ರಾಜ್ಯದಲ್ಲಿ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಗೆ ವೇದಿಕೆ ಸಜ್ಜಾಗಿದ್ದು. ಮೂರೂ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಮೊಟ್ಟ ಮೊದಲಿಗೆ ಜೆಡಿಎಸ್ ನಂತರ ಕಾಂಗ್ರೇಸ್ ಕೊನೆಗೆ ಭಾರತೀಯ ಜನತಾ ಪಕ್ಷ ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕಾಂಗ್ರೇಸ್ ಪಕ್ಷದಿಂದ ಮಾನೆ ಮತ್ತು ಬಿಜೆಪಿಯಿಂದ ಶಿವರಾಜ್ ಸಜ್ಜನರ್ ಅಭ್ಯರ್ಥಿಗಳಾಗಿದ್ದರೆ.
ಕಾಂಗ್ರೇಸ್ ಪಕ್ಷ ಮತ್ತು ಜೆಡಿಎಸ್ ಇಂದು ತಮ್ಮ ಅಭ್ಯರ್ಥಿಗಳ ನಾಮಪತ್ರಗಳನ್ನು ಸಲ್ಲಿಕೆ ಮಾಡಿದವು. ಉಪಚುನಾವಣೆ ಗೆಲ್ಲೆಲೇಬೇಕು ಎಂದು ಸ್ವತಃ ವಿರೋಧ್ ಪಕ್ಷದ ನಾಯಕರಾದ ಸಿದ್ದರಾಮಯ್ಯ , ಅಧ್ಯಕ್ಷರಾದ ಡಿಕೆ ಜೊತೆಗೂಡಿ ಮಾನೆಯವರು ನಾಲ್ಕು ಸೆಟ್ಗಳಲ್ಲಿ ಚುನಾವಣೆ ಅಧಿಕಾರಿ ಅಶೋಕ್ ತೇಲಿ ಯವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.

ಮತ್ತೊಂದು ಕಡೆ ಜೆಡಿಎಸ್ ಯುವ ಮೋರ್ಚಾ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ತಮ್ಮ ಅಭ್ಯರ್ಥಿಯೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದರು.

Categories: news
