ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೇಸ್ ಪಕ್ಷದ ಚುನಾವಣೆ ಸ್ಟ್ರಾಟಜಿಸ್ಟ್ ಪ್ರಶಾಂತ ಕಿಶೋರ್ ಕ್ಲಬ್ ಹೌಸ್ ಮಾಹಿತಿ ಸೋರಿಕೆ ಆಗಿ ಬಿಜೆಪಿ ಖಂಡಿತವಾಗಲು ಸರ್ಕಾರ ರಚನೆ ಮಾಡುತ್ತದೆ ಎಂದು ಬಿಜೆಪಿ ಹೇಳಿತ್ತು. ಇದಕ್ಕೆ ಪ್ರಶಾಂತ ಕಿಶೋರ್ ಸವಾಲ್ ಹಾಕಿ ಬಿಜೆಪಿ ೧೦೦ರ ಗಡಿ ದಾಟಿದರೆ ನಾನು ಖಂಡಿತವಾಗಲೂ ಮುಂದೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ನೇರವಾಗಿ ಹೇಳಿದ್ದರು ಮತ್ತು ಅದು ನಿಜವೂ ಆಯಿತು. ಇದಕ್ಕೆ ಕಾರಣ ಮೋದಿ ಜನಪ್ರಿಯತೆ ಇದೆ ಆದರೆ ಇದು ಸ್ಥಳೀಯ ಎಂದರೆ ರಾಜ್ಯಕ್ಕೆ ಸೀಮಿತವಾದ ಚುನಾವಣೆ ಇರುವುದರಿಂದ, ಜನರು ಸ್ಥಳೀಯ ನಾಯಕರನ್ನು ನೋಡಿ ಮತ ಚಲಾಯಿಸುತ್ತಾರೆ ಎಂಬುದು ಕಟು ಸತ್ಯ!
ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಗಳಾದ ಹಾನಗಲ್ ಮತ್ತು ಸಿಂದಗಿ ಉತ್ತರ ಕರ್ನಾಟಕದ ಬಿಜೆಪಿಯ ಕಾರ್ಯಕರ್ತರು ಪಡೆ ಇರುವ ಕ್ಷೇತ್ರಗಳು. ಈಗಾಗಲೇ ಅನೇಕ ಬಾರಿ ಬಿಜೆಪಿ ಕ್ಷೇತ್ರವನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ ಅದರ ಜೊತೆ ಕಾಂಗ್ರೇಸ್ ಪಕ್ಷವು ಅಷ್ಟೇ ಸದೃಢವಾಗಿದೆ. ಕಾಂಗ್ರೇಸ್ ಪಕ್ಷವು ಅನೇಕ ಗೆಲುವು ದಾಖಲಿಸಿದೆ. ಅದಕ್ಕಾಗಿಯೇ ಎರಡು ಕ್ಷೇತ್ರಗಳಲ್ಲಿ ತುರುಸಿನ ಪೈಪೋಟಿ ನಡೆಯುತ್ತಿದೆ.
