ನನ್ನ ರಾಜಕೀಯ ಜೀವನ ಹಾಳಾದರೂ ಚಿಂತೆ ಇಲ್ಲ ನಾನು ಇರೋದೇ ಹೀಗೆ ಎಂದು ಎಂದು ಮಾತೃ ಪಕ್ಷದ ವಿರುದ್ದ ಮತ್ತು ಯಡಿಯೂರಪ್ಪನವರ ಬಗ್ಗೆ ಹೇಳಿಕೆ ಕೊಡುತ್ತ ಮಾಧ್ಯಮದಲ್ಲಿ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಟಿವಿಯಲ್ಲಿ ಹೇಳಿಕೆ ಕೊಟ್ಟರೆ ದೊಡ್ಡ ನಾಯಕನಾಗುವದಿಲ್ಲ. ದೊಡ್ಡ ಹುದ್ದೆ ಪಡೆಯಲಿ ನಮ್ಮ ಅಭ್ಯಂತರವಿಲ್ಲ ಆದರೆ ನಮ್ಮ ಮತ್ತು ಸಂಸದರ ವಿರೋಧವಿದ್ದರೂ ಪಕ್ಷಕ್ಕೆ ತಗೆದುಕೊಂಡು ಬಂದು ಟಿಕೆಟ್ ಕೊಟ್ಟು ಶಾಸಕನಾಗಿ ಮಾಡಿದ್ದು ಯಡಿಯೂರಪ್ಪನವರು ಎಂದು ಅವರೇ ಹಿಂದೆ ಹೇಳಿದ್ದರು. ವಿಜಯಪುರ ಕ್ಷೇತ್ರಕ್ಕೆ ಯಡಿಯೂರಪ್ಪ ಅನುಧಾನ ಕೊಟ್ಟಿದ್ದಾರೆ ಎಂದು ಕರಪತ್ರ ಛಾಪಿಸಿ ಇಂದು ಮಂತ್ರಿಗಿರಿ ಸಿಕ್ಕಿಲ್ಲ ಎಂದು ಯಡಿಯೂರಪ್ಪನವರನ್ನು ಬಾಯಿಗೆ ಬಾಯಿಗೆ ಬಂದಂತೆ ಮಾತಾಡುತ್ತಿರುವ ಯತ್ನಾಳ ಮತ್ತೆ ಯಾವಾಗ ಪ್ಲೇಟ್ ಬದಲಾವಣೆ ಆಗುತ್ತೆ ಎಂದು ಹೇಳುವುದು ಕಷ್ಟ. ಅವರಿಗೆ ರಾಜಕೀಯ ನಿಯತ್ತಿಲ್ಲ ಎಂದು ಹಿಂದೊಮ್ಮೆ ಮಾಜಿ ಸಚಿವರು ಕಿವಿ ಮಾತು ಹೇಳಿದ್ದರು ಮತ್ತು ಅದರ ಜೊತೆ ವಿಜಯಪುರದ ಬಿಜೆಪಿ ನಾಯಕರ ಜೊತೆ ಉತ್ತಮ ಬಾಂದವ್ಯ ಇಟ್ಟುಕೊಂಡು ರಾಜ್ಯ ನಾಯಕನಾಗಲಿ ನಮ್ಮದೇನು ಅಭ್ಯಂತರವಿಲ್ಲ.
