ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆಗೊಂದು ಮಹತ್ವದ ಪಾತ್ರ ಇದೆ. ಜನರು ತಮಗೆ ಯಾವ ನಾಯಕ/ಸೇವಕ ಬೇಕು ಎಂದು ನಿರ್ಧಾರ ಮಾಡುವ ಸಮಯ. ಕೆಲಯೊಂದು ಸಮಯ ಕೂಲಂಕುಷವಾಗಿ ಯೋಚನೆ ಮಾಡದೆ ಅವಸರದ ನಿರ್ಧಾರದಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ. ಅವಸರದ ನಿರ್ಧಾರ ಸರಿಪಡಿಸುವದಕ್ಕೆ ಮತ್ತೆ ಸಮಯ ತಗೆದುಕೊಳ್ಳುತ್ತದೆ. ಇಂದು ಸಿಂದಗಿಯಲ್ಲಿ ನಡೆಯುತ್ತಿರುವ ಉಪಚುನಾವಣೆ ಕದನ ಅನಿರೀಕ್ಷಿತ! ೨೦೨೩ಕ್ಕೆ ಬರಬೇಕಾದ ಚುನಾವಣೆ ೨೦೨೧ಕ್ಕೆ ಬಂದಿದೆ. ಸಿಂದಗಿಯಲ್ಲಿ ಚುನಾವಣೆ ರಂಗೇರಿದೆ! ಮಂತ್ರಿ ಮಂಡಲದ ನಾಲ್ಕೈದು ಸಚಿವರ ದಂಡೇ ಕ್ಷೇತ್ರದ ಪ್ರಚಾರಕ್ಕೆ ಆಗಮಿಸಿದ್ದಾರೆ. ಮತ್ತೊಂದು ಕಡೆ ಕಾಂಗ್ರೇಸ್ ಪಕ್ಷದ ರಾಜ್ಯ ಮಟ್ಟದ ನಾಯಕರು ನಾಮಪತ್ರ ಸಲ್ಲಿಕೆಗೆ ಬಂದು ಹೋಗಿದ್ದಾರೆ. ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳು ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಮೊನ್ನೆ ನಡೆದ ಬಹಿರಂಗ ಸಮಾವೇಶದಲ್ಲಿ ಉಸ್ತುವಾರಿ ಹೊತ್ತಿರುವ ಲಕ್ಷ್ಮಣ್ ಸವದಿಯವರು ಬಿಜೆಪಿ ಪಕ್ಷ ,ನಾಯಕರು ಮತ್ತು ಕಾರ್ಯಕರ್ತರ ಬಗ್ಗೆ ಹೇಳುತ್ತಾ ಒಂದು ಉಧಾಹರಣೆ ಸಮೇತ ನಾಯಕ ಮತ್ತು ಕಾರ್ಯಕರ್ತರ ಮಧ್ಯೆ ಸಂಬಂಧ ಹೇಗಿರಬೇಕು ಎಂದು ಹೇಳಿದರು “ಕಾರ್ಯಕರ್ತನ ಕಾಲಿಗೆ ಮುಳ್ಳು ಚುಚ್ಚಿದರೆ ನಾಯಕನ ಕಣ್ಣಿಲ್ಲಿ ನೀರು ಬಂದರೇ ಅದು ನಿಜವಾದ ಸಂಬಂಧ “.
