Articles

ಎಸ್ ಟಿ ಡಿ ಮುಚ್ಚಿದ ನಂತರ ಎಟಿಎಂ ನೆಕ್ಸ್ಟ್ ಇನ್ ಕ್ಯೂ .. ಇನ್ನೆಲ್ಲಿಗೆ ಹೋಗಿ ನಿಲ್ಲುತ್ತೆ! ಚಿಪ್ ?

ಒಂದು ಕಾಲವಿತ್ತು ಊರಿನ ಶ್ರೀಮಂತರ ಮನೆಯಲ್ಲಿ ಟಿವಿ ಮತ್ತು ಲ್ಯಾಂಡ್ ಲೈನ್ ಮಾತ್ರ ಇರುತ್ತಿದ್ದವು. ಹಿಂದಿ ಮಹಾಭಾರತ ನೋಡುವ ಭಾಗ್ಯ ಯಾರಿಗುಂಟು ಯಾರಿಗಿಲ್ಲ! ಟಿವಿ ಇದ್ದವರ ಮನೆಯ ಮುಂದೆ ಸಿನಿಮಾ ಟಾಕೀಸ್ ತರಹ ಜನರು ಸಾಲಿನಲ್ಲಿ ನಿಲ್ಲುತಿದ್ದರು. ಯಾವಾಗ ಯಜಮಾನರು ಬಾಗಿಲು ತಗಿತಾರ ಯಾವಾಗ ಮಹಾಭಾರತ ನೋಡೋಣ ಎಂದು. ಇನ್ನೇನೂ ಬಾಗಿಲು ತಗಿತಾರ ಎಂದಾಗ ವಿದ್ಯುತ್ ಕೈಕೊಡುತಿತ್ತು. ಕೆಇಬಿ ಗೆ ಫೋನ್ ಮಾಡಿದರೆ ಅವರಿಗೆ ಫೋನ್ ಹೋಗತಿರಲಿಲ್ಲ. ಕಾರಣ ಇರೋದೇ ಸ್ವಲ್ಪೇ ಲೈನ್ಸ್ ಒಂದಿಬ್ಬರು ಲೈನ್ ಮೇಲೆ ಇದ್ದಿದ್ದರೇ ಅವರು ಫೋನ್ ಕಟ್ ಮಾಡುವವರೆಗೆ ಮತ್ತೊಬ್ಬರಿಗೆ ಲೈನ್ ಸಿಕ್ಕುತ್ತಿರಲಿಲ್ಲ. ಮರಳಿ ವಿದ್ಯುತ್ ಬರುವಷ್ಟಿಗೆ ಮಹಾಭಾರತ ಮುಗಿಯುತ್ತಿತ್ತು. ಆದರೆ ಮುಂದೆ ಪ್ರತಿಯೊಬ್ಬರ ಮನೆಯಲ್ಲಿ ಟಿವಿಗಳು ಬಂದವು , ಮತ್ತೊಬ್ಬರ ಮನೆಯಲ್ಲಿ ಓಣಿ ಜನರ ಜೊತೆ ಮಹಾಭಾರತ ನೋಡಿ ಸಂತೋಷ್ ಪಟ್ಟ ದಿನಗಳು ಮತ್ತೆ ಬರಲಿಲ್ಲ. ಇಂದು ಟಿವಿಯಲ್ಲಿ ನೋಡುವ ಅವಶ್ಯಕೆತೆ ಇಲ್ಲವೇ ಇಲ್ಲ. ಅದನ್ನೇ ನೀವು ಮೊಬೈಲ್ ಅಲ್ಲಿ ನೋಡಬಹುದು. ಇದು ಮೊಬೈಲ್ ಯುಗ!

