೧೯೧೮ ರ ಸ್ಪ್ಯಾನಿಷ್ ಜ್ವರ !

ಮಂಗಳಯಾನ ಮಾಡಿದವರು ನಾವು? ಇಡೀ ಜಗತ್ತಿನ ಮಾಹಿತಿ ನಮ್ಮ ಅಂಗೈಯಲ್ಲಿ ಇದೆ. ಜಗತ್ತನ್ನು ಕ್ಷಣ ಮಾತ್ರದಲ್ಲಿ ಸುಟ್ಟುಬಿಡುವ ಅಣುಬಾಂಬ್ಗಳು ಇವೆ. ಆದರೆ ಒಮ್ಮೆಲೇ ಲಕ್ಷ ಜನರು ಆಸ್ಪತ್ರೆಗೆ ಆಕ್ಸಿಜನ್ ಬೇಕು ಎಂದು ಬಂದರೆ ಅದನ್ನು ಆ ಕ್ಷಣಕ್ಕೆ ಕೊಡುವುದಕ್ಕೆ ಅಸಾಧ್ಯ! ಕಾರಣ ಅಷ್ಟೊಂದು ರೋಗಿಗಳು ಆಸ್ಪತ್ರೆಗೆ ಬರುವುದು ನೋಡಿದ್ದು ಇದೆ ಮೊದಲು. ಇದಕ್ಕೆ ಕಾರಣವಾಗಿದ್ದು ಕರೋನ ಪೆಂಡಮಿಕ್ ಸ್ಥಿತಿ. ಸುಮಾರು ೧೦೦ ವರ್ಷದ ಹಿಂದೆ ಎಂದರೆ ೧೯೧೮ರಲ್ಲಿ ಒಂದು ರೋಗ ಬಂದಿತ್ತು ಆದಾದ ಮೇಲೆ ಇವತ್ತೇ ನಾವು ನೋಡಿದ್ದು ಭಯಾನಕ ರೋಗ. ೧೯೧೮ರ ಪಾಠ ನಾವು ಕಲಿತಿಲ್ವಾ? ಖಂಡಿತ ಕಲಿತಿದ್ದೇವೆ. ಇತಿಹಾಸದಲ್ಲಿ ಮತ್ತು ತಜ್ಞರು ಹೇಳುತ್ತಾರೆ ಹೀಗೆಲ್ಲ ಆಗುತ್ತೆ ಮತ್ತು ಆಗಬಹುದು ಅದಕ್ಕೆ ಮುಂಜಾಗ್ರತೆ ತಗೆದುಕೊಳ್ಳಿ ಎಂದು ಸಲಹೆಕೊಟ್ಟರೂ ಕೇಳುವ ಮತ್ತು ಅಂತಹ ದಿಟ್ಟ ನಿರ್ಧಾರ ತಗೆದುಕೊಳ್ಳುವುದು ಕಷ್ಟ. ಅಷ್ಟೊಂದು ವ್ಯವಸ್ಥೆ ಮಾಡಿ ರೋಗ ಬಾರದೆ ಹೋದರೆ ಖಂಡಿತ ಅದೊಂದು ರಾಜ್ಯದ ಮತ್ತು ದೇಶದ ಬೊಕ್ಕಸಕ್ಕೆ ನಷ್ಟ ಎನ್ನುವ ಗಿರಾಕಿಗಳೇ ಜಾಸ್ತಿ. ಜನ ಜಾಗ್ರತೆ ಆದರೆ ರೋಗ ತಡೆಗಟ್ಟುವುದು ತುಂಬಾ ಸರಳ ಎಂದು ತಜ್ಞರು ಕೊಟ್ಟ ಸಲಹೆಯನ್ನು ಮಾತ್ರ ತಗೆದುಕೊಂಡು ಇನ್ನುಳಿದ ಮುಖ್ಯವಾದ ವ್ಯವಸ್ಥೆಗಳಿಗೆ ಕೊಕ್ಕೆ ಹಾಕಿಬಿಡುತ್ತಾರೆ. ಬಂದಾಗ ನೋಡುವ ಎಂದು ಉದಾಸೀನತೆ ತೋರಿದ್ದಾರೆ. ಅವರ ಮಾತು ಕೇಳಿ ೩೦-೪೦% ವ್ಯವಸ್ಥೆ ಮಾಡಿಕೊಂಡರೆ ಎಷ್ಟೋ ಜನರಿಗೆ ಅನಕೂಲವಾಗುತಿತ್ತು. ಅಲ್ವಾ? ೧೦೦% ವ್ಯವಸ್ಥೆ ಮಾಡುವುದು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ ಮತ್ತು ಅನಿರೀಕ್ಷಿತ ಸಂಖ್ಯೆಗಳು ಬಂದರೆ ಚಿಕಿಸ್ಥೆ ಕೊಡುವುದು ಕಷ್ಟ!

