Articles

ಮುಂದೆ ಗುರಿ ಇದೆ , ಹಿಂದೆ ಗುರುಗಳು ಇದ್ದಾರೆ! ಎಷ್ಟೇ ತಡೆದರು ನಿಲ್ಲುವ ಶಕ್ತಿ ಇದಲ್ಲ!

ರಾಜಕೀಯ ಪ್ರವೇಶ ಆಕಸ್ಮಿಕ , ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಆಸ್ಪದವಿಲ್ಲ ಎಂದು ಗೊತ್ತಿದ್ದೂ ಮತ್ತೆ ರಾಜಕಾರಣಕ್ಕೆ ಬರುವ ಮನಸ್ಸು ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ ಅದೊಂದು ಘಟನೆ ಎಂದರೆ ವರುಣ ಕ್ಷೇತ್ರದ ನನ್ನ ಅಭಿಮಾನಿಗಳು ಅಲ್ಲಲ್ಲ ನನ್ನ ರಾಜಕೀಯ ಪ್ರವೇಶಕ್ಕೆ ಕಾರಣೀಭೂತರಾದ ದೇವ ದುರ್ಲಬ ಬಿಜೆಪಿಯ ಕಾರ್ಯಕರ್ತರು ನನ್ನನ್ನು ರಾಜಕೀಯಕ್ಕೆ ಪ್ರವೇಶ ಮಾಡಿಸಿದ ಪರಿಣಾಮ ನಾನು ಇಲ್ಲಿದ್ದೇನೆ ಎಂದು ವಿಜಯೇಂದ್ರರವರು ಇತ್ತೀಚಿಕೆ ಹೇಳಿದ್ದು. ಇದೆಲ್ಲವೂ ಪ್ರಾರಬ್ಧ.

Amazon Ads

ಯಡಿಯೂರಪ್ಪನವರು ರಾಜೀನಾಮೆ ಕೊಡುತ್ತಾರೆ ಎಂದು ಕಳೆದ ಎರಡು ವರ್ಷದಿಂದ ಪ್ರತಿದಿವಸ ಮಾದ್ಯಮದಲ್ಲಿ ಹೇಳಿಕೆ ಕೊಡುತ್ತಾ ಪಕ್ಷಕ್ಕೆ ದಕ್ಕೆ ತಂದು ಇಂದು ಬೊಮ್ಮಾಯಿ ಮಂತ್ರಿ ಮಂಡಲ ವಿಸ್ತರಣೆಗೂ ಮುನ್ನ ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ , ವಾಜಪೇಯಿ ಸಂಪುಟದಲ್ಲಿ ಮಂತ್ರಿಯಾಗಿದ್ದೆ ಎಂದು ಹೇಳಿದ್ದೆ ಹೇಳಿದ್ದು! ಇನ್ನೊಬ್ಬ ಕಾಂಗ್ರೇಸ್ ಪಕ್ಷದಲ್ಲಿ ಹೊರದಬ್ಬಿಸಿಕೊಂಡು ದಳಕ್ಕೆ ಹೋಗಿ ಅಲ್ಲಿ ಇರಲಿ ಹಿರಿಯ ಎಂದು ಟಿಕೆಟ್ ಕೊಟ್ಟು ಶಾಸಕನಾಗಿ ಮಾಡಿ ಒಂದು ಅಧ್ಯಕ್ಷ ಹುದ್ದೆಯನ್ನು ಕೊಟ್ಟಿದ್ದರು. ಅಲ್ಲಿಯೂ ಮತ್ತದೇ ಹೀನ ಕೆಲಸ ಮಾಡಿ ದುರಾಸೆಯಿಂದ ಬಿಜೆಪಿಗೆ ಬಂದು ಇಲ್ಲಿಯೂ ಹಳೆಯ ಚಾಳಿ ಮುಂದುವರೆಸಿದ್ದಾರೆ. ಇವರಿಬ್ಬರಕ್ಕಿಂತ ಭಿನ್ನವಾದ ವ್ಯಕ್ತಿ. ಯಾವ ಪಕ್ಷಕ್ಕೂ ನಿಷ್ಠೆಯಿಲ್ಲ , ಇವನೊಬ್ಬ ದಲ್ಲಾಳಿ, ಯಾರೋ ಹೇಳಿದ್ದು ಲದ್ದಿ ಎತ್ತುವರೆಲ್ಲ ಆನೆ ಅಂಬಾರಿ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಇವರ ಬಗ್ಗೆ ಟ್ವಿಟ್ ಮಾಡಿದ್ದರು.