ಊರಿಗೊಂದು ಫೋನ್ ಹೋಗಿ ಪ್ರತಿಯೊಬ್ಬರ ಮನೆಗೆ ಫೋನ್ ಬರದೇ ಇದ್ದರೂ ಖಾಸಗಿಯಾಗಿ ಎಸ್ ಟಿ ಡಿ ಬೂತಗಳು ತಲೆಯೆತ್ತಿ ನಿಂತವು. ದೂರದ ಸ್ಥಳಗಳಲ್ಲಿ ಇದ್ದ ಮಕ್ಕಳನ್ನು ಫೋನಿನಲ್ಲಿ ಸಂಪರ್ಕ ಪಡೆದು ಅವರ ಜೊತೆ ಮಾತಾಡಿ ಏನಪ್ಪಾ ಎಂಥಾ ಕಾಲ ಬಂತು ಇದನ್ನು ಕಂಡು ಹಿಡಿದವರಿಗೆ ಧನ್ಯವಾದಗಳು ಎಂದಿದ್ದರು.

ಎಸ್ ಟಿ ಡಿ ಬೂತ ತುಂಬಾ ದುಬಾರಿ ಇತ್ತು ಅದಕ್ಕೆ ಒಗ್ಗಿಕೊಳ್ಳುವ ವೇಳೆಗೆ ಕಾಯಿನ್ ಬೂತ್ ಪ್ರವೇಶ. ಹತ್ತು ರೂಪಾಯಿ ಚಿಲ್ಲರೆ ತಗೆದುಕೊಂಡು ಒಂದು ರೂಪಾಯಿ ಕಾಯಿನ್ ಹಾಕಿ ಲವ್ ಬರ್ಡ್ಸ್ ಪೋಕರಿಗಳು ಹರಟೆ ಹೊಡೆದಿದ್ದು ಹೊಡೆದಿದ್ದು. ಇಂದು ಎಸ್ ಟಿ ಡಿ , ಕಾಯಿನ್ ಬಾಕ್ಸ್ ಮ್ಯೂಸಿಯಂಯಲ್ಲಿ ಮಾತ್ರ ನೋಡುವದಕ್ಕೆ ಸಿಗುತ್ತೆ. ಇದು ಮೊಬೈಲ್ ಯುಗ!

ಜನಧನ ಯೋಜನೆಗಿಂತ ಮುಂಚೆ ದೇಶದಲ್ಲಿ ಎಲ್ಲರಿಗೂ ಬ್ಯಾಂಕ್ ಖಾತೆ ಇರಲಿಲ್ಲ. ಕೇವಲ ನೌಕರದಾರರಿಗೆ ಮತ್ತು ಶ್ರೀಮಂತರಿಗೆ ಮಾತ್ರ ಬ್ಯಾಂಕ್ ಖಾತೆ! ಇಂದಿರೆಯ ಕಾಲದಲ್ಲಿ ಬಡತನ ನಿರ್ಮೂಲನೆ ಎಂದು ಹೇಳಿದ್ದರು ಅದು ಪುಸ್ತಕದಲ್ಲೇ ಉಳಿಯಿತು. ಅದೇಕೆ ಇಲ್ಲಿ ಬಿಡಿ! ಇಲ್ಲಿ ಏನು ಹೇಳಲಿಕ್ಕೆ ಹೊರಟಿದ್ದೇನೆ ಎಂದರೆ ಗಳಿಸಿದ ದುಡ್ಡು ಮನೆಯಲ್ಲೇ ಇಡಬೇಕಿತ್ತು. ಕೆಲಯೊಮ್ಮೆ ಕಳ್ಳರ ಕಾಟಕ್ಕೆ ನೆಲದಲ್ಲಿ ಹುಗಿದು ಇಡುತ್ತಿದ್ದರು. ಅದೇ ಮುಂದೆ ನಿಧಿಯಾಗುತ್ತಿತ್ತು! ಇತ್ತೀಚಿಕೆ ಎಂದರೆ ಮನೆಯಲ್ಲಿ ಯಾರಿಗೂ ಸಿಗದ ಹಾಗೆ ಇಡುತ್ತಿದ್ದರು ಮತ್ತೆ ಎಷ್ಟೇ ದುಡಿದರು ದುಡ್ಡು ಉಳಿಯುತ್ತಿರಲಿಲ್ಲ ಅದಕ್ಕೆ ಲಾಕರ ದಲ್ಲಿ ಇಡುವ ಮಾತೇಕೆ ಬಂತು ಬಿಡಿ! ದುಡ್ಡು ಬೇಕಾದರೆ ಶ್ರೀಮಂತರ ಮನೆಗೆ ಹೋಗಿ ಕೈಗಡ ತಗೆದುಕೊಂಡು ಬರುತ್ತಿದ್ದರು. ಶ್ರೀಮಂತರು ಬ್ಯಾಂಕ್ ಖಾತೆ ನಂತರ ಫಾಸ್ಸ್ಬುಕ್ ಅವರ ಆಸ್ತಿ!