ಬೆಂಕಿ ಬಿದ್ದಾಗ ಬಾವಿ ತೋಡಿದರು

ಮುಂಜಾಗ್ರತೆ ಮರೆತು ನಮ್ಮನ್ನು ನಾವು ಮೃತ್ಯುಕೂಪಕ್ಕೆ ಹೋಗಿದ್ದೇವೆ. ಆಗುತ್ತಿರುವ ನಷ್ಟಕ್ಕೆ ಎರಡು ಮಾತು ಹೇಳಬಹುದಷ್ಟೆ. ನೋವನ್ನು ಮತ್ತು ನಷ್ಟವನ್ನು ತುಂಬಿಕೊಡುವ ಶಕ್ತಿ ಯಾರಿಗೂ ಇಲ್ಲ. ಎಷ್ಟೋ ಮನೆಗಳೇ ಮುರಿದು ಬಿದ್ದಿವೆ. ಎಷ್ಟೋ ಮಕ್ಕಳು ತಬ್ಬಲಿಯಾಗಿವೆ. ಅವರ ಆಕ್ರಂದನ ಕೇಳಿದರೆ ತುಂಬಾ ನೋವಾಗುತ್ತೆ. ಹೋದ ಜೀವ ಮರಳಿ ಬರುವದಿಲ್ಲ. ಪ್ರಪಥಮ ಬಾರಿಗೆ ದೇಶದ ಇತಿಹಾಸದಲ್ಲಿ ಆಕ್ಸಿಜನ್ ಕೊರೆತ ಮತ್ತು ಔಷಧಿಗಳ ಕೊರೆತೆ ಆಗಿದೆ. ಆಕ್ಸಿಜನ್ ಇಲ್ಲದೆ ಮನೆಯವರ ಮುಂದೆ ನರಳಿ ನರಳಿ ಪ್ರಾಣ ತೆತ್ತಿದ್ದಾರೆ. ದುಡ್ಡಿನ ರಾಶಿಯಿದ್ದರೂ , ರಾಜಕೀಯ ಶಕ್ತಿಯಿದ್ದರೂ ತಮ್ಮ ಕುಟುಂಬದ ಜೀವವನ್ನು ಉಳಿಸಿಕೊಳ್ಳದೆ ಸೋತುಬಿಟ್ಟರು. ಇಂತಹ ಸ್ಥಿತಿ ಯಾರಿಗೂ ಬರಬಾರದು. ವಿರೋಧ ಪಕ್ಷಗಳು ಸರ್ಕಾರ ವಿಫಲವಾಗಿದೆ, ಲಜ್ಜೆಗೆಟ್ಟ ಸರ್ಕಾರ , ಜನರ ಜೀವವನ್ನು ಬಲಿತೆಗೆದುಕೊಂಡ ಸರ್ಕಾರ ಎಂದು ಹೇಳಿದರೆ ಇತ್ತ ಸರ್ಕಾರ ಜನರೇ ಇದಕ್ಕೆಲ್ಲ ಕಾರಣ ಹೇಳಿದರೂ ಸತ್ಯ ಮರೆಮಾಚುವುದು ಕಷ್ಟ. ಒಂದಂತೂ ಸತ್ಯ ಸರ್ಕಾರ ಲಾಕ್ಡೌನ್ ಮಾಡಿದರೆ ಬೇಡ ಎನ್ನುವುದು ಮತ್ತು ಲಾಕ್ಡೌನ್ ಮಾಡದೇ ಹೋದರೆ ಲಾಕ್ಡೌನ್ ಮಾಡ್ಬೇಕಿತ್ತು ಎನ್ನುವುದು ಕೀಳುಮಟ್ಟದ ರಾಜಕೀಯ. ಒಂದು ವಾರ ಮುಂಚೆ ಸರ್ಕಾರ ಕ್ರಮ ತಗೆದುಕೊಂಡಿತ್ತು ಆದರೆ ಜನರ ಮತ್ತು ಸೆಲೆಬ್ರಿಟಿ ಕಡೆಯಿಂದ ವಿರೋಧ ವ್ಯಕ್ತವಾಯಿತು. ಇದು ಸ್ವಲ್ಪ ಮಟ್ಟಿಗೆ ಎಚ್ಚರ ತಪ್ಪುವ ದಾರಿಗೆ ತಳ್ಳಲ್ಪಟ್ಟಿತು. ಸದ್ಯದ ಪರಸ್ಥಿತಿಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿದೆ ಆದರೆ ಬೆಂಕಿ ಬಿದ್ದಾಗ ಬಾವಿ ತೋಡಿದರು ಎನ್ನುವ ಹಾಗಿದೆ. ಪರಸ್ಥಿತಿ ಕೈಮೀರಿ ಹೋಗಿದೆ ಸಮರೋಪಾದಿಯಲ್ಲಿ ಸರ್ಕಾರ ಕೆಲಸ ಮಾಡಬೇಕು. ಮಾಡುತ್ತಿರುವ ಕೆಲಸ ಸಾಕಾಗದು.
ಹೆಣ ಲೆಕ್ಕಹಾಕುವಾಗ ಹಣಕ್ಕೆ ಲೆಕ್ಕಹಾಕಿದರೆ ಮನುಷತ್ವಕ್ಕೆ ಬೆಂಕಿ ಹಚ್ಚೆಂದ …
ಧನದಾಯಿಗಳಿಗೆ/ಪಾಪಿಗಳಿಗೆ ಶಿಕ್ಷೆ!

ಎಲ್ಲ ಮೂಲೆಗಳಿಂದ ಸರ್ಕಾರ ಕೆಲಸ ಮಾಡುತ್ತಿದೆ ಆದರೆ ನಮ್ಮ ಜನರ ಧನದಾಹದಿಂದ ಬಡವರು ತಮ್ಮ ಕುಟುಂಬದ ಜೀವ ಉಳಿಸಿವುದು ಬಿಡಿ ಕೊನೆಯ ದೇಹ ದಹನ ಮಾಡುವುದು ನರಕದ ಕೆಲಸವಾಗಿದೆ. ರೆಮಿಡೀಸ್ ಔಷದ, ಆಕ್ಸಿಜನ್ ಮತ್ತು ಬೆಡ್ ಕಾಳ ದಂದೆಯಲ್ಲಿ ಮಾರಾಟವಾಗುತ್ತಿದೆ. ಇಂಜೆಕ್ಷನ್ ಮತ್ತು ಆಕ್ಸಿಜನ್ ಬೆಲೆಗಳು ೧೦೦೦ ಮತ್ತು ೫೦೦ ಇದ್ದರೇ ಮಾರಾಟವಾಗುತ್ತಿರುವ ಬೆಲೆ ಊಹಿಸುವುದು ಕಷ್ಟ. ಸರ್ಕಾರ ಇಂತಹ ನೀಚ ಜನರನ್ನು ಘೋರ ಶಿಕ್ಷೆಗೆ ಒಳಪಡಿಸಬೇಕು ಮತ್ತು ಕಾನೂನ ಇಲ್ಲವಾದರೆ ಖಂಡಿತ ತುರ್ತಾಗಿ ಹೊಸ ಕಾನೂನ ಲಾಗು ಮಾಡಿ ಜೀವನ ಪರ್ಯಂತ ಜೈಲಲ್ಲಿ ಕೊಳೆಯೇಬೇಕು ಹಾಗೆ ಮಾಡದೆ ಹೋದರೆ ಇದನ್ನು ತಳಹದಿಗೆ ತರುವುದು ಸುಲಭದ ಕೆಲಸವಲ್ಲ. ಇದನ್ನು ತಡೆಯದೆ ಹೋದರೆ ಇನ್ನು ಅನೇಕ ಜೀವಗಳು ಬಲಿಯಾಗುತ್ತವೆ.