ಒಂದು ಹಳೆಯ ಆಲದ ಮರವನ್ನು ಮೂರೂ ಮುದಕಿಯರು ಕೆಡವಿದರು ಅಂತೇ! ಹಾಗಾಗಿದೆ ಇವರ ಮಾತುಗಳು! ಇದರ ಅರ್ಥ ಗೊತ್ತಾಯಿತು ಎಂದು ತಿಳಿಯುತ್ತೇನೆ . ಒಬ್ಬ ನಾನೇ ರಾಜೀನಾಮೆ ಕೊಡಿಸಿದೆ ಅಂತಾನೆ , ಇನ್ನೊಬ್ಬ ಮುಖ್ಯಮಂತ್ರಿ ಎಕ್ಸಾಮ್ ಬರೆದೆ ಅಂತಾನೆ . ಇನ್ನೊಬ್ಬ ಕೂದಲು ಬೋಳಿಸಿಕೊಂಡೆ ಎಂದಿದ್ದು ನೆನಪು. ಇವರೆಲ್ಲರ ಮದ್ಯೆ ಪಕ್ಷಕ್ಕಾಗಿ ಮತ್ತು ಜನರಿಗಾಗಿ ಕೆಲಸ ಮಾಡುವ ಅನೇಕ ಜೀವಿಗಳು ಬಿಜೆಪಿಯಲ್ಲಿ ಇದ್ದಾರೆ. ಅವರು ಎಂದೂ ಪಕ್ಷಕ್ಕೆ ದಕ್ಕೆ ತರುವ ಕೆಲಸ ಮಾಡುವದಿಲ್ಲ ಅಂಥವರಲ್ಲಿ ಸುರೇಶ ಕುಮಾರ, ಅಂಗಾರ, ಆರಗ ಜ್ಞಾನೇಂದ್ರ ಹೀಗೆ ಅನೇಕರು ಇದ್ದಾರೆ. ಇವರಿಗೆ ಮಂತ್ರಿ ಸಿಗಲಿ ಬಿಡಲಿ ಇವರು ಯಾವಾಗಲೂ ಪಕ್ಷಕ್ಕೆ ನಿಷ್ಠೆ! ಪ್ರಸ್ತುತ ರಾಜಕೀಯದಲ್ಲಿ ಹೇಗೆ ಗೆಲ್ಲಬೇಕು ಮತ್ತು ಅಭಿವೃದ್ಧಿ ಕಡೆ ಗಮನ ಕೊಡಬೇಕು ಎನ್ನುವುದು ಅತಿ ಮುಖ್ಯ. ನಮಗೆ ಮಂತ್ರಿ ಸಿಗಲಿಲ್ಲ ಎಂದು ಮನೆಗೆ ಕಲ್ಲೆಸುವ ಜಾಯಮಾನ ಇದ್ದವರು ಪಕ್ಷ ತೊರೆದು ಕಲ್ಲೆಸಬೇಕು!. ಅಥವಾ ಅಂಥವರನ್ನು ಕಿತ್ತಿ ಬಿಸಾಕಬೇಕು! ಎರಡು ಆಗದೆ ಇದ್ದರೇನಾಲ್ಕು ಗೋಡೆಯ ಎಂದರೆ ಪಕ್ಷದ ವೇದಿಕೆಯಲ್ಲಿ ಮಾತನಾಡಿ ಬಗೆಹರಿಸಬೇಕು! ಇಂತಹ ಆಟೋಪಗಳಿಗೆ ಕಡಿವಾಣ ಇಲ್ಲದೆ ಹೋದರೆ “ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ” ಎಂದಾಗುತ್ತದೆ.

