ಬೇರು ಮತ್ತು ಬಳ್ಳಿ ಇಬ್ಬರೂ ಒಂದೇ ಮನೆಯ ಮಾಲೀಕನ ಆಳುಗಳು . ಬೇರು ತಾಯಿಯಾದರೆ ಬಳ್ಳಿ ಮಗಳಾಗಿದ್ದಳು. ಅವರ ಇಬ್ಬರ ಜೀವನ ಮಾಲೀಕನಿಗಾಗಿ ಮೀಸಲು. ಒಡೆಯನಿಗೆ ಇಬ್ಬರ ಮೇಲು ಅತಿ ಪ್ರೀತಿ! ಬಳ್ಳಿ ಬರುವದಕಿಂತಲೂ ಮುಂಚೆ ಬೇರು ಮಾಲೀಕನ ಮನೆಯಲ್ಲೇ ಇದ್ದವಳು. ಅವಳು ತನ್ನ ಜೀವನದ ಸಂತೋಷದ ಜೊತೆ ಒಡೆಯನ ಮನೆಗೆ ಕಾಮಧೇನಾಗಿದ್ದಳು. ಬಳ್ಳಿ ಚಿಕ್ಕವಳು, ಅವಳು ತಾಯಿಯ ಮಗ್ಗುಲಲ್ಲಿ ನಲಿದಾಡುವ ಚಿಕ್ಕ ಜೀವ. ಅದಕ್ಕೆ ಯಾವದು ಹಂಗು ಇರದೇ ತನ್ನ ಲೋಕದಲ್ಲಿ ಎಲ್ಲೆಂದರಲ್ಲಿ ಜಿಗಿಯುತ್ತಾ ,ಕುಣಿಯುತ್ತ ಇರುತ್ತಿತ್ತು. ಇದಕ್ಕೂ ಮಾಲೀಕನ ಕಂಡರೆ ಅಷ್ಟೇ ಖುಷಿ. ಬೇರು ಒಡೆಯನಿಲ್ಲದೆ ಇದ್ದರೇ ಊಟ ಮತ್ತು ನೀರು ಕುಡಿಯದ ಆಸಾಮಿ. ಒಂದೊಂದು ಬಾರಿ ಬೇರುವಿನ ಕೂಗು ಅರ್ಥವಾಗದೆ ಇರುತ್ತಿತ್ತು. ಅದೆಲ್ಲ ಹತ್ತಿರ ಕಂಡವರಿಗೆ ಗೊತ್ತಿರುತ್ತಿತ್ತು. ಬೇರು ತನ್ನ ಬಳಿ ಇದ್ದ ಅಮೃತವನ್ನು ಬಳ್ಳಿಗೆ ಕೊಟ್ಟ ಮೇಲೇನೆ ಬೇರೆಯವರ ಪಾಲು. ಮಾಲಿಕನು ದಣಿದು ಬೇಸತ್ತಾಗ ತನ್ನ ಏಕಾಂತ ಸಮಯವನ್ನು ಬೇರುವಿನ ಜೊತೆ ಇರುತ್ತಿದ್ದ .ಸಾವಕಾಶವಾಗಿ ಮೈ ಮೇಲೆ ಮತ್ತು ತಲೆ ಮೇಲೆ ಕೈ ಆಡಿಸುವದು. ಬೇರಿವಿಗೂ ಅದು ಬೇಕಾಗಿತ್ತು. ಬೇರು ಸಿಕ್ಕಿದ್ದೇ ಒಂದು ದೊಡ್ಡ ಕಥೆ.

