Articles

ರೇಣುಕಾಚಾರ್ಯ ಹೆಸರೇ ಒಂದು ಶಕ್ತಿ ! ಆ ಹೆಸರು ಹೊಳೆಯುತ್ತಿದೆಯಾ?

ರಾಜ್ಯದಲ್ಲಿ ವಾಟಾಳ ಮತ್ತು ರೇಣುಕಾಚಾರ್ಯ ಮಾಧ್ಯಮದವರ ಮುಂದೆ ಏನೇ ಹೇಳಿದರೂ ಜನರು ಕೇಳುವದು ಬಿಡಿ ಅದೊಂದು ಹಾಸ್ಯಾಸ್ಪದ ಎನ್ನುತ್ತಿದ್ದರು. ಇತ್ತೀಚಿಗೆ ಇನ್ನೊಬ್ಬರು ಈ ಗುಂಪಿಗೆ ಸೇರಿದ್ದರು ! ಯಾರು ಎಂದು ನಿಮ್ಮ ಊಹೆಗೆ ಬಿಟ್ಟು ಬಿಡುತ್ತೇನೆ!

ರಾಜ್ಯದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಏನೆ ಮಾಡಿದರು ಅದರ ಸದ್ದು ರಾಜ್ಯದ ತುಂಬೆಲ್ಲ ಸುದ್ದಿಯಾಗುತ್ತದೆ. ಅವರೊಬ್ಬ ರೆಬೆಲ್ ರಾಜಕಾರಣಿ ಎಂದು ಪ್ರಸಿದ್ದಿ ಪಡೆದವರು. ಯಡಿಯೂರಪ್ಪನವರ ಪಟ್ಟಾ ಶಿಷ್ಯ ಆದರೂ ಅವರ ವಿರುದ್ದ ತೊಡೆ ತಟ್ಟಿ ಸರ್ಕಾರಕ್ಕೆ ಕುತ್ತು ತಂದವರು. ಆದರೆ ಕೊನೆ ಗಳಿಗೆಯಲ್ಲಿ ಸರ್ಕಾರದ ಜೊತೆ ನಿಂತವರು. ಏನೋ ಮಾಡಕ್ಕೆ ಹೋಗಿ ಏನೋ ಆಯಿತೋ! ಹೀಗೆ ಇವರ ರಗಳೆ ಯಾವಾಗಲೂ ಇದ್ದದ್ದು ಮತ್ತು ಸಡನ್ ಮತ್ತೆ ಮುಖ್ಯಮಂತ್ರಿ ಬೆಂಬಲಕ್ಕೆ ನಿಲ್ಲುತ್ತಾರೆ . ಅದಕ್ಕೆ ಇವರನ್ನು ಜನರು ನಂಬುವುದು ಕಷ್ಟವಾಗಿತ್ತು.

ಕಳೆದ ವರ್ಷ ಪ್ರವಾಹ ಬಂದಾಗ ಫೋಟೋ ಪೋಸ್ ಕೊಡುವ ಸಲುವಾಗಿ ನೀರಿನ ಹೊರಗಡೆ ಹುಟ್ಟು ಆಡಿಸಿದ್ದು ಜನರು ಮರೆತಿಲ್ಲ. ಆದರೆ ನಿಜವಾಗಿ ಅಲ್ಲಿ ಆಗಿದ್ದೆ ಬೇರೆಯದೇ ಆಗಿತ್ತು. ಆದರೆ ಸೋಶಿಯಲ್ ಮೀಡಿಯಾ ಅವರ ಅರ್ಧ ವಿಡಿಯೋ ಹಾಕಿ ಮಾನವನ್ನು ಹರಾಜು ಹಾಕಿದ್ದರು. ಸ್ವತಃ ಅವರೇ ಬಂದು ಸತ್ಯ ಹೇಳಿದರೆ ಯಾರು ನಂಬಲಿಲ್ಲ. ಅದಕ್ಕೆ ಕಾರಣ ಅವರೇ ಮಾಡಿಕೊಂಡ ತಮ್ಮ ಖ್ಯಾತಿ! ಸಿದ್ದಾಂತವಿಲ್ಲದ ರಾಜಕೀಯ! ಆದರೆ ಇಂದು ರೆಬಲ್/ಜನಸೇವಕ ರೇಣುಕಾಚಾರ್ಯ ಮಾಡುತ್ತಿರುವ ಕೆಲಸ ನೋಡಿದರೆ ಒಂದು ನಿಮಿಷ ರೋಮಾಂಚನವಾಗುತ್ತೆ! ಹೌದು ಇದು ನಿಜ. ಕಾರಣ ಏನು ಗೊತ್ತಾ ?