ಹೈಕಮಾಂಡ್ ಅಣತಿನೋ ಅಥವಾ ಕಿರಿಯರಿಗೆ ಅವಕಾಶ ಸಿಗಲಿ ಮತ್ತು ಪಕ್ಷ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ರಾಜೀನಾಮೆ ಕೊಟ್ಟು ನನಗೆ ಯಾವದೇ ಹುದ್ದೆ ಬೇಡ ನಾನು ಪಕ್ಷಕ್ಕೆ ದುಡಿಯುತ್ತೇನೆ ಎಂದು ಹೇಳಿದ ಯಡಿಯೂರಪ್ಪನವರಿಗೆ ಒಂದು ಸಲಾಂ! ರಾಜೀನಾಮೆ ಕೊಟ್ಟಾದ ಮೇಲೂ ಜನಪ್ರಿಯ ನಾಯಕನ ಮನೆ ಇನ್ನು ತುಂಬಿ ತುಳುಕಿತ್ತಿದೆ. ಅವರೆಲ್ಲ ಅಧಿಕಾರಕ್ಕಾಗಿ ಬರುತ್ತಿದ್ದಾರೆ ಎಂದು ಹೇಳಿದರು ಒಂದು ಮಾತು ಸತ್ಯ ರಾಜಾಹುಲಿಯ ಆಟ ಇನ್ನು ಮುಗಿದಿಲ್ಲ! ಇದು ಮೂರನೆಯ ಬಾರಿ ಇರಬೇಕು ತಾನು ಹೇಳಿದ ಅಭ್ಯರ್ಥಿ ಮುಖ್ಯಮಂತ್ರಿ ಆಗಿದ್ದು. ಇತಿಹಾಸದಲ್ಲಿ ಕಿಂಗ್ ಮತ್ತು ಕಿಂಗ್ ಮೇಕರ್ಸ್ ಸಿಗುತ್ತಾರೆ. ಆದರೆ ಇವರು ಕಿಂಗ್ ನು ಹೌದು , ಕಿಂಗ್ ಮೇಕರ್ಸ್ ನು ಹೌದು! ಒಂದು ಕಡೆ ಜಗತ್ತಿನ ಸರ್ವಶ್ರೇಷ್ಠ ನಾಯಕ ಭಾರತದ ಪ್ರಧಾನಮಂತ್ರಿ ಯಡಿಯೂರಪ್ಪನವರ ಪಕ್ಷನಿಷ್ಠೆ ಮತ್ತು ಅವರ ಐತಿಹಾಸಿಕ ಕೆಲಸವನ್ನು ಶಬ್ದಗಳಿಂದ ವರ್ಣಿಸಲು ಅಸಾಧ್ಯ ಎಂದರೆ ಇಲ್ಲಿ ಬದ್ಧತೆ ಇರದವರು ಅವರ ಬಗ್ಗೆ ನಿಂದನೆಯಲ್ಲಿ ತೊಡಗಿದ್ದಾರೆ.