ನೆಲ್ಲಿಕಾಯಿಯ ಬೆಟ್ಟ ನೋಡೋದು ಒಂದು ಹಬ್ಬ , ಮೊದ ಮೊದಲು ಅಲ್ಲಿ ಹೋಗುವದಕ್ಕೆ ಹೆದರಿದವರು ಮುಂದೆ ಅದರ ಸೌಂದರ್ಯ ನೋಡಲೇಬೇಕು ಎಂದು ಹೋಗದ ಜನ ಯಾರು ಇರಲಿಕ್ಕಿಲ್ಲ. ಮತ್ತು ಅಲ್ಲಿ ಹುಲ್ಲು ತುಂಬಾ ಹಸಿರಾಗಿದ್ದು, ಗೋವುಗಳಿಗೆ ದೇವರೇ ಹೇಳಿ ಮಾಡಿಸಿದ್ದ ಬೆಟ್ಟ. ಅಲ್ಲಿ ಸುಂದರವಾದ ಮೈ ಜುಮ್ಮೆನ್ನುವ ಜಲಪಾತಗಳು ಇವೆ. ಮಳೆಗಾಲದಲ್ಲಿ ತುಂತುರು ಮಳೆ ಜಿನಿಗುವಾಗ ಅಲ್ಲಿಗೆ ಹೋದವರು ಧನ್ಯರು. ಹೇರಳವಾಗಿ ಆಮ್ಲಜನಿಕ ಸಿಗುವ ಸ್ಥಳ. ನೆಲ್ಲಿಕಾಯಿಗಳು ಹೆಚ್ಚಿಗೆ ಇರುವ ಕಾರಣದಿಂದ ನೆಲ್ಲಿಕಾಯಿ ಬೆಟ್ಟ, ನೆಲ್ಲಿ ಬೆಟ್ಟ ಎಂದು ಹೆಸರಿತ್ತು. ಕೂದಲುಗಳು ಉದರವುದನ್ನು ನೆಲ್ಲಿಕಾಯಿತಿನ್ನುವದರಿಂದ ತಪ್ಪಿಸಬಹುದು ಎಂದು ಎಷ್ಟೋ ಕೂದಲು ಹೋದವರು ಬರುತ್ತಿದ್ದ ಜಾಗ. ನೆಲ್ಲಿಕಾಯಿ ಕೂದಲು ಉದರುವದನ್ನು ನಿಲ್ಲಿಸುತ್ತೆ ಹೊರೆತು ಕೂದುಲು ಬರಿಸುವದಿಲ್ಲ ಅನ್ನೋದು ಅವರಿಗೆ ಗೊತ್ತಿತ್ತೋ ಇಲ್ಲೋ ! ಒಂದು ಸಂಜೆಯ ಸಮಯ ಬೇರು ಮತ್ತು ಬಳ್ಳಿ ಮಾಲೀಕನ ಆಳು(ಗೋಪಾಲ) ಜೊತೆ ಹೋದ ಸಂದರ್ಭ. ಇಬ್ಬರು ಹೆಣ್ಣು ಅಂತ ಗೋಪಾಲ ಅವರ ಜೊತೆ ಹೋಗಿದ್ದ. ಗಂಡು ಇದ್ದರು ಅವನು ಹೋಗಿರುತ್ತಿದ್ದರೇನೋ? ಇಬ್ಬರು ನೋಡುತ್ತಾ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಇದ್ದ ಸಮಯ. ಗೋಪಾಲ ಅಲ್ಲೇ ಎಲ್ಲೊ ಅವನು ನೋಡುತ್ತಾ ಇದ್ದಾಗ. ಬೇರು ಮತ್ತು ಬಳ್ಳಿ ಸ್ವಲ್ಪ ಮುಂದೆ ಹೋಗಿ, ಕಾಡಲ್ಲಿ ಪೊರೆದೆ ಮದ್ಯ ಇದ್ದ ಹುಲಿಯನ್ನು ಗಮನಿಸಿದ ಬಳ್ಳಿ, ತಾಯಿಗೆ ತನ್ನ ಶಬ್ದದ ಮೂಲಕ ಬೇರು ವಿಗೆ ಸಿಗ್ನಲ್ ಕೊಟ್ಟ ನಂತರ ಅಲ್ಲಿಂದ ಪಾರಾಗಿದ್ದು ಮರು ಜನ್ಮ!! ಅಂದು ಹೋಗಿ ಕಣ್ಣು ತುಂಬಾ ನೋಡಿ ಬಂದದ್ದು ಮರೆಯಲಾಗದ ನೆನೆಪು. ಮನಮೋಹಕ ದೃಶ್ಯ ಎಂತವರನ್ನು ಮನಸೋಲುವಂತೆ ಮಾಡುವ ತಾಕತ್ತು ನೆಲ್ಲಿ ಬೆಟ್ಟಕ್ಕೆ ಇತ್ತು. ವನಸ್ಪತಿಗಳು ಹೇರಳವಾಗಿ ದೊರೆಯುವ ಸಂಜೀವಿನಿ ಆಗಿದ್ದ ಬೆಟ್ಟ, ಕೆಲವು ವರ್ಷಗಳ ನಂತರ ಬೆಟ್ಟದ ಹಸಿರು ಮಾಯವಾಗಿತ್ತು , ಜನರ ಸುಳಿವು ಇರಲಿಲ್ಲ, ಎಲ್ಲವೂ ಗಣಿಗಾರಿಕೆಯ ಹೊಡೆತಕ್ಕೆ ಪ್ರಕೃತಿಯ ಸೌಂದರ್ಯ ಕಳೆಗುಂದಿ ಬೆಟ್ಟ ಬರಿದಾಗಿತ್ತು. ಬೆಳ್ಳಿ ಮತ್ತು ಬೇರುವಿಗೆ ಅದೊಂದು ಬೆಟ್ಟ ಇತ್ತು ಅನ್ನೋದು ಮಾತ್ರ ಮನದಲ್ಲಿ ಉಳಿದಿತ್ತು.
