
ಅಮೇರಿಕಾ,ಇಂಗ್ಲೆಂಡ್ ,ಇಸ್ರೇಲ್ ಮತ್ತು ಇಟಲಿ ಹೀಗೆ ಅನೇಕ ಶ್ರೀಮಂತ ದೇಶಗಳು ಹಲವಾರು ವರ್ಷಗಳ ನಿರಂತರ ಪ್ರಯತ್ನದಿಂದ ದೇಶವನ್ನು ಕಟ್ಟಿ ಶ್ರೀಮಂತ ದೇಶವನ್ನಾಗಿಸಿದ್ದಾರೆ. ಇದರಲ್ಲಿ ಕೆಲಯೊಂದು ದೇಶಗಳಲ್ಲಿ ಅತ್ಯಂತ ಅದ್ಬುತ ಪ್ರಜಾಪ್ರಭುತ್ವ ಇದೆ. ಅದೇ ತಳಹದಿಯ ಮೇಲೆ ದೇಶ ಜಗತ್ತಿನಲ್ಲಿ ತಮ್ಮ ಛಾಯೆ ಮೂಡಿಸಿದ್ದಾರೆ. ಅಭಿವೃದ್ಧಿ ಮತ್ತು ಭ್ರಷ್ಟಾಚಾರ ಎರಡನ್ನು ತೂಗಿ ನೋಡಿದರೆ ಕಾಣಿಸುವುದು ಯಾವದು?
ನಮ್ಮ ದೇಶ ಭಾರತ ೭೦ ವರ್ಷಗಳ ಹಿಂದೆ ಸ್ವಾತಂತ್ರ್ಯ ಪಡೆದುಕೊಂಡು ಜಗತ್ತಿನ ಮುಂದೆ ತನ್ನದೇ ಆದ ಛಾಪು ಮಾಡಿಸಿದೆ. ಅದರಲ್ಲಿ ಯಾವದೇ ಸಂದೇಹ ಇಲ್ಲ. ಯಾವದೇ ಪಕ್ಷ ಇರಲಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಆಳ್ವಿಕೆ ಮಾಡಿ ಸ್ವಾರ್ಥ ಮತ್ತು ತೀರ್ಥ ಎರಡನ್ನು ದೇಶ ಕಂಡಿದೆ. ಅಭಿವೃದ್ಧಿ ಮತ್ತು ಭ್ರಷ್ಟಾಚಾರ ಎರಡನ್ನು ತೂಗಿ ನೋಡಿದರೆ ಕಾಣಿಸುವುದು ಯಾವದು?
ಅಮೇರಿಕಾ ದೇಶದ ಜನರು ಯಾವಾಗ ರಾಜಕೀಯ ಮಾಡುತ್ತಾರೆ ಮತ್ತು ಭಾರತದ ಜನರು ಯಾವಾಗ ರಾಜಕೀಯ ಮಾಡುತ್ತಾರೆ? ಸಾಮಾನ್ಯವಾಗಿ ಚುನಾವಣೆ ಬಂದಾಗ ಅಮೇರಿಕಾ ಜನರು ಮೊದಲು ಸಂಪೂರ್ಣವಾಗಿ ಭಾಗವಹಿಸಿ ತಮಗೆ ಬೇಕಾದ ಪಕ್ಷವನ್ನು ಆಯ್ಕೆ ಮಾಡಿಕೊಂಡು ಮುಂದಿನ ಚುನಾವಣೆವರೆಗೆ ಸರ್ಕಾರದ ಮತ್ತು ದೇಶದ ಜೊತೆ ನಿಲ್ಲುತ್ತಾರೆ. ಯಾವದೇ ತರಹ ದೇಶಕ್ಕೆ ಅಪಾಯ ಬಂದಾಗ ಮತ್ತು ದೇಶ ಆವಿಷ್ಕಾರಗಳನ್ನು ಮಾಡಿದಾಗ ದೇಶದ ಜನರು ಸಂಭ್ರಮ ಪಡುತ್ತಾರೆ. ಒಟ್ಟಿನಲ್ಲಿ ದೇಶದ ವಿಷಯ ಬಂದಾಗ ರಾಜಕೀಯ ಬರೆಸುವದಿಲ್ಲ. ಎಂದರೆ? ಅಲ್ಲಿನ ಜನಕ್ಕೆ ಸಂಪೂರ್ಣ ನಂಬಿಕೆ ಅದರ ಸರ್ಕಾರ ಮೇಲೆ ಇದೆ ಎಂದರ್ಥ! ಇದು ಸ್ವಾತಂತ್ರ್ಯ ಬಂದಾಗಿನಿಂದ ಇದೆಯಲ್ವಾ?
