Articles

ಪ್ರಜಾಕೀಯದ ವೇಗ ಹೆಚ್ಚಾಯಿತಾ ಅಥವಾ ಜನರೇ ಸಿದ್ದಾಂತದ ಕಡೆ ವಾಲಿದರಾ?

ಪ್ರಜಾಕೀಯ ಒಂದು ಪರಿಕಲ್ಪನೆ ಯಾವದೇ ವ್ಯಕ್ತಿ ಅಥವಾ ಪಕ್ಷ ಇದನ್ನು ಅಳವಡಿಸಿಕೊಳ್ಳಬಹುದು.

ಒಂದು ಕಾಲ ಇತ್ತು ಮುತ್ತು ರತ್ನಗಳು , ವಜ್ರ ವೈಡೂರ್ಯಗಳೂ ಬೀದಿ ಬೀದಿಗಳಲ್ಲಿ ಮಾರುತ್ತಿದ್ದರು. ಇದರ ಅರ್ಥ ಘಂಟಾಘೋಷವಾಗಿ ಬೀದಿಗಳಲ್ಲಿ ಬಂಗಾರವಿದ್ದರೂ ಬೆಲೆ ಬಾಳುವ ಬಂಗಾರವನ್ನು ಎಗರಿಸುವ ಕಳ್ಳರೂ ಇರಲಿಲ್ಲ ಎಂದರೆ ರಾಜ್ಯ ಸುಭಿಕ್ಷವಾಗಿತ್ತು. ಅದುವೇ ವಿಜಯನಗರ ಸಾಮ್ರಾಜ್ಯ! ಇದಕ್ಕೆಲ್ಲ ಕಾರಣ ಅಲ್ಲಿನ ಪ್ರಜೆಗಳು ಮತ್ತು ರಾಜ. ಭ್ರಷ್ಟತೆಗೆ ಅವಕಾಶವಿರದ ಕಾರಣ ರಾಜ್ಯ ಸಂಪತ್ಭರಿತವಾಗಿತ್ತು ಮತ್ತು ಅಲ್ಲಿನ ಪ್ರಜೆಗಳು ಸುಖದಿಂದ ಜೀವನ ನಡೆಸಿದ್ದರು .

ಮಹಾತ್ಮಾ ಗಾಂಧಿಯವರ ಕನಸು ರಾಮರಾಜ್ಯ! ಏನು ರಾಮರಾಜ್ಯ ಎಂದರೆ, ಮೋಸವನ್ನೇ ಮಾಡದೆ ಇರುವ ಸ್ಥಳ, ಎಲ್ಲರೂ ಸುಖದಿಂದ ಇರುವುದು, ಅನ್ಯಾಯದ ಪ್ರತಿಬಿಂಬವು ಇರದ ಸ್ಥಳ ಮತ್ತು ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳು ಸಿಗುತ್ತಿರಬೇಕು. ಇಂತಹ ಕಲ್ಪನೆ ಇದ್ದುದರಿಂದಲೇ ಗಾಂಧಿಯವರು ತಾವು ದೇಶಕ್ಕೆ ಬ್ರಿಟಿಷರಿಂದ ಮುಕ್ತಿ ಕೊಡಿಸಲು ಹೋರಾಟ ಮಾಡಿದವರು. ಕೊನೆಗೆ ಅನೇಕ ಮಹನೀಯರ ಸಹಾಯದಿಂದ ದೇಶಕ್ಕೆ ಮುಕ್ತಿ ಸಿಕ್ಕಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಾರಣ ಪರಕೀಯರ ದಬ್ಬಾಳಿಕೆಯಿಂದ ಬೇಸತ್ತಿದ್ದ ಜನ! ಮುಂದೆ ನಮಗೆ ಮತ್ತು ನಮ್ಮ ಮಕ್ಕಳಿಗೆ ಒಳ್ಳೆಯ ಕಾಲ ಬಂದಿತು ಎನ್ನುವ ಆಶಾಭಾವನೆ!

