Articles

ನರೇಂದ್ರ ಮೋದಿಯ ಸೆಂಟ್ರಲ್ ವಿಸ್ಟಾ ಯೋಜನೆಗೆ ಯಾಕಿಷ್ಟು ವಿರೋಧ?

By Bhimashankar Teli

ಬದಲಾವಣೆಯ ಪರ್ವ!

ಸುಮಾರು ೯೨ ವರ್ಷಗಳ ಹಿಂದೆ ನಮ್ಮನ್ನು ಆಳಿದ ಬ್ರಿಟಿಷರು ಕಟ್ಟಿದ ಸಂಸತ್ತು. ೧೯೩೦ರಲ್ಲಿ ಬ್ರಿಟಿಷರು ಎಂದರೆ ಎಡ್ನವಿನ್ ಲುಟೆನ್ಸ್ ಮತ್ತು ಹರ್ಬರ್ಟ್ ಬೇಕರ್ ಇಬ್ಬರು ವಾಷಿಂಗ್ಟನ್ ಕ್ಯಾಪಿಟಲ್ ಕಾಂಪ್ಲೆಕ್ಸ್ ಮತ್ತು ಪ್ಯಾರಿಸ್ ಚಾಂಪ್ಸ್ ಎಲಿಸೀಸ್ ಅಂದ ಚಂದವನ್ನು ನೋಡಿ ಕಟ್ಟಿದ ಕಟ್ಟಡ. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಅನೇಕ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ನಿರ್ಮಿಸಲು ಕೆಲವು ಕೊಳಕು ಮತ್ತು ಅವ್ಯವಸ್ಥೆಯ ನಿರ್ಮಾಣವನ್ನು ಆನುವಂಶಿಕವಾಗಿ ರಚನೆಗಳಿಗೆ ಸೇರಿಸಲಾಯಿತು. ಈ ಕಟ್ಟಡಗಳು ಭಾರತದ ಸಮಾಜವಾದಿ ಹಂತದ ಕೆಟ್ಟದ್ದನ್ನು ಪ್ರತಿನಿಧಿಸುತ್ತವೆ. ನಮ್ಮ ದೇಶದ ಸಂಸತ್ತು ಆದರೆ ನಮ್ಮ ದೇಶದ ಸಂಸ್ಕೃತಿ ಮತ್ತು ನಮ್ಮ ಇತಿಹಾಸದ ಕುರುಹು ಕಾಣಸಿಗುವದಿಲ್ಲ.

ಇಂದಿನ ಲೋಕಸಭೆ ದೃಶ್ಯ ಮಾಧ್ಯಮದಲ್ಲಿ ಎಲ್ಲರೂ ನೋಡಿರಬಹುದು, ಹೇಗೆ ನಮ್ಮ ಸಂಸದರು ಲೋಕಸಭೆಯಲ್ಲಿ ಕುಳಿತಿರುತ್ತಾರೆ. ಇಬ್ಬರ ಮಧ್ಯೆ ಸ್ವಲ್ಪವೂ ಸ್ಥಳವಿರುವದಿಲ್ಲ ಹಾಗೆ ಕುಳಿತಿಕೊಂಡಿರುತ್ತಾರೆ. ಇದರ ಅರ್ಥ ಕೋಟಿ ಕೋಟಿ ಖರ್ಚು ಮಾಡಿ ಚುನಾವಣೆ ಮಾಡಿ ಗೆದ್ದು ಬಂದು, ದೇಶಕ್ಕಾಗಿ ಕೆಲಸ ಮಾಡುವವರಿಗೆ ಕೂಡುವದಕ್ಕೆ ಸರಿಯಾದ ಸ್ಥಳವಿಲ್ಲ ಎಂದರೆ ನಂಬದ ಸ್ಥಿತಿ. ಇದಕ್ಕೆ ಕಾರಣ ಹಿಂದಿನ ಸರ್ಕಾರಗಳ ಮುಂದಾಲೋಚನೆ ಕೊರೆತೆ! ಅದಕ್ಕಾಗಿ ಸೆಂಟ್ರಲ್ ವಿಸ್ಟಾ ಯೋಜನೆ ಮೂಲಕ ಉಪ ರಾಷ್ಟ್ರಪತಿ ಮತ್ತು ಭಾರತದ ಪ್ರಧಾನ ಮಂತ್ರಿಗೆ ಸಮರ್ಪಕ ಮತ್ತು ಶಾಶ್ವತ ಸೌಲಭ್ಯಗಳನ್ನು ಒದಗಿಸುವುದು ಮುಖ್ಯ ಉದ್ದೇಶವಾಗಿದೆ. ಪ್ರಾಸಂಗಿಕವಾಗಿ, ಭಾರತದ ಏಕೈಕ ಪ್ರಮುಖ ಪ್ರಜಾಪ್ರಭುತ್ವವೆಂದರೆ ಅದು ಸರ್ಕಾರದ ಮುಖ್ಯಸ್ಥರಿಗೆ – ಭಾರತದ ಪ್ರಧಾನ ಮಂತ್ರಿಗೆ ಸಾಂಸ್ಥಿಕ ವಸತಿ-ಕಮ್-ಆಫೀಸ್-ಸ್ಥಳವನ್ನು ಹೊಂದಿಲ್ಲ. ಯುಎಸ್ – ವೈಟ್ ಹೌಸ್ – ಅಥವಾ ಬ್ರಿಟನ್ – 10 ಡೌನಿಂಗ್ ಸ್ಟ್ರೀಟ್ ಮತ್ತು ಇತರ ಪ್ರಜಾಪ್ರಭುತ್ವಗಳ ವಿಷಯವನ್ನು ನೋಡಿದರೆ ನಮ್ಮ ದೇಶದ ಸದ್ಯದ ಸ್ಥಿತಿ ಅಷ್ಟೇನೂ ಚೆನಾಗಿಲ್ಲ.

