Stories/ಕಥೆಗಳು

ಮತ್ತೆ ಪ್ರೀತಿ ಚಿಗುರೊಡೆದಾಗ!!!

ಇತ್ತೀಚಿಕೆ ನಾನು ಸೋಶಿಯಲ್ ಮೀಡೀಯದಲ್ಲಿ ಹೆಚ್ಚು ಸಮಯ ಸುದ್ದಿ ಓದುವದು, ಗೆಳಯರ ಸುದ್ದಿ ನೋಡೋದು , ಮತ್ತೆ ನಮ್ಮದು ಒಂದು ಇರಿಲಿ ಅಂತ ಪೋಸ್ಟ್ ಮಾಡುವಾಗ ಒಂದು ದಿವಸ ಒಂದು ಗೆಳತನಕ್ಕೆ ವಿನಂತಿ ಬರುತ್ತೆ!!!! ವಿನಂತಿ ಹುಡಗಿಯದು , ಹುಡುಗಿಯ ಸುಂದರವಾದ ಭಾವಚಿತ್ರ ಅದರ ಜೊತೆಗೆ ಅದು ನನಗೆ ಮೊದಲೇ ಗೊತ್ತಿರುವ ಹುಡಗಿ!!! ಒಂದು ಕ್ಷಣ ಎಲ್ಲಿ ಇದ್ದೇ ಅನ್ನೋದು ಮರೆತೋಗಿತ್ತು!ಕೇಳ್ತೀಯಾ ಖುಷಿ? ವಿನಂತಿಗೆ ಸಮ್ಮತಿ ಕೊಟ್ಟು ಪ್ರೊಫೈಲ್ ಒಳ ಹೊಕ್ಕು CID ತರಹ ಎಲ್ಲವನ್ನೂ ಜಾಲಾಡಿ ಬಿಟ್ಟೆ! ಅವಳನ್ನು ನೋಡಿ 14 ವರ್ಷಗಳೇ ಕಳೆದು ಹೋಗಿದ್ದವು. ಅವಳ ತೀಕ್ಷ್ಣ ಕಣ್ಣು, ಮುಖದಲ್ಲಿ ಮಂದಹಾಸದ ಭಾವಚಿತ್ರಗಳು ನನ್ನಲ್ಲಿ ಏನೋನೋ ಕಲ್ಪನೆ ಹುಟ್ಟು ಹಾಕಿ ಏನಪಾ ಇವಳು ನಟಿ ಮಾಧುರಿ ಹಾಂಗೆ ಲುಕ್, ಅವಳ ಕೆಲವೊಂದು ಪೋಸ್ಟ್‌ಗಳು ಅವಳ ಕ್ರಿಯಾಶೀಲತೆ ಮತ್ತು ಹೃದಯ ವೈಶಾಲತೆ ಒತ್ತಿ ಒತ್ತಿ ಹೇಳುವ ರೀತಿಯಲ್ಲಿ ಇತ್ತು. ಸೂಕ್ಷ್ಮವಾಗಿ ನೋಡಲಿಕ್ಕೆ ಒಂದು ಕಾರಣವೂ ಇತ್ತು.!!