ರೈತರಿಗೆ ೨೪ ಘಂಟೆ ನಿರಂತರ ವಿದ್ಯುತ್ ಕೊರೆತೆ

ಇಂದಿಗೆ ನಮಗೆ ಸ್ವಾತಂತ್ರ್ಯ ಸಿಕ್ಕು ೭೪ ವರ್ಷಗಳು ಕಳೆದವು. ಇಂದಿಗೂ ನಮಗೆ ಕುಡಿಯುವ ನೀರಿನ ಸಮಸ್ಸ್ಯೆ, ಶಿಕ್ಷಣದ ಸಮಸ್ಸ್ಯೆ, ಆಸ್ಪತ್ರೆಗಳ ಸಮಸ್ಸ್ಯೆ, ರೈತರಿಗೆ ೨೪ ಘಂಟೆ ವಿದ್ಯುತ್ ಕೊಡುವುದಕ್ಕೆ ಆಗಿಲ್ಲ! ಹೀಗೆ ಅನೇಕ ಮೂಲಭೂತ ಸೌಕರ್ಯಗಳ ಕೊರೆತೆ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕೆಲಯೊಂದು ರಾಜ್ಯಗಳಲ್ಲಿ ಮೂಲಭೂತ ಸೌಕರ್ಯಗಳ ಸ್ಥಿತಿ ಉತ್ತಮವಾಗಿದೆ. ಅನೇಕ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳನ್ನು ತುಂಬಾ ಮೇಲ್ಮಟ್ಟಕ್ಕೆ ಏರಿಸಿದ್ದಾರೆ. ಕೆಲಯೊಂದು ರಾಜ್ಯಗಳಲ್ಲಿ ರೈತರಿಗೆ ೨೪ ಘಂಟೆ ನಿರಂತರ ವಿದ್ಯುತ್ ಸಿಗುತ್ತಿದೆ ಮತ್ತು ಹೀಗೆ ಅನೇಕ ಅಭಿವೃದ್ಧಿ ಕೆಲಸಗಳು ಆಗಿಲ್ಲ ಅಂತ ಖಡಾ ಖಂಡಿತವಾಗಿ ಹೇಳುವುದು ತಪ್ಪಾಗುತ್ತದೆ. ಆದರೆ ನಮ್ಮ ನಿರೀಕ್ಷೆಗೆ ತಕ್ಕಂತೆ ಮತ್ತು ಜನರಿಗೆ ಎಷ್ಟು ಅನುಕೂಲವಾಗಿದೆ ಎನ್ನುವದರ ಮೇಲೆ ಎಷ್ಟು ಅಭಿವೃದ್ಧಿ ಆಗಿದೆ ಎಂದು ಕಲ್ಪನೆ ಮಾಡಿಕೊಳ್ಳಬಹುದು. ಇಂದಿಗೂ ಬಡತನ ನಿರ್ಮೂಲನೆ, ರೈತರಿಗೆ ನಿರಂತರ ವಿದ್ಯುತ್ , ಜಾತಿಯ ಆದರದ ಮೇಲೆ ಮಕ್ಕಳಿಗೆ ಲ್ಯಾಪಟಾಪ್ , ಜಾತಿಯ ಆದಾರದ ಮೇಲೆ ತಿನ್ನುವದಕ್ಕೆ ಮೊಟ್ಟೆ, ಜಾತಿಯ ಆದಾರದ ಮೇಲೆ ಬಟ್ಟೆ ಬರೆ . ಹೀಗೆ ಅನೇಕ ವಿಷಯಗಳು ನಮ್ಮ ರಾಜಕೀಯ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ನೋಡುತ್ತೇವೆ ಇದರ ಅರ್ಥ ಇನ್ನು ಜನರಿಗೆ ಮೂಲಭೂತ ಸೌಕರ್ಯಗಳು ಸಿಕ್ಕಿಲ್ಲ ಎಂದು ನಮ್ಮನ್ನು ಆಳುವ ಜನರೇ ಹೇಳುತ್ತಿದ್ದಾರೆ! ಎಂದರೆ ನಾವು ಇನ್ನು ಅಭಿವೃದ್ಧಿ ಹೊಂದಿಲ್ಲ ಎನ್ನವುದು ಸ್ಪಷ್ಟ!