ಸಿಂದಗಿ ಮತ್ತು ಹಾನಗಲ್ ಚುನಾವಣೆಯಲ್ಲಿ ಜಾತಿಗಳ ಲೆಕ್ಕಾಚಾರ ಕಲೆ ಹಾಕಿದರೆ ಎರಡು ಪಕ್ಷಗಳಿಗೆ ತನ್ನದೇ ಆದ ಶಕ್ತಿ ಇದೆ ಮತ್ತು ನಾಯಕರ ಕೊರೆತೆವು ಇಲ್ಲ. ಇಂತಹ ತುರುಸಿನ ಚುನಾವಣೆಯಲ್ಲಿ ಬಿಜೆಪಿ ಮುರುಗೇಶ್ ನಿರಾಣಿಯವರಿಗೆ ಹಾನಗಲ್ ಮತ್ತು ಲಕ್ಷಣ್ ಸವದಿಯವರಿಗೆ ಸಿಂದಗಿಗೆ ಉಸ್ತುವಾರಿ ವಹಿಸಿದ್ದಾರೆ. ಇವರ ಜೊತೆ ಅನೇಕ ಮಂತ್ರಿಗಳು, ಶಾಸಕರು ಕ್ಷೇತ್ರದಲ್ಲಿ ಮುಖಂ ಹುಡಿ ಪ್ರಚಾರಕ್ಕೆ ಧುಮಕಿದ್ದಾರೆ. ಕಾಂಗ್ರೇಸ್ ಪಕ್ಷದ ಕಟ್ಟಾಳುಗಳಾದ ಡಿಕೆ ಮತ್ತು ಸಿದ್ದು ಸರ್ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಜಿಲ್ಲೆಯ ಅನೇಕ ಕಾಂಗ್ರೇಸ್ ಶಾಸಕರು ನಿಷ್ಠೆಯಿಂದ ದುಡಿಯುತ್ತಿದ್ದಾರೆ. ಇಬ್ಬರಿಗೂ ಗೆಲ್ಲಲೇಬೇಕು ಎಂದು ಪಣ ತೊಟ್ಟು ಸರ್ವೆ ಮಾಡಿಸಿದ್ದಾರೆ. ಬಿಜೆಪಿಯ ಆಂತರಿಕ ಸಮೀಕ್ಷೆ ಕೈಗೆ ಸಿಗುತ್ತಿದಂತೆ ಬಿಜೆಪಿಯ ಸ್ವಯಂ ಘೋಷಿತ ದೊಡ್ಡ ದೊಡ್ಡ ನಾಯಕರಿಗೆ ಕೈ ಹಿಚುಕಿಕೊಳ್ಳುವ ಪರಸ್ಥಿತಿ ಬಂದಿದೆ. ಕಾರಣ ಕ್ಷೇತ್ರಗಳಲ್ಲಿ ಕಷ್ಟ ಪಟ್ಟು ಉಸ್ತುವಾರಿ ಲಕ್ಷಣ್ ಸವದಿ, ಮುರಗೇಶ್ ನಿರಾಣಿ , ಉದಾಸಿ, ಜಿಗಜಿಣಗಿ, ನಡಹಳ್ಳಿ, ಸಿ ಸಿ ಪಾಟೀಲ್, ಬಸವನಗೌಡ ಪಾಟೀಲ್ , ಸೋಮನಗೌಡ ಪಾಟೀಲ್, ರಾಜುಗೌಡ ಪಾಟೀಲ್ & ಸ್ಥಳೀಯ ನಾಯಕರು ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಸಿಂದಗಿಯಲ್ಲಿ ಬಿಜೆಪಿ ಸ್ವಲ್ಪ ಮುಂದಿದೆ ಮತ್ತು ಹಾನಗಲ್ ಕ್ಷೇತ್ರದಲ್ಲಿ ಪೈಪೋಟಿ ಇದೆ. ಎರಡೂ ಕ್ಷೇತ್ರಗಳನ್ನು ಗೆಲ್ಲಬೇಕಾದರೆ ಇವರೆಲ್ಲರ ಪ್ರಯತ್ನದ ಜೊತೆ ಯಡಿಯೂರಪ್ಪ ಮತ್ತು ವಿಜೇಯೇಂದ್ರ ಇಬ್ಬರೂ ಪ್ರಚಾರ ಮಾಡಿದರೇ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಸಮೀಕ್ಷೆಯಲ್ಲಿ ಹೇಳಿದೆ!