ಅದೇ ನೋಡಿ ಖುಷಿ ಪಡುವ ಕಾಲ. ಅದು ಇಲ್ಲದೆ ಬ್ಯಾಂಕಲ್ಲಿ ದುಡ್ಡು ಕೊಡುತ್ತಿರಲಿಲ್ಲ. ಒಂದಿಷ್ಟು ದಿವಸ ಫಾಸ್ಸ್ಬುಕ್ King ಆಗಿತ್ತು. ಇತ್ತೀಚಿಕೆ ೧೫ ವರ್ಷಗಳಿಂದ ಕಾರ್ಡ್ ಎಂಟ್ರಿ ಕೊಟ್ಟಿತು.

ಪಾಸ್ಬುಕ್ ಹೋಗಿ ಕಾರ್ಡ್ ಎಂಟ್ರಿ . ಕಾರ್ಡ್ ಇದ್ದೋನೆ ಬಾಸ್! ಎಷ್ಟು ಬೇಕು ಅಷ್ಟು ದುಡ್ಡು ಪಡೆದುಕೊಳ್ಳುವುದು, ಉಜ್ಜುವ ಜಗದಲ್ಲಿ ಉಜ್ಜುವುದು ಎಲ್ಲ ಅತಿ ವಿಜೃಂಭಣೆಯಿಂದ ನಡಿಯಿತು. ಆದರೆ ಕಾರ್ಡಿನ ಕಾಲವು ಮುಗಿವ ಹಂತಕ್ಕೆ ತಲುಪಿದೆ! ಇಂದು ಏನೆ ಇದ್ದರು ಮೊಬೈಲ್ ಯುಗ!

ಯೂಟ್ಯೂಬ್ ನೋಡಬೇಕಾ? ಧಾರಾವಾಹಿ ನೋಡಬೇಕಾ? ಯಾವದೇ ಕಾರ್ಯಕ್ರಮ ನೋಡುವುದಕ್ಕೆ ಮೊಬೈಲ್ ಸಾಕು! ಯಾರ ಜೊತೆ ಹೇಗೆ ಮಾತಾಡಬೇಕು? ಧ್ವನಿ ಅಷ್ಟೇನಾ? ವಿಥ್ ವಿಡಿಯೋ(ಡ್ರೆಸ್ಸೆಡ್) ಮಾತಾಡಬೇಕಾ? ಯಾರನ್ನಾದರೂ ಸಂಪರ್ಕ ಮಾಡಲು ಮೊಬೈಲ್ ಸಾಕು! ಹೋಟೆಲ್ ಬಿಲ್ ಕೊಡಬೇಕಾ? ಗೆಳೆಯನಿಗೆ ದುಡ್ಡು ಕೊಡಬೇಕಾ? ಅಥವಾ ಗೆಳತಿಗೆ ಕೊಡಬೇಕಾ? ತಂದೆ ತಾಯಿಗೆ ಹಣ ವರ್ಗಾವಣೆ ಮಾಡಬೇಕಾ? ಬ್ಯಾಂಕಿಗೆ ಇನ್ನೊಂದು ಖಾತೆಯಿಂದ ದುಡ್ಡು ಹಾಕಬೇಕಾ? ಎಲ್ಲವೂ ಎಲ್ಲ ಮೊಬೈಲ್ ಮೂಲಕ ಮಾಡಬಹುದು. ಅದಕ್ಕೆ ಟೆಕಿಗಳಿಗೆ ಒಂದು ದೊಡ್ಡ ನಮಸ್ಕಾರ ಹಾಕಿ! ಮೊಬೈಲ್ ಇಷ್ಟೆಲ್ಲಾ ಮಾಡಬೇಕಾದರೆ ಇದಕ್ಕೆ ಬೇಕಾಗಿರೋದು ಹಾರ್ಡ್ವೇರ್ ಅಂಡ್ ಸಾಫ್ಟ್ವೇರ್! ಆಪ್ ಇಲ್ಲದೆ ಇದ್ದರೇ ಮೊಬೈಲ್ ಖಾಲಿ ಪ್ಲಾಸ್ಟಿಕ್ ಬಾಕ್ಸ್!

