By ಸುನೀತಾ ಶಿಂಧೆ, ಶಿಕ್ಷಕರು
ಅನ್ನ ಹಸಿವನ್ನು ನೀಗಿಸುತ್ತದೆ, ಅಕ್ಷರಜ್ಞಾನ ಅಜ್ಞಾನವನ್ನು ತೊಲಗಿಸುತ್ತದೆ. ಅಂಥಹ ಅಜ್ಞಾವನ್ನು ತೊಲಗಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವುದು ಶಿಕ್ಷಕರು. ಮಕ್ಕಳ ಬೆಳವಣಿಗೆ ಎಂದ ತಕ್ಷಣ ನಮ್ಮ ಕಲ್ಪನೆಗೆ ಬರುವುದು ಮಗುವಿನ ತೂಕ ,ಎತ್ತರ, ದಪ್ಪ, ಬಣ್ಣ ಅಲ್ಲವೇ? ಆದರೆ ಇದನ್ನು ನಾವು ಸಾಮಾನ್ಯ ಬೆಳವಣಿಗೆ ಎನ್ನುವುದಿಲ್ಲ ಹಾಗಾದರೆ ನಮ್ಮ ಪ್ರಕಾರ ಸಾಮಾನ್ಯ ಬೆಳವಣಿಗೆ ಎಂದರೇನು?
ಮಕ್ಕಳ ದೈಹಿಕ ಬೆಳವಣಿಗೆಯ ಜೊತೆ ಜೊತೆಗೆ ಬೌದ್ಧಿಕ ಬೆಳವಣಿಗೆಯು ಸಾಗುತ್ತಿರಬೇಕು. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮಹತ್ವಪೂರ್ಣವಾದದ್ದು ಎಂದರೆ ಅದನ್ನು ವಿವರಿಸಲು ಸಾಧ್ಯವಿಲ್ಲ. ಗುರುಕುಲ ಪದ್ಧತಿಯಿಂದ ಇಂದಿನ ಮುಂದುವರೆದ ಶಿಕ್ಷಣದವರೆಗೂ ಶಿಕ್ಷಣ ಅನ್ನೋ ಮಾತು ಸತ್ಯವಾಗಿದೆ. ಮಕ್ಕಳು ಕುಟುಂಬದ ವಾತಾವರಣದ ನಂತರ ನೇರವಾಗಿ ಬರುವುದು ಶಾಲಾ ಸಂಪರ್ಕಕ್ಕೆ, ಮಕ್ಕಳ ಪ್ರಥಮ ಸಾಮಾಜಿಕ ಬೆಳವಣಿಗೆ ಪ್ರಾರಂಭವಾಗುವುದು ಶಾಲೆಯಲ್ಲಿ, ಶಾಲೆಯಲ್ಲಿ ಮಕ್ಕಳಿಗೆ ಆದರ್ಶವಾಗಿ ಕಾಣುವ ಪ್ರಮುಖ ವ್ಯಕ್ತಿ ಅಂದರೆ ಶಿಕ್ಷಕರು. ಮಕ್ಕಳು ಹೆಚ್ಚಾಗಿ ಶಿಕ್ಷಕರನ್ನು ಅನುಸರಿಸುವುದರಿಂದ ಶಿಕ್ಷಕರ ನಡೆ-ನುಡಿ ಶಿಸ್ತು ಸರಳತೆ ಉಡುಗೆ-ತೊಡುಗೆ ಆಚಾರ-ವಿಚಾರ ಹಾಗೂ ಅವರು ಆಡುವ ಆಕರ್ಷಣೆಯ ಮಾತುಗಳು ಸೂಕ್ಷ್ಮವಾಗಿ ಗಮನಿಸುತ್ತಾರೆ ಅನುಕರಣೆ ಮಾಡುತ್ತಾ ಸಾಗುತ್ತಾರೆ.
ಮಕ್ಕಳ ಭಾಷಾ ಬೆಳವಣಿಗೆ ಅಕ್ಷರ ಜ್ಞಾನ ಓದು-ಬರಹ ಆಟ-ಪಾಠ ಎಲ್ಲದರಲ್ಲೂ ಶಿಕ್ಷಕರ ಪ್ರಭಾವ ಹೆಚ್ಚಾಗಿರುತ್ತದೆ. ಕಾರ್ಯಗಳನ್ನು ಮಾಡಿದ್ದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸುವುದು ಇತರ ಮಕ್ಕಳ ಮುಂದೆ ಆ ಕಾರ್ಯವನ್ನು ವಿವರಿಸುವುದು . ಈ ರೀತಿಯ ಕಾರ್ಯಗಳಿಂದ ಆತ್ಮವಿಶ್ವಾಸವನ್ನು ಶಿಕ್ಷಕರು ಹೆಚ್ಚಿಸುತ್ತಾರೆ. ಮನೆಯಲ್ಲಿ ಯಾರ ಮಾತು ಕೇಳದ ಮಕ್ಕಳು ಶಿಕ್ಷಕರ ಮಾತು ವೇದವಾಕ್ಯ ದಂತೆ ಪಾಲಿಸುತ್ತಾರೆ. ಕೆಲವು ಸಂದರ್ಭದಲ್ಲಿ ಶಿಕ್ಷಕರು ಆಕಸ್ಮಿಕ ತಪ್ಪು ಉತ್ತರ ಬರೆದರು ಅದೇ ಸರಿ ಎಂದು ಪಾಲಕರು ಮುಂದೆ ವಾದಿಸುವ ಮಕ್ಕಳಿದ್ದಾರೆ ಅದಕ್ಕೆ ಕಾರಣ ಮಕ್ಕಳಿಗೆ ಶಿಕ್ಷಕರ ಮೇಲೆ ಇರುವ ಅಪಾರವಾದ ನಂಬಿಕೆ ಮತ್ತು ಗೌರವ.