ಕಾಲೇಜ್ ದಿನಗಳ ಆದ ನಂತರ ಬೃಹತ ಬೆಂಗಳೂರುಲ್ಲಿ ಕೆಲಸ ಹುಡಕಾಡುವ ಸಮಯ. ಕೈಯಲ್ಲಿ ಕಾಸಿಲ್ಲ ಸಿಟಿ ಬಸ್  ಹತ್ಕೊಂಡು ದಿನದ ಪಾಸ ತಗೆದುಕೊಂಡು ಸಂದರ್ಶನಕ್ಕೆ ಹೋಗುವಾಗ ಇದ್ದ ದುಗುಡ , ಚಿಗುರಿದ ಕನಸು ,ಬರುವಾಗ ಆಂಗ್ಲ ಭಾಷೆಯ ಕೊರೆತೆ ಎಲ್ಲವನ್ನೂ ಉಡೀಸ್ ಮಾಡಿ ಬಿಡಿತ್ತಿತ್ತು. ಆದರೆ ಬಡ ಜೀವ ಕೇಳಬೇಕಲ್ಲ ಅಲ್ಲೇ ಮತ್ತೆ ಅನ್ನ ಸಾಂಬಾರ ತಿಂದು ಮುಂದಿನ ಸಂದರ್ಶನಕ್ಕೆ ತಯಾರು ಆಗತಿತ್ತು. ಹೀಗೆ ಸಂದರ್ಶನ ಮೇಲೆ ಸಂದರ್ಶನ ಹೋಗೋದು ಅಲ್ಲಿ ಸಮಯ ಸಿಕ್ಕರೆ ಗುಂಪಲ್ಲಿ ಗೋವಿಂದ ಎಂದು ಹುಡಗಿಯರ ನಂಬರ್ ತಗೆದುಕೊಳ್ಳುವದು. ಫೋನ್ ಅಲ್ಲಿ ಮೆಸೇಜ್ ಮಾಡಿ ನಮ್ಮನ್ನು ನಾವು ಪರಿಚಯ ಮಾಡಿಕೊಳ್ಳೋದು ನಡೆದೆ ಇತ್ತು. ಸಂದಿಗ್ದ ಸ್ಥಿತಿಯಲ್ಲಿ ನಮ್ಮಲ್ಲಿರುವ ರಸಿಕತೆಗೆ ಏನು ಕೊರೆತೆ ಇರಲಿಲ್ಲ. ಆದರೆ ಕಾಯಕವೇ ಕೈಲಾಶ ನೇ ಮುಖ್ಯ ಅನ್ನೋದು ಗೊತ್ತಿತ್ತು. ಆದ್ರೆ ಅದೆಲ್ಲ ಒಂದು ಹುಡಗಾಟಿಗೆ ಹೊರೆತು ಮತ್ತೇನು ಇರಲಿಲ್ಲ. ಇದೆಲ್ಲ ಹೊರೇತಾಗಿ ಗೆಳಯರ ಜೊತೆ ಹರಟೆ ಮತ್ತು ಈ ತಿಂಗಳಲ್ಲಿ ಕೆಲಸ ಹಿಡಿದೆ ಹಿಡಿಯುತ್ತೇನೆ ಎಂದು ಸವಾಲು ಬೇರೆ!!

ಸವಾಲಿನ ಅಮಲಿನಲ್ಲಿ ಓದಿದ್ದನ್ನು ಓದಿದ್ದೆ ಓದಿದ್ದು ಆದರೆ ಕೆಲಸ ಮಾತ್ರ ಮರೀಚಿಕೆ ಆಗಿತ್ತು. ಹೇಗಪ್ಪಾ ಕೆಲಸ ಹಿಡಿಯೋದು ಅನ್ನೋದೇ ನಮ್ಮಗೆ ಒಂದು ದೊಡ್ಡ ಟಾಸ್ಕ್ ಆಗಿತ್ತು. ಅದೇ ಹೊತ್ತಿಗೆ ಟೆಕ್ನಾಲಜೀ ಹೇಗೂ ಸ್ಟ್ರಾಂಗ್ ಇದೀವಿ ಇನ್ನೂ ಆಂಗ್ಲಭಾಷೆ ವ್ಯಾಕರಣ ಕಲಿಬೇಕು ಅಂತ ನಿರ್ದಾರ ಮಾಡಿ ಒಂದು ಒಳ್ಳೆಯ ಕಲಿಕಾ ಕೇಂದ್ರಕ್ಕೆ ಸೇರಿಕೊಂಡೆ. ಹೇಗೋ ಸ್ವಲ್ಪ ದುಡ್ಡಲ್ಲಿ ಪ್ರವೇಶ ತಗೆದುಕೊಂಡು ಮೊದಲ ಕ್ಲಾಸ್ ಗೆ ನಮ್ಮ ಹಾಜರತೀನು ಆಯಿತು. ಆದರೆ ಅಲ್ಲಿ ನೋಡಿದರೆ 4, 5, ನೇ ತರಗತಿಯ ಮಕ್ಕಳು, ದೊಡ್ಡ ದೊಡ್ಡ ಹೆಂಗಸರು ಅಯ್ಯೋ ಇದೇನಿದು ನಾನು ವ್ಯಾಕರಣ ಕಲಿಬೇಕು ಅಂದು ಬಂದರೆ ಆಂಗ್ಲ ಬಳ್ಳಿ ಹೇಳಿಕೊಡ್ತಾ ಇದ್ದಾರೆ ಮುಂದೆ ಹೇಗೆ ಅಂತ ಮನದಲ್ಲಿ ಅಂದು ಕೊಂಡು ಇದು ಸರಿಹೋಗಲ್ಲ ಬಿಡಬೇಕು ಅಂತ ನಿರ್ದಾರ ಮಾಡಿದೆ ಆದರೆ ಕ್ಲಾಸ್ ಮುಗಿದ ನಂತ್ರ ,ಇಲ್ಲ ಇದು ಎಲ್ಲರಿಗೂ ಮೊದಲ ದಿವಸ ತಗೆದುಕೊಳ್ಳವ ಕ್ಲಾಸ್ ಅಂದಾಗ ಬಿಗಿ ಹಿಡಿದ ಉಸಿರು ನಿರಾಳತೆ ಹೊಂದಿತ್ತು.

