
ಸಮಾನತೆಯ ಕ್ರಾಂತಿಗಾಗಿ ೧೨ ನೆಯ ಶತಮಾನ
ಸಾರಿದರು ನಾವೆಲ್ಲರೂ ಸರಿಸಮಾನ
ಬಾಗೇವಾಡಿಯಲ್ಲಿ ಜನನ
ಅನುಭವ ಮಂಟಪಕ್ಕೆ ಪಯಣ
ಮೇಲು ಕೀಳು ಮೇಲು ಕೀಳು
ಸಮಾಜದಲ್ಲಿದ್ದವು ಜಾತಿ ವ್ಯವಸ್ಥೆಗಳೆಂಬ ಹಾಳು ಮೂಳು
ಲೋಕಕಲ್ಯಾಣಕ್ಕಾಗಿ ವಚನ ಸಾಹಿತ್ಯ
ಎಂದೆಂದಿಗೂ ಅವುಗಳ ಸಾರಾಂಶ ಸತ್ಯ
ಮಂತ್ರಿಯಾಗಿ ಬಿಜ್ಜಳ ರಾಜರ ಆಸ್ಥಾನ
ಸಂಸತ್ತಿಗೆ ಬರೆದರು ಅಂದೇ ವ್ಯಾಖ್ಯಾನ
ಕಾಯಕವೇ ಕೈಲಾಸ ಎಂಬುದನ್ನು ಮಾಡುತ್ತ ಪಾರಾಯಣ
ಇಷ್ಟಲಿಂಗ ಪೂಜಿಸಿದ ಶರಣ
ಸಮಾನತೆಗಾಗಿ ಸಾರಿದರು ಸಮರ
ಬಸವಣ್ಣನ ವಚನ ಗಳು ಎಂದೆಂದೂ ಅಮರ
ಅಂದು ವಿಶ್ವಗುರುವಿನ ವಚನಗಳು ಕಲ್ಯಾಣದಿಂದ ಕೂಡಲಸಂಗಮದವರೆಗೂ …
ಇಂದು ವಿಚಾರಗಳು ಲಂಡನ್ನಿನ ಥೇಮ್ಸ್ ನದಿಯ ತೀರದವರೆಗೂ …
ರಚನೆ : ಡಾ. ಮಲ್ಲಿಕಾರ್ಜುನ
Categories: Poem