ಮಕ್ಕಳಿಗೆ ಪೋಷಕರು ಎಷ್ಟೇ ಪುಸ್ತಕಗಳನ್ನು ಕೊಟ್ಟರೂ ಓದಲಾರರು, ಓದಿದರೂ ತಿಳಯಲಾರದು. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಕೆಲವು ಗುರಿಗಳನ್ನು ಇಟ್ಟುಕೊಂಡಿರುತ್ತಾರೆ. ಅವರ ಗುರಿ ತಲುಪಬೇಕಾದರೆ ಅವರ ಹಿಂದೆ ಗುರು ಇರಬೇಕು! ಅಕ್ಷರ ಜ್ಞಾನವಿಲ್ಲದ ಮಕ್ಕಳನ್ನು ಸುರಳೀತವಾಗಿ ಓದುವಂತೆ ಮಾಡುವುದು ಅಷ್ಟೇನೂ ಸಲೀಸಲ್ಲ. ಮಗುವಿನ ಮನಸ್ಸನ್ನು ಅರಿತು ಕಷ್ಟವಾದ ವಿಷಯಗಳು ಸರಳಗೊಳಿಸಿ ಮಕ್ಕಳಿಗೆ ತಿಳಿಸುತ್ತಾರೆ. ಇಲ್ಲಾವಾದರೆ ಎಲ್ಲ ವಿಷಯಗಳು ಮಕ್ಕಳಿಗೆ ಹೊರೆಯಾಗಿ ಬಿಡುತ್ತೆ. ಕಳೆದ ಒಂದು ವರ್ಷದಿಂದ ಕರೋನ ರೋಗದಿಂದ ಇಡೀ ಜಗತ್ತು ನರಳುತ್ತಿದೆ.
ಮಂಗಳದಲ್ಲಿ ಸಂಶೋಧನೆ ಮಾಡಿದ ನಮಗೆ ಕಣ್ಣಿಗೆ ಕಾಣದ ಜೀವಿಗೆ ತಲೆಬಾಗಿ ನಮ್ಮ ದೈನಿಂದಿನ ಕೆಲಸಗಳಿಗೆ ಕೊಕ್ಕೆ ಕೊಟ್ಟಿದ್ದೇವೆ. ಎಲ್ಲಾ ಕೆಲಸಗಳು ನಿಂತಿವೆ .ಅದರಲ್ಲಿ ವಿಶೇಷವಾಗಿ ನಮ್ಮ ಶಾಲಾ ಕಾಲೇಜುಗಳು ಮುಚ್ಚಿವೆ. ಇದರ ಹೊಡೆತ ನಮಗೆ ಅರಿವಿದೆಯಾ?ಚಿಕ್ಕ ಚಿಕ್ಕ ಮಕ್ಕಳು ತೊದಲುತ್ತಾ ಶಿಕ್ಷಕರ ನೆರಳಿನಲ್ಲಿ ಒಂದೊಂದು ಅಕ್ಷರ ಕಲಿಯುತ್ತ ಬೆಳೆಯುವ ಮಕ್ಕಳಿಗೆ ಇಂದು ಶಿಕ್ಷಕರು ಕೊಡುವ ಶಿಕ್ಷಣ ಇಲ್ಲವಾಗಿದೆ. ಕಂಪ್ಯೂಟರ್ ಮುಖಾಂತರ ಕಲಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ ಆದರೆ ಇದರ ಸಂಪೂರ್ಣ ಲಾಭ ಮಕ್ಕಳಿಗೆ ಸಿಗುವದಕ್ಕೆ ಸಾಧ್ಯವೇ? ಅದರಲ್ಲಿ ಗ್ರಾಮೀಣ ಮಕ್ಕಳು ಸಂಪೂರ್ಣವಾಗಿ ಕಲಿಕೆ ಕಳೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.
