
ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೆಚ್ಚದಲ್ಲಿ ಕನಿಷ್ಟ ಶೇ.65 ರಷ್ಟನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಮೀಸಲಿಡುವುದು ಕಡ್ಡಾಯವಾಗಿದೆ. ಪ್ರಸ್ತುತ ವರ್ಷ ನರೇಗಾ ಯೋಜನೆಯಡಿ ರಾಜ್ಯಕ್ಕೆ ರೂ.6630/- ಕೋಟಿ ಅನುದಾನ ಲಭ್ಯವಾಗಲಿದ್ದು, ಅದರಲ್ಲಿ ರೂ.4310/- ಕೋಟಿಗಳನ್ನು ಜಲ ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳಿಗೆ ಖರ್ಚು ಮಾಡಲಾಗುವುದು. ರಾಜ್ಯ ಜಲ ಮೂಲಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ ಪ್ರಧಾನ ಮಂತ್ರಿಗಳ ಆಶಯಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಮೂರು ಲಕ್ಷಕ್ಕೂ ಅಧಿಕ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
Click on Purchase
ಜಲಶಕ್ತಿ ಅಭಿಯಾನದ ಅಡಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಈ ಕೆಳಕಂಡ ಚಟುವಟಿಕೆಗಳು
1) ಸಮಗ್ರ ಕೆರೆ ಅಭಿವೃದ್ಧಿ: ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಕೆಳಕಂಡ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಗೂಗಲ್ ಅರ್ಥ್ ಅಥವಾ ದಿಶಾಂಕ್ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಕೆರೆಗೆ ನೀರು ಹರಿದು ಬರುವ ಕಾಲುವೆ/ಹಳ್ಳಗಳನ್ನು ಗುರುತಿಸಿ ಅವುಗಳನ್ನು ದುರಸ್ತಿಗೊಳಿಸುವುದು ಮತ್ತು ಹೂಳು ತೆಗೆಯುವುದು. ಈ ಕಾಲುವೆ/ಹಳ್ಳಗಳ ನೀರು ಕೆರೆಗೆ ಪ್ರವೇಶಿಸುವ ಸ್ಥಳದಲ್ಲಿ Siಟಣ ಖಿಡಿಚಿಠಿ ನಿರ್ಮಿಸುವುದು.
ಕೆರೆಯಲ್ಲಿನ ಹೂಳನ್ನು ವೈಜ್ಞಾನಿಕವಾಗಿ ಅಂದಾಜು ಮಾಡಿ ಹೂಳು ತೆಗೆಯಲು ಕ್ರಮವಹಿಸುವುದು. ಕೆರೆ ಏರಿಯನ್ನು ದುರಸ್ತಿಗೊಳಿಸುವುದು ಮತ್ತು ಏರಿಯನ್ನು ಸ್ಥಿರೀಕರಣಗೊಳಿಸಲು ಇಳಿಜಾರುಗಳಲ್ಲಿ ಗಿಡಗಳನ್ನು ನೆಡುವುದು. ಕೆರೆ ಕೋಡಿ ಮತ್ತು ರೈತರ ಜಮೀನುಗಳಿಗೆ ನೀರು ಹರಿದು ಹೋಗುವ ಕಾಲುವೆಗಳನ್ನು ದುರಸ್ತಿಗೊಳಿಸುವುದು. ಕೆರೆ ಅಂಚಿನ ಖಾಲಿ ಪ್ರದೇಶಗಳಲ್ಲಿ ಸಸಿಗಳನ್ನು ಬೆಳೆಸುವುದು.
2) ರೈತರ ಜಮೀನುಗಳಲ್ಲಿ ಬದು, ಕೃಷಿ ಹೊಂಡ ಮತ್ತು ತೆರೆದ ಬಾವಿಗಳನ್ನು ನಿರ್ಮಿಸುವುದು.
3) ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಕಲ್ಯಾಣಿಗಳನ್ನು ಗುರುತಿಸಿ ಅವುಗಳನ್ನು ಪುನಶ್ಚೇತನಗೊಳಿಸುವುದು.
4) ನಾಲಾಗಳ ಅಗಲೀಕರಣ, ಹೂಳು ತೆಗೆಯುವುದು, ನಾಲಾ ಬದುಗಳ ಸ್ಥಿರೀಕರಣ ಮತ್ತು ನಾಲಾ ಬದುಗಳ ಮೇಲೆ ಸಸಿಗಳನ್ನು ನೆಡುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು. ನಾಲಾಗಳಲ್ಲಿ ಪ್ರತಿ 30 ರಿಂದ 50 ಮೀಟರ್ ಅಂತರದಲ್ಲಿBoulder check ಗಳನ್ನು ನಿರ್ಮಾಣ ಮಾಡುವುದು.
5) ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಗೋ ಕಟ್ಟೆಗಳನ್ನು ನಿರ್ಮಿಸುವುದು.
6) ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಮತ್ತು ಅರಣ್ಯ ಪ್ರದೇಶಗಳಲ್ಲಿ ಹೊಸದಾಗಿ ಕೆರೆಗಳನ್ನು ನಿರ್ಮಿಸುವುದು.
7) ಪ್ರಸ್ತುತ ಪ್ರಗತಿಯಲ್ಲಿರುವ ಸೋಕ್ ಪಿಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹೊಸ ಸೋಕ್ ಪಿಟ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು.
8) ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಟ ಒಂದು ಮಲ್ಟಿ ಆರ್ಚ್ ಚೆಕ್ ಡ್ಯಾಂ ನಿರ್ಮಾಣ ಮಾಡುವುದು.
9) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಬಳಸುವ ಬೋರ್‍ವೆಲ್‍ಗಳಿಗೆ ಆದ್ಯತೆಯ ಮೇರೆಗೆ ರಿಚಾರ್ಜ್ ಪಿಟ್ ನಿರ್ಮಾಣ ಮಾಡುವುದು.
10) ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ರಚನೆಗಳನ್ನು ನಿರ್ಮಿಸುವುದು.
11) ರಸ್ತೆ ಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಶನ್, ರೈತರ ಜಮೀನುಗಳಲ್ಲಿ ಸಸಿ ನೆಡುವುದು ಮತ್ತು ಅರಣ್ಯ ಪ್ರದೇಶಗಳಲ್ಲಿ ಕಂದಕಗಳ ನಿರ್ಮಾಣ.
12) ಚೆಕ್ ಡ್ಯಾಂಗಳ ಹಿಂಭಾಗದಲ್ಲಿನ ಹೂಳು ತೆಗೆಯುವುದು ಮತ್ತು ನಾಲಾಗಳನ್ನು ದುರಸ್ತಿಗೊಳಿಸುವುದು.
13) ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾಗಿರುವ 03 ಅಥವಾ ಅದಕ್ಕಿಂತ ಹಿಂದಿನ ವರ್ಷಗಳ ಜಲ ಸಂರಕ್ಷಣೆ ಕಾಮಗಾರಿಗಳನ್ನು ದುರಸ್ತಿಗೊಳಿಸುವುದು. ಕಳೆದ 03 ವರ್ಷಗಳಲ್ಲಿ ನಿರ್ಮಿಸಿರುವ ಜಲ ಸಂರಕ್ಷಣೆ ಕಾಮಗಾರಿಗಳು ಪ್ರಕೃತಿ ವಿಕೋಪದಿಂದ ಹಾನಿಯಾಗಿದ್ದಲ್ಲಿ ಅವುಗಳನ್ನು ದುರಸ್ತಿಗೊಳಿಸಲು ಕ್ರಮವಹಿಸುವುದು. 2020- 21ನೇ ಸಾಲಿನಲ್ಲಿ 36,093 ಕೆರೆ ಅಭಿವೃದ್ಧಿ, 257 ಕಲ್ಯಾಣಿ ಪುನಶ್ಚೇತನ, 1,586 ಗೋ-ಕಟ್ಟೆಗಳ ನಿರ್ಮಾಣ, 716 ಮಳೆ ನೀರು ಕೊಯ್ಲು ರಚನೆಗಳು, 14,757 ಚೆಕ್ ಡ್ಯಾಂ, 2,62,734 ಸೋಕ್ ಪಿಟ್(ಬಚ್ಚಲು ಗುಂಡಿ), 2,026 ಬೋರ್‍ವೆಲ್ ರಿಚಾರ್ಜ್, 1,54,228 ಅರಣ್ಯೀಕರಣ ಕಾಮಗಾರಿಗಳು, 76,087 ಕೃಷಿ ಹೊಂಡ, 1,54,999 ಬದು ನಿರ್ಮಾಣ, 9,598 ತೆರೆದ ಬಾವಿಗಳ ಕಾಮಗಾರಿಗಳನ್ನು ಜಲ ಸಂರಕ್ಷಣೆಗಾಗಿ ಅನುಷ್ಠಾನಗೊಳಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಜಲಶಕ್ತಿ ಅಭಿಯಾನ ಅನುಷ್ಠಾನದಲ್ಲಿ ತೊಡಗಿಕೊಳ್ಳುವ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ತರುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಸಾಂಪ್ರದಾಯಿಕ ಜಲ ಮೂಲಗಳ ಒತ್ತುವರಿಯನ್ನು ತೆರವುಗೊಳಿಸಿ ಪುನಶ್ಚೇತನಗೊಳಿಸಲು ಕಂದಾಯ ಇಲಾಖೆ ನೆರವು ನೀಡಲಿದೆ.
Categories: news