ಇತ್ತ ಮತ್ತೊಂದು ಕಡೆ ಪ್ರಪಥಮ ಬಾರಿಗೆ ಚುನಾವಣೆ ಉಸ್ತುವಾರಿ ಹೊತ್ತಿರುವ ಬಸವನಗೌಡ ಪಾಟೀಲ್ ಎಂದಿನಂತೆ ತಮ್ಮ ಪ್ರಖರ ಭಾಷಣದ ಮೂಲಕ ಜನರ ಮನಸ್ಸನ್ನು ಗೆಲ್ಲುವ ಮುನ್ಸೂಚನೆ ಕೊಟ್ಟಿದ್ದಾರೆ. ಕಲಂ ೩೭೦, ರಾಮ ಮಂದಿರ ಮತ್ತು ಮೋದಿಯವರ ಅನೇಕ ಕಷ್ಟದ ಕೆಲಸಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಶಾಸಕರಾದ ನಡಹಳ್ಳಿಯವರು ಸ್ಥಳೀಯ ಕಾರ್ಯಕರ್ತರ ಮೂಲಕ ವಿಜಯಪತಾಕೆ ಹಾರಿಸೋಣ ಎಂದು ಎಲ್ಲರನ್ನು ಉದ್ದೇಶಿಸಿ ಹೇಳಿದರು. ಸಿಂದಗಿ ಬಿಜೆಪಿ ಅಭ್ಯರ್ಥಿಯಾದ ರಮೇಶ್ ಭೂಸನೂರ್ ಅವರ ಬಗ್ಗೆ ಬಸವನಗೌಡ ಪಾಟೀಲ್ ಅವರು ನಾನು ಮಾಜಿ ಶಾಸಕನಾಗಿದ್ದ ಸಮಯದಲ್ಲಿ ಶಾಸಕರಾಗಿದ್ದ ಭೂಸನೂರ್ ಅವರು ಪ್ರತಿ ದಿವಸ ಬೆಳಿಗ್ಗೆ ೮ಕ್ಕೆ ಸಿಂದಗಿ ಕ್ಷೇತ್ರಕ್ಕೆ ಬಂದ್ರೆ ಮತ್ತೆ ಮನೆಗೆ ಹೋಗುವುದು ರಾತ್ರಿ!
ಬೆಳಿಗ್ಗೆ ಎದ್ದು ಪೇಪರ್ ದಲ್ಲಿ ನೋಡಿದರೆ ರಮೇಶ್ ಭೂಸನೂರ್ ಅವರು ರಸ್ತೆಗಳ ಗುದ್ದಲಿ ಪೂಜೆ ಮಾಡಿದರು, ಸಮುದಾಯ ಭವನದ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭ. ಹೀಗೆ ಅನೇಕ ಬಾರಿ ನಾನು ಪಪೆರ್ ದಲ್ಲಿ ನೋಡಿ ಗುದ್ದಲಿ ಸುಮ್ಮ ನಿಮ್ಮ ಕಾರ್ ಡಿಕ್ಕಿಯಲ್ಲಿ ಇಡೀ ಎಂದು ತಮಾಷೆ ಮಾಡಿದ್ದೆ. ಇದರ ಅರ್ಥ ಅವರು ಕೆಲಸಗಾರ, ಅನೇಕ ಕೆಲಸಗಳ ಜೊತೆ ಗೆದ್ದಾಗ ಮತ್ತು ಸೋತಾಗ ಕ್ಷೇತ್ರದಲ್ಲೇ ಇರುತ್ತಿದ್ದರು ಎಂದು ಹೇಳಿದರು. ಅದಕ್ಕೆ ಪುಷ್ಟಿ ನೀಡುವಂತೆ ನಡಹಳ್ಳಿಯವರು ಸಹಿತ ನಾನು ಮೊದಲು ಬೇರೆ ಪಕ್ಷದವನಾಗಿದ್ದರೂ ಇಬ್ಬರೂ ಕೂಡಿಕೊಂಡು ಅನೇಕ ಕೆಲಸಗಳು ಮಾಡಿದ್ದೇವೆ ಎಂದರು. ನಾಯಕರು ಹೇಳಿದಂತೆ ರಮೇಶ್ ಭೂಸನೂರ್ ಅವರ ಕೆಲಸಗಳ ದೊಡ್ಡ ಸಾಧನೆನೆ ಇದೆ. ಅವರ ರಾಜಕೀಯ ಜೀವನ ಪಂಚಾಯತಿಯಿಂದ ವಿಧಾಸಭೆಯ ವರೆಗಿನ ಕೆಲವೇ ಕೆಲವು ಸಾಧನೆಗಳನ್ನು ಇಲ್ಲಿ ಹೇಳುತ್ತಿದ್ದೇವೆ. ೧೯೮೭ ರಲ್ಲಿ ಮಂಡಲ ಪಂಚಾಯತಿಗೆ ಆಯ್ಕೆ ಆಗುತ್ತಾರೆ. ೧೯೮೭ರಿಂದ ೧೯೯೨ರವರೆಗೆ ಪಂಚಾಯತ ಸದಸ್ಯರಾಗಿ ಕೆಲಸ ಮಾಡಿದ ನಂತರ ೧೯೯೩ರ ಚುನಾವಣೆಯಲ್ಲಿ ಊರಿನ ಜನರು ಇವರಿಗೆ ಅವಿರೋಧವಾಗಿ ಆಯ್ಕೆ ಮಾಡುತ್ತಾರೆ.