ಹೊಸ ಸಂಸತ್ತಿನ ವಿಶೇಷತೆ

ಹೊಸ ಲೋಕಸಭೆ ಒಟ್ಟು ಹೊಸ ಸಾಮರ್ಥ್ಯ ಕ್ರಮವಾಗಿ 888 ಸ್ಥಾನಗಳು ಮತ್ತು 384 ಸ್ಥಾನಗಳು. ಸಂಸತ್ತಿನ ಜಂಟಿ ಅಧಿವೇಶನಗಳನ್ನು ನಡೆಸಲು ಹೊಸ ಲೋಕಸಭಾ ಸಭಾಂಗಣವು 1272 ಸ್ಥಾನಗಳವರೆಗೆ ಹೆಚ್ಚುವರಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೊಸ ಸಂಸತ್ತಿನ ಕಟ್ಟಡದ ವಾಸ್ತುಶಿಲ್ಪ ಮತ್ತು ಸೌಂದರ್ಯಶಾಸ್ತ್ರವು ಪ್ರಸ್ತುತ ಸಂಸತ್ತಿನ ಕಟ್ಟಡದ ಸಂತೋಷದ ಸಂಗಮವಾಗಲಿದೆ ಮತ್ತು ಭಾರತದ ಶಾಸ್ತ್ರೀಯ, ಜಾನಪದ ಮತ್ತು ಬುಡಕಟ್ಟು ಕಲೆ ಮತ್ತು ಕರಕುಶಲ ವಸ್ತುಗಳು ನೋಡುವದಕ್ಕೆ ಸಿಗಲಿವೆ. 10 ಕಟ್ಟಡಗಳನ್ನು ಒಳಗೊಂಡ ಸಾಮಾನ್ಯ ಕೇಂದ್ರ ಸಚಿವಾಲಯವನ್ನು (ಸಿಸಿಎಸ್) ನಿರ್ಮಿಸಲಾಗುವುದು ಇದರಿಂದ ಸಚಿವಾಲಯಗಳ ನಡುವೆ ತಡೆರಹಿತ ಕೆಲಸಗಳು ನಡೆಯುತ್ತವೆ. ಹೊಸ ಸೆಂಟ್ರಲ್ ವಿಸ್ಟಾ ಯೋಜನೆಯು ಭಾರತದ ಉಪ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗೆ ಸಾಂಸ್ಥಿಕ, ಸಂಪೂರ್ಣ ಕ್ರಿಯಾತ್ಮಕ ಮತ್ತು ಶಾಶ್ವತ ಸ್ಥಳವನ್ನು ಸೃಷ್ಟಿಸುತ್ತದೆ. ಎಲ್ಲಾ ಸಂಸದರು ಹೊಸ ಕಟ್ಟಡದಲ್ಲಿ ಪ್ರತ್ಯೇಕ ಕಚೇರಿಗಳನ್ನು ಹೊಂದಿರುತ್ತಾರೆ. ಸಂಸದರ ಸಂಖ್ಯೆಯಲ್ಲಿ ಭವಿಷ್ಯದ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಕೋಣೆಗಳ ಸಾಮರ್ಥ್ಯವನ್ನು ಒದಗಿಸಲಾಗಿದೆ. ಸಂಸತ್ತಿನ ಕಾರ್ಯಕ್ರಮಗಳಿಗೆ ಹೆಚ್ಚು ಕ್ರಿಯಾತ್ಮಕ ಸ್ಥಳಗಳನ್ನು ಒದಗಿಸಲು ಈಗಿರುವ ಪಾರ್ಲಿಮೆಂಟ್ ಹೌಸ್ ಕಟ್ಟಡವನ್ನು ಮರುಹೊಂದಿಸುವ ಮೂಲಕ ಬಳಕೆಯಲ್ಲಿ ಮುಂದುವರಿಯುತ್ತದೆ.

