ಗುರುವಿಂದ ಬಂದುಗಳು ಗುರುವಿಂದ ಪರದೈವ
ಗುರುವಿಂದಲಾದುದು ಪುಣ್ಯ ಲೋಕಕ್ಕೆ ,
ಗುರುವಿಂದ ಮುಕ್ತಿ ಸರ್ವಜ್ಞ !

ಗುರುವಿನ ಗುಲಾಮನಾಗುವರೆಗೆ ಮುಕ್ತಿ ಸಿಗದಣ್ಣಾ ! ದೊಡ್ಡವರು ತಮ್ಮ ಜೀವನದ ಅನುಭವಗಳಿಂದ ಆಡಿದ ಮಾತು ಎಲ್ಲ ಕಾಲಕ್ಕೂ ಸತ್ಯ! ಜಗತ್ತಿನ ಎಲ್ಲ ಸಂಶೋಧಕರ ಮತ್ತು ದೊಡ್ಡ ಸಾಧಕರ ಜೀವನ ರೂಪುಗೊಂಡಿದ್ದು ಶಿಕ್ಷರಿಂದಲೇ ಅನ್ನೋದು ಸತ್ಯ. ನೇರವಾಗಿ ಗುರುಗಳ ಅಭಯದಿಂದ ಕಲಿತು ಸಾಧಕರಾಗಿದ್ದು ನೋಡಿದ್ದೇವೆ. ಹಾಗೆ ಗುರುಗಳ ಮೂರ್ತಿಯನ್ನು ಮುಂದೆ ಇಟ್ಕೊಂಡು ಅವರ ಹೇಳಿದ ಮಾತುಗಳಿಂದ ಬಿಲ್ವಿದ್ಯೆ ಕಲಿತ ಏಕಲವ್ಯನ ಶೂರತನವು ಕಂಡಿದ್ದೇವೆ. ಇವತ್ತಿಗೂ ಸದೃಢ ದೇಶ ಕಟ್ಟಲು ಶಿಕ್ಷಕರ ಪಾತ್ರ ಬಹು ದೊಡ್ಡದು.
ಶಿಕ್ಷಕರ ದಿನಾಚರಣೆ ಎಂದರೆ ನೆನಪಿಗೆ ಬರುವುದು ಸರ್ವಪಲ್ಲಿ ರಾಧಾಕೃಷ್ಣ. ಹುಟ್ಟಿದ್ದು ಸೆಪ್ಟೆಂಬರ್ ೫ ೧೮೮೮. ತಂದೆ ಸರ್ವಪಲ್ಲಿ ವೀರಸ್ವಾಮಿ ಮತ್ತು ತಾಯಿ ಸರ್ವಪಲ್ಲಿ ಸೀತಾ. ಇವರ ಊರು ಸರ್ವಪಲ್ಲಿ ಹಳ್ಳಿ, ನೆಲ್ಲೂರ್ ಜಿಲ್ಲಾ ಆಂಧ್ರಪ್ರದೇಶ. ಇವರ ಪ್ರಾಥಮಿಕ ಶಿಕ್ಷಣ ತಿರುತ್ತಣಿ ಮತ್ತು ಮಾಧ್ಯಮಿಕ ಶಿಕ್ಷಣ ತಿರುಪತಿಯಲ್ಲಿ ಪಡೆದಿದ್ದರು. ಸ್ಕಾಲರ್ಷಿಪ್ ಹಣದಿಂದೆಲೆ ತಮ್ಮ ಶಿಕ್ಷಣವನ್ನು ಮುಗಿಸಿದ್ದರು. “ತತ್ವಜ್ಞಾನ” ಎಂಬ ವಿಷಯದ ಮೇಲೆ ಅವರು ಬಿ ಎ ಮತ್ತು ಎಂ ಎ ಮುಗಿಸಿದ್ದರು. ಅವರಿಗೆ ತತ್ವಜ್ಞಾನದ ಬಗ್ಗೆ ತುಂಬಾ ಆಸಕ್ತಿ ಮತ್ತು ಆಳವಾದ ಜ್ಞಾನವನ್ನು ಹೊಂದಿದ್ದರು. ಕೇವಲ ೨೦ನೇ ವಯಸ್ಸಿನಲ್ಲಿ ಸ್ನಾತಕೋತರ ಪದವಿ ಯಲ್ಲಿ ಓದುತ್ತಿದ್ದಾಗ ಅವರ ಬರೆದ ಪ್ರಬಂಧ “ದಿ ಎಥಿಕ್ಸ್ ಆಫ್ ವೇದಾಂತ” ಅವರ ಜೀವನದ ಪಥವನ್ನೇ ಬದಲಿಸಿತು. ಮಹಾನ ವ್ಯಕ್ತಿಗಳಾದ ಶಂಕರ,ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಇವರ ತತ್ವಜ್ಞಾನದ ಬಗ್ಗೆ ಅಧ್ಯಯನ ಮಾಡಿದ್ದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಅವರ ಶಿಕ್ಷಕರು ಇವರನ್ನು ಆವಾಗಲೇ ಗುರುತಿಸಿದ್ದರು.