ಕೇವಲ ೬ ವರ್ಷದಲ್ಲಿ ಅವರ ಜನಪ್ರಿಯತೆಗೆ ಸಾಕ್ಷಿ ಆಗಿದ್ದು ೧೯೯೫ರ ತಾಲೂಕ ಪಂಚಾಯತ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯಭೇರಿ ಬಾರಿಸುತ್ತಾರೆ. ಅಂದಿನ ಮಂತ್ರಿ ನಜೀರ ಸಾಹೇಬ ನೀರಾವರಿ ಸಲುವಾಗಿ ಅನೇಕ ಕೆಲಸಗಳು ಮಾಡಿದ್ದರು ಆದ್ದರಿಂದ ಅವರಿಗೆ ನೀರ ಸಾಹೇಬ ಎಂದು ಕರೆಯುತ್ತಿದ್ದರು. ಕಾರಣ ಅವರು ಪ್ರತಿ ಹಳ್ಳಿ ಹಳ್ಳಿಗೆ ನೀರನ್ನು ತಲುಪಿಸುವ ಕೆಲಸ ಮಾಡಿದ್ದರು. ಅಂತದೇ ಕೆಲಸ ರಮೇಶ ಭೂಸನೂರ ಅವರು ಮಂಡಲ ಪಂಚಾಯತ ಮತ್ತು ತಾಲೂಕ ಪಂಚಾಯತ ಸದಸ್ಯರಿದ್ದಾಗ ಊರಿಗೆ ನೀರಿನ ವ್ಯವಸ್ಥೆ ಮಾಡಿದ್ದರು. ಮತ್ತು ಅನೇಕ ಸಮಾಜ ಮಂದಿರಗಳು ಕಟ್ಟಿದ್ದರು. ಈ ಕೆಲಸಗಳ ಶ್ರೀರಕ್ಷೆ ಆಗಿದ್ದು ಮುಂದೆ ೨೦೦೦ರಲ್ಲಿ ನಡೆದ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ. ತಾಲೂಕ ಪಂಚಾಯತನಲ್ಲಿ ಪಕ್ಷೇತರವಾಗಿ ಗೆದ್ದಿದ್ದ ಭೂಸನೂರವರು ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದು ಜನರ ನಾಯಕ ಎಂದು ಗುರುತಿಸಿಕೊಂಡಿದ್ದರು.