ಕರೋನ ಮೊದಲನೆಯ ಅಲೆ ರಾಜ್ಯದಲ್ಲಿ ನರ್ತನ ಮಾಡುವಾಗ ವೈರಸ್ ಬಗ್ಗೆ ಯಾರಿಗೂ ತಿಳಿಯದ ವಿಷಯ ಎಷ್ಟೋ ಜನಪ್ರತಿನಿಧಿಗಳು ಮನೆಯಿಂದ ಹೊರಗೆ ಬಾರದೆ ಕೌದಿ ಹೊದ್ದುಕೊಂಡು ಮನೆಯಲ್ಲಿ ಇದ್ದಾಗ ದಾವಣಗೆರೆ ಜಿಲ್ಲೆಯ ರಸ್ತೆಗಿಳಿದು ಜನರನ್ನು ಜಾಗೃತ ಮಾಡುತ್ತಾ ಇರುವಾಗ ಜಿಲ್ಲಾಧಿಕಾರಿಯ ಜೊತೆ ಜಗಳ! ಮತ್ತೆ ಜನರ ನುಡಿ ಇದೊಂದು ರೇಣುಕಾಚಾರ್ಯರ ಪ್ರಚಾರ ಗಿಮಿಕ್! ಕಾರಣ ಅವರ ಟ್ರ್ಯಾಕ್ ರೆಕಾರ್ಡ್! ಆದರೆ ಆಸಾಮಿ ಯಾವದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕ್ಷೇತ್ರದ ಜನರ ಸೇವೆಗೆ ಸಂಪೂರ್ಣವಾಗಿ ಹೆಗಲು ಕೊಟ್ಟರು. ಅಂದು ಅವರು ಮಾಡಿದ್ದ ಕೆಲಸ ನಿಶ್ವಾರ್ಥದಿಂದ ಕೂಡಿತ್ತು ಎಂದು ಅವರ ಮನಃಸಾಕ್ಷಿ ಹೇಳುತಿತ್ತು. ಅದಕ್ಕೆ ಯಾರೇ ಏನೇ ಅಂದರೂ ಜನರ ಬಳಿ ಹೋಗಿ ಅವರಿಗೆ ಏನು ಬೇಕು ಅದಲ್ಲೆವನ್ನು ಮಾಡುತ್ತಾ ಕಷ್ಟದಲ್ಲಿದ್ದವರಿಗೆ ಹಣಕಾಸಿನ ಸಹಾಯ ಮಾಡಿದರು. ತಾವೇ ಅಕ್ಕಿ ಚೀಲಗಳನ್ನು ಎತ್ತಿ ಇಟ್ಟು ನಾನು ನಿಮ್ಮ ಸೇವಕ ಎಂದು ತೋರಿಸಿದ್ದರು. ಅತಿ ಹೆಚ್ಚು ಕ್ಷೇತ್ರದಲ್ಲಿ ಕೆಲವೇ ಕೆಲವು ಶಾಸಕರು ತನ್ನ ಜನರನ್ನು ಭೇಟಿಯಾಗಿ ಧೈರ್ಯ ತುಂಬಿದ್ದರು ಅದರಲ್ಲಿ ರೇಣುಕಾಚಾರ್ಯವರು ಇದ್ದರು. ಮೊದಲೆನೆಯ ಅಲೆಯಲ್ಲಿ ತಾವು ಕರೋನಾಗೆ ತುತ್ತಾಗಿದ್ದರು. ಎದೆ ಗುಂದದೆ ಕರೋನ ಎದುರಿಸಿ ಮನೆಯಲ್ಲಿ ಕೂಡದೆ ಮತ್ತೆ ಜನರ ಮುಂದೆ ಹಾಜರು! ಅಲ್ಲಿಗೆ ಸ್ವಲ್ಪ ಜನ ರೇಣು ಅಣ್ಣನ ಜನತಾ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ತಾನು ಒಬ್ಬ ನಿಷ್ಠಾವಂತ ಸೇವಕ ಎಂದು ಜನರ ಸೇವೆ ಮಾಡಿ ತೃಪ್ತಿಯಲ್ಲಿದ್ದ ನಾಯಕನಿಗೆ ಎರಡನೆಯ ಅಲೆ ನೋಡಿ ಜನರ ಚಿಂತಾಜನಕ ಸ್ಥಿತಿ ನೋಡಿ ಮತ್ತೆ ಫೀಲ್ಡಗೆ ಇಳಿದವರು ಹೊನ್ನಾಳಿ ಹುಲಿ. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಕರೋನ ಪಾಸಿಟಿವ್ ಅವರಿಗೆ ಬಂದಿತ್ತು. ಜನತೆಗೆ ನಾನು ಗುಣಮುಖನಾಗಿ ಬರುತ್ತೇನೆ ನಿಮ್ಮ ಸೇವೆಗೆ ಸದಾ ಸಿದ್ದ ಎಂದು ಹೇಳಿ ಬೆಂಗಳೂರು ಗೆ ಬಂದು ಮನೆಯಲ್ಲೇ ಚಿಕಿಸ್ಥೆ ಪಡೆದು ನೇರವಾಗಿ ಹೋಗಿದ್ದು ಜನರ ನೋವಿಗೆ ಸ್ಪಂದನೆ ಮಾಡಲು. ನಿಮಗೆ ಗೊತ್ತಿದೆ ಚಾಮರಾಜನಗರ ದುರಂತ! ಅಂದು ಅಲ್ಲಿ ಒಬ್ಬ ಜನಪ್ರತಿನಿಧಿ ಇದ್ದಿದ್ದರೇ ಕಥೆ ಬೇರೆಯದೇ ಆಗುತ್ತಿತ್ತು. ಇದೆ ತರಹ ಆಕ್ಸಿಜನ್ ಕೊರೆತೆ ಸ್ಥಿತಿ ಹೊನ್ನಳ್ಳಿ ಕ್ಷೇತ್ರದಲ್ಲಿ ಬಂದಿತ್ತು. ಇದನ್ನು ಅತ್ಯಂತ ವೇಗವಾಗಿ ಬಗೆಹರಿಸಿ ಸುಮಾರು ೨೦-೩೦ ಜನರ ಜೀವವನ್ನು ಉಳಿಸಿದ್ದರು. ಸೋಂಕಿತರಿಗೆ ಧೈರ್ಯ ತುಂಬಲು ನೇರವಾಗಿ ಸೋಂಕಿತರ ಆಸ್ಪತ್ರೆಗೆ ಹೋಗಿ ಸಾಂತ್ವನ ಹೇಳುವುದು ಮಾಡುತ್ತಾ ಹಣಕಾಸಿನ ತೊಂದರೆ ಇದ್ದರೇ ಅಲ್ಲೇ ಸಾಧ್ಯವಾದಷ್ಟು ಕೊಡುತ್ತ ಜನರ ಕಣ್ಣೀರು ಒರೆಸುತ್ತಿದ್ದಾರೆ. ನಿರಂತರವಾಗಿ ಊಟ , ನಾಷ್ಟಾ ಅವರೇ ಸ್ವತಃ ಮುಂದೆ ನಿಂತು ಕಾಳಜಿವಹಿಸಿ ಬೇಕಾದ ಜನರಿಗೆ ತಲುಪಿಸುತ್ತಿದ್ದಾರೆ. ಜನರಿಗೆ ರೇಷನ್ ಸಮಸ್ಸ್ಯೆ ಬಂದಾಗ ನೇರವಾಗಿ ಮುಖ್ಯಮಂತ್ರಿಗಳ ಜೊತೆ ಮಾತಾಡುವದಲ್ಲದೆ ಉಮೇಶ್ ಕತ್ತಿಯವರಿಗೆ ಟಾಂಗ ಕೊಟ್ಟು ಅವರಿಂದ ಸರಿಯಾದ ಉತ್ತರ ಟ್ವಿಟರಲ್ಲಿ ಪಡೆದಿದ್ದರು! ಮತ್ತೆ ಇನ್ನೊಂದು ವಿಶೇಷವಾದ ಸಂಗತಿ ಹೇಳಲೇಬೇಕು! ಹಬ್ಬ ಇದೆ ಎಂದು ಹೋಳಿಗೆ ತಯಾರಿಸಿ ಬಡಸಿದ್ದಾರೆ. ಇದಕ್ಕೇನನ್ನಬೇಕು? ಇದಲ್ವೇ ಒಬ್ಬ ಜನಪ್ರತಿನಿಧಿಯ ಕೆಲಸ!