ಭೀಮನ ಅಮವ್ಯಾಸೆ ಒಡೆಯನ ಊರಿನ ದೊಡ್ಡ ಜಾತ್ರೆ. ಜಾತ್ರೆಯ ತುಂಬೆಲ್ಲಾ ಜನವೋ ಜನ. ವರ್ಷಕೊಮ್ಮೆ ಬರುವ ಜಾತ್ರೆಗೆ ಮನೆಯ ಹೆಂಗಳೆಯರು ಊರಿಗೆ ಬರುವ ವಾಡಿಕೆ. ಸುತ್ತು ಮುತ್ತಿನ ಊರಿನ ಜನರು ಬಂದು ಜಾತ್ರೆಯಲ್ಲಿ ಭಾಗಿಯಾಗಿ ಸಂತೋಷ ಪಡುತ್ತಿದ್ದರು. ಮತ್ತು ಇಲ್ಲಿನ ವಿಶೇಷ ಏನಂದ್ರೆ ಇಲ್ಲಿ ಒಂದು ದಿವಸ ಹೆಂಗಸರ ಜಾತ್ರೆ ಅವತ್ತು ಪುರುಷರು ಬರುವಂತರಿಲಿಲ್ಲ. ಅವತ್ತು ಹೆಂಗಸರ ರಾಜ್ಯಭಾರ. ಅದೊಂದು ಆ ಊರಿನ ಕೀರ್ತಿ. ಅದರ ಜೊತೆ ಅಲ್ಲಿ ದನಗಳ ಜಾತ್ರೆ ಇತ್ತು. ಗೋವುಗಳು ಮಾರುವುದು ಮತ್ತು ಕೊಳ್ಳುವುದು ಅಲ್ಲಿನ ಮತ್ತೊಂದು ವಿಶೇಷ. ಮೂರೂ ದಿನದ ಇದ್ದ ಜಾತ್ರೆ ಕೊನೆಗೊಳ್ಳುವಾಗ ಊರಿನ ಪ್ರಮುಖರಿಗೆ ವಿಶೇಷವಾದ ಕಾಣಿಕೆ ಕೊಡುವ ಪದ್ಧತಿ ಇತ್ತು. ಅವತ್ತು ಕಾಣಿಕೆ ರೂಪವಾಗಿ ಬಂದ ಬೇರುವನ್ನು ಮನೆಗೆ ತಂದ ಮಾಲೀಕ ಬೇರುವಿನ ಆಗಮನದಿಂದ ಹೆಂಡತಿಯನ್ನೇ ಕಡೆಗಣಿಸಿದ್ದ. ಹಲವೇ ವರ್ಷಗಳಲ್ಲೇ ಬೇರು ಗರ್ಭಿಣಿಯಾಗಿ ಹೆಣ್ಣು ಜೀವಿಗೆ ಜನ್ಮ ನೀಡಿದ್ದಳು. ಅದಕ್ಕೆ ಬಳ್ಳಿ ಎಂದು ಹೆಸರಿಟ್ಟು ಬೇರುವಿನ ಅಮೃತ ಕುಡಿದು ಕುಪ್ಪಳಿಸಿದ ಬಳ್ಳಿ . ಆದರೆ ಬಳ್ಳಿಯ ತಂದೆ ಯಾರೆಂದು ಮಾಲಿಕನಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿರದ ವಿಷಯ. !!!