ಅಭೂತಪೂರ್ವ ಗೆಲವು ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಸಿಕ್ಕಿತಾದರೂ ತಮ್ಮ ವ್ಯಕ್ತಿತ್ವದಲ್ಲಿ ಯಾವದೇ ಬದಲಾವಣೆ ಆಗಲಿಲ್ಲ.. ಜನರ ಮದ್ಯೆ ಮತ್ತು ಜನರಿಗಾಗಿ ಸೇವೆ ಮಾಡುವ ಸೇವಕನಾಗಿ ತಾಲೂಕಿಗೆ ಪಶುವೈದ್ಯಕೀಯ ಆಸ್ಪತ್ರೆ ತಂದರು. ತಾಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಶಿಕ್ಷಣ ಸಂಸ್ಥೆ ಕಟ್ಟಿದರು. ಇನ್ನು ಅನೇಕ ಕಾರ್ಯಗಳು ತಾಲೂಕಿಗೆ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇದರ ಫಲಿತಾಂಶವೇ ೨೦೦೮ರಲ್ಲಿ ಭಾರತೀಯ ಜನತಾ ಪಕ್ಷ ಇವರ ಕೆಲಸಗಳಿಂದ ಜನಮನ್ನಣೆ ನೋಡಿ ಸಿಂದಗಿ ಅಭ್ಯರ್ಥಿಯನ್ನಾಗಿ ಮಾಡುತ್ತದೆ. ಯಾವದೇ ರಾಜಕೀಯ ಮನೆತನದ ಹಿನ್ನಲೆ ಇಲ್ಲದೆ ಮತ್ತು ಒಬ್ಬ ಸಾದಾರಣ ವ್ಯಕ್ತಿ ಶಾಸಕನಾಗುವ ಮಟ್ಟಿಗೆ ಬೆಳೆಯುತ್ತಾರೆ ಎಂದರೆ ಇದುವೇ ಅಲ್ಲವೇ ನಿಜವಾದ ಸಾಧನೆ. ಇದು ಸಾಧನೆಯಾಗಿದ್ದು ಜನರ ಸೇವೆ ಮಾಡಿದ್ದರಿಂದ ಎನ್ನವುದು ವಿಶೇಷ. ಉತ್ತರಕರ್ನಾಟಕದ ಭೀಮಾನದಿ ಅಬ್ಬರದಿಂದ ಎಷ್ಟೋ ಜನರ ಜೀವನ ಬೀದಿಗೆ ಬಿದ್ದಿತ್ತು. ಅದೃಷ್ಟವಶಾತ ಅಂದು ಕ್ಷೇತ್ರದ ಶಾಸಕರಾಗಿದ್ದು ಇದೆ ಭೂಸನೂರ ಅವರು ತಮ್ಮ ನಂಬಿದ ಜನರಿಗಾಗಿ ಬರೋಬ್ಬರಿ ೯ ಹಳ್ಳಿಗಳ್ಳನ್ನು ಸ್ಥಳಾಂತರ ಮಾಡಿ ಜನರ ಮನಸ್ಸನ್ನು ಗೆದ್ದಿದ್ದರು.
೯ ಹಳ್ಳಿಗಳ ಸ್ಥಳಾಂತರ ಹುಡುಗಾಟಿಕೆ ಅಲ್ಲ. ಅದನ್ನು ಅಚ್ಚುಕಟ್ಟಾಗಿ ಮಾಡಿ ಜನರ ಹೃದಯ ಅಷ್ಟೇ ಅಲ್ಲ ಮುಖ್ಯಮಂತ್ರಿಯವರ ಕಡೆಯಿಂದ ಭೇಷ್ ಎನಿಸಿಕೊಂಡಿದ್ದರು. ಬಳಗಾನೂರ ಮತ್ತು ಸಾಸಾವಳಿ ಕೆರೆಗಳಿಂದ ಹಲವಾರು ಹಳ್ಳಿಗಳಿಗೆ ನೀರು ತಲುಪಿಸುವ ಕಾರ್ಯ ಅತಿ ಇಷ್ಟಪಟ್ಟು ಮಾಡಿದ ಕೆಲಸ. ಇಂದಿಗೂ ಕನ್ನೊಳ್ಳಿ, ಕೊಕಟನೂರ, ಗುಬ್ಬೇವಾಡ ಹೀಗೆ ಅನೇಕ ಹಳ್ಳಿಗಳ ಜನ ಇವರನ್ನು ನೆನಪಿಸಿಕೊಳ್ಳುತ್ತಾರೆ. ಎಲ್ಲರೂ ಹೆಣ್ಣು ಮಕ್ಕಳು ಓದಬೇಕು ಮತ್ತು ಮುಂದೆ ಬರಬೇಕು ಎನ್ನುವ ಆಶಾಭಾವನೆ ವ್ಯಕ್ತಪಡಿಸುತ್ತಾರೆ ಆದರೆ ಹೆಣ್ಣು ಮಕ್ಕಳಿಗೆ ಶಾಲೆಗೆ ಬರುವ ಹಾಗೆ ಅನುಕೂಲತೆ ಮಾಡಿದರೆ ಹೆಣ್ಣು ಮಕ್ಕಳು ಶಾಲೆಗೆ ಬರುತ್ತಾರೆ. ಇದನ್ನು ಚೆನ್ನಾಗಿ ಅರಿತ ರಮೇಶ ಭೂಸನೂರವರು ಕಿತ್ತೂರ ರಾಣಿ ಚೆನ್ನಮ್ಮ ಶಾಲೆಯನ್ನು ಹೆಣ್ಣು ಮಕ್ಕಳ ಸಲುವಾಗಿ ಅಲಮೇಲಕ್ಕೆ ತರುತ್ತಾರೆ.