ಬಡತನ ನಿರ್ಮೂಲನೆ ಮತ್ತೊಂದು ಒಂದು ಧರ್ಮದ ಮತಗಳ ಮೇಲೆ ಕಣ್ಣು!
ಭಾರತದಲ್ಲಿ ಹೆಚ್ಚಿನ ವರ್ಷ ಆಳಿದ್ದು ಕಾಂಗ್ರೇಸ್ ಪಕ್ಷ ಮತ್ತು ಸ್ವಲ್ಪ ವರ್ಷಗಳು ಕಾಂಗ್ರೇಸ್ರೆತರ ಪಕ್ಷಗಳು. ಸುಮಾರು ೧೯೯೦ ರವರೆಗೆ ದೇಶದಲ್ಲಿ ಇದ್ದಿದ್ದು ಒಂದೇ ಪಕ್ಷ ಕಾಂಗ್ರೇಸ್! ಯಾವಾಗಲೂ ಜನರು ಅವರ ಜೊತೆ ನಿಲ್ಲುತ್ತಾ ಹೋದರು ಆದರೆ ಬರಬರುತ್ತ ದೇಶದ ಜನರಿಗೆ ತಾವು ಮೋಸ ಹೋಗಿದ್ದು ಗೊತ್ತಾದ ಕೂಡಲೇ ಕಾಂಗ್ರೇಸ್ ವಿರುದ್ದ ತಿರುಗಿ ಬೀಳಲು ಪ್ರಾರಂಭ ಮಾಡಿದರು. ಇಂದಿರಾ ಗಾಂಧಿಯವರ ಮಗ ಸಂಜಯ ಗಾಂಧಿಗೆ(He was not PM but done great work) ದೇಶವನ್ನು ಸ್ವಾವಲಂಬಿಯಾಗಿ ಮಾಡುವ ಕನಸಿತ್ತು. ಅವರೇ ಅನೇಕ ಸಾಧ್ಯವಿಲ್ಲದ ಕೆಲಸಗಳನ್ನು ಮಾಡಿ ತೋರಿಸಿದ್ದರು. ಆದರೆ ಬಹುಬೇಗ ಅವರ ಸೇವೆಯನ್ನು ಭಾರತ ಕಳೆದುಕೊಂಡಿತ್ತು. ಮುಂದೆ ಬಂದ ಅನೇಕ ನಾಯಕರು ಸಮರ್ಥವಾಗಿದ್ದರೂ ಒಂದು ಕುಟುಂಬದ ಕೈಗೊಂಬೆಯಾಗಿ ಅಧಿಕಾರಕ್ಕಾಗಿ ದೇಶದ ಅಭಿವೃದ್ಧಿ ಮಂಕಾಗತೊಡಗಿತ್ತು. ಕೇವಲ ಚುನಾವಣೆ ಗೆಲ್ಲುವುದು ಹೇಗೆ ಎಂದು ಕರಗತ ಮಾಡಿಕೊಂಡರು. ಒಂದು ಬಡತನ ನಿರ್ಮೂಲನೆ ಮತ್ತೊಂದು ಒಂದು ಧರ್ಮದ ಮತಗಳ ಮೇಲೆ ಕಣ್ಣು! ಇಲ್ಲಿಯವರೆಗೆ ಭಾರತ ದೇಶದ ಜನರು ಸರ್ಕಾದ ಜೊತೆ ಯಾವಾಗಲೂ ನಿಲ್ಲುತ್ತಿದ್ದರು. ಕಾರಣ ವಿರೋಧ ಪಕ್ಷಗಳು ದೇಶ ಮೊದಲು ಎನ್ನುತ್ತಿದ್ದರೇ ವಿನಃ ರಾಜಕೀಯ ಮಾಡುತ್ತಿರಲಿಲ್ಲ.
ಆದರೆ ಕಳೆದ ೨೦೧೪ ರ ನಂತರ ದೇಶದಲ್ಲೇ ಮಹತ್ತರ ಬದಲಾವಣೆ ಕಂಡಿತು. ಇತಿಹಾಸದಲ್ಲಿ ಕಾಂಗ್ರೇಸ್ ಪಕ್ಷ ಮಾತ್ರ ಅಂತಹ ಸಾಧನೆಯನ್ನು ಮಾಡಿತ್ತು ಅಂತಹ ಸಾಧನೆ ಮೋದಿ ಸರ್ಕಾರ ಮಾಡಿತ್ತು. ಅದುವೇ ಅಭೂತಪೂರ್ವ ಗೆಲುವು! ಇಲ್ಲಿ ಗಮನಿಸಿ ಚುನಾವಣೆ ಆದ ಮೇಲು ವಿರೋಧಿಗಳು ಹೇಗೆ ವರ್ತನೆ ಹೇಗಿತ್ತು ಎಂದರೆ ಸರ್ಕಾರ ಯಾವದೇ ಕೆಲಸ ಮಾಡಿದರು ಸಂಶಯದಿಂದ ನೋಡುವುದು ! ದೇಶದ ಸೈನಿಕರು ಮಾಡಿದ ಸಾಹಸಕ್ಕೂ ಹೀಯಾಳಿಸಿ ಮಾತನಾಡಿದರು! ವೈರಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದು ದೊಡ್ಡ ದೊಡ್ಡ ದೇಶದ ಕಾಲೇಜು ಗಳಲ್ಲಿ ಹಿಂದುಸ್ತಾನ ಮುರ್ದಾಬಾದ್ ಎಂದು ಹೇಳಿದರೂ ಅವರನ್ನು ಬೆಂಬಲಿಸುವ ಮನಸ್ಥಿತಿಯನ್ನು ದೇಶದ ಜನರ ಮುಂದಿಟ್ಟರು. ಇತ್ತೀಚಿಕೆ ಇಸ್ರೇಲದಲ್ಲಿ ವೈರಿಗಳ ಆಕ್ರಮಣ ನಡೆದಾಗ ಇಡೀ ದೇಶ ಮುಯ್ಯಿ ಬಗ್ಗೆ ಮಾತಾಡಿತ್ತೇ ಹೊರೆತು ರಾಜಕೀಯ ಬಗ್ಗೆ ಅನ್ನೋದಲ್ಲ ಎಂಬುದು ಗಮನಿಸಬೇಕು!
ದೇಶದ ಆವಿಷ್ಕಾರಗಳು ಹಬ್ಬದ ತರಹ ಸಂಭ್ರಮ !