Click and purchase Jio dongle Battery

ಹೊಸ ಭಾರತದ ಕಡೆ ಇರಲಿ ಭಾರತೀಯರ ಲಕ್ಷ್ಯ!

ಹೊಸ ಸಂಸತ್ತು ಮತ್ತು ಸೆಂಟ್ರಲ್ ವಿಸ್ಟಾ ಕಟ್ಟಲು ೨೦ ಸಾವಿರ ಕೋಟಿ ಬೇಕು ಮತ್ತು ಇದನ್ನು ೨೦೨೪ಕ್ಕೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರ್ಕಾರದ ಯೋಜನೆ. ಇಷ್ಟೊಂದು ದುಡ್ಡು ಯಾಕೆ ವ್ಯಯ ಮಾಡುತ್ತೀರಿ ? ಅದೇ ದುಡ್ಡನ್ನು ಬೇರೆ ಕೆಲಸಕ್ಕೆ ವಿನಿಯೋಗಿಸಿಕೊಳ್ಳಿ ಎಂದು ಕೆಲವರ ವಾದ. ನಿಮಗೆ ಗೊತ್ತರಲಿ ನಮ್ಮ ದೇಶದ ೨೦೨೦-೨೧ ರ ಬಜೆಟ್ ೩೪ ಲಕ್ಷ್ಯ ಕೋಟಿ. ಹಂತ ಹಂತವಾಗಿ ೨೦ ಸಾವಿರ ಕೋಟಿ ನಮ್ಮ ದೇಶಕ್ಕೆ ಶಾಶ್ವತವಾದ ಕಟ್ಟಡಕ್ಕೆ ಬೇಕಾಗಿದೆ ಅದೇನು ಒಂದು ವರ್ಷದಲ್ಲಿ ಖರ್ಚು ಮಾಡುವದಿಲ್ಲ.

