Articles

ವಿಶ್ವಗುರಿವಿನ ಸ್ಥಾನಕ್ಕಾಗಿ ೨೪/೭ ಕೆಲಸ ಮಾಡುತ್ತಿರುವ ವರ್ಲ್ಡ್ ಲೀಡರ್ ಮೋದಿ!

By ವಿಠಲ.ಆರ್.ಯಂಕಂಚಿ, ಬಮ್ಮನಜೋಗಿ

ಭವ್ಯ ಭಾರತದ ಕನಸುಗಾರ ಆಡಳಿತದ ಚಾಣಾಕ್ಯ ˌಚಲದಂಕ ಮಲ್ಲˌ ಸವಾಲುಗಳನ್ನು ಮೇಟ್ಟಿ ನಿಲ್ಲುವ ಸರದಾರ ಮುನ್ನುಗ್ಗುವ ಎದೆಗಾರಿಕೆಯನ್ನು ಹೊಂದಿರುವ ನಾಯಕ ˌಕ್ರೀಯಾಶೀಲ ವ್ಯಕ್ತಿತ್ವ ಹೊಂದಿರುವ ರಾಜಕಾರಣಿಯಾಗಿರುವ ಶ್ರೀ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವೇ ಒಂದು ಮೈಲುಗಲ್ಲಾಗಿದೆ. ಮೊದಿಜೀಯವರ ನೇತೃತ್ವದ ಎನ್‌ಡಿಎ ಸರ್ಕಾರದ ಏಳು ವರ್ಷಗಳ ಅವಧಿಯಲ್ಲಿ ಉತ್ತಮ ಸಾಧನೆಯನ್ನೇ ಮಾಡಿದೆ. ಆರೋಗ್ಯ, ರಾಷ್ಟ್ರೀಯ ಭದ್ರತೆ, ಸ್ವಚ್ಛತಾ ಅಭಿಯಾನ ˌಮನ್ ಕಿ ಬಾತ್ ಕಾರ್ಯಕ್ರಮ ಸೇರಿ ಹತ್ತು ಹಲವು ಕ್ಷೇತ್ರಗಳಲ್ಲಿ ಹಿಂದಿನ ಸರಕಾರಗಳಿಗೆ ಹೋಲಿಕೆ ಮಾಡಿದರೆ ಸರ್ಕಾರ ರಚಿಸಿ ಉತ್ತಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ.

  • ನೋಟು ಅಮಾನ್ಯ: ಸರ್ಕಾರದ ಅತಿ ದೊಡ್ಡ ನಿರ್ಣಯವೆಂದರೆ ನೋಟು ಅಮಾನ್ಯ. 2016 ನ.8ರಂದು 500, 1000 ರೂ.ನೋಟುಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿತು. ಮೊದಿಜೀಯವರು ದೊಡ್ಡದಾದ ಎಡವಟ್ಟನ್ನು ಮಾಡಿಕೊಂಡರು ಎಂದು ದೇಶದ ತುಂಬೆಲ್ಲಾ ಅಲ್ಲಲ್ಲಿ ಜನ ಮಾತಿಡತೊಡಗೀದರು.ಮತ್ತೆ ಕೆಲವರು ಮೊದಿಜೀಯವರನ್ನು ಹಾಡಿ ಹೋಗಳಿ ಅಟ್ಟಕ್ಕೆರಿಸಿದರು.ಆದರೆ ಪರ— ವಿರೋದದ ನಡುವೆ ದೇಶದಲ್ಲಿರುವ ಕಪ್ಪುಹಣ ತೊಡೆದು ಹಾಕುವ ನಿಟ್ಟಿನಲ್ಲಿ ಈ ಕ್ರಮ ಭಾರಿ ಯಶಸ್ಸು ಪಡೆದುಕೊಂಡಿತು. ಆರ್‌ಬಿಐ ನೀಡಿದ ಮಾಹಿತಿ ಪ್ರಕಾರ ಶೇ.99ರಷ್ಟು ಅಮಾನ್ಯಗೊಂಡ ನೋಟುಗಳು ವಾಪಸಾಗಿವೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದ್ದರೂ, ಸದ್ಯ ನ.8, 2016ಕ್ಕೆ ಹಿಂದೆ ಹೇಗೆ ನಗದು ಪೂರೈಕೆ ಮಾರುಕಟ್ಟೆಯಲ್ಲಿತ್ತೋ ಅದಕ್ಕೆ ವಾಪಸಾಗಿದೆ.