ಜಗತ್ತಿನ ಜೊತೆ ನಮ್ಮ ದೇಶವು ಕರೋನ ಯುದ್ಧದಲ್ಲಿ ಹೋರಾಟ ಮಾಡುತ್ತಿದ್ದೇವೆ. ಅಮೆರಿಕ ದೇಶದಲ್ಲಿ ಯಾವದೇ ಔಷದ ಅಥವಾ ವಾಕ್ಸಿನ ಕಂಡು ಹಿಡಿದರೆ ಅವರಿಗೆ ಹಬ್ಬ ! ಕಾರಣ ? ನಮ್ಮ ಜನರು ಕರೋನದಿಂದ ಮುಕ್ತರಾಗಿ ಸಾವನ್ನು ಗೆಲ್ಲುತ್ತಾರೆ ಎಂದು! ಆದರೆ ನಮ್ಮ ದೇಶ ಅಮೇರಿಕಾ ಜೊತೆ ತಾಳೆ ಮಾಡುಕೊಳ್ಳುವ ಹಾಗಿಲ್ಲ ಆದರೂ ನಮ್ಮ ದೇಶದಲ್ಲಿ ಎರಡು ವ್ಯಾಕ್ಸೀನ್ ಕಂಡು ಹಿಡಿದು ಅವುಗಳನ್ನು ತುರ್ತಾಗಿ ಹಾಕಲು ಅನುಮೋದನೆಯನ್ನು ಕೊಟ್ಟರೂ ಅದ್ರ ಬಗ್ಗೆ ಅಪಸ್ವರ! ಇಲ್ಲಿ ಗಮನಿಸಿ ಸರ್ಕಾರದ ಜೊತೆ ನಮ್ಮ ದೇಶದ ಜನರು ನಿಲ್ಲಲಿಲ್ಲ. ಕಾರಣ ಎಲ್ಲಿ ನಾವು ಮುಂದೆ ಅಧಿಕಾರ ಶಾಶ್ವತವಾಗಿ ವಂಚಿತವಾಗುತ್ತೆ ಎಂಬ ಭಯ. ಇದೆ ಉತ್ತರ ಪ್ರದೇಶ ಅಖಿಲೇಶ್ ಯಾದವ ವಾಕ್ಸಿನ ವಿರುದ್ಧವಾಗಿ ಮಾತಾಡಿ ಜನರನ್ನು ವ್ಯಾಕ್ಸೀನ್ ಹಾಕಿಕೊಳ್ಳದೆ ಹಾಗೆ ನೋಡಿಕೊಂಡು ಇವತ್ತು ಅವರ ಮರಣಕ್ಕೆ ಕಾರಣರಾದರು! ಅದೇ ತರಹ ದೇಶದಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ಯಾವದೇ ಒಬ್ಬ ವಿರೋಧ ಪಕ್ಷದ ನಾಯಕ ತನ್ನ ಜನರುಗೆ ಲಸಿಕೆ ಹಾಕಿಕೊಳ್ಳಿ ಎಂದು ಹೇಳದೆ ಇದ್ದದ್ದು ನಮ್ಮ ದುರ್ದೈವ! ಎಷ್ಟೋ ಜನರು ಮರಣ ಹೊಂದಿದರು! ಇದಕ್ಕೆಲ್ಲ ಯಾರು ಕಾರಣರು? ಸುಮಾರು ೧-೨ ಕೋಟಿ ಲಸಿಕೆ ವ್ಯರ್ಥವಾಗಿದೆ. ಇವರೆಲ್ಲ ದೇಶದ ಜೊತೆ ನಿಂತಿದ್ದರೇ ಎಷ್ಟೋ ಅನೂಕೂಲವಾಗುತ್ತಿತ್ತು.
ಹಿಂದೂಗಳು ನಿಮಗೆ ಏನಾಗಬೇಕು ಎಂದು ದೊಡ್ಡ ಪ್ರಶ್ನೆಯನ್ನು ಹುಟ್ಟಾಕಿದಿರಿ?
ಆಸ್ಪತ್ರೆಗಳಲ್ಲಿ ಬೆಡ್ ಅಭಾವವಾದಾಗ ಅದನ್ನು ಸರಿಪಡಿಸುವ ಕೆಲಸಕ್ಕೆ ಮುಂದಾದಾಗ ಯುವ ಸಂಸದನನ್ನು ಬೆನ್ನು ತಟ್ಟುವುದು ಬಿಟ್ಟು ಅವನನ್ನು ಕೋಮುವಾದಿ ಎಂದು ತೆಗಳಿ ಅವರೆಲ್ಲ ನಮ್ಮ ಬ್ರದರ್ಸ್ ಎಂದು ಹಿಂದೂಗಳು ನಿಮಗೆ ಏನಾಗಬೇಕು ಎಂದು ದೊಡ್ಡ ಪ್ರಶ್ನೆಯನ್ನು ಹುಟ್ಟಾಕಿದಿರಿ?
