Articles

ಮಾಜಿ ಉಪಮುಖ್ಯಮಂತ್ರಿ ಲಕ್ಷಣ್ ಸವದಿಯವರಿಗೆ ಸಿಂದಗಿ ಉಸ್ತುವಾರಿ.. ಉಸ್ತುವಾರಿ ಸಿಗಲು ಕಾರಣ ? ನೋ ಮ್ಯಾಜಿಕ್ ಓನ್ಲಿ ಹಾರ್ಡವರ್ಕ್ !

ಮಾತು ತಪ್ಪದ ನಾಯಕ:-

೨೦೧೯ರಲ್ಲಿ ರಾಜ್ಯದಲ್ಲಿ ನಡೆದ ೧೨ ಉಪಚುನಾವಣೆಯ ಸಂದರ್ಭದಲ್ಲಿ ಶಿವಯೋಗಿ ಸಾಕ್ಷಿಯಾಗಿ ಹೇಳುತ್ತೇನೆ ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಯಡಿಯೂರಪ್ಪನವರು ಭಾಗವಹಿಸಿದ ಬಹಿರಂಗ ಸಭೆಯಲ್ಲಿ ಹೇಳಿದ ಹಾಗೆ ಮಾಡಿ ತೋರಿಸಿದ್ದು ಅಥಣಿಯ ಜನರ ಸೇವಕ ಲಕ್ಷ್ಮಣ್ ಸವದಿ! ಒಂದು ಸಲ ಮಾತು ಕೊಟ್ಟರೇ ಮುಗಿತು ಪ್ರಾಣ ಒತ್ತೆ ಇಟ್ಟಾದರು ಮಾತು ಉಳಿಸಿಕೊಳ್ಳುವ ಜಾಯಮಾನ ಲಕ್ಷ್ಮಣ್ ಸವದಿಯದ್ದು ಎಂದು ಘಂಟಾಘೋಷವಾಗಿ ಹೇಳಿದಾಗ ಜನರಿಂದ ಕೇಳಿ ಬಂದಿದ್ದು “ಬೋಲೋ ಭಾರತ ಮಾತಾ ಕಿ ಜೈ”.

ಸವದಿಯವರ ಮಾತಿನ ಪ್ರಖರತೆಗೆ, ಅವರ ಬದ್ಧತೆಗೆ ಯಡಿಯೂರಪ್ಪನವರು ಶಬ್ಬಾಷಿಗಿರಿ ಕೊಟ್ಟಿದ್ದರು. ರಾಜ್ಯದಲ್ಲಿ ೧೨ ಉಪಚನಾವಣೆಗೆ ರಂಗೇರಿದ್ದೇ ಅಥಣಿಯಿಂದ ಅದಕ್ಕೆ ನಿಕಟಪೂರ್ವ ಮುಖ್ಯಮಂತ್ರಿಗಳು ಯಡಿಯೂರಪ್ಪನವರು ಸವದಿ ಭಾಷಣ ಕೇಳಿ ಇದೊಂದು ಮುತ್ಸದ್ದಿ ಭಾಷಣವಾಗಿತ್ತು ಎಂದಿದ್ದರು. ಅದೇ ತರಹ ೪೦ ಸಾವಿರ ಮತಗಳ ಅಂತರದಿಂದ ಅಥಣಿಯಲ್ಲಿ ಗೆಲುವು ದಾಖಲಿಸಿದ್ದರು. ಗೆಲುವಿನ ಮತಗಳ ಅಂತರದಲ್ಲಿ ಬೈರತಿ ಬಸವರಾಜ ಮೊದಲ ಸ್ಥಾನದಲ್ಲಿ ಇದ್ದರೇ , ಮಹೇಶ್ ಕುಮಟಳ್ಳಿ ಎರಡನೆಯ ಸ್ಥಾನದಲ್ಲಿ ಇದ್ದರು.