  • ಜಿಎಸ್‌ಟಿ ಜಾರಿ: ಒಂದರ ನಂತರ ಮತ್ತೊಂದು ಎನ್ನುವಂತೆ ಯೋಜನೆಗಳನ್ನು ಜಾರಿಗೊಳಿಸುತ್ತಿರುವದು ನೋಡಿದರೆ ಯುವಕರಿಗೆ ಇಂತಹ ನಾಯಕರು ಬೇಕಾಗಿದ್ದರು ದೇಶಕ್ಕೆ ಎಂದು ಖುಷಿಪಡತೊಡಗಿದರು.ಬಹಳಷ್ಟು ಕಗ್ಗಂಟಾಗಿದ್ದ ಜಿಎಸ್‌ಟಿಯನ್ನು ಜಾರಿ ಮಾಡಿದ ಹೆಗ್ಗಳಿಕೆ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ. ವಿವಿಧ ರಾಜ್ಯ ಸರ್ಕಾರಗಳು ಮತ್ತು ಪಕ್ಷಗಳ ನಾಯಕರ ಜತೆಗೆ ಮಾತುಕತೆ ನಡೆಸಿ ಈ ಪ್ರಯತ್ನ ನಡೆಸಲಾಗಿದೆ. ಆರಂಭದಲ್ಲಿ ವಿವಿಧ ವಸ್ತುಗಳ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಗಳನ್ನು ನಂತರ ಹಂತ ಹಂತವಾಗಿ ಪರಿಷ್ಕರಿಸಿ ಸರಳೀಕರಣಗೊಳಿಸಲಾಯಿತು. ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ಮಂಡಳಿ ನಿಯಮಿತವಾಗಿ ಸಭೆ ಸೇರಿ ನಿರ್ಧಾರ ಕೈಗೊಳ್ಳತೊಡಗಿತು.

  • ಮೇಕ್‌ ಇನ್‌ ಇಂಡಿಯಾ: ಬ್ರಾಂಡ್‌ ಇಂಡಿಯಾ ಸ್ವದೇಶಿ ಇಂಡಿಯಾ ಎಂದು ಕರೆಯಲಾಯಿತು. ಈ ಯೋಜನೆಗೆ ಪುಷ್ಠಿ ಸಿಕ್ಕಿದ್ದೇ ಪ್ರಧಾನಿ ಮೋದಿ ಆಡಳಿತದಲ್ಲಿ. ಉತ್ಪಾದನಾ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲಿ ಪ್ರಧಾನ ಕೇಂದ್ರವಾಗಬೇಕು ಎಂದು ಮೇಕ್‌ ಇನ್‌ ಇಂಡಿಯಾ ಜಾರಿಗೆ ತಂದಿದ್ದಾರೆ. 2014ರ ಸೆ. 25ರಂದು ಘೋಷಣೆಯಾದ ಬಳಿಕ 16.40 ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳ ಹೂಡಿಕೆ ವಾಗ್ಧಾನ ಬಂದಿತು. 25 ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ನಿಯಮಗಳಲ್ಲಿ ಸಡಿಲಿಕೆ ಮಾಡಿದ್ದರಿಂದ ಬಹಳಷ್ಟು ಹೂಡಿಕೆ ಮಾಡಲಾಯಿತು.