ಇತ್ತ ಕಡೆ ವ್ಯಾಕ್ಸೀನ್ ಹಾಕಿಕೊಳ್ಳಲಿಕ್ಕೆ ಬೆಂಬಲ ಕೊಡದೆ ಇವತ್ತು ಜನರ ೧೦೦ ಕೋಟಿ ದುಡ್ಡು ನಮ್ಮ ದುಡ್ಡು ಎಂದು ಸರ್ಕಾರಕ್ಕೆ ಕೊಡುವ ಡೋಂಗಿ ನಾಟಕ ಮಾಡಿ ಜನರಿಗೆ ೨೦ ಸಾವಿರ ಕೊಡಿ ಎಂದು ಲಾಜಿಕ್ ಇಲ್ಲದೆ ಮಾತಾಡುತ್ತಿರುವ ನಿಮ್ಮ ನಿಲುವು ಜನರಿಗೆ ತಿಳಿಯದೆ ಇರುತ್ತಾ?
ಕರೋನ ನೆಪಮಾಡಿಕೊಂಡು ಅವರು ನಮ್ಮ ಅಣ್ಣತಮ್ಮರು , ಜನರಿಗೆ ಅದು ಕೊಡಿ ಇದು ಕೊಡಿ ಎಂದು ರಾಜಕೀಯ ಮಾಡಿ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಿಂದ ಇದ್ದರೇ ಅದು ಒಳ್ಳೆಯದು ಅಲ್ಲ ಮತ್ತು ಜನ ಅದಕ್ಕೆ ಬೆಂಬಲ ಕೊಡುವದಿಲ್ಲ. ಇಂದು ನೀವು ಮಾಡಬೇಕಿರುವುದು ಒಂದೇ ಸರ್ಕಾರದ ಮತ್ತು ಜನರ ಜೊತೆ ನಿಲ್ಲವುದು! ಜನರು ಕಷ್ಟದಲ್ಲಿರುವಾಗ ಸಮಸ್ಸ್ಯೆಗೆ ಪರಿಹಾರ ಕೊಡುವ ದಿಕ್ಕಿನಲ್ಲಿ ಇರಬೇಕೆ ಹೊರೆತು ರಾಜಕೀಯ ಬೆರೆಸಿದರೆ ದೇವರು ಕ್ಷಮಿಸುವದಿಲ್ಲ.
ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಿ ಇನ್ನಿತರ ದಿನಗಳಲ್ಲಿ ನಾವು ದೇಶದ ಜನರು ಪಕ್ಷದ ಜೊತೆ ನಿಲ್ಲುವಕ್ಕಿಂತ ದೇಶದ ಜೊತೆ ನಿಲ್ಲಬೇಕು! ತಪ್ಪಾಗಿದ್ದರೆ ಮತ್ತು ಒಳ್ಳೆಯ ಆಯ್ಕೆ ಸಿಕ್ಕರೇ ಬೇರೆಯವರಿಗೆ ಅವಕಾಶ ಕೊಡಬೇಕು! ಅದು ಬಿಟ್ಟು ಕ್ಲಿಷ್ಟ ಸಂದರ್ಭದಲ್ಲಿ ರಾಜಕೀಯ ಮಾಡಿದವರಿಗೆ ಮುಟ್ಟಿ ನೋಡಿಕೊಳ್ಳುವ ಉತ್ತರ ಇರಬೇಕು! ಮುಂದೆ ಇಂತಹ ಸಂದಿಗ್ದ ಕಾಲಗಳು ಬಂದರೆ ಅದನ್ನು ಎದುರಿಸಲು ನಮ್ಮ ದೇಶ ಶಕ್ತವಾಗಿರಬೇಕು!
Categories: Articles