ಅಭಿವೃದ್ಧಿ ಆಗಿಲ್ಲ ಎನ್ನವುದು ಸ್ಪಷ್ಟ ಎಂದ ಮೇಲೆ ಇದಕ್ಕೆಲ್ಲ ಕಾರಣ ಯಾರು? ಕೇವಲ ರಾಜಕೀಯ ಪುಡಾರಿಗಳ? ಅಥವಾ ಜೀವನಕ್ಕೆ ಒಂದು ನೌಕರಿ ಸಿಕ್ಕರೆ ಸಾಕು ಎಂದು ಹಗಲಿರಳು ಓದಿ ಒಳ್ಳೆಯ ಅಧಿಕಾರಿಯಾಗಿ ಜನರ ದುಡ್ಡಿನಿಂದ ಸಂಬಳ ಪಡೆದು ಅದೇ ಜನಕ್ಕೆ ಮೋಸ ಮಾಡುತ್ತಿರುವ ಅಧಿಕಾರ ವೃಂದಾವ? ಅಥವಾ ನಾವೇ?(ಜನರು). ಯಾರು ಇದೆಕ್ಕೆಲ್ಲ ಕಾರಣ ಎಂದು ಕೆದುಕುತ್ತಾ ಹೋದರೆ ಇಲ್ಲಿ ಎಲ್ಲರೂ ಒಂದಿಲ್ಲೊಂದು ತಪ್ಪುಗಳನ್ನು ಮಾಡುತ್ತಾ ಅದೇ ತಪ್ಪನ್ನು ಮತ್ತೆ ಮತ್ತೆ ಮಾಡುತ್ತಾ ತಿದ್ದಿಕೊಳ್ಳದ ಹಾಗೆ ತಪ್ಪು ಮಾಡಿದರ ಫಲವೇ ಇವತ್ತಿನ ದೇಶದ ರಾಜಕೀಯ ಸ್ಥಿತಿ. ಇದೆ ಭೂಮಂಡದಲ್ಲಿ ಇರುವ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಷ್ಟೊಂದು ಭ್ರಷ್ಟಾಚಾರ ಇಲ್ಲ. ಎಲ್ಲೊ ಮೇಲೆ ಸ್ವಲ್ಪ ಸ್ವಲ್ಪ ಕಾಣಸಿಗುತ್ತೆ. ಆದರೆ ನಮ್ಮಲ್ಲಿ ಒಂದು ಹೆಣ ಸುಡಬೇಕಾದರು ಲಂಚ ಕೊಡದೆ ಸಾಧ್ಯವಾಗುವದಿಲ್ಲ. ಪಾಪ ಬಡವ ಎಂದು ಸರ್ಕಾರ ವೃದ್ಯಾಪ ವೇತನ ಕೊಟ್ಟಿದ್ದರೇ ಅದರಲ್ಲಿ ೨೦ ರೂಪಾಯಿ ನುಂಗುವ ಪೋಸ್ಟ್ಮನ್! ಹೀಗೆ ಅನೇಕ ಸಣ್ಣ ಸಣ್ಣ ಕೆಲಸಗಳಿಗೆ ಲಂಚವಿಲ್ಲದೆ ಕೆಲಸವಾಗುವುದು ಕಷ್ಟಸಾಧ್ಯ! ಹಾಗಿದ್ದರೆ ಇಲ್ಲಿ ಇರುವ ಎಲ್ಲರೂ ಭ್ರಷ್ಟರೇ? ಖಂಡಿತ ಇಲ್ಲ ಅನೇಕ ರಾಜಕೀಯ ನಾಯಕರು, ಅನೇಕ ಅಧಿಕಾರಿಗಳು ಮತ್ತು ಜಾಸ್ತಿ ಜನ ಒಳ್ಳೆಯ ಸಿದ್ದಾಂತದ ಮೇಲೆ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ತಮ್ಮ ಇತಿಮಿತಿಯಲ್ಲಿ ಸಹಾಯ ಹಸ್ತವನ್ನು ಚಾಚುತಿದ್ದಾರೆ. ಆದರೆ ಇಷ್ಟು ಸಾಕಾಗುವದಿಲ್ಲ? ೯೦% ಜನ ನುಂಗಿ ಹಾಕುವಾಗ ೧೦ ಜನ ಗುಡ್ಡೆ ಹಾಕಿದರೆ ಗುಡ್ಡೆ ಹಾಕುವ ಸ್ಥಳ ಎಂದಾದರೂ ಭರ್ತಿಯಾಗಿತ್ತಾ? ಇದೆಲ್ಲವನ್ನು ಅನೇಕರು ನೋಡಿದ್ದಾರೆ , ನೋಡಿ ರೋಷಿಹೋಗಿದ್ದಾರೆ , ಕೆಲವರು ಪ್ರತಿಭಟಿಸಿದ್ದಾರೆ ಮತ್ತು ಇವಾಗು ಅನೇಕರು ಇದನ್ನು ವಿರೋಧಿಸುತ್ತಿದ್ದಾರೆ.