  • ಡಿಜಿಟಲ್‌ ಇಂಡಿಯಾ: ಪ್ರಸ್ತುತ ದಿನಮಾನಗಳಲ್ಲಿ ದೇಶದಲ್ಲಿ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ 627 ಮಿಲಿಯನ್‌ ತಲುಪಿದೆ. ಅದಕ್ಕೆ ಪೂರಕವಾಗಿ ಮೊಬೈಲ್‌, ಇಂಟರ್‌ನೆಟ್‌ ಆಧಾರಿತ ವಹಿವಾಟಿಗೆ ಕೇಂದ್ರ ಪ್ರೋತ್ಸಾಹ ನೀಡಿದೆ. ಕನಿಷ್ಠ ಮೊತ್ತಕ್ಕೆ ಉತ್ತಮ ರೀತಿಯಲ್ಲಿ ಇಂಟರ್‌ನೆಟ್‌ ನೀಡುವುದರಿಂದಾಗಿ ಸುಮಾರು 500 ಮಿಲಿಯನ್ ಜನರಿಗೆ ಅನುಕೂಲವಾಗಿದೆ.ಹಳ್ಳಿಯ ಯುವಕರಂತು ನಗದು ರಹಿತ ವ್ಯವಹಾರಕ್ಕೆ ದುಂಬಾಲು ಬಿದ್ದಿದ್ದಾರೆ.ಈ ವ್ಯವಸ್ಥೆ ಜಾರಿಗೆ ತಂದಿರುವದರಿಂದ ಸರ್ಕಾರವನ್ನು ಹೋಗಳದ ಯುವಕರಿಲ್ಲ. ಸರ್ಕಾರಿ ಸ್ವಾಮ್ಯದ ಭೀಮ್‌ ಆ್ಯಪ್‌ಗೂ ಬಹಳಷ್ಟು ಜನಪ್ರಿಯತೆ ಇದೆ.

  • ಜನಧನದ ಖಾತೆ:—ಮೇಲು— ಕೀಳು ,ಬಡವ —ಶ್ರೀಮಂತ ಎನ್ನದೆ ದೇಶದಲ್ಲಿರುವ ಎಲ್ಲಾ ವರ್ಗದ ಜನರನ್ನು ಅರ್ಥ ವ್ಯವಸ್ಥೆಗೆ ಸೇರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೊಂದಿದ್ದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.ದೇಶದ ಮುಕ್ಕಾಲು ಬಾಗ ಮಂದಿ ಶೂನ್ಯ ಖಾತೆಯನ್ನು ಹೊಂದಿದ್ದಾರೆ. ಈ ಖಾತೆಗಳಲ್ಲಿ ಸಾವಿರಾರು ಕೋಟಿ ರೂ. ಮೊತ್ತವೂ ಇದೆ. ಈ ಖಾತೆಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳಿಂದ ನೀಡಿಕೆಯಾಗುವ ನಗದನ್ನು ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೇ ವರ್ಗಾಯಿಸಲಾಗುತ್ತಿದೆ. ಹೀಗಾಗಿ, ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿದಂತಾಗಿದೆ.

  • ಉಜ್ವಲ ಯೋಜನೆ: ಬಡತನ ರೇಖೆಗಿಂತ ಕೆಳಗಿರುವ 5 ಕೋಟಿ ಮಂದಿಗೆ ಉಚಿತ ಅಡುಗೆ ಅನಿಲ ನೀಡುವುದಕ್ಕಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಗೆ ತರಲಾಗಿದೆ. ಅದಕ್ಕಾಗಿ ಕನಿಷ್ಠ ಮೊತ್ತ 1,600 ರೂ. ನಿಗದಿಪಡಿಸಲಾಗಿದೆ. ಕುಟುಂಬದಲ್ಲಿರುವ ಮಹಿಳೆಯ ಹೆಸರಿನಲ್ಲಿಯೇ ಅದನ್ನು ನೀಡಲಾಗುತ್ತದೆ. ಈ ಮೂಲಕ ಮಹಿಳಾ ಸಬಲೀಕರಣಕ್ಕೂ ಸರ್ಕಾರ ಒತ್ತು ನೀಡಿದೆ. ಅಡುಗೆ ಅನಿಲ ಸಹಾಯಧನ ಬೇಡ ಎಂದು ಸ್ವಯಂಘೋಷಣೆ ಮಾಡುವುದಕ್ಕೂ ಪ್ರೋತ್ಸಾಹ ನೀಡಲಾಗಿದೆ.ಹಳ್ಳಿಯ ಮಹಿಳೆಯರ ಗೊಳು ಕಣ್ಣಾರೆ ಕಂಡವರಿಗೆ ತಿಳಿಯುತ್ತದೆ ಎನ್ನುವದನ್ನರಿತು ಇ ಯೋಜನೇಯನ್ನೂ ಜಾರಿಗೆ ತಂದಿದ್ದಾರೆ.ಬಡತನವನ್ನು ಅನೂಭವಿಸಿದವರಿಗೆ ಮಾತ್ರ ಅದರ ಆಳ ಗೊತ್ತಾಗುತ್ತದೆ.ಎಸಿ ರೂಮಲ್ಲಿ ಕೂತು ಮಾತಾಡುವವರಿಗೆ ಬಡತನದ ಮತ್ತು ಮಹಿಳೆಯರ ಕಷ್ಟ ತಿಳಿಯುವದಿಲ್ಲ.

  • ಆರೋಗ್ಯ ಯೋಜನೆ: ರಾಷ್ಟ್ರೀಯ ಆರೋಗ್ಯ ಯೋಜನೆ ಅಥವಾ ಆಯುಷ್ಮಾನ್‌ ಭಾರತ ಯೋಜನೆಯಡಿ ದೇಶದ ಕಡು ಬಡವರಿಗೆ ಉತ್ತಮ ಆರೋಗ್ಯ ಸೌಲಭ್ಯವನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಈ ಯೋಜನೇಯು ಸಹ ಬಡತನದಲ್ಲಿ ಬೆಂದವರಿಗೆ ಅನುಕೂಲವಾಗಲಿ ಅವರ ಕಷ್ಟಕ್ಕೆ ಸಹಾಯವಾಗಲಿ ಎನ್ನುವ ದೄೄೄಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. 14, 856 ಆಸ್ಪತ್ರೆಗಳು ಈ ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತವೆಂದು ಮಾಹಿತಿ ನೀಡಲಾಗಿದೆ.

  • ಮನ್‌ ಕಿ ಬಾತ್‌: ದಿಲ್ಲಿಯಿಂದ ಹಳ್ಳಿವರೆಗೆ ಸಂಪರ್ಕ ಹೊಂದುವ ಸದುದ್ದೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ನಾಗರಿಕರ ಜತೆಗೆ ಯಾವತ್ತು ನಾವಿದ್ದೆವೆ ಎನ್ನೂವ ಸಂಪರ್ಕ ಕೊಂಡಿಯಾಗುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಜೀ ಈ ವಿಶೇಷ ಕಾರ್ಯಕ್ರಮವನ್ನು “ಮನ್‌ ಕಿ ಬಾತ್‌’ ಆರಂಭಿಸಿದರು. ಪ್ರಜೆಗಳು ಪ್ರಧಾನಿಗೆ ಆಡಳಿತ ಸೇರಿದಂತೆ ಹತ್ತು ಹಲವು ವಿಚಾರಗಳಲ್ಲಿ ಸಲಹೆ, ಸೂಚನೆಗೆ ಅವಕಾಶವಿತ್ತು. ಪ್ರತಿ ಭಾನುವಾರ 20 ನಿಮಿಷ ಈ ಕಾರ್ಯಕ್ರಮ ಇರುತ್ತಿತ್ತು. ಕೇಳುಗರಿಂದ ಸುಮಾರು ಸಾವಿರಾರು ವಿಚಾರದಾರೆಗಳು ಬಂದಿದ್ದವು.ಅವುಗಳಲ್ಲಿ ಬಹಳಷ್ಟನ್ನು ಅನುಕರಿಸುವದು ಆಗಿದೆ.