ಯಡಿಯೂರಪ್ಪ ೫೦ ವರ್ಷಗಳ ಕಾಲ ಪಕ್ಷ ಕಟ್ಟಿದ್ದಾರೆ. ಅವರ ಅಭಿಮಾನಿಗಳು ಎಲ್ಲಿಲ್ಲ ಹೇಳಿ? ಬಿಜೆಪಿಯ ಯಾವದೇ ಯೋಜನಗಳು ಯಡಿಯೂರಪ್ಪನವರು ಕೊಟ್ಟ ಯೋಜನೆಗಳೇ ಅಲ್ವಾ? ರಾಜ್ಯದ ಮೂಲೆ ಮೂಲೆ ಸುತ್ತಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರನ್ನೇ ಕತ್ತಲಲ್ಲಿ ಇಟ್ಟು ಗುನ್ನಾ ಕೊಡಕ್ಕೆ ಹೋದರೆ ಯಾರಿಗೆ ಗುನ್ನಾ ಬೀಳುತ್ತದೆ ಎನ್ನುವ ಕನಿಷ್ಠ ಜ್ಞಾನ ಇಲ್ಲದೆ ಹೋದರೇ ಖಂಡಿತ ಬಿಜೆಪಿಗೆ ಹೊಡೆತ ಬೀಳುವದರಲ್ಲಿ ಸಂಶಯವಿಲ್ಲ. ವಿಜಯೇಂದ್ರ ಯಡಿಯೂರಪ್ಪನವರ ಮಗ ಹೌದು ಮತ್ತು ವಯಸ್ಸಿನಲ್ಲಿ ಸ್ವಯಂ ಘೋಷಿತ ನಾಯಕರಿಗಿಂತ ಚಿಕ್ಕವರು ಎನ್ನುವುದು ಸತ್ಯ! ಆದರೆ ವಿಜಯೇಂದ್ರ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತಿರುವುದು ಸುಳ್ಳೇ? ವಿಜಯೇಂದ್ರ ಹೋದಲ್ಲಿ ಜನರು ಸೇರುವುದು ಸುಳ್ಳೇ? ವಿಜಯೇಂದ್ರ ಉಸ್ತುವಾರಿ ತಗೆದುಕೊಂಡಾಗ ಕ್ಷೇತ್ರದಲ್ಲಿ ಉಳಿದು ಕೆಲಸ ಮಾಡಿದ್ದು ಸುಳ್ಳೇ? ವಿಜಯೇಂದ್ರ ಯಡಿಯೂರಪ್ಪನವರ ಮಗ ಮತ್ತು ತಮ್ಮ ನಾಯಕತ್ವ ಗುಣದಿಂದ ಜನರಿಗೆ ಹತ್ತಿರವಾಗಿದ್ದಾರೆ. ವಿಜಯೇಂದ್ರಯವರಿಗೆ ಉಸ್ತುವಾರಿ ಲಿಸ್ಟಲ್ಲಿ ಹಾಕಿದರೆ ಖಂಡಿತ ಪಕ್ಷಕ್ಕೆ ಅನಕೂಲವಾಗುತ್ತೆ ಆದರೂ ಅವರನ್ನು ಉಸ್ತುವಾರಿಯಾಗಿ ನೇಮಿಸುವದಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಕೂಗು ಎದ್ದಾಗ ನಾಮಕಾವಸ್ತೆ ಅವರ ಹೆಸರು ಸೇರಿಸಿದ್ದೀರಿ. ಪಕ್ಷಕ್ಕೆ ಅನುಕೂಲವಾಗುತ್ತೆ ಎನ್ನುವುದು ಗೊತ್ತಿದ್ದರೂ ಬೇಕಂತಲೇ ಅವರಿಗೆ ಜವಾಬ್ದಾರಿಯನ್ನು ಕೊಡುವುದಿಲ್ಲ. ಆದರೆ ಇಂದು ಆಂತರಿಕ ಸಮೀಕ್ಷೆ ಪ್ರಕಾರ ಅವರು ಬಂದ್ರೆ ಪಕ್ಷಕ್ಕೆ ಅನುಕೂಲ ಎಂದು ಹೇಳುತ್ತಿದೆ. ಈಗೇನು ಹೇಳುತ್ತೀರಿ ? ನೀವು ರಾಜಕೀಯ ಮಾಡುತ್ತಿದ್ದೀರಿ ಎಂದು ಗೊತ್ತು ಆದರೆ ಜನರ ಅಭಿಪ್ರಾಯ ಬೇರೇನೇ ಇದೆ ಅಲ್ವಾ? ನಮಗೂ ಗೊತ್ತಿದೆ ಯಡಿಯೂರಪ್ಪನವರು ರಾಜಕೀಯ ಮಾಡಿ ಅನೇಕರಿಗೆ ರಾಜಕೀಯವಾಗಿ ಎಲ್ಲಿಡಬೇಕು ಅಲ್ಲೇ ಇಟ್ಟಿದ್ದಾರೆ. ಆದರೆ ಅದು ಜನರ ಅಭಿಪ್ರಾಯವು ಯಡಿಯೂರಪ್ಪನವರ ಅಭಿಪ್ರಾಯದಂತೆ ಇತ್ತು ಎನ್ನುವುದು ಮರೆಯಬಾರದು.