ಉಪಚನಾವಣೆಗಳಲ್ಲಿ ಉಸ್ತುವಾರಿ ವಹಿಸಿಕೊಂಡು ಗೆಲ್ಲಿಸಿಕೊಂಡು ಬರುವುದು ಸಾಮಾನ್ಯ ಮಾತಲ್ಲ. ಇತ್ತೀಚಿನ ೧೦-೨೦ ವರ್ಷಗಳ ಸಾರ್ವತ್ರಿಕ ಚುನಾವಣೆ ಇರಲಿ ಅಥವಾ ಉಪಚುನಾವಣೆ ಇರಲಿ ರಾಜ್ಯದಲ್ಲಿ ಕೆಲವೇ ಕೆಲವು ಹೆಸರುಗಳು ಮುಂಚುಣಿಯಲ್ಲಿ ನಿಲ್ಲುತ್ತವೆ. ಅದರಲ್ಲಿ ವಿಶೇಷವಾಗಿ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿದ್ದ ಡಿಕೆ ಶಿವಕುಮಾರ್, ಲಕ್ಷ್ಮಣ್ ಸವದಿ,ವಿ ಸೋಮಣ್ಣ , ಬೊಮ್ಮಾಯಿ ಮತ್ತು ಇತ್ತೀಚಿಕೆ ಬಿಜೆಪಿಯಲ್ಲಿ ದೊಡ್ಡ ಹೆಸರು ಮಾಡಿರುವ ಯಂಗ್ ರಾಜಾಹುಲಿ ವಿಜಯೇಂದ್ರ! ಕುಮಾರಸ್ವಾಮಿ , ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಒಂದೊಂದು ಪಕ್ಷದ ನಾಯಕತ್ವ ವಹಿಸಿದವರು. ಇವರಿಗೆ ತಮ್ಮದೇ ಆದ ಆಪಾರ ಬೆಂಬಲಿಗರು ರಾಜ್ಯದ ತುಂಬೆಲ್ಲ ಸಿಗುತ್ತಾರೆ. ಆದರೆ ಇವರ ನಾಯಕತ್ವಕ್ಕೆ ಗಟ್ಟಿತನ ಕೊಡಲು ಅನೇಕ ಟ್ರಬಲ್ ಶೂಟರ್, ಚಾಣಕ್ಯಗಳು ಇವರ ಜೊತೆ ಇರಲೇಬೇಕು. ಕೆಲಯೊಮ್ಮೆ ಸ್ವತಃ ಅವರೇ ಅಖಾಡಕ್ಕೆ ಇಳಿದು ತೊಡೆ ತಟ್ಟಿದ್ದು ಇದೆ. ೨೦೧೮ಕ್ಕಿಂತ ಮೊದಲು ನಡೆದ ಗುಂಡ್ಲುಪೇಟೆ ಮತ್ತು ನಂಜನಗೂಡು ಚುನಾವಣೆಯಲ್ಲಿ ಯಡಿಯೂರಪ್ಪನವರ ಉಸ್ತುವಾರಿಗೆ ಆಡಳಿತ ಪಕ್ಷವಾದ ಕಾಂಗ್ರೇಸ್ ಸುಸ್ತುಹೊಡೆದಿತ್ತು. ಪೂರ್ಣ ಕ್ಯಾಬಿನೆಟ್ ಸಹಾಯದಿಂದ ಗೆಲುವಿನ ದಡ ಸೇರಿದ್ದರು. ಅಷ್ಟೊಂದು ಖಡಕ್ ಉಸ್ತುವಾರಿ ಯಡಿಯೂರಪ್ಪನವರದು ಆಗಿತ್ತು!