ಸಹಾಯ ಮಾಡುವ ತಾಕತ್ತು ಇಲ್ಲವಾದರೆ ಸುಮ್ನೆ ಇರಿ!

ಜಗತ್ತಿನ ದೊಡ್ಡ ದೊಡ್ಡ ದೇಶಗಳು ಇದರ ಹೊಡತಕ್ಕೆ ನಲುಗಿ ಪೂರ್ವತಯಾರಿ ಮಾಡಿಕೊಂಡು ದೇಶದ ಜನರನ್ನು ಕಾಪಾಡಿಕೊಂಡಿದ್ದಾರೆ. ಅವರು ಹೇಗೆ ಇದೆಲ್ಲವೂ ಗೆದ್ದಿದ್ದಾರೆ ಎಂದು ಅವಲೋಕಿಸಬೇಕು. ಸದ್ಯದ ಪರಸ್ಥಿತಿ ಬಂದಿದೆ ಇದರಿಂದ ಹೇಗೆ ಹೊರಗೆ ಬರಬೇಕು ? ಮತ್ತು ಏನು ಮಾಡಿದರೆ ಕರೋನ ಗೆಲ್ಲಬಹುದು ಎಂಬ ಗುರಿ ಇರಬೇಕೆ ವಿನಃ ನಾನು ನೀನು ಎಂದು ಕೆಸರಾಡುವ ಸಮಯವಲ್ಲ. ಬೇರೆ ದೇಶದಲ್ಲಿ ಸರ್ಕಾರ ಮತ್ತು ವಿರೋಧ್ ಪಕ್ಷಗಳು ಒಟ್ಟಾಗಿ ಎದುರಿಸಿ ಗೆದ್ದದ್ದು ಎನ್ನುವುದು ಯಾರು ಮರೆಯಬಾರದು. ಮೊದಲೆನೆಯ ಅಲೆಯಲ್ಲಿ ನಮಗೆ ಲಸಿಕೆ ಇರಲಿಲ್ಲ. ನಮ್ಮ ವಿಜ್ಞಾನಿಗಳ ಹಗಲು ರಾತ್ರಿ ಪರಿಶ್ರಮದಿಂದ ಎರಡು ಲಸಿಕೆಗಳು ಲಭ್ಯವಿವೆ. ಸರ್ಕಾರ ಉಚಿತವಾಗಿ ಕೊಟ್ಟರೂ ಎಲ್ಲಿ ಬಿಜೆಪಿಗೆ ಪಕ್ಷಕ್ಕೆ ಇದರ ಲಾಭವಾಗುತ್ತದೆ ಎಂಬ ಕಾರಣದಿಂದ ಲಸಿಕೆ ಸರಿಯಾಗಿ ಪರೀಕ್ಷೆಯಾಗಿಲ್ಲ ಎಂದು ನಂಬಿಸಿ ಜನರಲ್ಲಿ ಗೊಂದಲ ಮೂಡಿಸಿ ಜನರ ಹಾದಿ ತಪ್ಪಿಸಿದರು. ಇಂತಹ ದೇವರು ಮೆಚ್ಚದ ಕೆಲಸ ಇನ್ಯಾವ ದೇಶದ್ಲಲಿ ನಡೆದಿದೆ ಹೇಳಿ? ಒಳ್ಳೆಯ ಕೆಲಸ ಮಾಡದಿದ್ದರೆ ಕೆಟ್ಟ ಕೆಲಸಕ್ಕೆ ಕೈಹಾಕಬಾರದಲ್ವೇ?