ಸಿಂದಗಿಯಲ್ಲಿ ಹಿಂದುಳಿದ ಹೆಣ್ಣು ಮಕ್ಕಳ ಸಲುವಾಗಿ ಹಾಸ್ಟೆಲ್ ಒಂದು ಪ್ರಾರಂಭ ಮಾಡುತ್ತಾರೆ. ಇದರ ಜೊತೆಗೆ ಸಿಂದಗಿಯಲ್ಲಿ ಆದರ್ಶ ವಿದ್ಯಾಲಯ , ಗಂಡು ಮಕ್ಕಳಿಗೆ ಸಹಿತ ಹಿಂದುಳಿದ ಹಾಸ್ಟೆಲನ್ನು ಮತ್ತು ಗುಬ್ಬೇವಾಡದಲ್ಲಿ ಮುರಾರ್ಜಿ ದೇಸಾಯಿ ಶಾಲೆಯನ್ನು ಪ್ರಾರಂಭಿಸುತ್ತಾರೆ. ಇದು ಅಲ್ಲವೇ ವಿದ್ಯಾರ್ಥಿಗಳ ಬಗ್ಗೆ ನಿಜವಾದ ಕಾಳಜಿ? ಶಿಕ್ಷಣದ ಜೊತೆ ಕ್ರೀಡಾಪುಟುಗಳಿಗಾಗಿ ಸಿಂದಗಿಯಲ್ಲಿ ಕ್ರೀಡಾಂಗಣವನ್ನು ಕಟ್ಟುತ್ತಾರೆ. ದೇಶದ ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರ ಹೆಸರಲ್ಲಿ ಸುಸಜ್ಜಿತ ಅಂಬೇಡ್ಕರ ಭವನವನ್ನು ವಿಶೇಷ ಕಾಳಜಿವಹಿಸಿ ಉದ್ಘಾಟನೆ ಮಾಡುತ್ತಾರೆ. ಇದಲ್ಲದೆ ವಾಲ್ಮೀಕಿ ಭವನ ಆಗಿದ್ದು ಇವರು ಶಾಕರಾಗಿದ್ದಾಗ. ಇದಲ್ಲದೆ ತಾಲೂಕಿಗೆ ಮತ್ತು ಹಳ್ಳಿಗಳಿಗೆ ನಿರಂತರ ವಿದ್ಯುತ್ ಇಲ್ಲದೆ ರೈತರು ಬೆಳೆಗಳು ಒಣಗಿ ಹೋಗುತ್ತಿದ್ದವು.