ಪಕ್ಷ ನಿಷ್ಠೆ:-

ಇಂದು ರಾಜ್ಯದಲ್ಲಿ ನಡೆಯುತ್ತಿರುವ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಗಳಿಗೆ ಎರಡು ಪಕ್ಷಗಳು ಗೆಲ್ಲೆಲೇಬೇಕು ಎಂದು ಪಣತೊಟ್ಟಿವೆ. ವಿಧಾನಸಭೆಯ ಮೊಗಸಾಲೆಯಲ್ಲಿ ದರ ಏರಿಕೆಯ ಬಗ್ಗೆ ದಿನಗಟ್ಟಲೆ ಭಾಷಣ ಮಾಡಿದ್ದ ವಿರೋಧ ಪಕ್ಷದ ನಾಯಕರು ಜನರಿಗೆ ತುಂಬಾ ಅನಾನುಕೂಲವಾಗಿದೆ ಎಂದು ಹೇಳಿದ್ದಾರೆ. ಅದಕ್ಕೆ ಎರಡರಲ್ಲಿ ಗೆದ್ದು ಸರ್ಕಾರದ ವಿರುದ್ದ ಜನರಿದ್ದಾರೆ ಎಂದು ಸಂದೇಶ ಸಾರಿದರೆ ೨೦೨೩ರ ಚುನಾವಣೆ ಸಲೀಸು. ಇತ್ತ ಕಡೆ ನಮ್ಮದು ಜನಪರ ಸರ್ಕಾರ ಎಂದು ಬಿಂಬಿಸಲು ಗೆಲ್ಲುವ ಅನಿವಾರ್ಯತೆ ಸರಕಾರಕ್ಕೆ ಇದೆ.

ಅದಕ್ಕೆ ಪಕ್ಷಗಳು ಅಳೆದುತೂಗಿ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಅದರಲ್ಲಿ ಆಡಳಿತ ಪಕ್ಷ ಮಂತ್ರಿಗಳನ್ನು ಉಸ್ತುವಾರಿಗಳನ್ನು ಮಾಡುವುದು ಸಾಮಾನ್ಯ ಅದರ ಜೊತೆ ಪಕ್ಷದ ಖಡಕ್ ಪಕ್ಷ ಸಂಘಟನೆಕಾರರನ್ನು ಇಂತಹ ಸಮಯದಲ್ಲಿ ಬಳಸಿಕೊಳ್ಳುತ್ತದೆ. ಇಂದು ಬಿಜೆಪಿಯಲ್ಲಿ ಅನೇಕರು ಉಸ್ತುವಾರಿಗೆ ಅರ್ಹತೆ ಹೊಂದಿದರೂ ಪಕ್ಷ ಆದರಲ್ಲೇ ಫೈನೆಸ್ಟ್ ಉಸ್ತುವಾರಿಯನ್ನು ಹುಡುಕುತ್ತದೆ. ಅದಕ್ಕೆಂದೇ ಸಿಂದಗಿಯಲ್ಲಿ ಮಂತ್ರಿ ಇಲ್ಲದೆ ಇದ್ದರೂ ಲಕ್ಷ್ಮಣ್ ಸವದಿಯವರನ್ನು ಉಸ್ತುವಾರಿ ಲಿಸ್ಟಿಗೆ ಸೇರಿಸಿದ್ದಾರೆ. ಯಾವದೇ ಉಸ್ತುವಾರಿವಹಿಸಿಕೊಂಡು ಸುಮ್ಮನೆ ದೊಡ್ಡ ದೊಡ್ಡ ಸಭೆಗಳಿಗೆ ಹೋಗಿ ಕೈಬೀಸಿ ನಾಲ್ಕು ಮಾತನಾಡಿ ಬಂದು ಗೆಲ್ಲುವ ಕಾಲ ಇದಲ್ಲ. ಸ್ವತಃ ಕ್ಷೇತ್ರದಲ್ಲೇ ಉಳಿದು ಪಕ್ಷದ ಪಧಾಧಿಕಾರಿಗಳ ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿ ಅವರ ಮನೋಬಲವನ್ನು ಹೆಚ್ಚಿಸುವುದು ಅಲ್ಲದೆ ವಿರೋಧಿಗಳ ಕುತಂತ್ರಕ್ಕೆ ಪ್ರತಿ ತಂತ್ರ ಹಣೆಯಬೇಕು ಅದು ಎಲ್ಲರಿಂದಲೂ ಅಸಾಧ್ಯ! ಅದು ಅವರವರ ರಾಜಕೀಯ ನೈಪುಣ್ಯತೆ ಅವಲಂಬಿಸಿರುತ್ತದೆ. ಇಂಥಹ ಸಿದ್ದಿ ಲಕ್ಷ್ಮಣ್ ಸವದಿಯರಿಗೆ ಸಿದ್ದಿಸಿದೆ.

ಮಾಜಿ ಉಪಮುಖ್ಯಮಂತ್ರಿಯವರಿಗೆ ಉಸ್ತುವಾರಿ ಅಥವಾ ಚುನಾವಣೆ ಹೊಸದೇನೆಲ್ಲ. ಪಕ್ಷದ ಸಾರ್ವತ್ರಿಕ ಚುನಾವಣೆ, ಪಕ್ಷದ ಸಂಘಟನೆ ಮತ್ತು ಉಪಚುನಾವಣೆಯಲ್ಲಿ ಸವದಿಯವರ ಭಾಷಣ ಕೇಳಲು ಜನರು ಬರುವುದು ಯಾರು ಅಲ್ಲಗಳೆಯಲು ಸಾಧ್ಯವೇ? ೨೦೧೮ ರ ಚುನಾವಣೆಯಲ್ಲಿ ಸುಮಾರು ೨೦ಕ್ಕಿಂತ ಹೆಚ್ಚು ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡಿ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲವಾಗಿದ್ದು ನೆನಪಿಸಿಕೊಳ್ಳಬೇಕು. ಇದಕ್ಕಿಂತ ಮುಂಚೆ ಪರಿವರ್ತನಾ ಯಾತ್ರೆಯಲ್ಲೂ ಅವರ ಮಾತಿಗೆ ಜನ ಬೆಂಬಲಕೊಟ್ಟಿದ್ದರು. ಇದನ್ನೆಲ್ಲಾ ಗಮನಿಸಿಯೇ ಪಕ್ಷ ಇವರಿಗೆ ಮುಖ್ಯವಾದ ಜವಾಬ್ದಾರಿಗಳನ್ನು ಕೊಡುತ್ತಿದೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಮೊದಲ ಅಗ್ನಿಪರೀಕ್ಷೆ ಪ್ರವಾಹ! ಎಷ್ಟೇ ಸಮರ್ಥವಾಗಿ ನಿಭಾಯಿಸಿದರು ವಿರೋಧಿಗಳು ಬಾಯಿಚಟಕ್ಕೆ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿದ್ದರು. ಇದಾದ ನಂತರ ೧೨ ಕ್ಷೇತ್ರಗಳ ಉಪಚುನಾವಣೆ ! ಮೋದಿ ಮತ್ತು ಅಮಿತ್ ಷಾ ಯಡಿಯೂರಪ್ಪನವರ ಚಾಣಾಕ್ಷತನ ಬಗ್ಗೆ ಸಂಶಯವಿರಲಿಲ್ಲ ಆದರೆ ಸಂದಿಗ್ದ ಸ್ಥಿತಿಯಲ್ಲಿ ಹೇಗೆ ಎದುರಿಸುತ್ತಾರೆ ಎಂಬ ಆತಂಕ! ಆದರೆ ಯಡಿಯೂರಪ್ಪನವರು ಅಥಣಿ ಮತ್ತು ಕಾಗವಾಡ ಉಸ್ತುವಾರಿ ಸವದಿಯವರಿಗೆ ವಹಿಸಿ ಅಲ್ಲಿಂದಲೇ ಪ್ರಚಾರ ಶುರುಮಾಡಿ ಪಾಸಿಟಿವ್ ವೇವ ಪ್ರಾರಂಭಮಾಡಿದರು. ಫಲಿತಾಂಶ ಬಿಜೆಪಿ ಪಕ್ಷದ ಪರವಾಗಿತ್ತು ಅದರಲ್ಲಿ ವಿಶೇಷವಾಗಿ ಎರಡು ಕ್ಷೇತ್ರದ ಉಸ್ತುವಾರಿ ಪಡೆದ ಸವದಿಯವರಿಗೆ ಪಕ್ಷ ಅಭಿನಂದಿಸಿತ್ತು.

