕಾರ ಮತ್ತು ವಿರೋಧ ಪಕ್ಷಗಳು ಆಗುವ ಅನಾಹುತಕ್ಕೆ ಕಾರಣ! ಕೇಂದ್ರವೂ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಇಂದು ಮಾಡುತ್ತಿರುವ ವ್ಯಾಕ್ಸಿನೇಷನ್ ಉತ್ಸವ ಅವತ್ತೇ ಮಾಡಿ ಇನ್ನು ಹೆಚ್ಚು ಜನರಿಗೆ ಕೊಡಬಹುದಿತ್ತು. ಅವರ ಉದಾಸೀನತೆಯು ಎದ್ದು ಕಾಣಿಸುತ್ತಿದೆ.
ಜನ ಮತ್ತು ಜನಪ್ರತಿನಿಧಿಗಳ ಕೆಲಸ
ಸದ್ಯದ ಪರಿಸ್ಥಿತಿಯಲ್ಲಿ ಕೇವಲ ಸರ್ಕಾರದಿಂದ ಎಲ್ಲವನ್ನು ನಿಭಾಯಿಸುವ ಶಕ್ತಿ ಖಂಡಿತ ಇಲ್ಲ ಮತ್ತು ಅದು ಅಸಾಧ್ಯವಾದ ಕೆಲಸ. ಇದನ್ನು ಅರಿತುಕೊಂಡು ಜನರು ಆದಷ್ಟು ಹೊರಗಡೆ ಹೋಗುವುದು ಕಡಿಮೆ ಮಾಡಬೇಕು, ಮಾಸ್ಕ ಧರಿಸಬೇಕು ಧರಿಸಬೇಕು ಮತ್ತು ಅಂತರವನ್ನು ಕಾಯ್ದುಕೊಳ್ಳಬೇಕು. ವಿರೋಧ ಪಕ್ಷಗಳು, ಶಾಸಕರು ಮತ್ತು ಎಲ್ಲ ಜನಪ್ರತಿನಿಧಿಗಳು ನೇರವಾಗಿ ಭಾಗವಹಿಸಿ ಜನರ ಹಿತ ಕಾಪಾಡುವದಕ್ಕೆ ಮುಂದಾಗಬೇಕು. ಸರಿಯಾದ ಸಮಯದಲ್ಲಿ ಔಷದ , ಬೆಡ್, ಇಂಜೆಕ್ಷನ್ಗಳ ಕೊರೆತ ಆಗದ ಹಾಗೆ ನೋಡಿಕೊಳ್ಳುವುದು ಅತಿ ಮುಖ್ಯ! ಇಂತಹ ಸಮಯದಲ್ಲಿ ದುಡ್ಡು ಮಾಡುವ ಮನುಷ್ಯರಿಗೆ ಕಡಿಮೆ ಇಲ್ಲ. ಅಂಥವರನ್ನು ಕಂಬಿ ಎಣಿಸುವ ಕೆಲಸಕ್ಕೆ ಮುಂದಾಗಬೇಕು. ಸರ್ಕಾರ ಖಡಕ್ ಆದೇಶಗಳನ್ನು ತೆಗೆದುಕೊಳ್ಳಲೇಬೇಕು. ಮುಲಾಜಿಲ್ಲದೆ ಬೆಡ್ ಕೊಡದ ಖಾಸಗಿ ಆಸ್ಪತ್ರೆಗಳ ಲೈಸೆನ್ಸ್ ರದ್ದು ಮಾಡಬೇಕು. ಕೆಲಸ ಮಾಡದ ನೌಕರರನ್ನು ಮನೆಗೆ ಕಳಿಸಬೇಕು . ಟ್ರೈನಿ ಇದ್ದವರನ್ನು ಮತ್ತೆ ಮೊದಲಿನ ರೀತಿ ಉಪಯೋಗಿಸಿಕೊಳ್ಳಬೇಕು. ಇದೆಲ್ಲವನ್ನು ಮಾಡಲು ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕು.
ಮೂರನೆಯ ಅಲೆಯ ಮುಂಜಾಗ್ರತೆ !
ಕೇಂದ್ರ ಘೋಷಣೆ ೧೮ ವರ್ಷ ಮೇಲೆ ಇರುವ ಎಲ್ಲರೂ ವ್ಯಾಕ್ಸಿನೇಷನ್ ಹಾಕಿಕೊಳ್ಳಿ ಆದರೆ ೫೦% ನೇರವಾಗಿ ರಾಜ್ಯ ಸರ್ಕಾರಗಳು ಖರೀದಿ ಮಾಡಬಹುದು ಎಂದು ಹೇಳಿದೆ. ಕೇಂದ್ರ ತನ್ನ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ೫೦% ವರ್ಗಾವಣೆ ಮಾಡಿದಂಗೆ ಕಾಣಿಸುತ್ತಿದೆ. ಯಾವ ರಾಜ್ಯ ಮೊದಲು ಆರ್ಡರ್ ಮಾಡುತ್ತೋ ಆ ರಾಜ್ಯ ವ್ಯಾಕ್ಸಿನೇಷನ್ ಪಡೆದುಕೊಳ್ಳುತ್ತದೆ. ಇಲ್ಲಿಯೂ ಬೇರೆ ವಾಸನೆ ಸುಳಿಯುವ ಲಕ್ಷಣಗಳು ಕಾಣಿಸುತ್ತಿವೆ. ಅದಕ್ಕೆ ಕೇಂದ್ರ ಮತ್ತು ರಾಜ್ಯಗಳು ಒಟ್ಟಿಗೆ ಕೆಲಸ ಮಾಡಿ ದೇಶದ ಜನರಿಗೆ ಆದಷ್ಟು ಬೇಗ ವ್ಯಾಕ್ಸಿನೇಷನ್ ಕೊಡಿಸಿ ಮೂರನೆಯ ಅಲೆಯಿಂದ ತಪ್ಪಿಸಬೇಕು.
Categories: Articles