ವಿಷಯದ ಆಧಾರದ ಮೇಲೆ ಚಿಂತನೆ

ಅಂತಹ ವರ್ಗದಲ್ಲಿ ಬರುವಂತದ್ದೇ “ಪ್ರಜಾಕೀಯ”. ಇದು ರಾಜಕೀಯಕ್ಕೆ ಪರ್ಯವವಾದುದಲ್ಲ. ಇದೊಂದು ಪರಿಕಲ್ಪನೆ ಇದು ನಾವು ಮತ್ತು ನೀವು ಯಾರು ಬೇಕಾದರೂ ಅಳವಡಿಸಿಕೊಳ್ಳಬಹುದು. ಅದರ ಜೊತೆ ಯಾವದೇ ರಾಜಕೀಯ ಪಕ್ಷಗಳು ಇದನ್ನು ರೂಡಿಸಿಕೊಳ್ಳಬಹುದು. ಅಳವಡಿಸಿಕೊಳ್ಳಬಹುದು ಎಂದರೆ ಚುನಾವಣೆ ಬಂದಾಗ ದುಡ್ಡಿಲ್ಲದೆ ಮತ ಹಾಕುವುದು, ಮತ್ತು ಪಕ್ಷ, ವ್ಯಕ್ತಿಯನ್ನು ನೋಡದೆ ಸಿದ್ದಾಂತ ಮತ್ತು ವಿಷಯಗಳ ಮೇಲೆ ಮತದಾನ ಮಾಡುವುದು. ಆಯ್ಕೆಯಾದವನು ನಾನು ಸೇವಕ ಎಂದು ಹೊರಗಡೆ ಹೇಳುವುದು ಒಳಗಡೆ ರಾಜ ಮರ್ಯಾದೆ ನಿರೀಕ್ಷಿಸುವುದು ಪ್ರಜಾಕೀಯವಲ್ಲ. ಪ್ರಜಾಕೀಯದಿಂದ ಗೆದ್ದವನು ಜನರ ನನಗೆ ಕೆಲಸ ಕೊಟ್ಟಿದ್ದಾರೆ ಎಂದು ಅವರು ಕೊಡುವ ದುಡ್ಡಿಗೆ ಕೆಲಸ ಮಾಡುವುದು ಎಂದರ್ಥ! ಕ್ಷೇತ್ರದಲ್ಲಿ ಯಾವದೇ ಕೆಲಸ ಇದ್ದರೂ ಜನರ ಗಮನಕ್ಕೆ ತಗೆದುಕೊಂಡು ಬಂದು ಜನರ ಜೊತೆ ಸಮೀಕ್ಷೆ ಮಾಡಿ ಜನರ ಅಭಿಪ್ರಾಯದಂತೆ ಕೆಲಸ ಮಾಡುವುದು. ಇದು ಸಾಧ್ಯನಾ? ಯಾಕೆ ಸಾಧ್ಯವಿಲ್ಲ ಹೇಳಿ? ಇದೆ ಭೂಮಂಡದಲ್ಲಿ ಇರುವ ಅಮೇರಿಕ ಮತ್ತು ಇಂಗ್ಲೆಂಡ್ದಲ್ಲಿ ಜನರ ಅಭಿಪ್ರಾಯದಂತೆ ಕೆಲಸಗಳು ಆಗುತ್ತವೆ. ಅಲ್ಲಿ ಆಗುತ್ತವೆ ಇಲ್ಲಿ ಆಗುವದಿಲ್ಲ ಎಂದರೆ ಯಾರು ಇದಕ್ಕೆ ಕಾರಣರು? ಮೂಲ ಹುಡುಕಿದರೆ ನಮ್ಮ ಚುನಾವಣೆಗಳು ಆಗುತ್ತಿರುವ ರೀತಿ ಮತ್ತು ಬೇರೆ ದೇಶಗಳಲ್ಲಿ ಆಗುತ್ತಿರುವ ರೀತಿಗೆ ಅಜಗಜಾಂತರ ವ್ಯತ್ಯಾಸ ! ಇಲ್ಲಿನ ಪಂಚಾಯತ ಚುನಾವಣೆಯಲ್ಲೂ ಲಕ್ಷ ಲಕ್ಷ ಖರ್ಚು. ಯಾರಿಗಾಗಿ? ನಮಗಾಗಿ ತಾನೇ?(ಜನರು ದುಡ್ಡಿಗಾಗಿ, ಹೆಂಡಕ್ಕಾಗಿ, ಮೌಂಸಕ್ಕಾಗಿ ಮತದಾನವನ್ನು ಮಾರಾಟ ಮಾಡಿಕೊಂಡಿರುವುದು ). ಆದರೆ ಅಮೇರಿಕಾ ಮತ್ತು ಇಂಗ್ಲೆಂಡಲ್ಲಿ ಇಂತಹ ಸ್ಥಿತಿ ಖಂಡಿತ ಇಲ್ಲ. ಅಲ್ಲಿನ ಜನರು ದುಡ್ಡಿನ ಹಿಂದೆ ಹೋಗುವ ಆಸಾಮಿಗಳಲ್ಲ. ಅದಕ್ಕೆ ಅಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ.