ಬಸವಕಲ್ಯಾಣ ಉಪಚುನಾವಣೆ

ಅಕ್ಟೋಬರ್ ೩ರಂದು ಬಸವಕಲ್ಯಾಣದಲ್ಲಿ ಭಗವಂತ ಖುಬಾ ಅವರಿಗೆ ಕೇಂದ್ರ ಮಂತ್ರಿ ಆದದ್ದಕ್ಕೆ ಸನ್ಮಾನ ಮತ್ತು ಶರಣು ಸಲಗರ ಶಾಸಕರಾಗಿ ಗೆದ್ದಿದ್ದಕ್ಕೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಶಾಸಕಾರಾದ ಶರಣು ಸಲಗರವರು ಜನರನ್ನುದ್ದೇಶಿಸಿ ಮಾತನಾಡುತ್ತ ಇಂದು ನಿಮ್ಮ ನೆಚ್ಚಿನ ನಾಯಕ ಸವದಿಯವರು ಇಲ್ಲಿರಬೇಕಿತ್ತು ಎಂದಾಗ ಜನರಿಂದ ಹೋಹೋ ಎಂದು ಉದ್ಘಾರ! ಅವರು ಅಕ್ಟೋಬರ್ ೨ಕ್ಕೆ ಬರುವದಕ್ಕೆ ಆಗುವದಿಲ್ಲ ೩ಕ್ಕೆ ಕಾರ್ಯಕ್ರಮ ಆಯೋಜನೆ ಮಾಡು ಎಂದಿದ್ದರು. ಅದಕ್ಕೆ ನಿನ್ನೆಯ ಬದಲಿಗೆ ಇಂದು ಎಂದರೆ ಅಕ್ಟೋಬರ್ ೩ಕ್ಕೆ ಹಮ್ಮಿಕೊಂಡಿದ್ದೇನೆ ಸವದಿ ಸಾಹೇಬರು ಬರಬೇಕಿತ್ತು ಆದರೆ ಇಂದು ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಗಾಗಿ ಕೋರ್ ಕಮಿಟಿ ಸಭೆ ಇರುವದರಿಂದ ಬಂದಿಲ್ಲ ಆದರೆ ಎಲ್ಲರಿಗೂ ಗೆಲುವಿನ ಧನ್ಯವಾದ ಅರ್ಪಿಸಿದ್ದಾರೆ ಎಂದು ಒಬ್ಬ ಆಯ್ಕೆಯಾಗಿ ಬಂದ ಶಾಸಕ ಹೇಳುತ್ತಾನೆ ಎಂದರೆ ಬಸವಕಲ್ಯಾಣದಲ್ಲಿ ಉಸ್ತುವಾರಿ ವಹಿಸಿಕೊಂಡ ಮಾಜಿ ಉಪಮುಖ್ಯಮಂತ್ರಿ ಕಾರ್ಯ ವೈಖರಿ ಹೇಗಿತ್ತು ಎನ್ನುವುದು ಬಿಚ್ಚಿ ಹೇಳಬೇಕಿಲ್ಲ!

ರಾಜ್ಯ ನಾಯಕನಾಗಿ ಪರಿವರ್ತನಾ ರ್ಯಾಲಿಯಲ್ಲಿ ರಾಜ್ಯದ ತುಂಬಲ್ಲಾ ಪ್ರವಾಸ , ಸಾರ್ವತ್ರಿಕ ಚುನಾವಣೆಯಲ್ಲಿ ಇವರ ಪ್ರಚಾರ ಹೊಡೆತಕ್ಕೆ ಆಧುನಿಕ ಭಗೀರಥನ ನಿದ್ದೆ ಹಾರಿಹೋಗಿತ್ತು. ಯಲಬುರ್ಗಾದಲ್ಲಿ ಬಸವರಾಜ್ ರಾಯರೆಡ್ಡಿ ಸೋತು ಸುಣ್ಣವಾಗಿದ್ದರು. ಅಥಣಿ,ಕಾಗವಾಡ ಮತ್ತು ಬಸವಕಲ್ಯಾಣದಲ್ಲಿ ತಮಗೆ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಪಕ್ಷಕ್ಕೆ ಗೆಲುವು ತಂದುಕೊಡುವದಲ್ಲದೆ ವರ್ಚಸ್ಸನ್ನು ಹೆಚ್ಚಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ:-