ಫಾರ್ಮ ಕಂಪನಿಗಳ ಮಸಲತ್ತು.

ಒಂದು ಕಡೆ ದೇಶದ ಜನರು ಹೀಗೆ ಮಾಡಿದರೆ ಮತ್ತೊಂದು ಕಡೆ ದೈತ್ಯ ರಾಷ್ಟ ಅಮೇರಿಕಾ ಲಸಿಕೆಗೆ ಬೇಕಾಗುವ ಕಚ್ಚಾ ವಸ್ತುಗಳು ಕೊಡುವದಕ್ಕೆ ಬರುವದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ. ಕಾರಣ ಏನು ಗೊತ್ತಾ? ನಮ್ಮ ಲಸಿಕೆ ಕಡಿಮೆ ಬೆಲೆಯಲ್ಲಿ ಬೇರೆ ದೇಶದ ಜನರಿಗೆ ರಫ್ತು ಆಗುತಿತ್ತು ಇದರಿಂದ ಅಮೇರಿಕಾ ಕಂಪನಿಗಳ ಲಸಿಕೆ ದುಬಾರಿ ಇರುವದರಿಂದ ಯಾರು ಕೇಳುವವರು ಇರಲಿಲ್ಲ. ಅದಕ್ಕಾಗಿ ಅಲ್ಲಿನ ಕಂಪನಿಗಳು ಅಮೇರಿಕಾ ಸರ್ಕಾರದ ಮೇಲೆ ಹಿಂಬಾಗಿಲ ಮೂಲಕ ಒತ್ತಡಹಾಕಿ ನಮ್ಮ ದೇಶವೂ ಕರೋನಗೆ ತುತ್ತಾಗಿದೆ ಕಚ್ಚಾ ವಸ್ತುಗಳು ನಮಗೆ ಬೇಕು ಮತ್ತು ನಮ್ಮ ನೆಲದ ಕಾನೂನ ಪ್ರಕಾರ ಕೊಡುವದಕ್ಕೆ ಬರುವದಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರಕ್ಕೆ ಯಾವ ದಾರಿಯಿದೆ ನೋಡಬೇಕು. ಕಚ್ಚಾ ವಸ್ತುಗಳು ನಮ್ಮಲ್ಲೇಕೆ ಸಿಗುವದಿಲ್ಲ ಎಂಬ ಊಹೆ ನಿಮಗೆ ಬಿಡುತ್ತೇನೆ.
ಮುಂದಿನ ಅಲೆಗೆ ಸಜ್ಜಾಗಿರಿ!