ಕರೋನ ಇಲ್ಲದ ಸಮಯದಲ್ಲೂ ಇದೆ ಸ್ಥಿತಿ.

ಜಗತ್ತು ಕರೋನ ಪಂಡೆಮಿಕ್ ದಿಂದ ನಲಗುತ್ತಿದೆ. ಭಾರತವು ಇದಕ್ಕೆ ಹೊರತಲ್ಲ ಆದರೂ ಕೆಲಯೊಂದು ವಿಷಯಗಳ ಬಗ್ಗೆ ಖಂಡಿತ ನಾವು ತಾಳೆ ಹಾಕಿ ನೋಡಲೇಬೇಕು! ಕೆಲಯೊಂದು ದೇಶ ಒಂದನೆಯ ಅಲೆಯಲ್ಲಿ ನಲುಗಿದರೆ ನಮ್ಮ ದೇಶ ಎರಡನೆಯ ಅಲೆಗೆ ತುತ್ತಾಯಿತು. ಎರಡನೆಯ ಅಲೆಯ ಹೊಡತಕ್ಕೆ ಎಷ್ಟೋ ಶ್ರೀಮಂತರು, ಪುಡಾರಿಗಳ ಮತ್ತು ತುಸು ಹೆಚ್ಚು ಬಡವರು ಇದಕ್ಕೆ ಬಲಿಯಾದರು. ಇಂದಿಗೂ ಕರೋನ ತನ್ನ ಅವಕೃಪೆ ತೋರಿಸುತ್ತ ಸಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳೇ ಇದನ್ನು ಕೆಲವು ಕಾಲ ತಡೆಯುವುದು ಸಾಧ್ಯವಾಗದೆ ಇದ್ದಾಗ ನಮ್ಮ ದೇಶಕ್ಕೆ ತಡೆದುಕೊಳ್ಳುವ ಶಕ್ತಿ ಖಂಡಿತವಿರುವದಿಲ್ಲ. ಇದು ಒಪ್ಪೋಣ. ಆದ್ರೆ ನಮ್ಮ ಪ್ರಶ್ನೆ ನಮ್ಮಲ್ಲಿ ಒಳ್ಳೆಯ ಚಿಕಿಸ್ಥೆ ಕೊಡುವ ಆಸ್ಪತ್ರೆಗಳು ಎಷ್ಟಿವೆ ಎಂದು ಲೆಕ್ಕಹಾಕಿದರೆ ಖಂಡಿತ ಉತ್ತರ ನಿರಾಶಾದಾಯಕವಾಗಿರುತ್ತೆ. ಅದಕ್ಕೆ ಕಾರಣ ನಮ್ಮ ವ್ಯವಸ್ಥೆ! ಆಕ್ಸಿಜನ್ ಸಿಗದೇ ಜನ ಸತ್ತರು , ಚಿಕಿಸ್ಥೆ ದೊರೆಯದೆ ಜನ ತೀರಿದರು, ಔಷದ ಸಿಗದೇ ಜನರಿಗೆ ತೊಂದ್ರೆಯಾಯಿತು ಎಂದು ಕೇಳಿದಾಗ ನಮ್ಮಲ್ಲಿರುವ ವ್ಯವಸ್ಥೆ ಬಗ್ಗೆ ಅಸಹ್ಯ ಹುಟ್ಟಿಸುತ್ತೆ. ಆಸ್ಪತ್ರೆಗಳು ಹೆಚ್ಚಿಗೆ ದುಡ್ಡು ವಸೂಲಿ ಮಾಡುತ್ತಿವೆ ಎಂದು ಜರಿದರೆ ಆ ಕಡೆ ಸಿದ್ದ ಉತ್ತರ ಕೋಟಿ ಕೋಟಿ ಸುರಿದು ವೈದ್ಯಕೀಯ ವೃತ್ತಿ ಪಡೆದಿದ್ದೇನೆ. ಕೋಟಿ ಕೋಟಿ ಕೊಟ್ಟು ಆಸ್ಪತ್ರೆ ಕಟ್ಟಿಸಿದ್ದೇನೆ. ಸಾಲ ಶೂಲ ಮಾಡಿ ಈ ಮಟ್ಟಕ್ಕೆ ಬಂದಿದ್ದೇನೆ ನಾನೇಗೆ ಕಡಿಮೆ ದುಡ್ಡು ತಗೆದುಕೊಳ್ಳಲಿ ಎಂದು ಕೇಳುತ್ತಾರೆ! ಶಿಕ್ಷಣವು ವ್ಯವಹಾರ ಮಾಡಿದ್ದು ನಾವು ಆಯ್ಕೆ ಮಾಡಿದ ಪುಡಾರಿಗಳೇ ತಾನೇ? ಮತ್ತೆ ಮತ್ತೆ ಅವರನ್ನೇ ಆಯ್ಕೆ ಮಾಡುವ ನಾವೇ ಹೊಣೆಗಾರರಲ್ವೇ? ಇದೆ ಇರಬೇಕು ಜನ ಇವತ್ತು ರಾಜಕಾರಣಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಶಾಪ ಹಾಕಿದರೂ ಬಾರದ ಲೋಕಕ್ಕೆ ಹೋದವರು ಬರುವರೇ?