ನಮ್ಮಲ್ಲಿ ಎಂದರೆ ಭಾರತೀಯರಲ್ಲಿ ವಿಚಿತ್ರವಾದ ಗುಣ ಇದೆ . ಏನು ಎಂದರೆ ಕೂಲಂಕುಷವಾಗಿ ಯಾವದೇ ಯೋಜನೆ ಮತ್ತು ಕೆಲಸವನ್ನು ನೋಡದೆ ವಿರೋಧ ಮಾಡಬೇಕು ಎಂಬ ಒಂದೇ ಒಂದು ಕಾರಣಕ್ಕೆ ಅದು ಎಷ್ಟೇ ಒಳ್ಳೆಯ ಯೋಜನೆ ಇದ್ದರೂ ಅದನ್ನು ವಿರೋಧಿಸುವ ಅಭ್ಯಾಸ ಇದೆ. ಇದು ಎಲ್ಲ ಪಕ್ಷಗಳಲ್ಲಿ ಉಂಟು. ಹಿಂದೆ ಆಧಾರ ಕಾರ್ಡ್ ಕಾಂಗ್ರೇಸ್ ಆರಂಬಿಸಿದಾಗ ಬಿಜೆಪಿ ವಿರೋಧ ಮಾಡಿತ್ತು ನಮಗೆ ನೆನಪಿದೆ. ಅದೊಂದು ಒಳ್ಳೆಯ ಯೋಜನೆಯಾಗಿತ್ತು ಆದರೆ ಅದರಲ್ಲಿ ಸ್ವಲ್ಪ ಗೊಂದಲಗಳು ಇದ್ದವು. ಗೊಂದಲಗಳನ್ನು ಸರಿ ಪಡಿಸಿ ಎಂದು ವಿರೋಧ ಮಾಡುವ ಬದಲಿಗೆ ಆಧಾರ ಕಾರ್ಡ್ ಯೋಜನೆ ಸರಿಯಿಲ್ಲ ಎಂದು ಪ್ರತಿಭಟನೆ ಮಾಡಿದವರು ಮುಂದೆ ತಾವು ಸರ್ಕಾರ ರಚನೆ ಮಾಡಿ ಅದರಲ್ಲಿದ್ದ ಗೊಂದಲಗಳನ್ನು ಪರಿಹರಿಸಿ ಅದನ್ನೇ ಮುಂದುವರೆಸಿಕೊಂಡು ಹೋಗಿದ್ದರು. ಕಾಂಗ್ರೇಸ್ ಜಿ ಎಸ್ ಟಿ ಲಾಗು ಮಾಡಕ್ಕೆ ಹೊರಟಾಗ ಸಹಿತ ಹೀಗೆ ವಿರೋಧ ಆದರೆ ಅದನ್ನು ಬಿಜೆಪಿ ಅಧಿಕಾರಕ್ಕೆ ಬಂದಾಗ ಲಾಗು ಮಾಡಿದರು! ಹೀಗೆ ಅನೇಕ ಉಧಾಹರಣೆಗಳನ್ನು ಕೊಡಬಹುದು. ಅಂದು ಬಿಜೆಪಿ ಮಾಡುತ್ತಿದ್ದ ವಿರೋಧಗಳನ್ನು ಇಂದು ಕಾಂಗ್ರೇಸ್ ಮತ್ತು ಅದರ ಮಿತ್ರ ಪಕ್ಷಗಳು ಮಾಡುತ್ತಿವೆ. ಎರಡು ಪಕ್ಷಗಳ ಸಿದ್ದಾಂತ ಬೇರೆ ಬೇರೆ ಇದ್ದರೂ ಅಧಿಕಾರ ಬೇಕಿರುವುದು ಜನರ ಮತ್ತು ದೇಶದ ಅಭಿವೃದ್ಧಿಗೆ ಎನ್ನುವುದು ಮರೆಯಬಾರದು. ಅಧಿಕಾರಕ್ಕಾಗಿ ಜನರ ಮನಸ್ಸಿನ ಜೊತೆ ಆಟವಾಡುವದನ್ನು ಜನ ಇಂದು ಗುರುತಿಸುತ್ತಿದ್ದಾರೆ. ಅದಕ್ಕೆ ಒಂದು ಪಕ್ಷ ಮೇಲೆ ಎದ್ದೇಳದ ಸ್ಥಿತಿ ತಲುಪಿದೆ.

ಸದ್ಯದ ಮೋದಿ ಸರ್ಕಾರ ಹೊಸ ಸಂಸತ್ತು ಕಟ್ಟಬೇಕು ಎಂದು ಯೋಜನೆಗೆ ಅನುಮತಿ ಕೊಟ್ಟ ಕ್ಷಣ, ವಿರೋಧಿಗಳು ದೆಹಲಿ ಉಚ್ಚ ನ್ಯಾಯಾಲಯ ಕಟ್ಟೆ ಹತ್ತಿ ಇದನ್ನು ನಿಲ್ಲಿಸುವ ಪ್ರಯತ್ನ ಮಾಡಿದರು ಮತ್ತು ಇದರ ದುಡ್ಡುನ್ನು ಬೇರೆಯದಕ್ಕೆ ವಿನಿಯೋಗಿಸಬೇಕು ಎಂದು ಕೇಳಿದರು. ಆದರೆ ಸರ್ಕಾರ ಕೊಟ್ಟ ಸಮರ್ಪಕ ಉತ್ತರಗಳನ್ನು ದೆಹಲಿಯ ಉಚ್ಚ ನ್ಯಾಯಾಲಯ ಗಣನೆಗೆ ತಗೆದುಕೊಂಡು ಸರ್ಕಾರಕ್ಕೆ ಹಸಿರು ನಿಶಾನೆ ಕೊಟ್ಟಿದೆ. ಹೊಸ ಭಾರತದ ಕನಸು ಕಾಣುತ್ತ ಒಂದೊಂದು ಹೆಜ್ಜೆ ಇಡುತ್ತಿರುವ ದೇಶಕ್ಕೆ ಮುಂದಿನ ದಿನಗಲ್ಲಿ ದೇಶದಲ್ಲಿ ಒಳ್ಳೆಯ ಸಂಸತ್ತು ತಲೆ ಎತ್ತಲಿದೆ.

Categories: Articles

Tagged as: , ,

Leave a Reply