ಏನಪಾ ಇವನು ಪ್ರೀತಿ ಚಿಗುರೊಡೆದಾಗ ಅಂತ ಟೈಟಲ್ ಇಟ್ಟು ಏನೋ ಪೀಠಿಕೆ ಹಾಕ್ತಾ ಇದ್ದಾನೆ ಅಂತ ಬೈಕೋಬೇಡಿ. ನಿಧಾನವೇ ಪ್ರಧಾನ. !!!

ಆಂಗ್ಲಭಾಷೆ ವ್ಯಾಕರಣ ತರಗತಿ ಅತಿ ವೇಗದಿಂದ ಹೋಗ್ತಾ ಇತ್ತು ಮತ್ತೆ ಅಲ್ಲಿನ ಕಲಿಕೆ ತುಂಬಾ ಒಳ್ಳೆಯದೇ ಆಗಿತ್ತು. ಆದರೆ ಒಂದು ನನಗೆ ಅನಿಸಿದ್ದು ಸಾಧಿಸುವವನಿಗೆ ಸ್ವಲ್ಪ ವಿಷಯ ಜ್ಞಾನ ಕಡಿಮೆ ಇದ್ದರೂ ಪರವಾಗಿಲ್ಲ ಆದರೆ ಸಾಧಿಸುವ ಆತ್ಮವಿಶ್ವಾಸ ಇರಬೇಕು. ಇದು ಮೂರು ತಿಂಗಳ ಕೋರ್ಸ್ ಮೊದಲು ಬೆಳಿಗ್ಗೆ ಇದ್ದ ಕ್ಲಾಸ್ ,ಶಿಕ್ಷಕರು ಒಂದು ದಿವಸ ಬಾರದೆ ಇದ್ದದ್ದೂರಿಂದ ಕ್ಲಾಸ್ ಮದ್ಯಾಹ್ನಕ್ಕೆ ಹೋಗಿತ್ತು. ಅದನ್ನು ಅಟೆಂಡ್ ಮಾಡಿ ಹೋಗುವಾಗ ವಿಚಾರಕರಿಗೆ ನನಗೆ ಇದೆ ಕ್ಲಾಸ್ ಹೊಂದಿಕೆ ಆಗುತ್ತೆ ಅಂತ ಹೇಳಿ ಹೋಗಿದ್ದೆ! ಅದಕ್ಕೆ ಕಾರಣ?