ತಾವು ಒಬ್ಬ ನಿಷ್ಠಾವಂತ ಪಕ್ಷದ ಕಾರ್ಯಕರ್ತ ಇದ್ದರೂ ತಪ್ಪುಗಳು ಆದಾಗ ಪಕ್ಷದ ವೇದಿಕೆಯಲ್ಲಿ ಚರ್ಚಿಸದೆ ಹೊರಗಡೆ ಬಂದು ರೆಬೆಲ್ ಆಗಿದ್ದು ಅವರ ನಿಜವಾದ ಜನ ಸ್ನೇಹಿ ಮತ್ತು ಸೇವೆ ಜನರು ಗುರಿತಿಸದೆ ಹೋಗಿದ್ದರು. ಆದರೆ ಇಂದು ಹೊನ್ನಾಳಿ ಕ್ಷೇತ್ರದ ಶಾಸಕರಾಗಿ ಮಾಡುತ್ತಿರುವ ಅವರ ಕೆಲಸ ಅವರ ನಿಜವಾದ ರೂಪ ರಾಜ್ಯದ ಜನರಿಗೆ ತಿಳಿದಿದೆ ಅನಿಸುತ್ತೆ !

ಕಷ್ಟಕಾಲದಲ್ಲಿ ಜನರ ಸೇವೆ ಮಾಡುವವನೇ ನಿಜವಾದ ಸೇವಕ. ಅಂಥಹ ಸೇವಕನೆ ನಾಯಕನಾಗಬಲ್ಲನು. ರೇಣುಕಾಚಾರ್ಯ ಎಂಬ ಹೆಸರು ಇಂದು ಹೊಳೆಯುತ್ತಿದೆ. ಹೀಗೆ ಇರಲಿ ನಿಮ್ಮ ಜನಸೇವೆ!

Categories: Articles, news

Tagged as: , ,

1 reply »

  1. Your Name itself is a Great energy to our Veerashiva Lingayetha Jangam Bad jangama Aradhya’s cast People’s You are the great in our Community Akkila Bharatha Jangama Bada jangama Maha Sabha in Karnataka and also Akkila Bharatha Jangama Bada jangama Maha Sabha KOLAR Gataka Registered No 176/2020 we are all Supporters to your’s Self Anna

    Liked by 1 person

Leave a Reply