ಮಳೆಗಾಲ ಬಂದರೆ ಬೇರುವಿಗೆ ದೊಡ್ಡ ಚಿಂತೆ. ಒಡೆಯನ ಹಳೆ ಮನೆ ಮಳೆಗಾಲದಲ್ಲಿ ಮಳೆಗೆ ಸೋರುತ್ತಿತ್ತು ಅದು ಇಬ್ಬರ ನಿದ್ದೆಗೆ ಭಂಗ ತರ್ತಿತ್ತು. ಅದಕ್ಕೆ ಒಂದು ಕಡೆ ಸಂತೋಷ ಇದ್ದರೇ ಇನ್ನೊಂದು ಕಡೆ ಮಳೆಗೆ ಎಲ್ಲಿ ಮನೆ ಬೀಳುತ್ತೆ ಅಂತ ಭಯ. ಮಳೆಗಾಲ ಒಡೆಯನಿಗೆ ತೋಟ ಬೆಳೆದು ಪಸಲು ಬಂದು ದುಡ್ಡು ಕೈ ಸೇರಿದಾಗ ಬೇರು ವಿಗೆ ತಿಂಡಿಯ ಜೊತೆ ಸ್ಪೆಷಲ್ ಹಿಂಡಿಯು !!! ಮಳೆಗಾಲ ಬಂದಾಗ ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸುತ್ತಿರುವ ಭೂತಾಯಿ. ನಾವೆಲ್ಲರೂ ಹೊರೆಗೆ ತಿರುಗಾಡುವ ಸಮಯ. ಅಲ್ಲಿ ಬೇರೆಯವರು ಬರಿತ್ತಿದ್ದರು . ಯಾವಾಗಲು ಒಂಟಿಯಾಗಿ ಇರುತ್ತಿದ್ದ ನಮಗೆ ಮಳೆಗಾಲದಲ್ಲಿ ಎಲ್ಲರೂ ಭೂತಾಯಿ ಕೊಟ್ಟ ಕೊಡುಗೆಯನ್ನು ಸ್ವೀಕರಿಸುವ ಸಲುವಾಗಿ ಹೊರೆಗೆ ಬಂದಾಗ ನಮ್ಮ ಆಟೋಪಗಳು ಹೇಳತೀರದು. ಅಲ್ಲೇ ಜುಳು ಜುಳು ಹರಿಯುತ್ತಿದ್ದ ನದಿಗೆ ಎಲ್ಲರ ಜೊತೆ ನೀರಿಗೆ ಇಳಿದು ಸಂಭ್ರಮಿಸಿದ್ದು ಇದೆ. ಮಳೆಗಾಲ ರೈತನ ಮುಖದಲ್ಲಿ ಅಷ್ಟೇ ಸಂತೋಷ ತರುವದಿಲ್ಲ , ಎಲ್ಲ ಪ್ರಾಣಿ ಪಕ್ಷಿಗಳು, ಅದರಲ್ಲಿ ವಿಶೇಷವಾಗಿ ಬೇಸಿಗೆ ಕಳೆದು ಮಳೆಗಾಲ ಪ್ರಾರಂಭ ವಾದರೆ ದನಕರುಗಳಿಗೆ ಹಬ್ಬ. ಇದು ಪ್ರತಿ ವರ್ಷ ಬರುವುದು , ಮತ್ತೆ ಮೆಳೆಗಾಲಕ್ಕೆ ಕಾಯೋದು ಇದ್ದೇ ಇತ್ತು. ಹೀಗೆ ಸುಮಾರು ಐದಾರು ವರ್ಷಗಳು ಕಳೆದದ್ದು ಗೊತ್ತೇ ಆಗಿರಲಿಲ್ಲ. ಬಳ್ಳಿ ವಯಸ್ಸಿಗೆ ಬಂದಾಗಿತ್ತು. ಅದರ ಕಿತಾಪತಿ,ಚಕ್ಕಂದ ಹಾಕೋದು ನೋಡಿ ಮಾಲೀಕನ ಕಣ್ಣು ಅದರ ಮೇಲೆ ಬಿತ್ತು. ಬೇರು ಇದರ ಬಗ್ಗೆ ಹೇಳಿದಿರು ಅವನಿಗೆ ಅರ್ಥವಾಗದೆ ಹೋಗಿತ್ತು. ಆದರೂ ಕಡೆಗೂ ಇವಳ ಚಕ್ಕಂದಗಳು ಒಡೆಯನಿಗೆ ಗೊತ್ತಾಗಿದ್ದು ಬೇರು ನಿಟ್ಟುಸಿರು ಬಿಟ್ಟಿದ್ದಳು. ಮುಂದೆ ಕೆಲವು ತಿಂಗಳು ಕಳೆದಾಗ ಬಳ್ಳಿಯು ತನ್ನ ಯೌವ್ವನದಲ್ಲಿ ಎಲ್ಲಿರಗೂ ಆದಂಗೆ ಅವಳು ಗರ್ಭಿಣಿ ಆದಳು. ಬೇರುವಿಗೆ ಬಳ್ಳಿ ಕೊನೆಯ ಮಗಳಾಗಿದ್ದಳು. ಮೊದಲು ಎಷ್ಟು ಮಕ್ಕಳು ಮತ್ತು ಏನು ಮಾಡುತ್ತಾರೆ ಎನ್ನೋದು ಅವಳಿಗೂ ಗೊತ್ತಿಲ್ಲಾ? ಒಡೆಯನ ಪ್ರೀತಿ ಬಳ್ಳಿಯ ಕಡೆ ತಿರುಗಿತ್ತು. ಬೇರುವಿಗೆ ವಯಸ್ಸಾಗಿತ್ತು. ಒಂದು ಕಡೆ ನಾನು ಅಮೃತ ಕೊಡದ ನನಗೆ ಒಡೆಯನ ಪ್ರೀತಿಯಿಂದ ವಂಚಿತ ಎಂದು ಬೇಸರು ಇದ್ದರೂ ಇದು ಸ್ವಾಭಾವಿಕ ಮತ್ತು ಬಳ್ಳಿ ಅವಳ ಮಗಳೇ ಆಗಿದ್ದರಿಂದ ಅವಳು ನೋವನ್ನು ತೊಡೆದು ಹಾಕಿದ್ದಳು. ಇಲ್ಲಿ ಇನ್ನೊಂದು ವಿಚಾರ. ಬಳ್ಳಿಯ ಮುಂದೆ ಬರುವ ಜೀವಿಗೆ ತಂದೆ ಯಾರು? ಅದು ಗೊತ್ತಿರೋದು ಒಡೆಯನಿಗೆ ಮಾತ್ರ!!
ಇಲ್ಲಿಯವರೆಗೆ ನಾನು ನನ್ನದೇ ರೀತಿಯಲ್ಲಿ ಪ್ರಕೃತಿ ಸೌಂದರ್ಯ , ಅದರ ಪ್ರಾಮುಖ್ಯತೆ ಬಗ್ಗೆ ಸ್ವಲ್ಪ ಮೆಲಕು ಹಾಕಿದ್ದೇನೆ. ಬೆಟ್ಟ ,ಗುಡ್ಡ ಹಸಿರು ಭೂತಾಯಿ ನೋಡುವದೆಂದರೆ ನಿಮ್ಮಂತೆ ನನಗೂ ಖುಷಿ. ಪ್ರತಿಯೊಬ್ಬರ ಜೀವನದಲ್ಲಿ ಮಳೆಗಾಲ ಮುಖ್ಯ . ಪ್ರಕೃತಿ ಉಳಿಸಿದರೆ ಮಳೆಗಾಲಕ್ಕೆ ಕೊರೆತೆ ಇಲ್ಲ ಅನಿಸುತ್ತೆ. ನೀರಿನ ಸದ್ದು ಮಳೆಗಾಲದಲ್ಲಿ ಬರುವದೇ ಹೊರೆತು ಬೇಸಿಗೆಯಲ್ಲಿ ಅಲ್ಲ. ಮತ್ತೆ ನಮ್ಮ ಹಳ್ಳಿಯ ಜಾತ್ರೆಗಳು ನೋಡಲು ಮತ್ತು ಅನುಭವಿಸಲು ಬಲು ಚೆಂದ. ಇನ್ನು ಚಳಿಗಾಲ ಮುಗಿದು ಬೇಸಿಗೆ ಕಾಲ ಪ್ರಾರಂಭಿಸಿ ಮುಗಿಸುವ ಹೊತ್ತಿಗೆ ಕಥೆ ಕೊನೆಗೊಳ್ಳುತ್ತೆ !!