ಇದೆಲ್ಲದರ ಮಧ್ಯೆ ಯಡಿಯೂರಪ್ಪನವರು ತಮ್ಮ ಮಗನನ್ನು 2023ಕ್ಕೆ ಮುಖ್ಯಮಂತ್ರಿ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಜೆಡಿಎಸ್ ಆನಂದ ಅಸ್ನೋಟಿಕರ ಮತ್ತು ಬಿಜೆಪಿ ಪಾಳಯದಲ್ಲಿ ಆಡಿಕೊಳ್ಳುತ್ತಿರುವ ಮಾತು! ಇದೆ ಇರಬೇಕು ರಾಜೀನಾಮೆ ಕೊಟ್ಟ ನಂತರ ಮತ್ತೆ ಬದ್ಧತೆ ಇರದವರು ಯಡಿಯೂರಪ್ಪನವರನ್ನು ಮತ್ತು ವಿಜಯೇಂದ್ರರನ್ನು ನಿಂದಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿರೋಧಿಗಳಿಗೆ ಉತ್ತರ ಕೊಟ್ಟಾಗ ಬರುವ ಒಂದೇ ಮಾತು ದುಡ್ಡು ಕೊಟ್ಟು ಇದೆಲ್ಲವೂ ಮಾಡಿಸುತ್ತಿದ್ದಾರೆ ಎಂದು ಬುರಡೆ ಬಿಡುತ್ತಾ, ಮಾಧ್ಯಮದಲ್ಲಿ ವಿಜಯೇಂದ್ರರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ವಿಜಯೇಂದ್ರರನ್ನು ಪಕ್ಷದಲ್ಲಿ ಮೂಲೆಗುಂಪೆ ಮಾಡುವ ಕನಸು ಕಾಣುತಿದ್ದಾರೆ ಅನಿಸುತ್ತೆ . ಆದರೆ ಅವರಿಗಿರುವ ಅಭಿಮಾನಿಗಳ ಗುಂಪು ದುಡ್ಡಿನಿಂದ ಪಡೆದದ್ದಲ್ಲ ! ದುಡ್ಡು ಕೊಟ್ಟು ಅಷ್ಟೊಂದು ಬೆಂಬಲ ಪಡೆಯುವ ಹಾಗಿದ್ದರೇ ದುಡ್ಡಿರುವ ಕುಳಗಳು ಇದನ್ನೇ ಮಾಡುತ್ತಿದ್ದರು. ವಿಜಯೇಂದ್ರ ಯಡಿಯೂರಪ್ಪನವರ ಪುತ್ರ ಇದ್ದುದರಿಂದ ಒಂದು ಅವಕಾಶ ಸಿಕ್ಕಿದೆ ಅದರಲ್ಲಿ ಸಂಶಯವಿಲ್ಲ ಆದರೆ ಅದನ್ನು ಕಾಪಾಡಿಕೊಂಡು ಹೋಗುವ ನಾಯಕತ್ವ ಗುಣ ಇರದೇ ಇದ್ದರೇ ಇವತ್ತು ರಾಜಕೀಯದಲ್ಲಿ ಮುನ್ನೆಲೆಗೆ ಬರುವ ಅವಕಾಶವೇ ಇರುತ್ತಿರಲಿಲ್ಲ.

ತಂದೆ ರಾಜೀನಾಮೆ ಕೊಟ್ಟ ಮೇಲೆ ಒಬ್ಬ ಪಕ್ಷದ ಉಪಾಧ್ಯಕ್ಷರಾಗಿ ಒಂದೇ ಒಂದು ಮಾಧ್ಯಮದ ಮುಂದೆ ಹೇಳಿಕೆ ಕೊಡಲಿಲ್ಲ.ಎಲ್ಲವೂ ತಂದೆಯವರಿಗೆ ಕೇಳಿ ಎಂದು ಪ್ರಬುದ್ಧತೆ ಮೆರೆದಿದ್ದಾರೆ. ಹಿಂದೆಯೂ ಎಂದರೆ ವರುಣಾದಲ್ಲಿ ಟಿಕೆಟ್ ನಿರಾಕರಣೆ ಮಾಡಿದಾಗ ಸಹಿತ ಪಕ್ಷದ ಮತ್ತು ಮುಖಂಡರ ಬಗ್ಗೆ ಒಂದೇ ಒಂದು ಕೆಟ್ಟ ಪದ ಬಳಸಿಲ್ಲ. ಇದು ಅಲ್ಲವೇ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಖಂಡಿತ ಅವರ ಬೆನ್ನ ಹಿಂದೆ ಗುರುಗಳು ಇದ್ದಾರೆ ಅದಕ್ಕೆ ಇವೆಲ್ಲವೂ ಸಾಧ್ಯ!