ಜಗತ್ತಿನಲ್ಲಿ ಭಾರತ ಜನಸಂಖ್ಯೆಯಲ್ಲಿ ಎರಡನೆಯ ಸ್ತಾನ! ಇಲ್ಲಿಯ ಜೀವನಮಟ್ಟ ಬಡತನದಿಂದಲೇ ಕೂಡಿದೆ ಎಂದರೆ ತಪ್ಪಾಗಲಾರದು. ಇಂದು ಸ್ವಲ್ಪ ಬದಲಾವಣೆ ಕಂಡಿದೆ. ಆದರೂ ಅಭಿವೃದ್ಧಿ ಹೊಂದಿದ ದೇಶಗಳ ಜೊತೆ ತುಲನೆ ಮಾಡುವ ಹಾಗಿಲ್ಲ! ಸುಮಾರು ೩೦ ವರ್ಷಗಳ ಹಿಂದೇನೆ ಇಂಟರ್ನೆಟ್ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಚಿರಪರಿಚಿತ! ನಮ್ಮಲ್ಲೂ ದೊಡ್ಡ ನಗರಗಳಲ್ಲಿ ಇಂಟರ್ನೆಟ್ ಇಲ್ಲದೆ ಏನೂ ನಡೆಯುತ್ತಿರಲಿಲ್ಲ ಆದರೆ ಹಳ್ಳಿಗಳಿಗೆ ಇಂಟರ್ನೆಟ್ ತಲುಪಿರಲಿಲ್ಲ. ಇದನ್ನೇ ಫೇಸ್ಬುಕ್ ಮಾಲೀಕ ಮೋದಿಯವರಿಗೆ ಇದರ ಬಗ್ಗೆ ಉಲ್ಲೇಖ ಮಾಡಿದ್ದರು. ಭಾರತದ ಪ್ರತಿ ಹಳ್ಳಿಗೆ ಇಂಟರ್ನೆಟ್ ತಲುಪಬೇಕು. ಪ್ರತಿಯೊಬ್ಬ ಅಂತರ್ಜಾಲದ ಉಪಯೋಗಮಾಡಿಕೊಳ್ಳಬೇಕು ಎಂದರೆ ಅಂತರ್ಜಾಲ ಬೇಕೇ ಬೇಕು! ಸರ್ಕಾರ ಮತ್ತು ಅಂಬಾನಿ ಜಿಯೋ ಇದನ್ನು ಅತ್ಯಂತ ಶರವೇಗದಲ್ಲಿ ದೇಶದ ತುಂಬಾ ಅಂತರ್ಜಾಲವನ್ನು ಪಸರಿಸಿದರು! ಇಂದು ಸೆಕೆಂಡ್ ಟೈರ್ ನಗರಗಳಲ್ಲಿ ಅದೇ ಇಂಟರ್ನೆಟ್ ಉಪಯೋಗಿಸಿ ಡಿಜಿಟಲ್ ಟ್ರಾನ್ಸಾಕ್ಷನ್ ಮಾಡುತ್ತಿದ್ದಾರೆ. ಇತ್ತೀಚಿನ ಫೋನೆಪೆ ವರದಿ ಪ್ರಕಾರ ತಿಂಗಳಿಗೆ ೧.೫ ಬಿಲಿಯನ್ ಟ್ರಾನ್ಸಾಕ್ಷನ್ದಲ್ಲಿ ೮೦% ಸೆಕೆಂಡ್ ಟೈರ್ ನಗರಗಳಿಂದ ಟ್ರಾನ್ಸಾಕ್ಷನ್ ಆಗುತ್ತಿವೆ!