ಸದ್ಯದ ಪರಸ್ಥಿತಿಯಲ್ಲಿ ಜನರು ತಮ್ಮನ್ನು ತಾವು ದಿಗ್ಬಂಧನ ಹಾಕಿಕೊಳ್ಳಲೇಬೇಕು. ಲಸಿಕೆ ಸಿಕ್ಕರೆ ಯಾವದೇ ಯೋಚನೆ ಮಾಡದೆ ಹಾಕಿಕೊಳ್ಳಬೇಕು. ಸರ್ಕಾರವೂ ಎಲ್ಲರಿಗೂ ಉಚಿತವಾಗಿ ಕೊಡದೆ ಇದ್ದರೂ ಹಸಿರು ಕಾರ್ಡ್ ಇದ್ದವರಿಗಾದರೂ ಕೊಡಲಿ. ಮಾಸ್ಕ, ಅಂತರ ಕಾಯ್ದುಕೊಳ್ಳುವದು ತಪ್ಪದೆ ಮಾಡಬೇಕು. ಇದು ಎರಡೆನೆಯ ಅಲೆಗೆ ನಿಲ್ಲುವ ಕರೋನ ಅಲ್ಲವೇ ಅಲ್ಲ. ನಾವು ಇನ್ನು ಮುಂದೆ ಬರುವ ಕರೋನ ಅಲೆಗಳಿಗೆ ತಯಾರಬೇಕಿದೆ. ಸರ್ಕಾರಕ್ಕಿಂತ ಜನರು ಜಾಣರಾಗುವುದು ಅತಿ ಮುಖ್ಯ. ನಾವೇ ಎಷ್ಟೇ ಮುತುವರ್ಜಿ ವಹಿಸಿದರು ಕರೋನ ಬಂದರೆ ಸರ್ಕಾರಕ್ಕೆ ಆಸ್ಪತ್ರೆ ಒದಗಿಸುವ ಶಕ್ತಿ ಇರುತ್ತದೆ. ಆದರೆ ಮಾಸ್ ಆಗಿ ಮೈಮರತ್ರೆ ಮತ್ತೆ ಮೂರನೆಯ ಅಲೆವು ಹೀಗೆ ಆಗುವದರಲ್ಲಿ ಸಂಶಯವಿಲ್ಲ. ನಮ್ಮ ಕೆಲಸ , ವ್ಯವಹಾರ ಎಲ್ಲವೂ ಮುಖ್ಯ ಆದರೆ ಕರೋನ ಬಾರದ ಹಾಗೆ ಎಲ್ಲವನ್ನು ನಿಭಾಯಿಸುವ ಕಲೆ ಕರಗತವಾಗಲೇಬೇಕು. ಸದ್ಯಕ್ಕೆ ಜೀವ ಉಳಿಸಿಕೊಂಡು ಜೀವನ ಮಾಡಿಕೊಳ್ಳೋಣ. ಜೀವ ಉಳಿಸಿಕೊಳ್ಳಬೇಕಾದರೆ ಸರ್ಕಾರದ ಕಟ್ಟುನಿಟ್ಟಿನ ನಿರ್ಧಾರಗಳನ್ನು ಸ್ವಾಗತಿಸೋಣ ಮತ್ತು ಬೆಂಬಲಿಸೋಣ. ಕೊನೆಯ ಮಾತು! ನಾವು ಇದರಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ಖಂಡಿತ ಇದೆ.
Categories: Articles

ಕಳೆದ ವರ್ಷ ಕೊರೋನಾಕ್ಕೆ ಅತೀವ ಭಯ ತೋರಿದ್ದ ಸಾರ್ವಜನಿಕರು, ಈ ವರ್ಷ ಕೊರೋನಾ ಸಂಪೂರ್ಣವಾಗಿ ಹೋಗೋಬಿಟ್ಟಿತು ಎಂದು ಸಂಪೂರ್ಣ ನಿರ್ಲಕ್ಷ್ಯ ತಾಳಿದರು. ಈ ಮಾತನ್ನು ನಮ್ಮ ಸರಕಾರಗಳಿಗೂ ಅನ್ವಯಿಸಬಹುದು. ಸರಕಾರಗಳು ಹಾಗೂ ಜನರು ಇಬ್ಬರೂ ತೋರಿದ ನಿರ್ಲಕ್ಷ್ಯದಿಂದ ಈ ಹಾಹಾಕಾರ ಉಂಟಾಗಿದೆ.
LikeLiked by 1 person