ಅಂದು ವರುಣಾದಲ್ಲಿ ಕೇವಲ ಕುಟುಂಬದ ನೆಪಯೊಡ್ಡಿ ಟಿಕೆಟ್ ತಪ್ಪಿಸಿ ಅವರ ಬೆಳೆವಣಿಗೆಗೆ ಹಿನ್ನಡೆ ಆದರೂ ಅವರೇನು ಸುಮ್ಮನೆ ಕೂಡಲಿಲ್ಲ , ಪಕ್ಷ ಸಂಘಟನೆಗಾಗಿ ದುಡಿಯುತ್ತಿದ್ದಾರೆ. ಗೆಲ್ಲದ ಕ್ಷೇತ್ರದಲ್ಲಿ ಪಕ್ಷದ ಶಾಸಕರನ್ನಾಗಿ ಆಯ್ಕೆಮಾಡಿಸಿದ್ದಾರೆ. ಅವರಿಗೆ ಗುರಿ ಇರುವದರಿಂದಲೇ ಇದೆಲ್ಲವೂ ಸಾಧ್ಯವಾಗಿದ್ದು. ಇದು ಪ್ರಾರಂಭ! ಮಾಡಬೇಕಾದ ಕೆಲಸ ಬಹಳ ಇದೆ. ಆದರೂ ಇವರನ್ನೂ ಹೇಗಾದರೂ ಮಾಡಿ ರಾಜಕೀಯದಲ್ಲಿ ಮುಂದೆ ಬಾರದ ಹಾಗೆ ಮಾಡುವ ದೊಡ್ಡ ಗುಂಪೇ ಟೊಂಕ ಕಟ್ಟಿ ನಿಂತಿದೆ. ಆದರೆ ಒಂದು ಮಾತು ಪಕ್ಷ ನಿಷ್ಠೆ, ಪಕ್ಷಕ್ಕಾಗಿ ದುಡಿಯುವ ಮತ್ತು ಆಪಾರ ಬೆಂಬಲ ಹೊಂದಿದ ನಾಯಕನನ್ನು ದೊಡ್ಡ ದೊಡ್ಡ ನಾಯಕರು ಗುರುತಿಸಿ ಅಂಥವರನ್ನು ಕರೆಯಿಸಿ ಪಕ್ಷದ ಅತ್ಯುನ್ನತ ಹುದ್ದೆ ಕೊಡುತ್ತಾರೆ ಕಾರಣ ಅವರಿಂದ ಪಕ್ಷ ಬೆಳೆಯುತ್ತೆ ಮತ್ತು ಜನರಿಗೆ ಅನುಕೂಲವಾಗುತ್ತೆ! ಇಂದು ವಿಜಯೇಂದ್ರರ ಏಳಿಗೆಗೆ ಯಡಿಯೂರಪ್ಪನವರ ಮಗ ಮತ್ತು ನಮಗಿಂತ ಚಿಕ್ಕವನು ಎಂದು ಅಸೂಯೆ ಪಡುತ್ತಿರುವ ಜನ ಮುಂದೊಂದು ದಿನ ಇವರ ನಾಯಕತ್ವಕ್ಕೆ ಜೈ ಎನ್ನುವ ಕಾಲ ಬರುತ್ತದೆ ಕಾರಣ ಇದು ತಡೆದಷ್ಟು ಎದ್ದೇಳುವ ನಾಯಕತ್ವ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.!

Categories: Articles

Tagged as: , , ,

1 reply »

Leave a Reply