ಪ್ರಪಥಮ ಬಾರಿಗೆ ಪಕ್ಷದ ಚಿನ್ಹೆ ಮೇಲೆ ಬೆಳಗಾವಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿತ್ತು. ಚುನಾವಣೆಯ ಪ್ರಣಾಳಿಕೆ ಬಿಡುಗಡೆ ಸಮಾರಂಬದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಎಂ ಐಎಂ ನಡುವೆ ಹೊಂದಾಣಿಕೆ ಬಗ್ಗೆ ಬೆಳಗಾವಿ ಜನಕ್ಕೆ ಮನವಮುಟ್ಟುವಂತೆ ಹೇಳಿದ್ದರು. ಎಂ + ಎಂ ಎಂದರೆ ಮಾರಾಮಾರಿ ಎಂದು ಪಂಚ್ ಹೊಡೆದಿದ್ದರು ಇವೆಲ್ಲ ಕಾರ್ಯಕರ್ತರ ಹುಮ್ಮಸ್ಸು ದ್ವಿಗುಣಗೊಳಿಸುತ್ತದೆ. ಇದರಲ್ಲಿ ಇನ್ನೊಂದು ಹೇಳಿದ್ದರು ಯಾರು ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೇ ಅವರಿಗೆ ಜಾತಿ ಆಧಾರದ ಮೇಲೆ ಟಿಕೆಟ್ ಕೊಡುವದಿಲ್ಲ ಅವರ ಕೆಲಸ ನೋಡಿ ಪಕ್ಷ ಟಿಕೆಟ್ ಕೊಡುತ್ತದೆ. ಇದೆ ಅಲ್ಲವೇ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯ ಗೆಲುವಿಗೆ ಅವರ ಕಾಣಿಕೆ!

ಸಿಂದಗಿಯಲ್ಲಿ ಗೆಲುವಿನ ನಗೆ

ಪಕ್ಷ ಉಸ್ತುವಾರಿ ಕೊಡುವಾಗ ಒಬ್ಬ ವ್ಯಕ್ತಿಯ ಪಕ್ಷದ ನಿಷ್ಠೆ ಮತ್ತು ಬದ್ಧತೆ ನೋಡಿ ಮಹತ್ತರವಾದ ಕೆಲಸವನ್ನು ಕೊಡುತ್ತದೆ. ಇಂದು ಸವದಿಯವರು ಮಂತ್ರಿ ಇಲ್ಲದೆ ಇದ್ದರೂ ಸಿಂದಗಿಗೆ ಉಸ್ತುವಾರಿ ವಹಿಸಿದ್ದಾರೆ. ಅನೇಕ ಮಹಾನ್ ನಾಯಕರು ಇವರ ಜೊತೆ ಉಸ್ತುವಾರಿ ಇದ್ದರೂ ಇವರ ರಾಜಕೀಯ ನಡೆಗಳು, ಕಾರ್ಯಕರ್ತರ ಮನಗೆಲ್ಲುವುದು, ಅವರ ಪ್ರಖರ ಮಾತುಗಳು ಪಕ್ಷದ ಗೆಲುವಿಗೆ ಸಹಕಾರಿಯಾಗಬಲ್ಲದು ಎಂದು ಅವರ ಟ್ರ್ಯಾಕ್ ರೆಕಾರ್ಡ್ ಹೇಳುತ್ತದೆ. ಅಕ್ಟೋಬರ್ ೩೦ಕ್ಕೆ ನಡೆಯುವ ಸಿಂದಗಿ ಉಪಚುನಾವಣೆಯಲ್ಲಿ ಲಕ್ಷಣ್ ಸವದಿಯವರು ಮತ್ತೊಮ್ಮೆ ಕಾರ್ಯಕರ್ತರ ಜೊತೆಗೂಡಿ ಪಕ್ಷಕ್ಕೆ ಗೆಲುವು ತಂದುಕೊಡಲಿ ಎಂದು ಅಭಿಮಾನಿಗಳ ಆಶಯ!

Categories: Articles

Tagged as: ,

Leave a Reply