ವಿದ್ಯಾರ್ಥಿಗಳಗೆ ಓದಲು ತುಂಬಾ ತೊಂದರೆ ಆಗುತ್ತಿತ್ತು. ಇದೆಲ್ಲಾ ಗಮನಿಸಿ ಮೂಲಭೂತ ಸೌಕರ್ಯ ತಾಲೂಕಿಗೆ ಸಿಗಬೇಕು ಎಂದು ೧೧೦ ಕೆವಿ ವಿದ್ಯುತ್ ಸ್ಟೇಷನ್ಗಳು ತಾಲೂಕಿಗೆ ತಂದು ಜನರ ಪರದಾಟವನ್ನು ತಪ್ಪಿಸಿದರು. ಹಾಗೆ ಆಹೇರಿಯಲ್ಲಿ ೨೨೦ಕೆವಿ ಸ್ಟೇಷನ್ದ ಕೆಲಸ ಭರದಿಂದ ಸಾಗಿದೆ. ಕೊಟ್ಟ ಮಾತು ಯಾವದೇ ಸಮಯದಲ್ಲಿ ಮೀರದೆ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಜನರು ಹೇಳುವ ಮಾತು. ನನ್ನ ನೋಡು ಬಾ ಎಂದು ಕೈ ಬಿಸಿ ಕರೆಯುವ ಬಸ್ ಸ್ಟಾಂಡ್ ನಿರ್ಮಿಸಿದ್ದಾರೆ. ಎಸ್ ಸಿ ಮತ್ತು ಎಸ್ ಟಿ ರೈತರ ಜಮೀನುಗಳಿಗೆ ಭೀಮಾನದಿಯಿಂದ ನೀರನ್ನು ತಂದು ನೀರಾವರಿ ಸೌಲಭ್ಯ ಒದಿಗಿಸಿದ್ದಾರೆ.೨೦೦೮ರಲ್ಲಿ ಭರ್ಜರಿ ಜಯಗಳಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಮತ್ತೆ ೨೦೧೩ರಲ್ಲಿ ಎರಡೆನೆಯ ಬಾರಿ ಜಯ ಧಾಖಲಿಸಿ ಅನೇಕ ಕೆಲಸಗಳು ಶ್ರದ್ದೆಯಿಂದ ಮಾಡಿ ಜನರ ಮನಸ್ಸು ಗೆದ್ದಿದ್ದಾರೆ. ಕ್ಷೇತ್ರದಲ್ಲಿ ಎಲ್ಲರಿಗೂ ಸಿಗುವ ಶಾಸಕ ಎಂದು ಜನರೇ ಹೇಳುತ್ತಾರೆ. ಸೋಲಿಲ್ಲದ ಸರದಾರನಿಗೆ ೨೦೧೮ರ ಚುನಾವಣೆಯಲ್ಲಿ ಅನುಕಂಪದ ಕಾರಣದಿಂದ ಆಘಾತವಾಗಿತ್ತು. ಮಾಜಿ ಶಾಸಕರಾದರೂ ಕ್ಷೇತ್ರದ ಜನರ ಸಮಸ್ಸ್ಯೆಗೆ ಪರಿಹಾರ ಕೊಡಿಸುವಲ್ಲಿ ಎತ್ತಿದ ಕೈ. ಅಂದು ಸೋತಿದ್ದಕೆ ಯಾವ ಕಾರಣ ಎನ್ನುವದಕ್ಕಿಂತ ಒಳ್ಳೆಯ ಶಾಸಕರನ್ನು ಸೋಲಿಸಿದ್ದು ಅನೇಕ ಜನರಿಗೆ ದುಃಖವಾಗಿದ್ದು ನಿಜ !
ರಮೇಶ್ ಭೂಸನೂರ್ ೨೦೧೮ರಲ್ಲಿ ಸೋತರೂ ಕ್ಷೇತ್ರದ ಜನತೆ ಜೊತೆ ಎಲ್ಲದರಲ್ಲೂ ಕೈಜೋಡಿಸಿದ್ದಾರೆ. ಕ್ಲಿಷ್ಟ ಸಂದರ್ಭವಾದ ಕರೋನ ಸಮಯದಲ್ಲೂ ಜನತೆಗೆ ಕೈಲಾದ ಸೇವೆ ಸಲ್ಲಿಸಿದ್ದಾರೆ. ಇಂದಿನ ಉಪಚುನಾವಣೆಗೆ ಸಿಂದಗಿ ಜನತೆ ರಮೇಶ್ ಭೂಸನೂರ್ ಅವರ ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಕೆಲಸಗಳು, ಜನರಿಗೆ ನೇರವಾಗಿ ಕೈ ಸಿಗುವ , ಎಲ್ಲ ವರ್ಗದವರ ಜೊತೆ ನಿಲ್ಲುವ ಗುಣ ಮತ್ತೆ ರಮೇಶ್ ಭೂಸನೂರ್ ಅವರನ್ನು ಸಿಂದಗಿ ಜನತೆ ಮತ್ತೊಮ್ಮೆ ಆಯ್ಕೆ ಮಾಡುವ ಮನಸ್ಸು ಮಾಡಿದ ಹಾಗೆ ಕಾಣಿಸುತ್ತಿದೆ.
