
ಹಾಸನದ ಜಿಲ್ಲಾಧಿಕಾರಿಯಾಗಿದ್ದಾಗ ವರ್ಗಾವಣೆ ಮಾಡಿದಾಗ ಕೆಎಟಿಗೆ ಹೋಗಿ ವರ್ಗಾವಣೆವನ್ನು ತಡೆದು ಕನ್ನಡದ ದೃಶ್ಯ ಮಾಧ್ಯಮಗಳಿಗೆ ಇಂಥ ಧೈರ್ಯ ಯಾರು ಮಾಡುವದಿಲ್ಲ. ಆದರೆ ನಮಗೆ ಆಗಿರುವ ಅನ್ಯಾಯಕ್ಕೆ ನಾನು ಕೆಎಟಿಗೆ ಹೋಗಿ ನ್ಯಾಯವನ್ನು ಪಡೆದುಕೊಂಡೆ ಎಂದು ದೊಡ್ಡದಾಗಿ ಹೇಳಿದ್ದ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ ಶರತ್ ಅವರ ಜಾಗಕ್ಕೆ ಬಂದು ಅವರೇ ಹೇಳಿದ ಮೊದಲ ಮಾತಿಗೆ ಬದ್ಧರಾಗದೆ ತಾನು ರಾಜಕೀಯ ವ್ಯಕ್ತಿಗಳ ಸಹಾಯದಿಂದ ಮೈಸೂರಿಗೆ ಬಂದಿದ್ದು ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇಂದಿಗೂ ಹಿಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶರತ್ ಅವರ ಅರ್ಜಿ ಕೆಎಟಿಯಲ್ಲಿ ದೂಳು ತಿನ್ನುತ್ತಿದೆ! ಇಲ್ಲಿ ಕೆಎಟಿ ಯಾಕೆ ಶರತ್ ಅವರ ಅರ್ಜಿ ಇತ್ಯರ್ಥ ಮಾಡಿಲ್ಲ. ಇದಕ್ಕೆ ಕಾರಣ ಏನು?
ರೋಹಿಣಿ ಸಿಂಧೂರಿಗೆ ಮಂಡ್ಯದಲ್ಲಿ ಮಾಡಿರುವ ಕೆಲಸಕ್ಕೆ ಬಾರಿ ಚಪ್ಪಾಳೆ ಸಿಕ್ಕಿತ್ತು. ಅದರಲ್ಲಿ ಮುಖ್ಯವಾಗಿ ಟಾಯ್ಲೆಟ್ ಕಟ್ಟಿಸಿದ್ದೇನೆ ಎಂದು ಊರು ಊರು ತಿರುಗಾಡಿ ಹೇಳಿದ್ದರು. ನಿಜವಾಗಿ ಎಷ್ಟು ಟಾಯ್ಲೆಟ್ ಹಳ್ಳಿ ಹಳ್ಳಿಗಳಲ್ಲಿ ಕಟ್ಟಿಸಿದ್ದಾರೆ ಎಂದು ನೋಡಿದರೆ ಅವರು ಹೇಳಿದ ಲೆಕ್ಕಕ್ಕೆ ಮತ್ತು ಇದ್ದ ಲೆಕ್ಕಕ್ಕೆ ತಾಳೆ ಆಗುವದಿಲ್ಲ. ಹಾಸನದಲ್ಲಿ ರೇವಣ್ಣರವರಿಗೆ ಮತ್ತು ಕಾಂಗ್ರೇಸ್ ಸರ್ಕಾರಕ್ಕೆ ಸೆಡ್ಡು ಹೊಡೆದು ನಾನು ಪ್ರಾಮಾಣಿಕ ಎಂದು ಹೇಳಿದ್ದ ರೋಹಿಣಿ ಮೈಸೂರಕ್ಕೆ ಹೇಗೆ ಬಂದಿದ್ದಾರೆ ಎಂದು ತಿರುಗಿ ನೋಡಿದರೆ ಆಂಧ್ರದ ಮುಖ್ಯಮಂತ್ರಿ ಹೆಸರು ತಳಕು ಹಾಕಿಕೊಳ್ಳುತ್ತಿದೆ.
Click on HP Laptop
ಮೊದಲಿಂದಲೂ ಜೆಡಿಎಸ್ ಪಕ್ಷದವರು ರೋಹಿಣಿ ವಿರುದ್ದ ಹರಿ ಹಾಯ್ದಿದ್ದರು ಆದರೆ ಬಿಜೆಪಿ ಪಕ್ಷದವರು ರೋಹಿಣಿ ಅವರನ್ನೇ ಬೆಂಬಲಿಸಿದ್ದರು. ಆದರೆ ಕಳೆದ ಒಂದು ವಾರದಿಂದ ಪ್ರತಾಪ ಸಿಂಹ ರೋಹಿಣಿ ವಿರುದ್ದ ತಿರುಗಿ ಬಿದ್ದರು. ಲೆಕ್ಕ ಕೊಡಿ ಎಂದಾಗ ಅದಕ್ಕೆ ೪ ಕೋಟಿ ಇದಕ್ಕೆ ೮ಕೋಟಿ ಎಂದು ಹೇಳಿದರೆ ವಿನಃ ಪೈಸೆ ಪೈಸೆ ಲೆಕ್ಕ ಕೊಡಲಿಲ್ಲ. ಅದರಲ್ಲಿ ವಿಶೇಷವಾಗಿ ತಮ್ಮ ಕಚೇರಿಯಲ್ಲಿ ೨೮ ಲಕ್ಷ್ಯ ಖರ್ಚು ಮಾಡಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿದ್ದು ಹೇಳಲೇ ಇಲ್ಲ. ಇದನ್ನು ಜನರಿಗೆ ಹೇಳಬೇಕೆಲ್ವೇ? ಮೈಸೂರಲ್ಲಿ ಭೂಮಾಫಿಯಾ ತಡೆಗಟ್ಟಿದ್ದಾರೆ ಅದಕ್ಕೆ ಎಲ್ಲರೂ ರೋಹಿಣಿ ಸಿಂಧೂರಿ ಮೇಲೆ ಆರೋಪ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ರೋಹಿಣಿ ಮಾತ್ರ ಇದರ ಬಗ್ಗೆ ಚಕಾರ ಎತ್ತಿಲ್ಲ.
ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ ಅವರು ಸಹಿತ ಒಳ್ಳೆಯ ಅಧಿಕಾರಿ ಎಂದು ನಿರೂಪಿಸಿದ್ದಾರೆ ಮತ್ತು ಅವರೂ ಕಣ್ಣಲ್ಲಿ ಎಣ್ಣೆ ಬಿಟ್ಟುಗೊಂಡೆ ಐಎಎಸ್ ತೇರ್ಗಡೆ ಹೊಂದಿದ್ದು. ಆದರೆ ದಿಡೀರನೆ ರಾಜೀನಾಮೆ ಕೊಟ್ಟು ಹೇಗೆ ಜಿಲ್ಲಾಧಿಕಾರಿ ದುರಹಂಕಾರಿ ನಡೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಮಾಧ್ಯಮದ ಮುಂದೆ ಹೇಳಿದರು. ಒಬ್ಬ ಐಎಎಸ್ ಅಧಿಕಾರಿ ಮತ್ತೊಬ್ಬ ಐಎಎಸ್ ಅಧಿಕಾರಿಗೆ ಕಿರುಕುಳ ಕೊಡುವ ಮಟ್ಟಿಗೆ ಹೋಗಿದೆ ಎಂದರೆ ನೀವೇ ಊಹಿಸಿ ರೋಹಿಣಿಯ ಅಧಿಕಾರದ ಧರ್ಪ. ಜಾತಿಯ ಬಗ್ಗೆಯೂ ಶಿಲ್ಪಾ ನಾಗ ಪ್ರಸ್ಥಾಪನೆ ಮಾಡಿದ್ದಾರೆ ಎಂದು ಕೇಳಿದ್ದೇವೆ. ಇದೆಲ್ಲ ಬೇಕಿತ್ತಾ? ಇಷ್ಟಕ್ಕೆ ನಿಂತಿಲ್ಲ ಶಿಲ್ಪಾ ನಾಗ ಅವರನ್ನು ಏಕವಚನದಲ್ಲಿ ಮಾತಾಡುವಷ್ಟು ಅಹಂ, ಹೀಗೆ ಅನೇಕ ವಿಷಯಗಳ ಬಗ್ಗೆ ನೇರವಾಗಿ ಹೇಳಿದ್ದಾರೆ. ರೋಹಿಣಿ ನೀವು ನಿಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಿ ಇಲ್ಲವಾದರೆ ಮೈಸೂರಿನಿಂದ ತೊಲಗಿ ಎಂದು ಹೇಳಿದ್ದಾರೆ!
ಶಿಲ್ಪಾ ನಾಗ ಅವರು ರಾಜೀನಾಮೆ ಕೊಟ್ಟು ರೋಹಿಣಿಯವರ ದುರಹಂಕಾರದ ಬಗ್ಗೆ ಹೇಳಿದಾಗ ರೋಹಿಣಿ ಹೊರಗಡೆ ಬಂದು ಸಿ ಎಸ್ ರ್ ಫಂಡ್ ಬಗ್ಗೆ ಮಾಹಿತಿ ಕೇಳಿದ್ದೆ ಅದಕ್ಕೆ ನನ್ನ ಮೇಲೆ ಇಷ್ಟೆಲ್ಲಾ ವಾಗ್ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕೇವಲ ಸಿ ಎಸ್ ಆರ್ ಮಾಹಿತಿಗಾಗಿ ಶಿಲ್ಪಾ ನಾಗ ಅವರು ರಾಜೀನಾಮೆ ಕೊಡುವ ಮಟ್ಟಕ್ಕೆ ಹೋಗುತ್ತಾರಾ? ಇದು ನಂಬುವದಕ್ಕೆ ಅಸಾಧ್ಯ! ಕಾರಣ ಇಲ್ಲಿ ವಿರೋಧಿ ಪಕ್ಷಗಳ ಶಾಸಕರು , ಆಡಳಿತ ಪಕ್ಷದ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಅಧಿಕಾರಿ ವರ್ಗವೇ ಸಿಂಧೂರಿ ವಿರುದ್ದು ಶಂಖನಾದ ಊದಿದ್ದಾರೆ ಎಂದರೆ ಕೇವಲ ರೋಹಿಣಿ ಮಾತ್ರ ಪ್ರಾಮಾಣಿಕನಾ ಎಂಬ ಸಂದೇಹ ಬರುತ್ತೆ. ಆದಷ್ಟು ಬೇಗ ಸರ್ಕಾರ ಇದರ ಕಡೆ ಗಮನ ವಹಿಸಿ . ಅನಾವಶ್ಯಕವಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ.
ಉಪೇಂದ್ರರನ್ನು ನಂಬಬೇಡಿ. ಅವರನ್ನು ನಂಬು ಎಂದು ಯಾರು ಹೇಳಿದರು?
Categories: Articles