Click for purchase
ನಗರ ಪ್ರದೇಶಗಳಲ್ಲಿ ಪಾಲಕರು ಕಲಿತವರು, ಅನುಕೂಲತೆ ಇದ್ದವರು. ಅವರು ತಮ್ಮ ಮಕ್ಕಳಿಗೆ ಹೇಗೋ ಒಂದು ಮಟ್ಟಿಗೆ ನಿಭಾಯಿಸಬಲ್ಲರು ಆದರೆ ದೇಶದ ಗ್ರಾಮೀಣ ಬಾಗದಲ್ಲಿ ವಿದ್ಯುತ್ ಕೊರೆತೆ, ಅಂತರ್ಜಾಲ ಸರಿಯಾಗಿ ಇಲ್ಲದಿರುವುದು ಮತ್ತು ಆನ್ಲೈನ್ ತರಗತಿಗೆ ಬೇಕಾಗುವ ಟ್ಯಾಬ್, ಕಂಪ್ಯೂಟರ್ ಕನಸಲ್ಲಿ ಮಾತ್ರ ಕಾಣಬಹುದು(ಸ್ವಲ್ಪ ಜನ ತಗೆದುಕೊಳ್ಳಬಹುದು ಅಷ್ಟೇ).
ಹಿಂದೆ ಹಳ್ಳಿಗಳಲ್ಲಿ ಬಡತನ ಮತ್ತು ಅನಾನುಕೂಲತೆ ಇದ್ದರೂ ಶಿಕ್ಷಕರು ಸರಿಯಾದ ಪ್ರತಿಭೆಯನ್ನು ಹುಡುಕಿ ಅಂಥವರಿಗೆ ಸಹಾಯ ಮಾಡಿ ದೊಡ್ಡ ವ್ಯಕ್ತಿಗಳನ್ನಾಗಿ ಮಾಡಿದ್ದಾರೆ. ಆದರೆ ಇಂದು ಕರೋನ ಕಾರಣಕ್ಕೆ ಶಾಲೆಗಳು ಇಲ್ಲದೆ ,ಶಿಕ್ಷಕರ ಬೋಧನೆ ಇರದ ಕಾರಣಕ್ಕೆ ಗ್ರಾಮೀಣ ಭಾಗದ ಪ್ರತಿಭೆಗಳು ಬಾಡುವ ಆತಂಕ ಕಾಣುತ್ತಿದೆ. ಸಮಾಜದಲ್ಲಿ ಯಾವದೇ ದೊಡ್ಡ ವ್ಯಕ್ತಿ ಎಂದರೆ ರಾಜಕಾರಣಿಯಾಗಲಿ, ಅಧಿಕಾರಿ ಇರಲಿ, ವಿಜ್ಞಾನಿಯಾಗಲಿ ಮತ್ತು ಜಗತ್ತೇ ತಿರುಗಿ ನೋಡುವಂತೆ ಸಂಶೋಧನೆ ಮಾಡಿದ ಸಂಶೋಧನೆಕಾರರು ಶಿಕ್ಷಕರ ಗರಡಿಯಲ್ಲೇ ಬೆಳೆದಿದ್ದು ಎನ್ನವುದು ಸತ್ಯ.
ಎಲ್ಲಾ ಮಹನೀಯರು ತಮ್ಮ ಸಂದರ್ಶನ ಕೊಡುವಾಗ ತಮ್ಮ ಶಿಕ್ಷಕರ ಪಾತ್ರ ಹೇಗೆ ತಮ್ಮ ಜೀವನದ ಪಥವನ್ನೇ ಬದಲಿಸಿತು ಎಂದು ಹೇಳಿದ್ದಾರೆ. ಮಹಾ ಮೇಧಾವಿ ಎಂದೇ ಗುರುತಿಸಿಕೊಂಡಿದ್ದ ಜಗತ್ತಿಗೆ ಆಪಲ್ ಕಂಪನಿ ಪರಿಚಯ ಮಾಡಿದ್ದ ಸ್ಟೀವ್ ಜಾಬ್ ತನ್ನ ಶಿಕ್ಷಕರು ನನ್ನ ಪ್ರತಿಭೆ ನೋಡಿ ನನಗೆ ಗುರಿತಿಸದೆ ಹೋಗಿದ್ದರೇ ನಾನೊಬ್ಬ ಮೆಕ್ಯಾನಿಕ್ ಆಗುತಿದ್ದೆ ಎಂದಿದ್ದರು. ಇಂತಹ ಉತ್ಕೃಷ್ಟ ವೃತ್ತಿ ಶಿಕ್ಷಕ ವೃತ್ತಿ. ಸಾಧಕರಿಗೆ ಪರದೆ ಮುಂದೆ ಬರುವಂತೆ ಮಾಡಿ ಪರದೆ ಹಿಂದಿರುವ ಸೂತ್ರದಾರನೇ ! ಶಿಕ್ಷಕ
Categories: Articles