ಇತ್ತೀಚಿಕೆ ಒಂದು ವೇದಿಕೆಯಲ್ಲಿ ಯತ್ನಾಳ ಅವರು ನಾನು ವಿಜಯಪುರಕ್ಕೆ ಸಾಕಷ್ಟು ಅನುಧಾನ ತಂದಿದ್ದೇನೆ ಎಲ್ಲಿ ನೋಡಿದರಲ್ಲಿ ರಸ್ತೆಗಳು ಹೊಸರೂಪ ಪಡೆಯುತ್ತಿವೆ ಮತ್ತು ರಸ್ತೆಗಳಿಗೆ ಬೇರೆ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಟ್ಟಿದ್ದೇವೆ ಎಂದು ಹೇಳಿದ್ದರು. ಅವರ ಜೊತೆ ನಮ್ಮ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಟ್ಟಿದ್ದರೆ ಇನ್ನು ಚೆನ್ನಾಗಿ ಇರುತ್ತಿತ್ತು. (ಸಂಗೊಳ್ಳಿ ರಾಯಣ್ಣ, ಬಾಳಪ್ಪ ಅಮಟೆ ಹೀಗೆ ಅನೇಕ ರಾಜ್ಯದ ಮಹನೀಯರ ಹೆಸರಗಳು ಯಾಕೆ ಇಟ್ಟಿಲ್ಲ ಗೊತ್ತಿಲ್ಲ.)
ಅಪ್ಪು ಅವರನ್ನು ನೇರವಾಗಿ ಟಾರ್ಗೆಟ್ ಮಾಡದೆ ಕೆಲವು ಮಾತುಗಳನ್ನು ಆಡಿದ್ದರು. ಅದನ್ನೇ ಅಪ್ಪು ಅವರು ಕೌಂಟರ್ ಕೊಟ್ಟಿದ್ದು ನಾವು ರಸ್ತೆಗಳು ಅಗಲ ಮಾಡಿದಕ್ಕೆ ಇಂದು ರಸ್ತೆಗೆ ಡಾಂಬರೀಕರಣ ಆಗುತ್ತಿವೆ. ಅದು ನಮ್ಮ ಕರ್ತವ್ಯ! ನೀವು ಎಷ್ಟು ಬಾರಿ ಗೆದ್ದಿದ್ದೀರಿ ಮತ್ತೆ ಎಷ್ಟು ಕೆಲಸ ಮಾಡಿದ್ದೀರಿ ಎಂದು ತುಲನೆ ಮಾಡಿದಾಗ ನೀವು ಇನ್ನು ಜನರ ಋಣ ತೀರಿಸಬೇಕು. ಮತ್ತು ನಾನು ೨೦ ವರ್ಷ ನಾನೇ ಶಾಸಕ ಎಂದು ಅಹಂ ಭಾವದಿಂದ ಹೇಳುವುದು ಸೊಕ್ಕೆ ವಿನಃ ಹೆಮ್ಮೆ ಅಲ್ಲ. ನೀವೇನು ರಾಜ್ಯಮನೆತನದವರಾ? ಎಲ್ಲವನ್ನು ನಿರ್ಧಾರ ಮಾಡುವುದು ಜನರು ಎಂದು ಹೇಳಿದರು. ೨೦ ಸಾವಿರ ಮತಗಳಿಗಿಂತ ಅಂತರದಲ್ಲಿ ದೇವರಹಿಪ್ಪರಗಿಯಲ್ಲಿ ಗೆಲುವು ಎಂದು ಚುನಾವಣೆಗಿಂತ ಮುಂಚೆ ಹೇಳಿದ್ದಿರಿ ಆದರೆ ೩೦ ಸಾವಿರ ಮತಗಳ ಅಂತರದಿಂದ ಸೋತಿರಿ. ನಾನು ಅಟಲ್ ಭಿಹಾರಿ ವಾಜಪೇಯಿ ಮಂತ್ರಿ ಮಂಡಲದಲ್ಲಿ ಮಂತ್ರಿ ಎಂದು ಮಾತು ಮಾತಿಗೆ ಹೇಳುವ ನೀವು ನಿಮ್ಮ ವ್ಯಕ್ತಿತ್ವ ಚೆನ್ನಾಗಿದ್ದರೇ ಮತ್ತು ನೀವು ವಿಜಯಪುರ ಜಿಲ್ಲೆಗೆ ಕೆಲಸ ಮಾಡಿದ್ದರೇ ನೀವು ಸೋಲಬಾರದಾಗಿತ್ತು.
Categories: news