ರಾಷ್ಟ್ರೀಯವಾಹಿನಿಯಲ್ಲಿ ಸಂದರ್ಶನ ಕೊಡುತ್ತ ಬೊಮ್ಮಾಯಿಯವರು ಹೇಳಿದ್ದಾರೆ ೨೦೨೩ರ ಚುನಾವಣೆ ನನ್ನ ನಾಯಕತ್ವದಲ್ಲೇ ನಡೆಯುತ್ತದೆ. ಇದೆ ಮಾತನ್ನು ಅಮಿತ್ ಷಾ ಹೇಳಿದ್ದಾರೆ. ಬೊಮ್ಮಾಯಿಯವರು ಉತ್ತಮ ವಾಗ್ಮಿಗಳು , ರಾಜ್ಯದ ಏಳಿಗೆಗಾಗಿ ದುಡಿಯುವ ನಾಯಕ! ಆದರೆ ಶಿಗ್ಗಾವ್ ಬಿಟ್ಟು ಬೇರೆ ಬೇರೆ ಕ್ಷೇತ್ರಗಳನ್ನು ಗೆಲ್ಲುವ ಮಾಸ್ ಲೀಡರ್ ಆಗಿ ಬೆಳಿದಿಲ್ಲ ಎನ್ನುವುದು ಅಷ್ಟೇ ಸತ್ಯ! ಅವರದೇ ಜಿಲ್ಲೆ ಹಾವೇರಿಯಲ್ಲಿ ಕಂಟ್ರೋಲ್ ಇಲ್ಲ. ಅದಕ್ಕೆ ಸಮಯ ಬೇಕು ಎನ್ನುವುದು ನಮಗೂ ಗೊತ್ತು!
೨೦೨೩ ಕೇವಲ ಇವರ ನೇತೃತ್ವದಲ್ಲಿ ಹೋಗುವುದು ಊಹಿಸಿವುದು ಕಷ್ಟ! ನನ್ನ ಪ್ರಕಾರ ಸಾಮೂಹಿಕ ನೇತೃತ್ವದಲ್ಲೇ ಹೋಗುತ್ತೇವೆ ಅದಕ್ಕೆ ಯಡಿಯೂರಪ್ಪನವರ ಅಗತ್ಯವಾದ ಮಾರ್ಗದರ್ಶನ ಇದ್ದೆ ಇರುತ್ತದೆ ಎಂದು ಹೇಳಿದ್ದರೆ ಅದಕ್ಕೊಂದು ತೂಕ ಇರುತ್ತಿತ್ತು. ಗೆದ್ದರೆ ಹೇಗಿದ್ದರೂ ನೀವೇ ಮುಖ್ಯಮಂತ್ರಿ ಆಗುತ್ತೀರಿ ಅಲ್ವೇ? ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಹಾನಗಲ್ ಉಸ್ತುವಾಗಿ ಕೊಡುವಾಗ ಅರ್ಹತೆ, ಜನಪ್ರಿಯತೆ ಇರುವ ವಿಜಯೇಂದ್ರ ಅವರನ್ನು ಆಯ್ಕೆ ಮಾಡದೆ ತಾವು ರಾಜಕೀಯ ದಾಳ ಉರುಳಿಸಿದ್ದೀರಿ ಎಂದು ಅರ್ಥವಾಗುತ್ತಿದೆ. ಇವರಿಲ್ಲದೆ ನಾವು ಗೆಲ್ಲಬಹುದು ಕಂಡ ಕನಸು ಸುಳ್ಳೆಂದು! ನಾನು ಹೇಳಿಲ್ಲ ನಿಮ್ಮ ಆಂತರಿಕ ಸಮೀಕ್ಷೆ ಹೇಳುತ್ತಿದೆ. ವಿಜಯೇಂದ್ರ ಅವರನ್ನು ಉಸ್ತುವಾರಿ ಲಿಸ್ಟಲ್ಲಿ ಹಾಕವುದಕ್ಕೆ ಬೊಮ್ಮಾಯಿಯವರ ಒಬ್ಬರದೇ ನಿರ್ಧಾರ ಇರದೇ ಇರಬಹುದು ಆದರೆ ಇಂತಹ ನಿರ್ಧಾರವನ್ನು ಮುಖ್ಯಮಂತ್ರಿ ತಿರಸ್ಕರಿಸಿ ಒಬ್ಬರಿಂದ ಪಕ್ಷಕ್ಕೆ ಅನುಕೂಲವಾಗುತ್ತೆ ಎನ್ನುವುದಾರೆ ಅವರ ಕಡಗಣನೆ ಎಂದಿಗೂ ಒಳ್ಳೆಯದಲ್ಲ ಎಂದು ಹೇಳಬಹುದಿತ್ತು.