ನಮ್ಮ ದೇಶದ ಒಂದು ರಾಜ್ಯದ ಸರ್ಕಾರಿ ಶಾಲೆ

ಕೆಲಸವಿಲ್ಲದೆ ಜನ ಪರದಾಡುತ್ತಿರುವಾಗ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಫಿ ತುಂಬುವ ಸಂಕಟ. ಮೊದಲೇ ಜೀವನಕ್ಕಾಗಿ ಹಣವಿಲ್ಲ ಇಂತಹ ಸಮಯದಲ್ಲಿ ಲಕ್ಷ ಲಕ್ಷ ಫಿ ಕಟ್ಟುವುದು ಸುಲಭದ ಮಾತಲ್ಲ. ಇಲ್ಲಿಯೂ ಯಾರನ್ನು ದೂಷಿಸುವುದು? ಸರ್ಕಾರ ಸರ್ಕಾರಿ ಶಾಲೆಗಳಿಗೆ ಮೇಲ್ಮಟ್ಟಕೆ ಏರಿಸಿದ್ದರೆ ಮತ್ತು ಕಾಲಕಾಲಕ್ಕೆ ಮಾಧ್ಯಮ ಬದಲಾವಣೆ ಮಾಡಿದ್ದರೆ ಶಿಕ್ಷಣ ಬ್ಯುಸಿನೆಸ್ ಆಗುತಿರಲಿಲ್ಲ. ಸರ್ಕಾರಿ ಶಾಲೆಗಳು ಉನ್ನತ ಮಟ್ಟದಲ್ಲಿ ಇದ್ದಿದ್ದರೇ ಶಿಕ್ಷಣದಲ್ಲಿ ಬಡ ಮತ್ತು ಶ್ರೀಮಂತ ಎನ್ನವುದು ಬರುತ್ತಿರಲಿಲ್ಲ. ಇಲ್ಲಿ ಗಮನಿಸಿ ಸಿಕ್ಕಾಪಟ್ಟೆ ದುಡ್ಡು ಸರ್ಕಾರಿ ಶಾಲೆಗಳಿಗೆ ಖರ್ಚಾಗುತ್ತಿದೆ! ಶಿಕ್ಷಕರ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ ! ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಸೇರಿದ್ದು ಪುಡಾರಿಗಳಿಗೆ ! ಅದಕ್ಕೆ ಸರ್ಕಾರಿ ಶಾಲೆಗಳು ಉನ್ನತ ಮಟ್ಟಕ್ಕೆ ಹೋಗಿಲ್ಲ.

Vote is not for sale