1918ರಲ್ಲಿ ರಾಧಾಕೃಷ್ಣನ್ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಕೆಲಸ ಪ್ರಾರಂಭ ಮಾಡಿದರು. . ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, ‘ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್’ ಎಂಬ ಮೊದಲ ಪುಸ್ತಕ ಬರೆದರು. ಇವರು ‘ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್’ ಮತ್ತು ‘ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ’ ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ. ಇವರ ಅಘಾದವಾದ ಪಾಂಡಿತ್ಯಕ್ಕೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ‘ಧರ್ಮ ಮತ್ತು ನೀತಿಶಾಸ್ತ್ರ’ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು. ವಿದೇಶಿಗರಿಗೆ ಮನಮುಟ್ಟವಂತೆ ನಮ್ಮ ದೇಶದ ಧರ್ಮದ ಮತ್ತು ತತ್ವಜ್ಞಾನದ ಬಗ್ಗೆ ಮನಮುಟ್ಟುವಂತೆ ಹೇಳಿದ್ದರು.
ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಮತ್ತು ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಅನೇಕ ಶಿಕ್ಷಣ ಸುಧಾರಣೆಗಳನ್ನು ತಂದರು. ತಮ್ಮ ಜ್ಞಾನದ ಅನುಭವವನ್ನು ಧಾರೆ ಎರೆದಿದ್ದರು. ಹಿಂತಹ ಅವಿರತ ಶ್ರಮಕ್ಕೆ ೧೯೪೮ ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. ಮತ್ತೊಂದು ದೊಡ್ಡ ಸಾಧನೆ ಎಂದರೆ ೧೯೪೯ ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡಿದ್ದರು. ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೋಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗುರುಗಳನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದಿದ್ದರು ,ತಾವೇ ಕುದುರೆಗಳಂತೆ, ಅವರು ಕುಳಿತ ಸಾರೋಟನ್ನು ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು. ಇಲ್ಲಿ ಗುರು ಶಿಷ್ಯರ ಸಂಬಂಧ ನೋಡಬಹದು.
ಇನ್ನೊಂದು ಉದಾಹರಣೆ ನೋಡಬಹುದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ ಬ್ಯಾಟಿಂಗ್ ಮಾಡುವಾಗ ಅವ್ರ ಗುರುಗಳು ವಿಕೆಟ್ ಮೇಲೆ ಒಂದು ರೂಪಾಯಿ ಇಡುತ್ತಿದ್ದರು . ನೀನು ಔಟ್ ಆಗದೆ ಹೋದರೆ ಒಂದು ರೂಪಾಯಿ ನಿನಗೆ ಅಂತೇ!. ಹಾಗೆ ಸಚಿನ್ ಎಷ್ಟೋ ಬಾರಿ ಔಟ್ ಆಗದೆ ಒಂದು ರೂಪಾಯಿ ತಗೆದುಕೊಂಡಿದೆ. ಹೀಗೆ ಶಿಷ್ಯನ ಕೌಶಲ್ಯಗಳು ತೀಕ್ಷ್ಣ ಆಗುವ ಹಾಗೆ ಮಾಡಿದ ಗುರುಗುಳು ಶ್ರೇಷ್ಠ. ಎಲ್ಲ ವಿದ್ಯೆಯನ್ನು ಧಾರೆ ಎರೆದ ಗುರುಗಳನ್ನು ಸಚಿನ್ ಮರೆತಿಲ್ಲ. ಅವರ ಹುಟ್ಟು ಹಬ್ಬಕ್ಕೆ ಹೋಗಿ ಅವರೇ ಮುಂದೆ ನಿಂತು ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದರು. ಇದು ಗುರುಗಳ ನಿಶ್ವರ್ಥ್ ಮತ್ತು ಶ್ರೇಷ್ಠತೆಯನ್ನು ಹೇಳುತ್ತದೆ.
ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ಇವರ ಕೊಡುಗೆ ಅಪಾರವಾದದ್ದು. ೧೯೬೨ ರಲ್ಲಿ ಭಾರತದ ರಾಷ್ಟ್ರಪತಿಗಳಾಗಿ ಆಯ್ಕೆ ಆದರು . ಇದೆ ಸಮಯದಲ್ಲಿ ಅಮೇರಿಕಾದಲ್ಲಿ ‘ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್’ ಪುಸ್ತಕ ಬಿಡುಗಡೆಗೊಂಡಿತು. ತಾವು ಪ್ರಾಧ್ಯಾಪಕರಾಗಿದ್ದ ಮತ್ತು ಉಪಕುಲಪತಿಗಳಾಗಿದ್ದ ಸಮಯದಲ್ಲಿ ಅವರ ಕೊಡುಗೆ ಅಪಾರ ಮತ್ತು ವಿದ್ಯಾರ್ಥಿಗಳಿಗೆ ಪ್ರೀತಿಪಾತ್ರರಾಗಿದ್ದರು. ಅವರ ನೀಡಿದ ಕೊಡುಗೆಗಳಿಗೆ ಅನೇಕ ಬಿರುದುಗಳು ಹರಿದು ಬಂದಿವೆ ಅದರಲ್ಲಿ ವಿಶೇಷವಾದ ಬಿರುದುಗಳು “ಭಾರತ ರತ್ನ”, “ಆರ್ಡರ್ ಆಫ್ ಮೆರಿನ್”ಪ್ರಶಸ್ತಿ”,”ಬ್ರಹ್ಮ ವಿದ್ಯಾ ಭಾಸ್ಕರ ” ವ್ಯಾಟಿಕನ್ ಸಿಟಿ ,ಪೋಪ್ ಜಾನ್ ರಿಂದ “ನೈಟ್ ಆಫ್ ದ ಆರ್ಮಿ” ಹೀಗೆ ಹಲವಾರು ಬಿರುದುಗಳು ಅವರ ಪಾಲಾಗಿದ್ದವು.
ಅವರ ಹುಟ್ಟಿದ ದಿನ ಸೆಪ್ಟೆಂಬರ್ ೫ ಅದಕ್ಕೆ ಅವರ ಹುಟ್ಟು ಹಬ್ಬವನ್ನು ಆಚರಿಸಬೇಕು ಎಂದು ವಿದ್ಯಾರ್ಥಿಗಳು ಹೇಳಿದಾಗ “ವೃತ್ತಿ ಮತ್ತು ಶಿಕ್ಷಣ ಮೇಲೆ ಅಪಾರ ಮೇಲೆ ಪ್ರೀತಿಯಿಂದ ನನ್ನ ಹುಟ್ಟು ಹಬ್ಬವನ್ನು “ಶಿಕ್ಷಕ ದಿನಾಚರಣೆ” ಮಾಡಿ ಎಂದು ಹೇಳಿ ಇಂದಿಗೂ ಎಲ್ಲ ಶಿಕ್ಷಕರಿಗೆ ಗೌರವ ಮತ್ತು ಅದೊಂದು ನಿಶ್ವಾರ್ಥ ಸಮಾಜ ಸೇವೆ ಎಂದು ಸಾರಿದ್ದಾರೆ
Categories: Articles