  • ಸ್ವಚ್ಛ ಭಾರತ ಮಿಷನ್‌: ದೇಶಾದ್ಯಂತ ಶುಚಿತ್ವದ ಅರಿವು ಮೂಡಿಸಲು 2014ರಲ್ಲಿ ಸ್ವಚ್ಛ ಭಾರತ ಅಭಿಯಾನ ಶುರು ಮಾಡಲಾಯಿತು. ಬೀದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಬಡಾವಣೆಗಳಲ್ಲಿ ಶುಚಿತ್ವದ ಅರಿವು ಮೂಡಿಸಲು ಈ ಯೋಜನೆ ಮೂಲಕ ಪ್ರಯತ್ನಿಸಲಾಗಿದೆ. ಬಯಲು ಶೌಚಾಲಯ ಪದ್ಧತಿ ನಿವಾರಿಸಲು ಶೌಚಾಲಯ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಸಹಾಯಧನ ನೀಡಲಾಯಿತು. 2018 ಅ.2ರಂದು ಮಹಾತ್ಮಾ ಗಾಂದಿಜೀ ಅವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ಈ ಬಯಲು ಬಹಿರ್ದೇಶೆ ಮುಕ್ತ ಮಾಡಿ ಪ್ರತ್ಯೇಕ ಶೌಚಾಲಯಕ್ಕೆ ಚಾಲನೆಯನ್ನು ನೀಡಿದ್ದರು.ಮಹಿಳೆಯರ ಮಾನಪ್ರಾಣವು ಇದರಲ್ಲಿ ಅಡಗಿದೇ. ಪ್ರಧಾನಿ ಮೋದಿಯವರು ಘೋಷಿಸಿದ್ದ ಈ ಯೊಜನೆಯಿಂದ 25 ರಾಜ್ಯಗಳು ಬಯಲು ಶೌಚ ಮುಕ್ತರಾಜ್ಯಗಳಾಗಿವೆ.

  • ರಸ್ತೆ ಮತ್ತು ವಿದ್ಯುತ್‌ ಸಂಪರ್ಕ: ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್‌ ಸಂಪರ್ಕ ನೀಡುವ ಪ್ರಕ್ರಿಯೆ ಕೇಂದ್ರ ಸರ್ಕಾರದ ಅವಧಿಯಲ್ಲಿ ವೇಗ ಪಡೆದಿದೆ. ಇದುವರೆಗೆ 2.62 ಕೋಟಿ ಮನೆಗಳಿಗೆ ಮತ್ತು ಎಲ್ಲಾ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ. ಇದರ ಜತೆಗೆ ರಸ್ತೆ ನಿರ್ಮಾಣದ ವೇಗ ಕೂಡ ಏಳು ವರ್ಷಗಳ ಅವಧಿಯಲ್ಲಿ ವೃದ್ಧಿಸಿತ್ತು. ಪ್ರತಿ ದಿನ ಹೊಸತಾಗಿ 40 ಕಿ.ಮೀಯಷ್ಟು ರಸ್ತೆ ನಿರ್ಮಾಣ ಮಾಡಿ ದಾಖಲೆಯನ್ನು ನಿರ್ಮೀಸಿದ್ದಾರೆ.