ಎಸ್ ಟಿ ಡಿ ಹೋಯಿತು, ಕಾರ್ಡ್ ಹೋಯಿತು, ಪಾಸ್ಬುಕ್ ಹೋಯಿತು, ಮೊಬೈಲ್ ಯಾವಾಗ ಹೋಗುತ್ತೆ? ಒಮ್ಮೆ ಸುಮ್ನೆ ಹಾಗೆ ಕಣ್ಣು ಮುಚ್ಚಿ ಯೋಚನೆ ಮಾಡೋಣ ಬನ್ನಿ!

ಮಾರ್ಕೆಟಲ್ಲಿ ಈಗಾಗಲೇ ಕೈಗಡಿಯಾರದಲ್ಲಿ ಫೋನ್ ಕಾಲ್, ಯೂಟ್ಯೂಬ ನೋಡುವುದು, call ಮಾಡಬಹುದು. ಆದರೆ ಇನ್ನು ಸಂಪೂರ್ಣ ಹ್ಯಾಂಡಿ ಇಲ್ಲ. ಅದಕ್ಕೆ ಮುಂದೆ ಏನಿದ್ದರೂ ಇನ್ ಬಿಲ್ಟ್ ಚಿಪ್ ಕೆಲಸ ಮಾಡುತ್ತೆ. ಇಂದು ನೀವು ನಿಮ್ಮ ಪರ್ಸ್ ತಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ಎಲ್ಲವೂ ಮೊಬೈಲದಲ್ಲೇ ಇರುತ್ತದೆ. ಹಾಗೆ ಮುಂದೆ ಮೊಬೈಲ್ ಬೇಕಾಗುವದಿಲ್ಲ. ಕಾರಣ ಇನ್ ಬಿಲ್ಟ್ ಚಿಪ್ ಅಳವಡಿಸಿಕೊಂಡರೆ ಸಾಕು!

ಕಾರ್ಡ್ ಉಜ್ಜಿದರೆ ದುಡ್ಡು ಕಟ್ ಆಗುತಿತ್ತು, ಮೊಬೈಲ್ ಹಿಡಿದು ಸ್ಕ್ಯಾನ್ ಮಾಡಿದರೆ ದುಡ್ಡು ಕಟ್ ಆಗುತಿತ್ತು, ಇನ್ನು ಮುಂದೆ ಚಿಪ್ ಎನೇಬಲ್ ಮಾಡಿ ಅವ್ರ ಚಿಪ್ ಸರ್ಚ್ ಮಾಡಿ ಫಿಂಗರ್ ಪ್ರಿಂಟ್ಸ್ ಮೂಲಕ ದುಡ್ಡು ವರ್ಗಾವಣೆ ಮಾಡಬಹುದು. ಚಿಪ್ ಎನೇಬಲ್ ಮಾಡಿದ ನಂತರ ನಮ್ಮ ಕೈಮೇಲೆ ಬಣ್ಣದ ಪರೆದೆ ಬರುತ್ತೆ ಯಾವ ಅಪ್ಲಿಕೇಶನ್ ಬೇಕು ಅದನ್ನು ಸದ್ಬಳಿಕೆ ಮಾಡಿಕೊಳ್ಳಬಹುದು. ಚಿಪ್ ಎಲ್ಲ ಸಾಫ್ಟ್ವೇರ್ ಗಳನ್ನು ಒಳಗೊಂಡಿರುತ್ತದೆ. ಇತ್ತೀಚಿನ ಸಾಫ್ಟ್ವೇರ್ ಬೇಕಿದ್ದರೆ ವರ್ಷದ ಎಎಂಸಿ ತಗೆದುಕೊಂಡಿರಬೇಕು. ಎಎಂಸಿ ತಗೆದುಕೊಂಡಿದ್ದರೇ ಅವರೇ ಮನೆಗೆ ಬಂದು ಚಿಪ್ ಅಪ್ಗ್ರೇಡ್ ಮಾಡಿಕೊಡುತ್ತಾರೆ.

