By Gundlupete Guruprasad
ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ, ಮಸ್ಕಿಯಲ್ಲೀ ಸತತವಾಗಿ ಮೂರು ಬಾರಿ ಗೆದ್ದಿರುವ ಪ್ರತಪಗೌಡ ಪಾಟೀಲ್ ಗೆ ಭಾರಿ ಆಡಳಿತ ವಿರೋಧಿ ಅಲೆಯಿತ್ತು, ಶತಾಯ ಗತಾಯ ಗೆಲ್ಲಲೇಬೇಕೆಂಬ ಹಠದಿಂದ ಬಸವ ಕಲ್ಯಾಣ ಕ್ಕೆ ಉಸ್ತುವಾರಿಯಾಗಿದ್ದ ಯುವನಾಯಕ ವಿಜಯೇಂದ್ರ ಅವರನ್ನು ಮಸ್ಕಿ ಉಸ್ತುವಾರಿಯಾಗಿ ಬದಲಾಯಿಸಬೇಕೆಂದು ಹಠವಿಡಿದು ಹೈ ಕಮಾಂಡ್ ಮತ್ತು ಬಿಎಸ್ವೈ ಮೇಲೆ ಒತ್ತಡ ಹೇರಿ ವಿಜಯೇಂದ್ರ ಅವರನ್ನು ಮಸ್ಕಿ ಉಸ್ತುವಾರಿಯಾಗಿ ನೇಮಿಸಲಾಯಿತು.

ಮಸ್ಕಿ ಅಭಿವೃದ್ಧಿಯಲ್ಲಿ ಅತಿ ಹಿಂದುಳಿದಿರುವ ಪ್ರದೇಶ, ಇದಕ್ಕೆ ಕಾರಣ ಆಡಳಿತವಿರುವ ಪಕ್ಷದ MLA ಆಯ್ಕೆಯಾಗದಿರುವುದು. ಮತ್ತೊಂದು ಕಾರಣ ಪ್ರತಾಪ ಗೌಡ ಪಾಟೀಲರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಾಗ ಬಿಜೆಪಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಒಟ್ಟಿಗೆ ಜೋಡಿಸುವಲ್ಲಿ ವಿಫಲವಾಗಿದ್ದು, ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿದ್ದು ಮತ್ತೊಂದು ಕಾರಣ. ವಿಜಯೇಂದ್ರ ಅವರು ಮಸ್ಕಿಗೆ ಹೋಗುವ ಮುನ್ನ ಪರಿಸ್ಥಿತಿ ಬಿಜೆಪಿ ಗೆಲ್ಲುವುದಿರಲಿ ಠೇವಣಿ ಕೂಡ ಬರುವುದಿಲ್ಲ ಎಂಬ ವಾತಾವರಣವಿತ್ತು. ಆದರೆ ವಿಜಯೇಂದ್ರ ಅವರು ಮಸ್ಕಿ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗೂ 40 ಡಿಗ್ರೀ ಬಿಸಿಲಿನಲ್ಲಿ ಸುತ್ತಿದ್ದು ಮತ್ತು ಎಲ್ಲಾ ಸಮುದಾಯಗಳ ಜೊತೆ ಪ್ರತಿ ದಿನ ಮೀಟಿಂಗ್ ಮಾಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ತಮ್ಮ ಶಕ್ತಿ ಮೀರಿ ವಿಜಯೇಂದ್ರ ಅವರು ಪ್ರತಾಪ್ ಗೌಡ ಪಾಟೀಲರನ್ನು ಗೆಲ್ಲಿಸಲು ಪ್ರಯತ್ನ ಪಟ್ಟಿದ್ದಾರೆ. ಎಷ್ಟೇ ಆದರೂ ಮತದಾರರು ಮೂರು ಸಲ ಪ್ರತಾಪ್ ಅವರಿಗೆ ಅವಕಾಶ ಕೊಟ್ಟಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮತದಾನದ ಎರಡು ದಿನ ಮುನ್ನ ನನ್ನ ಜೀವ ನಿಮ್ಮ ಕೈಯಲ್ಲಿದೆ ಮತ್ತು ವಿಷ ಕುಡಿದು ಸಾಯುವುದಾಗಿ ಪ್ರತಿ ಮನೆ ಮನೆಗೆ ಪಾಂಪ್ಲೆಟ್ ಹಂಚಿದ್ದರು. ಇಲ್ಲಿ ಆಡಳಿತ ವಿರೋಧಿ ಅಲೆ ಮತ್ತು ಅನುಕಂಪ ಒಟ್ಟಿಗೆ ಕೆಲಸವಾಗಿದೆ. ಅಮಿತ್ ಷಾ ಕೂಡ ಚುನಾವಣೆಯ ಚಾಣಕ್ಯ ಎಂದು ಎಲ್ಲಾ ಪಕ್ಷಗಳು ಹೇಳುತ್ತವೆ ಆದರೂ ಅಮಿತ್ ಷಾ ನೇತೃತ್ವದಲ್ಲಿ ಕೂಡ ಬಿಜೆಪಿ ಕೆಲವು ಕಡೆ ಸೋತಿದೆ. ಹಾಗಂತ ಅಮಿತ್ ಷಾ ಅವರ ಚುನಾವಣೆಯ ಸ್ಟ್ರಾಟೆಜಿ ಅಲ್ಲಗೆಳೆಯುವಂತಿಲ್ಲ ಹಾಗೆ ವಿಜಯೇಂದ್ರ ಅವರು ಕೂಡ ತಮ್ಮ ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದಾರೆ. ಝೀರೋ ಇದ್ದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವಲ್ಲಿ ಯಶಸ್ಸು ಕಂಡಿರುವ ವಿಜಯೇಂದ್ರ ಅವರ ಸ್ಟ್ರಾಟೆಜಿ ಯನ್ನ ಅಲ್ಲಗೆಳೆಯಬಾರದು.
ಬಸವ ಕಲ್ಯಾಣದ ಗೆಲುವಿನಲ್ಲಿ ವಿಜಯೇಂದ್ರ ಅವರ ಪಾತ್ರವಿದೆ, ಮರಾಠ ಅಭಿವೃದ್ಧಿ ನಿಗಮ ಮಂಡಳಿ ಘೋಷಣೆ ಆಗಲು ವಿಜಯೇಂದ್ರ ಅವರ ಪ್ರಯತ್ನವೇ ಕಾರಣ. ವಿಜಯೇಂದ್ರ ಅವರ ಶ್ರಮ ಮತ್ತು ಚುನಾವಣಾ ಸ್ಟ್ರಾಟೆಜಿ ಹತ್ತಿರದಿಂದ ನೋಡಿರುವವರಿಗೆ ಅವರ ಶಕ್ತಿ ಗೊತ್ತಿದೆ. ಮತದಾನದ ಮೂರು ದಿನ ಮುನ್ನವೇ ವಿಜಯೇಂದ್ರ ಅವರ ಜೊತೆಗಿದ್ದ ಅನೇಕರಿಗೆ ಕೋರೋನಾ ಬಂದಿದ್ದು ಈ ಚುನಾವಣೆಯ ಮತ್ತೊಂದು ಪೆಟ್ಟು. ಕಾಂಗ್ರೆಸಿಗರು ಚುನಾವಣೆಯ ಕೊನೆಯ ಎರಡು ದಿನಗಳಲ್ಲಿ ಮತದಾರರನ್ನು ಸೆಳೆಯಲು ಏನೆಲ್ಲಾ ಮಾಡಬಹುದು ಅದೆಲ್ಲ ಮಾಡಿದ್ದಾರೆ ಮತ್ತು ಇದರಲ್ಲಿ ಕಾಂಗ್ರೆಸಿಗರು ನಿಸ್ಸೀಮರು ಕೂಡ.
Categories: Articles