ರಾಜ್ಯದಲ್ಲಿ ನಡೆದ ಇನ್ಕಮ್ ಟ್ಯಾಕ್ಸ್ ದಾಳಿ ಯಡಿಯೂರಪ್ಪನವರನ್ನು ಕಟ್ಟಿಹಾಕುವದಕ್ಕೆ ಎನ್ನುವದಾದರೆ ಖಂಡಿತ ಇದರಲ್ಲಿ ದೆಹಲಿ ದೊರೆಗಳು ಯಶಸ್ವಿಯಾಗುವದಿಲ್ಲ. ಅವರ ಜೊತೆ ರಾಜ್ಯದ ನಾಯಕರ ಬೆಂಬಲ ಇದ್ದೆ ಇರುತ್ತದೆ. ಇಲ್ಲಿ ನಾವು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಆದರೆ ಮೇಲ್ನೋಟಕ್ಕೆ ಇದೊಂದು ರಾಜಕೀಯ ದಾಳ ಎಂದೆನಿಸುತ್ತಿದೆ. ಕಟ್ಟಿಹಾಕುವ ಸಂಪ್ರದಾಯಕ್ಕೆ ಕಟಿಬಿದ್ದರೆ ೨೦೨೩ ಮತ್ತು ೨೦೨೪ರ ಚುನಾವಣೆ ಮಾಡುವ ಅನೇಕ ನಾಯಕರು ಬಿಜೆಪಿಯಲ್ಲಿ ಬೆಳೆದಿದ್ದಾರೆ ಎನ್ನುವುದು ಒಪ್ಪಿಕೊಂಡರೂ ದಡ ಸೇರಿಸುವ ನಾಯಕರು ಬಿಜೆಪಿಯಲ್ಲಿ ಇಲ್ಲ ಎನ್ನುವುದು ನೀವು ಒಪ್ಪಿಕೊಳ್ಳಲೇಬೇಕು! ಕಾರಣ ಕೇವಲ ಎರಡು ಉಪಚುನಾವಣೆಗೆ ಬಿಎಸ್ ವೈ ಮತ್ತು ಬಿ ವೈ ವಿ ಬೇಕಂತೆ! ಮತ್ತೆ ಸಾರ್ವತ್ರಿಕ ಚುನಾವಣೆ ಅವರಿಲ್ಲದೆ ದಡ ಸೇರಿಸುವುದು ಅಸಾಧ್ಯ!
ಪಶ್ಚಿಮ ಬಂಗಾಳದಲ್ಲಿ ಖಂಡಿತ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಕೆಲವು ವಾಹಿನಿಗಳ ಸಮೀಕ್ಷೆ ಹೇಳಿದರೂ ಅದು ನಿಜವಾಗಲೇ ಇಲ್ಲ. ಅನೇಕ ಚುನಾವಣೆಗಳನ್ನು ನಿಭಾಯಿಸಿದ ಪ್ರಶಾಂತ್ ಕಿಶೋರ್ ಹೇಳಿದ್ದು ಅನುಭವದ ಮಾತು ಮಾತ್ರ ಸತ್ಯವಾಗಿತ್ತು! ಅದಕ್ಕೆ ಸ್ಥಳೀಯ ನಾಯಕನನ್ನು(ಒಬ್ಬರು ಮಾರ್ಗದರ್ಶಕರಾದರೆ ಇನ್ನೊಬ್ಬರು ಪಕ್ಷಕ್ಕಾಗಿ ದುಡಿಯುತ್ತಿರುವ ಬಿಜೆಪಿಯ ಉಪಾಧ್ಯಕ್ಷ ಜನಪ್ರಿಯ ಯುವ ನಾಯಕ) ಕಡೆಗಣನೆ ಮಾಡಿದರೆ ಯಾರಿಗೆ ನಷ್ಟ ?
Categories: Articles