ಚಿಪ್ ಜೊತೆ ಧ್ವನಿಯ ಮೂಲಕ ಸಂಪರ್ಕ ಮಾಡಬಹುದು. ಚಿಪ್ ಬೆಲ್ಟ್ ಜೊತೆ ಕೈ ಹಾಕಿಕೊಂಡರೆ ಸಾಕು! ಅದು ನಿಮ್ಮ ನಾಡಿಯ ಬಡಿತದ ಮೂಲಕ ಚಾರ್ಜ್ ಆಗುತ್ತೆ! ಕೆಳಗೆ ಇಟ್ಟರೆ ಅದು ಉಪಯೋಗಕ್ಕೆ ಬರುವದಿಲ್ಲ. ಸ್ಟಾಂಡ್ ಬೈ ಮೋಡ್ ಇಟ್ಟು ಕೆಳಗಡೆ ಇಟ್ಟರೂ ಅದನ್ನು ಉಪಯೋಗಿಸಲು ಫಿಂಗರ್ ಪ್ರಿಂಟ್ಸ್ ಬೇಕೇ ಬೇಕು ಮತ್ತು ಅದು ಕೇವಲ ೧ ಘಂಟೆ ಮಾತ್ರ ಕೆಲಸ ಮಾಡುತ್ತೆ ಮತ್ತೆ ಅದೇ ಓನರ್ ಕೈಗೆ ಹಾಕಿದರೆ ಮಾತ್ರ ಚಾರ್ಜ್ ಆಗುತ್ತೆ(ಕೈಗೆ ಹಾಕಿ ಅದನ್ನು ಪ್ರಾರಂಭಿಸಲು ಫಿಂಗರ್ ಪ್ರಿಂಟ್ಸ್ ಬೇಕು). ಚಿಪ್ ಭದ್ರತೆಯಿಂದ ಕೂಡಿರುತ್ತೆ ಮತ್ತು ತುಂಬಾ ಸುರಕ್ಷಿತ! ಚಿಪ್ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುತ್ತೆ! ಅದಕ್ಕೆ ಫಿಂಗರ್ ಪ್ರಿಂಟ್ಸ್ ಬಹುಮುಖ್ಯ! ಕೈ ಗಡಿಯಾರಗಿಂತ ಚಿಪ್ ತುಂಬಾ ಚಿಕ್ಕದಾಗಿರುತ್ತೆ. ಚಿಪ್ ಕಳೆದುಕೊಂಡರೆ ಕೈಗೆ ತೆಂಗಿನಕಾಯಿ ಚಿಪ್ ಗತಿ ಎನ್ನುವ ಹಾಗಿಲ್ಲ. ಕಾರಣ ಅದು ಕಳೆದುಕೊಂಡವರ ಫಿಂಗರ್ ಪ್ರಿಂಟ್ಸ್ ಇಲ್ಲದೆ ಕೆಲಸ ಮಾಡುವದಿಲ್ಲ. ಮೊಬೈಲ್ ಯುಗ ಅಂತ್ಯದಲ್ಲಿ ಇದೆ.. ಇನ್ನೇನಿದ್ದರೂ ಚಿಪ್ ಯುಗ!

Categories: Articles

Leave a Reply