ಅದಕ್ಕೆ ಜನರ ಬಾಯಿಂದ ಬರುತ್ತಿರುವ ಮಾತುಗಳು ನಾವು ಒಳ್ಳೆಯವರನ್ನು ಆಯ್ಕೆ ಮಾಡಬೇಕು ಮತ್ತು ಅದರಲ್ಲಿ ಪ್ರತಿ ಚುನಾವಣೆ ಹಗುರವಾಗಿ ತಗೆದುಕೊಳ್ಳದೆ ಭ್ರಷ್ಟಾಚಾರಿಗಳಿಗೆ ಮಣೆ ಹಾಕದೆ ತತ್ವ ಸಿದ್ದಾಂತ ಇದ್ದವರಿಗೆ ಆಯ್ಕೆ ಮಾಡಿ ಅವರಿಗೆ ಕೆಲಸ ಕೊಟ್ಟು ಕೆಲಸ ಮಾಡುವ ಸಮಯದಲ್ಲಿ ಅವರ ಜೊತೆ ಇದ್ದು ನಮ್ಮ ವ್ಯವಸ್ಥೆಯನ್ನು ನಾವೇ ಸರಿ ಮಾಡಿಕೊಳ್ಳುವ ಕಾಲ ಎಂದು ಹೇಳುವ ಜನ ಸಿಕ್ಕಾಪಟ್ಟೆ ಆಗಿದ್ದಾರೆ! ನೋಡೋಣ ಇದೆ ನೆನಪು ಚುನಾವಣೆಯಲ್ಲಿ ಇಟ್ಟುಕೊಂಡು ಒಳ್ಳೆಯವರಿಗೆ ಮತ ಚಲಾಯಿಸುತ್ತಾರೋ ಅಥವಾ ಹಣಕ್ಕೆ , ಜಾತಿಗೆ ಮತ ಹಾಕುತ್ತಾರೋ ಕಾದು ನೋಡಬೇಕು! ಮೊದಲಿತ್ತು ಒಂದು ಕೂಗು ರಾಜ್ಯದಲ್ಲಿ ನಮಗೆ ಪರ್ಯಾಯ ಪಕ್ಷವಿಲ್ಲ ಆದರೆ ಇಂದು ಪ್ರಜಾಕಿಯ ಎಂಬ ಪರಿಕಲ್ಪನೆ ಜೊತೆ ಪಕ್ಷವು ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಆಯ್ಕೆ ಮಾಡುವ ನಿರ್ಧಾರ ನಮಗೆ ಬಿಟ್ಟಿದ್ದು(ಜನರಿಗೆ)! ಬೇರೆ ಪಕ್ಷದಲ್ಲಿ ಪ್ರಜಾಕಿಯ ಪರಿಕಲ್ಪನೆ ಹೊಂದಿದವರಿದ್ದರೇ ಅವರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಜನರಿಗಿದೆ.

Categories: Articles

Tagged as: ,

1 reply »

Leave a Reply