ಅದಕ್ಕಾಗಿ ನಿಮಗೊಂದು ಪ್ರಶ್ನೆ? ಯಾರು ಬೇರುವಿನ ತಂದೆ? ಅದಕ್ಕಿಂತ ಮುಂಚೆ ,ಬೇರು ಯಾರು? ಬಳ್ಳಿ ಬೇರುವಿನ ಮಗಳೇ ಆಗಿದ್ದು ನಿಜ ಆದರೆ ಮಳೆಗಾಲದಲ್ಲಿ ಬೆಟ್ಟಕ್ಕೆ ಮನೆಯ ಗೋಪಾಲನ ಜೊತೆ ಯಾಕೆ ಹೋಗುತ್ತಿದ್ದರು? ಕಥೆ ಸಾರಾಂಶ ಗೊತ್ತಾಗಿದ್ದರೆ ನೀವು ಖಂಡಿತ ವಿಷಯಗಳನ್ನು ತುಲನೆ ಮಾಡಿರುತ್ತೀರಿ ಅಂತ ಅರ್ಥ!! ಅರ್ಥವಾಗದೆ ಇದ್ದರೆ ಬಂದದನ್ನು ಬಂದ ಹಾಗೆ ಸ್ವೀಕರಿಸುವ ಮನೋಭಾವ ನಿಮ್ಮದು.
ಚಳಿಗಾಲದಲ್ಲಿ ಕೋಳಿ ಬೇಗ ಕೂಗಿದರೆ ಸೂರ್ಯ ತನ್ನ ತಾಯಿಯ ಮಡಿಲು ಸೇರುವುದು ಬಲು ಬೇಗ. ಫಸಲುಗಳು ಒಂದೊಂದು ಆಗಿ ಮನೆ ಸೇರುವ ಸಮಯ. ಚಳಿಗಾಲ ಮುಗಿದು ಬೇಸಿಗೆ ಕಾಲ ಪ್ರಾರಂಬ ವಾಗುವ ಮುಂಚೆ ಭೂಮಿ ಬರಿದಾಗಿರುತ್ತಿತು. ಬೇಸಿಗೆ ಕಾಲದಲ್ಲಿ ಮನೆಯವರ ಖರ್ಚು ವೆಚ್ಚದ ಜೊತೆಗೆ ನಮ್ಮ ವೆಚ್ಚ ದೂಗಿಸುವದು ಒಂದು ಸವಾಲು. ಆದರೂ ಯಾವದೇ ಕೊರತೆ ಇಲ್ಲದೆ ನೋಡಿಕೊಂಡ ಸಾಹುಕಾರನ ದಿನಗಳು. ಸತತ ಮೂರೂ ವರ್ಷ ಬರಗಾಲಕ್ಕೆ ತುತ್ತಾದಾಗ ಒಡೆಯನಿಗೆ ದಾರಿ ತೋಚದೆ, ಇದ್ದ ದುಡ್ಡು , ಶೇಖರಿಸಿಟ್ಟ ಆಹಾರ ಪದಾರ್ಥಗಳು ಖಾಲಿಯಾಗುವ ದಿನಗಳು. ಆದರೂ ಒಡೆಯ ನಮ್ಮೆಲ್ಲರನ್ನೂ ದಡ ಸೇರಿಸಿದ ಸೇನಾನಿ. ತಿನ್ನದೇ ಇದ್ದ ಆಹಾರಗಳು ನಾವು ಬರಗಾಲದಲ್ಲಿ ತಿಂದಿದ್ದು ಇದೆ. ಮುಂದೆ ದೇವರ ಕೃಪೆಯಿಂದ ಮಳೆಯಾಗಿ ಎಲ್ಲವೂ ಸುಸೂತ್ರವಾಗಿ ಇದ್ದಾಗ ಒಂದು ದಿವಸ ಒಡೆಯ ಒಂದು ನಿರ್ಧಾರಕ್ಕೆ ಬಂದು ಬಿಡುತ್ತಾನೆ. ಅದು ಎಂತ ನಿರ್ದಾರ ಎಂದರೆ ಕಳೆದ ಹತ್ತಾರು ವರ್ಷಗಳಿಂದ ಒಡೆಯನಿಗೆ ಅಮೃತದಂಥಾ ಹಾಲು ಕೊಟ್ಟು ಇಡೀ ಮನೆಯ ಮಕ್ಕಳಿಗೆ ಉಣಿಸಿದ್ದು ಅಲ್ಲದೆ ಹೆಚ್ಚಾದ ಹಾಲು ಮಾರಿ ಸಂಪಾಧನೆಗೆ ಕೊಂಡಿ ಆಗಿದ್ದ ಬೇರು ವಿಗೆ ಮನೆಯಿಂದ ಹೊರಹಾಕುವದು.