ಹೊಸ ಕ್ಲಾಸಗೆ ಬಂದು ಸ್ವಲ್ಪ ದಿವಸ ಆಗಿತ್ತು. ಆ ಕ್ಲಾಸಿನ ಶಿಕ್ಷಕರ ಹುಟ್ಟು ಹಬ್ಬದ ನಿಮಿತ್ಯ ಅಂದು ನಾವು ಕೇಕ್ ತರಲು ಶಿಕ್ಷಕರ ಬೈಕಿನಲ್ಲಿ ಹೋಗಬೇಕಿತ್ತು. ಬರುವಾಗ ಕೇಕ್ ಹಿಡಿಯಲು ಹಿಂದೆ ಒಬ್ಬರು ಬೇಕಿತ್ತು. ಹಿಂದಿನ ಸಾಲಿನಿಂದ ನಾನು ಬರುತ್ತೇನೆ ಅಂತ ನನ್ನ ಹೃದಯಕ್ಕೆ ಕೂಗಿ ಹೇಳಿದ ರೀತಿ ಇತ್ತು. ಆ ಹೃದಯ ವೈಶಾಲತೆ ಅಂದೂ ಇತ್ತು. ಹೋಗಿ ಬರುವದರಲ್ಲೇ ಮದ್ಯಾಹ್ನ ಕ್ಲಾಸ್ ಗೆ ಬಂದಿದ್ದು ಈಡೇರಿತ್ತು. ನಿಮ್ಮ ಊರು, ನೀವು ಏನು ಮಾಡೋದು, ಮತ್ತೆ ಇವಾಗ ಎಲ್ಲಿ ಇರೋದು ಇವೆಲ್ಲ ಈ ಕಡೆ ಇಂದ ಆ ಕಡೆ ಹೋಗಿ ಆಗಿತ್ತು!! ಒಂದು ಮಧ್ಯಾಹ್ನ ಕ್ಲಾಸ್ ನನ್ನ ಭಾವನೆಗಳಿಗೆ ರೆಕ್ಕೆಕೊಟ್ಟಿತ್ತು ಮತ್ತು ಆವಾಗಲೇ ನಾನು ಕನಸೆಂಬ ಕೂದರೆ ಏರಿ ಆಗಿತ್ತು. ಕನಸೆಂಬ ಕೂದರೆ ನೈಜತೆ ಗೆ ಬರುವದಕ್ಕೆ ತುಂಬಾ ಸಮಯ ತಗೆದುಕೊಳ್ಳಲಿಲ್ಲ.ಎರಡು ಮೂರು ಬೇಟಿ ಆದ ನಂತ್ರ ಫೋನ್ ಕಾಲ್ ಪ್ರಾರಂಬ. ಹೀಗೆ ಬೈ ಟೂ ಜೂಸ್ ಕೂಡಿದ ನಂತ್ರ ಒಂದು ದಿವಸ ಮೇಲ್ಅಲ್ಲಿ ಬರೆದು ಕಳಿಸಿದೆ . ಮತ್ತೆ ಅದೇ ಅಂಗಡಿ ಮತ್ತೆ ಬೈ ಟೂ ಜೂಸ್ ಆದರೆ ಅವತ್ತಿನ ಮಾತುಗಳ ತೂಕ ಮಾತ್ರ ತುಂಬಾ ಹೆವೀ. ಹೆವೀ ಮಾತುಗಳು ಮುಗಿಯುವಕ್ಕಿಂತ ಮುಂಚೆ ನಮ್ಮ ಬೈ ಟೂ ಜೂಸ್ ಖಾಲಿ ಆಗಿತ್ತು!! ಹೆವೀ ಮಾತುಗಳ ನಂತರ ಇಬ್ಬರ ಮುಖದಲ್ಲಿ ಒಂದು ತರಹ ಮಂದಹಾಸ ಇತ್ತು. ಹಾಗೆ ಮನೆ ಕಡೆ ಹೆಜ್ಜೆ ಹಾಕಿದೆ ಮತ್ತು ನಿರಂತರವಾಗಿ ನಡೆಯುತ್ತಿರುವ ನಮ್ಮ ಕೆಲ್ಸದ ಟಾಸ್ಕ್ ಮಾತ್ರ ಅತಿ ವೇಗಪಡೆದುಕೊಂಡು ಸಾಧಿಸಬೇಕಾಗಿದ್ದು ಸಾಧಿಸಿ ಆಗಿತ್ತು!! ಹೆವೀ ಮಾತುಗಳಲ್ಲಿ ಸ್ವಾರ್ಥ ಇರಲಿಲ್ಲ. ಒಬ್ಬ ತತ್ವಜ್ಞಾನಿ ಮಾತನಾಡು ರೀತಿಯಲ್ಲಿ ಮನಸ್ಸಿನ ಭಾವನೆಗಳಿಗೆ ಧಕ್ಕೆಯಾಗದ ಹಾಗೆ ಮಾತುಗಳು ಮುಗಿದಿದ್ದವು.

ಒಳ್ಳೆಯ ಸಂಸ್ಥೆ ಯಲ್ಲಿ ಕೆಲಸ ಮಾಡಿಕೊಂಡು ಇರುವಾಗ ಒಂದು ದಿವಸ ಫೋನ್ ಬರುತ್ತೆ ಹುಡಗೀಯ ದ್ವನಿ .ಗೊತ್ತಾತ ಯಾರು ಅಂತ? ಹೇಗೆ ಇದ್ದೀರಾ? ನಾನು ಚನ್ನಾಗಿ ಇದ್ದೇನೆ ಮತ್ತು ಮುಂದಿನ ವಾರ ಅಮೇರಿಕ ಹೋಗ್ತಾ ಇದ್ದೇನೆ ಅಂತ ಹೇಳಿದಳು!! ಇವಾಗ ಎಲ್ಲಿ ಇರೋದು ಅಂತ ನಾನು ಕೇಳಿದೆ ನೀವು ಎಲ್ಲಿ ಇರತೀರ ಅದೇ ಏರಿಯಾ ದಲ್ಲಿ ನಾನು ಇರೋದು. ನಾನು ಅವಳನ್ನು ನೋಡಿರಲೇ ಇಲ್ಲ. ಮತ್ತೆ ನೋ ಕಾಂಟ್ಯಾಕ್ಟ್ಸ್!!