  • ಮುದ್ರಾ ಯೋಜನೆ: 15 ಸಾವಿರಕ್ಕೂ ಅಧಿಕ ಸ್ಟಾರ್ಟ್‌ಅಪ್‌ ಗಳು ಸ್ಟಾರ್ಟಪ್‌ ಇಂಡಿಯಾ ಯೋಜನೆಯಲ್ಲಿ ನೋಂದಣಿಯಾಗಿವೆ. ಮೋದಿ ಸರ್ಕಾರ ಅದಕ್ಕಾಗಿಯೇ ನಿಯಮಗಳನ್ನು ಸಡಿಲಿಕೆ ಮಾಡಿದೆ. ಮುದ್ರಾ ಯೋಜನೆಯಡಿ ಸಣ್ಣ ಪ್ರಮಾಣದ ಉದ್ದಿಮೆಗಳಿಗೆ ಹಣಕಾಸು ನೆರವು ನೀಡಲಾಗುತ್ತದೆ. ಈ ಯೋಜನೆ ಅನ್ವಯ 2019 -20ನೇ ಸಾಲಿನಲ್ಲಿ 3 ಲಕ್ಷ ಕೋಟಿ ರೂ.ಗಳಷ್ಟು ಸಾಲವನ್ನು ನೀಡಲಾಗಿದೆ.

ಮೊದಿಜೀಯವರು ಕಾರ್ಯಗಳ ಮೂಲಕವೇ ವಿರೋದಿಗಳಿಗೆ ತಕ್ಕಪಾಠವನ್ನು ನೀಡುತ್ತಿದ್ದಾರೆ.ಅವರ ಆಡಳಿತದ ಅವದಿಯಲ್ಲಿ ಒಂದೇ ಒಂದು ಬ್ರಷ್ಟಾಚಾರದ ಹಗರಣವಿಲ್ಲ ˌಬೇಜಾವಾಬ್ದಾರಿ ಹೇಳಿಕೆಗಳಿಲ್ಲ ˌ ಸಂಪುಟದಲ್ಲಿ ಗೊಂದಲವಿಲ್ಲ ˌಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಿದ್ದಾರೆ ˌರೈತರಿಗೆ ˌ ಕೂಲಿ ಕಾರ್ಮಿಕರಿಗೆ ˌದಿನದಲಿತರಿಗೆ ˌನೊಂದವರಿಗೆ ದ್ವನಿ ಇಲ್ಲದವರಿಗೆ ˌನೀರ್ಗತಿಕರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.ಇಂತಹ ಮಹಾನ್ ನಾಯಕರಿಗೆ ಬೆಂಬಲವಾಗಿ ˌಪ್ರೋತ್ಸಾಹ ನೀಡುವದನ್ನು ಬಿಟ್ಟು ಕಾಲೆಳೆಯುತ್ತಿರುವದು ಶೋಚನೀಯವಾಗಿದೆ.ಆಂತರೀಕ ವಿಚಾರ ಏನೆ ಇರಲಿ ದೇಶದ ಪ್ರಶ್ನೆ ಬಂದಾಗ ಒಂದಾಗಿ ಒಗ್ಗಟ್ಟಾಗಿ ಎದುರಿಸುವದನ್ನು ಬಿಟ್ಟು ದೇಶದ್ರೋಹಿಗಳಂತೆ ಕೆಲವು ನಾಯಕರು ವರ್ತಿಸುತ್ತಾರೆ.ಇಂತಹ ಇಬ್ಬಗೆಯ ನೀತಿಯ ರಾಜಕಾರಣಿಗಳಿಗೆ ಮತದಾರ ಬಾಂಧವರೆ ರಾಜೀನಾಮೆಯನ್ನು ಕೊಡಿಸಿ ಮನೆಗೆ ಕಳಿಸಿದ್ದಾರೆ.ಮೊದಿಜೀಯವರು ಭಾರತವನ್ನು ವಿಶ್ವಗುರು ಭಾರತವನ್ನಾಗಿ ಮಾಡಬೇಕು. ಪುರಾತನ ಕಾಲದ ಗಥವೈಭವವನ್ನು ಮರಳಿ ಕಲ್ಪಿಸಬೇಕೆಂದು ಕನಸು ಕಾಣುತ್ತಿರುವ ಭವ್ಯಭಾರತದ ಪ್ರಧಾನ ಮಂತ್ರಿಗಳಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೊರುತ್ತೆನೆ.

Categories: Articles

Leave a Reply