ಕಾಮದೇನು ಹಸು ,ಅದೇ ಬೇರು, ನಲಿದಾಡುವ ಚಿಕ್ಕ ಮರಿ ಬಳ್ಳಿ . ಬೆಟ್ಟಕ್ಕೆ ಹಸುಗಳು ಮೇಯಿಸಲಿಕ್ಕೆ ಗೋಪಾಲ ಹೋಗಿದ್ದು ಗೋಪಾಲನಾಗಿ . ಭೂತಾಯಿ ಹಸಿರು ಉಲ್ಲು ಗೋವುಗಳಿಗೆ ಅಚ್ಚು ಮೆಚ್ಚು. ಬಳ್ಳಿಯ ಸಿಗ್ನಲ್ ದಿಂದ ಹುಲಿಯಿಂದ ತಪ್ಪಿಸಿಕೊಂಡು ಬಂದಿದ್ದವು. ಗೋವುಗಳ ಜೊತೆ ನೀರಲ್ಲಿ ಈಜಾಡಿದ್ದವು. ಏಕಾಂತದಲ್ಲಿ ಆಕಳು ಮೈ ಮೇಲೆ ಕೈ ಆಡಿಸಿ ಒಡೆಯ ಪ್ರೀತಿಯಿಂದ ಬೆಳೆಸಿದ ಗೋವುಗಳು !! ಬಳ್ಳಿಯ ತಂದೆ ಮತ್ತು ಬಳ್ಳಿಯ ಮಗಳ ತಂದೆ ಮಾಲಿಕನಿಗೆ ಗೊತ್ತಿತ್ತು !!
ಕೇವಲ ಎಂಟನೂರು ರೂಪಾಯಿಗಳಿಗೆ ಬೇರು ಕಟುಕನ ಕೈ ಸೇರುವ ಸಮಯ. ಸಾಹುಕಾರನಿಗೆ ಮಾರಿ ಬಂದ ಹಣ ಏನು ವ್ಯತ್ಯಾಸ ಮಾಡುವುದಿಲ್ಲ! ಆದರೂ ಕಟುಕ ಪ್ರತಿ ದಿನ ಬಂದು ಹಸುವಿಗೆ ವಯಸ್ಸಾಗಿದೆ ಕೊಡಿ ಸಾಹುಕಾರರೇ ಎಂದು ಬಹಳ ಸಲ ಕೇಳಿದಾಗ, ಆಯಿತು ಒಂದು ಒಳ್ಳೆಯ ದಿನ ನೋಡಿ ತಗೊಂಡು ಹೋಗು ಎಂದರು. ಆದರೆ ಸಾಹುಕಾರನಿಗೆ ಇದು ಜಾತ್ರೆಯಲ್ಲಿ ಬಂದ ಕಾಣಿಕೆ . ಊರಿನ ಜನ ದೇವರ ಕಾಣಿಕೆಗೆ ತುಂಬಾ ಮಹತ್ವ ಕೊಟ್ಟಿದ್ದರು. ಬೇರು ಇವರ ಮನೆಗೆ ಬಂದಾಗಿನಿಂದ ಅವರ ಮನೆ ಇನ್ನು ಹೆಚ್ಚಿನ ಸಿರಿವಂತಿಕೆ ಪಡೆದಿತ್ತು ಅನ್ನೋದು ಅವರ ಭಾವವಾಗಿತ್ತು.
ಒಡೆಯ ತನ್ನ ತಾಯಿಯ ಮಾತಿಗೆ ಓಗೊಟ್ಟು ಕಟುಕನಿಗೆ ಮಾರದೆ, ಬೇರು ಅಮೃತವನ್ನು ಕೊಡುವುದು ನಿಲ್ಲಿಸಿದ್ದರೂ ಅದೊಂದು ದೇವರ ಕಾಣಿಕೆ ಎಂದು ತನ್ನಲ್ಲೇ ಇಟ್ಟಕೊಂಡು ಕಟುಕನ ಕೈ ಇಂದ ಉಳಿಸಿದ ಕರುಣಾಮಯಿ.
Categories: Stories/ಕಥೆಗಳು