CID ತರಹ ಎಲ್ಲವನ್ನೂ ಅಗೆದು ತಗೆದು ನೋಡಿ ಮನಸ್ಸ್ಸಿಗೆ ಒಂದು ತರಹ ಖುಷಿ. ಮತ್ತೆ ಕಲಿಕೆ ಕೇಂದ್ರ, ಬೈ ಟೂ ಜೂಸ್, ಹೆವೀ ಮಾತುಗಳು , ಮಿಂಚೆ ಸಂದೇಶ,ಕೆಲಸ ಹಿಡಿಯುವ ಒತ್ತಡ ಹೀಗೆ ಹಲವು ವಿಷಯಗಳು ವಿದ್ಯುತ ತರಹ ಸಂಚರಿಸಿಬಿಟ್ಟವು. ಮತ್ತೆ ಅವಳ ಪ್ರೊಫೈಲ್ ನೋಡೋದು ಅವಳ ಫೋಟೋ ಲೈಕ್ ಮಾಡೋದು. ಅವಳ ಪೋಸ್ಟಗಳಿಗೆ ಕಾಮೆಂಟ್ ಮಾಡೋದು ಎರಡು ಕಡೆಯಿಂದ ನಡೆದೇ ಇತ್ತು. ಹೀಗೆ ಸುಮಾರು ದಿವಸ ನಂತ್ರ ಮತ್ತೆ ಚಾಟ್ ಮಾಡುವ ಅವಕಾಶ. ಹಾಗೆ ಮತ್ತೆ ಫೋನ್ ನಂಬರ್ ಸಿಕ್ತು. ಆವಾಗೋ ಇವಾಗೋ ಸುಮ್ನೆ ಒಂದು ಫಾರ್ವರ್ಡೆಡ್ ಸಂದೇಶ್ ಕಳ್ಸೋದು ಇತ್ತು. ಹೀಗೆ ಸುಮಾರು ದಿನಗಳ ನಂತ್ರ ಸ್ವಲ್ಪ ಹೆಚ್ಚಿಗೆ ಚಾಟ್ ಮಾಡುವ ಸಂದರ್ಭ. ಹಳೆಯ ನೆನಪುಗಳು ಮತ್ತೆ ಹೂವಿನ ತರಹ ಒಂದೊಂದು ಒಂದುಂದು ಪಕಳೆಗಳು ಬಿಚ್ಚುವ ಹಾಗೆ ನಮ್ಮ ನೆನಪಿನ ಸಾಗರ ಓಪನ್ ಆಗ್ತಾ ಹೋಯಿತು. ಅದು ನೆನಪಿದೆ ಇದು ನೆನಪಿದೆ ಕೇಳುವಾಗು ಅದು ಹೇಗೆ ಮರೆಯಲಿ ಅದು ನನ್ನ ಜೀವನದ ಮೊದಲ  ಪತ್ರ .!! ನನ್ನ ಮನಸ್ಸಿಗೆ ಸುನಾಮಿ ಅಪ್ಪಳಿಸಿ ಸಮುದ್ರವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಅನುಭವ ನನಗಾಯಿತು!!

ಮತ್ತೆ ಮನಸ್ಸಿನಲ್ಲಿ ಪ್ರೀತಿ ಚಿಗುರಿದ ಅನುಭವ. ಪ್ರೀತಿ ನಿವೇದನಿಗೆ ಮತ್ತುಸ್ವೀಕರಿಸುವ ಸಮಯ ಅದಾಗಿರಲಿಲ್ಲ.  ಮುಖದಲಿ ಮಂದಹಾಸ ಮೂಡಿತ್ತು. ಮನಸ್ಸು ಇಲ್ಲದನ್ನೇ ಬೇಡುತ್ತೆ ಎಂದು ಮತ್ತೊಮ್ಮೆ ಮುಗಳ್ನಕ್ಕೆ!

Categories: Stories/ಕಥೆಗಳು

Tagged as: ,

Leave a Reply